ಪ್ರತಿ ವರ್ಷ ಕಾರ್ಗಿಲ್ ವಿಜಯ (Kargil Vijay Diwas) ದಿವಸ ಅನ್ನು ಜುಲೈ 26 (July 26) ರಂದು 1999 ರಲ್ಲಿ ಆಪರೇಷನ್ ವಿಜಯ್ ಯಶಸ್ಸಿನ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಕಾರ್ಗಿಲ್ ವಿಜಯ ದಿವಸವನ್ನು ಕಾರ್ಗಿಲ್ ಯುದ್ಧ ವೀರರ ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಜುಲೈ 26 ರಂದು ಆಚರಿಸಲಾಗುತ್ತದೆ. ಇದನ್ನು ಆಪರೇಷನ್ ವಿಜಯ್ ಎಂದೂ ಸಹ ಕರೆಯಲಾಗುತ್ತದೆ. 1999 ರಲ್ಲಿ, ಪಾಕಿಸ್ತಾನವು (Pakistan) ಆಕ್ರಮಿಸಿಕೊಂಡಿದ್ದ ಉನ್ನತ ಹುದ್ದೆಗಳನ್ನು ಭಾರತ (India) ಹಿಂತೆಗೆದುಕೊಂಡಿತು. ಕಾರ್ಗಿಲ್ ಯುದ್ಧವು (Kargil War) 60 ದಿನಗಳ ಕಾಲ ನಡೆಯಿತು ಮತ್ತು 26 ಜುಲೈ 1999 ರಂದು ಕೊನೆಗೊಂಡಿತು. ಅದಕ್ಕೆ ಜುಲೈ 16ರಂದು ಕಾರ್ಗಿಲ್ ವಿಜಯ ದಿವಸ ಆಚರಣೆ ಮಾಡಲಾಗುತ್ತೆ. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು.
ಕಾರ್ಗಿಲ್ ವಿಜಯ ದಿವಸದ ಇತಿಹಾಸವೇನು?
1971ರ ಇಂಡೋ-ಪಾಕ್ ಯುದ್ಧದ ನಂತರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಗಳು ತೀವ್ರಗೊಂಡವು. 1990 ರ ದಶಕದಲ್ಲಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಕಾರ್ಯಾಚರಣೆಗಳ ಪರಿಣಾಮವಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು. ಇದು ಕಣಿವೆಯಲ್ಲಿ ಬೆಳೆಯುತ್ತಿರುವ ಹಗೆತನದ ವಾತಾವರಣಕ್ಕೆ ಕಾರಣವಾಯಿತು.
ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಲು ಯತ್ನಿಸಿದ ಲಾಹೋರ್ ಘೋಷಣೆಗೆ ಫೆಬ್ರವರಿ 1999 ರಲ್ಲಿ ಜಮ್ಮುವಿನ ವಿವಾದಿತ ಪ್ರದೇಶಗಳ ಮೇಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಭಾರತ ಮತ್ತು ಪಾಕಿಸ್ತಾನವು ಸಹಿ ಹಾಕಿದವು. ಆದರೂ ಪಾಕಿಸ್ತಾನಿ ಸೈನ್ಯವು 1998-1999ರಲ್ಲಿ "ಮುಜಾಹಿದ್ದೀನ್" ವೇಷಧಾರಿಯಾಗಿ ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತೀಯ ಭೂಪ್ರದೇಶಕ್ಕೆ ರಹಸ್ಯವಾಗಿ ತರಬೇತಿ ನೀಡಿ ಕಳುಹಿಸಿತು.
ಭಾರತೀಯ ಸಶಸ್ತ್ರ ಪಡೆಗಳು, ಕಣಿವೆಯ ಇತರ ಭಾಗಗಳಲ್ಲಿ ಒಳನುಸುಳುವಿಕೆಗಳ ಬಗ್ಗೆ ತಿಳಿದ ನಂತರ ದಾಳಿಯನ್ನು ಹೆಚ್ಚು ದೊಡ್ಡ ಪ್ರಮಾಣದಲ್ಲಿ ಯೋಜಿಸಲಾಗಿದೆ ಎಂಬ ತೀರ್ಮಾನಕ್ಕೆ ಬಂದವು. ಭಾರತ ಸರ್ಕಾರವು ಆಪರೇಷನ್ ವಿಜಯ್ ಅನ್ನು ಪ್ರಾರಂಭಿಸಿತು ಮತ್ತು ಎಲ್‍ಓಸಿ ಮತ್ತು ಲಾಹೋರ್ ಒಪ್ಪಂದದ ನಿಬಂಧನೆಗಳ ತಿರಸ್ಕಾರದ ಉಲ್ಲಂಘನೆಗಳಿಗೆ ಪ್ರತಿಕ್ರಿಯೆಯಾಗಿ ಕಣಿವೆಯಲ್ಲಿ 2,00,000 ಭಾರತೀಯ ಸೈನಿಕರನ್ನು ನಿಯೋಜಿಸಿತು. 1999 ರಲ್ಲಿ ಯುದ್ಧವು ಕೊನೆಗೊಂಡಿತು ಮತ್ತು 527 ಭಾರತೀಯ ಸೈನಿಕರು ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ.
ಭಾರತೀಯ ವೀರರ ಸ್ಮರಣೆ
ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಭಾರತೀಯ ವೀರರನ್ನು ಸ್ಮರಿಸಲು ಕಾರ್ಗಿಲ್ ವಿಜಯ ದಿವಸವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. 1999 ರಲ್ಲಿ ಪಾಕಿಸ್ತಾನಿ ಪಡೆಗಳು ಆಕ್ರಮಿಸಿಕೊಂಡಿದ್ದ ಪರ್ವತ ಪ್ರದೇಶಗಳ ಮೇಲೆ ಭಾರತೀಯ ಸೈನಿಕರು ಹಿಡಿತ ಸಾಧಿಸಿದಾಗ ಕಾರ್ಗಿಲ್ ಯುದ್ಧವು ಕೊನೆಗೊಂಡಿತು. ಪ್ರತಿ ವರ್ಷ ಭಾರತದ ಪ್ರಧಾನ ಮಂತ್ರಿಗಳು ನವದೆಹಲಿಯ ಇಂಡಿಯಾ ಗೇಟ್‍ನ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ.
ದೇಶಾದ್ಯಂತ ವಿವಿಧ ಕಾರ್ಯಕ್ರಮ
ದೇಶವನ್ನು ಸುರಕ್ಷಿತವಾಗಿಡಲು ಮತ್ತು ಬಾಹ್ಯ ಶಕ್ತಿಗಳಿಂದ ರಕ್ಷಿಸಲು ಭಾರತೀಯ ಸೇನೆಯ ಕೊಡುಗೆಯನ್ನು ಆಚರಿಸಲು, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಸ್ಮಾರಕ ಸೇವೆಗೆ ಹುತಾತ್ಮರ ಕುಟುಂಬ ಸದಸ್ಯರನ್ನೂ ಸ್ವಾಗತಿಸಲಾಗುತ್ತದೆ. ಈ ವರ್ಷ ಕಾರ್ಗಿಲ್ ವಿಜಯ ದಿವಸದ 23 ನೇ ವಾರ್ಷಿಕೋತ್ಸವವನ್ನು ಗುರುತಿಸುವುದರಿಂದ, ಯುದ್ಧ ಸ್ಮಾರಕದಲ್ಲಿ ಧ್ವಜಾರೋಹಣ ಸಮಾರಂಭದ ವಿಶೇಷ ಕಾರ್ಯಕ್ರಮಗಳನ್ನು ಸಹ ಯೋಜಿಸಲಾಗಿದೆ.
ಪಾಕಿಸ್ತಾನದ ನೀಚ ಬುದ್ಧಿಯಿಂದ ಯುದ್ಧ ಆರಂಭ
ಈ ಯುದ್ಧ ನಡೆಯಲು ಪ್ರಮುಖ ಕಾರಣ ಪಾಕಿಸ್ತಾನದ ನೀಚ ಬುದ್ಧಿ. ಕಾರ್ಗಿಲ್ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನದ ಲೈನ್ ಆಫ್ ಕಂಟ್ರೋಲ್ ಇದೆ. ಆ ಪ್ರದೇಶದಲ್ಲಿ ಚಳಿಗಾಲದಲ್ಲಿ ಮೈನಸ್ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆದ ಕಾರಣ ಗಡಿ ಕಾಯುವುದು ಭಾರತಕ್ಕೆ ಸವಾಲಿನ ಕೆಲಸ. ಚಳಿಗಾಲದಲ್ಲಿ ಭಾರತೀಯ ಸೈನಿಕರು ಮತ್ತು ಪಾಕ್ ಸೈನಿಕರು ಅಲ್ಲಿಂದ ಸ್ಥಳಾಂತರಗೊಳ್ಳುತ್ತಾರೆ. ಚಳಿಗಾಲ ಮುಗಿದ ಬಳಿಕ ಇಲ್ಲಿಗೆ ಮತ್ತೆ ಗಡಿ ಕಾಯುವುದಕ್ಕೆ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿ. 1999 ರಲ್ಲಿ ಈ ಸಂದರ್ಭವನ್ನೇ ಬಳಸಿಕೊಂಡ ಪಾಕಿಸ್ತಾನ, ಕಾಶ್ಮೀರದ ಹೋರಾಟಗಾರರ ಹೆಸರಿನಲ್ಲಿ ಪಾಕ್ ಸೈನಿಕರು, ಭಾರತದ ಪ್ರಮುಖ ಭಾಗಗಳನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಅದಕ್ಕೆ ಯುದ್ಧ ಶುರುವಾಯಿತು.
ಕಾರ್ಗಿಲ್ ಯುದ್ಧದಲ್ಲಿ 527 ಭಾರತೀಯ ಯೋಧರು ಹುತಾತ್ಮ
1999, ಮೇ ತಿಂಗಳಿನಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ತಿಂಗಳ ತನಕ ನಡೆಯಿತು. ಎರಡು ತಿಂಗಳ ಕಾಲ ನಡೆದ ಯುದ್ಧದಲ್ಲಿ ಲೇಹ್ ಹೆದ್ದಾರಿಯವರೆಗೆ ನುಗ್ಗಿ ಬಂದಿದ್ದ ಪಾಕ್ ಸೇನೆಯನ್ನು ಭಾರತೀಯ ಸೇನೆ ಕೆಚ್ಚೆದೆಯಿಂದ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಈ ಯುದ್ಧದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ ಸುಮಾರು 527 ಭಾರತೀಯ ಯೋಧರು ಹುತಾತ್ಮರಾದರು.
'ಆಪರೇಷನ್ ವಿಜಯ' ಕಾರ್ಯಾಚರಣೆ
ಪಾಕಿಸ್ತಾನದ ನರಿ ಬುದ್ಧಿಯವರು ಭಾರತದ ಒಳಗೆ ಸುಮಾರುದೂರ ನುಸುಳಿ ಬಂದಿದ್ರಂತೆ. ಅದು ಭಾರತೀಯ ಯೋಧರ ಗಮನಕ್ಕೆ ಬಂದಿರಲಿಲ್ವಂತೆ. ಪಾಪಿಗಳನ್ನು ಕೆಂಡ ಕೆಲ ಸ್ಥಳೀಯರು ಯೋಧರಿಗೆ ಸುದ್ದಿ ಮುಟ್ಟಿಸಿದ್ರಂತೆ. ಆಗ ಕಾರ್ಯ ಪ್ರವೃತರಾದ ಸೇನಾಧಿಕಾರಿಗಳು, ಯೋಧರನ್ನು ಗಸ್ತು ತಿರುಗಲು ಕಳಿಸಿಕೊಟ್ಟಿದ್ರಂತೆ.
ಭಾರತೀಯ ಯೋಧರನ್ನು ಹಿಂಸೆ ನೀಡಿ ಕೊಂದರಂತೆ
ಪಾಕ್ ಸೇನೆ ಭಾರತದ ಗಸ್ತಿನಲ್ಲಿ ಹೋದ ಭಾರತೀಯ ಐದು ಯೋಧರನ್ನು ಹಿಂಸೆ ನೀಡಿ ಕೊಂದರಂತೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಭಾರತ, ಪಾಕ್‍ಗೆ ತಕ್ಕ ಪ್ರತ್ಯುತ್ತರ ನೀಡಲು ನಿರ್ಧರಿಸಿ, ಸೇನೆಯನ್ನು ಸಿದ್ಧಗೊಳಿಸಿತಂತೆ. ಇಪ್ಪತ್ತು ಸಾವಿರ ಭಾರತೀಯ ಸೈನಿಕರನ್ನ ಸಜ್ಜುಗೊಳಿಸಿ ಮೇ 3 ರಿಂದ ಆಪರೇಷನ್ ವಿಜಯ ಹೆಸರಿನಲ್ಲಿ ಕಾರ್ಯಾಚರಣೆ ಶುರು ಮಾಡಿತ್ತು.
ಆಪರೇಷನ್ 'ಸಫೇದ್ ಸಾಗರ್'
ಪಾಕಿಸ್ತಾನವು ಸಹ ಭಾರತದ ಮೇಲೆ ದಾಳಿ ಮಾಡಲು ಸಿದ್ಧತೆ ಮಾಡಿಕೊಂಡಿತ್ತಂತೆ. ಪಾಕ್ ಸುಮಾರು 5000ಕ್ಕೂ ಹೆಚ್ಚು ಸೈನಿಕರನ್ನ ಕಳುಹಿಸಿಕೊಟ್ಟಿತ್ತು. ಇದಕ್ಕೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಶಸ್ತ್ರ ಸಜ್ಜಿತವಾಗಿ ಮುನ್ನುಗ್ಗಿತ್ತು. ಎತ್ತರದ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆ ಇದ್ದರೂ ಶೆಲ್ ದಾಳಿಯ ಮೂಲಕ ಭಾರತೀಯ ಸೇನೆ ಪಾಕಿಸ್ತಾನಿಯ ಬಂಕರ್ಗಳತ್ತ ದೃಷ್ಟಿ ಇರಿಸಿತ್ತು.
ಇದನ್ನೂ ಓದಿ: President Oath: ರಾಷ್ಟ್ರಪತಿಗಳು ಜುಲೈ 25ರಂದೇ ಪ್ರಮಾಣವಚನ ಸ್ವೀಕರಿಸೋದು ಯಾಕೆ? ಈ ದಿನದ ಮಹತ್ವವೇನು?
ಭಾರತಕ್ಕೆ ಬೋಫೋರ್ಸ್ ಫಿರಂಗಿ, ವಾಯುಪಡೆಯ ಮಿಗ್-27, ಮಿಗ್-29 ಯುದ್ಧ ವಿಮಾನಗಳು ಸಾಕಷ್ಟು ಬಲ ತುಂಬಿದ್ದವು. 'ಆಪರೇಷನ್ ಸಫೇದ್ ಸಾಗರ್' ಅನ್ನು ಪ್ರಾರಂಭಿಸಿದ ಭಾರತೀಯ ಸೇನೆ, ಪಾಕಿಸ್ತಾನದ ಸೈನಿಕರ ಮೇಲೆ ದಾಳಿ ಮಾಡಲು ಇಂಡಿಯನ್ ಮಿಗ್ -21, ಮಿಗ್ -27 ಮತ್ತು ಮಿರಾಜ್ 2000 ನಂತಹ ಯುದ್ಧ ವಿಮಾನಗಳನ್ನು ಬಳಸಿತು. ಪಾಕ್ ಶತ್ರುಗಳನ್ನು ನಿರ್ಮೂಲನೆ ಮಾಡಲು ಐಎಎಫ್ ಯೋಧರು ಈ ವಿಮಾನಗಳಿಂದ ರಾಕೆಟ್ ಮತ್ತು ಕ್ಷಿಪಣಿಗಳನ್ನು ಹಾರಿಸಿದರು.
ಆಪರೇಷನ್ ತಲ್ವಾರ್
ತೈಲ ಮತ್ತು ಇಂಧನ ಪೂರೈಕೆಯನ್ನು ನಿಲ್ಲಿಸಲು ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಬಂದರುಗಳನ್ನು ನಿರ್ಬಂಧಿಸಲು ಭಾರತೀಯ ನೌಕಾಪಡೆ 'ಆಪರೇಷನ್ ತಲ್ವಾರ್' ಅನ್ನು ಪ್ರಾರಂಭಿಸಿತು. ಇದರಿಂದಾಗಿ ಪಾಕಿಸ್ತಾನೀಯರ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಯಶಸ್ವಿಯಾಯಿತು. ಪಾಕಿಸ್ತಾನಿಗಳನ್ನು ಬಗ್ಗು ಬಡಿದ ಭಾರತೀಯ ಸೈನಿಕರು, ಜುಲೈ 24 ರಂದು ಪಾಕಿಗಳನ್ನು ಹಿಮ್ಮೆಟ್ಟಿಸಿ ಭಾರತ ಯುದ್ಧ ಗೆದ್ದಿತು. ಇದಾದ ಬಳಿಕ ಪ್ರತೀ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸವನ್ನು ಆಚರಣೆ ಮಾಡಲಾಗುತ್ತದೆ.
ಇದನ್ನೂ ಓದಿ: Vijayapura: ಸೈನಿಕನ ಸೈಕಲ್ ಯಾತ್ರೆ! ಬೆಂಗಳೂರು ಟು ಕಾರ್ಗಿಲ್ ಪಯಣ ಹೀಗಿತ್ತು ನೋಡಿ
ಕಾಶ್ಮೀರದಲ್ಲಿರುವ ಕಾರ್ಗಿಲ್ ಹಿಮಾಲಯದ ಬೆಟ್ಟಗುಡ್ಡಗಳಿಂದ ಆವೃತವಾದ ಪ್ರದೇಶ. ಕಾರ್ಗಿಲ್ ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 205 ಕಿ.ಮೀ. ದೂರದಲ್ಲಿದೆ. ಲೇಹ್ ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 1 ಕಾರ್ಗಿಲ್ ಮೂಲಕ ಹಾದು ಹೋಗುತ್ತದೆ. ಈ ಪ್ರದೇಶದಲ್ಲಿ ಇರುವ ಏಕೈಕ ಹೆದ್ದಾರಿ ಇದಾಗಿದೆ. ಅಲ್ಲದೆ ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್‍ಗೂ ಸಂಪರ್ಕ ಕಲ್ಪಿಸುತ್ತದೆ ಈ ಹೆದ್ದಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ