• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಸ್ಟಾರ್‌ಬಕ್ಸ್‌ ನೂತನ ಸಿಇಒ ಲಕ್ಷಣ್‌ ನರಸಿಂಹನ್‌ ಯಾರು? ಬಯಲಾಯ್ತು ಇಂಟರೆಸ್ಟಿಂಗ್ ಮಾಹಿತಿ

Explained: ಸ್ಟಾರ್‌ಬಕ್ಸ್‌ ನೂತನ ಸಿಇಒ ಲಕ್ಷಣ್‌ ನರಸಿಂಹನ್‌ ಯಾರು? ಬಯಲಾಯ್ತು ಇಂಟರೆಸ್ಟಿಂಗ್ ಮಾಹಿತಿ

ಲಕ್ಷಣ್‌ ನರಸಿಂಹನ್

ಲಕ್ಷಣ್‌ ನರಸಿಂಹನ್

ವಿಶ್ವದ ಅತಿ ದೊಡ್ಡ ಕಾಫಿ ಕಂಪನಿಗೆ ಸಿಇಒ ಆಗಿದ್ದಾರೆ ಎಂದರೆ ಅವರು ಯಾರು? ಅವರ ಹಿನ್ನೆಲೆ ಏನು? ಅವರ ಶೈಕ್ಷಣಿಕ ಹಿನ್ನೆಲೆ ಏನಾಗಿದೆ? ಅವರು ಈ ಮುಂಚೆ ಯಾವ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು? ಒಂದಾ..ಎರಡಾ ..? ಹಲವು ಪ್ರಶ್ನೆಗಳು ಪ್ರತಿಯೊಬ್ಬರಿಗೂ ಕಾಡುತ್ತವೆ. ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ ಬನ್ನಿ.

ಮುಂದೆ ಓದಿ ...
  • Share this:

ವಿಶ್ವದ ಅತಿ ದೊಡ್ಡ ಉತ್ಪನ್ನ ಕಾಫಿ ಕಂಪನಿ ಸ್ಟಾರ್‌ಬಕ್ಸ್‌ (Starbucks) ಇದೀಗ ಹೊಸದಾಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ (Laxman Narasimhan) ಅವರನ್ನು ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ(ಸಿಇಒ) ಘೋಷಿಸಿದೆ. 55 ರ ಹರೆಯದ ಲಕ್ಷ್ಮಣ್ ನರಸಿಂಹನ್ ಅವರು ಈ ಹಿಂದೆ ಆರೋಗ್ಯ ಮತ್ತು ಪೌಷ್ಟಿಕಾಂಶದ ಗ್ರಾಹಕ ವಸ್ತುಗಳನ್ನು ಉತ್ಪಾದಿಸುವ ಆಂಗ್ಲೋ-ಡಚ್ ಕಂಪನಿಯಾದ (Anglo-Dutch company) ರೆಕಿಟ್ ಬೆನ್‌ಕಿಸರ್‌ನ ಸಿಇಒ ಆಗಿದ್ದರು. ನಂತರ ಇವರು ಪೆಪ್ಸಿಕೊವಿನ ಜಾಗತಿಕ ಮುಖ್ಯ ವಾಣಿಜ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು, ಇದೀಗ ಆ ಸ್ಥಾನಕ್ಕೆ ಹೋವರ್ಡ್ ಸ್ಕುಲ್ಟ್ಜ್ (Howard Schultz) ಅವರನ್ನು ನೇಮಿಸಲಾಗಿದೆ.


ಲಕ್ಷಣ್‌ ನರಸಿಂಹನ್ ಅವರು ಯುಸ್‌ ನಲ್ಲಿ ಪ್ರಮುಖ ಕಂಪನಿಗಳ ಮುಖ್ಯಸ್ಥರಾಗಿರುವ ಅನೇಕ ಭಾರತೀಯ ಮತ್ತು ಅಮೆರಿಕನ್ನರ ಲೀಗ್‌ ಮೂಲಕ ಸೇರಿದ್ದಾರೆ. ಲಕ್ಷಣ್‌ ನರಸಿಂಹನ್‌ ಅವರು ಅಮೇರಿಕದಲ್ಲಿ ನಡೆಯುತ್ತಿರುವ ಕೆಲಸಗಾರರಿಗೆ ಕನಿಷ್ಠ ವೇತನದ ಹೆಚ್ಚಳ ಮತ್ತು ಒಕ್ಕೂಟೀಕರಣದ ಕುರಿತು ಚರ್ಚೆಗಳು ನಡೆಯುವ ಸಮಯದಲ್ಲಿ ಸ್ಟಾರ್‌ಬಕ್ಸ್‌ ಕಂಪನಿಗೆ ಸಿಇಒ ಆಗಿ ನೇಮಕಗೊಂಡಿದ್ದಾರೆ. ಈ ಚರ್ಚೆಗಳಿಂದ ಅಮೇರಿಕಾದಲ್ಲಿ ಸ್ಟಾರ್‌ಬಕ್ಸ್‌ ಈಗ ಒಂದು ವಿಶೇಷ ಕಂಪನಿಯಾಗಿ ಮುನ್ನಲೆಯಲ್ಲಿ ಚರ್ಚೆ ಆಗುತ್ತಿದೆ.


ಸ್ಟಾರ್‌ಬಕ್ಸ್‌ನ ನೂತನ ಸಿಇಒ ಲಕ್ಷಣ್‌ ನರಸಿಂಹನ್‌ ಅವರ ಹಿನ್ನೆಲೆ:
ವಿಶ್ವದ ಅತಿ ದೊಡ್ಡ ಕಾಫಿ ಕಂಪನಿಗೆ ಸಿಇಒ ಆಗಿದ್ದಾರೆ ಎಂದರೆ ಅವರು ಯಾರು? ಅವರ ಹಿನ್ನೆಲೆ ಏನು? ಅವರ ಶೈಕ್ಷಣಿಕ ಹಿನ್ನೆಲೆ ಏನಾಗಿದೆ? ಅವರು ಈ ಮುಂಚೆ ಯಾವ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು? ಒಂದಾ..ಎರಡಾ ..? ಹಲವು ಪ್ರಶ್ನೆಗಳು ಪ್ರತಿಯೊಬ್ಬರಿಗೂ ಕಾಡುತ್ತವೆ. ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯೋಣ ಬನ್ನಿ.


ಲಕ್ಷಣ್‌ ನರಸಿಂಹನ್ ಅವರು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು ಮತ್ತು ಪುಣೆ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಈ ವರ್ಷದ ಮೇ ತಿಂಗಳಿನಲ್ಲಿ ʼದಿ ಸಂಡೇ ಟೈಮ್ಸ್‌ʼ ಗೆ ನೀಡಿದ ಸಂದರ್ಶನದಲ್ಲಿ, ಅವರು ತಮ್ಮ ಬಾಲ್ಯವು ಬಹಳಷ್ಟು ಕಷ್ಟದಿಂದ ಕೂಡಿತ್ತು ಎಂದು ಹೇಳಿದರು. ಅವರು ಹುಟ್ಟುವ ಮೊದಲೇ ನಿಧನರಾದ ಅವರ ಅಕ್ಕನ ಮರಣವನ್ನು ಈ ಸಂದರ್ಶನಲ್ಲಿ ನೆನಪಿಸಿಕೊಳ್ಳುತ್ತಾರೆ. ಇದರ ಜೊತೆಗೆ ಅವರ ಅಣ್ಣ ಮತ್ತು ತಮ್ಮ ಹೇಗೆ ಎಂಟನೇ ವಯಸ್ಸಿನಲ್ಲಿ ಕಿಡ್ನಿ ಸೋಂಕಿನ ಕಾಯಿಲೆಯಿಂದ ನಿಧನರಾದರು ಎಂಬ ವಿಷಯಗಳನ್ನು ಇಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Business Startup: ತನ್ನದೇ ಆದ ಎರಡು ಮಲ್ಟಿ ಕ್ರೋರ್ ಮೆನ್ಸ್ ವೇರ್ ಬ್ರಾಂಡ್ ಅನ್ನು ನಿರ್ಮಿಸಿದ ಕೇರಳದ ಯುವಕ


ಲಕ್ಷಣ್‌ ಅವರು ತಮ್ಮ ಮಾತು ಮುಂದುವರಿಸುತ್ತಾ “ನನ್ನ ತಂದೆ ಯುಎಸ್‌ ದೇಶಕ್ಕೆ ವಾಹನಗಳ ಭಾಗಗಳನ್ನು ಪೂರೈಸುವ ಯಂತ್ರ ಸೇವೆಗಳ ವ್ಯಾಪಾರವನ್ನು ಸ್ಥಾಪಿಸಿದರು. ಆ ವ್ಯಾಪಾರವು ಅನೇಕ ಏರಿಳಿತಗಳಿಂದ ಕೂಡಿತ್ತು. ಅಂತಹ ಸಮಯದಲ್ಲಿಯೇ ನಮ್ಮ ತಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ನಾನು ದೂರದ ಕಾಲೇಜಿಗೆ ದಿನವೂ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದೆ.


ಆಗ ನನ್ನ ತಂದೆ ನಾನು ಕಷ್ಟ ಪಡುವುದನ್ನು ನೋಡಿ ನನಗೆ ಒಂದು ಮಾತನ್ನು ಹೇಳಿದರು. ಅದೇನೆಂದರೆ ʼಯಾವುದೇ ಪರಿಸ್ಥಿತಿ ಇರಲಿ ನೀನು ನೀನಾಗಿರು, ಒಂದೇ ತರಹದ ಗುಣವನ್ನು ಹೊಂದಿರು. ನೀನು ಸಹನೆಯನ್ನು ಕಲಿ ಮತ್ತು ನಿನಗೆ ಸರಿ ಎನಿಸುವ ಮಾರ್ಗವನ್ನು ಕಂಡುಕೊಂಡು ಅದನ್ನು ಧೈರ್ಯದಿಂದ ನಡೆಸಲು ಆರಂಭಿಸುʼ ಎಂದು ಯಾವಾಗಲೂ ಹೇಳುತ್ತಿದ್ದರು. ನನ್ನ ತಂದೆ ಇಂದು ನನ್ನ ಜೊತೆ ಇಲ್ಲ, ಆದರೆ ಆ ದಿನ ಅವರು ನನಗೆ ಹೇಳಿದ ಮಾತುಗಳೇ ನಾನು ಇಷ್ಟು ಬೆಳೆಯಲು ಸಾದ್ಯವಾಗಿದೆ” ಎಂದು ಹೇಳಿದರು.


ಲಕ್ಷಣ್‌ ನರಸಿಂಹನ್‌ ಅವರ ಶೈಕ್ಷಣಿಕ ಹಿನ್ನೆಲೆ:
ಲಕ್ಷಣ್‌ ನರಸಿಂಹನ್‌ ಅವರು ಅಧ್ಯಯನದಲ್ಲಿ ಚುರುಕಾಗಿದ್ದರಿಂದ ಅವರಿಗೆ ವಿದೇಶದಲ್ಲಿ ಓದಲು ಅನೇಕ ಸ್ಕಾಲರ್‌ಶಿಪ್‌ಗಳು ಸಿಕ್ಕಿದ್ದವು. ಅದರ ಜೊತೆಗೆ ಆ ಸಮಯದಲ್ಲಿ ಅವರಿಗೆ ಎರಡು ಉದ್ಯೋಗಗಳು ಕೂಡ ದೊರಕಿದ್ದವು, ಇವೆರಡು ಕಾರಣಗಳು ನರಸಿಂಹನ್‌ಗೆ ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ಸಹಾಯ ಮಾಡಿದವು.


ದಿ ಟೆಲಿಗ್ರಾಫ್‌ನ ಪ್ರೊಫೈಲ್‌ನ ಪ್ರಕಾರ, ನರಸಿಂಹನ್‌ ಅವರು ತಮ್ಮ ಆರಂಭಿಕ 20 ರ ಪ್ರಾಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಭಾರತವನ್ನು ಬಿಟ್ಟು ಹೋಗಿದ್ದರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ದಿ ಲಾಡರ್ ಇನ್‌ಸ್ಟಿಟ್ಯೂಟ್‌ನಿಂದ ಜರ್ಮನ್ ಮತ್ತು ಅಂತರರಾಷ್ಟ್ರೀಯ ಅಧ್ಯಯನಗಳಲ್ಲಿ ಎಂ.ಎ. ಪದವಿಗಳಿಸಿದರು. ಇದಲ್ಲದೇ ಅವರು ದಿ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದ ವಾರ್ಟನ್ ಸ್ಕೂಲ್‌ನಿಂದ ಹಣಕಾಸು ವಿಷಯದಲ್ಲಿ ಎಂಬಿಎ ಕೂಡ ಓದಿದ್ದಾರೆ.


ಲಕ್ಷಣ್‌ ನರಸಿಂಹನ್‌ ಅವರ ಕಾರ್ಯಾನುಭವ :
ನರಸಿಂಹನ್ ಕುರಿತು ವರ್ಲ್ಡ್ ಎಕನಾಮಿಕ್ ಫೋರಂನ ಪ್ರೊಫೈಲ್ ಪ್ರಕಾರ, “ಲಕ್ಷಣ್‌ ನರಸಿಂಹನ್‌ ಅವರಿಗೆ ಗ್ರಾಹಕ, ಚಿಲ್ಲರೆ ವ್ಯಾಪಾರ, ಇಂಧನ, ಉತ್ಪಾದನೆ, ತಂತ್ರಜ್ಞಾನ ಮತ್ತು ಆರೋಗ್ಯ ಸೇರಿದಂತೆ ಅನೇಕ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದೆ.


ಇದನ್ನೂ ಓದಿ: Meesho App: ಶಾಪಿಂಗ್ ಮಾತ್ರ ಅಲ್ಲ, ಸ್ಥಳೀಯ ವ್ಯಾಪಾರಿಗಳಿಗೆ ಬದುಕು ಕೊಟ್ಟ ಆ್ಯಪ್


ಅವರು ಸಾರ್ವಜನಿಕ ವಲಯದಲ್ಲಿ, ವಿಶೇಷವಾಗಿ ಶಿಕ್ಷಣ ಮತ್ತು ಕೌಶಲ್ಯ ನಿರ್ಮಾಣದ ನಿರ್ವಹಣೆಗಳ ನಿಯೋಜನೆಗಳನ್ನು ನಡೆಸಿಕೊಟ್ಟಿದ್ದಾರೆ. ಲಕ್ಷಣ್‌ ಅವರು ಪೆಪ್ಸಿಕೋ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಮೊದಲು, ಅವರು ಮೆಕಿನ್ಸೆಯ ನವದೆಹಲಿ ಕಚೇರಿಯ ನಿರ್ದೇಶಕ ಮತ್ತು ಸ್ಥಳ ನಿರ್ವಾಹಕರಾಗಿದ್ದರು. ಅಲ್ಲಿ ಅವರು 2012 ರವರೆಗೆ ಅಂದರೆ ಬರೋಬ್ಬರಿ 19 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಇದರ ನಂತರ ಪ್ರಪಂಚದಾದ್ಯಂತ ಹಲವಾರು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಅವರಿಗೆ ಇದೆ.


ಅವರು ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಷನ್‌ನ ಟ್ರಸ್ಟಿಯಾಗಿ, ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್‌ನ ಸದಸ್ಯರಾಗಿ, ಫಾರಿನ್ ಪಾಲಿಸಿ ಅಸೋಸಿಯೇಷನ್‌ನ ಸಹವರ್ತಿಯಾಗಿ ಮತ್ತು ವಾರ್ಟನ್‌ನಲ್ಲಿರುವ ಜೇ ಹೆಚ್. ಬೇಕರ್ ರಿಟೇಲಿಂಗ್ ಸೆಂಟರ್‌ನ ಸಲಹಾ ಮಂಡಳಿಯ ಸದಸ್ಯರಾಗಿ ಅನೇಕ ಉತ್ತಮ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.


ಲಕ್ಷಣ್‌ ನರಸಿಂಹ ಅವರು ಸ್ಟಾರ್‌ ಬಕ್ಸ್‌ ಚುಕ್ಕಾಣಿ ಹಿಡಿದಿದ್ದು ಆಯಿತು, ಹಾಗಿದ್ರೆ ಸ್ಟಾರ್‌ ಬಕ್ಸ್‌ನ ಮುಂದಿನ ನಡೆಯೇನು?
ಲಕ್ಷಣ್‌ ನರಸಿಂಹನ್ ಅವರು ಅಕ್ಟೋಬರ್‌ನಲ್ಲಿ ಸ್ಟಾರ್‌ಬಕ್ಸ್‌ ನೂತನ ಸಿಇಒ ಆದರೂ ಸಹ ಅವರು ಈ ಕಂಪನಿಯ ಅಧಿಕಾರದ ಸಂಪೂರ್ಣ ಚುಕ್ಕಾಣಿ ಹಿಡಿಯುವುದು ಏಪ್ರಿಲ್‌ 2023 ರಲ್ಲಿ ಆಗಿದೆ. ಅಲ್ಲಿಯವರೆಗೂ ಹೊಸ ಕಂಪನಿಯ ಅನೇಕ ವಿಷಯಗಳಾದ ಉದ್ಯೋಗಿಗಳಿಗೆ ಉತ್ತಮ ವೇತನ ಪಾವತಿಸುವುದು, ಉದ್ಯೋಗಿಗಳ ಕಲ್ಯಾಣ ಮತ್ತು ಗ್ರಾಹಕರ ಅನುಭವವನ್ನು ಸುಧಾರಿಸುವುದು ಮತ್ತು ಮಳಿಗೆಗಳನ್ನು ಮರು-ಕಲ್ಪನೆ ಮಾಡುವುದು ಸೇರಿದಂತೆ ಅದರ "ಪುನರ್‌ಶೋಧನೆ" ಯೋಜನೆಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲಿದ್ದಾರೆ.


ಇದೆಲ್ಲ ಕೆಲಸ ಮುಗಿದ ನಂತರ ಮುಂದಿನ ವರ್ಷ ಏಪ್ರಿಲ್ 2023 ರಲ್ಲಿ ತಮ್ಮ ಅಧಿಕಾರವನ್ನು ವಹಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಮಾಧ್ಯಮ ರಾಯಿಟರ್ಸ್‌ ವರದಿ ಮಾಡಿದೆ. ಕೆಲವು ಸ್ಟಾರ್‌ಬಕ್ಸ್ ಮಳಿಗೆಗಳಲ್ಲಿ ಒಕ್ಕೂಟೀಕರಣದ ಬೆಳವಣಿಗೆ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಸವಾಲುಗಳು ಲಕ್ಷಣ್‌ ಅವರ ಮುಂದಿವೆ. ಅದರ ಜೊತೆಗೆ ಕಂಪನಿಯು ನೀಡುತ್ತಿರುವ ಆನ್‌ಲೈನ್‌ ಆರ್ಡ್‌ರ್‌ಗಳ ವಿತರಣೆ , ಟೇಕ್‌-ಇನ್‌ ಮತ್ತು ಟೇಕ್-ಔಟ್‌ಗಳ ಬಗ್ಗೆ ನಿಗಾ ವಹಿಸುವುದಕ್ಕೆ ಸ್ಟಾರ್‌ ಕಂಪನಿ ಬಹಳಷ್ಟು ಪ್ರಯತ್ನಿಸುತ್ತಿದೆ.


ಇದನ್ನೂ ಓದಿ: Education: ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ! ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದೇ ಉದ್ಯಮಿಯ ಉದ್ದೇಶ


ಆಗಾಗ ಈ ಕೋವಿಡ್‌ - 19 ನಿಂದ ಉಂಟಾಗುವ ಲಾಕ್‌ಡೌನ್‌ಗಳ ನಿರ್ಬಂಧಗಳು ಚೀನಾದಲ್ಲಿ ಮಾರಾಟದ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡುತ್ತಿವೆ. ಏಕೆಂದರೆ ಚೀನಾ ದೇಶದಲ್ಲಿಯೇ 5,400 ಕ್ಕೂ ಹೆಚ್ಚು ಮಳಿಗೆಗಳಿವೆ. ಆದ್ದರಿಂದ ಅಲ್ಲಿನ ವ್ಯಾಪಾರ ವಹಿವಾಟು ಸ್ಟಾರ್‌ಬಕ್ಸ್‌ಗೆ ಪ್ರಮುಖವಾಗಿರುತ್ತದೆ.


ಪ್ರಸ್ತುತ ಸ್ಟಾರ್‌ಬಕ್ಸ್‌ ಸಿಇಒ ಹೊವಾರ್ಡ್ ಷುಲ್ಟ್ಜ್ ಅವರು ಲಕ್ಷಣ್‌ ಕುರಿತು ಆಡಿದ ಮಾತುಗಳಿವು :
ಪ್ರಸ್ತುತ ಸ್ಟಾರ್‌ಬಕ್ ಸಿಇಒ ಹೊವಾರ್ಡ್ ಷುಲ್ಟ್ಜ್ ಅವರು "ನಾವು ಒಬ್ಬ ನಿಜವಾದ ಸೇವಾ ನಾಯಕನನ್ನು ಹುಡುಕುತ್ತಿದ್ದೇವು. ಅದಕ್ಕೆ ತಕ್ಕಂತೆ ಲಕ್ಷಣ್‌ ಅವರು ನಮಗೆ ಸಿಕ್ಕಿದ್ದಾರೆ. ಅವರು ನಿಜಕ್ಕೂ ನಮ್ರತೆಯ ವ್ಯಕ್ತಿತ್ವವನ್ನು ಹೋಂದಿರುವ ವಿಶೇಷ ವ್ಯಕ್ತಿ ಆಗಿದ್ದಾರೆ.


ವಿನಯತೆಯ ವ್ಯಕ್ತಿತ್ವ ಹೊಂದಿರುವ ಲಕ್ಷ್ಮಣ್ ಅವರು ಕೆಲಸದಲ್ಲಿ ಮೊದಲು ನಿಲ್ಲುವ ಅಗ್ರಗಣ್ಯ ಸೇವಾ ನಾಯಕ ಆಗಿದ್ದಾರೆ. ಸೇವಾ ನಾಯಕ ಎಂದರೆ ಕೇವಲ ಕಂಪನಿಯ ಬೆಳವಣಿಗೆಗೆ ಮಾತ್ರ ದುಡಿಯುವ ವ್ಯಕ್ತಿಯಲ್ಲ. ಅವರು ಮಾಡುವ ಕೆಲಸದಿಂದ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಅಭಿವೃದ್ಧಿಗೆ ಆದ್ಯತೆ ನೀಡುವ ವ್ಯಕ್ತಿ ಎಂಬ ಅರ್ಥ ಬರುತ್ತದೆ” ಎಂದು ಹೇಳಿದ್ದಾರೆ.


ಲಕ್ಷಣ್‌ ಅವರ ಬಗ್ಗೆ ಸ್ಟಾರ್‌ ಬಕ್ಸ್‌ ಕಂಪನಿಯ ಅಭಿಪ್ರಾಯ ಏನಿದೆ?
ಸ್ಟಾರ್‌ಬಕ್ಸ್‌ ಕಂಪನಿಯು "ಅವರು ವಿಶೇಷ ಕಾರ್ಯಾನುಭವದ ಪರಿಣಿತಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸುವ ಕಲೆಯನ್ನು ಹೊಂದಿದ್ದಾರೆ. ಅವರು ಗ್ರಾಹಕ ಕೇಂದ್ರಿತ ಮತ್ತು ಡಿಜಿಟಲ್ ಆವಿಷ್ಕಾರಗಳನ್ನು ಚಾಲನೆ ಮಾಡುವ ಮೂಲಕ ಭವಿಷ್ಯದ ಮಹತ್ವಾಕಾಂಕ್ಷೆಗಳನ್ನು ಮುಟ್ಟಲು ಅನುವಾಗುವಂತೆ ತಮ್ಮ ಕಾರ್ಯಚರಣೆಯನ್ನು ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಹೇಳಿದೆ.


ಇದನ್ನೂ ಓದಿ: Industrialist: ಅಂಬಾನಿ ಹಾಗೂ ಟಾಟಾ ಇಬ್ಬರೊಂದಿಗೆ ಪೈಪೋಟಿ ನಡೆಸಿದ ಆ ಕೈಗಾರಿಕೋದ್ಯಮಿ!


ಸ್ಟಾರ್‌ಬಕ್ಸ್‌ ಕಂಪನಿ ಬಗ್ಗೆ ಲಕ್ಷಣ್‌ ನರಸಿಂಹನ್‌ ಅವರು ಏನ್‌ ಹೇಳಿದ್ದಾರೆ?
ಸ್ಟಾರ್‌ಬಕ್ಸ್‌ ಕಂಪನಿ ಕುರಿತು "ಸಂಪರ್ಕ ಮತ್ತು ಸಹಾನುಭೂತಿಯ ಮೂಲಕ ಮಾನವೀಯತೆಯನ್ನು ಮೇಲಕ್ಕೆತ್ತಲು ಸ್ಟಾರ್‌ಬಕ್ಸ್‌ನ ಪ್ರಯತ್ನಗಳೇ ಕಂಪನಿಯನ್ನು ದೀರ್ಘಕಾಲದಿಂದ ಬೆಳೆಸಲು ಪ್ರಮುಖವಾಗಿವೆ. ಇದು ಅಪ್ರತಿಮ ಮತ್ತು ಜಾಗತಿಕವಾಗಿ ಮೆಚ್ಚುಗೆ ಪಡೆದ ಬ್ರ್ಯಾಂಡ್ ಅನ್ನು ನಿರ್ಮಿಸಿದೆ. ಕಾಫಿಯ ಘಮ ಜಗತ್ತಿನೆಲ್ಲೆಡೆ ಹಬ್ಬಿಸುವ ಕಾರ್ಯವನ್ನು ಬಹಳ ವರ್ಷಗಳಿಂದ ಮಾಡುತ್ತಿರುವುದು ಈ ಕಂಪನಿಯ ಹೆಗ್ಗಳಿಕೆ ಆಗಿದೆ” ಎಂದು ನರಸಿಂಹನ್ ಹೇಳಿದರು.

top videos
    First published: