ಪಾನ್ (PAN – Permanent Account Number) ಕಾರ್ಡ್ ಇವತ್ತಿನ ಅತಿ ಅಗತ್ಯಗಳಲ್ಲಿ ಒಂದಾಗಿದೆ. ಹಣಕಾಸು ಸಂಬಂಧಿತ ಕೆಲಸ ಕಾರ್ಯಗಳಲ್ಲಿ ಸಲ್ಲಿಸಬೇಕಾದ ದಾಖಲೆಗಳಲ್ಲಿ ಪಾನ್ ಕೂಡ ಇರುತ್ತದೆ. ಪ್ಯಾನ್ ಕಾರ್ಡ್ ಇಲ್ಲದೇ ಬ್ಯಾಂಕ್ ಖಾತೆ ತೆರೆಯಲು ಸಾಧ್ಯವಿಲ್ಲ; ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣದ ವಹಿವಾಟು ಮಾಡಬೇಕಾದರೆ ಪ್ಯಾನ್ ನಂಬರ್ ಅಗತ್ಯ; ಎಟಿಎಂ ಕಾರ್ಡ್ ಪಡೆಯಲೂ ಪರ್ಮನೆಂಟ್ ಅಕೌಂಟ್ ನಂಬರ್ ಬೇಕು. ಇನ್ನೂ ಅನೇಕ ಕೆಲಸ ಕಾರ್ಯಗಳಿಗೆ ಬೇಕಾದ ಅಗತ್ಯ ದಾಖಲೆ ಪಾನ್ ಆಗಿದೆ. ಈ ಹಿಂದೆ ಪ್ಯಾನ್ ಕಾರ್ಡ್ ಕಳೆದುಹೋದಲ್ಲಿ ಅದನ್ನ ಮರಳಿ ಪಡೆಯಲು ಬಹಳ ಕಷ್ಟಬೇಕಾಗುತ್ತಿತ್ತು. ಪೊಲೀಸ್ ಠಾಣೆಯಲ್ಲಿ ಪ್ಯಾನ್ ಕಾರ್ಡ್ ಕಳೆದುಹೋಗಿದೆ ಎಂದು ಕಂಪ್ಲೇಂಟ್ ಕೊಟ್ಟು ನಂತರ ಅದರ ರೀಪ್ರಿಂಟ್ಗೆ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಇದೀಗ ಕಳೆದುಹೋದ ಪ್ಯಾನ್ ಅನ್ನು ಆನ್ಲೈನ್ನಲ್ಲಿ ಸುಲಭವಾಗಿ ಪಡೆಯುವ ವಿಧಾನ ಇದೆ.
ಆದಾಯ ತೆರಿಗೆ ಇಲಾಖೆ ನೀಡಿರುವ ಇ-ತಾಣದಲ್ಲಿ ನಿಮ್ಮ ಪ್ಯಾನ್ ಕಾರ್ಡ್ನ ಡಿಜಿಟಲ್ ರೂಪವನ್ನು ಕೂಡಲೇ ಡೌನ್ ಲೋಡ್ ಮಾಡಿಕೊಳ್ಳಬಹುದು. ಇದು ನಿಜರೂಪದ ಪಾನ್ ಕಾರ್ಡ್ನಂತೆಯೇ ಎಲ್ಲಾ ವ್ಯವಹಾರಗಳಲ್ಲಿ ಉಪಯೋಗಿಸಬಹುದು. ಪ್ಯಾನ್ ಕಾರ್ಡ್ನ ಇ-ಪ್ರಿಂಟ್ ಪಡೆಬೇಕೆಂದರೆ ನಿಮ್ಮ ಪ್ಯಾನ್ ನಂಬರ್ ನೆನಪಿಲ್ಲದಿದ್ದರೂ ನಡೆಯುತ್ತದೆ. ನೀವು ನಿಮ್ಮ ಪ್ಯಾನ್ ನಂಬರ್ಗೆ ಆಧಾರ್ ನಂಬರ್ ಜೋಡಿಸಿದ್ದರೆ ಆಧಾರ್ ನಂಬರ್ ಮೂಲಕವೇ ಪ್ಯಾನ್ ಕಾರ್ಡ್ನ ಇ-ಪ್ರಿಂಟ್ ಪಡೆಯಲು ಸಾಧ್ಯ.
ಇದನ್ನೂ ಓದಿ: Explained| ಮುಂದಿನ ಸಾಂಕ್ರಾಮಿಕ; ಆ ಒಂದು ಡ್ರಗ್ ರೆಸಿಸ್ಟಂಟ್ ಫಂಗಸ್ ಬಗ್ಗೆ ವೈದ್ಯರ ಎಚ್ಚರಿಕೆ ಏನು?
ಇನ್ಕಮ್ ಟ್ಯಾಕ್ಸ್ (Income Tax) ಡಿಪಾರ್ಟ್ಮೆಂಟ್ನ ಅಧಿಕೃತ ವೆಬ್ಸೈಟ್ನಿಂದ ಇ-ಪಾನ್ ಅನ್ನು ಡೌನ್ಲೋಡ್ ಮಾಡುವ ಕೆಲ ಸರಳ ಕ್ರಮಗಳು ಇಲ್ಲಿವೆ:
1) ಇನ್ಕಮ್ ಟ್ಯಾಕ್ಸ್ ಇ-ಫೈಲಿಂಗ್ನ ವೆಬ್ಸೈಟ್
https://www.incometax.gov.in/ ಗೆ ಭೇಟಿ ನೀಡಿ.
2) ಎಡಗಡೆಯ ಕೆಳ ಭಾಗದಲ್ಲಿ “Our Services” ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಅದರ ಕೆಳಗೆ Instant E-PAN ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ.
ಅಥವಾ ಡೈರೆಕ್ಟ್ ಲಿಂಕ್ಗೆ ಇಲ್ಲಿ ಕ್ಲಿಕ್ ಮಾಡಿ:
https://eportal.incometax.gov.in/iec/foservices/#/pre-login/instant-e-pan
3) ನೀವು ಈ ಮುಂಚೆ ಎಂದೂ ಇ-ಪಾನ್ ಡೌನ್ಲೋಡ್ ಮಾಡಿಲ್ಲದೆ ಇದ್ದರೆ “Get New e-PAN” ಸೆಕ್ಷನ್ ಅಡಿಯಲ್ಲಿ Continue ಕ್ಲಿಕ್ ಮಾಡಿ.
4) ನೀವು ಈ ಮುಂದೆ ಇ-ಪಾನ್ ಡೌನ್ ಮಾಡಿದ್ದರೆ, “Check Status/Download PAN” ಸೆಕ್ಸನ್ ಅಡಿಯಲ್ಲಿ Continue ಕ್ಲಿಕ್ ಮಾಡಿ.
5) ಈಗ ನಿಮ್ಮ ಆಧಾರ್ ನಂಬರ್ ಅನ್ನು ಕೆಳಲಾಗುತ್ತದೆ. ಅಲ್ಲಿ ನಿಗದಿಯಾದ ಜಾಗದಲ್ಲಿ ನಿಮ್ಮ ಆಧಾರ್ ಕಾರ್ಡ್ನ 12 ಅಂಕಿ ನಂಬರ್ ಅನ್ನು ನಮೂದಿಸಿ.
ನಂತರ ಕಾಣಿಸುವ ಪ್ರಕಟಣೆಯನ್ನ ಓದಿ ನಿಮಗೆ ಒಪ್ಪಿಗೆ ಎನಿಸಿದರೆ ಚೆಕ್ ಮಾಡಿ ಕಂಟಿನ್ಯೂ ಕ್ಲಿಕ್ ಮಾಡಿ.
6) ಆಗ ನಿಮ್ಮ ಆಧಾರ್ ಕಾರ್ಡ್ ಜೊತೆ ಜೋಡಿತವಾಗಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ. ನಿಗದಿತ ಜಾಗದಲ್ಲಿ ಆ ನಂಬರ್ ಎಂಟ್ರಿ ಮಾಡಿ.
7) ಅಲ್ಲಿ ಕಾಣಿಸುವ ಮಾಹಿತಿ ಸರಿಯಾಗಿದೆ ಎಂಬುದನ್ನು ಎಚ್ಚರಿಕೆಯಿಂದ ಗಮನಿಸಿ. ನಂತರ ನಿಮ್ಮ ಇ ಮೇಲ್ ವಿಳಾಸ ನಮೂದಿಸಿ ಆ ಬಳಿಕ Confirm ಬಟನ್ ಕ್ಲಿಕ್ ಮಾಡಿ.
8) ಶೀಘ್ರದಲ್ಲೇ ನೀವು ನೀಡಿದ ಇ ಮೇಲ್ ವಿಳಾಸಕ್ಕೆ ಇ-ಪಾನ್ ಬರುತ್ತದೆ. ಅದನ್ನ ಡೌನ್ ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡಿಟ್ಟುಕೊಳ್ಳಿ. ಅದನ್ನ ಲ್ಯಾಮಿನೇಟ್ ಮಾಡಿ ಜೋಪಾನವಾಗಿಟ್ಟುಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ