• Home
 • »
 • News
 • »
 • explained
 • »
 • Explained: ದೇವರ ನಾಡಿನ ನರಭಕ್ಷಕರು! ಇದು ರಿಯಲ್ ‘ನೀಲಾಂಬರಿ’ ಕಥೆ!

Explained: ದೇವರ ನಾಡಿನ ನರಭಕ್ಷಕರು! ಇದು ರಿಯಲ್ ‘ನೀಲಾಂಬರಿ’ ಕಥೆ!

ನರಬಲಿಗೆ ಒಳಗಾದ ಮಹಿಳೆಯರು

ನರಬಲಿಗೆ ಒಳಗಾದ ಮಹಿಳೆಯರು

ಕೇರಳದಲ್ಲಿ ನಡೆದ ನರಬಲಿ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹಾಗಾದರೆ ಏನಿದು ನರಬಲಿ ಪ್ರಕರಣ? ಅಲ್ಲಿ ನಿಜಕ್ಕೂ ನಡೆದದ್ದಾದರೂ ಏನು?

 • Share this:

  ಕೇರಳದಲ್ಲಿ ಇಬ್ಬರು ಮಹಿಳೆಯರ ನರಬಲಿ (Kerala Human Sacrifice Killings) ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ.  ಮಹಿಳೆಯರನ್ನು  ಕೊಂದ ಬಳಿಕ ಮೃತದೇಹಗಳನ್ನು 56 ಪೀಸ್ ಮಾಡಿ ಮಾಂಸ ಭಕ್ಷಣೆ ಮಾಡಿದ ವಿಕೃತ ಆರೋಪದಡಿ ದಂಪತಿಯನ್ನು ಬಂಧನ ಮಾಡಲಾಗಿದೆ. ಕೇರಳದ ಪಟ್ಟಣತಿಟ್ಟಂ ಬಳಿಯ ಎಲಂತೂರಲ್ಲಿ ವಾಮಾಚಾರಕ್ಕೆ ಮಹಿಳೆಯರನ್ನ ಬಲಿ ಕೊಟ್ಟ ದುರುಳರು ಮಹಿಳೆಯರನ್ನು ಕೊಂದ ಬಳಿಕ  ಮೃತದೇಹಗಳನ್ನು ಕಟ್ ಮಾಡಿದ್ದಾರೆ ಎಂದು ಪೊಲೀಸರು ಆರೋಪ ಮಾಡಿದ್ದಾರೆ. ಆ ನಂತರ ಮಾಂಸವನ್ನ (Ate Flesh For Preserve Youth) ಬೇಯಿಸಿಕೊಂಡು ತಿಂದಿದ್ದಾರೆ ಎಂಬ ಬಗ್ಗೆ ಪೊಲೀಸರಿಂದ ಸ್ಫೋಟಕ ಮಾಹಿತಿ ಸಿಕ್ಕಿದೆ. ಈಗಾಗಲೇ ಭಗವಾಲ್ ಸಿಂಗ್, ಲೈಲಾ ಹಾಗೂ ಶಫಿ ಎಂಬ ಮೂವರು ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ


  ಕೇರಳದ ಪಟ್ಟಣತಿಟ್ಟಂ ಬಳಿಯ ಎಲಂತೂರಲ್ಲಿ ವಾಮಾಚಾರಕ್ಕೆ ಮಹಿಳೆಯರನ್ನ ಬಲಿ ಕೊಟ್ಟ ದುರುಳರು. ಕೊಂದ ಬಳಿಕ ಶವಗಳನ್ನು ಕಟ್ ಮಾಡಿ ಮಾಂಸವನ್ನ ಬೇಯಿಸಿಕೊಂಡು ತಿಂದಿದ್ದಾರೆ ಎಂಬ ಬಗ್ಗೆ ಪೊಲೀಸರಿಂದ ಸ್ಫೋಟಕ ಮಾಹಿತಿ ಸಿಕ್ಕಿದೆ. ಈಗಾಗಲೇ ಭಗವಾಲ್ ಸಿಂಗ್, ಲೈಲಾ ಹಾಗೂ ಶಫಿ ಎಂಬ ಮೂವರು ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.


  ಯೌವ್ವನ ಉಳಿಯಬೇಕು ಎಂದು ಮೃತದೇಹಗಳ ಮಾಂಸ ಭಕ್ಷಣೆ
  ಯೌವ್ವನ ಉಳಿಯಬೇಕು ಎಂದು ಮೃತದೇಹಗಳ ಮಾಂಸ ಬೇಯಿಸಿ ತಿಂದಿದ್ದಾರೆ. ಹೀಗೆ ಮಾಡಿದರೆ ವೃದ್ದಾಪ್ಯ ಬರದಂತೆ ತಡೆಗಟ್ಟಬಹುದು ಎಂದು ಆರೋಪಿಗಳು ಭಾವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


  15 ಸಾವಿರ ಕೊಡೋದಾಗಿ ಮಹಿಳೆಯರನ್ನ ಕರೆತರಲಾಗಿತ್ತು, ಈ ವೇಳೆ ಹಲ್ಲೆ ಮಾಡಿ ಕೊಲೆ ಮಾಡಿರುವ ದುರುಳರು ಮೃತದೇಹ ಪೀಸ್ ಪೀಸ್ ಮಾಡಿ ಭಕ್ಷಿಸಿದ್ದಾರೆ ಎನ್ನಲಾಗಿದೆ.


  ಇದನ್ನೂ ಓದಿ: Surrogate Mother: ಬಾಡಿಗೆ ತಾಯ್ತನ ವಿಧಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಂಚಿಂಚು ಮಾಹಿತಿ ಇಲ್ಲಿದೆ ನೋಡಿ


  ಮಾಂತ್ರಿಕನಿಗೆ ಶಫಿ ಎಂಬುವನಿಂದ ಸಹಕಾರ
  ಪದ್ಮಾ(52), ರೋಸ್ಲಿನ್(50) ಎಂಬ ಇಬ್ಬರು ಮಹಿಳೆಯರೇ ಹತ್ಯೆಗೀಡಾದ ಮಹಿಳೆಯರು. ಎರ್ನಾಕುಲಂ ಜಿಲ್ಲೆಯ 2 ಸ್ಥಳಗಳಲ್ಲಿ ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಮಾಂತ್ರಿಕ ಭಗವಲ್ ಸಿಂಗ್, ಪತ್ನಿ ಲೀಲಾ ಕೃತ್ಯ  ಎಸಗಿದ್ದಾರೆ. ಮಾಂತ್ರಿಕನಿಗೆ ಶಫಿ ಎಂಬುವನಿಂದ ಸಹಕಾರ ದೊರೆತಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.


  56 ತುಂಡುಗಳಾಗಿ ಮಹಿಳೆಯರನ್ನ ತುಂಡು ಮಾಡಿದ್ದರು
  ಸೆಪ್ಟೆಂಬರ್ 26ರಂದು ಕಡವಂತ್ರದಿಂದ ನಾಪತ್ತೆಯಾಗಿದ್ದ ಪದ್ಮ ಮತ್ತು ರೋಸ್ಲಿನ್​​​ಳನ್ನೂ ಅಪಹರಿಸಿದ್ದ ಹಂತಕರು ಇಬ್ಬರು ಮಹಿಳೆಯರ ಕತ್ತು ಸೀಳಿ ನರಬಲಿ ಕೊಟ್ಟು ತುಂಡು ತುಂಡುಗಳಾಗಿ ಕತ್ತರಿಸಿದ್ದರು. 56 ತುಂಡುಗಳಾಗಿ ಮಹಿಳೆಯರನ್ನ ತುಂಡು ಮಾಡಿದ್ದರು. ನರಬಲಿ ಬಳಿಕ ದೇಹವನ್ನು ಬೇಯಿಸಿ ತಿಂದಿದ್ದರು. ಬೇರೆ ಬೇರೆ ಪ್ರದೇಶದಲ್ಲಿ ಮಹಿಳೆಯರ ಶವ ಹೂತಿದ್ದರು. ಪತ್ತಣಂತಿಟ್ಟ ಪ್ರದೇಶದ ಬೇರೆ ಬೇರೆ ಕಡೆ ಶವ ಹೂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


  ಇದನ್ನೂ ಓದಿ: Mutual Divorce: ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್​ ಪಡೆಯಲು ಈ ನಿಯಮಗಳನ್ನು ಅನುಸರಿಸಬೇಕು


  ಕಾಲಡಿ ಗ್ರಾಮದ ನಿವಾಸಿ ರೋಸ್ಲಿನ್ ಅವರನ್ನು ಜೂನ್​​ನಲ್ಲಿ ರೋಸ್ಲಿನ್ ಕಿಡ್ನಾಪ್ ಮಾಡಿ ಹತ್ಯೆ ಮಾಡಲಾಗಿದೆ. ಸೆಪ್ಟೆಂಬರ್​​ನಲ್ಲಿ ಇನ್ನೋರ್ವ ಮಹಿಳೆ ಪದ್ಮಾ ಅವರನ್ನು ಕಿಡ್ನಾಪ್ ಮಾಡಿ ಹತ್ಯೆ ಮಾಡಲಾಗಿದೆ. 15 ಸಾವಿರ ಕೊಡೋದಾಗಿ ಆಮಿಷವೊಡ್ಡಿ ಕಿಡ್ನ್ಯಾಪ್ ಮಾಡಲಾಗಿದೆ.


  ನರಬಲಿಗೆ ಕಾರಣ ಏನು?
  ಯೌವ್ವನ ಇರಬೇಕೆಂದು ಬಯಸ್ಸಿದ್ದ ಹಂತಕರು ಚಿರಯೌವನ ಇರಲು ವಾಮಾಚಾರ ನಡೆಸಿ ನರಬಲಿ ನೀಡಿದ್ದಾರೆ. ವಯಸ್ಸು ಆಗದಂತೆ ಇರುವ ಉದ್ದೇಶ ಹೊಂದಿದ್ದರು. ಹಣಕಾಸಿನ ಸಮಸ್ಯೆ ನಿವಾರಿಸಿಕೊಳ್ಳಲು ಬಲಿ ಕೊಟ್ಟರೆ ಸಮೃದ್ಧಿ ಸಿಗುತ್ತೆ ಎಂದು ನಂಬಿಕೆ ಇಟ್ಟುಕೊಂಡಿದ್ದರು. ಹೀಗಾಗಿ  ವಾಮಾಚಾರ ನಡೆಸಿ ಇಬ್ಬರು ಮಹಿಳೆಯರ ಬಲಿ ನೀಡಲಾಗಿದೆ. ಬೇರೆ ಬೇರೆ ಪ್ರದೇಶದಲ್ಲಿ ಮಹಿಳೆಯರ ಶವ ಹೂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


  ಏನಿದು ನರಬಲಿ?
  ನರಬಲಿ ಎಂದರೆ ಮಾನವನ ಪ್ರಾಣವನ್ನು ದೇವರಿಗೆ ಅರ್ಪಿಸುವುದು ಎಂದರ್ಥ.  ನರಬಲಿಯು ಒಂದು ಆಚರಣೆಯ ಭಾಗವಾಗಿ ಓರ್ವ ಅಥವಾ ಹೆಚ್ಚು ಮನುಷ್ಯರನ್ನು ಕೊಲ್ಲುವ ಕ್ರಿಯೆಯಾಗಿದೆ. ದೇವರುಗಳು, ಮಾನವ ಆಡಳಿತಗಾರ, ಅಧಿಕೃತ/ಪುರೋಹಿತ ವ್ಯಕ್ತಿ ಅಥವಾ ಸತ್ತ ಪೂರ್ವಜರ ಆತ್ಮಗಳನ್ನು ಮೆಚ್ಚಿಸಲು ಅಥವಾ ಸಮಾಧಾನಪಡಿಸಲು ನರಬಲಿ ಕೊಡುವ ಆಚರಣೆ ಹಿಂದೆ ರೂಢಿಯಲ್ಲಿತ್ತು. 


  ಮಾಹಿತಿ: ನ್ಯೂಸ್ 18 ಕನ್ನಡ ಡೆಸ್ಕ್

  Published by:ಗುರುಗಣೇಶ ಡಬ್ಗುಳಿ
  First published: