• Home
 • »
 • News
 • »
 • explained
 • »
 • Explainer: ಭೂಕುಸಿತಕ್ಕೆ ಬೆಚ್ಚಿಬಿದ್ದ ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳ ಜೋಶಿಮಠ: ಈ ಅಧೋಗತಿಗೆ ಕಾರಣ ಏನು?

Explainer: ಭೂಕುಸಿತಕ್ಕೆ ಬೆಚ್ಚಿಬಿದ್ದ ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳ ಜೋಶಿಮಠ: ಈ ಅಧೋಗತಿಗೆ ಕಾರಣ ಏನು?

ಜೋಶಿಮಠದಲ್ಲಿ ಆತಂಕ

ಜೋಶಿಮಠದಲ್ಲಿ ಆತಂಕ

ಉತ್ತರಾಖಂಡ ಪ್ರದೇಶದಲ್ಲಿ ಭೂಕುಸಿತ ಉಂಟಾಗಿರುವುದರಿಂದ ಮತ್ತು ಹಲವಾರು ಸ್ಥಳಗಳಲ್ಲಿ ಮನೆಗಳು ಬಿರುಕು ಬಿಟ್ಟಿರುವುದರಿಂದ ಆತಂಕಕಾರಿ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಜೋಶಿಮಠದ ಪ್ರದೇಶ ನಿಧಾನಗತಿಯಲ್ಲಿ ಮುಳುಗಡೆಯಾಗುತ್ತಿದ್ದು, ಈ ವಿಚಿತ್ರ ಭೂವೈಜ್ಞಾನಿಕ ವಿದ್ಯಾಮಾನಕ್ಕೆ ಹಲವಾರು ಕಾರಣಗಳನ್ನು ತಜ್ಞರು ನೀಡಿದ್ದಾರೆ.

ಮುಂದೆ ಓದಿ ...
 • Trending Desk
 • 2-MIN READ
 • Last Updated :
 • Joshimath (Jyotirmath), India
 • Share this:

  ಹಿಂದೂಗಳ ಪ್ರಸಿದ್ಧ ಯಾತ್ರಾ ಸ್ಥಳ ಉತ್ತರಾಖಂಡದ (Uttarakhand) ಜೋಶಿಮಠವು (Joshimath) ಕುಸಿಯುತ್ತಿದ್ದು, ಅನೇಕ ರಸ್ತೆಗಳು ಮತ್ತು ನೂರಾರು ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಶಿಮಠದ ಸುತ್ತಮುತ್ತಲು ಕಂಡು ಬಂದ ಬೆಳವಣಿಗೆಯನ್ನು ಅಧಿಕಾರಿಗಳು ಭೂ ಕುಸಿತ ಮತ್ತು ಕುಸಿತ ಪೀಡಿತ ವಲಯ ಎಂದು ಘೋಷಿಸಿದ್ದಾರೆ. ಉತ್ತರಾಖಂಡ ಪ್ರದೇಶದಲ್ಲಿ ಭೂಕುಸಿತ (Landslide) ಉಂಟಾಗಿರುವುದರಿಂದ ಮತ್ತು ಹಲವಾರು ಸ್ಥಳಗಳಲ್ಲಿ ಮನೆಗಳು ಬಿರುಕು ಬಿಟ್ಟಿರುವುದರಿಂದ ಆತಂಕಕಾರಿ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಜೋಶಿಮಠದ ಪ್ರದೇಶ ನಿಧಾನಗತಿಯಲ್ಲಿ ಮುಳುಗಡೆಯಾಗುತ್ತಿದ್ದು, ಈ ವಿಚಿತ್ರ ಭೂವೈಜ್ಞಾನಿಕ ವಿದ್ಯಾಮಾನಕ್ಕೆ ಹಲವಾರು ಕಾರಣಗಳನ್ನು ತಜ್ಞರು ನೀಡಿದ್ದಾರೆ.


  ಇಲ್ಲಿನ ಕಟ್ಟಡ ಕಾಮಗಾರಿ, ಜನಸಂದಣಿ, ರಸ್ತೆ ನಿರ್ಮಾಣ, ಅತಿಯಾದ ಹವಾಮಾನ, ಕೆಲವು ಯೋಜನೆಗಳು ನೇರವಾಗಿ ಭೂಕುಸಿತಕ್ಕೆ ಕಾರಣ ಎಂದಿದ್ದಾರೆ. ಈ ಪ್ರದೇಶದಲ್ಲಿ ಭೂಕುಸಿತದಂತಹ ಘಟನೆಗಳು ಹಿಂದಿನಿಂದಲೂ ಸಂಭವಿಸಿದ್ದು, ಇತ್ತೀಚಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ.


  ಉನ್ನತ ಮಟ್ಟದ ಸಭೆ


  ಸಾಂಸ್ಕೃತಿಕ, ಧಾರ್ಮಿಕ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಪ್ರಮುಖ ಸ್ಥಳವಾಗಿರುವ ಜೋಶಿಮಠವನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಈಗಾಗಲೇ ಕ್ರಮಗಳನ್ನು ತೆಗೆದುಕೊಂಡಿದೆ.


  ಇದನ್ನೂ ಓದಿ: Uttarakhand: ಉತ್ತರಾಖಂಡದ ಧನೌಲ್ತಿ ಒಂದು ಸುಂದರವಾದ ಪ್ರವಾಸಿ ತಾಣ, ಇದರ ಬಗ್ಗೆ ಒಂದಿಷ್ಟು ಮಾಹಿತಿ


  ಪ್ರಧಾನಿ ಕಾರ್ಯಾಲಯವು ಭಾನುವಾರ ಮಧ್ಯಾಹ್ನ ಉನ್ನತ ಮಟ್ಟದ ಸಭೆಯನ್ನು ಸಹ ನಡೆಸಿದೆ. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ಉತ್ತರಾಖಂಡ ರಾಜ್ಯದ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ), ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಸೇರಿದಂತೆ ಏಜೆನ್ಸಿಗಳ ಉನ್ನತ ಅಧಿಕಾರಿಗಳ ನಡುವೆ ಉನ್ನತ ಮಟ್ಟದ ಸಭೆ ನಡೆಸಲಾಗಿದೆ.


  ಕುಟುಂಬಗಳ ಸ್ಥಳಾಂತರ


  ಭಾನುವಾರದ ಹೊತ್ತಿಗೆ ಸುಮಾರು 68 ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಸುಮಾರು 90 ಕುಟುಂಬಗಳನ್ನು ಶೀಘ್ರದಲ್ಲೇ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಶನಿವಾರ ಜೋಶಿಮಠಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.


  ಹಾಗಾದರೆ ನಾವಿಲ್ಲಿ ಭೂಕುಸಿತ ಎಂದರೇನು? ಜೋಶಿಮಠದಲ್ಲಿ ನಡೆದ ಘಟನೆಗೆ ಕಾರಣವೇನು ಎಂಬುವುದನ್ನು ನೋಡೋಣ.


  ಭೂ ಕುಸಿತ ಎಂದರೇನು?


  ಭೂಕುಸಿತ ಅಥವಾ ಭೂಪಾತವೆಂಬುದು ಒಂದು ಭೂವೈಜ್ಞಾನಿಕ ವಿದ್ಯಾಮಾನವಾಗಿದ್ದು, ಇದರಲ್ಲಿ ಭೂಮಿಯ ವ್ಯಾಪಕವಾದ ಚಲನೆಯು ಒಳಗೊಂಡಿರುತ್ತದೆ. ಉದಾಹರಣೆಗೆ ಬಂಡೆ ಉರುಳುವುದು, ಪ್ರಪಾತಗಳು ಮತ್ತಷ್ಟು ಆಳವಾಗುವುದು ಹಾಗೂ ಲಘುವಾಗಿ ಬಂಡೆಚೂರುಗಳ ರಾಶಿಗಳು ಸೃಷ್ಟಿಯಾಗುವ ಕ್ರಿಯೆ. ಇದು ಕಡಲಾಚೆಗೆ, ಸಮುದ್ರದಡಿಯಲ್ಲಿ ಹಾಗೂ ಸಮುದ್ರ ತೀರದ ಪರಿಸರಗಳಲ್ಲಿ ಹೆಚ್ಚಾಗಿ ಸಂಭವಿಸುತ್ತದೆ.


  ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲದ ಆಡಳಿತ (NOAA) ಪ್ರಕಾರ, "ಭೂಗತ ವಸ್ತುಗಳ ಚಲನೆಯಿಂದಾಗಿ ಇದು ಸಂಭವಿಸುತ್ತದೆ" ಎಂದಿದೆ. ಗಣಿಗಾರಿಕೆ ಚಟುವಟಿಕೆಗಳ ಜೊತೆಗೆ ನೀರು, ತೈಲ ಅಥವಾ ನೈಸರ್ಗಿಕ ಸಂಪನ್ಮೂಲಗಳನ್ನು ತೆಗೆಯುವಂತಹ ಮಾನವ ನಿರ್ಮಿತ ಅಥವಾ ನೈಸರ್ಗಿಕ ಕಾರಣಗಳಿಗಾಗಿ ಇದು ಸಂಭವಿಸಬಹುದು.


  ಭೂಕಂಪಗಳು, ಮಣ್ಣಿನ ಸವಕಳಿ ಮತ್ತು ಮಣ್ಣಿನ ಸಂಕೋಚನವು ಸಹ ಕುಸಿತಕ್ಕೆ ಕೆಲವು ಪ್ರಮುಖ ಕಾರಣಗಳಾಗಿವೆ ಎಂದು ಎನ್‌ಒಎಎ ವಿವರಿಸಿದೆ. US-ಆಧಾರಿತ ಏಜೆನ್ಸಿಯ ವೆಬ್‌ಸೈಟ್ ಈ ವಿದ್ಯಮಾನವು "ಇಡೀ ರಾಜ್ಯಗಳು ಅಥವಾ ಪ್ರಾಂತ್ಯಗಳಂತಹ ದೊಡ್ಡ ಪ್ರದೇಶಗಳಲ್ಲಿ ಅಥವಾ ನಿಮ್ಮದೇ ಅಂಗಳದ ಮೂಲೆಯಂತಹ ಅತ್ಯಂತ ಚಿಕ್ಕ ಪ್ರದೇಶಗಳಲ್ಲಿ ಸಂಭವಿಸಬಹುದು" ಎಂದು ಉಲ್ಲೇಖಿಸಿದೆ.


  ಇದನ್ನೂ ಓದಿ: Uttarakhand: ಡ್ಯಾನ್ಸ್​ ಮಾಡುತ್ತಾ ಕುಸಿದು ಬಿದ್ದ ತಂದೆ, ಮಗಳ ಮದುವೆಯ ಹಿಂದಿನ ದಿನವೇ ದಾರುಣ ಸಾವು!


  ಜೋಶಿಮಠ ಅಧೋಗತಿಗೆ ಕಾರಣಗಳೇನು?


  ಜೋಶಿಮಠ ಭೂಮಿಯ ಕುಸಿತದ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ಆದರೆ, ಯೋಜಿತವಲ್ಲದ ನಿರ್ಮಾಣ, ಅತಿಯಾದ ಜನಸಂಖ್ಯೆ, ನೀರಿನ ನೈಸರ್ಗಿಕ ಹರಿವಿನ ಅಡಚಣೆ ಮತ್ತು ಜಲವಿದ್ಯುತ್ ಚಟುವಟಿಕೆಗಳಿಂದ ಈ ಘಟನೆ ಸಂಭವಿಸಿರಬಹುದು ಎಂದು ತಜ್ಞರು ಹೇಳಿದ್ದಾರೆ.


  ಅಷ್ಟೇ ಅಲ್ಲ, ಈ ಪ್ರದೇಶವು ಭೂಕಂಪನ ವಲಯವಾಗಿದ್ದು, ಆಗಾಗ್ಗೆ ಭೂಕಂಪನ ಉದ್ಭವಿಸುತ್ತದೆ. ಪದೇ ಪದೇ ನಡೆಯುವ ಭೂಕಂಪನಗಳು ಕೂಡ ಜೋಶಿಮಠದ ಅಧೋಗತಿಗೆ ಕಾರಣವಾಗಿವೆ.


  ಈ ಹಿಂದೆಯೇ ಎಚ್ಚರಿಸಿದ್ದ ಮಿಶ್ರಾ ವರದಿ


  ಸರ್ಕಾರ ನೇಮಿಸಿದ ಸಮಿತಿಯ ವರದಿಯು 1976 ರಲ್ಲಿಯೇ ಪಟ್ಟಣದಲ್ಲಿ ಭೂಮಿ ಕುಸಿಯುವ ಮುನ್ಸೂಚನೆಯನ್ನು ನೀಡಿತ್ತು. ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದಂತೆ, ಎಂಸಿ ಮಿಶ್ರಾ ಸಮಿತಿಯ ವರದಿಯನ್ನು ಪ್ರಕಟಿಸಿದಾಗ ಸುಮಾರು 50 ವರ್ಷಗಳ ನಂತರ ಈ ಪ್ರದೇಶದಲ್ಲಿ ಇಂತಹ ಘಟನೆ ಸಂಭವಿದೆ ಎಂದು ಹೇಳಿದೆ.


  ಇದನ್ನೂ ಓದಿ: Joshimath: ಕುಸಿಯುತ್ತಿರೋ ಜೋಶಿಮಠದಿಂದ 4,000 ಮಂದಿ ಶಿಫ್ಟ್, ಕಟ್ಟಡಗಳ ನೆಲಸಮ ಕಾರ್ಯ ಆರಂಭ!


  ಮಿಶ್ರಾ ಸಮಿತಿಯ ವರದಿಯು ಈ ಹಿಂದೆಯೇ ಜೋಶಿಮಠವು ಮರಳು ಮತ್ತು ಕಲ್ಲಿನ ನಿಕ್ಷೇಪದ ಮೇಲೆ ಇದೆ. ಅಲಕನಂದಾ ಮತ್ತು ಧೌಲಿಗಂಗಾ ನದಿಯ ಪ್ರವಾಹಗಳು ಭೂಕುಸಿತವನ್ನು ತರುವಲ್ಲಿ ತಮ್ಮ ಪಾತ್ರವನ್ನು ವಹಿಸುತ್ತಿವೆ.


  ಇಲ್ಲಿ ಮನೆಗಳು, ರಸ್ತೆಗಳು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕುಸಿತ ಉಂಟಾಗಲು "ಈ ಪ್ರದೇಶದಲ್ಲಿ ಯೋಜಿತವಲ್ಲದ ಅಭಿವೃದ್ಧಿ ಮತ್ತು ನೈಸರ್ಗಿಕ ದುರ್ಬಲತೆಗಳೇ ಕಾರಣ" ಎಂದು ಎಚ್ಚರಿಸಿತ್ತು.


  ಪ್ರದೇಶದ ನಿರ್ಮಾಣ


  ತಜ್ಞರ ಪ್ರಕಾರ, ಜೋಶಿಮಠ ನಗರವನ್ನು ಪುರಾತನ ಭೂಕುಸಿತದ ವಸ್ತುವಿನ ಮೇಲೆ ನಿರ್ಮಿಸಲಾಗಿದೆ. ಅಂದರೆ ಇದು ಮರಳು ಮತ್ತು ಕಲ್ಲಿನ ನಿಕ್ಷೇಪದ ಮೇಲೆ ನಿಂತಿದೆಯೇ ಹೊರತು ಬಂಡೆಯ ಮೇಲಲ್ಲ ಎಂದಿದ್ದಾರೆ. ಹೀಗಾಗಿ ಜೋಶಿಮಠವು ಹೆಚ್ಚಿನ ಹೊರೆ ಹೊರುವ ಸಾಮರ್ಥ್ಯವನ್ನು ಹೊಂದಿಲ್ಲ ಆ ಕಾರಣಕ್ಕಾಗಿಯೇ ಹೆಚ್ಚಿನ ಜನಸಂಖ್ಯೆ ಭಾರವನ್ನಾಗಲಿ, ಒತ್ತಡವನ್ನಾಗಲಿ ಈ ಪ್ರದೇಶ ತಡೆದುಕೊಳ್ಳುತ್ತಿಲ್ಲ. ಇದರಿಂದಾಗಿ ಪ್ರದೇಶ ದುರ್ಬಲಗೊಂಡು ಭೂಕುಸಿತಗಳು ಉಂಟಾಗಿವೆ ಎನ್ನುತ್ತಾರೆ ತಜ್ಞರು.


  ಇದಲ್ಲದೆ, ಸರಿಯಾದ ಒಳಚರಂಡಿ ವ್ಯವಸ್ಥೆಯ ಕೊರತೆಯು ಪ್ರದೇಶವು ಮುಳುಗಲು ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಯೋಜಿತವಲ್ಲದ ಮತ್ತು ಅನಧಿಕೃತ ನಿರ್ಮಾಣವು ನೀರಿನ ನೈಸರ್ಗಿಕ ಹರಿವನ್ನು ತಡೆಯಲು ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ.


  ಹೈಡಲ್ ಪವರ್ ಪ್ರಾಜೆಕ್ಟ್ ವಿರುದ್ಧ ಆರೋಪ


  ವರದಿಗಳ ಪ್ರಕಾರ, ನಿವಾಸಿಗಳು ಘಟನೆಗೆ ಎನ್‌ಟಿಪಿಸಿಯ ತಪೋವನ್ ವಿಷ್ಣುಘಡ್ ಜಲವಿದ್ಯುತ್ ಯೋಜನೆಯ ವಿರುದ್ಧ ದೂಷಿಸಿದ್ದಾರೆ. ಈ ಹೈಡಲ್ ಪವರ್ ಪ್ರಾಜೆಕ್ಟ್ ಗಾಗಿ ದೊಡ್ಡ ದೊಡ್ಡ ಸುರಂಗಗಳನ್ನು ಕೊರೆಯಲಾಗುತ್ತಿದ್ದು, ಈ ಸುರಂಗದಲ್ಲಿ ನಡೆಯುತ್ತಿರುವ ಸ್ಫೋಟಗಳು ಇಡೀ ಜೋಶಿಮಠ ಪಟ್ಟಣವನ್ನು ನಡುಗಿಸುತ್ತಿದೆ.


  Joshimath


  ಪರಿಣಾಮ ಇಲ್ಲಿನ ಮನೆಗಳು, ಕಟ್ಟಡಗಳು, ಬಿರುಕು ಬಿಟ್ಟಿದ್ದು, ಯಾವುದೇ ಹಂತದಲ್ಲಿ ಕುಸಿಯುವ ಭೀತಿ ಸೃಷ್ಟಿಸಿದೆ ಎಂದು ಗಂಭೀರವಾಗಿ ಆರೋಪಿಸಲಾಗಿದೆ. ಅಷ್ಟೇ ಅಲ್ಲ, ಎನ್‌ಟಿಪಿಸಿಯ ತಪೋವನ್ ವಿಷ್ಣುಘಡ್ ಜಲವಿದ್ಯುತ್ ಯೋಜನೆಯು ಜೋಶಿಮಠದ ನೀರಿನ ಮೂಲಗಳು ಒಣಗಲು ಪ್ರಮುಖವಾಗಿ ಕಾರಣವಾಗಿದೆ ಎಂದು ನಿವಾಸಿಗಳು ಕಿಡಿಕಾರಿದ್ದಾರೆ.


  ಈ ಘಟನೆಯನ್ನು ಸಹ ಕೂಲಂಕುಷವಾಗಿ ಪರಿಶೀಲಿಸಿದ ತಜ್ಞರು ಇದು ಕೂಡ ಪ್ರದೇಶದ ಕುಸಿತಕ್ಕೆ ಒಂದು ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ.


  ಆರೋಪ ತಳ್ಳಿಹಾಕಿದ ಎನ್‌ಟಿಪಿಸಿ


  ಆದಾಗ್ಯೂ, ಎನ್‌ಟಿಪಿಸಿ, ನಿವಾಸಿಗಳ ಆರೋಪಗಳನ್ನು ತಳ್ಳಿಹಾಕಿದೆ ಮತ್ತು ಹೇಳಿಕೆಯಲ್ಲಿ, “ಎನ್‌ಟಿಪಿಸಿ ನಿರ್ಮಿಸಿದ ಸುರಂಗವು ಜೋಶಿಮಠ ಪಟ್ಟಣದ ಅಡಿಯಲ್ಲಿ ಹಾದುಹೋಗುವುದಿಲ್ಲ. ಈ ಸುರಂಗವನ್ನು ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಮೂಲಕ ಅಗೆಯಲಾಗಿದೆ ಮತ್ತು ಪ್ರಸ್ತುತ ಯಾವುದೇ ಬ್ಲಾಸ್ಟಿಂಗ್ ಅನ್ನು ನಡೆಸಲಾಗುತ್ತಿಲ್ಲ" ಎಂದು ಹೇಳಿದೆ.


  2021 ರಲ್ಲಿ 23 ನೈಸರ್ಗಿಕ ವಿಕೋಪ


  ತಜ್ಞರೊಬ್ಬರು ಈ ಬಗ್ಗೆ ಮಾತನಾಡಿ "ಉತ್ತರಾಖಂಡವು 2021 ರಲ್ಲಿ 23 ನೈಸರ್ಗಿಕ ವಿಕೋಪಗಳಿಗೆ ಸಾಕ್ಷಿಯಾಗಿದೆ, ಕೆಲವು ವರದಿಗಳ ಪ್ರಕಾರ 308 ಜನ ಸಾವನ್ನಪ್ಪಿದ್ದಾರೆ" ಎಂದು ಹೇಳಿದ್ದಾರೆ.


  ಇಲ್ಲಿನ ಪರ್ವತಗಳು ದುರ್ಬಲವಾಗಿದ್ದು, ಅಪಾಯದ ವಲಯಗಳು ಎಂದು ವ್ಯಾಖ್ಯಾನಿಸಲಾಗಿದೆ. ನಾವು ಯಾವುದೇ ದೊಡ್ಡ ಪ್ರಮಾಣದ ಅಭಿವೃದ್ಧಿ ಯೋಜನೆಗಳನ್ನು ಯೋಜಿಸುವಾಗ, ವಿಶೇಷವಾಗಿ ಜಲವಿದ್ಯುತ್‌ನಂತಹ ದೊಡ್ಡ ಮೂಲಸೌಕರ್ಯ ಯೋಜನೆಗಳನ್ನು ಯೋಜಿಸುವಾಗ, ನಾವು ಮರುಚಿಂತನೆ ಮಾಡಬೇಕು ಎಂದು ಅವರು ಹೇಳಿದ್ದಾರೆ.


  2021 ರಲ್ಲಿ ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ನಂತರ ಜೋಶಿಮಠದ ಮೂಲಸೌಕರ್ಯದಲ್ಲಿನ ಬಿರುಕುಗಳ ವರದಿಗಳು ಮೊದಲು ವರದಿಯಾಗಿವೆ. ಜೋಶಿಮಠದ ಎಲ್ಲಾ ಒಂಬತ್ತು ಪುರಸಭೆಯ ವಾರ್ಡ್‌ಗಳನ್ನು ಈಗ ಭೂಕುಸಿತ ಕುಸಿತ ವಲಯಗಳಾಗಿ ಘೋಷಿಸಲಾಗಿದೆ. ಮೇಲೆ ತಿಳಿಸಿದ ಸಂಭವನೀಯ ಕಾರಣಗಳ ಹೊರತಾಗಿ, ಭೌಗೋಳಿಕ ದೋಷದ ಪುನಃ ಸಕ್ರಿಯಗೊಳಿಸುವಿಕೆಯಿಂದ ಜೋಶಿಮಠದಲ್ಲಿನ ಕುಸಿತವು ಪ್ರಚೋದಿಸಲ್ಪಟ್ಟಿದೆ ಎಂದು ವರದಿಗಳು ಸೂಚಿಸಿವೆ.


  ಜೋಶಿಮಠದ ಪರಿಚಯ


  * ಜೋಶಿಮಠ ಆದಿ ಶಂಕರರು ಸ್ಥಾಪಿಸಿದ ನಾಲ್ಕು ಕಾರ್ಡಿನಲ್ ಮಠಗಳಲ್ಲಿ ಒಂದಾಗಿದೆ. ಕರ್ನಾಟಕದ ಶೃಂಗೇರಿ, ಗುಜರಾತ್‌ನ ದ್ವಾರಕಾ, ಒಡಿಶಾದ ಪುರಿ ಮತ್ತು ಉತ್ತರಾಖಂಡದ ಬದರಿನಾಥ್ ಬಳಿಯ ಜೋಶಿಮಠ ಸೇರಿದೆ.


  * ಜೋಶಿಮಠವು ಉತ್ತರಾಖಂಡದ ಚಮೋಲಿ ಜಿಲ್ಲೆಯ ಋಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ (NH-7) ನೆಲೆಗೊಂಡಿರುವ ಗುಡ್ಡಗಾಡು ಪಟ್ಟಣವಾಗಿದೆ.


  ಇದನ್ನೂ ಓದಿ: Uttarakhand: ಧರ್ಮ ಮುಚ್ಚಿಟ್ಟು ಮದುವೆ ನಾಟಕ: ವಿವಾಹದ ಹಿಂದಿನ ದಿನ ಸಿಕ್ಕಿಬಿದ್ದ ಕಿರಾತಕ!


  * ಈ ನಗರವು ರಾಜ್ಯದ ಇತರ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ಸ್ಥಳಗಳಲ್ಲಿ ಬದರಿನಾಥ್, ಔಲಿ, ಹೂವಿನ ಕಣಿವೆ ಮತ್ತು ಹೇಮಕುಂಡ್ ಸಾಹಿಬ್‌ಗೆ ಭೇಟಿ ನೀಡುವ ಜನರಿಗೆ ಪ್ರಮುಖವಾದ ನಗರವಾಗಿದೆ.


  * ಜೋಶಿಮಠವು ಭಾರತೀಯ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಇದು ಸೇನೆಯ ಪ್ರಮುಖ ಕಂಟೋನ್ಮೆಂಟ್‌ಗಳಲ್ಲಿ ಒಂದಾಗಿದೆ.


  * ಮತ್ತು ಧೌಲಿಗಂಗಾ ಮತ್ತು ಅಲಕನಂದಾ ನದಿಗಳ ಸಂಗಮವಾದ ವಿಷ್ಣುಪ್ರಯಾಗದಿಂದ ಹೆಚ್ಚಿನ ಇಳಿಜಾರಿನೊಂದಿಗೆ ಹರಿಯುವ ಹೊಳೆಗಳ ವ್ಯಾಪ್ತಿಯಲ್ಲಿ ಪಟ್ಟಣವು ಸ್ಥಿತವಿದೆ.

  Published by:Precilla Olivia Dias
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು