Explainer: ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಲೆಬನಾನ್...​? ಬಿಕ್ಕಟ್ಟು ಉಂಟಾಗಲು ಪ್ರಮುಖ ಕಾರಣಗಳೇನು..?

ಮರೋನೈಟ್ ಕ್ರಿಶ್ಚಿಯನ್ ಆಗಿರುವ ಅಧ್ಯಕ್ಷ ಮೈಕೆಲ್ ಔನ್ ವಿರೋಧಿಗಳು ಹೊಸ ಸರಕಾರದಲ್ಲಿನ ವೀಟೋ ಅಧಿಕಾರಕ್ಕಾಗಿ ಬೇಡಿಕೆ ಇರಿಸುವ ಮೂಲಕ ಮುಕ್ತ ಸ್ವಾತಂತ್ರ್ಯ ಚಳವಳಿಯ ಮೂಲಕ ಪ್ರತಿಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಈ ಬೇಡಿಕೆಯನ್ನು ಅಂಗೀಕರಿಸುವುದಕ್ಕೆ ಔನ್ ನಿರಾಕರಣೆ ತೋರುತ್ತಿದ್ದಾರೆ.

ಲೆಬನಾನ್​ನಲ್ಲಿ ಬೀದಿಗೆ ಇಳಿದಿರುವ ಯುವ ಸಮೂಹ ಫೋಟೋ: ದಿ ಹಿಂದೂ

ಲೆಬನಾನ್​ನಲ್ಲಿ ಬೀದಿಗೆ ಇಳಿದಿರುವ ಯುವ ಸಮೂಹ ಫೋಟೋ: ದಿ ಹಿಂದೂ

 • Share this:
  ಲೆಬನಾನ್‌ನ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು ಅಂತರ್ಯುದ್ಧದಿಂದ ನಿಧಾನವಾಗಿ ಚೇತರಿಕೆ ಕಂಡಿದ್ದ ದೇಶ ಪುನಃ ಆ ಸ್ಥಿತಿಗೆ ಮರಳಬಹುದು ಎಂಬ ತೀವ್ರ ಕಳವಳವನ್ನು ಅಲ್ಲಿನ ಅಧಿಕಾರಿಗಳು ವ್ಯಕ್ತಪಡಿಸಿದ್ದು ರಾಜಕೀಯ ಬಿಕ್ಕಟ್ಟು ಲೆಬನಾನ್‌ನ ಇಂದಿನ ಸ್ಥಿತಿಗೆ ಕಾರಣ ಎನ್ನಲಾಗಿದೆ.

  ದೇಶದಲ್ಲಿ ಇಂಧನ ಕೊರತೆ ತೀವ್ರವಾಗಿ ಜನರನ್ನು ಕಾಡುತ್ತಿದ್ದು ಬಹುಪಾಲು ಜನರು ಆಡಳಿತ ವರ್ಗದ ಮೇಲೆ ಕಿಡಿಕಾರಿದ್ದಾರೆ.ರಾಜಕೀಯ ಬಿಕ್ಕಟ್ಟಿನಿಂದಾಗಿ ದೇಶದ ಆರ್ಥಿಕ ಬಿಕ್ಕಟ್ಟು ಹಾಳಾಯಿತು. ಆರ್ಥಿಕ ಅರಾಜಕತೆಯಂತಹ ಪರಿಸ್ಥಿತಿ ದೇಶದಲ್ಲಿ ಉದ್ಭವಿಸಿತ್ತು. ಗಮನಾರ್ಹವಾಗಿ, ಆಗಸ್ಟ್ 4, 2020 ರಂದು ಬೈರುತ್ ಬಂದರಿನಲ್ಲಿ ವಿನಾಶಕಾರಿ ಸ್ಫೋಟದ ನಂತರ ಅಂದಿನ ಪ್ರಧಾನಿ ಹಸನ್ ಡಯಾಬ್ ಸರ್ಕಾರ ರಾಜೀನಾಮೆ ನೀಡಬೇಕಾಯಿತು. ಅಂದಿನಿಂದ, ದೇಶದಲ್ಲಿ ರಾಜಕೀಯ ಅಸ್ಥಿರತೆಯ ಪರಿಸ್ಥಿತಿ ಉಂಟಾಯಿತು.

  ಶುಕ್ರವಾರವಷ್ಟೇ ಪ್ರಧಾನ ಮಂತ್ರಿ ನಜೀಬ್ ಮಿಕಾಟಿ ಅಧ್ಯಕ್ಷ ಮೈಕೆಲ್ ಔನ್‌ರೊಂದಿಗೆ ಹೊಸ ಕ್ಯಾಬಿನೆಟ್ ಒಪ್ಪಿಕೊಂಡಿದ್ದು ಈ ಹೊಸ ಅಂಗೀಕಾರ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು ಎಂಬ ಆಸೆ ಒಡಮೂಡಿದೆ. ಇದು ಎಷ್ಟು ಪರಿಣಾಮಕಾರಿ ಎಂಬುದನ್ನು ಕಾದು ನೋಡಬೇಕಾಗಿದೆ.

  ದೇಶ ಇಷ್ಟೊಂದು ನೆನೆಗುದಿಗೆ ಬೀಳಲು ಕಾರಣವೇನು ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಕಾರಣವೇನು ಎಂಬುದನ್ನು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳೋಣ.

  ಆರ್ಥಿಕ ಕುಸಿತ

  ಕಳೆದ ಎರಡು ವರ್ಷಗಳಲ್ಲಿ ಲೆಬನಾನ್‌ ಜನಸಂಖ್ಯೆಯ ಸುಮಾರು 78%ನಷ್ಟು ಜನರು ಬಡತನಕ್ಕೆ ಸಿಲುಕಿದ್ದು ಆಧುನಿಕ ಕಾಲದ ಖಿನ್ನತೆಯ ಸಮಸ್ಯೆಗಳಲ್ಲಿ ಇದೂ ಒಂದಾಗಿದೆ ಎಂಬುದಾಗಿ ವಿಶ್ವಬ್ಯಾಂಕ್ ತಿಳಿಸಿದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಾರ್ವಜನಿಕ ಸಾಲದ ಬೃಹತ್ ಪ್ರಮಾಣವನ್ನು ಮರುಪಾವತಿಸಿದ ದೇಶ, ಇನ್ನೂ ಸಾಲ ಪಾವತಿ ಮಾಡಲು ಬಾಕಿ ಇದೆ. ಆಮದನ್ನು ಅವಲಂಬಿಸಿರುವ ದೇಶದಲ್ಲಿ ಕೊಳ್ಳುವ ಶಕ್ತಿ ಕುಸಿದು ಕರೆನ್ಸಿ ಶೇಕಡ 90ಕ್ಕಿಂತ ಹೆಚ್ಚು ಕುಸಿದಿದೆ. ಬ್ಯಾಂಕಿಂಗ್ ವ್ಯವಸ್ಥೆ ಸ್ಥಬ್ಧಗೊಂಡಿದ್ದು ಠೇವಣಿದಾರರನ್ನು ವಿದೇಶಿ ಕರೆನ್ಸಿ ಉಳಿತಾಯದಿಂದ ಹೊರಗಿಟ್ಟಿದ್ದು ಅಥವಾ ಸ್ಥಳೀಯ ಕರೆನ್ಸಿಯಲ್ಲಿ ನಗದು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಲಾಗಿದೆ. ಇದರಿಂದಾಗಿ 80%ನಷ್ಟು ಠೇವಣಿಗಳ ಮೌಲ್ಯದಲ್ಲಿ ಕುಸಿತ ಉಂಟಾಗಿದೆ.

  ವಿಶ್ವ ಆಹಾರ ಯೋಜನೆ ತಿಳಿಸಿರುವಂತೆ ಅಕ್ಟೋಬರ್ 2019ರಿಂದೀಚೆಗೆ ಆಹಾರ ಬೆಲೆಗಳು 557%ನಷ್ಟು ಏರಿಕೆಯಾಗಿದ್ದು ಇದರಿಂದ ಆರ್ಥಿಕತೆಯ ಮೇಲೆ 30%ನಷ್ಟು ಪರಿಣಾಮ ಬೀರಿದೆ ಎನ್ನಲಾಗಿದೆ. ಇಂಧನ ಕೊರತೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಆಸ್ಪತ್ರೆಗಳು, ಬೇಕರಿಗಳು ಹಾಗೂ ದೈನಂದಿನ ಮಳಿಗೆಗಳ ಮೇಲೂ ಪರಿಣಾಮ ಬೀರಿದೆ.

  ಪ್ರಮುಖ ಔಷಧಗಳ ಮೇಲೂ ಆರ್ಥಿಕತೆಯ ಹೊರೆ ಬಿದ್ದಿದ್ದು ಜನರು ಪರದಾಡುವಂತಾಗಿದೆ. ಹೆಚ್ಚಿನ ಲೆಬನಾನ್ ವಾಸಿಗಳು ದೇಶ ತೊರೆದಿದ್ದು ಭವಿಷ್ಯದ ಭೀಕರತೆಗೆ ಅಂಜಿ ಸುಭದ್ರ ನೆಲೆ ಕಂಡುಕೊಳ್ಳುವ ಯತ್ನದಲ್ಲಿದ್ದಾರೆ.

  ಭದ್ರತೆ

  ದೇಶದಲ್ಲಿ ಇಂಧನ ಕೊರತೆ ಉಂಟಾಗಿರುವುದರಿಂದ ಎಲ್ಲೆಡೆ ಘರ್ಷಣೆ ಉಂಟಾಗಿದೆ. ವಾಹನ ಚಾಲಕರು ಇಂಧನಕ್ಕಾಗಿ ಗಂಟೆಗಟ್ಟಲೆ ಸಾಲುಗಳಲ್ಲಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದ್ದು ಇಂಧನ ಟ್ಯಾಂಕರ್‌ಗಳನ್ನು ಅಪಹರಿಸಿದ ಘಟನೆಗಳು ಎದುರಾಗಿವೆ. ಇನ್ನು ದಕ್ಷಿಣ ಲೆಬನಾನ್‌ನಲ್ಲಿ ಗ್ಯಾಸೋಲಿನ್ ಕುರಿತ ಒಂದು ವಿವಾದವು ನೆರೆಯ ಶಿಯಾ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಹಳ್ಳಿಗಳ ನಡುವಿನ ಪಂಥೀಯ ಸಂಘರ್ಷಕ್ಕೆ ತಿರುಗಿತು.

  ದೇಶದ ಕೆಲವು ಭಾಗಗಳಲ್ಲಿ ರಾಜ್ಯದ ಆರ್ಥಿಕತೆಯ ಕುಸಿತವು ಕಾನೂನು ಬಾಹಿರತೆಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಕಳವಳಕಾರಿ ಅಂಶ ಕೂಡ ವರದಿಯಾಗಿದೆ. ಉತ್ತರ ಲೆಬನಾನ್‌ನಲ್ಲಿ ಸುನ್ನಿ ಮುಸ್ಲಿಂ ಕುಲಗಳ ನಡುವಿನ ಸಂಘರ್ಷದಲ್ಲಿ ಭಾರೀ ಮಷಿನ್ ಗನ್ ಹಾಗೂ ರಾಕೆಟ್ ಚಾಲಿತ ಗ್ರೆನೇಡ್‌ಗಳನ್ನು ಬಳಕೆ ಮಾಡಲಾಗಿದ್ದು ಇದೆಲ್ಲವೂ ದೇಶದ ಭದ್ರತಾ ಪಡೆಗಳ ಮೇಲೆ ತೀವ್ರ ಒತ್ತಡ ಹೇರುತ್ತಿದೆ. ಈ ಕುರಿತು ಭದ್ರತಾ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದು ಸೇನೆ ಒಳಗೊಂಡಂತೆ ದೇಶದ ಇತರ ಭಾಗಗಳ ಮೇಲೆ ಆರ್ಥಿಕ ಬಿಕ್ಕಟ್ಟು ಅಪಾಯದ ಪರಿಣಾಮಗಳನ್ನು ಉಂಟುಮಾಡಲಿದೆ ಎಂದಿದ್ದಾರೆ.

  ಸೈನಿಕರ ವೇತನ ಮೌಲ್ಯವು ಕುಸಿದಿದ್ದು ಒಂದು ರೀತಿಯ ಅತಂತ್ರ ಸ್ಥಿತಿ ದೇಶದಲ್ಲಿ ಉಂಟಾಗಿದೆ. ಇದೇ ಸಂದರ್ಭದಲ್ಲಿ ಹಿರಿಯ ಭದ್ರತಾ ಮುಖ್ಯಸ್ ಮೇಜರ್ ಜನರಲ್ ಅಬ್ಬಾಸ್ ಇಬ್ರಾಹಿಂ, ಬಿಕ್ಕಟ್ಟಿನ ಸಂದರ್ಭದಲ್ಲಿ ದೃಢವಾಗಿ ನಿಲ್ಲುವಂತೆ ತಮ್ಮ ಅಧಿಕಾರಿಗಳನ್ನು ಒತ್ತಾಯಿಸಿದ್ದು ರಾಜ್ಯವು ಕುಸಿದರೆ ಉಂಟಾಗಬಹುದಾದ ಅವ್ಯವಸ್ಥೆಯ ಬಗ್ಗೆ ಎಚ್ಚರಿಸಿದ್ದಾರೆ.

  ರಾಜಕೀಯ ಪರಿಸ್ಥಿತಿ

  ಲೆಬನಾನ್‌ ಪರಿಸ್ಥಿತಿಯನ್ನು ಸರಳವಾಗಿ ಪರಿಹರಿಸಬಹುದಾಗಿದ್ದು, ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಮೂಲ ಪರಿಹರಿಸಲು ಸುಧಾರಣೆಗಳನ್ನು ಕೈಗೊಳ್ಳಲು ದಾನಿಗಳು ಒತ್ತಾಯಪಡಿಸಿದ್ದು ದೇಶದ ಅಭಿವೃದ್ಧಿಗೆ ಸಹಾಯ ಮಾಡುವ ಮೂಲಕ ಬೆಂಬಲ ನೀಡುವ ಕುರಿತು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಆದರೆ ದೇಶಕ್ಕೆ ಅಗತ್ಯವಾಗಿರುವ ಅಂಶಗಳತ್ತ ಗಮನ ಹರಿಸುವ ಬದಲಿಗೆ ಲೆಬನಾನ್‌ನ ಪಂಥೀಯ ರಾಜಕಾರಣಿಗಳು ಹೊಸ ಸರಕಾರದಲ್ಲಿನ ಸ್ಥಾನಕ್ಕಾಗಿ ವೈಷಮ್ಯ ಬೆಳೆಸಿಕೊಂಡು ಕಲಹಗಳನ್ನು ನಡೆಸುತ್ತಿದ್ದಾರೆ.

  ಮರೋನೈಟ್ ಕ್ರಿಶ್ಚಿಯನ್ ಆಗಿರುವ ಅಧ್ಯಕ್ಷ ಮೈಕೆಲ್ ಔನ್ ವಿರೋಧಿಗಳು ಹೊಸ ಸರಕಾರದಲ್ಲಿನ ವೀಟೋ ಅಧಿಕಾರಕ್ಕಾಗಿ ಬೇಡಿಕೆ ಇರಿಸುವ ಮೂಲಕ ಮುಕ್ತ ಸ್ವಾತಂತ್ರ್ಯ ಚಳವಳಿಯ ಮೂಲಕ ಪ್ರತಿಕ್ರಿಯೆಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಈ ಬೇಡಿಕೆಯನ್ನು ಅಂಗೀಕರಿಸುವುದಕ್ಕೆ ಔನ್ ನಿರಾಕರಣೆ ತೋರುತ್ತಿದ್ದಾರೆ.

  ಮಾಜಿ ಪ್ರಧಾನಿ ಸಾದ್ ಅಲ್-ಹರಿರಿ ಸೇರಿದಂತೆ ಸುನ್ನಿ ರಾಜಕಾರಣಿಗಳು ಸೇರಿದಂತೆ ರಾಜಕೀಯದಲ್ಲಿ ಸುನ್ನಿಗಳಿಗೆ ಸೇರಿದ ಹುದ್ದೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂಬ ಸಂಘರ್ಷ ಹುಟ್ಟುಹಾಕಿದ್ದು ಇದರಿಂದ ಕೆಲವೊಂದು ಪಂಥೀಯ ಆಯಾಮ ಹುಟ್ಟಿಕೊಂಡಿದೆ. ಲೆಬನಾನ್ ಪ್ರಧಾನಿ ಮಿಕಾಟಿ ಕ್ಯಾಬಿನೆಟ್ ರಾಜಕೀಯ ಒಳಜಗಳಗಳನ್ನು ಬದಿಗಿಟ್ಟು ದೇಶದ ಸುಧಾರಣೆಯತ್ತ ಗಮನಹರಿಸುವುದಾಗಿ ಭರವಸೆಯನ್ನಿತ್ತಿದ್ದಾರೆ. ಆದರೆ ಆರ್ಥಿಕ ಅತಂತ್ರತೆ ದೇಶದಲ್ಲಿ ಇನ್ನೂ ಇದ್ದು ಜನರು ಮಾತ್ರ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

  ಮುಂದಿನ ವಸಂತ ಕಾಲದಲ್ಲಿ ಚುನಾವಣೆಯು ಮಿಕಾಟಿ ಪ್ರತಿಜ್ಞೆ ಮಾಡಿದ ಅದೇ ಸಮಯದಂದು ನಡೆಯಲಿದ್ದು ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸಲಿದೆ ಎಂಬ ಸಮಸ್ಯೆ ಕೂಡ ಮುಂದಿದೆ. ರಾಜಕೀಯ ಮೂಲಗಳು ವರದಿ ನೀಡಿರುವಂತೆ ದೇಶದಲ್ಲಿನ ರಾಜಕೀಯ ಬಣಗಳು ದೇಶದ ಸುವ್ಯವಸ್ಥೆಯತ್ತ ಗಮನ ಹರಿಸುವುದರ ಬದಲಿಗೆ ತಮ್ಮ ಸ್ಥಾನಗಳನ್ನು ಕಾಪಾಡುವಲ್ಲಿ ಹೆಚ್ಚು ಅಸ್ಥೆ ತೋರುತ್ತಿದೆ ಎಂದಿವೆ.

  ಇಂಧನ ಕೊರತೆ ಎದುರಿಸುತ್ತಿರುವ ದೇಶದಲ್ಲಿ ಇರಾನ್‌ನಿಂದ ಇಂಧನ ಆಮದು ಮಾಡಲು ಪದೇ ಪದೇ ಕ್ಯಾಬಿನೆಟ್ ರಚನೆಗೆ ಕರೆ ನೀಡಿದ ಹಿಜ್ಬುಲ್ಲಾ ನಿರ್ಧಾರವು ರಾಜಕೀಯ ಕ್ಷೇತ್ರಕ್ಕೆ ಮತ್ತೊಂದು ಸವಾಲನ್ನು ಮುಂದಿಟ್ಟಿದೆ. ಗುಂಪಿನ ವಿರೋಧಿ ಬಣಗಳು ಆರೋಪಿಸಿರುವಂತೆ ಈ ನಿರ್ಧಾರದಿಂದ ಲೆಬನಾನ್ ಅನ್ನು ಅಮೆರಿಕಾದ ನಿರ್ಬಂಧಗಳಿಗೆ ತಳ್ಳುವ ಅಪಾಯವನ್ನು ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.

  ಈ ಹಿಂದೆ ದೇಶಕ್ಕೆ ಆರ್ಥಿಕ ನೆರವು ನೀಡುತ್ತಿದ್ದ ಗಲ್ಫ್‌ ರಾಜಪ್ರಭುತ್ವಗಳು ಇದೀಗ ಇರಾನ್ ಬೆಂಬಲಿತ ಗುಂಪಿನ ಪ್ರಭಾವದಿಂದ ಗಾಬರಿಗೊಂಡಿದ್ದು ನೆರವು ನೀಡಲು ಹಿಂಜರಿದಿದೆ. ಲೆಬನಾನ್‌ಗೆ ಅರಬ್ ದೇಶದ ನೆರವಿನ ಅಗತ್ಯವಿದ್ದು ಅರಬ್ ನೆರೆಹೊರೆಯ ರಾಷ್ಟ್ರಗಳ ಯಾವುದೇ ಸಹಕಾರವನ್ನು ಹಾಗೂ ಯಾವುದೇ ಅವಕಾಶಗಳನ್ನು ಕೈಬಿಡುವುದಿಲ್ಲವೆಂದು ಮಿಕಾಟಿ ಸ್ಪಷ್ಟಪಡಿಸಿದ್ದಾರೆ.

  ಇದನ್ನೂ ಓದಿ: Bagalkot: 6.5 ಲಕ್ಷಕ್ಕೆ ಹರಾಜಾದ ಮಾಲಿಂಗರಾಯ ದೇವರ ಗದ್ದುಗೆ ತೆಂಗಿನಕಾಯಿ

  ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದ್ದರೂ ಲೆಬನಾನರು ಒಂದಾದರೆ, ಯಾವುದೂ ಅಸಾಧ್ಯವಲ್ಲ ಎಂದು ಮಿಕಾಟಿ ತಿಳಿಸಿದ್ದು, ನಾವು ಜೊತೆಯಾಗಿ ಕೆಲಸ ಮಾಡಬೇಕು ಹಾಗೂ ಭರವಸೆ ಮತ್ತು ಸಂಕಲ್ಪದೊಂದಿಗೆ ದೇಶದ ಪ್ರಗತಿ ಸಾಧಿಸಲಿದ್ದೇವೆ ಎಂದು ಪ್ರಧಾನಿ ತಿಳಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: