Explained: ಕರ್ಫ್ಯೂ ಹಾಗೂ ಸೆಕ್ಷನ್ 144 ಈ ಎರಡರ ನಡುವೆ ವ್ಯತ್ಯಾಸವೇನು?

Explained: ಸೆಕ್ಷನ್ 144 ಕಾಯ್ದೆಯು ಮೂಲತಃ, ಅದು ವಿಧಿಸಲ್ಪಟ್ಟಿರುವ ಪ್ರದೇಶದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೇ ಕಡೆ ಗುಂಪುಗೂಡುವುದನ್ನು ನಿಷೇಧಿಸುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ವಾತಂತ್ರ್ಯಪೂರ್ವ (Pre-independence India) ಭಾರತದಲ್ಲಿ ಅಂದರೆ ಬ್ರಿಟಿಷ್ ( British) ರಾಜ್ಯವಿದ್ದಾಗ ನಮ್ಮ ದೇಶದಲ್ಲಿ ಅದೆಷ್ಟೋ ಕಾನೂನುಗಳು(Many laws) ಹಾಗೂ ನಿಯಮಗಳು(Regulations) ಚಾಲ್ತಿಯಲ್ಲಿದ್ದವು. ತದನಂತರ, ಅನೇಕ ಮಾರ್ಪಾಡುಗಳನ್ನು ಸ್ವತಂತ್ರ ಭಾರತ ತಂದಿದೆಯಾದರೂ ಕೆಲವು ನಿರ್ದಿಷ್ಟ ನಿಯಮಗಳು ಚಾಲ್ತಿಯಲ್ಲಿವೆ. ಈ ಸೆಕ್ಷನ್‌ಗಳನ್ನು ಹಾಕುವುದು ಬ್ರಿಟಿಷರಿದ್ದಾಗಿನಿಂದಲೂ ಚಾಲ್ತಿಯಲ್ಲಿವೆ. ಆದರೆ ಇಂದು ನಾವು ನಿಮಗೆ ಈ ಸೆಕ್ಷನ್(Section) ಹಾಗೂ ಕರ್ಫ್ಯೂಗಳ (Curfew) ನಡುವಿನ ಅಂತರದ ಕುರಿತು ತಿಳಿಸುತ್ತಿದ್ದೇವೆ.

ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್‌ ಅಡಿ
ಪ್ರಸ್ತುತ, ಕೊರೋನಾ ವೈರಸ್ ತನ್ನ ರೂಪಾಂತರಗಳಿಂದಾಗಿ ಮತ್ತೊಮ್ಮೆ ಜಗತ್ತಿನಲ್ಲಿ ತಲ್ಲಣ ಮೂಡಿಸಿದೆ. ಕಾರಣ, ಈ ವೈರಾಣುವಿನಿಂದಾಗಿ ಮತ್ತೆ ಉಲ್ಬಣಗೊಳ್ಳುತ್ತಿರುವ ಸೋಂಕಿತರ ಸಂಖ್ಯೆ. ನಮ್ಮ ದೇಶದಲ್ಲೂ ಕೊರೋನಾ ಪ್ರಕರಣಗಳು ನಿಧಾನಗತಿಯಲ್ಲಿ ಏರುತ್ತಿರುವುದು ಕಂಡುಬರುತ್ತಿದೆ.

ಇದನ್ನೂ ಓದಿ: Explained: ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ಮಹತ್ವವೇನು? ಸಿಎಂ ಬೊಮ್ಮಾಯಿಯವರಿಗೆ ಏಕೆ ನಿರ್ಣಾಯಕ?

ಈ ಕಾರಣದಿಂದಾಗಿ, ಈ ವೈರಾಣು ಸೋಂಕು ತಹಬದಿಗೆ ತರಲು ರಾಜಸ್ಥಾನ ಸರ್ಕಾರವು ಇದೇ ಡಿಸೆಂಬರ್ 20ರವರೆಗೆ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್‌ ಅಡಿಯಲ್ಲಿ ಸೆಕ್ಷನ್ 144 ಅನ್ನು ಜೈಪುರದಲ್ಲಿ ಹಾಕಿರುವ ವರದಿಯಾಗಿದೆ. ದೆಹಲಿಯೂ ಸಹ ಇಂಡಿಯಾ ಗೇಟ್ ಬಳಿ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್‌ ಅಡಿಯಲ್ಲಿ ಸೆಕ್ಷನ್ 144 ಹಾಕಿದೆ. ಇದೇ ರೀತಿ ಗ್ರೇಟರ್ ಮುಂಬೈ ಸರಹದ್ದಿನಲ್ಲಿ ಸೆಪ್ಟೆಂಬರ್ ಸಮಯದಲ್ಲಿ ಮುಂಬೈ ಪೊಲೀಸ್ ಕಮಿಷನರ್ ಹಲವಾರು ಪ್ರತಿಬಂಧಗಳನ್ನು ವಿಧಿಸಿದ್ದರು.

ಸೆಕ್ಷನ್ 144 ಎಂದರೇನು..?
ಸಿಆರ್‌‌‌‌‍ಪಿಸಿ ಆ್ಯಕ್ಟ್ ಅಂದರೆ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್‌ ಅಡಿಯಲ್ಲಿ ವಿಧಿಸಲಾಗುವ ಸೆಕ್ಷನ್ 144 ಕಾಯ್ದೆಯು ಮೂಲತಃ, ಅದು ವಿಧಿಸಲ್ಪಟ್ಟಿರುವ ಪ್ರದೇಶದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೇ ಕಡೆ ಗುಂಪುಗೂಡುವುದನ್ನು ನಿಷೇಧಿಸುತ್ತದೆ. ಒಂದು ವೇಳೆ ಅಂತಹ ಪ್ರದೇಶದಲ್ಲಿ ಐದಕ್ಕಿಂತ ಹೆಚ್ಚು ಜನರು ಪ್ರದೇಶದ ಯಾವುದಾದರೂ ಒಂದೇ ಸ್ಥಳದಲ್ಲಿ ಜಮಾಯಿಸಿದರೆ ಅವರನ್ನು "ಕಾನೂನುಬಾಹಿರವಾದ ಗುಂಪು" ಎಂದು ಪರಿಗಣಿಸಿ ವಶಕ್ಕೆ ಪಡೆದು "ಗಲಭೆಯಲ್ಲಿ ತೊಡಗಿದ್ದಾರೆ" ಎಂದು ಅವರ ಮೇಲೆ ಪ್ರಕರಣ ದಾಖಲಿಸುವ ಅಧಿಕಾರವಿರುತ್ತದೆ.

ಕಾರಾಗೃಹದ ಶಿಕ್ಷೆ
ಇಂತಹ ಅಪರಾಧಗಳಿಗೆ ಗರಿಷ್ಠ 3 ವರ್ಷಗಳಷ್ಟು ಕಾರಾಗೃಹದ ಶಿಕ್ಷೆಯಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಇಂತಹ ಗುಂಪನ್ನು ಚದುರಿಸುವ ಪ್ರಯತ್ನದಲ್ಲಿ ಪೊಲೀಸರನ್ನು ತಡೆದರೆ ಅವರ ಮೇಲೂ ಶಿಕ್ಷಾರ್ಹ ಅಪರಾಧದ ಪ್ರಕರಣ ದಾಖಲಿಸಬಹುದು. ಬ್ರಿಟಿಷರ ಸಮಯದಲ್ಲಿ ಅಂದರೆ 1861ರಲ್ಲಿ ಪ್ರಥಮ ಬಾರಿಗೆ ಈ ಸೆಕ್ಷನ್ ಬಳಸಲಾಗಿತ್ತು. ತದನಂತರ ಅತಿ ಶೀಘ್ರದಲ್ಲೇ ಇದನ್ನು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಷ್ಟ್ರೀಯ ಚಳುವಳಿಗಳನ್ನು ಬದಿಗಿಕ್ಕಲೆಂದು ಬಳಸಲು ಪ್ರಾರಂಭವಾಯಿತು. ಸ್ವಾತಂತ್ರ್ಯ ಸಿಕ್ಕ ನಂತರವೂ ಹಲವು ಸಂದರ್ಭಳಲ್ಲಿ ಈ ಸೆಕ್ಷನ್ ಅನ್ನು ಇಂದಿಗೂ ಬಳಸುತ್ತಿರುವುದು ವಿವಾದದ ವಿಷಯವಾಗಿದೆ.

ಸೆಕ್ಷನ್ 144 ಎಂಬುದು ಕರ್ಫ್ಯೂಗೆ ಸಮಾನಾಂತರವೇ..?
ಇಲ್ಲ.ಈ ಸೆಕ್ಷನ್, ಜನರು 'ಸಾರ್ವಜನಿಕವಾಗಿ' ಒಂದೆಡೆ ಕೂಡುವ ಕುರಿತಂತೆ ನಿಷೇಧಾತ್ಮಕತೆ ಹೊಂದಿದೆ. ಆದರೂ ಎಲ್ಲರೂ ಸಾರ್ವಜನಿಕವಲ್ಲದ ಸ್ಥಳದಲ್ಲಿ ಒಟ್ಟಾಗಿ ಇರುವುದರ ಬಗ್ಗೆ ಇದರಲ್ಲಿ ಯಾವುದೇ ತಡೆಯಿಲ್ಲ. ಆದರೆ, ಕರ್ಫ್ಯೂ ಹಾಗಲ್ಲ. ಇದು ಪ್ರತಿಯೊಬ್ಬರೂ ನಿರ್ದಿಷ್ಟ ಅವಧಿಯವರೆಗೆ ಮನೆಯಿಂದ ಹೊರ ಬರದಂತೆಯೇ ತಡೆಯುತ್ತದೆ.

ಇಲ್ಲಿ ಅವಧಿ ಎಂಬುದು ಮಹತ್ವವಾಗಿದೆ ಹಾಗೂ ಈ ಅವಧಿಯನ್ನು ಮುಂದೂಡಲೂ ಸಹ ಅವಕಾಶವಿರುತ್ತದೆ. ಮದ್ರಾಸ್ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಕೆ. ಚಂದ್ರು ಪ್ರಕಾರ, ರಾಜ್ಯ ಸರ್ಕಾರಕ್ಕಿರುವ ಅಧಿಕಾರ ಬಳಸಿಕೊಂಡು ಆಡಳಿತವು ಕರ್ಫ್ಯೂ ಜಾರಿಗೊಳಿಸಬಹುದು. ನೆನಪಿಡಿ, ಕರ್ಫ್ಯೂ ಸಂದರ್ಭದಲ್ಲಿ ನಿಮಗೆ ತುರ್ತು ಭೇಟಿಗಾಗಿ ಹೊರ ಬೇಕಿದ್ದಲ್ಲಿ ಮುಂಚಿತವಾಗಿಯೇ ಸ್ಥಳೀಯ ಪೊಲೀಸರಿಂದ ಅನುಮತಿ ಪಡೆಯಬೇಕಾಗಿರುವುದು ಅವಶ್ಯಕ.

ಸೆಕ್ಷನ್ 144 ಅಡಿಯಲ್ಲಿ ಯಾವುದಕ್ಕೆಲ್ಲ ಅವಕಾಶಗಳಿವೆ..?
ಐದು ಜನಕ್ಕಿಂತ ಹೆಚ್ಚು ಜನರು ಗುಂಪುಗೂಡುವ ಆಗಿಲ್ಲವಾದುದರಿಂದ ಗುಂಪಾಗಿ ಸೇರಬೇಡಿ. ಸಂಕ್ರಮಣದ ಸಮಯದಲ್ಲಿ ಸರ್ಕಾರಿ ಕಚೇರಿಗಳು, ಕೈಗಾರಿಕೆಗಳು, ಗೋದಾಮುಗಳು ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳು ಮುಚ್ಚಿದ್ದವು. ಅಲ್ಲದೆ, ರಾಜ್ಯದ ಗಡಿಗಳನ್ನು ಸೀಲ್ ಮಾಡಿದ್ದರಿಂದ ಖಾಸಗಿ ವಾಹನಗಳು, ಸಾರ್ವಜನಿಕ ಸಾರಿಗೆ ಸಂಚಾರ ಹಾಗೂ ಮೆಟ್ರೋಗಳು ಸಹ ಮುಚ್ಚಲ್ಪಟ್ಟಿದ್ದವು.

ಇದನ್ನೂ ಓದಿ: Explained: ಕ್ರಿಪ್ಟೋಕರೆನ್ಸಿಗಳನ್ನು ಜಗತ್ತಿನ ಇತರೆ ದೇಶಗಳಲ್ಲಿ ಹೇಗೆ ನಿಯಂತ್ರಿಸಲಾಗುತ್ತದೆ?

ಆದರೆ, ಜನರಿಗೆ ನಿತ್ಯ ಅವಶ್ಯಕತೆಗಳಿಗೆ ಕೊರತೆಯಾಗದಂತೆ ಎಟಿಎಂ, ಟೆಲಿಕಾಂ ಸೇವೆ, ಇಂಟರ್ನೆಟ್ ಸೇವೆ, ವಿದ್ಯುತ್, ನೀರು ಸರಬರಾಜು ಮುಂತಾದವುಗಳು ತೆರೆದಿದ್ದವು. ಕರ್ಫ್ಯೂ ಸಂದರ್ಭದಲ್ಲಿ ಮಾರುಕಟ್ಟೆಗಳು, ಶಾಲಾ-ಕಾಲೇಜುಗಳು, ಕಚೇರಿಗಳು ಮುಚ್ಚಿದ್ದರೆ ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿತ್ತು.
Published by:vanithasanjevani vanithasanjevani
First published: