Bengaluru Lakes: ಕಾಣದಂತೆ ಮಾಯವಾಯ್ತಣ್ಣ ಬೆಂಗಳೂರು ಕೆರೆಗಳು! ಜೀವಸೆಲೆಯ ನೆಲೆ ಮೇಲೆ ತಲೆ ಎತ್ತಿದ ಲೇಔಟ್‌ಗಳು!

ಬೆಂದಕಾಳೂರು ಬೆಂಗಳೂರಾಗಿ ಬೆಳೆದು, ಜನವಸತಿ ಹೆಚ್ಚಿದ ಮೇಲೆ ನೀರಿನ ಕೊರತೆ ಆಗಬಾರದು, ನಗರದ ನೀರು ಸರಾಗವಾಗಿ ಹರಿದು ಕೆರೆ ಸೇರಬೇಕು ಅಂತ ಹಿಂದೆಯೇ ವ್ಯವಸ್ಥಿತಿವಾಗಿ ಹಲವಾರು ಕೆರೆಗಳನ್ನು ಕಟ್ಟಿಸಿದ್ದರು. ಆದರೆ ಇಂದು ಆ ಕೆರೆಗಳೆಲ್ಲ ಕಾಣದಂತೆ ಮಾಯವಾಗಿದೆ. ಅವುಗಳ ಮೇಲೆ ಲೇಔಟ್ಗಳು ನಿರ್ಮಾಣವಾಗುತ್ತಿವೆ. ಇದೀಗ ಬೆಂಗಳೂರಿನ ಮಹಾಮಳೆ ಅವಾಂತರಕ್ಕೆ, ಮುಂದೆ ಬೇಸಿಗೆಯಲ್ಲಿ ಬರಬಹುದಾದ ಕುಡಿಯೋ ನೀರಿನ ಕೊರೆತೆಗೆ ಇದೂ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
ಕರ್ನಾಟಕದ ರಾಜಧಾನಿ (Capital of Karnataka) ಬೆಂಗಳೂರು (Bengaluru) ಬರೀ ಭಾರತದಲ್ಲೊಂದೇ (India) ಅಲ್ಲ ವಿಶ್ವಮಟ್ಟದಲ್ಲಿ (International Level) ಹೆಸರು ಪಡೆದ ನಗರಿ. ಸಿಲಿಕಾನ್ ಸಿಟಿ, ಸಿಲಿಕಾನ್ ವ್ಯಾಲಿ, ಐಟಿ ಸಿಟಿ, ಐಟಿ ಬಿಟಿ ಸಿಟಿ, ಐಟಿ ಹಬ್, ನಿವೃತ್ತರ ಸ್ವರ್ಗ, ಉದ್ಯಾನ ನಗರಿ, ಗಾರ್ಡನ್ ಸಿಟಿ, ಗ್ರೀನ್ ಸಿಟಿ ಸೇರಿದಂತೆ ಹಲವು ಅಭಿದಾನಕ್ಕೆ ನಮ್ಮ ಬೆಂಗಳೂರು (Namma Bengaluru) ಪಾತ್ರವಾಗಿದೆ. ಈ ಎಲ್ಲಾ ಖ್ಯಾತಿಯ ಜೊತೆಗೆ ಈ ಹಿಂದೆ ಬೆಂಗಳೂರಿಗೆ ಮತ್ತೊಂದು ಖ್ಯಾತಿಯೂ ಇತ್ತು. ಅದು ಕೆರೆಗಳ ನಗರಿ (Lake of City) ! ಹೌದು, ಬೆಂದಕಾಳೂರು ಜನ್ಮ ತಳೆದಾಗ ಇದರ ನಿರ್ಮಾತೃ ಕೆಂಪೇಗೌಡರು (Kempegowda), ಮೈಸೂರಿನ ಒಡೆಯರು (Mysore Wodeyar) ಬೆಂಗಳೂರಲ್ಲಿ ಕೆರೆಗಳ ನಿರ್ಮಾಣಕ್ಕೆ ಪ್ರಾಶಸ್ತ್ಯ ನೀಡಿದ್ದರು. ಮುಂದೆ ಬೆಂದಕಾಳೂರು (Bendakaluru) ಬೆಂಗಳೂರಾಗಿ ಬೆಳೆದು, ಜನವಸತಿ ಹೆಚ್ಚಿದ ಮೇಲೆ ನೀರಿನ ಕೊರತೆ ಆಗಬಾರದು, ನಗರದ ನೀರು ಸರಾಗವಾಗಿ ಹರಿದು ಕೆರೆ ಸೇರಬೇಕು ಅಂತ ಹಿಂದೆಯೇ ವ್ಯವಸ್ಥಿತಿವಾಗಿ ಹಲವಾರು ಕೆರೆಗಳನ್ನು ಕಟ್ಟಿಸಿದ್ದರು. ಆದರೆ ಇಂದು ಆ ಕೆರೆಗಳೆಲ್ಲ ಕಾಣದಂತೆ ಮಾಯವಾಗಿದೆ. ಅವುಗಳ ಮೇಲೆ ಲೇಔಟ್‌ಗಳು (Layouts) ನಿರ್ಮಾಣವಾಗುತ್ತಿವೆ. ಇದೀಗ ಬೆಂಗಳೂರಿನ ಮಹಾಮಳೆ (Heavy Rain) ಅವಾಂತರಕ್ಕೆ, ಮುಂದೆ ಬೇಸಿಗೆಯಲ್ಲಿ ಬರಬಹುದಾದ ಕುಡಿಯೋ ನೀರಿನ ಕೊರೆತೆಗೆ ಇದೂ ಕಾರಣವಾಗಿದೆ.  

ರಾಜಧಾನಿಯಲ್ಲಿತ್ತು 300ಕ್ಕೂ ಹೆಚ್ಚು ಕೆರೆಗಳುಬೆಂಗಳೂರಿನಲ್ಲಿ ಕೆರೆಗಳಿಗೇನೂ ಕೊರತೆ ಇರಲಿಲ್ಲ. ಬೆಂದಕಾಳೂರನ್ನು ಕಟ್ಟುವಾಗ ನಗರದಲ್ಲಿ ಚಿಕ್ಕ, ಮಧ್ಯಯ ಹಾಗೂ ಬೃಹತ್ ಗಾತ್ರದ ಕೆರೆ ಸೇರಿ ಸುಮಾರು 1 ಸಾವಿರಕ್ಕೂ ಹೆಚ್ಚು ಕೆರೆಗಳಿದ್ದವು ಅಂತ ಇತಿಹಾಸ ಹೇಳುತ್ತವೆ. ಒಂದು ವರದಿಯ ಪ್ರಕಾರ 1960ರಲ್ಲಿ ರಾಜಧಾನಿ ಸುತ್ತ ಮುತ್ತ ಸುಮಾರು 280 ಕೆರೆಗಳಿದ್ದವು. ಆದರೆ ಈಗ ಅವುಗಳ ಸಂಖ್ಯೆ 50ನ್ನೂ ದಾಟುವುದಿಲ್ಲ ಎನ್ನುವುದು ವಿಪರ್ಯಾಸ. ಸದ್ಯ ದೊಡ್ಡ ದೊಡ್ಡ ಕೆರೆಗಳೆಲ್ಲ ದಿನ ಕಳೆದಂತೆ ಚಿಕ್ಕ ಗಾತ್ರಕ್ಕೆ ಕುಗ್ಗುತ್ತಿವೆ. ಒಟ್ಟು 114.3 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಬೆಂಗಳೂರಿನ ಮಡಿವಾಳ ಸರೋವರವು ನಗರದ ಅತಿದೊಡ್ಡ ಕೆರೆಯಾಗಿದೆ.

ಪ್ರವಾಹ ಪರಿಸ್ಥಿತಿ ತಪ್ಪಿಸುತ್ತಿದ್ದ ಕೆರೆಗಳು

ಬೆಂಗಳೂರು ಪ್ರದೇಶದಲ್ಲಿನ ಹೆಚ್ಚಿನ ಸರೋವರಗಳನ್ನು ಹದಿನಾರನೇ ಶತಮಾನದಲ್ಲಿ ಕಟ್ಟಗಳನ್ನು ನಿರ್ಮಿಸುವ ಮೂಲಕ ನೈಸರ್ಗಿಕ ಕಣಿವೆಯ ವ್ಯವಸ್ಥೆಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸುವ ಮೂಲಕ ನಿರ್ಮಿಸಲಾಯಿತು. ಬೆಂಗಳೂರಿನ ಕೆರೆಗಳು ನೀರಿನ ಚರಂಡಿಗಳು ಅಥವಾ ಕಾಲುವೆಗಳ ಜಾಲದಿಂದ ಅಂತರ್ಸಂಪರ್ಕಿಸಲ್ಪಟ್ಟಿವೆ. ಇದು ಹೆಚ್ಚಿನ ಎತ್ತರದಲ್ಲಿರುವ ಕೆರೆಗಳಿಂದ ಕಡಿಮೆ ಎತ್ತರದ ಪ್ರದೇಶಗಳಿಗೆ ಹೆಚ್ಚುವರಿ ನೀರನ್ನು ಒಯ್ಯುತ್ತಿದ್ದವು. ಇವುಗಳಿಂದ ಈ ಹಿಂದೆ ಬೆಂಗಳೂರು ನಗರದಲ್ಲಿ ಪ್ರವಾಹ ಪರಿಸ್ಥಿತಿ ಬರುತ್ತಿರಲಿಲ್ಲ.

ಇದನ್ನೂ ಓದಿ: Bengaluru Rain: ಭೀಕರ ಮಳೆಗೆ ಬೆಚ್ಚಿಬಿದ್ದಿದೆ ಬೆಂಗಳೂರು! ರಾಜಧಾನಿ ಅವಾಂತರಕ್ಕೆ ಕಾರಣ ಯಾರು?

 ಮಲಿನಗೊಳ್ಳುತ್ತಿರುವ ಕೆರೆಗಳು

ಸಂಶೋಧಕರ ಪ್ರಕಾರ, ಬೆಂಗಳೂರಿನ ಕೆರೆಗಳಲ್ಲಿ ನಿಗದಿತ ನೀರಿನ ಗುಣಮಟ್ಟವನ್ನು ಕಾಯ್ದುಕೊಳ್ಳದಿರಲು ಕೆರೆಗಳಿಗೆ ಸೇರುತ್ತಿರುವ ಕೊಳಚೆ ನೀರು ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಹೈಕೋರ್ಟ್‌ಗೆ ಸಲ್ಲಿಸಿದ NEERI ವರದಿ 2021 ಸಹ ಬೆಂಗಳೂರಿನ ಕೆರೆಗಳ ಮಾಲಿನ್ಯಕ್ಕೆ ದೇಶೀಯ ಒಳಚರಂಡಿ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಅಂತ ಹೇಳಿದೆ.

ಕೆರೆಗಳ ಮೇಲೆ ಪ್ರಮುಖ ಲೇಔಟ್‌ಗಳ ನಿರ್ಮಾಣ

ಹೌದು, ನಗರದ ಬಹುತೇಕ ಐತಿಹಾಸಿಕ ಕೆರೆಗಳು ಈಗ ಲೇಔಟ್‌ಗಳಾಗಿವೆ. ಅಕ್ರಮವಾಗಿ ಬಿಲ್ಡಿಂಗ್ ನಿರ್ಮಿಸುವವರು ಮೊದಲಿಗೆ ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು, ಕೆರೆಯನ್ನು ಕುಗ್ಗಿಸುತ್ತಾರೆ. ಬಳಿಕ ಅದನ್ನು ಪೂರ್ತಿ ಮುಚ್ಚಿ, ಅದರ ಮೇಲೆ ಲೇಔಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವುಗಳಲ್ಲಿ ಹಲವು ಪ್ರತಿಷ್ಠಿತ ಲೇಔಟ್‌ಗಳು ಪ್ರಮುಖ ಕೆರೆಗಳ ಮೇಲೆ ನಿರ್ಮಾಣವಾಗಿರುವುದು ಎನ್ನುವುದು ಆಘಾತಕಾರಿ ವಿಚಾರ.

ಯಾವ ಕೆರೆಗಳ ಮೇಲೆ ಯಾವ ಲೇಔಟ್‌ ನಿರ್ಮಾಣವಾಗಿವೆ?

 1. ಮಾರೇನಹಳ್ಳಿ ಕೆರೆ – ಮಾರೇನಹಳ್ಳಿ ಲೇಔಟ್

 2. ಸಾರಕ್ಕಿ ಅಗರ ಕೆರೆ, ದೊರೆಸಾನಿಪಾಳ್ಯ ಕೆರೆ – ಜೆಪಿ ನಗರ 4ನೇ ಹಂತ

 3. ಚಿನ್ನಸಾಗರ ಕೆರೆ – ಈಜಿಪುರ

 4. ಚಲ್ಲಘಟ್ಟ ಕೆರೆ – ಕರ್ನಾಟಕ ಗಾಲ್ಫ್ ಅಸೋಸಿಯೇಷನ್

 5. ದೊಮ್ಮಲೂರು ಕೆರೆ – ದೊಮ್ಮಲೂರು 2ನೇ ಹಂತ

 6. ಸಿದ್ದಾಪುರ ಕೆರೆ – ಸಿದ್ದಾಪುರ, ಜಯನಗರ ಮೊದಲ ಹಂತ

 7. ಗೆದ್ದಲಹಳ್ಳಿ ಕೆರೆ – ಆರ್‌ಎಂವಿ 2ನೇ ಹಂತ, ಫಸ್ಟ್ ಬ್ಲಾಕ್

 8. ನಾಗಶೆಟ್ಟಿಹಳ್ಳಿ ಕೆರೆ – ಆರ್‌ಎಂವಿ 2ನೇ ಹಂತ, ಸೆಕೆಂಡ್ ಬ್ಲಾಕ್

 9. ಕದಿರೇನಹಳ್ಳಿ ಕೆರೆ – ಬನಶಂಕರಿ 2ನೇ ಹಂತ

 10. ತ್ಯಾಗರಾಜನಗರ ಕೆರೆ – ತ್ಯಾಗರಾಜನಗರ

 11. ತುಮಕೂರು ಕೆರೆ – ಮೈಸೂರು ಲ್ಯಾಂಪ್ಸ್ ಫ್ಯಾಕ್ಟರಿ

 12. ರಾಮಶೆಟ್ಟಿಪಾಳ್ಯ ಕೆರೆ – ಮಿಲ್ಕ್ ಕಾಲನಿ ಆಟದ ಮೈದಾನ

 13. ಅಗಸನ ಕೆರೆ – ಗಾಯತ್ರಿದೇವಿ ಪಾರ್ಕ್

 14. ಕೇತಮಾರನಹಳ್ಳಿ ಕೆರೆ – ರಾಜಾಜಿನಗರ, ಮಹಾಲಕ್ಷ್ಮೀಪುರ

 15. ಗಂಗಶೆಟ್ಟಿ ಕೆರೆ – ಮಿನಾರ್ವ ಮಿಲ್ಸ್, ಮೈದಾನ

 16. ಜಕ್ಕರಾಯ ಕೆರೆ – ಕೃಷ್ಣ ಫ್ಲೋರ್ ಮಿಲ್

 17. ಧರ್ಮಾಂಬುಧಿ ಕೆರೆ – ಕೆಂಪೇಗೌಡ ಬಸ್ ನಿಲ್ದಾಣ

 18. ಅಗ್ರಹಾರ ಹೊಸಕೆರೆ – ಚಲನವಾದಿಪಾಳ್ಯ

 19. ಕಲಾಸಿಪಾಳ್ಯ ಕೆರೆ – ಕಲಾಸಿಪಾಳ್ಯ

 20. ಸಂಪಂಗಿ ಕೆರೆ – ಕಂಠೀರವ ಸ್ಟೇಡಿಯಂ

 21. ಶೂಲೆ ಟ್ಯಾಂಕ್ – ಅಶೋಕ ನಗರ, ಫುಟ್‌ಬಾಲ್ ಸ್ಟೇಡಿಯಂ

 22. ಅಕ್ಕಿತಿಮ್ಮನಹಳ್ಳಿ ಟ್ಯಾಂಕ್ – ಸಾಯ್ ಹಾಕಿ ಸ್ಟೇಡಿಯಂ

 23. ಸುಂಕಾಳ್ ಟ್ಯಾಂಕ್ – ಕೆಎಸ್‌ಆರ್‌ಟಿಸಿ ರೀಜನಲ್ ವರ್ಕ್ ಶಾಪ್

 24. ಕೋರಮಂಗಲ ಕೆರೆ – ನ್ಯಾಶನಲ್ ಡೈರಿ ರಿಸರ್ಚ್ ಇನ್ಸ್‌ಸ್ಟಿಟ್ಯೂಟ್

 25. ಕೋಡಿಹಳ್ಳಿ ಕೆರೆ – ನ್ಯೂ ತಿಪ್ಪಸಂದ್ರ, ಸರ್ಕಾರಿ ಕಟ್ಟಡಗಳು

 26. ಹೊಸಕೆರೆ – ರೆಸಿಡೆನ್ಶಿಯಲ್ ರೈಲ್ವೆ ಸ್ಟಾಕ್ ಯಾರ್ಡ್

 27. ಸೊನ್ನೇನಹಳ್ಳಿ ಕೆರೆ – ಆಸ್ಟಿನ್ ಟೌನ್, ಆರ್‌ಇಎಸ್ ಕಾಲನಿ

 28. ಗೋಕುಲ ಟ್ಯಾಂಕ್ – ಮತ್ತಿಕೆರೆ

 29. ವಿದ್ಯಾರಣ್ಯಪುರ ಕೆರೆ – ವಿದ್ಯಾರಣ್ಯಪುರ

 30. ಕಾಡುಗೊಂಡನಹಳ್ಳಿ ಕೆರೆ – ಕಾಡುಗೊಂಡನಹಳ್ಳಿ

 31. ಹೆಣ್ಣೂರು ಕೆರೆ – ನಾಗವಾರ, ಎಚ್‌ಬಿಆರ್‌ ಲೇಔಟ್

 32. ಬಾಣಸವಾಡಿ ಕೆರೆ – ಸುಬ್ಬಯ್ಯಪಾಳ್ಯ ಎಕ್ಸ್‌ಟೆನ್ಶನ್

 33. ಚನ್ನಸಂದ್ರ ಕೆರೆ – ಪುಲ್ಲರೆಡ್ಡಿ ಲೇಔಟ್

 34. ವಿಜಿನಾಪುರ (ಕೊಟ್ಟೂರು) ಕೆರೆ – ರಾಜರಾಜೇಶ್ವರಿ ಲೇಔಟ್

 35. ಮುರುಗೇಶಪಾಳ್ಯ ಕೆರೆ – ಮುರುಗೇಶಪಾಳ್ಯ

 36. ಪರಂಗಿಪಾಳ್ಯ ಕೆರೆ – ಎಚ್‌ಎಸ್ಆರ್‌ ಲೇಔಟ್

 37. ಮೇಸ್ತ್ರಿಪಾಳ್ಯ ಕೆರೆ – ಮೇಸ್ತ್ರಿಪಾಳ್ಯ ಓಪನ್ ಗ್ರೌಂಡ್

 38. ಟಿಂಬ್‌ ಯಾರ್ಡ್ ಕೆರೆ – ಟಿಂಬ್ ಯಾರ್ಡ್ ಲೇಔಟ್‌

 39. ಗಂಗೊಂಡನಹಳ್ಳಿ ಕೆರೆ – ಗಂಗೊಂಡನಹಳ್ಳಿ

 40. ವಿಜಯನಗರ ಕಾರ್ಡ್ ರೋಡ್ ಕೆರೆ – ವಿಜಯನಗರ

 41. ಒಡ್ಡರಪಾಳ್ಯ ಕೆರೆ - ರಾಜಾಜಿನಗರ ಇಂಡಸ್ಟಿಯಲ್ ಏರಿಯಾ

 42. ಸಾಣೆಗುರುವನಹಳ್ಳಿ ಕೆರೆ – ಶಿವನಹಳ್ಳಿ ಆಟದ ಮೈದಾನ, ಕೆಎಸ್‌ಪಿಸಿಬಿ ಬಿಲ್ಡಿಂಗ್ಸ್

 43. ಕುರುಬರಹಳ್ಳಿ ಕೆರೆ – ಬಸವೇಶ್ವರನಗರ ಲೇಔಟ್


ಇದನ್ನೂ ಓದಿ: Explained: ಬೆಂಗಳೂರಿನಲ್ಲಿ ಬದುಕು ಜಟಕಾ 'ಗುಂಡಿ’! ರಾಜಧಾನಿ ರಸ್ತೆಯಲ್ಲಿರೋದು 10,282 ಹೊಂಡ!

ಈ ರೀತಿ ಒಂದೊಂದಾಗಿ ನಗರದ ಕೆರೆಗಳು ಕಣ್ಮರೆಯಾಗುತ್ತಿವೆ. 1000  ಕೆರೆಗಳಿದ್ದ ಜಾಗದಲ್ಲಿ ಈಗ ಬೆರಳಲ್ಲಿ ಎಣಿಸುವಷ್ಟು ಕೆರೆಗಳಿವೆ. ಮುಂದೆ ನಗರ ಬೆಳೆದರೆ ಈ ಕೆರೆಗಳೂ ಮಾಯವಾಗುವುದರಲ್ಲಿ ಸಂಶಯವೇ ಇಲ್ಲ!
Published by:Annappa Achari
First published: