• ಹೋಂ
  • »
  • ನ್ಯೂಸ್
  • »
  • Explained
  • »
  • Hubli-Dharwad East: ಹು-ಧಾ ಪೂರ್ವದಲ್ಲಿ ನಡೆಯುತ್ತಾ ತ್ರಿಕೋನ ಸ್ಪರ್ಧೆ? ಮತ್ತೆ ಗೆದ್ದು ಬೀಗುತ್ತಾರಾ ಪ್ರಸಾದ್ ಅಬ್ಬಯ್ಯ?

Hubli-Dharwad East: ಹು-ಧಾ ಪೂರ್ವದಲ್ಲಿ ನಡೆಯುತ್ತಾ ತ್ರಿಕೋನ ಸ್ಪರ್ಧೆ? ಮತ್ತೆ ಗೆದ್ದು ಬೀಗುತ್ತಾರಾ ಪ್ರಸಾದ್ ಅಬ್ಬಯ್ಯ?

ಹುಬ್ಬಳ್ಳಿ-ಧಾರವಾಡ ಪೂರ್ವ

ಹುಬ್ಬಳ್ಳಿ-ಧಾರವಾಡ ಪೂರ್ವ

Karnataka Assembly Election: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ರಂಗೇರಿದೆ. ಹಾಲಿ ಶಾಸಕ, ಕಾಂಗ್ರೆಸ್‌ನ ಪ್ರಸಾದ್ ಅಬ್ಬಯ್ಯ ಮತ್ತೊಮ್ಮೆ ಗೆದ್ದು ಅಧಿಕಾರ ಹಿಡಿಯುವ ಕಾತರದಲ್ಲಿದ್ದಾರೆ.

  • News18 Kannada
  • 4-MIN READ
  • Last Updated :
  • Hubli-Dharwad (Hubli), India
  • Share this:

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ (Hubli-Dharwad East Assembly Constituency) ರಂಗೇರಿದೆ. ಕಾಂಗ್ರೆಸ್‌ನ (Congress) ಹಾಲಿ ಶಾಸಕ ಪ್ರಸಾದ್ ಅಬ್ಬಯ್ಯ (Prasad Abbayya) ಮತ್ತೊಮ್ಮೆ ಗೆದ್ದು ಅಧಿಕಾರ ಹಿಡಿಯುವ ಕಾತರದಲ್ಲಿದ್ದಾರೆ. ಅತ್ತ ಬಿಜೆಪಿಗೆ (BJP) ಗುಡ್ ಬೈ ಹೇಳಿ ಜೆಡಿಎಸ್‌ (JDS) ಸೇರಿದ್ದ ಹಿರಿಯ ನಾಯಕ ವೀರಭದ್ರಪ್ಪ ಹಾಲಹರವಿ (Veerbhadrappa Halaharavi) ತೆನೆ ಟಿಕೆಟ್ ಹಿಡಿದು ನಿಂತಿದ್ದಾರೆ. ಮತ್ತೊಂದೆಡೆ ಬಿಜೆಪಿ ಈ ಬಾರಿ ಹೊಸ ಮುಖ ಡಾ. ಕ್ರಾಂತಿ ಕಿರಣ್ (Dr. Kranti Kiran) ಎಂಬುವರಿಗೆ ಟಿಕೆಟ್ ನೀಡಿದೆ. ಹೀಗಾಗಿ ಈ ಬಾರಿ ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದಲ್ಲಿ ತ್ರಿಕೋನ್ ಸ್ಪರ್ಧೆ ನಿರೀಕ್ಷಿಸಲಾಗಿದೆ.


ಹು-ಧಾ ಪೂರ್ವ ಕ್ಷೇತ್ರದ ವಿಶೇಷತೆ


ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರವು ನಗರ ಹಾಗೂ ಗ್ರಾಮೀಣ ಭಾಗದ ಸಮ್ಮಿಲನದಂತಿದೆ. ಉತ್ತರ ಕರ್ನಾಟಕದ ಟಿಪಿಕಲ್ ಕನ್ನಡ ಭಾಷೆ ಜೊತೆಗೆ ಇಲ್ಲಿ ತೆಲುಗು, ಮರಾಠಿ, ತಮಿಳು, ಉರ್ದು, ಸಾವಜಿ, ಹಿಂದಿ ಮುಂತಾದ ಭಾಷೆಗಳ ಜನರೂ ಇದ್ದಾರೆ. ಹಲವು ವಾಣಿಜ್ಯ ಹಾಗೂ ಕೈಗಾರಿಕಾ ಪ್ರದೇಶಗಳು, ಸಿದ್ಧಾರೂಢ ಮಠ, ಮೂರು ಸಾವಿರ ಮಠದಂತಹ ಧಾರ್ಮಿಕ ಕೇಂದ್ರಗಳೂ ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ.


ಶಾಸಕ ಪ್ರಸಾದ್ ಅಬ್ಬಯ್ಯ


ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ


ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ 10 ಬಾರಿ, ಬಿಜೆಪಿ 3 ಬಾರಿ, ಜನಸಂಘ ಹಾಗೂ ಜನತಾ ಪರಿವಾರ ತಲಾ ಒಂದು ಬಾರಿ ಗೆಲುವು ಸಾಧಿಸಿವೆ. 2008ರಲ್ಲಿ ಈ ವಿಧಾನಸಭಾ ಕ್ಷೇತ್ರ ರಚನೆಯಾಯ್ತು. ಕ್ಷೇತ್ರ ಪುನರ್‌ವಿಂಗಡಣೆಯಾಗುವ ಮೊದಲು ಈ ಕ್ಷೇತ್ರ ಹುಬ್ಬಳ್ಳಿ ನಗರ ವಿಧಾನಸಭಾ ಕ್ಷೇತ್ರವಾಗಿತ್ತು. 2007ರಲ್ಲಿ ನಡೆದ ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ವಲಯ ಪುನರ್‌ರಚನೆ ಪ್ರಕ್ರಿಯೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಾರ್ಡುಗಳನ್ನಷ್ಟೇ ಸೇರಿಸಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರವನ್ನು ರಚಿಸಲಾಯ್ತು.


ಇದನ್ನೂ ಓದಿ: Narendra Modi: 'ವಿಷ ಸರ್ಪ'ವನ್ನು 'ಕೈ'ನತ್ತಲೇ ತಿರುಗಿಸಿದ ನಮೋ! ವಿಪಕ್ಷಗಳಿಗೆ ಮೋದಿ ತ್ರಿಸೂತ್ರದ ಪಂಚ್!


ಕ್ಷೇತ್ರದ ಹಿಂದಿನ ಫಲಿತಾಂಶ


ಸದ್ಯ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಹು-ಧಾ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಛಲವಾದಿ ಸಮುದಾಯಕ್ಕೆ ಸೇರಿದ ಪ್ರಸಾದ ಅಬ್ಬಯ್ಯ 2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದಾರೆ. ಈ ಬಾರಿ ಗೆದ್ದು ಹ್ಯಾಟ್ರಿಕ್ ಜಯದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 2008ರಲ್ಲಿ ಮಾದಿಗ ಜನಾಂಗದವರಾದ, ಬಿಜೆಪಿ ವೀರಭದ್ರಪ್ಪ ಹಾಲಹರವಿ ಅವರು ಗೆದ್ದು ಶಾಸಕರಾಗಿದ್ದರು.


ವೀರಭದ್ರಪ್ಪ ಹಾಲಹರವಿ


ಈ ಬಾರಿ ಕಣದಲ್ಲಿ ಇರುವುದು ಯಾರ್ಯಾ ರು?


ಬಿಜೆಪಿಯು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಿಂದ ನರರೋಗ ತಜ್ಞ ಡಾ. ಕ್ರಾಂತಿ ಕಿರಣ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಪ್ರಸಾದ್ ಅಬ್ಬಯ್ಯ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಇನ್ನು ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮತ್ತೊಮ್ಮೆ ಅದೃಷ್ಟ  ಪರೀಕ್ಷೆಗೆ ಇಳಿದಿದ್ದಾರೆ. ಅತ್ತ ಆಮ್ ಆದ್ಮಿ ಪಕ್ಷವು ಹುಬ್ಬಳ್ಳಿ ಧಾರವಾಡ ಪೂರ್ವದಿಂದ ಬಸವರಾಜ ತೆಡ್ರಾಲ್ ಅವರನ್ನು ಕಣಕ್ಕಿಳಿಸಿದೆ.


ಡಾ. ಕ್ರಾಂತಿ ಕಿರಣ್


ಇದನ್ನೂ ಓದಿ: Yogi Adityanath: ಒಕ್ಕಲಿಗರನ್ನು ಸೆಳೆಯಲು ಯೋಗಿ ಆದಿತ್ಯ'ನಾಥ' ಅಸ್ತ್ರ! ಸಕ್ಸಸ್ ಆಗುತ್ತಾ ಕೇಸರಿ ಪಾಳೆಯದ ರಣತಂತ್ರ?


ಕ್ಷೇತ್ರದ ಮತದಾರರ ವಿವರ


ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಮತದಾರರು, ಅನಿವಾಸಿ ಭಾರತೀಯರು ಮತ್ತು ಸೇವಾ ಮತದಾರರು ಸೇರಿದಂತೆ ಒಟ್ಟು 1,99,200 ಮತದಾರರಿದ್ದಾರೆ. ಕ್ಷೇತ್ರದಲ್ಲಿ 20,219 ಪರಿಶಿಷ್ಟ ಜಾತಿ ಮತದಾರರಿದ್ದು, ಒಟ್ಟು ಅರ್ಹ ಮತದಾರರಲ್ಲಿ ಶೇ.10.15ರಷ್ಟು ಮತದಾರರಿದ್ದಾರೆ. ಇನ್ನು 5,199 ಪರಿಶಿಷ್ಟ ಪಂಗಡದ ಮತದಾರರಿದ್ದು, ಶೇ.2.61 ಮತದಾರರಿದ್ದಾರೆ. 81,274ಕ್ಕೂ ಹೆಚ್ಚು ಮುಸ್ಲಿಂ ಮತದಾರರು ಇದ್ದಾರೆ, ಅವರು ಸುಮಾರು 40 ಪ್ರತಿಶತ ಮತದಾರರನ್ನು ಹೊಂದಿದ್ದಾರೆ.

top videos
    First published: