Explained: ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆ ಎಂದರೇನು? ಗೌರಿ ಲಂಕೇಶ್ ಕೇಸ್​ನಲ್ಲಿ ಹೈಕೋರ್ಟ್ ನೀಡಿದ ಆದೇಶವೇನು..?

ಗೌರಿಯವರ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ್ದ ನಾಯಕ್ ಎಂಬಾತನ ವಿರುದ್ಧ ಕೆಸಿಒಸಿಎ ವಿಧಿಸಿರುವ ಆರೋಪಗಳನ್ನು ಕರ್ನಾಟಕ ಹೈ ಕೋರ್ಟ್ ನ್ಯಾಯಾಧೀಶ ಮುದ್ಗಲ್ ಕೈಬಿಡುವಂತೆ ಆದೇಶಿಸಿದ್ದು, ನಾಯಕ್ ವಿರುದ್ಧ ಈ ಹಿಂದೆ ಯಾವುದೇ ಚಾರ್ಜ್‌ಶೀಟ್‌ಗಳು ಇಲ್ಲದಿರುವ ಕಾರಣ ಈ ಕಾನೂನು ನಾಯಕ್‌ಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಗೌರಿ ಲಂಕೇಶ್​​

ಗೌರಿ ಲಂಕೇಶ್​​

 • Share this:

  ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ದಳವು 2018ರಲ್ಲಿ KCOCAಗೆ ಮನವಿ ಮಾಡಿತು. ಎಸ್‌ಐಟಿ ಹತ್ಯೆಗೆ ಸಂಬಂಧಿಸಿದಂತೆ ಬಲಪಂಥೀಯ ಗುಂಪುಗಳಿಗೆ ಸಂಪರ್ಕ ಹೊಂದಿರುವ 17 ಜನರನ್ನು ಬಂಧಿಸಿ ಚಾರ್ಜ್‌ಶೀಟ್ ವಿಧಿಸಿದೆ.2017 ರಲ್ಲಿ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆಕ್ಟ್ (ಕೆಸಿಒಸಿಎ) (ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆ 2000) ಈಗ ವಿವಾದದ ಕೇಂದ್ರಬಿಂದುವಾಗಿದೆ. ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆಕ್ಟ್, 1999ರ ಮಾದರಿಯಲ್ಲಿಯೇ ಕಠಿಣ ಕಾನೂನು ಎಂದು ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆಕ್ಟ್ (ಕೆಸಿಒಸಿಎ) ಅನ್ನು ಪರಿಗಣಿಸಲಾಗಿದೆ.


  ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದೇ ಗುರುತಿಸಲಾದ ಮೋಹನ್ ನಾಯಕ್ ವಿರುದ್ಧ ಕೆಸಿಒಸಿಎ ಮಾಡಿದ ಆರೋಪಗಳನ್ನು ಕೈಬಿಡಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಹತ್ಯೆಗೀಡಾದ ಪತ್ರಕರ್ತೆ ಗೌರಿ ಸಹೋದರಿ ಕವಿತಾ ಲಂಕೇಶ್ ಕೆಸಿಒಸಿಎ ಆರೋಪಗಳನ್ನು ಕೈಬಿಟ್ಟಿರುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಹೈಕೋರ್ಟ್ ಆದೇಶದ ವಿರುದ್ಧ ರಾಜ್ಯ ಬಿಜೆಪಿ ಸರಕಾರವು ತನಿಖೆಗೆ ಆದೇಶ ನೀಡದೆ ವಿಳಂಬ ಮಾಡುತ್ತಿರುವ ಹಿನ್ನಲೆಯಲ್ಲಿ ಕವಿತಾ ಲಂಕೇಶ್ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಗುಜರಾಯಿಸಿದ್ದಾರೆ.


  ಸಂಘಟಿಸಲಾದ ಅಪರಾಧದ ಕುರಿತಂತೆ ಬಂಧಿಸಲಾದ ಯಾವುದೇ ವ್ಯಕ್ತಿಯನ್ನು ಆತ ಅಪರಾಧ ಮಾಡಲು ಪ್ರೇರೇಪಣೆ ನೀಡಿದ್ದರೂ ಕೂಡ, ಆತನನ್ನು ಅಪರಾಧದಲ್ಲಿ ಭಾಗಿಯಾಗಿರುವ ಸಂಘಟಿತ ಗುಂಪಿನ ಸದಸ್ಯನೆಂದು ಪರಿಗಣಿಸಲಾಗುತ್ತದೆ. ಅಪರಾಧಕ್ಕಾಗಿ ಬಂಧಿಸಲಾದ ಯಾವುದೇ ವ್ಯಕ್ತಿಗಳು ಹಿಂದಿನ 10 ವರ್ಷಗಳಲ್ಲಿ ಇದೇ ರೀತಿಯ ಅಪರಾಧಗಳಿಗೆ ಒಂದು ಅಥವಾ ಹೆಚ್ಚಿನ ಹಿಂದಿನ ಚಾರ್ಜ್‌ಶೀಟ್‌ಗಳನ್ನು ಹೊಂದಿದ್ದರೆ ಕೂಡ ಆತ ಅಪರಾಧಿಯಾಗುತ್ತಾನೆ.


  ಕರ್ನಾಟಕ ಸಂಘಟಿತ ಅಪರಾಧ ಕಾಯ್ದೆ ನಿಯಂತ್ರಣ: ಕಾನೂನು ಹಾಗೂ ಅದರ ಬಳಕೆ


  ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕೆಸಿಒಸಿಎ ಶಾಸನಬದ್ಧವಾಗಿತ್ತು ಹಾಗೂ ಡಿಸೆಂಬರ್‌ 2001ರಲ್ಲಿ ಅಧ್ಯಕ್ಷೀಯ ಒಪ್ಪಿಗೆಯನ್ನು ಪಡೆಯಿತು. ಅದರಲ್ಲಿರುವ ನಿಬಂಧನೆಗಳ ಪ್ರಕಾರ ಚಾರ್ಜ್‌ಶೀಟ್ ಸಲ್ಲಿಸುವ ಮೊದಲು ಬಂಧಿತ ವ್ಯಕ್ತಿಯನ್ನು 30 ದಿನಗಳವರೆಗೆ ಬಂಧನದಲ್ಲಿ ಹಾಗೂ 180 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲು ಪೊಲೀಸರಿಗೆ ಅನುಮತಿ ನೀಡುತ್ತದೆ. ಇನ್ನು ಇತರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧನಕ್ಕೆ ಗರಿಷ್ಠ 14 ದಿನ ಹಾಗೂ ನ್ಯಾಯಾಂಗ ಬಂಧನಕ್ಕೆ 90 ದಿನಗಳಾಗಿವೆ.


  ಕೆಸಿಒಸಿಎ ಪ್ರಕರಣಗಳಲ್ಲಿ, ಅಪರಾಧ ಪ್ರಕರಣದಲ್ಲಿ ಶಂಕಿತನೊಬ್ಬನ ಭಾಗಿಯಾಗಿರುವ ಬಗ್ಗೆ ಪ್ರಾಥಮಿಕ ಸಾಕ್ಷ್ಯಗಳ ಆಧಾರದ ಮೇಲೆ ಜಾಮೀನು ತಿರಸ್ಕರಿಸಬಹುದು; ಪೊಲೀಸ್ ಅಧಿಕಾರಿಯ ಮುಂದೆ ತಪ್ಪೊಪ್ಪಿಗೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು; ಮತ್ತು ಕಾನೂನು ದೂರವಾಣಿ ಪ್ರತಿಬಂಧಗಳಿಗೆ ವಿಶ್ವಾಸಾರ್ಹತೆಯನ್ನು ನೀಡಲಾಗುತ್ತದೆ.


  ಕರ್ನಾಟಕದ ಕರಾವಳಿ ಭಾಗದಲ್ಲಿ 2013ರ ಡಿಸೆಂಬರ್‌ನಲ್ಲಿ ಕೊಲೆಯಾದ ವ್ಯಾಪಾರಿ ಆರ್.ಎನ್ ನಾಯಕ್‌ನನ್ನು ಗುಂಡಿಟ್ಟು ಕೊಂದದ್ದಕ್ಕಾಗಿ ಬಂಧಿಸಲಾದ ಭೂಗತ ಜಗತ್ತಿನ ಡಾನ್ ಬನ್ನಂಜೆ ರಾಜ ಹಾಗೂ ಆತನ ಗ್ಯಾಂಗ್ ವಿರುದ್ಧ ಪೊಲೀಸರು ಈ ಕಾನೂನನ್ನು ಬಳಸಿದ್ದಾರೆ. ಮೊರೊಕ್ಕೊದಿಂದ ಬನ್ನಂಜೆ ರಾಜನನ್ನು ಗಡಿಪಾರು ಮಾಡಿದ ಸಮಯದಲ್ಲಿ ಆತನ ವಿರುದ್ಧ ಯಾವುದೇ ಚಾರ್ಜ್‌ಶೀಟ್‌ಗಳು ಇರಲಿಲ್ಲವಾದರೂ ಶೂಟಿಂಗ್‌ಗೆ ಬಂಧಿಸಲಾದ ಅನೇಕರ ವಿರುದ್ಧ ದಾಖಲಾದ ಚಾರ್ಜ್‌ಶೀಟ್‌ಗಳಿಂದಾಗಿ ಪೊಲೀಸರು ಬನ್ನಂಜೆ ರಾಜ ವಿರುದ್ಧ ಕೆಸಿಒಸಿಎಗೆ ಮನವಿ ಮಾಡಿದರು. ಪ್ರಸ್ತುತ ಈ ಪ್ರಕರಣಗಳು ವಿಶೇಷ ಕೆಸಿಒಸಿಎ ನ್ಯಾಯಾಲಯದಲ್ಲಿದೆ. ರಾಜ್ಯದಲ್ಲಿ ಬಾಕಿ ಇರುವ 17 ಕೆಸಿಒಸಿಎ ಪ್ರಕರಣಗಳಿವೆ.


  ಇನ್ನು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ದಳ 2018ರಲ್ಲಿ ಕೆಸಿಒಸಿಎಗೆ ಮನವಿ ಮಾಡಿತು. ಮುಖ್ಯವಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ 2013-18 ರ ಅವಧಿಯಲ್ಲಿ ಪತ್ರಕರ್ತೆಯ ಮೇಲೆ ಹತ್ಯೆ ಹಾಗೂ ದಾಳಿ ನಡೆಸಲು ಸಂಚು ರೂಪಿಸಿದ್ದ ಬಲಪಂಥೀಯ ಗುಂಪುಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ 17 ಜನರನ್ನು ಎಸ್‌ಐಟಿ ಬಂಧಿಸಿದೆ ಹಾಗೂ ಇವರ ಮೇಲೆ ಚಾರ್ಜ್‌ಶೀಟ್ ವಿಧಿಸಿದೆ.


  ವಿವಾದ


  ಗೌರಿಯವರ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡಿದ್ದ ನಾಯಕ್ ಎಂಬಾತನ ವಿರುದ್ಧ ಕೆಸಿಒಸಿಎ ವಿಧಿಸಿರುವ ಆರೋಪಗಳನ್ನು ಕರ್ನಾಟಕ ಹೈ ಕೋರ್ಟ್ ನ್ಯಾಯಾಧೀಶ ಮುದ್ಗಲ್ ಕೈಬಿಡುವಂತೆ ಆದೇಶಿಸಿದ್ದು, ನಾಯಕ್ ವಿರುದ್ಧ ಈ ಹಿಂದೆ ಯಾವುದೇ ಚಾರ್ಜ್‌ಶೀಟ್‌ಗಳು ಇಲ್ಲದಿರುವ ಕಾರಣ ಈ ಕಾನೂನು ನಾಯಕ್‌ಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: Explained: ವಿಜಯ್‌ ಮಲ್ಯ ದಿವಾಳಿ ಎಂದು ಘೋಷಿಸಿದ ಆದೇಶದ ಅರ್ಥವೇನು..? ಈ ಪ್ರಕರಣದ ಎಲ್ಲಾ ಡೀಟೆಲ್ಸ್‌ ಇಲ್ಲಿದೆ..

  2019ರಲ್ಲಿ, 12ನೇ ತರಗತಿ ಪರೀಕ್ಷೆಯ ಕಾಗದ ಸೋರಿಕೆಯ ಪ್ರಕರಣದಲ್ಲಿ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್, KCOCA ವ್ಯಾಪ್ತಿಯಲ್ಲಿ “ಕಾನೂನು ಬಾಹಿರ ಚಟುವಟಿಕೆಯನ್ನು ಮುಂದುವರಿಸುವುದು” ಎಂದರೆ ಸಂಘಟಿತ ಅಪರಾಧದ ಬೆಂಬಲಿಗರ ವಿರುದ್ಧ ಹಿಂದಿನ 10 ವರ್ಷಗಳಲ್ಲಿ ಒಂದಕ್ಕಿಂತ ಹೆಚ್ಚಿನ ಚಾರ್ಜ್‌ಶೀಟ್‌ಗಳನ್ನು ವಿಧಿಸುವುದಲ್ಲ ಎಂದು ತೀರ್ಪು ನೀಡಿದೆ.


  ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ಕೆಸಿಒಸಿಎ ನ್ಯಾಯಾಲಯವು ‘ಸಂಘಟಿತ ಅಪರಾಧಕ್ಕೆ ನೆರವು ನೀಡಿದ ಇಲ್ಲವೇ ಅಪರಾಧ ನಡೆಸಲು ಪ್ರೋತ್ಸಾಹ ನೀಡಿದ ವ್ಯಕ್ತಿಯ ವಿರುದ್ಧ KCOC ಕಾಯ್ದೆಯ ನಿಬಂಧನೆಗಳನ್ನು ಅನ್ವಯಿಸಬಹುದು ಎಂದು ಅಭಿಪ್ರಾಯಪಟ್ಟಿದೆ.


  ಬಲಪಂಥೀಯ ಗುಂಪಿನ ಸನಾತನ ಸಂಸ್ಥೆಗೆ ಬೆಂಬಲ ನೀಡುವ ನಾಯಕ್ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಕೇಲ್ ಹಾಗೂ ದಿಗ್‌ವೇಕರ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿರುವುದು ತನಿಖೆಯಿಂದ ತಿಳಿದು ಬಂದಿದೆ. ಗೌರಿ ಅವರನ್ನು ಹತ್ಯೆಮಾಡುವ ಸಲುವಾಗಿ ಅವರ ಮನೆಯಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಮನೆಯನ್ನು ಕೊಲೆ ಆರೋಪಿಗಳಿಗಾಗಿ ನಾಯಕ್ ಬಾಡಿಗೆಗೆ ಪಡೆದಿದ್ದ ಎಂದು ತಿಳಿದುಬಂದಿದೆ.


  ಹೈಕೋರ್ಟ್ ಆದೇಶದ ಪರಿಣಾಮವೇನು..?


  ಹೈಕೋರ್ಟ್‌ನ ಈ ಆದೇಶದಿಂದ ಆರೋಪಿಗೆ ಇನ್ನೂ ಹೆಚ್ಚಿನ ಪ್ರಕರಣಗಳಲ್ಲಿ KCOCA ಆರೋಪಗಳಿಂದ ಮುಕ್ತರಾಗುವ ಅವಕಾಶ ದೊರೆಯಲಿದೆ ಎಂಬುದು ಕರ್ನಾಟಕ ಪೊಲೀಸರ ಅಭಿಪ್ರಾಯವಾಗಿದೆ.

  First published: