• ಹೋಂ
  • »
  • ನ್ಯೂಸ್
  • »
  • Explained
  • »
  • 1983 World Cup: ಭಾರತದ ಚೊಚ್ಚಲ 'ವಿಶ್ವ' ಗೆಲುವಿಗೆ 39 ವರ್ಷ! ಪ್ರತಿ ಭಾರತೀಯರ ಎದೆಯಲ್ಲೂ ಆ ಹೆಮ್ಮೆಯ ಕ್ಷಣ ಜೀವಂತ

1983 World Cup: ಭಾರತದ ಚೊಚ್ಚಲ 'ವಿಶ್ವ' ಗೆಲುವಿಗೆ 39 ವರ್ಷ! ಪ್ರತಿ ಭಾರತೀಯರ ಎದೆಯಲ್ಲೂ ಆ ಹೆಮ್ಮೆಯ ಕ್ಷಣ ಜೀವಂತ

1983ರ ವಿಶ್ವಕಪ್ ಗೆದ್ದ ಕ್ಷಣ

1983ರ ವಿಶ್ವಕಪ್ ಗೆದ್ದ ಕ್ಷಣ

ಜೂನ್ 25, 1983, ಭಾರತೀಯ ಕ್ರಿಕೆಟ್‌ (Cricket) ಇತಿಹಾಸದಲ್ಲಿ ಎಂದಿಗೂ ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಒಂದು ದಿನ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ (World Cup) ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ (Kapil Dev) ನೇತೃತ್ವದ ಭಾರತ ಕ್ರಿಕೆಟ್ ತಂಡ (Team India) ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು.

ಮುಂದೆ ಓದಿ ...
  • Share this:

ಜೂನ್ 25, 1983, ಭಾರತೀಯ ಕ್ರಿಕೆಟ್‌ (Cricket) ಇತಿಹಾಸದಲ್ಲಿ ಎಂದಿಗೂ ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಒಂದು ದಿನ. ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ (World Cup) ಫೈನಲ್ ಪಂದ್ಯದಲ್ಲಿ ಕಪಿಲ್ ದೇವ್ (Kapil Dev) ನೇತೃತ್ವದ ಭಾರತ ಕ್ರಿಕೆಟ್ ತಂಡ (Team India) ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದು ಹೊಸ ಇತಿಹಾಸ ಸೃಷ್ಟಿಸಿತು. ಮೂರನೇ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಜಯಿಸಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಕಪಿಲ್ ಬಳಗ ಟ್ರೋಫಿ ಜಯಿಸಿ ಕ್ರಿಕೆಟ್ ಜಗತ್ತನ್ನು ನಿಬ್ಬೆರಗಾಗಿಸಿತ್ತು. ಈ ಅವಿಸ್ಮರಣೀಯ ಗೆಲುವಿಗೆ ಇಂದು ಬರೋಬ್ಬರಿ 39 ವರ್ಷ. ಭಾರತ ತಂಡ ವಿಶ್ವಕಪ್‌ ಆಡಲು ಇಂಗ್ಲೆಂಡ್‌ಗೆ ತೆರಳಿದಾಗ ವಿಶ್ವಕಪ್‌ ಪ್ರಶಸ್ತಿಯೊಂದಿಗೆ ಮರಳುತ್ತದೆ ಎಂದು ಯಾರೂ ಸಹ ನಿರೀಕ್ಷಿಸಿರಲಿಲ್ಲ. ವೆಸ್ಟ್ ಇಂಡೀಸ್ ತಂಡ ಮೊದಲ ಎರಡು ವಿಶ್ವಕಪ್‌ಗಳಲ್ಲಿ ಚಾಂಪಿಯನ್ ಆಗಿತ್ತು. ಭಾರತವು ಕಡಿಮೆ ಸ್ಕೋರ್‌ಗಳ ಅಂತಿಮ ಪಂದ್ಯದಲ್ಲಿ ತಾರಾಬಳಗದ ಕೆರಿಬಿಯನ್ ತಂಡವನ್ನು 43 ರನ್‌ಗಳಿಂದ ಸೋಲಿಸಿ ಹೊಸ ಇತಿಹಾಸ ನಿರ್ಮಿಸಿತು.


ಇತಿಹಾಸ ಒಂದು ಮೆಲುಕು:


ತಂಡವು ಪಂದ್ಯಾವಳಿಯ ಸಮಯದಲ್ಲಿ ನಿರೀಕ್ಷೆಯ ವಿರುದ್ಧ ಬೆರಗುಗೊಳಿಸುವ ಪ್ರದರ್ಶನ ನೀಡಿತು. ಟೀಂ ಇಂಡಿಯಾ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್‌ನಂತಹ ದಿಗ್ಗಜ ತಂಡಗಳನ್ನು ಒಂದರ ಹಿಂದೆ ಒಂದರಂತೆ ಸೋಲಿಸಿತು. ಕುತೂಹಲಕಾರಿಯಾಗಿ, ಭಾರತ ತಂಡ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಅನ್ನು ಸೋಲಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಿತು.


ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಯಶಪಾಲ್ ಶರ್ಮಾ 89 ರನ್ ಗಳಿಸಿದ್ದು, ಭಾರತ ತಂಡ 262 ರನ್ ಗಳಿಸಲು ಸಹಾಯಕವಾಯಿತು. ಆಗ ಪಂದ್ಯಗಳು 60 ಓವರ್‌ಗಳದ್ದಾಗಿದ್ದವು. ಉತ್ತರವಾಗಿ ವೆಸ್ಟ್ ಇಂಡೀಸ್ ತಂಡ ಕೇವಲ 228 ರನ್ ಗಳಿಸಲಷ್ಟೇ ಶಕ್ತವಾಯಿತು. ರವಿಶಾಸ್ತ್ರಿ ಅದ್ಭುತ ಬೌಲಿಂಗ್‌ನಲ್ಲಿ ಕೇವಲ 26 ರನ್ ನೀಡಿ 3 ವಿಕೆಟ್ ಪಡೆದರು.


ಇದನ್ನೂ ಓದಿ: Virat Kohli: ಕೊಹ್ಲಿ VS ಬಾಬರ್, ಪಾಕ್ ಆಟಗಾರನ ದಾಖಲೆ ಮುರಿಯುತ್ತಾರಾ ವಿರಾಟ್?


ಸೆಮಿಸ್​ನಲ್ಲಿ ಅಬ್ಬರಿಸಿದ ಭಾರತೀಯ ಹುಲಿಗಳು:


ಹೌದು, ಲೀಗ್​ ಹಂತದಲ್ಲಿ ಏಳು ಬೀಳುಗಳ ನಂತರ ಟೀಂ ಇಂಡಿಯಾ ಸೇಮಿಸ್ ಹಂತಕ್ಕೆ ಲಗ್ಗೆ ಇಟ್ಟಿತು. ಎಲ್ಲರೂ ಸಹ ಇದೇ ದೊಡ್ಡ ವಿಷ್ಯ ಎಂಬಂತೆ ಸಂಬ್ರಮಿಸಿದರು. ಆದರೆ ಕೆಲವರು ಭಾರತ ತಂಡ ಇಷ್ಟಾದರೂ ಆಟವಾಡಿತಲ್ಲ ಸಾಕು ಎಂದು ಹೇಳಿದವರೂ ಇದ್ದರು. ಆದರೆ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ಭಾರತವನ್ನು ಸುಲಭವಾಗಿ ಸೋಲಿಸುತ್ತದೆ ಎಂಬ ಮಾತುಗಳು ಹೆಚ್ಚಾಗಿದ್ದವು. ಇಂಗ್ಲೆಂಡ್ ನಾಲ್ಕು ವರ್ಷಗಳ ಹಿಂದೆ 1979 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಫೈನಲ್ ಆಡಿತ್ತು.


ಈ ಬಾರಿಯೂ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ ಎಂದು ಜನರು ನಿರೀಕ್ಷಿಸಿದ್ದರು. ಆಗ ಇಂಗ್ಲೆಂಡ್ ನೆಲದಲ್ಲಿ ಆಂಗ್ಲರ ವಿರುದ್ಧ ಐದು ಪಂದ್ಯಗಳನ್ನು ಆಡಿದ್ದ ಭಾರತ ಪ್ರತಿ ಬಾರಿಯೂ ಸೋಲನ್ನು ಎದುರಿಸಬೇಕಾಗಿತ್ತು. ಆದರೆ ಮೊಹಿಂದರ್ ಅಮರನಾಥ್ ಅವರ ಆಲ್ ರೌಂಡರ್ ಪ್ರದರ್ಶನದಿಂದಾಗಿ ಭಾರತ 6 ವಿಕೆಟ್ ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು.


ರೋಚಕ ತಿರುವು ಪಡೆದ ಫೈನಲ್ ಪಂದ್ಯ:


ಭಾರತ ತಂಡ ಫೈನಲ್‌ನಲ್ಲಿ ಕೇವಲ 183 ರನ್‌ಗಳಿಗೆ ಕುಸಿಯಿತು. ವೆಸ್ಟ್ ಇಂಡೀಸ್ ತಂಡದಲ್ಲಿ ಗಾರ್ಡನ್ ಗ್ರೀನಿಡ್ಜ್, ಡೆಸ್ಮಂಡ್ ಹೇನ್ಸ್, ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್ ಮತ್ತು ಲಾರಿ ಗೋಮ್ಸ್ ಅವರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳಿದ್ದರು. ಕೆರಿಬಿಯನ್ ತಂಡ ಒಂದು ಸಮಯದಲ್ಲಿ ಎರಡು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತ್ತು ಮತ್ತು ರಿಚರ್ಡ್ಸ್ 27 ಎಸೆತಗಳಲ್ಲಿ 33 ರನ್ ಗಳಿಸಿದ್ದರು.


ಅದೇ ವೇಳೆ ರಿಚರ್ಡ್ಸ್ ಸನ್, ಮದನ್‌ಲಾಲ್ ಎಸೆತದಲ್ಲಿ ಲೆಗ್ ಸೈಡ್‌ನಲ್ಲಿ ಸಿಕ್ಸರ್ ಬಾರಿಸಿದರು, ಆದರೆ ಕಪಿಲ್ ದೇವ್  ಅವರ ಅದ್ಭುತ ಕ್ಯಾಚ್​ ನಿಂದಾಗಿ ಪಂದ್ಯದ ಗತಿಯೇ ಬದಲಾಯಿತು. ದು ರಿಚರ್ಡ್ಸ್ ಕ್ಯಾಚ್‌ಗಿಂತ ವಿಶ್ವಕಪ್ ಅನ್ನು ಹಿಡಿದಂತೆ. ಇಲ್ಲಿಂದ ಆರಂಭವಾದ ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಪತನ ನಿಲ್ಲದೆ ಇಡೀ ತಂಡ 140 ರನ್ ಗಳಿಗೆ ಆಲೌಟ್ ಆಯಿತು.


ಇದನ್ನೂ ಓದಿ: Jos Buttler: ಧೋನಿಯ 17 ವರ್ಷಗಳ ದಾಖಲೆ ಮುರಿದ ಬಟ್ಲರ್, ಇವರೇ ಈಗ ನಂಬರ್ ಒನ್!


ಎಂದಿಗೂ ಮರೆಯದ ಆ ಒಂದು ಕ್ಷಣ:


ಈ ಮೂಲಕ ಅದೆಷ್ಟೋ ಕೋಟ್ಯಾಂತರ ಭಾರತೀಯರ ಕನಸು ಅಂದು ನನಸಾಗಿತ್ತು. ಮೊದಲ ಭಾರಿಗೆ ಕಪೀಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ವಿಶ್ವವನ್ನೇ ಗೆದ್ದು ಬೀಗಿತ್ತು. ಅದೊಂದು ಅವಿಸ್ಮರಣೀಯ ಕ್ಷಣ ಇನ್ನೂ ಸಹ ಭಾರತೀಯರ ಹೃದಯದಲ್ಲಿ ಅಚ್ಚಳಿಯದಂತೆ ಉಳಿದಿದೆ. ಜೂನ್ 25, 1983 ಟೀಂ ಇಂಡಿಯಾ ವಿಶ್ವಕಪ್​ಗೆ ಮುತ್ತಿಕ್ಕುತ್ತಿದ್ದರೆ, ಇತ್ತ ನಿಧಾನವಾಗಿ ಭಾರತದಲ್ಲಿ ಕ್ರಿಕೆಟ್ ಒಂದು ಭಾರತೀಯರ ಅವಿಭಾಜ್ಯ ಕ್ರೀಡೆಯಾಗಿ ರೂಪುಗೊಳ್ಳಲಾರಂಭಿಸಿತ್ತು.


ಭಾರತದ ಕ್ರಿಕೆಟ್ ಚಿತ್ರ ಬದಲಾವಣೆಗೆ ಮುನ್ನುಡಿಯಾದ ದಿನವದು. ಆ ದಿನದ ಮೆಲುಕು ಹಾಕಿದರೆ ಭಾರತ ಕ್ರಿಕೆಟ್ ಪ್ರೇಮಿಗಳ ಮೈ ರೋಮಾಂಚನವಾಗುತ್ತದೆ. ಆಗಿನ ಕಾಲದಲ್ಲಿ ಕ್ರಿಕೆಟ್ ಸಾಮ್ರಾಜ್ಯವನ್ನಾಳುತ್ತಿದ್ದ ವಿಂಡೀಸ್ ತಂಡವನ್ನು ಭಾರತ ಮಣಿಸುತ್ತದೆ ಎಂದು ಆ ದಿನ ಯಾರು ಕೂಡ ಊಹಿಸಿರಲಿಲ್ಲ. ಆದರೆ ಕಪೀಲ್ ದೇವ್ ಎಂಬ ಆ ಒಂದು ಶಕ್ತಿ ಎಲ್ಲ ವಿಚಾರಗಳನ್ನೂ ತೆಲೆಕೆಳಗಾಗಿ ಮಾಡಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟಿದ್ದರು.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು