ಸ್ಯಾಂಡಲ್‌ವುಡ್ ನಟ (Sandalwood Actor) ಕಿಚ್ಚ ಸುದೀಪ್ ಅಭಿಮಾನಿಗಳು (Kichcha Sudeep Fans) ಒಂದೆಡೆ ಸಂತಸದಲ್ಲಿದ್ದಾರೆ. ಅದಕ್ಕೆ ಕಾರಣ ಸುದೀಪ್ ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ರಿಲೀಸ್‌ಗೆ (Cinema Release) ಕೌಂಟ್‌ಡೌನ್ (Countdown) ಶುರುವಾಗಿದೆ. ಮತ್ತೊಂದೆಡೆ ಅದೇ ಅಭಿಮಾನಿಗಳು ಕೋಪದಲ್ಲಿ ಕುದಿಯುತ್ತಿದ್ದಾರೆ. ಅದಕ್ಕೆ ಕಾರಣ ಸೋಶಿಯಲ್ ಮೀಡಿಯಾದಲ್ಲಿ (Social Media) ಯುವಕನೊಬ್ಬ ಸುದೀಪ್ ವಿರುದ್ಧವಾಗಿ ಮಾತನಾಡಿರೋದು. ಆನ್‌ಲೈನ್ ಗೇಮ್ (Online Game) ರಮ್ಮಿ ಆಟದ (Rummy Game) ಜಾಹೀರಾತಿನಲ್ಲಿ (Advertisement) ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದರು. ಇದೇ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಯುವಕ, ಸುದೀಪ್‌ರನ್ನ ಬೈಯ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಕಿಚ್ಚನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಾಗಾದರೆ ಏನಿದು ವಿವಾದ? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…
ಸುದೀಪ್ ಬಗ್ಗೆ ಯುವಕನ ಆಕ್ರೋಶ
ಚರಣ್ ಎಂಬ ಯುವಕ ನಟ ಕಿಚ್ಚ ಸುದೀಪ್ ರಮ್ಮಿ ಗೇಮ್ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡು, ಆಕ್ರೋಶಭರಿತ ವಿಡಿಯೋ ಮಾಡಿದ್ದಾನೆ. ಸುದೀಪ್ ಅಭಿನಯಿಸಿದ್ದ ಈ ಜಾಹೀರಾತಿನಿಂದಾಗಿ ಯುವಕನೊಬ್ಬ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆನ್ಲೈನ್ ಗೇಮ್‌ನಿಂದಾಗಿ ಬಡವರು ಮನೆ ಮಠ ಕಳೆದುಕೊಂಡು ಬೀದಿಗೆ ಬರುತ್ತಾರೆ. ಇದಕ್ಕೆಲ್ಲ ಯಾರು ಹೊಣೆ ಅಂತ ಪ್ರಶ್ನಿಸಿದ್ದಾನೆ.
“ನೀವೆಲ್ಲಾ ದೊಡ್ಡ ವ್ಯಕ್ತಿಗಳಾ?” ಅಂತ ತರಾಟೆ
ನೀವೆಲ್ಲಾ ದೊಡ್ಡ ವ್ಯಕ್ತಿಗಳಾ ಅಂತ ಚರಣ್ ಸುದೀಪ್ ಹಾಗೂ ಇತರೇ ಕಲಾವಿದರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. "ಅಲ್ಯಾರೋ ಜೂಜಿನಿಂದ ಸತ್ತು ಹೋದರೆ, ಅದು ಸುದೀಪ್‌ನಿಂದಲೇ ಸತ್ತು ಹೋದ ಅಂತ ಬರೆದಿಡಬೇಕಾ ಅವನು? ಜೂಜಿನಿಂದ ಸತ್ತಿರುವುದು. ಸರ್ಕಾರ ಅಪ್ಲಿಕೇಶನ್ ಅನ್ನು ಬ್ಯಾನ್ ಮಾಡಬೇಕಿತ್ತು ಅಂತ ಸರ್ಕಾರದ ವಿರುದ್ಧವೂ ಕಿಡಿ ಕಾರಿದ್ದಾನೆ. ಜೊತೆಗೆ ಕೆಲವು ಆಕ್ಷೇಪಾರ್ಯ ಪದಗಳಿಂದಲೂ ನಿಂದಿಸಿದ್ದಾನೆ.
ಇದನ್ನೂ ಓದಿ: Kichcha Sudeep: ಕಿಚ್ಚನ ಬಗ್ಗೆ ಅವಹೇಳನಕಾರಿ ಹೇಳಿಕೆ, ನಿರ್ದೇಶಕ ನಂದ ಕಿಶೋರ್ ಗರಂ!
ಯುವಕನ ವಿರುದ್ಧ ಕಿಚ್ಚನ ಅಭಿಮಾನಿಗಳ ಆಕ್ರೋಶ
ಚರಣ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ಕಿಡಿಕಾರಿದ್ದಾರೆ. ಕಿಚ್ಚನಿಗೆ ಅಪಮಾನ ಮಾಡಲಾಗಿದೆ. ಆತ ಕ್ಷಮೆ ಕೇಳಬೇಕು ಅಂತ ಪಟ್ಟು ಹಿಡಿದಿದ್ದಾರೆ.
ಯುವಕನನ್ನು ತರಾಟೆಗೆ ತೆಗೆದುಕೊಂಡ ನಂದಕಿಶೋರ್
ಸುದೀಪ್ ಬಗ್ಗೆ ಮಾತನಾಡಿರೋ ವ್ಯಕ್ತಿಯ ವಿರುದ್ದ ನಂದಕಿಶೋರ್ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಕುರಿತು ನಿರ್ದೇಶಕ ನಂದ ಕಿಶೋರ್ ಆಕ್ರೋಶ ಹೊರ ಹಾಕಿ ವಿಡಿಯೋ ಹರಿ ಬಿಟ್ಟಿದ್ದು, ‘ಕನ್ನಡದ ಯಾವುದೇ ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ. ಯಾವುದೇ ವಿಚಾರ ಮಾತನಾಡುವಾಗ ಎಚ್ಚರಿಕೆ ಇರಬೇಕು. ಕನ್ನಡದ ಕಲಾವಿದರ ಬಗ್ಗೆ ಮಾತನಾಡುವಾಗ ಯೋಚಿಸಿ ಎಂದು ಕನ್ನಡ ಕಾಲಾಭಿಮಾನಿಗಳಲ್ಲಿ ನಂದಕಿಶೋರ್ ಮನವಿ ಮಾಡಿದ್ದಾರೆ.
“ನಿನ್ನ ಪಬ್ಲಿಸಿಟಿಗಾಗಿ ಮಾತನಾಡಬೇಡ”
ನಿನ್ನ ಬಗ್ಗೆ ಬೇಕಾಗಿರುವ ಪಬ್ಲಿಸಿಟಿಗಾಗಿ ಈ ರೀತಿ ಧೀಮಂತ ನಾಯಕರ ಬಗ್ಗೆ ಮಾತಾನಡಬೇಡಿ. ನಿನ್ನ ಮಾತುಗಳು ಕೇಳಿದರೆ ನಿನ್ನ ಸಂಸ್ಕ್ರತಿ ಏನೆಂದು ತಿಳಿಯುತ್ತದೆ. ಈ ಮಾತಿಗೆ ಎಲ್ಲರ ಎದುರಿಗೆ ಬಂದು ಕ್ಷಮೆ ಕೇಳಿ ಇಲ್ಲವಾದಲ್ಲಿ ನಡು ರೋಡಲ್ಲಿ ನಿಂತು ಚಪ್ಪಲಿಯಲ್ಲಿ ಏಟು ತಿನ್ನಬೇಕಾಗುತ್ತದೆ. ಇದು ಕೇಔಲ ಕಿಚ್ಚನ ಅಭಿಮಾನಿಣಿಗಳಲ್ಲದೇ ಎಲ್ಲಾ ಕನ್ನಡ ಕಾಲಾಭಿಮಾನಿಗಳಲ್ಲಿಯೂ ಈ ಮೂಲಕ ಒಂದು ಮನವಿ ಎಂದರೆ ಎಲ್ಲರೂ ನಮ್ಮವರೇ ಹೀಗಾಘಿ ಈ ರೀತಿ ಯಾರದೇ ವಿರುದ್ಧ ಮಾತನಾಡಿದರೂ ಎಲ್ಲರೂ ಇದರ ಪರವಾಗಿ ಮಾತನಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ನಂದಕಿಶೋರ್‌ಗೆ ಮತ್ತೆ ಯುವಕನ ತಿರುಗೇಟು
ಇನ್ನು ನಂದಕಿಶೋರ್ ವಿಡಿಯೋ ನೋಡಿದ ಯುವಕ ಚರಣ್ ಮತ್ತೆ ತಿರುಗಿ ಬಿದ್ದಿದ್ದಾನೆ. ಮತ್ತೊಂದು ವಿಡಿಯೋ ಮಾಡಿ, ಕಿಡಿ ಕಾರಿದ್ದಾನೆ. ನೀನು ಹೇಳಿದ್ಯಲ್ಲಾ ಮೇರು ನಟ ಅಂತ. ಆ ಮೇರು ನಟನಿಗೆ ಬುದ್ದಿ ಬೇಕು. ನಾನು ಏನಾದರೂ ಕೆಟ್ಟ ಕೆಲಸ ಮಾಡಿದರೆ, ನನ್ನ ಅಭಿಮಾನಿಗಳೂ ಕೂಡ ಅದೇ ಕೆಲಸ ಮಾಡುತ್ತಾರೆ ಅಂತ. ಸ್ಕಿಲ್ ಗೇಮ್ ಅಂತ ಸಾವಿರಾರು ಜನ ಜನ ಬೀದಿಗೆ ಬಂದಿದ್ರಲ್ಲ. ಹೊಣೆ ತೆಗೆದುಕೊಳ್ಳುವುದು ಯಾರು?" ಎಂದು ಯುವಕ ಕಿಡಿ ಕಾರಿದ್ದಾನೆ.
“ರಾಜ್‌ಕುಮಾರ್ ಅಭಿಮಾನಿಗಳಿಗೆ ಕೆಟ್ಟದ್ದು ಹೇಳಿಕೊಟ್ಟಿದ್ದಾರಾ?”
" ಡಾ. ರಾಜ್‌ಕುಮಾರ್ ಕಲಾಭಿಮಾನಿಗಳಿಗೆ ಒಂದೇ ಒಂದು ಕೆಟ್ಟ ಚಟವನ್ನಾದರೂ ಹೇಳಿಕೊಟ್ಟಿದ್ದಾರಾ? ಅಂತ ಯುವಕ ಪ್ರಶ್ನಿಸಿದ್ದಾನೆ. ನೀವು ಚಿತ್ರರಂಗದ ಒಂದು ಕುಟುಂಬ ಅಂತ ಹೇಳಿದ್ರಲ್ಲ. ಈ ಕುಟುಂಬದವರು ಸುದೀಪ್ ಜೂಜು ಆಡಿಸಿದಾಗ ಕೇಳಿದಿದ್ದರೆ ನಾವ್ಯಾಕೆ ಬರುತ್ತಿದ್ದೆವು? ನಿಮ್ಮ ಮನೆಯಲ್ಲಿ ಗಲೀಜು ಮಾಡಿಕೊಂಡಿದ್ದಕ್ಕೆ ನಾನು ಇವತ್ತು ಗಲೀಜು ಕ್ಲೀನ್ ಮಾಡುವುದಕ್ಕೆ ಬಂದಿರುವುದು. ರಮ್ಮಿ ಆಡಿ, ಎಲ್ಲಾ ಹಣವನ್ನು ಹಂಚಿ, ಈ ತರ ಆದರೆ ಯಾರು ಬಂದು ಸಿನಿಮಾ ನೋಡುವವರು. " ಎಂದು ತಿರುಗೇಟು ನೀಡಿದ್ದಾನೆ.
ಇದನ್ನೂ ಓದಿ: Vikrant Rona: ‘ವಿಕ್ರಾಂತ್ ರೋಣ‘ ಚಿತ್ರದ ‘ರಾಜಕುಮಾರಿ‘ ಸಾಂಗ್ ರಿಲೀಸ್, ಲಾಲಿ ಹಾಡಿಗೆ ತಲೆದೂಗಿದ ಕಿಚ್ಚ
ಸದ್ಯ ಈ ಎಲ್ಲಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಕಿಚ್ಚನ ಅಭಿಮಾನಿಗಳು ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಯುವಕ ಪ್ರಶ್ನಿಸಿದ್ದು ತಪ್ಪೇನಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ