• ಹೋಂ
  • »
  • ನ್ಯೂಸ್
  • »
  • Explained
  • »
  • Explained: ರಾಷ್ಟ್ರಪತಿಗಳ ಅಂಗರಕ್ಷಕ ಪಡೆ ಹೇಗಿರುತ್ತೆ? ಎಷ್ಟು ಬಲಿಷ್ಠವಾಗಿರುತ್ತೆ?

Explained: ರಾಷ್ಟ್ರಪತಿಗಳ ಅಂಗರಕ್ಷಕ ಪಡೆ ಹೇಗಿರುತ್ತೆ? ಎಷ್ಟು ಬಲಿಷ್ಠವಾಗಿರುತ್ತೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತದ ಸಂವಿಧಾನದ ಸರ್ವೋಚ್ಛ ನಾಯಕನಾಗಿರುವ ರಾಷ್ಟ್ರಪತಿ ಎಂದರೆ ಕೇಳಬೇಕೆ? ಅವರಿಗೆ ಅವರದ್ದೆ ಆದ ಹುದ್ದೆಯ ಪ್ರತಿಷ್ಠೆಯಿದೆ. ಅವರ ರಕ್ಷಣೆಗೆ ಮೀಸಲಾದ ಪ್ರತಿಷ್ಠಿತ ಆ ಅಂಗರಕ್ಷಕ ಪಡೆ ಅಸಾಮಾನ್ಯವಾದ ಸೈನ್ಯ ಘಟಕವೂ ಸೈನ್ಯ ಘಟಕ ಆಗಿದೆ

  • Share this:

ಭಾರತದ ರಾಷ್ಟ್ರಪತಿ ಭವನವು  ಹೊಸ ಅತಿಥಿಯನ್ನು ಸ್ವಾಗತಿಸಿದೆ.   ಹೌದು, ಭಾರತದ ಹದಿನೈದನೇ ಹಾಗೂ ಮೊದಲ ಬುಡಕಟ್ಟು ಜನಾಂಗದ ಮತ್ತು ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು (Draupadi Murmu) ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ. ಈಗ ಅವರ ಹೊಸ ವಿಳಾಸವು ದೆಹಲಿಯಲ್ಲಿರುವ (Delhi) ಪ್ರತಿಷ್ಠಿತ ರಾಷ್ಟ್ರಪತಿ ಭವನವಾಗಿದೆ. ಭಾರತದ ಸಂವಿಧಾನದ ಸರ್ವೋಚ್ಛ ನಾಯಕನಾಗಿರುವ ರಾಷ್ಟ್ರಪತಿ ಎಂದರೆ ಕೇಳಬೇಕೆ..? ಅವರಿಗೆ ಅವರದ್ದೆ ಆದ ಹುದ್ದೆಯ ಪ್ರತಿಷ್ಠೆಯಿದೆ ಹಾಗೂ ಅವರ ರಕ್ಷಣೆಗೆ ಮೀಸಲಾದ ಪ್ರತಿಷ್ಠಿತ ಆ ಅಂಗರಕ್ಷಕ ಪಡೆ (Bodyguard) ಅಸಾಮಾನ್ಯವಾದ ಸೈನ್ಯ ಘಟಕವೂ ಆಗಿದೆ ಎಂದರೆ ತಪ್ಪಾಗಲಾರದು.


200 ಬಲಶಾಲಿ ಸೈನಿಕರುಳ್ಳ ಪರಂಪರಾಗತದಿಂದ ಬಂದಿರುವ ಅಶ್ವ ಪಡೆಯು ತನ್ನದೆ ಆದ ಪ್ರತಿಷ್ಠೆ ಹಾಗೂ ಭವ್ಯ ಪರಂಪರೆಯನ್ನು ಹೊಂದಿದೆ. ಈ ಗಣ್ಯ ಅಂಗರಕ್ಷಕ ಪಡೆಯಲ್ಲಿ ಭಾರತೀಯ ಸೈನ್ಯದಿಂದ ಸಾವಿರಾರು ಶೂರ ಸೈನಿಕರಲ್ಲಿ ಅತ್ಯುತ್ತಮ ಎನ್ನಬಹುದಾದ ಸೈನಿಕರನ್ನು ಆಯ್ಕೆ ಮಾಡಲಾಗಿರುತ್ತದೆ.


ಸೈನಿಕರ ಆಯ್ಕೆ ಹೇಗೆ?
ಬ್ರಿಟೀಷ್ ಆಡಳಿತವಿದ್ದ ಸಂದರ್ಭದಲ್ಲಿ ಅಂದಿನ ವೈಸ್ ರಾಯ್ ಗಳಿಂದ ಹಿಡಿದು ಇಂದಿನ ಆಡಳಿತದ ಮುಖ್ಯಸ್ಥರವರೆಗೆ ಅವರ ರಕ್ಷಣೆಗೋಸ್ಕರ ಆಯ್ದ ಸೈನಿಕರನ್ನು ಆಯ್ಕೆ ಮಾಡಲಾಗುತ್ತ ಬರಲಾಗಿದ್ದು ಇದೊಂದು ಭವ್ಯ ಪರಂಪರೆಯ ಭಾಗವೆಂದೇ ಹೇಳಬಹುದು. ಪ್ರಸ್ತುತ ರಾಷ್ಟ್ರಪತಿಯವರ ಸೇವೆಗೆಂದು ಹಾಗೂ ಅವರ ರಕ್ಷಣೆಗೆಂದು ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಈ ಪರಂಪರಾಗತ ಅಶ್ವಶಕ್ತಿಯ ಪಡೆಯು ಗಣರಾಜ್ಯೋತ್ಸವದಂತಹ ಹಲವು ಸಂದರ್ಭಗಳಲ್ಲಿ ರಾಷ್ಟ್ರಪತಿಯವರ ರಕ್ಷಣೆಯ ಜವಾಬ್ದಾರಿಯನ್ನು ಬಲು ನಿಷ್ಠೆಯಿಂದ ನಿರ್ವಹಿಸಲು ಸಶಕ್ತವಾಗಿರುತ್ತದೆ.


ಕೆಂಪು ಬಣ್ಣದ ಸಮವಸ್ತ್ರ ಹಾಗೂ ತಲೆಗೆ ಟರ್ಬನ್
ಪ್ರತಿ ಬಾರಿಯ ಜನವರಿ 26 ರಂದು ನಡೆಯುವ ದೇಶದ ಗಣರಾಜ್ಯೋತ್ಸವ ಸಂದರ್ಭದಂದು ಈ ಅಶ್ವಪಡೆಯು ರಾಷ್ಟ್ರಪತಿಯವರನ್ನು ವೇದಿಕೆಯವರೆಗೆ ರಕ್ಷಣೆ ನೀಡುತ್ತ ಕರೆದುಕೊಂಡು ಬರುವುದಲ್ಲದೆ ರಾಷ್ಟ್ರಗೀತೆಯನ್ನು ಆರಂಭಿಸಲು ಆದೇಶವನ್ನೂ ಸಹ ನೀಡುತ್ತದೆ. ಈ ಪಡೆಯಲ್ಲಿರುವ ಯೋಧರು ಕೆಂಪು ಬಣ್ಣದ ಸಮವಸ್ತ್ರ ಹಾಗೂ ತಲೆಗೆ ಟರ್ಬನ್ ಹಾಕಿಕೊಂಡು ಕುದುರೆಯ ಮೇಲೆ ಆಸೀನರಾಗಿರುವುದನ್ನು ಗಮನಿಸಬಹುದು.


ವೈಸ್ ರಾಯ್ ಅವರ ಗಾರ್ಡ್
ಈ ಪಡೆಯ ಇತಿಹಾಸವನ್ನು ನೋಡಿದಾಗ ನಮಗೆ ಕೆಲವು ಆಸಕ್ತಿಕರ ವಿಷಯಗಳು ಕಂಡುಬರುತ್ತವೆ. ಅಸಲಿಗೆ 1773 ರಲ್ಲಿ ಅಂದಿನ ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದ ವಾರೆನ್ ಹೆಸ್ಟಿಂಗ್ಸ್ ಅವರು ಸೈನಿಕರ ಒಂದು ಘಟಕವನ್ನು ರೂಪಿಸಿದ್ದರು. ಆ ಘಟಕವೇ ನಂತರ "ವೈಸ್ ರಾಯ್ ಅವರ ಗಾರ್ಡ್" ಎಂದು ಕರೆಯಲ್ಪಟ್ಟಿತು. ಭಾರತಕ್ಕೆ ಸ್ವಾತಂತ್ರ್ಯ ಬಂದನಂತರ ಭಾರತವು, ಭಾರತ ಹಾಗೂ ಪಾಕಿಸ್ತಾನ ಎಂದು ಎರಡು ಹೋಳುಗಳಾದ ಬಳಿಕ ಈ ಘಟಕವು ಬೇರ್ಪಡಿಸಲ್ಪಟ್ಟವು.


ಇದನ್ನೂ ಓದಿ: Kargil Vijay Diwas: ಭಾರತೀಯ ಸೇನೆ ಪಾಕಿಸ್ತಾನದ ಹುಟ್ಟಡಗಿಸಿದ ಕ್ಷಣವದು ಕಾರ್ಗಿಲ್ ವಿಜಯ ದಿವಸ!


ಭಾರತ ಇಬ್ಭಾಗವಾದ ನಂತರ ದೇಶದ ಕೆಲ ಆಸ್ತಿಗಳು ವಿಭಾಗಿಸಲ್ಪಟ್ಟವು. ಈ ಸಂದರ್ಭದಲ್ಲಿ ವೈಸ್ ರಾಯ್ ಬಳಸುತ್ತಿದ್ದ ಕಪ್ಪು ಹಾಗೂ ಬಂಗಾರ ಹಲಗೆಯ ರಥವು ತಮಗೆ ದಕ್ಕಬೇಕೆಂದು ಭಾರತ ಹಾಗೂ ಪಾಕಿಸ್ತಾನದ ಎರಡೂ ಅಧಿಕಾರಿ ವರ್ಗದವರು ಬಯಸಿದ್ದರು. ಇದೊಂದು ಸಮಸ್ಯೆಯಾಗಿ ತಲೆದೋರಿದಾಗ ಇದನ್ನು ಟಾಸ್ ಹಾಕುವ ಮೂಲಕ ಪರಿಹರಿಸಿಕೊಳ್ಳುವ ಮಾರ್ಗವನ್ನು ಅನುಸರಿಸಲು ನಿರ್ಧರಿಸಲಾಯಿತು. ಹಾಗೂ ಆ ಟಾಸ್ ಅನ್ನು ಭಾರತವೇ ಗೆದ್ದಿತು. ಈಗಲೂ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕುದುರೆಗಳಿಂದ ಜಗ್ಗಲ್ಪಡುವ ಆ ರಥದಲ್ಲಿ ಇಂದಿಗೂ ಭಾರತದ ರಾಷ್ಟ್ರಪತಿಯಾದವರು ದೆಹಲಿಯ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗುತ್ತಾರೆ.


ಈ ಪಡೆಗೆ ಸೇರಲು ಯಾರು ಅರ್ಹರು?
ಭಾರತದ ಸಾಂಪ್ರದಾಯಿಕ ಯುದ್ಧಶೈಲಿಯನ್ನು ಪ್ರತಿನಿಧಿಸುವ ಅತ್ಯಂತ ಸಾಮರ್ಥ್ಯವುಳ್ಳ ಅತಿ ಸಮರ್ಥ ಸೈನಿಕರನ್ನು ಈ ಪಡೆಯಲ್ಲಿ ಸೇರಲು ಆರಿಸಲಾಗುತ್ತದೆ. ಡಿಸೆಂಬರ್ 2019 ರಲ್ಲಿ ಈ ಪಡೆಯಲ್ಲಿ ಖಾಲಿಯಿದ್ದ ಕೇವಲ ಒಂಭತ್ತು ಹುದ್ದೆಗಳಿಗಾಗಿ 10,000 ಸೈನಿಕರು ಅರ್ಜಿ ಸಲ್ಲಿಸಿದ್ದರೆಂದರೆ ಇದಕ್ಕಿರುವ ಸ್ಥಾನಮಾನ ಹಾಗೂ ವಿಶೇಷತೆ ಎಷ್ಟಿದೆ ಎಂಬುದನ್ನು ಇಲ್ಲಿ ಊಹಿಸಬಹುದಾಗಿದೆ.


ಈ ಪಡೆಯಲ್ಲಿ ಆಯ್ಕೆಯಾಗುವ ಯೋಧರು ಕನಿಷ್ಠ ಆರು ಅಡಿಗಳಷ್ಟು ಎತ್ತರವಾಗಿರಬೇಕು, ಹಿತಕರವಾದ ಶಾರೀರಿಕ ಸಾಮರ್ಥ್ಯ ಹಾಗೂ ಅತ್ಯದ್ಭುತವಾದ ವೃತ್ತಿ ಸೇವೆಯನ್ನು ಹೊಂದಿರಬೇಕು. ಈ ಸೈನಿಕರನ್ನು ಒಂದೊಮ್ಮೆ "ಸುಂದರ ಕನ್ಯೆಯರಿಗಾಗಿ ದೇವರ ಉಡುಗೊರೆ" ಎಂದು ಸಂಭೋದಿಸಲಾಗುತ್ತಿತ್ತು. ಇದರಿಂದಲೇ ನೀವು ಊಹಿಸಬಹುದು ಈ ಸೈನಿಕರು ಯಾವ ಚಿತ್ರ ನಾಯಕರಿಗಿಂತಲೂ ಕಮ್ಮಿ ಇಲ್ಲದವರು ಎಂಬುದನ್ನು. ಅಷ್ಟೆ ಅಲ್ಲ ಈ ಪಡೆಯಲ್ಲಿ ಸೈನಿಕರ ಆಯ್ಕೆಗಾಗಿ ಅನುಸರಿಸಲಾಗುವ ಈ ರೀತಿಯ ಕಠಿಣ ನಿಯಮಗಳನ್ನು, ಈ ರೀತಿ ದೈಹಿಕ ಅರ್ಹತೆ ಇಲ್ಲದವರು ಆದರೆ ಪಡೆ ಸೇರಬೇಕೆನ್ನುವವರು ಒಂದೊಮ್ಮೆ ಪ್ರಶಿಸಿದ್ದರೂ ಎಂಬುದನ್ನು ಇಲ್ಲಿ ಗಮನಿಸಬೇಕು.


ಇದನ್ನೂ ಓದಿ:  Explained: ನಾನು ಭಾರತದ ರಾಷ್ಟ್ರಪತಿಯಾದರೆ! ಹೇಗಿರುತ್ತೆ ಜೀವನ?


ಜನವರಿ 2018 ರಲ್ಲಿ, ದೇಶದ ಸರ್ವೋಚ್ಛ ನ್ಯಾಯಾಲಯವು, ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯಲ್ಲಿ ಆಯ್ಕೆಯಾಗುವ ಸೈನಿಕರು ಕೇವಲ ಸಿಖ್, ಜಾಟ್ ಹಾಗೂ ರಜಪೂತ್ ಜಾತಿಗಳಿಂದ ಬಂದವರು ಮಾತ್ರ ಇರಬೇಕೆಂಬ ನಿಯಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲಿಲ್ಲ. ಈ ಮುಂಚೆ ದೆಹಲಿಯ ಹೈಕೋರ್ಟ್ ನಲ್ಲಿಯು ಅರ್ಜಿದಾರರ ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು.  ಆ ನಂತರ ಅರ್ಜಿದಾರರು ಅಪೆಕ್ಸ್ ನ್ಯಾಯಾಲಯಕ್ಕೆ ಈ ಅರ್ಜಿಯನ್ನು ಸಲ್ಲಿಸಿದ್ದರು.


ಪರೇಡ್ ಗಾಗಿ ಕುದುರೆ
ಈ ಪಡೆಯಲ್ಲಿ ಸೈನಿಕರು ಅಶ್ವಾಧೀನರಾಗಿರುತ್ತಾರೆ. ಪರೇಡ್ ಅನ್ನು ಕುದುರೆ ಸವಾರಿ ಮೂಲಕವೇ ಮಾಡಬೇಕಾಗಿರುತ್ತದೆ. ಹಾಗಾಗಿ ಈ ಪ್ರಥಾಗೋಸ್ಕರ ಅತ್ಯುತ್ತಮ ತಳಿಯ ಕುದುರೆಗಳನ್ನೇ ಆಯ್ಕೆ ಮಾಡಲಾಗುವುದು ಮತ್ತೊಂದು ವಿಶೇಷ. ಸೈನಿಕರ ಶಾರೀರಿಕ ಅರ್ಹತೆಗಳಂತೆ ಕುದುರೆಯೂ ಸಹ ಕನಿಷ್ಠ 1.58 ಮೀ. ಗಳಷ್ಟು ಎತ್ತರವಾಗಿರಬೇಕು. ಈ ಪಡೆಯ ಕುದುರೆಗಳು ಭಾರತೀಯ ಸೈನ್ಯದ ಇತರೆ ಅಶ್ವಪಡೆಯಂತಿರದೆ ವಿಶೇಷವಾಗಿ ಅಂದಚೆಂದವಾಗಿ ಕಾಣುವಂತೆ ಬೆಳೆಸಲ್ಪಟ್ಟಿರುತ್ತವೆ. ಅವುಗಳಿಗೂ ಪಥಸಂಚಲನದಲ್ಲಿ ಅದ್ಭುತವಾಗಿ ಸಿಂಗರಿಸಲಾಗಿರುತ್ತದೆ.


ವಿರಾಟ್ ಕುದುರೆ ನಿವೃತ್ತ
ಈ ಸಲದ ಗಣರಾಜ್ಯೋತ್ಸವದ ಪರೇಡ್ ನಂತರ ಹಲವು ವರ್ಷಗಳಿಂದ ರಾಷ್ಟ್ರಪತಿಯ ಮುಖ್ಯ ಕುದುರೆ ಅಂಗರಕ್ಷಕ ಕಮಾಂಡೊ ಸವಾರಿ ಮಾಡುವ ವಿರಾಟ್ ಎಂಬ ಹೆಸರಿನ ಕುದುರೆಯು ತನ್ನ ಸೇವೆಯಿಂದ ನಿವೃತ್ತವಾಯಿತು. ರಾಷ್ಟ್ರಪತಿಯ ಕಮಾಂಡಂಟ್ ಆಗಿದ್ದ ಕರ್ನಲ್ ಅನೂಪ್ ತಿವಾರಿ ಅವರು ಈ ಕುದುರೆಯ ಮೇಲೆ ಆಸೀನರಾಗಿರುತ್ತಿದ್ದರು ಹಾಗೂ ವಿರಾಟ್ ಇಲ್ಲಿಯವರೆಗೆ 13 ಬಾರಿ ರಿಪಬ್ಲಿಕ್ ಪರೇಡ್ ನಲ್ಲಿ ಭಾಗವಹಿಸಿದೆ. ಜನವರಿ 15ರ ಸೈನ್ಯದಿನದ ಉತ್ಸವದಲ್ಲಿ ವಿರಾಟ್ ತಾನು ಸಲ್ಲಿಸಿರುವ ಅತ್ಯದ್ಭುತ ಸೇವೆಗಾಗಿ ಚೀಫ್ ಆಫ್ ದಿ ಆರ್ಮಿ ಸ್ಟಾಫ್ ಕಮೆಂಡೇಷನ್ ಗೌರವ ಪಡೆದುಕೊಂಡಿದೆ. ವಿರಾಟ್ ತನ್ನ ಅತ್ಯದ್ಭುತ ಸೇವೆಗಾಗಿ ಈ ರೀತಿಯ ಗೌರವವನ್ನು ಪಡೆದ ಮೊದಲ ಕುದುರೆಯಾಗಿದೆ ಎಂಬುದು ಇನ್ನೊಂದು ವಿಶೇಷ.


ಪ್ರಸಿದ್ಧವಾಗಿರುವ ಸಂಸ್ಕೃತಿ
2018 ರಲ್ಲಿ "ರಾಷ್ಟ್ರಪತಿಯ ಅಂಗರಕ್ಷಕ" ಎಂಬ ಡಾಕ್ಯುಮೆಂಟರಿ ಚಿತ್ರವೊಂದನ್ನು ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನಿರ್ಮಿಸಿತು. ಇದನ್ನು ರಾಬಿನ್ ರಾಯ್ ನಿರ್ದೇಶಿಸಿದ್ದು ಇದಕ್ಕೆ ಧ್ವನಿದಾನವನ್ನು ನಟ ಅಮಿತಾಬ್ ಬಚ್ಚನ್ ಮಾಡಿದ್ದರು. ತದನಂತರ ಆ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಇದನ್ನು ಮೊದಲ ಬಾರಿಗೆ ಪ್ರಸಾರ ಮಾಡಲಾಗಿತ್ತು.


ಬಚ್ಚನ್ ಹೇಳಿದ್ದೇನು?
ಈ ಬಗ್ಗೆ ತಮಗಾದ ಅನುಭವದ ಬಗ್ಗೆ ಮಾತನಾಡಿದ್ದ ಬಚ್ಚನ್ ಅವರು, "ವೈವಿಧ್ಯಮಯ ಸಂಸ್ಕೃತಿಗಳ ರಾಷ್ಟ್ರವಾಗಿದ್ದರೂ ಭಾರತದ ಪ್ರತಿ ದೇಶಭಕ್ತಿ ಎಂಬುದು ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಪ್ರತಿಧ್ವನಿಸುವ ಅತ್ಯಂತ ಬಲವಾದ ಪದವಾಗಿದೆ. ದೇಶಭಕ್ತಿಯ ಮೇಲಿನ ಪ್ರೀತಿಯು ಅನೇಕ ಸಂದರ್ಭಗಳಲ್ಲಿ ಅದರ ಉತ್ತುಂಗದಲ್ಲಿದೆ, ಅದರಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಒಂದಾಗಿದೆ.


ಇದನ್ನೂ ಓದಿ:  President of India: ರಾಷ್ಟ್ರಪತಿ ಹುದ್ದೆ ಎಷ್ಟು ಮಹತ್ವದ್ದು? ಅವರ ಸಂಬಳ, ಸವಲತ್ತುಗಳೇನು?


ಈ ಚಿತ್ರವು ಯಾವುದೇ ಇತರ ಆಸಕ್ತಿಗಳಿಗಿಂತ ರಾಷ್ಟ್ರೀಯ ಕರ್ತವ್ಯಗಳನ್ನು ಮೇಲ್ಮಟ್ಟದಲ್ಲಿ ಇರಿಸಿರುವ ಕೆಲವು ನಿಸ್ವಾರ್ಥ ಪುರುಷರ ಕಥೆಗಳನ್ನು ತೆರೆದಿಡುವ ಸಂಪೂರ್ಣ ಪ್ಯಾಕೇಜ್ ಆಗಿದೆ ಎಂದು ನಾನು ಭಾವಿಸುತ್ತೇನೆ. ಚಿತ್ರವು ಖಂಡಿತವಾಗಿಯೂ ವೀಕ್ಷಕರನ್ನು ನಮ್ಮ ತಾಯ್ನಾಡಿನ ಅತ್ಯಂತ ಹಳೆಯ ಅಶ್ವದಳದ ಘಟಕಗಳ ಇತಿಹಾಸ ಮತ್ತು ಪರಂಪರೆಯ ಕಡೆಗೆ ಒಂದು ಹೆಜ್ಜೆ ಹತ್ತಿರಕ್ಕೆ ಕೊಂಡೊಯ್ಯುತ್ತದೆ." ಎಂದು ಹೇಳಿದ್ದರು.

top videos
    First published: