• ಹೋಂ
 • »
 • ನ್ಯೂಸ್
 • »
 • Explained
 • »
 • Narendra Modi: ರಾಜ್ಯದಲ್ಲಿ ಮೋದಿ ಅಲೆಯಲ್ಲಿ ಅರಳುತ್ತಾ 'ಕಮಲ'? 'ನಮೋ' ನಮಃ ಅಂತಿರೋದ್ಯಾಕೆ ಬಿಜೆಪಿ ನಾಯಕರು?

Narendra Modi: ರಾಜ್ಯದಲ್ಲಿ ಮೋದಿ ಅಲೆಯಲ್ಲಿ ಅರಳುತ್ತಾ 'ಕಮಲ'? 'ನಮೋ' ನಮಃ ಅಂತಿರೋದ್ಯಾಕೆ ಬಿಜೆಪಿ ನಾಯಕರು?

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

Karnataka Assembly Election: ಕಾಂಗ್ರೆಸ್ ಮುನ್ನಡೆ ಆಗಬಹುದೆಂದು ಸೂಚನೆ ಇರುವುದರಿಂದ ರಾಜ್ಯ ಬಿಜೆಪಿ ನಾಯಕರು ಈಗ ಪ್ರಧಾನಿ ನರೇಂದ್ರ ಮೋದಿಯವರ ಮೊರೆ ಹೋಗಿದ್ದಾರೆ. ಮೋದಿ ಅಲೆ ಮೇಲೆ ಭರವಸೆ ಇಟ್ಟು 'ನಮೋ ನಮಃ' ಅಂತಿದ್ದಾರೆ!

 • News18 Kannada
 • 2-MIN READ
 • Last Updated :
 • Karnataka, India
 • Share this:

  ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ (assembly elections) ಇನ್ನೂ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ, ಹಾಗಾಗಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಆಯಾಸ, ದಣಿವು ಅನ್ನದೆ ದಿನವಿಡೀ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಪಕ್ಷಗಳ ಹಿರಿಯ ನಾಯಕರುಗಳು ದೆಹಲಿ ಬಿಟ್ಟು ರಾಜ್ಯದಲ್ಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ರಾಜ್ಯ ಬಿಜೆಪಿ ಪರ ಮಾತಯಾಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರೇ ಖುದ್ದು ರಾಜ್ಯದ ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಸಭೆಗಳನ್ನುದ್ದೇಶಿಸಿ ಮಾತನಾಡುವುದು ಮತ್ತು ಜನರ ಬಳಿಗೆ ಹೋಗಿ ಮತ ಹಾಕುವಂತೆ ಓಲೈಸಲು ಕೆಲವು ಜಿಲ್ಲೆಗಳಲ್ಲಿ ರೋಡ್ ಶೋದಲ್ಲಿ (Road Show) ಪಾಲ್ಗೊಳ್ಳುತ್ತಿದ್ದಾರೆ. ಇತ್ತ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಸಹ ರಾಜ್ಯದ ಜಿಲ್ಲೆಗಳಿಗೆ ಭೇಟಿ ನೀಡಿ ಅವರು ಸಹ ಸಭೆಗಳನ್ನು ಮತ್ತು ರೋಡ್ ಶೋ ಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮೇ 10 ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣಾ ಕಣ ಮಾತ್ರ ತುಂಬಾನೇ ಕಾವೇರಿದೆ. ರಾಜ್ಯದಲ್ಲಿರುವ ಜೆಡಿಎಸ್ (JDS) ಪಕ್ಷ ಸಹ ತಾನೇನೂ ಕಮ್ಮಿ ಇಲ್ಲ ಅಂತ ಪ್ರಚಾರ ಕಾರ್ಯದಲ್ಲಿ ತೊಡಗಿದೆ.


  ಈ ಚುನಾವಣೆ ಯಾವ ಪಕ್ಷಕ್ಕೂ ಸುಲಭದ ಗುರಿಯಲ್ಲ!


  ಈ ಬಾರಿಯ ಚುನಾವಣೆಯಲ್ಲಿ ಪಕ್ಷಗಳ ನಡುವೆ ಒಂದು ಕಠಿಣವಾದ ಸ್ಪರ್ಧೆಯಂತೂ ನಡಿದೆ ನಡೆಯುತ್ತದೆ ಅಂತ ಹೇಳಲಾಗುತ್ತಿದೆ. ಕೆಲವು ಸಮೀಕ್ಷೆಗಳು ಮತ್ತು ಇತಿಹಾಸವು ಸಹ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಸ್ವಲ್ಪ ಮುನ್ನಡೆ ಆಗಬಹುದೆಂದು ಸೂಚನೆ ನೀಡುತ್ತಿರುವುದರಿಂದ, ಭಾರತೀಯ ಜನತಾ ಪಕ್ಷದ ಬೆಂಬಲಿಗರು ಈಗ ಸ್ಟಾರ್ ಪ್ರಚಾರಕರಾದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಭರವಸೆ ಇಟ್ಟಿದ್ದಾರೆ.


  ಮೋದಿ ಇಮೇಜ್ ಎನ್‌ಕ್ಯಾಶ್ ಮಾಡಿಕೊಳ್ಳುವ ತಂತ್ರ!


  ಜನಸಾಮಾನ್ಯರಲ್ಲಿ ಮೋದಿಯವರ ಬಗ್ಗೆ ಇರುವ ಒಂದು ರೀತಿಯ ಆಕರ್ಷಣೆ, ಮತದಾರರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಸ್ಥಾಪಿಸುವ ಅವರ ಸಾಮರ್ಥ್ಯ, ಅವರ ದೇವಮಾನವ ಎಂಬಂತಿರುವ ಭಾವನೆ ಇವೆಲ್ಲವೂ ಗೆಲ್ಲಲು ಅಗತ್ಯವಾದ ಕೊನೆಯ ಎಸೆತದಲ್ಲಿ ಸಿಕ್ಸರ್ ಹೊಡೆಯುವ ಸಾಮರ್ಥ್ಯವನ್ನು ಹೊಂದಿವೆ. ತಮ್ಮ ಚುನಾವಣಾ ಪ್ರಚಾರದಲ್ಲಿ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ಸ್ಥಿರ ಸರ್ಕಾರಕ್ಕಾಗಿ ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸುವಂತೆ ಜನರನ್ನು ಪ್ರೇರೇಪಿಸುತ್ತಿದ್ದಾರೆ.


  ಇದನ್ನೂ ಓದಿ: Bajrang Dal: 'ಕೈ'ಗೆ ಹೊತ್ತಿಕೊಂಡ 'ಬಜರಂಗಿ' ಬೆಂಕಿ! ಕಾಂಗ್ರೆಸ್ ಸಮೀಕ್ಷೆಯಲ್ಲಿ ಆತಂಕದ ವರದಿ!


  ಈ ಬಾರಿ ಬಿಜೆಪಿಗೆ ಲಾಭ ತರುತ್ತಾ ‘ಮೋದಿ’ ಫ್ಯಾಕ್ಟರ್?


  ಮೋದಿ ಫ್ಯಾಕ್ಟರ್ ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವರ್ಚಸ್ಸಿನಿಂದಾಗಿ ಬಿಜೆಪಿಗೆ ತರುವ ಹೆಚ್ಚುವರಿ ಮತಗಳು ಅಂತ ಅರ್ಥ. ಈ ಮತದಾರರು ಸೈದ್ಧಾಂತಿಕವಾಗಿ ಪಕ್ಷದೊಂದಿಗೆ ಹೊಂದಾಣಿಕೆ ಹೊಂದಿಲ್ಲದಿರಬಹುದು, ಆದರೆ ಮೋದಿ ಫ್ಯಾಕ್ಟರ್ ಇಲ್ಲಿ ಎಷ್ಟರ ಮಟ್ಟಿಗೆ ರಾಜ್ಯ ಬಿಜೆಪಿಗೆ ಸಹಾಯವಾಗಬಹುದು ಎಂಬುದು ಕಾದು ನೋಡಬೇಕಿದೆ.


  ಮೋದಿಯಿಂದಲೇ ಮುನ್ನಡೆ!
  ಸಿಎಸ್‌ಡಿಎಸ್ ಸಮೀಕ್ಷೆಗಳ ಪ್ರಕಾರ, ಮೋದಿ ಫ್ಯಾಕ್ಟರ್ 2014 ರಲ್ಲಿ ಶೇಕಡಾ 27 ರಿಂದ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇಕಡಾ 32 ಪ್ರತಿಶತದಷ್ಟು ಹೆಚ್ಚಾಗಿದೆ ಅಂತ ಹೇಳಲಾಗುತ್ತಿದೆ. ಇನ್ನೂ 2019 ರಲ್ಲಿ ಯುಪಿಎಗೆ ಹೋಲಿಸಿದರೆ ಎನ್‌ಡಿಎ ಅನುಭವಿಸಿದ ಮುನ್ನಡೆಯ ಶೇಕಡಾ 77 ರಷ್ಟು ಯಶಸ್ಸಿನ ಪಾಲು ಮೋದಿ ಫ್ಯಾಕ್ಟರ್ ನಿಂದಲೇ ಬಂದದ್ದು ಅಂತ ಹೇಳಲಾಗುತ್ತಿದೆ.


  ಮೋದಿ ಫ್ಯಾಕ್ಟರ್ ಹೇಗೆಲ್ಲಾ ಕೆಲಸ ಮಾಡಿದೆ?


  ರಾಜ್ಯ ಚುನಾವಣೆಗಳು ರಾಷ್ಟ್ರೀಯ ವಿಷಯಗಳ ಬದಲು ಸ್ಥಳೀಯ ವಿಷಯಗಳ ಮೇಲೆ ಸ್ಪರ್ಧಿಸುತ್ತಿದ್ದರೆ, ಮೋದಿ ಫ್ಯಾಕ್ಟರ್ 2014 ರ ಲೋಕಸಭಾ ಚುನಾವಣೆಯಿಂದ ಹಿಡಿದು ಇದುವರೆಗಿನ ಬಹುತೇಕ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಪರ ಚೆನ್ನಾಗಿಯೇ ಕೆಲಸ ಮಾಡಿದೆ.


  2014 ರಿಂದ 2019 ರ ವರೆಗೆ ಮೋದಿ ಫ್ಯಾಕ್ಟರ್ ಹೇಗೆ ಕೆಲಸ ಮಾಡಿತ್ತು?


  2014 ರಿಂದ 2019 ರ ಅವಧಿಯಲ್ಲಿ ಎನ್‌ಡಿಎ 15 ರಾಜ್ಯಗಳಲ್ಲಿ ಸರ್ಕಾರಗಳನ್ನು ರಚಿಸಿತು ಮತ್ತು ನಾಲ್ಕು ರಾಜ್ಯಗಳಲ್ಲಿ ಸರ್ಕಾರವನ್ನು ರಚಿಸಲು ವಿಫಲವಾಯಿತು. 15 ರಾಜ್ಯಗಳ ಪೈಕಿ 13ರಲ್ಲಿ ಅದು ಮೊದಲು ವಿರೋಧ ಪಕ್ಷವಾಗಿತ್ತು. ಪಕ್ಷವು ಈ ಕದನಗಳನ್ನು ಮೋದಿ ವರ್ಸಸ್ ಹಾಲಿ ಮುಖ್ಯಮಂತ್ರಿಯನ್ನಾಗಿ ಮಾಡಿತು, ಪ್ರಧಾನಿಯನ್ನು ಬದಲಾವಣೆ ಮತ್ತು ಬೆಳವಣಿಗೆಯ ಹರಿಕಾರನೆಂದು ಬಿಂಬಿಸಿತು, ಅವರ ಆಶ್ರಯದಲ್ಲಿ ರಾಜ್ಯವು ಅಭಿವೃದ್ಧಿ ಹೊಂದುತ್ತದೆ ಅನ್ನೋ ಭರವಸೆಯನ್ನು ಮತದಾರರಿಗೆ ನೀಡಿತು.


  ಆರು ರಾಜ್ಯಗಳಲ್ಲಿ ಎನ್‌ಡಿಎ ಅಧಿಕಾರದಲ್ಲಿತ್ತು (ಮಧ್ಯಪ್ರದೇಶ, ಗೋವಾ, ಛತ್ತೀಸ್‌ಘಡ್, ಗುಜರಾತ್, ರಾಜಸ್ಥಾನ ಮತ್ತು ಪಂಜಾಬ್). ಈ ಪೈಕಿ 4 ರಾಜ್ಯಗಳಲ್ಲಿ ಬಿಜೆಪಿ ಸೋತಿದೆ.


  2019 ರಿಂದ ಇಲ್ಲಿಯವರೆಗೆ ಮೋದಿ ಹವಾ ಹೇಗೆ ಕೆಲಸ ಮಾಡಿದೆ?


  ಈ ಅವಧಿಯಲ್ಲಿ, ಉತ್ತರ ಪ್ರದೇಶ, ಅಸ್ಸಾಂ, ಉತ್ತರಾಖಂಡ್, ಗುಜರಾತ್, ತ್ರಿಪುರಾದಂತಹ ಹೆಚ್ಚಿನ ರಾಜ್ಯ ಸರ್ಕಾರಗಳು ಪುನರಾಯ್ಕೆಯಾದರೆ, ಜಾರ್ಖಂಡ್ ನಲ್ಲಿ ಬಿಜೆಪಿ ಪಕ್ಷವು ಸೋತಿದೆ ಮತ್ತು ಹರಿಯಾಣದಲ್ಲಿ ಚುನಾವಣೋತ್ತರ ಮೈತ್ರಿಯೊಂದಿಗೆ ಹೊರಬಂದಿದೆ.


  ಈ ಸಮಯದಲ್ಲಿ ಬಿಜೆಪಿ ಪಕ್ಷ ಎಲ್ಲೆಲ್ಲಿ ಗೆದ್ದಿದೆಯೋ, ಅಲ್ಲಲ್ಲಿ ಮುಖ್ಯಮಂತ್ರಿಗಳು ತುಂಬಾನೇ ಜನಪ್ರಿಯರಾಗಿದ್ದರು, ಆದರೆ ಕೆಲವು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆಯನ್ನು ನಿರಾಕರಿಸಲು ಚುನಾವಣೆಗೆ ಮುಂಚಿತವಾಗಿ ಮುಖ್ಯಮಂತ್ರಿಗಳನ್ನು ಬದಲಾಯಿಸಿತು.


  ಆಕ್ಸಿಸ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಉತ್ತರಪ್ರದೇಶದಲ್ಲಿ ಮೋದಿ ಫ್ಯಾಕ್ಟರ್ ಕೇವಲ ಶೇಕಡಾ 8 ರಷ್ಟಿದ್ದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಅದು ಶೇಕಡಾ 32 ರಷ್ಟಿತ್ತು ಅಂತ ಹೇಳಲಾಗುತ್ತಿದೆ.
  ಕರ್ನಾಟಕ ಚುನಾವಣೆಗೆ ಮೋದಿ ಪ್ರಚಾರ ತಂತ್ರ ಹೇಗಿದೆ ಗೊತ್ತೇ?

  top videos


   2018 ರಂತೆಯೇ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ಗಳ ಜೊತೆಗೆ ರಾಜ್ಯದಲ್ಲಿ 20 ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಕಳೆದ ಎರಡು ಚುನಾವಣೆಗಳಲ್ಲಿ ನಗರ ಕೇಂದ್ರದಲ್ಲಿ ಗೆಲುವು ಬಿಜೆಪಿಯಿಂದ ತಪ್ಪಿಸಿಕೊಂಡಿದೆ ಮತ್ತು ಈ ಬಾರಿ ಅದಕ್ಕೆ ಮೋದಿ ಅವರು ಈ ನಗರ ಕೇಂದ್ರಗಳ ಮೇಲೆ ವಿಶೇಷವಾದ ಗಮನವನ್ನು ಹರಿಸುತ್ತಿದ್ದಾರೆ. ಹಿಂದುತ್ವದ ಅಂಶ ಕೆಲಸ ಮಾಡುವ ಕರಾವಳಿ ಕರ್ನಾಟಕದಲ್ಲಿ ಮೋದಿ ಅವರು ಕಾಂಗ್ರೆಸ್ ಅನ್ನು ರಾಷ್ಟ್ರ ವಿರೋಧಿ ಮತ್ತು ವಂಶಪಾರಂಪರ್ಯ ಪಕ್ಷ ಎಂದು ಹಣೆಪಟ್ಟಿ ಕಟ್ಟಿದರು. ಆದರೆ ಈ ಬಾರಿ ಅವರು ಕರ್ನಾಟಕದ ರಾಜ್ಯ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬಹುದೇ ಎಂಬ ಪ್ರಶ್ನೆಗೆ ಉತ್ತರ ಬಹುತೇಕವಾಗಿ ಮೇ 13ಕ್ಕೆ ಸಿಗಲಿದೆ.

   First published: