• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಅಲ್ ಖೈದಾ ಮುಖ್ಯಸ್ಥನ ಹತ್ಯೆ ಹೇಗಾಯ್ತು? ಅಮೆರಿಕಾ ಇವನನ್ನೇ ಏಕೆ ಟಾರ್ಗೆಟ್ ಮಾಡಿತ್ತು?

Explained: ಅಲ್ ಖೈದಾ ಮುಖ್ಯಸ್ಥನ ಹತ್ಯೆ ಹೇಗಾಯ್ತು? ಅಮೆರಿಕಾ ಇವನನ್ನೇ ಏಕೆ ಟಾರ್ಗೆಟ್ ಮಾಡಿತ್ತು?

ಐಮಾನ್ ಅಲ್ ಜವಾಹಿರಿ

ಐಮಾನ್ ಅಲ್ ಜವಾಹಿರಿ

ಐಮಾನ್ ಅಲ್ ಜವಾಹಿರಿ ಎಂದರೆ 9/11 ಎಂದೇ ಕರೆಯುವ ಸೆಪ್ಟೆಂಬರ್ 11, 2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ನಡೆದಿದ್ದ ಉಗ್ರ ದಾಳಿಯ ಮಾಸ್ಟರ್ ಮೈಂಡ್. ಈತ ಹಲವಾರು ವರ್ಷಗಳಿಂದ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ. ಅಲ್ಲದೇ ಅಲ್-ಖೈದಾ ಉಗ್ರರ ಪಡೆಯ ರೂವಾರಿಯಾಗಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ. ಹಾಗಾದರೆ ಅಮೆರಿಕ ಹತ್ಯೆ ಮಾಡಿರುವ ಈ ಉಗ್ರ ಪಿಪಾಸು ಯಾರು? ಆತನ ಹಿನ್ನೆಲೆ ಏನು? ಅಲ್-ಖೈದಾದಲ್ಲಿ ಅವನ ಪಾತ್ರವೇನು ಎಂಬುದರ ಡಿಟೇಲ್ಸ್ ಇಲ್ಲಿದೆ...

ಮುಂದೆ ಓದಿ ...
 • Share this:

ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲಿನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ, ಮೋಸ್ಟ್ ವಾಟೆಂಡ್ ಉಗ್ರ, ಅಲ್ ಖೈದಾ (Al Qaeda) ಮುಖ್ಯಸ್ಥ ಐಮಾನ್ ಅಲ್ ಜವಾಹಿರಿಯನ್ನು (Ayman Al Zawahiri) ಹತ್ಯೆ ಮಾಡಿವೆ. ವೈಮಾನಿಕ ದಾಳಿ ನಡೆಸಿ ಅಲ್ ಖೈದಾ ಮುಖ್ಯಸ್ಥನನ್ನು ಹತ್ಯೆ ಮಾಡಿರುವ ವಿಚಾರವನ್ನು ಸ್ವತಃ ಜೋ ಬೈಡೆನ್ ಖಚಿತಪಡಿಸಿದ್ದಾರೆ. “ತಾಲಿಬಾನ್ ಅಡಿಯಲ್ಲಿ ಅಫ್ಘಾನಿಸ್ತಾನವು (Afghanistan) 2001ರಲ್ಲಿದ್ದಂತೆ ವಿಶ್ವದ ಇತರ ಭಾಗಗಳ ಮೇಲಿನ ದಾಳಿಗಳಿಗೆ (Attack) ಎಂದಿಗೂ ನೆಲೆಯಾಗುವುದಿಲ್ಲ. ಉಗ್ರಗಾಮಿಗಳ ನಾಯಕ ಇನ್ನಿಲ್ಲ. ನಮ್ಮ ಜನರಿಗೆ ಬೆದರಿಕೆ ಹಾಕುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಎಷ್ಟೇ ಸಮಯವಾದರೂ, ಎಲ್ಲಿಯೇ ಇದ್ದರೂ, ಎಲ್ಲಿ ಅಡಗಿ ಕುಳಿತಿದ್ದರೂ ಅಂತವರನ್ನು ಅಮೆರಿಕ ಕೊಲ್ಲುತ್ತದೆ. ಈ ಮೂಲಕ ನ್ಯಾಯ ಸಿಕ್ಕಿದೆ’ ಎಂದು ಹೇಳಿದ್ದಾರೆ.


ಐಮಾನ್ ಅಲ್ ಜವಾಹಿರಿ 9/11 ಎಂದೇ ಕರೆಯುವ ಸೆಪ್ಟೆಂಬರ್ 11, 2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ನಡೆದಿದ್ದ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಈತ, ಹಲವಾರು ವರ್ಷಗಳಿಂದ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ. ಅಲ್ಲದೇ ಅಲ್-ಖೈದಾ ಉಗ್ರರ ಪಡೆಯ ರೂವಾರಿಯಾಗಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ.


ಹಾಗಾದರೆ ಅಮೆರಿಕ ಹತ್ಯೆ ಮಾಡಿರುವ ಈ ಉಗ್ರ ಪಿಪಾಸು ಯಾರು? ಆತನ ಹಿನ್ನೆಲೆ ಏನು? ಅಲ್-ಖೈದಾದಲ್ಲಿ ಅವನ ಪಾತ್ರವೇನು ಎಂಬುದರ ಡಿಟೇಲ್ಸ್ ಇಲ್ಲಿದೆ.


ಐಮಾನ್ ಅಲ್-ಜವಾಹಿರಿ ಯಾರು?


 •  9/11 ಎಂದೇ ಕರೆಯುವ ಸೆಪ್ಟೆಂಬರ್ 11, 2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ನಡೆದಿದ್ದ ಉಗ್ರ ದಾಳಿಯಲ್ಲಿ ಬಿನ್ ಲಾಡೆನ್‌ ಗೆ ಬಲಗೈ ಬಂಟನಾಗಿ ಸಹಾಯ ಮಾಡಿದ್ದ ಈತ. 9/11 ದಾಳಿಯ ನೆನಪಿರುವವರಿಗೆ ಈತನ ಮುಖ ಕೂಡ ನೆನಪಿರುತ್ತೆ. ದಾಳಿ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ : ಕನ್ನಡಕ ಧರಿಸಿದ, ಸ್ವಲ್ಪ ನಗುತ್ತಿರುವ, ಬಿನ್ ಲಾಡೆನ್‌ನ ಪಕ್ಕದಲ್ಲಿದ್ದ ಈ ವ್ಯಕ್ತಿಯ ಫೋಟೋ ಆಗ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.

 • ಈಜಿಪ್ಟಿನ, ಅಲ್-ಜವಾಹಿರಿ ಜೂನ್ 19, 1951 ರಂದು ಕೈರೋ ಉಪನಗರದಲ್ಲಿ ಜನಿಸಿದನು. ಬಾಲ್ಯದಿಂದಲೂ ಧಾರ್ಮಿಕವಾಗಿ ಸುನ್ನಿ ಇಸ್ಲಾಮಿಕ್ ಪುನರುಜ್ಜೀವನದ ಹಿಂಸಾತ್ಮಕ ಶಾಖೆಯಲ್ಲಿ ಬೆಳೆದನು.

 • ಅಲ್-ಜವಾಹಿರಿ ಈಜಿಪ್ಟ್ ಸೈನ್ಯದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸಕನಾಗಿದ್ದ ಮತ್ತು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ. ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಸೋವಿಯತ್ ಆಕ್ರಮಣಕಾರರ ವಿರುದ್ಧ ಆಫ್ಘನ್ನರ ಯುದ್ಧವನ್ನು ಕಣ್ಣಾರೆ ಕಂಡ ಈತ ಕಾಲಕ್ರಮೇಣ ಉಗ್ರರ ಪಡೆಗಳತ್ತ ವಾಲಿದ.

 • 1981ರಲ್ಲಿ ಈಜಿಫ್ಟ್ ಅಧ್ಯಕ್ಷ ಅನ್ವರ್ ಸಾದತ್ ಅವರನ್ನು ಇಸ್ಲಾಮಿಕ್ ಮೂಲಭೂತವಾದಿಗಳು ಹತ್ಯೆ ಮಾಡಿದ ನಂತರ ಈಜಿಪ್ಟ್ ಜೈಲಿನಲ್ಲಿ ಜವಾಹಿರಿಯನ್ನು ಬಂಧಿಸಲಾಯಿತು. ಮತ್ತು ಇಲ್ಲಿ ಚಿತ್ರಹಿಂಸೆಗೊಳಗಾದ ನೂರಾರು ಉಗ್ರಗಾಮಿಗಳಲ್ಲಿ ಇವರೂ ಒಬ್ಬರು. ಇದಾದ ಏಳು ವರ್ಷಗಳ ನಂತರ, ಬಿನ್ ಲಾಡೆನ್ ಅಲ್-ಖೈದಾವನ್ನು ಸ್ಥಾಪಿಸಿದಾಗ ಅಲ್-ಜವಾಹಿರಿ ಈ ಪಡೆಯನ್ನು ಸೇರಿಕೊಂಡ.

 • ಅಲ್-ಜವಾಹಿರಿ ತನ್ನ ಸ್ವಂತ ಈಜಿಪ್ಟ್ ಉಗ್ರಗಾಮಿ ಗುಂಪನ್ನು ಅಲ್-ಖೈದಾದೊಂದಿಗೆ ವಿಲೀನಗೊಳಿಸಿದನು. ಜವಾಹಿರಿಯ ಪಡೆ ಅಲ್-ಖೈದಾಗೆ ಆನೆ ಬಲ ನೀಡಿತು. ಈ ಎರಡೂ ಪಡೆಗಳು ಒಟ್ಟಗೂಡಿ ಪ್ರಪಂಚದಾದ್ಯಂತ ಉಪಟಳ ಹೆಚ್ಚಿಸಿದವು.

 • ಅಮೆರಿಕ ದಾಳಿಯಲ್ಲಿ ಹಿಂದಿನ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆ ಮಾಡಿದ ಬಳಿಕ ಜವಾಹಿರಿ ಅಲ್-ಖೈದಾದ ಉತ್ತರಾಧಿಕಾರಿಯಾದ.


ಇದನ್ನೂ ಓದಿ:  Explained: ಅನಿಯಂತ್ರಿತ ಸ್ಪೇಸ್ ಜಂಕ್‌ಗಳೇ ಅಪಾಯ ತಂದೊಡ್ಡಲಿದ್ಯಾ? ಇವುಗಳಿಗೂ ಕಾನೂನು ನಿಯಮಗಳಿವೆಯೆ?


ಅಲ್-ಜವಾಹಿರಿಯನ್ನು ಏಕೆ ಟಾರ್ಗೆಟ್ ಮಾಡಲಾಗಿತ್ತು?
ಆತ್ಮಹತ್ಯಾ ದಾಳಿಕೋರರು ಸೆಪ್ಟೆಂಬರ್ 11 ರ ದಾಳಿಯ ಯೋಜನೆಗಳನ್ನು ಸದ್ದಿಲ್ಲದೆ ಒಟ್ಟುಗೂಡಿಸಿದ ವರ್ಷಗಳ ನಂತರ, ಜವಾಹಿರಿ ಮತ್ತು ಲೆಫ್ಟಿನೆಂಟ್‌ಗಳು ಅಲ್-ಖೈದಾ ಬದುಕಿರುವುದನ್ನು ಖಚಿತಪಡಿಸಿದವು. ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕದ ಭದ್ರತಾಪಡೆಗಳು 2011ರಲ್ಲಿ ಪಾಕಿಸ್ತಾನದಲ್ಲಿ ಹತ್ಯೆ ಮಾಡಿದ ಬಳಿಕ, ಜವಾಹಿರಿ ಉಗ್ರಗಾಮಿ ಸಂಘಟನೆಯ ಚುಕ್ಕಾಣಿ ಹಿಡಿದಿದ್ದ. 9/11 ರ ನಂತರ, ಜವಾಹಿರಿಯು ಅಫ್ಘಾನ್-ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಅಲ್-ಖೈದಾ ನಾಯಕತ್ವವನ್ನು ಪುನರ್ನಿರ್ಮಿಸಿದನು ಮತ್ತು ಇರಾಕ್, ಏಷ್ಯಾ, ಯೆಮೆನ್ ಮತ್ತು ಅದರಾಚೆಗಿನ ಶಾಖೆಗಳ ಮೇಲೆ ಸರ್ವೋಚ್ಚ ನಾಯಕನಾಗಿದ್ದನು.


ಅಲ್-ಖೈದಾ ಉಗ್ರರ ಪಡೆ 9/11 ರ ನಂತರ ಹಲವಾರು ವರ್ಷಗಳ ನಿರಂತರ ದಾಳಿಗಳನ್ನು ನಡೆಸಿತು. ಬಾಲಿ, ಮೊಂಬಾಸಾ, ರಿಯಾದ್, ಜಕಾರ್ತ, ಇಸ್ತಾಂಬುಲ್, ಮ್ಯಾಡ್ರಿಡ್ ಸೇರಿ ಇತರೆಡೆ ದಾಳಿ ಮಾಡಿತು. 2005ರಲ್ಲಿ ಲಂಡನ್‌ನಲ್ಲಿ 52 ಜನರನ್ನು ಕೊಂದ ದಾಳಿಗಳು ಪಶ್ಚಿಮದಲ್ಲಿ ಅಲ್-ಖೈದಾದ ಕೊನೆಯ ವಿನಾಶಕಾರಿ ದಾಳಿಗಳಲ್ಲಿ ಸೇರಿವೆ. 9/11 ರ ದಾಳಿಯಲ್ಲಿ ಈತನ ಪಾತ್ರ ಪ್ರಮುಖವಾಗಿದ್ದು, ಆ ಸಂದರ್ಭದಲ್ಲಿ ಈತನ ಸುಳಿವು ನೀಡಿದವರಿಗೆ 2.5 ಕೋಟಿ ಡಾಲರ್ ಬಹುಮಾನವನ್ನು ಕೂಡ ಅಮೆರಿಕ ಘೋಷಿಸಿತ್ತು.


ಇದನ್ನೂ ಓದಿ:  China vs Taiwan: ಚೀನಾ-ತೈವಾನ್ ನಡುವಿನ ಸಂಘರ್ಷಕ್ಕೆ ಕಾರಣವೇನು? ಇದರಲ್ಲೇಕೆ ಅಮೆರಿಕಕ್ಕೆ ಆಸಕ್ತಿ?


ಡ್ರೋನ್ ಸ್ಟ್ರೈಕ್‌ಗಳು, ಯುಎಸ್ ಮತ್ತು ಇತರರು ಉಡಾವಣೆ ಮಾಡಿದ ಭಯೋತ್ಪಾದನಾ ದಾಳಿಗಳು ಮತ್ತು ಕ್ಷಿಪಣಿಗಳು ಅಲ್-ಖೈದಾ-ಸಂಯೋಜಿತ ಹೋರಾಟಗಾರರನ್ನು ಕೊಂದವು ಮತ್ತು ನೆಟ್‌ವರ್ಕ್‌ನ ಭಾಗಗಳನ್ನು ನಾಶಪಡಿಸಿದವು.


ಅಲ್-ಜವಾಹಿರಿ ಹತನಾಗಿದ್ದು ಹೇಗೆ?
ಭಾನುವಾರ ಬೆಳಗ್ಗಿನ ಸಮಯದಲ್ಲಿ, ಅಲ್-ಜವಾಹಿರಿ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಮನೆಯ ಬಾಲ್ಕನಿಯಲ್ಲಿ ಓಡಾಡುತ್ತಿದ್ದ. ಯುಎಸ್ ಗುಪ್ತಚರ ಆತನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ, US ಡ್ರೋನ್, ಅಲ್-ಖೈದಾ ನಾಯಕನ ಮೇಲೆ ಎರಡು ಹೆಲ್ಫೈರ್ ಕ್ಷಿಪಣಿಗಳನ್ನು ಹಾರಿಸಿತು. ಜವಾಹಿರಿ ಅವರ ಪತ್ನಿ ಮತ್ತು ಇತರ ಕುಟುಂಬ ಸದಸ್ಯರು ಇತ್ತೀಚೆಗೆ ಕಾಬೂಲ್‌ನಲ್ಲಿರುವ ಸುರಕ್ಷಿತ ಮನೆಗೆ ತೆರಳಿದ್ದಾರೆ ಎಂದು ಯುಎಸ್ ಅಧಿಕಾರಿಗಳಿಗೆ ಈ ವರ್ಷ ತಿಳಿದುಬಂದಿತ್ತು. ಈ ಎಲ್ಲಾ ಮಾಹಿತಿ ಕಲೆಹಾಕಿದ ಬಳಿಕ ಮೋಸ್ಟ್ ವಾಟೆಂಡ್ ಉಗ್ರನನ್ನು ಹೊಡೆದುರುಳಿಸಿದೆ.


ಜವಾಹಿರಿಯ ನಂತರ ಅಲ್-ಖೈದಾದ ಚುಕ್ಕಾಣಿ ಯಾರಿಗೆ?
ಜವಾಹಿರಿಯ ಹತ್ಯೆಯು ಅಲ್-ಖೈದಾದ ಮುಂದಿನ ಉತ್ತರಾಧಿಕಾರಿ ಯಾರು ಎಂಬ ದೊಡ್ಡ ಸಮಸ್ಯೆಯನ್ನು ಉಗ್ರರ ಪಡೆಗಳಿಗೆ ತಂದೊಡ್ಡಿದೆ. ಜವಾಹಿರಿಯ ನಂತರ ಪ್ರಬಲ ಮುಖ್ಯಸ್ಥನನ್ನು ನೇಮಿಸಲು ಈ ಪಡೆ ಹೆಣಗಾಡುತ್ತಿದೆ. ಈಜಿಪ್ಟಿನ ಸೈಫ್ ಅಲ್-ಅಡ್ಲ್ ಅವರ ಹೆಸರು ಕೇಳಿ ಬಂದಿದ್ದರೂ ಸಹ ಈತನನ್ನು ಅಲ್-ಖೈದಾ ಪರಿಣಿತ ಅಲಿ ಸೌಫಾನಿಗೆ ಪ್ರಬಲ ಅಭ್ಯರ್ಥಿಯಲ್ಲ ಎಂದು ಸೂಚಿಸಿದ್ದಾನೆ. ಒಟ್ಟಾರೆಯಾಗಿ ಅಲ್-ಖೈದಾ ಈಗ ಉತ್ತರಾಧಿಕಾರ ಬಿಕ್ಕಟ್ಟು ಮತ್ತು ಅಸ್ಥಿರ ಭವಿಷ್ಯವನ್ನು ಎದುರಿಸುತ್ತಿದೆ.


ಹಿಂಸಾತ್ಮಕ ಉಗ್ರಗಾಮಿ ಜಾಲಗಳ ಇನ್ನೊಬ್ಬ ತಜ್ಞ ಚಾರ್ಲ್ಸ್ ಲಿಸ್ಟರ್, ಮಧ್ಯಪ್ರಾಚ್ಯ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ಸುತ್ತಲಿನ ಸಂಘರ್ಷಗಳ ಸ್ವರೂಪ ಮತ್ತು ಹರಡುವಿಕೆ ಇಂದು ಜಾಗತಿಕವಾಗಿ ಕೇಂದ್ರೀಕೃತವಾಗಿರುವ ಜಿಹಾದಿ ಸಂಘಟನೆಗಳಿಗೆ ಬದಲಾಗಿ ಸ್ಥಳೀಯವಾಗಿ ಕೇಂದ್ರೀಕೃತವಾಗಿರುವ ಜಿಹಾದಿ ಸಂಘಟನೆಗಳಿಗೆ ಒಲವು ತೋರುತ್ತಿದೆ ಎಂದು ಬರೆದಿದ್ದಾರೆ.


ಜವಾಹಿರಿ ಅಫ್ಘಾನಿಸ್ತಾನದಲ್ಲಿ ಇದಿದ್ದು ತಾಲಿಬಾನ್‌ ಪಡೆಗೆ ತಿಳಿದಿತ್ತಾ?
ಯುಎಸ್ ಅಧಿಕಾರಿಗಳು ಹೇಳಿರುವ ಪ್ರಕಾರ, ಜವಾಹಿರಿ ಎಷ್ಟು ಸಮಯದವರೆಗೆ ಅಫ್ಘಾನಿಸ್ತಾನದಲ್ಲಿದ್ದ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಅವನ ಉಪಸ್ಥಿತಿಯು ಸ್ವಲ್ಪ ಸಮಯದವರೆಗೆ ವ್ಯಾಪಕವಾಗಿ ಹರಿದಾಡುತ್ತಿದ್ದ ವದಂತಿಯಾಗಿತ್ತು ಎಂದು ಯುಎಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್‌ನ ಮಧ್ಯ ಏಷ್ಯಾ ತಜ್ಞ ಅಸ್ಫಾಂಡ್ಯಾರ್ ಮಿರ್ ಹೇಳಿದ್ದಾರೆ.


ಇದನ್ನೂ ಓದಿ: Ayman al-Zawahiri: ಅಲ್ ಖೈದಾ ಮುಖ್ಯಸ್ಥ ಜವಾಹಿರಿಯನ್ನೇ ಗುರಿ ಇಟ್ಟು ಕೊಂದಿದ್ದು ಹೇಗೆ ಅಮೇರಿಕಾ?


ಅಷ್ಟೇ ಅಲ್ಲ, ಜವಾಹಿರಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ ಮನೆಯು ಹಿರಿಯ ತಾಲಿಬಾನ್ ನಾಯಕ ಸಿರಾಜುದ್ದೀನ್ ಹಕ್ಕಾನಿಯ ಉನ್ನತ ಸಹಾಯಕರ ಒಡೆತನದಲ್ಲಿದೆ ಎಂದು ಯುಎಸ್ ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ನಿಸ್ಸಂದೇಹವಾಗಿ ಜವಾಹಿರಿ ಅಫ್ಘಾನಿಸ್ತಾನದಲ್ಲಿ ಇದ್ದಿದ್ದು ತಾಲಿಬಾನ್‌ ಪಡೆಗೆ ತಿಳಿದಿತ್ತು ಎನ್ನುತ್ತಾರೆ ಅಧಿಕಾರಿಗಳು.


ಅಘ್ಘಾನಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದ ಅಲ್‌ಖೈದಾ ಮುಖ್ಯಸ್ಥ 71 ವರ್ಷದ ಐಮಾನ್ ಅಲ್-ಜವಾಹಿರಿಯನ್ನು ಅಮೆರಿಕ ಸೇನೆ ಹತ್ಯೆಗೈಯುವ ಮೂಲಕ ತನ್ನ 21 ವರ್ಷದ ಸೇಡನ್ನು ತೀರಿಸಿಕೊಂಡಿದೆ. ಪ್ರಸ್ತುತ, ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಅಲ್-ಜವಾಹಿರಿಯ ಸಾವು ಅಲ್ಲಿನ ತಾಲಿಬಾನ್ ಪಡೆಗಳಿಗೂ ನಡುಕ ಹುಟ್ಟಿಸುವಂತೆ ಮಾಡಿದೆ

top videos
  First published: