• ಹೋಂ
  • »
  • ನ್ಯೂಸ್
  • »
  • Explained
  • »
  • Laxman Savadi: ಸವದಿ ಸಿಟ್ಟು, ಡಿಕೆ ಡೈನಾಮೈಟ್‌, ಸಾಹುಕಾರ್‌ಗೆ ಸ್ಕೆಚ್‌! ಕುಂದಾನಗರಿ ಕೊತ ಕೊತ!

Laxman Savadi: ಸವದಿ ಸಿಟ್ಟು, ಡಿಕೆ ಡೈನಾಮೈಟ್‌, ಸಾಹುಕಾರ್‌ಗೆ ಸ್ಕೆಚ್‌! ಕುಂದಾನಗರಿ ಕೊತ ಕೊತ!

ಸವದಿ-ಡಿಕೆಶಿ ಲೆಕ್ಕಾಚಾರವೇನು?

ಸವದಿ-ಡಿಕೆಶಿ ಲೆಕ್ಕಾಚಾರವೇನು?

ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದರ ಹಿಂದಿನ ಉದ್ದೇಶ ಏನು? 'ಸಾಹುಕಾರ'ನಿಗೆ ಡೈನಮೈಟ್ ಇಟ್ರಾ 'ಕನಕಪುರ ಬಂಡೆ'? ಇಲ್ಲಿದೆ ಓದಿ ಇಂಟ್ರೆಸ್ಟಿಂಗ್ ಸ್ಟೋರಿ…

  • News18 Kannada
  • 4-MIN READ
  • Last Updated :
  • Belgaum, India
  • Share this:

    ಲಕ್ಷ್ಮಣ್ ಸಂಗಪ್ಪ ಸವದಿ (Laxman Sangappa Savadi)… ಸದ್ಯ ಕಳೆದೊಂದು ವಾರದಿಂದ ರಾಜ್ಯ ರಾಜಕಾರಣದಲ್ಲಿ (State Politics) ಹೆಚ್ಚು ಸದ್ದು ಮಾಡ್ತಿರೋ ಹೆಸರು. ಭಾರತೀಯ ಜನತಾ ಪಕ್ಷದ (BJP) ಪ್ರಭಾವಿ ರಾಜಕಾರಣಿ, ಲಿಂಗಾಯತ (Lingayat) ಸಮುದಾಯದ ಪ್ರಬಲ ನಾಯಕ, ಬೆಳಗಾವಿ (Belagavi) ಭಾಗದಲ್ಲಿ ತನ್ನದೇ ಪ್ರಭಾವ ಹೊಂದಿರೋ ರಾಜಕಾರಣಿ. ಆದ್ರೆ ಈಗ ಲಕ್ಷ್ಮಣ ಸವದಿ ಬಿಜೆಪಿ ಪಕ್ಷವನ್ನೇ ತೊರೆದಿದ್ದಾರೆ. ಕಾರಣ ಸವದಿಗೆ ಕೈ ತಪ್ಪಿರುವ ಅಥಣಿ (Athani) ಟಿಕೆಟ್‌! ಇದೀಗ ಕಮಲ ತೊರೆದು ಕೈ ಹಿಡಿದಿರುವ ಲಕ್ಷ್ಮಣ ಸವದಿ, ಗೋಕಾಕ್ ಸಾಹುಕಾರನ ವಿರುದ್ಧ ದೊಡ್ಡ ಪ್ಲಾನ್ ಮಾಡಿದ್ದಾರೆ! ಹಾಗಿದ್ರೆ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದರ ಹಿಂದಿನ ಉದ್ದೇಶ ಏನು? ಸಾಹುಕಾರನಿಗೆ ಡೈನಮೈಟ್ ಇಟ್ರಾ ಕನಕಪುರ ಬಂಡೆ? ಇಲ್ಲಿದೆ ಓದಿ ಇಂಟ್ರೆಸ್ಟಿಂಗ್ ಸ್ಟೋರಿ…


    ‘ಕಮಲ’ ಬಿಟ್ಟು ‘ಕೈ’ ಹಿಡಿದ ಸವದಿ!


    ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿಯಿದೆ. ಅಥಣಿಯಿಂದ ಮಹೇಶ್‌ ಕುಮಟಳ್ಳಿಗೆ ಟಿಕೆಟ್ ನೀಡಿರುವ ಬಿಜೆಪಿ ಹೈಕಮಾಂಡ್, ಲಕ್ಷ್ಮಣ ಸವದಿಗೆ ಶಾಕ್ ಕೊಟ್ಟಿತ್ತು. ಅಥಣಿ ಟಿಕೆಟ್‌ ಮಹೇಶ್ ಕುಮಟಳ್ಳಿ ಪಾಲಾಗ್ತಿದ್ದಂತೆ ಸವದಿಯನ್ನ ಕೆರಳಿ ಕೆಂಡವಾಗಿಸಿದೆ. ಅಥಣಿ ಟಿಕೆಟ್‌ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಸವದಿಗೆ ಟಿಕೆಟ್ ಕೈ ತಪ್ಪಿದ್ದು, ಕೊತ ಕೊತ ಕುದಿತಿದ್ದಾರೆ. ಹೀಗಾಗಿ ಸ್ವಪಕ್ಷದವರ ವಿರುದ್ಧವೇ ಸಿಡಿದೆದ್ದಿರುವ ಸವದಿ, ಪಕ್ಷದಿಂದ ಹೊರ ನಡೆದಿದ್ದಾರೆ. ಬಿಜೆಪಿಗೆ ಗುಡ್ ಬೈ ಹೇಳಿ, ಕಾಂಗ್ರೆಸ್‌ ಕೈ ಹಿಡಿದಿದ್ದಾರೆ. ಆ ಮೂಲಕ ತಮಗೆ ಟಿಕೆಟ್‌ ನಿರಾಕರಿಸಿ ಮೂಲೆಗುಂಪು ಮಾಡಿದ ರಾಜ್ಯ ಬಿಜೆಪಿ ನಾಯಕರಿಗೂ, ಹೈಕಮಾಂಡ್‌ಗೂ ಸವದಿ ಖಡಕ್ ಸಂದೇಶವನ್ನೇ ರವಾನಿಸಿದ್ದಾರೆ.




    ಬೆಳಗಾವಿಯಲ್ಲಿ ಕಮಲ ತಳಮಳ!


    ಸದ್ಯ ಬೆಳಗಾವಿಯಲ್ಲಿ ಪ್ರಬಲ ಲಿಂಗಾಯತ ಮುಖಂಡರಾಗಿದ್ದ ಸುರೇಶ್ ಅಂಗಡಿ, ಉಮೇಶ್ ಕತ್ತಿಯೂ ಈಗಿಲ್ಲ. ಈಗ ಸವದಿ ಕೂಡಾ ಬಿಜೆಪಿಯಿಂದ ಹೊರ ಬಂದಿರೋದು ಕಮಲ ಪಾಳಯಕ್ಕೆ ಭಾರೀ ಹೊಡೆತ ಕೊಡುವ ಸಾಧ್ಯತೆ ಇದೆ. ಈ ಹೊತ್ತಲ್ಲಿ ತಂತ್ರ ಪ್ರಯೋಗಕ್ಕೆ ಡಿಕೆಶಿ ಸಜ್ಜಾಗಿದ್ದಾರೆ.


    ಇದನ್ನೂ ಓದಿ: Laxman Savadi: ಬಿಜೆಪಿ ವಿರುದ್ಧ ಸಮರ ಸಾರಿರುವ ಲಕ್ಷ್ಮಣ ಸವದಿ ಯಾರು? ಪ್ರಭಾವಿ ನಾಯಕನ ರಾಜಕೀಯ ಏಳುಬೀಳು ಹೇಗಿತ್ತು?


    ‘ಗೋಕಾಕ್ ಸಾಹುಕಾರ್‌’ಗೆ ಸ್ಕೆಚ್‌
    ಸವದಿ ಅಸಮಾಧಾನ ಸ್ಫೋಟಗೊಳ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ದಾಳ ಉರುಳಿಸಿದ್ದಾರೆ. ಸವದಿಗೆ ಗಾಳ ಹಾಕಿ ಪಕ್ಷಕ್ಕೆ ಸೆಳೆದಿದ್ದಾರೆ. ಡಿಕೆ ಶಿವಕುಮಾರ್‌ ಈ ಆಟದ ಹಿಂದೆ ಎರಡು ತಂತ್ರವಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ರಣತಂತ್ರವಿದೆ.


    ಡೈನಮೈಟ್‌ ಇಟ್ಟ ಡಿಕೆಶಿ!


    ಸದ್ಯ ರಾಜ್ಯ ರಾಜಕಾರಣದಲ್ಲಿ ಡಿಕೆ ಶಿವಕುಮಾರ್ ಹಾಗೂ ರಮೇಶ್‌ ಜಾರಕಿಹೊಳಿ ಬದ್ಧವೈರಿಗಳಂತಿದ್ದಾರೆ. ಹೇಳಿ ಕೇಳಿ ಅಥಣಿ ಟಿಕೆಟ್ ಗಿಟ್ಟಿಸಿಕೊಂಡಿರೋ ಮಹೇಶ್ ಕುಮಟಳ್ಳಿ ರಮೇಶ್‌ ಜಾರಕಿಹೊಳಿ ಆಪ್ತ.. ಸವದಿ ವಿರುದ್ಧದ ಟಿಕೆಟ್ ಗುದ್ದಾಟದಲ್ಲಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ಕೊಡಿಸಿ ರಮೇಶ್‌ ಗೆದ್ದು ಬೀಗಿದ್ದಾರೆ. ಹೀಗಾಗಿ ರಮೇಶ್ ಜಾರಕಿಹೊಳಿ ಮೇಲೆ ಸವದಿಗೆ ಸಿಟ್ಟಿದೆ. ಇದನ್ನೇ ಅಸ್ತ್ರಮಾಡಿಕೊಂಡಿರುವ ಬಂಡೆ ಡಿಕೆ ಶಿವಕುಮಾರ್‌ ಬೆಳಗಾವಿ ಬಿಜೆಪಿಯನ್ನೇ ಛಿದ್ರ ಮಾಡಲು ಡೈನಾಮೈಟ್ ಇಟ್ಟಿದ್ದಾರೆ.


    ಜಾರಕಿಹೊಳಿ-ಕುಮಟಳ್ಳಿಗೆ ಪಾಠ ಕಲಿಸೋ ಪ್ಲಾನ್


    ಸವದಿಯನ್ನ ಕಾಂಗ್ರೆಸ್‌ಗೆ ಸೇರಿಸಿಕೊಂಡು ರಮೇಶ್ ಜಾರಕಿಹೊಳಿಯ ಪ್ರಾಬಲ್ಯವನ್ನೂ ಕುಗ್ಗಿಸುವ ಪ್ರಯತ್ನದಲ್ಲಿದ್ದಾರೆ. ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ವಿರುದ್ಧ ಸವದಿ ನಿಲ್ಲಿಸಿ ಗೆಲ್ಲಿಸಬೇಕು. ಕುಮಟಳ್ಳಿ ಸೋಲಿಸಿ ಸಾಹುಕಾರ್‌ಗೆ ಮುಖಭಂಗ ಮಾಡ್ಬೇಕು. ಮೈತ್ರಿ ಸರ್ಕಾರ ಬೀಳಿಸಿದ, ಕಾಂಗ್ರೆಸ್‌ಗೆ ಕೈಕೊಟ್ಟಿದ್ದ ಕುಮಟಳ್ಳಿಗೂ ಪಾಠ ಕಲಿಸಬೇಕು. ಆ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗೆ ಗುರಿಯಿಟ್ಟಿದ್ದಾರೆ ಡಿಕೆ ಶಿವಕುಮಾರ್‌.


    ಸವದಿಯಿಂದ ಕಾಂಗ್ರೆಸ್‌ಗೆ ಏನು ಲಾಭ?
    ಬೆಳಗಾವಿಯ ಕೆಲ ಭಾಗಗಳಲ್ಲಿ ಲಕ್ಷ್ಮಣ ಸವದಿಯ ಹಿಡಿತವಿದೆ. ಅಥಣಿ, ಕಾಗವಾಡ, ರಾಯಭಾಗ, ಕುಡಚಿಯಲ್ಲಿ ಸವದಿ ಪ್ರಭಾವವಿದೆ. ಸವದಿ ಕಾಂಗ್ರೆಸ್‌ಗೆ ಬಂದಿರೋದ್ರಿಂದ ಬೆಳಗಾವಿ ಭಾಗದಲ್ಲಿ ಬಿಜೆಪಿ ವೀಕ್ ಆಗುತ್ತೆ. ಪಕ್ಷಕ್ಕೆ ನಿಷ್ಟನಾಗಿದ್ದ ಸವದಿಗೆ ಮೋಸ ಮಾಡಿದ ಕಳಂಕವೂ ಬಿಜೆಪಿ ಮೇಲಾಗುತ್ತೆ. ಸವದಿ ಜೊತೆ ಇನ್ನೂ ಕೆಲ ಅಸಮಾಧಾನಿತ ಬಿಜೆಪಿ ಮುಖಂಡರು ಕೈ ಹಿಡಿಯೋ ಸಂಭವವಿದೆ. ಇದಿಷ್ಟೇ ಅಲ್ಲದೇ ಉತ್ತರ ಕರ್ನಾಟಕದಲ್ಲಿರುವ ಘಟಾನುಘಟಿ ಬಿಜೆಪಿ ನಾಯಕರರಿಗೂ ಕಾಂಗ್ರೆಸ್ ಗಾಳ ಹಾಕ್ತಿದೆ ಎಂಬ ಮಾಹಿತಿಯೂ ಇದೆ. ಲಕ್ಷ್ಮಣ ಸವದಿಯವರನ್ನೇ ಮುಂದಿಟ್ಟುಕೊಂಡು ಬೆಳಗಾವಿ ಭಾಗದ ಅಗ್ರ ನಾಯಕರನ್ನ ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ತಂತ್ರವೂ ನಡೀತಿದೆ.


    ಬಿಜೆಪಿ ಅತೃಪ್ತರಿಗೆ ಕಾಂಗ್ರೆಸ್ ಗಾಳ


    ಈಗಾಗಲೇ ಟಿಕೆಟ್ ಸಿಗದಿದ್ದಕ್ಕೆ ಬಂಡೆದ್ದಿರುವ ಕೆಲ ಕಮಲಕಲಿಗಳು ಸಿದ್ದರಾಮಯ್ಯ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಬಂದ್ರೆ ಅದರಿಂದಾಗುವ ಲಾಭ ಅಧಿಕ. ಯಾಕಂದ್ರೆ ಸವದಿ ಕೇವಲ ಬೆಳಗಾವಿಗೆ ಮಾತ್ರ ಸೀಮಿತವಾಗದೇ ಇಡೀ ರಾಜ್ಯದಲ್ಲೂ ಪ್ರಭಾವ ಬೀರಬಲ್ಲ ನಾಯಕ. ಪಕ್ಕದ ವಿಜಯಪುರ, ಬಾಗಲಕೋಟೆಯಲ್ಲೂ ಸವದಿ ಪ್ರಭಾವವಿದೆ. ಸಹಕಾರ ಸಚಿವರಾಗಿಯೂ ಅನುಭವವಿರೋ ಸವದಿಗೆ ಹೆಚ್ಚು ಜನಸಂಪರ್ಕವೂ ಇದೆ. ಒಟ್ಟಾರೆ ಸವದಿ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಆನೆಬಲ ಬಂದಿರೋದಂತೂ ಸತ್ಯ.


    ಇದನ್ನೂ ಓದಿ: Bhavani Revanna: ಗೌಡ್ರ ಮನೆಯಲ್ಲಿ ಸೊಸೆಯ ಟಿಕೆಟ್ ಗದ್ದಲ! ಭವಾನಿ ವಿಚಾರಕ್ಕೆ ಎಚ್‌ಡಿಕೆ-ರೇವಣ್ಣ ಸಂಘರ್ಷ!


    ಬೆಳಗಾವಿಯಲ್ಲಿ ಜಾರಕಿಹೊಳಿ v/s ಸವದಿ!


    ಲಕ್ಷ್ಣಣ್ ಸವದಿ ಕಾಂಗ್ರೆಸ್ ಸೇರ್ತಿದ್ದಂತೆ ಈ ಬಾರಿಯ ಚುನಾವಣೆಯಲ್ಲಿ ಬೆಳಗಾವಿ ಅಖಾಡದ ಚಿತ್ರಣವೇ ಬದಲಾಗಿದೆ. ಶತ್ರುವಿನ ಶತ್ರು ಮಿತ್ರ ಅನ್ನೋ ಹಾಗೇ ಸವದಿ ಈಗ ಕಾಂಗ್ರೆಸ್‌ಗೆ ಸೇರ್ಕೊಂಡಿದ್ದಾರೆ. ಈ ಬಾರಿಯ ಬೆಳಗಾವಿ ರಣಕಣ ಕಾಂಗ್ರೆಸ್ ವರ್ಸಸ್ ಬಿಜೆಪಿ ಅನ್ನೋಗಿಂತಲೂ ರಮೇಶ್ ಜಾರಕಿಹೊಳಿ v/s ಲಕ್ಷ್ಮಣ್ ಸವದಿ ಅಂತ ಆದ್ರೂ ಅಚ್ಚರಿಯಿಲ್ಲ.

    top videos


      (ವರದಿ: ಹನುಮಂತ್ ಜೋಳದಾಳ, ನ್ಯೂಸ್ 18 ಕನ್ನಡ)

      First published:

      ಸುದ್ದಿ 18ಕನ್ನಡ ಟ್ರೆಂಡಿಂಗ್

      ಮತ್ತಷ್ಟು ಓದು