• Home
  • »
  • News
  • »
  • explained
  • »
  • Kantara-Oscar: ಆಸ್ಕರ್​​ಗೆ ಕ್ವಾಲಿಫೈ ಆಗೋದು ಅಂದ್ರೇನು? ಈ ಪ್ರಕ್ರಿಯೆ ನಡೆಯೋದು ಹೇಗೆ?

Kantara-Oscar: ಆಸ್ಕರ್​​ಗೆ ಕ್ವಾಲಿಫೈ ಆಗೋದು ಅಂದ್ರೇನು? ಈ ಪ್ರಕ್ರಿಯೆ ನಡೆಯೋದು ಹೇಗೆ?

ಕಾಂತಾರ ಎರಡು ಕ್ಯಾಟಗರಿಯಲ್ಲಿ ಶಾರ್ಟ್ ಲಿಸ್ಟ್!

ಕಾಂತಾರ ಎರಡು ಕ್ಯಾಟಗರಿಯಲ್ಲಿ ಶಾರ್ಟ್ ಲಿಸ್ಟ್!

ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಶಾರ್ಟ್ ಲಿಸ್ಟ್ ಆಗಿದೆ. ಸಬ್​ಮಿಟ್ ಆದ 1000 ಕ್ಕೂ ಹೆಚ್ಚು ಸಿನಿಮಾಗಳಲ್ಲಿ 301 ಚಿತ್ರಗಳು qualified ಆಗಿವೆ. ಅದರಲ್ಲಿ ಕರ್ನಾಟಕದ ಎರಡು ಸಿನಿಮಾಗಳು ಶಾರ್ಟ್ ಲಿಸ್ಟ್ ಆಗಿವೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ಕನ್ನಡದ ಕಾಂತಾರ ಆಸ್ಕರ್ ಪ್ರಶಸ್ತಿ (Kantara Oscar Story) ಪ್ರಕ್ರಿಯೆಯಲ್ಲಿ ಶಾರ್ಟ್ ಲಿಸ್ಟ್ ಆಗಿದೆ. ಸಬ್​ಮಿಟ್ ಆದ 1000ಕ್ಕೂ ಹೆಚ್ಚು ಸಿನಿಮಾಗಳಲ್ಲಿ 301 ಸಿನಿಮಾ qualified ಆಗಿದೆ. 301 ಚಿತ್ರಗಳಲ್ಲಿ ಕನ್ನಡದ ಕಾಂತಾರ ಸಿನಿಮಾ ಎರಡು ಕ್ಯಾಟಗರಿಯಲ್ಲಿ ಸೆಲೆಕ್ಟ್ ಆಗಿದೆ. ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಟನೆಯ ಎರಡು ಕ್ಯಾಟಗರಿಯಲ್ಲಿ ಈ ಚಿತ್ರ ಸೆಲೆಕ್ಟ್ ಆಗಿದೆ.  ಕನ್ನಡದ ಈ ಒಂದು (Kantara qualified for Oscar) ಚಿತ್ರವಲ್ಲದೇ ಕನ್ನಡದ ಇನ್ನೂ ಒಂದು ಸಿನಿಮಾ ಕೂಡ ಆಸ್ಕರ್ ಶಾರ್ಟ್​ ಲಿಸ್ಟ್ ನ 301 ಚಿತ್ರದಲ್ಲಿಯೇ (Kantara Movie) ಇದೆ. ಆ ಚಿತ್ರ ಬೇರೆ ಯಾವುದೋ ಅಲ್ಲ. ಅದು ಕಿಚ್ಚನ ವಿಕ್ರಾಂತ್ ರೋಣ ಅನ್ನೋದೇ ವಿಶೇಷ. ಇದೇನೋ ಸರಿ,  ಇದರ ಪ್ರೋಸಸ್ ಹೇಗಿರುತ್ತದೆ. ಇದರ ಸುತ್ತ ಇಲ್ಲೊಂದು ಸ್ಟೋರಿ ಇದೆ. 


ಕಾಂತಾರ ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ಬರುತ್ತಾ?
ಕನ್ನಡ ಚಿತ್ರರಂಗಕ್ಕೆ ಆಸ್ಕರ್ ಪ್ರಶಸ್ತಿ ಅನ್ನೋದೇ ಮಾಯಾಮೃಗವೇ ಸರಿ. ಇಲ್ಲಿವರೆಗೂ ಬಾಲಿವುಡ್ ಚಿತ್ರಗಳಿಗೂ ಆಸ್ಕರ್ ಬಂದಿರೋದು ಕಾಣೆ. ಆಮೀರ್ ಖಾನ್ ಅಭಿನಯದ ಸಿನಿಮಾಗಳು ಕೂಡ ಆಸ್ಕರ್ ಅಂಗಳಕ್ಕೆ ಕಾಲಿಟ್ಟು ಬಂದಿವೆ. ಆದರೆ ಆಸ್ಕರ್ ಪ್ರಶಸ್ತಿ ಅನ್ನೋದು ಅಷ್ಟು ಸುಲಭಕ್ಕೆ ಸಿಗೋ ಅವಾರ್ಡ್ ಅಲ್ಲವೇ ಅಲ್ಲ.


Kannada Movie Kantara qualified for Oscar Award
ಭಾರತೀಯ ಚಿತ್ರಗಳಿಗೆ ಅಷ್ಟು ಬೇಗ ಆಸ್ಕರ್ ಸಿಗುತ್ತಾ?


ಆದರೆ ಕನ್ನಡದ ಕಾಂತಾರ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ತಮ್ಮ ಈ ಚಿತ್ರವನ್ನ ಆಸ್ಕರ್ ಪ್ರಶಸ್ತಿ ಪಡೆಯಲು ಸಬ್ ಮಿಟ್ ಮಾಡಿತ್ತು. ಆನ್​ ಲೈನ್​ ನಲ್ಲಿಯೇ ನಡೆಯೋ ಈ ಒಂದು ಪ್ರಕ್ರಿಯೆಗೆ ಸಿನಿಮಾದ ಎಲ್ಲ ಮಾಹಿತಿಯನ್ನೂ ಕಾಂತಾರ ನಿರ್ಮಾಣ ಸಂಸ್ಥೆ ಸಲ್ಲಿಸಿತ್ತು.


ಕಾಂತಾರ ಎರಡು ಕ್ಯಾಟಗರಿಯಲ್ಲಿ ಶಾರ್ಟ್ ಲಿಸ್ಟ್!


ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಶಾರ್ಟ್ ಲಿಸ್ಟ್ ಆಗಿದೆ. ಸಬ್​ಮಿಟ್ ಆದ 1000 ಕ್ಕೂ ಹೆಚ್ಚು ಸಿನಿಮಾಗಳಲ್ಲಿ 301 ಚಿತ್ರಗಳು qualified ಆಗಿವೆ. ಅದರಲ್ಲಿ ಭಾರತದ ಅದರಲ್ಲೂ ಕರ್ನಾಟಕದ ಎರಡು ಸಿನಿಮಾಗಳು ಶಾರ್ಟ್ ಲಿಸ್ಟ್ ಆಗಿವೆ.


ಶಾರ್ಟ್ ಲಿಸ್ಟ್ ಆದ 301 ಚಿತ್ರದಲ್ಲಿ ಕಿಚ್ಚನ ವಿಕ್ರಾಂತ್ ರೋಣ!


ಹೌದು, ಈ ಒಂದು ಲಿಸ್ಟ್​​ನಲ್ಲಿ ಕಾಂತಾರ ಚಿತ್ರ ಅಷ್ಟೇ ಅಲ್ಲ, ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಕೂಡ ಇದೆ. ಅಲ್ಲಿಗೆ ಈ ಚಿತ್ರವೂ ಆಸ್ಕರ್ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಶಾರ್ಟ್ ಲಿಸ್ಟ್ ಆಗಿರೋದು ವಿಶೇಷವೇ ಸರಿ.




ಭಾರತೀಯ ಚಿತ್ರಗಳಿಗೆ ಅಷ್ಟು ಬೇಗ ಆಸ್ಕರ್ ಸಿಗುತ್ತಾ?
ಈ ಒಂದು ಪ್ರಶ್ನೆ ಇದ್ದೇ ಇದೆ. ಆಸ್ಕರ್ ಅನ್ನೋದು ಅತಿ ದೊಡ್ಡ ಪ್ರಶಸ್ತಿನೇ ಆಗಿದೆ. ಈ ಪ್ರಶಸ್ತಿ ಸಿಗೋದು ಅಷ್ಟು ಸುಲಭ ಅಲ್ವೇ ಅಲ್ಲ. ಹಾಗಿರೋವಾಗ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗೋದೇ ಒಂದು ದೊಡ್ಡ ವಿಷಯವೇ ಆಗಿದೆ.


ಆಸ್ಕರ್ ಪ್ರಶಸ್ತಿಗೆ ಪ್ರಯತ್ನಿಸಿದ ಕನ್ನಡದ ರಂಗಿತರಂಗ!
ಈ ಹಿನ್ನೆಲೆಯಲ್ಲಿ ಕನ್ನಡದ ರಂಗಿತರಂಗ ಕೂಡ ಶಾರ್ಟ್ ಲಿಸ್ಟ್ ಆಗಿತ್ತು. 2015 ರಲ್ಲಿ ತೆರೆ ಕಂಡಿದ್ದ ರಂಗಿತರಂಗ ಚಿತ್ರ, 2016 ರಲ್ಲಿ ಆಸ್ಕರ್ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಶಾರ್ಟ್ ಲಿಸ್ಟ್ ಆಗಿತ್ತು.




ನಿಜ, ಈ ವಿಷಯವನ್ನ ನಾವು ಹೇಳ್ತಿಲ್ಲ. ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್​ಗೆ ಮಾತನಾಡಿದ ಅನೂಪ್ ಭಂಡಾರಿ, ತಮ್ಮ ಚಿತ್ರ ರಂಗಿತರಂಗ ಚಿತ್ರವೂ 2016 ರಲ್ಲಿ ಶಾರ್ಟ್ ಲಿಸ್ಟ್ ಆಗಿತ್ತು. ಅದೇ ರೀತಿ ಈ ವರ್ಷ ವಿಕ್ರಾಂತ್ ರೋಣ ಚಿತ್ರವೂ ಶಾರ್ಟ್ ಲಿಸ್ಟ್ ಆಗಿದೆ.


ಒಂದು ಪ್ರಶಸ್ತಿ ಹಲವು ಕ್ಯಾಟಗರಿ-ಸಾವಿರಕ್ಕೂ ಹೆಚ್ಚು ಸಿನಿಮಾಗಳು!


ಆಸ್ಕರ್ ಪ್ರಶಸ್ತಿ ಪ್ರಕ್ರಿಯೆ ವಿಶೇಷವಾಗಿಯೇ ಇದೆ. ಇದು ಆನ್​ಲೈನ್​ನಲ್ಲಿಯೇ ನಡೆಯುತ್ತದೆ. ಈ ಒಂದು ಪ್ರಶಸ್ತಿಗೆ ಪ್ರಯತ್ನ ಮಾಡಿರೋ ನಿರ್ದೇಶಕ ಅನೂಪ್ ಭಂಡಾರಿ ಹೀಗೆ ಹೇಳ್ತಾರೆ. ಅದು ಇಲ್ಲಿದೆ ಓದಿ.


ಆಸ್ಕರ್ ಪ್ರಶಸ್ತಿಗೆ ನಾವು ನಮ್ಮ ಸಿನಿಮಾದ ಎಲ್ಲ ಡಿಟೈಲ್ಸ್ ಕಳಿಸುತ್ತೇವೆ. ಸಿನಿಮಾ ರಿಲೀಸ್ ಆಗಿರೋ ಡಿಟೈಲ್ಸ್ ಅನ್ನೂ ಕಳಿಸುತ್ತೇವೆ. ನಮ್ಮ ಹಾಗೇನೆ ಇತರ ಕಡೆಯಿಂದಲೂ ಸಿನಿಮಾ ಬಂದಿರುತ್ತವೆ. 1000 ಕ್ಕೂ ಹೆಚ್ಚು ಚಿತ್ರಗಳು ಇಲ್ಲಿ ಬಂದಿರುತ್ತವೆ.


ಹಾಗೆ 2016 ರಲ್ಲಿ ನಮ್ಮ ರಂಗಿತರಂಗ ಚಿತ್ರವನ್ನೂ ಕಳಿಸಿದ್ದೇವು. ಆಗ ನಮ್ಮ ಚಿತ್ರವೂ 301 ಚಿತ್ರಗಳಲ್ಲಿ ಆಗ ಶಾರ್ಟ್ ಲಿಸ್ಟ್ ಆಗಿತ್ತು. ಅದೇ ರೀತಿ ಈ ಸಲವೂ ಕಳಿಸಿದ್ದೇವು. ಅದೇ ರೀತಿ ಈ ವರ್ಷ ವಿಕ್ರಾಂತ್ ರೋಣ ಚಿತ್ರ 301 ಚಿತ್ರಗಳ ಶಾರ್ಟ್ ಲಿಸ್ಟ್ ನಲ್ಲಿ ಬಂದಿದೆ ಅನ್ನೋದೇ ಖುಷಿ ಅಂತಲೇ ಹೇಳಿಕೊಂಡಿದ್ದಾರೆ.


Kannada Movie Kantara qualified for Oscar Award
ಆಸ್ಕರ್ ಪ್ರಶಸ್ತಿಗೆ ಪ್ರಯತ್ನಿಸಿದ ಕನ್ನಡದ ರಂಗಿತರಂಗ!


ಆಸ್ಕರ್ ಪ್ರಶಸ್ತಿಗೆ ಉಳಿಯೋದು ಐದು ಸಿನಿಮಾ ಮಾತ್ರ!
ಆಸ್ಕರ್ ಪ್ರಶಸ್ತಿ ಪ್ರಕ್ರಿಯೆ ತುಂಬಾ ಗೌಪ್ಯವಾಗಿಯೇ ನಡೆಯುತ್ತದೆ. ಭಾರತದಲ್ಲಿಯೇ ಕುಳಿತು ಏನೋ ಮಾಡ್ತೀನಿ ಅಂದ್ರೆ ಏನೂ ಆಗೋದಿಲ್ಲ. ಯಾರ ಮಾತು ನಡೆಯೋದಿಲ್ಲ. ಹಾಗಾಗಿಯೇ ವಿವಿಧ ಕಡೆಯಿಂದ ಬರೋ ಸಿನಿಮಾಗಳು ಇಲ್ಲಿ ಕಡೆವರೆಗೂ ಶಾರ್ಟ್ ಲಿಸ್ಟ್ ಆಗ್ತಾನೇ ಇರುತ್ತವೆ.


ಅದೇ ರೀತಿ 301 ಸಿನಿಮಾಗಳಲ್ಲಿ ಮತ್ತೆ ಶಾರ್ಟ್ ಲಿಸ್ಟ್ ಆಗುತ್ತವೆ. ಇದಾದ್ಮೇಲೆ ಮತ್ತೆ ಮತ್ತೆ ಶಾರ್ಟ್ ಲಿಸ್ಟ್ ಆಗುತ್ತವೆ. ಅಲ್ಲಿಗೆ ಕೊನೆಯಲ್ಲಿ ಉಳಿಯೋದು ಕೇವಲ ಐದು ಸಿನಿಮಾ ಅಂತಲೇ ಅನೂಪ್ ಭಂಡಾರಿ ಹೇಳುತ್ತಾರೆ.


ಇದನ್ನೂ ಓದಿ: Vikrant Rona-Oscar: ಆಸ್ಕರ್ ಲಿಸ್ಟ್​ನಲ್ಲಿ ವಿಕ್ರಾಂತ್ ರೋಣ! ಕನ್ನಡದ 2 ಸಿನಿಮಾ


ಆಸ್ಕರ್ ಪ್ರಶಸ್ತಿ ಸಿಗುತ್ತದೆಯೋ ಬಿಡುತ್ತದೆಯೋ. ಆದರೆ ಆಸ್ಕರ್ ಪ್ರಶಸ್ತಿ ಪ್ರಕ್ರಿಯೆಯಲ್ಲಿ ಶಾರ್ಟ್ ಲಿಸ್ಟ್ ಆಗೋದೇ ಒಂದು ದೊಡ್ಡ ಸಾಧನೆ ಅನ್ನೋದೇ ಈಗೀನ ಟಾಕ್ ಅಷ್ಟೆ.

First published: