• ಹೋಂ
 • »
 • ನ್ಯೂಸ್
 • »
 • Explained
 • »
 • HD Kumaraswamy: 'ಗ್ರಾಮವಾಸ್ತವ್ಯ'ದ ಮೂಲಕ ಜನಮನ ತಲುಪಿದ ಮಾಜಿ ಸಿಎಂ! ಇಲ್ಲಿದೆ ಎಚ್‌ಡಿಕೆ ರಾಜಕೀಯ ಹಾದಿ

HD Kumaraswamy: 'ಗ್ರಾಮವಾಸ್ತವ್ಯ'ದ ಮೂಲಕ ಜನಮನ ತಲುಪಿದ ಮಾಜಿ ಸಿಎಂ! ಇಲ್ಲಿದೆ ಎಚ್‌ಡಿಕೆ ರಾಜಕೀಯ ಹಾದಿ

ಎಚ್‌ಡಿ ಕುಮಾರಸ್ವಾಮಿ

ಎಚ್‌ಡಿ ಕುಮಾರಸ್ವಾಮಿ

ಎಚ್‌ಡಿಕೆ ರಾಜಕೀಯಕ್ಕೆ ಬಂದಿದ್ದು ಹೇಗೆ? ಸಿಎಂ ಆಗಿ ಅವರ ಸಾಧನೆಗಳೇನು? ವಿವಾದ ಮಾಡಿಕೊಂಡಿದ್ದೇಕೆ ಎಚ್‌ಡಿಕೆ? ಇಲ್ಲಿದೆ ಓದಿ ಅವರ ರಾಜಕೀಯ ಹಾದಿಯ ಚಿತ್ರಣ…

 • News18 Kannada
 • 3-MIN READ
 • Last Updated :
 • Karnataka, India
 • Share this:

ಎಚ್‌ಡಿ ಕುಮಾರಸ್ವಾಮಿ (HD Kumaraswamy) ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಲ್ಲಿ (Chief Ministers of Karnataka) ಒಬ್ಬರು. ಅಷ್ಟೇ ಅಲ್ಲ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳ ಪೈಕಿ ಪ್ರಮುಖವಾಗಿ ಕೇಳಿ ಬರುವ ಹೆಸರು. ಎಚ್‌ಡಿಕೆ (HDK), ಕುಮಾರಣ್ಣ ಅಂತಾನೇ ಕರೆಯಲ್ಪಡುವ ಎಚ್‌ಡಿ ಕುಮಾರಸ್ವಾಮಿ ಸದ್ಯ ಮತ್ತೊಮ್ಮೆ ರಾಜ್ಯದಲ್ಲಿ ಜೆಡಿಎಸ್‌ (JDS) ಪಕ್ಷವನ್ನು ಅಧಿಕಾರಕ್ಕೆ ತಂದು, ಮುಖ್ಯಮಂತ್ರಿಯಾಗುವ (CM) ಕನಸು ಕಾಣುತ್ತಿದ್ದಾರೆ. ಈಗಾಗಲೇ 2 ಬಾರಿ ಸಿಎಂ ಆಗಿರುವ ಎಚ್‌ಡಿಕೆ, ‘ಗ್ರಾಮ ವಾಸ್ತವ್ಯ’ ಎಂಬ ಪರಿಕಲ್ಪನೆಯನ್ನು ಮೊಟ್ಟ ಮೊದಲಬಾರಿಗೆ ಪರಿಚಯಿಸಿದರು. ಹಲವು ಜನಪರ ಯೋಜನೆಗಳ ಜೊತೆಗೆ ಹಲವು ವಿವಾದಗಳಲ್ಲೂ ಸಿಲುಕಿಕೊಂಡು ಎಚ್‌ಡಿ ಕುಮಾರಸ್ವಾಮಿ, ರಾಜಕೀಯ ಕುಟುಂಬದಿಂದಲೇ ಬಂದವರು. ಫಿಲ್ಮ್ ಡಿಸ್ಟ್ರಿಬ್ಯೂಟರ್ ಆಗಿದ್ದ ಎಚ್‌ಡಿಕೆ ನಿರ್ಮಾಪಕರಾಗಿ, ಶಾಸಕರಾಗಿ, ಮುಖ್ಯಮಂತ್ರಿಯಾಗಿ ಸದ್ಯ ರಾಜ್ಯದ ಪ್ರಮುಖ ರಾಜಕಾರಣಿ. ಹಾಗಾದರೆ ಎಚ್‌ಡಿಕೆ ರಾಜಕೀಯಕ್ಕೆ ಬಂದಿದ್ದು ಹೇಗೆ? ಸಿಎಂ ಆಗಿ ಅವರ ಸಾಧನೆಗಳೇನು? ವಿವಾದ ಮಾಡಿಕೊಂಡಿದ್ದೇಕೆ ಎಚ್‌ಡಿಕೆ? ಇಲ್ಲಿದೆ ಓದಿ ಅವರ ರಾಜಕೀಯ ಹಾದಿಯ ಚಿತ್ರಣ…


ಮಾಜಿ ಪ್ರಧಾನಿಗಳ ಪುತ್ರ ಈ ಮಾಜಿ ಸಿಎಂ!


ಎಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಪ್ರಧಾನಿ, ಜೆಡಿಎಸ್‌ ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡ ಅವರ ಪುತ್ರರು. ಹೇಳಿ ಕೇಳಿ ದೇವೇಗೌಡರದ್ದು ರಾಜಕೀಯ ಕುಟುಂಬ. ಖುದ್ದು ದೇವೇಗೌಡರೇ ಮಾಜಿ ಪ್ರಧಾನಿ, ಮಾಜಿ ಸಿಎಂ ಸದಸ್ಯರಾಗಿದ್ದರೆ ಅವರ ಪುತ್ರ ಎಚ್‌ಡಿ ರೇವಣ್ಣ ಮಾಜಿ ಸಚಿವ ಹಾಗೂ ಹೊಳೆನರಸೀಪುರದ ಶಾಸಕ. ಅವರ ಪತ್ನಿ, ಪುತ್ರರಿಬ್ಬರೂ ರಾಜಕಾರಣಿಗಳು. ಇತ್ತ ಕುಮಾರಸ್ವಾಮಿ, ಅವರ ಪತ್ನಿ, ಪುತ್ರನೂ ರಾಜಕಾರಣಿಯೇ.
1986ರಲ್ಲಿ ಅನಿತಾ ಜೊತೆ ಕುಮಾರಸ್ವಾಮಿ ವಿವಾಹ


ಎಚ್‌ಡಿ ಕುಮಾರಸ್ವಾಮಿ ಡಿಸೆಂಬರ್ 16, 1959ರಂದು ಹಾಸನ ಜಿಲ್ಲೆಯ ಹರದನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ತಾಯಿ ಚೆನ್ನಮ್ಮ. ಬೆಂಗಳೂರಿನ ಜಯನಗರದ ನ್ಯಾಷನಲ್ ಕಾಲೇಜ್‌ನಲ್ಲಿ ಬಿಎಸ್ಸಿ ಮುಗಿಸಿದ ಎಚ್‌ಡಿಕೆ, ಮೊದಲು ಫಿಲ್ಮ್ ಡಿಸ್ಟ್ರಿಬ್ಯೂಟರ್ ಆಗಿದ್ದರು. ಎಚ್‌ಡಿಕೆ 1986ರಲ್ಲಿ ಅನಿತಾ ಅವರನ್ನು ವಿವಾಹವಾದರು.


ಇದನ್ನೂ ಓದಿ: Yediyurappa-Eshwarappa: ಯಡಿಯೂರಪ್ಪ, ಈಶ್ವರಪ್ಪ ನೇಪಥ್ಯ; ಶಿವಮೊಗ್ಗ ರಾಜಕೀಯದಲ್ಲಿ ಹೊಸ ತಲೆಮಾರಿನ ಅಧಿಪತ್ಯ!


ಫಿಲ್ಮ್ ಡಿಸ್ಟ್ರಿಬ್ಯೂಷನ್‌ನಿಂದ ರಾಜಕೀಯಕ್ಕೆ


ಎಚ್‌ಡಿಕೆ ಕನ್ನಡ ಚಲನಚಿತ್ರ ವಿತರಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಲಾಭಗಳಿಸಿದ ಬಳಿಕ ನಿರ್ಮಾಪಕರಾಗಿ ಚೆನ್ನಾಂಬಿಕಾ ಫಿಲ್ಮ್ ಎಂಬ ನಿರ್ಮಾಣ ಸಂಸ್ಥೆ ಸ್ಥಾಪಿಸಿ, ಹಲವು ಸಿನಿಮಾಗಳನ್ನು ನಿರ್ಮಿಸಿದರು. ಅಲ್ಲಿಂದ ಮುಂದೆ ಅವರು ರಾಜಕೀಯ ಪ್ರವೇಶಿಸಿದರು.


ಲೋಕಸಭೆ ಚುನಾವಣೆ ಮೂಲಕ ರಾಜಕೀಯ ಪ್ರವೇಶ


ಏನೆಂದರೆ ಏನೊಂದೂ ರಾಜಕೀಯ ಅನುಭವ ಇಲ್ಲದ ಎಚ್‌ಡಿ ಕುಮಾರಸ್ವಾಮಿ 1996ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಆಯ್ಕೆಯೂ ಆದರು. ಆ ಮೂಲಕ ಎಚ್‌ಡಿಕೆ ರಾಜಕೀಯ ಪ್ರವೇಶವಾಯಿತು.


ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಸೋಲು


1998ರಲ್ಲಿ ಕನಕಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ ಎಚ್‌ಡಿಕೆ ಅಲ್ಲಿ ಸೋತರು. ಬಳಿಕ 1999ರಲ್ಲಿ ಅಂದಿನ ಸಾತನೂರು ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿ ಮತ್ತೆ ಸೋತರು. 2004ರಲ್ಲಿ ರಾಮನಗರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ, ಮೊದಲ ಬಾರಿ ವಿಧಾನಸಭೆಗೆ ಪ್ರವೇಶಿಸಿದರು.


ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ


ಎಚ್‌ಡಿಕೆ ತಮ್ಮ ತಂದೆ ಎಚ್‌ಡಿ ದೇವೇಗೌಡ ಅವರ ಅನುಮತಿಯನ್ನೂ ಪಡೆಯದೇ ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿದರು. ಹೀಗಾಗಿ 2006 ರಿಂದ 2007 ರವರೆಗೆ ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು.


ಕಾಂಗ್ರೆಸ್-ಜೆಡಿಎಸ್‌ ಸರ್ಕಾರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ


2018ರ ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಹೆಚ್‌ಡಿಕೆ ಜೆಡಿಎಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. ಈ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಜೆಡಿಎಸ್‌ 38 ಸ್ಥಾನಗಳನ್ನು ಗೆದ್ದುಕೊಂಡಿತು. ಬಳಿಕ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಮೇ 23, 2018 ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.


ಸಿಎಂ ಆಗಿ ಎಚ್‌ಡಿಕೆ ಸಾಧನೆ


ಎಚ್‌ಡಿ ಕುಮಾರಸ್ವಾಮಿ 2 ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಈ ವೇಳೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ರೈತರ ಹೆಸರಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಎಚ್‌ಡಿಕೆ, ತಮ್ಮ ಅವಧಿಯಲ್ಲಿ ರೈತರ ನೆರವಿಗೆ ನಿಂತರು.


‘ಜನತಾ ದರ್ಶನ’ದ ಮೂಲಕ ಜನರ ಅಹವಾಲು ಸ್ವೀಕಾರ


ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಜಾರಿಗೆ ತಂದ ಜನತಾ ದರ್ಶನ ಎಂಬ ಪರಿಕಲ್ಪನೆಯನ್ನು ಎಚ್‌ಡಿಕೆ ಜನಪ್ರಿಯಗೊಳಿಸಿದರು. ಮೊದಲೆಲ್ಲ ಜನರು ಸಿಎಂ ಬಳಿ ಸಮಸ್ಯೆ ಹೇಳಲು ಕಷ್ಟಪಡುತ್ತಿದ್ದರು. ಆದರೆ ಎಚ್‌ಡಿಕೆ ತಮ್ಮ ಮುಖ್ಯಮಂತ್ರಿಗಳ ನಿವಾಸದಲ್ಲಿ ಜನತಾ ದರ್ಶನ ನಡೆಸಿ, ಜನರ ಸಮಸ್ಯೆ ಕೇಳುತ್ತಿದ್ದರು, ಅಹವಾಲು ಸ್ವೀಕರಿಸುತ್ತಿದ್ದರು. ಜನತಾದರ್ಶನದ ಮೂಲಕ ಕರ್ನಾಟಕದ ಜನತೆಗೆ ತಮ್ಮ ಕುಂದುಕೊರತೆಗಳನ್ನು ಅಧಿಕಾರದಲ್ಲಿರುವ ಸರಕಾರಕ್ಕೆ ತಿಳಿಸಲು ಅವಕಾಶ ಕಲ್ಪಿಸಿದರು. ಈ ಘಟನೆಯು ರಾಜ್ಯದಾದ್ಯಂತ ಜನರು ಪರಿಹಾರಗಳನ್ನು ಹುಡುಕುವಂತೆ ಮಾಡಿತು.


ಗ್ರಾಮ ವಾಸ್ತವ್ಯದ ರೂವಾರಿ


ಜನತಾ ದರ್ಶನ ಯಶಸ್ವಿಯಾಗುತ್ತಿದ್ದಂತೆ ಎಚ್‌ಡಿಕೆ ಮತ್ತೊಂದು ಯೋಜನೆಗೆ ಮುನ್ನುಡಿ ಬರೆದರು. ಅದುವೇ ಗ್ರಾಮ ವಾಸ್ತವ್ಯ. ಹಳ್ಳಿಗಳಲ್ಲಿ ನೆಲೆಸಿರುವ ಜನರಿಗೆ, ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಭರವಸೆಯಲ್ಲಿ ಬೆಂಗಳೂರಿಗೆ ಪ್ರವಾಸ ಮಾಡುವುದು ಅವರ ಈಗಾಗಲೇ ಕಷ್ಟಕರವಾದ ಜೀವನಕ್ಕೆ ತುಂಬಾ ಆರ್ಥಿಕ ಹೊರೆಯಾಗಿದೆ. ಹೀಗಾಗಿ ಸಿಎಂ ಅವರೇ ಹಳ್ಳಿ ಕಡೆ ತೆರಳಿ. ಅವರದ್ದೇ ಮನೆಗಳಲ್ಲಿ ಜನರನ್ನು ಭೇಟಿ ಮಾಡಲು ಗ್ರಾಮ ವಾಸ್ತವ್ಯದ ಕಲ್ಪನೆ ಜಾರಿಗೆ ತಂದರು.


ಜನರ ಸಮಸ್ಯೆಗಳಿಗೆ ಸ್ಪಂದನೆ


ಅವರು ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಹಲವಾರು ಮನೆಗಳು ಮತ್ತು ಹಳ್ಳಿಗಳಿಗೆ ಭೇಟಿ ನೀಡಿದರು. ಜನತಾದರ್ಶನದ ಮೂಲಕ ನೇರ ಸಂಪರ್ಕ ಮತ್ತು ಇಮೇಲ್ ಮೂಲಕ ಜನರ ಕುಂದುಕೊರತೆಗಳನ್ನು ಸ್ವೀಕರಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ತಮಗೆ ಸಾಧ್ಯವಾದಷ್ಟು ಕುಂದುಕೊರತೆಗಳನ್ನು ನಿವಾರಿಸಿದರು.


ಎಚ್‌ಡಿಕೆ ಸುತ್ತ ಹಲವು ವಿವಾದಗಳು


ರೈತನಾಯಕ, ಜನಸಾಮಾನ್ಯರ ಸಿಎಂ ಅಂತಾನೇ ಕರೆಸಿಕೊಂಡ ಎಚ್‌ಡಿ ಕುಮಾರಸ್ವಾಮಿ ಹಲವು ವಿವಾದಗಳಲ್ಲಿ ಸಿಲುಕಿಕೊಂಡರು. ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪ ಕುಮಾರಸ್ವಾಮಿ ಮೇಲಿತ್ತು. ಕಿಕ್‌ಬ್ಯಾಕ್‌ಗೆ ಬದಲಾಗಿ ಅವರು ಈ ಕಂಪನಿಗಳಿಗೆ ಗಣಿಗಾರಿಕೆ ಪರವಾನಗಿಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಲೋಕಾಯುಕ್ತ ವರದಿ ಬಳಿಕ ಹಗರಣ ಬೆಳಕಿಗೆ ಬಂದಿದ್ದು, ಕುಮಾರಸ್ವಾಮಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಟೀಕೆ ವ್ಯಕ್ತವಾಗಿತ್ತು.


ಭೂ ಹಗರಣದಲ್ಲಿ ಆರೋಪ


2011ರಲ್ಲಿ ಬೆಂಗಳೂರಿನಲ್ಲಿ ನಡೆದ ಭೂ ಹಗರಣದಲ್ಲಿ ಕುಮಾರಸ್ವಾಮಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಡವರಿಗಾಗಿ ಇರುವ ಸರ್ಕಾರಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಹೆಚ್ಚಿನ ಬೆಲೆಗೆ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿಯಮಗಳನ್ನು ಉಲ್ಲಂಘಿಸಿ ವಸತಿ ಭೂಮಿಯಾಗಿ ಪರಿವರ್ತಿಸಿದ ಆರೋಪವೂ ಅವರ ಮೇಲಿತ್ತು.


ಇದನ್ನೂ ಓದಿ: Mahesh Tenginkai: ಶೆಟ್ಟರ್ ವಿರುದ್ಧ ತೊಡೆ ತಟ್ಟಿರುವ ಮಹೇಶ್ ಟೆಂಗಿನಕಾಯಿ ಯಾರು? ಮೊದಲ ಯುದ್ಧದಲ್ಲಿ ಗುರುವಿನ ವಿರುದ್ಧ ಗೆಲ್ಲುತ್ತಾರಾ?


ಬಹುಪತ್ನಿತ್ವ ವಿವಾದದಲ್ಲಿ ಎಚ್‌ಡಿಕೆ


ಎಚ್‌ಡಿ ಕುಮಾರಸ್ವಾಮಿ ಚಿತ್ರನಟಿ ರಾಧಿಕಾ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವಿಚಾರ ರಾಜ್ಯದಲ್ಲಿ ಕೋಲಾಹಲಕ್ಕೆ ಕಾರಣವಾಯ್ತು. ರಾಧಿಕಾ ತಮ್ಮ ಪುತ್ರಿ ಜೊತೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡು, ಎಚ್‌ಡಿಕೆ ಜೊತೆಗಿನ ಸಂಬಂಧದ ಬಗ್ಗೆ ಬಾಯ್ಬಿಟ್ಟರು. ಅತ್ತ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಚ್‌ಡಿಕೆ, ಮದುವೆ, ಸಂಬಂಧದ ವಿಚಾರದಲ್ಲಿ ನಾನು ತಪ್ಪು ಮಾಡಿದ್ದಾಗಿ ಒಪ್ಪಿಕೊಂಡರು.

First published: