• ಹೋಂ
 • »
 • ನ್ಯೂಸ್
 • »
 • Explained
 • »
 • Ramanagara: ತಾತ, ತಂದೆ-ತಾಯಿಗೆ ಗೆಲುವು ಕೊಟ್ಟ ಕ್ಷೇತ್ರದಲ್ಲಿ ನಿಖಿಲ್ ಅದೃಷ್ಟ ಪರೀಕ್ಷೆ! ಹೇಗಿದೆ ರಾಮನಗರ ಚುನಾವಣಾ ಲೆಕ್ಕಾಚಾರ?

Ramanagara: ತಾತ, ತಂದೆ-ತಾಯಿಗೆ ಗೆಲುವು ಕೊಟ್ಟ ಕ್ಷೇತ್ರದಲ್ಲಿ ನಿಖಿಲ್ ಅದೃಷ್ಟ ಪರೀಕ್ಷೆ! ಹೇಗಿದೆ ರಾಮನಗರ ಚುನಾವಣಾ ಲೆಕ್ಕಾಚಾರ?

ರಾಮನಗರ ವಿಧಾನಸಭಾ ಕ್ಷೇತ್ರ

ರಾಮನಗರ ವಿಧಾನಸಭಾ ಕ್ಷೇತ್ರ

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ನಿಖಿಲ್ ಇದೀಗ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ವಿಧಾನಸೌಧ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ. ತಮ್ಮ ತಂದೆಯವರ ರಾಜಕೀಯ ಕಾರ್ಯಕ್ಷೇತ್ರ ರಾಮನಗರ ಜಿಲ್ಲೆಗೆ ನಿಖಿಲ್ ಶಿಫ್ಟ್ ಆಗಿದ್ದಾರೆ.

 • News18 Kannada
 • 2-MIN READ
 • Last Updated :
 • Ramanagara, India
 • Share this:

ಕಳೆದ ಲೋಕಸಭಾ ಚುನಾವಣೆಯಲ್ಲಿ (Lok Sabha elections) ಮಂಡ್ಯ (Mandya) ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು. ಅದಕ್ಕೆ ಕಾರಣ ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha Ambarisha) ಹಾಗೂ ಮಾಜಿ ಸಿಎಂ ಎಚ್‌ಡಿಕೆ (HD Kumaraswamy) ಪುತ್ರನೂ ಆಗಿರುವ ನಟ ನಿಖಿಲ್ ಕುಮಾರಸ್ವಾಮಿ (Nikhil Kumaraswamy)! ಬಹಳ ಜಿದ್ದಾಜಿದ್ದಿಯಿಂದ ಕೂಡಿದ್ದ ಮಂಡ್ಯ ಕ್ಷೇತ್ರದಲ್ಲಿ ಕೊನೆಗೂ ಸುಮಲತಾ ಗೆದ್ದು ಬೀಗಿದ್ದರು. ಅಲ್ಲಿ ಸೋತಿದ್ದ ನಿಖಿಲ್ ಇದೀಗ ವಿಧಾನಸಭೆ ಚುನಾವಣೆಯಲ್ಲಿ (assembly elections) ಗೆದ್ದು ವಿಧಾನಸೌಧ (Vidhana Soudha) ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ. ತಮ್ಮ ತಂದೆಯವರ ರಾಜಕೀಯ ಕಾರ್ಯಕ್ಷೇತ್ರ ರಾಮನಗರ (Ramanagar) ಜಿಲ್ಲೆಗೆ ನಿಖಿಲ್ ಶಿಫ್ಟ್ ಆಗಿದ್ದಾರೆ. ರಾಮನಗರ ಜಿಲ್ಲೆಯ ರಾಮನಗರ ವಿಧಾನಸಭಾ ಕ್ಷೇತ್ರದಿಂದ (Ramnagar Assembly Constituency) ನಿಖಿಲ್ ಈ ಬಾರಿ ಕಣಕ್ಕಿಳಿದಿದ್ದಾರೆ. ತಮ್ಮ ತಾಯಿ ಅನಿತಾ ಕುಮಾರಸ್ವಾಮಿ (Anita Kumaraswamy) ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಮತ್ತೊಮ್ಮೆ ಜೆಡಿಎಸ್ (JDS) ಅಧಿಕಾರಕ್ಕೆ ತರಬೇಕು ಎಂಬ ಪ್ರಯತ್ನದಲ್ಲಿದ್ದಾರೆ.  


ರಾಮನಗರ ಕ್ಷೇತ್ರ ಪರಿಚಯ


ರಾಮನಗರ ಜಿಲ್ಲೆಯ ಜಿಲ್ಲಾ ಕೇಂದ್ರ ರಾಮನಗರ. ಇದು ವಿಧಾನಸಭಾ ಕ್ಷೇತ್ರ ಕೂಡ ಹೌದು. ಹಾಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಈ ಪುಟ್ಟ ಜಿಲ್ಲೆಯಿಂದ 3 ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ದಿ. ಕೆಂಗಲ್ ಹನುಮಂತಯ್ಯನವರು ಇದೇ ಕ್ಷೇತ್ರದವರು. 1994ರಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಎಚ್‌.ಡಿ. ದೇವೇಗೌಡ ಗೆದ್ದು ಮುಖ್ಯಮಂತ್ರಿಯಾದರು.
2004ರಲ್ಲಿ ರಾಮನಗರದಿಂದ ಪ್ರಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 20 ತಿಂಗಳ ಅಧಿಕಾರ ನಡೆಸಿದ್ದರು. 2008ರ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಚ್ ಡಿ ಕುಮಾರಸ್ವಾಮಿ ಬಿಜೆಪಿಯ ರುದ್ರೇಶ್‌ ಎದುರು ಗೆಲುವು ಪಡೆದಿದ್ದರು.


ನಿಖಿಲ್ ಕುಮಾರಸ್ವಾಮಿ


ದೇವೇಗೌಡ ಕುಟುಂಬದ ಭದ್ರಕೋಟೆ


ರಾಮನಗರ ಕ್ಷೇತ್ರವು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕುಟುಂಬದ ಭದ್ರಕೋಟೆಯಂತೆ ಆಗಿದೆ. ಈ ಹಿಂದೆ ಎಚ್‌ಡಿ ದೇವೇಗೌಡ ಇದೇ ಕ್ಷೇತ್ರ ಪ್ರತಿನಿಧಿಸಿದ್ದರು. ಬಳಿಕ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಇದೇ ಕ್ಷೇತ್ರದಿಂದ ಗೆದ್ದು, ಗದ್ದುಗೆ ಏರಿದ್ದರು. 2018ರ ಚುನಾವಣೆಯಲ್ಲಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಈ ಬಾರಿ ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.


ಗೌತಮ್ ಗೌಡ


ನಿಖಿಲ್ ಕುಮಾರಸ್ವಾಮಿ ಹೇಳುವುದೇನು?


1994ರಲ್ಲಿ ದೇವೇಗೌಡರು ಸಾಕಷ್ಟು ಮತಗಳಿಂದ ಗೆದ್ದಾಗ ಇಲ್ಲಿಂದ ಮುಖ್ಯಮಂತ್ರಿಯಾದರು. 2004ರಿಂದ ನನ್ನ ತಂದೆ ಇಲ್ಲಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಗೆದ್ದಿದ್ದಾರೆ. 2006ರಲ್ಲಿ ಇಲ್ಲಿಂದ ಮುಖ್ಯಮಂತ್ರಿಯಾದರು ಅಂತ ನಿಖಿಲ್ ಸ್ಮರಿಸುತ್ತಾರೆ. ರಾಮನಗರ ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ರಾಮನಗರದ ಜನರಿಗಾಗಿ ಕೆಲಸ ಮಾಡಲು ಭವಿಷ್ಯದಲ್ಲಿ ನನಗೆ ಇನ್ನೂ ಸಾಕಷ್ಟು ಸ್ಕೋಪ್ ಇದೆ. ಸದ್ಯಕ್ಕೆ, ವಿಷಯಗಳು ಉತ್ತಮವಾಗಿ ಕಾಣುತ್ತಿವೆ ಅಂತ ಮಾಧ್ಯಮಗಳ ಜೊತೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಿಂದ ಯಾರೆಲ್ಲ ಕಣದಲ್ಲಿದ್ದಾರೆ?


ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಹಳ ಜಿದ್ದಾಜಿದ್ದಿಯಿಂದ ಕೂಡಿದ್ದ ಮಂಡ್ಯ ಕ್ಷೇತ್ರದಲ್ಲಿ ಕೊನೆಗೂ ಸುಮಲತಾ ಗೆದ್ದು ಬೀಗಿದ್ದರು. ಅಲ್ಲಿ ಸೋತಿದ್ದ ನಿಖಿಲ್ ಇದೀಗ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ವಿಧಾನಸೌಧ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ. ಬಿಜೆಪಿಯಿಂದ ಹೊಸ ಮುಖ ಗೌತಮ್ ಗೌಡ ಎಂಬುವರಿಗೆ ಟಿಕೆಟ್ ನೀಡಲಾಗಿದೆ. ಅತ್ತ ಕಾಂಗ್ರೆಸ್‌ನಿಂದ ಇಕ್ಬಾಲ್ ಹುಸೇನ್ ಸ್ಪರ್ಧೆಗೆ ರೆಡಿಯಾಗಿದ್ದಾರೆ.


ಇದನ್ನೂ ಓದಿ: Narendra Modi: ಮೋದಿಯವರ 'ಡಬಲ್ ಇಂಜಿನ್ ಸರ್ಕಾರ', ಬದಲಾಯಿಸಿತಾ ರಾಜ್ಯ ರಾಜಕೀಯದ ಲೆಕ್ಕಾಚಾರ?


ರಾಮನಗರ ಮತದಾರರ ಲೆಕ್ಕಾಚಾರ

top videos


  ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು  2,06,982 ಮತದಾರರಿದ್ದಾರೆ. ಇದರಲ್ಲಿ 1,02,938 ಪುರುಷ ಮತದಾರರು ಹಾಗೂ 1,04,019 ಮಹಿಳಾ ಹಾಗೂ 25 ಮಂದಿ ಇತರೆ ಮತದಾರರಿದ್ದಾರೆ. ಒಕ್ಕಲಿಗರ ಸಮುದಾಯ ಸಂಖ್ಯಾಬಲದಲ್ಲಿ ಮುಂದಿದ್ದು, ಇವರೊಂದಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡ, ಲಿಂಗಾಯತ, ಅಲ್ಪಸಂಖ್ಯಾತರು ಹಾಗೂ ಕುರುಬ ಸಮುದಾಯದವರ ಮತಗಳೇ ನಿರ್ಣಾಯಕವಾಗಿವೆ.

  First published: