Explained: ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆಯಾ Skin Cancer ಆತಂಕ? ಅಪಾಯದ ಗಂಟೆ ಭಾರಿಸಿದ UV Index!

ಕರ್ನಾಟಕದ ಒಟ್ಟು 31 ಜಿಲ್ಲೆಗಳ ಪೈಕಿ 27 ಜಿಲ್ಲೆಗಳು ಯುವಿ ಸೂಚ್ಯಂಕದ ರೀಡಿಂಗ್‌ 12 ಅನ್ನು ತೋರಿಸುತ್ತಿದ್ದು ಇದನ್ನು "ತೀವ್ರ" ಎಂದು ಪರಿಗಣಿಸಲಾಗಿದೆ. ಹಾಗಾದ್ರೆ ಈ ನೇರಳಾತೀತ ಕಿರಣ ಸೂಚ್ಯಂಕ ಅಥವಾ ಯುವಿ (UV Index) ಎಂದರೇನು? ಇದು ಏನನ್ನು ಸೂಚಿಸುತ್ತದೆ? ಇದರ ಹೆಚ್ಚಳದ ಅಪಾಯಗಳೇನು? ರಾಜ್ಯದ ಯಾವ-ಯಾವ ಪ್ರದೇಶಗಳು ಅಪಾಯವನ್ನು ಎದುರಿಸಲಿವೆ? ಈ ಬಗ್ಗೆ ಇಲ್ಲಿದೆ ಒಂದು ವರದಿ…

ನೇರಳಾತೀತ ಕಿರಣಗಳ ಸೂಚ್ಯಂಕ (UV Index)

ನೇರಳಾತೀತ ಕಿರಣಗಳ ಸೂಚ್ಯಂಕ (UV Index)

 • Share this:
  ದೇಶದೆಲ್ಲೆಡೆ ಬೇಸಿಗೆ (Summer) ಕಾಲವು ತನ್ನ ಶಾಖದ ರೆಕ್ಕೆಗಳನ್ನು ಚಾಚುತ್ತಿದೆ. ದೇಶದ ಬಹುತೇಕ ಎಲ್ಲ ಭಾಗಗಳು ತೀವ್ರವಾದ ಶಾಖವನ್ನು (Heat) ಅನುಭವಿಸುತ್ತಿರುವುದರಿಂದ, ಆಂಕೊಲಾಜಿಸ್ಟ್‌ಗಳು (oncologist), ಹವಾಮಾನ ತಜ್ಞರು (Weather experts), ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಯುವಿ ಸೂಚ್ಯಂಕವನ್ನು (Ultraviolet Index) ಗಮನಿಸುವಂತೆ ಮನವಿ ಮಾಡಿ ಎಚ್ಚರಿಸುತ್ತಿದ್ದಾರೆ. ಒಟ್ಟಾರೆಯಾಗಿ, ಬೆಂಗಳೂರು (Bengaluru) ಸೇರಿದಂತೆ ಕರ್ನಾಟಕದ ಒಟ್ಟು 31 ಜಿಲ್ಲೆಗಳ ಪೈಕಿ 27 ಜಿಲ್ಲೆಗಳು ಯುವಿ ಸೂಚ್ಯಂಕದ ರೀಡಿಂಗ್‌ 12 ಅನ್ನು ತೋರಿಸುತ್ತಿದ್ದು ಇದನ್ನು "ತೀವ್ರ" ಎಂದು ಪರಿಗಣಿಸಲಾಗಿದೆ. ಹಾಗಾದ್ರೆ ಈ ನೇರಳಾತೀತ ಕಿರಣ ಸೂಚ್ಯಂಕ ಅಥವಾ ಯುವಿ (UV Index) ಎಂದರೇನು? ಇದು ಏನನ್ನು ಸೂಚಿಸುತ್ತದೆ? ಇದರ ಹೆಚ್ಚಳದ ಅಪಾಯಗಳೇನು? ರಾಜ್ಯದ ಯಾವ-ಯಾವ ಪ್ರದೇಶಗಳು ಅಪಾಯವನ್ನು ಎದುರಿಸಲಿವೆ? ಈ ಬಗ್ಗೆ ಇಲ್ಲಿದೆ ಒಂದು ವರದಿ…

  ಯುವಿ ಸೂಚ್ಯಂಕ ಎಂದರೇನು?

  ವಿಶ್ವ ಆರೋಗ್ಯ ಸಂಸ್ಥೆಯು 2002ರಲ್ಲಿ ಯುವಿ ಸೂಚ್ಯಂಕವನ್ನು ರೂಪಿಸಿತು. ಇದು ಮುಖ್ಯವಾಗಿ ಮನುಷ್ಯ ಸೂರ್ಯನ ಕಿರಣಗಳ ಕುರಿತು ಎಷ್ಟು ಜಾಗರೂಕರಾಗಿರಬೇಕು ಎಂಬ ಕಲ್ಪನೆಯನ್ನು ನೀಡುತ್ತದೆ.

  ಯುವಿ ಸೂಚ್ಯಂಕದಲ್ಲಿ 1ರಿಂದ 11ರವರೆಗೆ ಸಂಖ್ಯೆ

  ಇದರಲ್ಲಿ ವಿವಿಧ ಅಂಕಗಳಿಗೆ ಅದರ ಪ್ರಖರತೆಯ ಪ್ರಮಾಣ ವಿವರಿಸಲಾಗಿದ್ದು 1 ಅಥವಾ 2 ಅಂಕವು ಕಡಿಮೆ ಎಂದಾಗಿದ್ದರೆ, 3 ರಿಂದ 5 ಮಧ್ಯಮವಾಗಿಯೂ, 6 ಅಥವಾ 7 ಹೆಚ್ಚು ಎಂತಲೂ, 8 ರಿಂದ 10 ತುಂಬಾ ಹೆಚ್ಚು ಮತ್ತು 11 ಮತ್ತು ಅದಕ್ಕಿಂತ ಹೆಚ್ಚಿನ ಅಂಕ ತೀವ್ರವಾಗಿರುವುದನ್ನು ಸೂಚಿಸುತ್ತವೆ.

  ರಾಜ್ಯದ ಯಾವೆಲ್ಲ ಪ್ರದೇಶಗಳಿಗೆ ಅಪಾಯವಿದೆ?

  ಕರ್ನಾಟಕ ರಾಜ್ಯದಲ್ಲಿ ಧಾರವಾಡ, ಕೋಲಾರ, ಕೊಪ್ಪಳ ಮತ್ತು ರಾಯಚೂರಿಗೆ ಯುವಿ ಸೂಚ್ಯಂಕ ಮಾಪಕ 13 ಅನ್ನು ತೋರಿಸಿದರೆ, ಯಾದಗಿರಿಗೆ ಈ ಸೂಚ್ಯಂಕದ ರೀಡಿಂಗ್ 12.5 ಆಗಿದೆ ಎಂದು ತಿಳಿದುಬಂದಿದೆ. ರಾಮನಗರದಲ್ಲಿ ಮಾತ್ರ ಇದು 11 ತೋರಿಸುತ್ತಿದೆಯಾದರೂ ಇಲ್ಲಿಯೂ ಸಹ ದಿನದ ಕೆಲವು ಭಾಗಗಳಲ್ಲಿ 12ಕ್ಕೆ ಈ ಸೂಚ್ಯಂಕ ಹೋಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

  ಯುವಿ ಸೂಚ್ಯಂಕ ಏನನ್ನು ಸೂಚಿಸುತ್ತದೆ?

  ಯುವಿ ಸೂಚ್ಯಂಕವು ಸೂರ್ಯನ ಶಾಖವು ಅತ್ಯಧಿಕವಾಗಿರುವ ಸಮಯದಲ್ಲಿ ಅಂದರೆ ಮಧ್ಯಾಹ್ನದ ಹೊತ್ತಿನಲ್ಲಿ ಭೂಮಿಯ ಮೇಲ್ಮೈಯನ್ನು ತಲುಪುವ ನಿರೀಕ್ಷಿತ ಚರ್ಮ-ಹಾನಿಕಾರಕ ನೇರಳಾತೀತ ವಿಕಿರಣದ ಪ್ರಮಾಣವನ್ನು ಸೂಚಿಸುತ್ತದೆ.

  ಇದನ್ನೂ ಓದಿ: Explained: ಭಾರತದಲ್ಲಿ ಬಿಸಿ ಅಲೆ ಉಂಟಾಗಲು ಕಾರಣವೇನು? ಇದರಿಂದ ರಕ್ಷಿಸಿಕೊಳ್ಳುವುದು ಹೇಗೆ?

  ಚರ್ಮ ಕ್ಯಾನ್ಸರ್‌ನ ಆತಂಕ

  "ನಾವು ಹವಾಮಾನ ಹೇಗಿದೆ ಎಂಬುದನ್ನು ಮಾತ್ರ ನೋಡುತ್ತೇವೆ, ಆದರೆ ಯುವಿ ಸೂಚ್ಯಂಕದ ಬಗ್ಗೆ ಮಾತನಾಡುವುದಿಲ್ಲ. ನಮ್ಮಂತಹ ಉಷ್ಣವಲಯದ ದೇಶಗಳಲ್ಲಿ ಚರ್ಮದ ಕ್ಯಾನ್ಸರ್ ಮೊದಲು ವಿರಳವಾಗಿತ್ತು. ಆದರೆ ಈಗ, ಹೆಚ್ಚಿನ ಯುವಿ ಒಳನುಗ್ಗುವಿಕೆಯಿಂದಾಗಿ ನಾವು ಖಂಡಿತವಾಗಿಯೂ ಈ ರೋಗದಲ್ಲಿ ಹೆಚ್ಚಳವನ್ನು ಕಾಣುತ್ತಿದ್ದೇವೆ" ಎಂದು HCG ಕ್ಯಾನ್ಸರ್ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯ ಡೀನ್ ಡಾ. ಯುಎಸ್ ವಿಶಾಲ್ ರಾವ್ ಹೇಳುತ್ತಾರೆ.

  ಅನೇಕ ನಗರಗಳಲ್ಲಿ ಆತಂಕ

  ಪ್ರಸ್ತುತ ನದಿಗಳು ಮತ್ತು ಭೂಮಿಗಳು ಒಣಗುತ್ತಿರುವ ದರ, ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ, ಭಾರತೀಯ ನಗರಗಳು ಸಹ ಜಾಗತಿಕವಾಗಿ ಅಪಾಯಕಾರಿ ಯುವಿ ಸೂಚ್ಯಂಕ ಪಟ್ಟಿಯಲ್ಲಿ ಕೊಡುಗೆ ನೀಡುತ್ತಿವೆ ಎಂದು ಅವರು ವಿವರಿಸುತ್ತಾರೆ. ಇದರೊಂದಿಗೆ ಚರ್ಮದ ಕ್ಯಾನ್ಸರ್, ಬಿಸಿಲಿನ ಝಳ ಮತ್ತು ಕಣ್ಣಿನ ಪೊರೆಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.

  ಹೆಚ್ಚಾಗುತ್ತಿದೆ ಚರ್ಮದ ಕ್ಯಾನ್ಸರ್

  "ನಮ್ಮ ಚರ್ಮದಲ್ಲಿ ಹೆಚ್ಚಿನ ಮಟ್ಟದ ಮೆಲನಿನ್ ವರ್ಣದ್ರವ್ಯವು ಯುವಿ ಕಿರಣಗಳ ಪ್ರಭಾವವನ್ನು ತಗ್ಗಿಸುವುದರಿಂದ ಭಾರತದಲ್ಲಿ ಚರ್ಮದ ಕ್ಯಾನ್ಸರ್ ಅಪರೂಪವಾಗಿತ್ತು. ಆದರೆ ಈಗ ಚರ್ಮದ ಕ್ಯಾನ್ಸರ್ಗಳು ಹೆಚ್ಚಾಗುತ್ತಿವೆ" ಎಂದು ಶಂಕರ ಆಪ್ಸತ್ರೆಯ, ಹೆಡ್ ಮತ್ತು ನೆಕ್ ಆಂಕೊಲಾಜಿಯ ಸಲಹೆಗಾರ ಮತ್ತು ಎಚ್‌ಒಡಿ ಆಗಿರುವ ಡಾ.ನಾರಾಯಣ ಸುಬ್ರಮಣ್ಯಂ ತಿಳಿಸುತ್ತಾರೆ.

  ಅಧ್ಯಯನಗಳು ಹೇಳುವುದೇನು?

  ಇತ್ತೀಚಿನ ICMR ಅಧ್ಯಯನ 2021 ರ ಪ್ರಕಾರ, ಭಾರತದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಮೆಲನೋಮವಲ್ಲದ ಚರ್ಮದ ಕ್ಯಾನ್ಸರ್ ನಿಧಾನವಾಗಿ ಹೆಚ್ಚುತ್ತಿದೆ. ಭಾರತದ ಈಶಾನ್ಯ ಭಾಗದಲ್ಲಿ ಚರ್ಮದ ಕ್ಯಾನ್ಸರ್‌ನ ಅತಿ ಹೆಚ್ಚು ಸಂಭವವಿದೆ ಎಂದು ಅಧ್ಯಯನವು ಹೇಳುತ್ತದೆ, ಇದು ಪುರುಷರಿಗೆ ಕೇವಲ 5.14 ಮತ್ತು ಮಹಿಳೆಯರಿಗೆ 3.98 ಆಗಿದೆ. ಆದಾಗ್ಯೂ, ಪೂರ್ವದಲ್ಲಿ ಪುರುಷರು, ಸ್ವಲ್ಪ ಮಟ್ಟಿಗಿನ ಹೆಚ್ಚಿನ ಘಟನೆಗಳನ್ನು ಅಂದರೆ 6.2 ರಷ್ಟು ಹೊಂದಿದ್ದಾರೆಂದು ಅಧ್ಯಯನ ತಿಳಿಸಿದೆ.

  ಚರ್ಮದ ಮೌಲ್ಯಮಾಪನ

  ಯುವಿ ವಿಕಿರಣದಲ್ಲಿ ಎರಡು ವಿಧಗಳಿವೆ: ಯುವಿ-ಎ ಮತ್ತು ಯುವಿ-ಬಿ, ಇದು ಚರ್ಮದ ಹಾನಿ, ವಯಸ್ಸಾದ ಮತ್ತು ಚರ್ಮದ ಕ್ಯಾನ್ಸರ್ ಕಾಯಿಲೆಗೆ ಕೊಡುಗೆ ನೀಡುತ್ತದೆ. ಸೂಚ್ಯಂಕವು 'ತೀವ್ರ' ಎಂದು ಓದಿದಾಗ ಯುವಿ-ಬಿ ಅಧಿಕವಾಗಿರುತ್ತದೆ, ಇದು ಬಿಸಿಲು, ಕ್ಯಾನ್ಸರ್ ಮತ್ತು ಕಣ್ಣಿನ ಪೊರೆಗಳು ಉಂಟಾಗಲು ಪ್ರಮುಖ ಕಾರಣವಾಗಿದೆ.

  ಕಣ್ಣಿನಲ್ಲಿ ಪೊರೆಯಾಗುವ ಆತಂಕ

  "ಸಾಮಾನ್ಯ ವಯಸ್ಸಾದ ಪ್ರಕ್ರಿಯೆಯಿಂದ ಕಣ್ಣಿನ ಪೊರೆ ಉಂಟಾಗುತ್ತದೆಯಾದರೂ, ಯುವಿ ಕಿರಣಗಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಸಾಮಾನ್ಯಕ್ಕಿಂತ ಮುಂಚೆಯೇ ಕಣ್ಣಿನ ಪೊರೆ ರಚನೆಗೆ ಕಾರಣವಾಗಬಹುದು. ಆಂಧ್ರಪ್ರದೇಶ ಮತ್ತು ಗಡಿ ಪ್ರದೇಶಗಳಲ್ಲಿ, ಪ್ರತಿ ಎರಡನೇ ಅಥವಾ ಮೂರನೇ ವ್ಯಕ್ತಿಗೆ 50 ನೇ ವಯಸ್ಸಿನಲ್ಲಿ ಕಣ್ಣಿನ ಪೊರೆ ಇರುತ್ತದೆ" ಎಂದು ನಾರಾಯಣ ನೇತ್ರಾಲಯ ಡಾ. ಭುಜಂಗ ಶೆಟ್ಟಿ ಹೇಳಿದ್ದು ಇದರಿಂದ ರಕ್ಷಣೆ ಪಡೆಯಲು ಯುವಿ-ರಕ್ಷಿತ ಕನ್ನಡಕವನ್ನು ಬಳಸುವುದು ಉತ್ತಮ ಎಂದಿದ್ದಾರೆ.

  ಚರ್ಮ ಕಾಯಿಲೆ ನಿರ್ಲಕ್ಷ್ಯಿಸಬೇಡಿ

  ಇದೇ ಸಂದರ್ಭದಲ್ಲಿ ಅವರು ಚರ್ಮದಲಾಗುವ ಕಲೆಗಳು, ಒರಟುತನ ಅಥವಾ ಬಣ್ಣಬಣ್ಣದಂತಹ ಯಾವುದೇ ಅಸಮಾನತೆಗಳನ್ನು ಕೂಡಲೇ ಮೌಲ್ಯಮಾಪನ ಮಾಡಬೇಕಾಗಿದೆ ಎಂದು ನುಡಿಯುತ್ತಾರೆ.

  ಈ ವಿಕಿರಣ ದಿನದ ಯಾವ ಸಮಯ ಮತ್ತು ಉಂಟುಮಾಡುವ ಹಾನಿಗಳಿಗೆ ಸಂಬಂಧಿಸಿದಂತೆ ವಾಸವಿ ಆಸ್ಪತ್ರೆಯ ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್ ಡಾ.ಅಭಿರಾಮ್ ಆರ್ ಅವರು, "ಯುವಿ-ಎ ಮತ್ತು ಯುವಿ-ಬಿ 11.30 ರಿಂದ ಮಧ್ಯಾಹ್ನ 1.30 ರ ನಡುವೆ ಗರಿಷ್ಠವಾಗಿರುತ್ತದೆ ಮತ್ತು ಇದು ಮಾರ್ಚ್ ಮತ್ತು ಅಕ್ಟೋಬರ್ ನಡುವೆ ಅತಿ ಹೆಚ್ಚು ಎಂದು ವಿವರಿಸುತ್ತಾರೆ.

  ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ

  ಮುಂದುವರೆಯುತ್ತ ಅವರು ಇದು ಅಲ್ಪಾವಧಿಯ ಹಾನಿಯಾಗಿರಬಹುದು, ಚರ್ಮಕ್ಕೆ ಸನ್ಬರ್ನ್ ಮತ್ತು ಸನ್ ಟ್ಯಾನ್ ಆಗಿರಬಹುದು. ಇದು ನಂತರ ಪಿಗ್ಮೆಂಟೇಶನ್ ಆಗಿ ಬದಲಾಗಬಹುದು. ದೀರ್ಘಾವಧಿಯ ಕಾರಣಗಳು ಫೋಟೋ-ಏಜೀಂಗ್ ಮತ್ತು ಫೋಟೋ-ಕಾರ್ಸಿನೋಜೆನ್ ಆಗಿರಬಹುದು, ಇದು ಚರ್ಮದ ಕ್ಯಾನ್ಸರ್ ಅಪಾಯಗಳಿಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.

  ಬಿಸಿನಿಲಿಂದ ರಕ್ಷಣೆ ಪಡೆಯಲು ಸಲಹೆ

  ಇದರಿಂದ ರಕ್ಷಣೆ ಪಡೆಯಲು ದೈಹಿಕವಾಗಿ ಜನರು ಕೊಡೆ, ಐಶೇಡ್ಸ್, ಬ್ರಿಮ್ ಹ್ಯಾಟ್‌ ಇತ್ಯಾದಿಗಳನ್ನು ಬಳಸಬಹುದು. ಅಲ್ಲದೆ, ಎಸ್‌ಪಿಎಫ್ 30 ರಿಂದ 50 ರವರೆಗಿನ ಸನ್‌ಸ್ಕ್ರೀನ್‌ಗಳನ್ನು ಬಳಸಲು ಸಲಹೆ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ನೀವು ಬಿಸಿಲಿನಲ್ಲಿ ಹೋಗುವ 20-30 ನಿಮಿಷಗಳ ಮೊದಲೇ ಚರ್ಮಕ್ಕೆ ಸನ್‌ಸ್ಕ್ರೀನ್ ಅನ್ನು ಅನ್ವಯಿಸಬೇಕು ಮತ್ತು ಪ್ರತಿ ಎರಡು ಮೂರು ಗಂಟೆಗಳಿಗೊಮ್ಮೆ ಅದನ್ನು ಅನ್ವಯಿಸುತ್ತಿರಬೇಕು.

  ನೇರಳಾತೀತ ವಿಕಿರಣವನ್ನು ನಿವಾರಿಸುವ ಕ್ರಮಗಳು

  ದಿನದ ಪ್ರಬಲ ಸಮಯದಲ್ಲಿ ಸೂರ್ಯನ ಬಿಸಿಲಿಗೆ ಹೋಗಬೇಡಿ, ದಿನದ ಕೇಂದ್ರ ಗಂಟೆಗಳಲ್ಲಿ ನೆರಳಿನಲ್ಲಿ ನಡೆಯಿರಿ. ಕೇಂದ್ರ ಗಂಟೆಗಳ ಸೂರ್ಯನಿಗೆ ನಮ್ಮನ್ನು ಒಡ್ಡಿಕೊಳ್ಳುವುದನ್ನು ನಾವು ತಪ್ಪಿಸಬೇಕಾದಂತೆಯೇ, ನಮಗೆ ಬೇರೆ ಆಯ್ಕೆಗಳಿಲ್ಲದಿದ್ದರೆ, ನಾವು ನೆರಳಿಗೆ ಹೋಗಬೇಕು. ರಕ್ಷಣಾತ್ಮಕ ಉಡುಪುಗಳನ್ನು ಧರಿಸಿ, ನಿಮ್ಮ ಕಣ್ಣುಗಳು, ಮುಖ ಮತ್ತು ಕುತ್ತಿಗೆಯನ್ನು ರಕ್ಷಿಸಲು ಅಗಲವಾದ ಅಂಚಿನ ಟೋಪಿ ಧರಿಸಿ.

  ಇದನ್ನೂ ಓದಿ: Explained: ಸಿಡಿಲು-ಮಿಂಚಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಅತ್ಯುತ್ತಮ ಮಾಹಿತಿ

  ಯುವಿ ವಿಕಿರಣಗಳಿಂದ ರಕ್ಷಣೆ ಪಡೆಯಲು ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳುವುದು ಮತ್ತು ಆಗಾಗ್ಗೆ ಚರ್ಮದ ತಪಾಸಣೆಗಳನ್ನು ಮಾಡಿಸುತ್ತಿರುವುದು ಮುಖ್ಯವಾಗಿದ್ದು ಇದು ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ಆರಂಭಿಕ ಚಿಕಿತ್ಸೆಯಲ್ಲಿ ನಮಗೆ ಸಹಾಯ ಮಾಡುತ್ತದೆ ಎನ್ನಲಾಗಿದೆ.
  Published by:Annappa Achari
  First published: