• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಜಾನ್ಸನ್ ಆ್ಯಂಡ್ ಜಾನ್ಸನ್ ಪೌಡರ್‌ಗೆ ಕ್ಯಾನ್ಸರ್​ ಕಂಟಕ, ಕೇಸ್​ ಇತ್ಯರ್ಥಕ್ಕೆ 90 ಕೋಟಿ ಪಾವತಿಸಿದ ಸಂಸ್ಥೆ

Explained: ಜಾನ್ಸನ್ ಆ್ಯಂಡ್ ಜಾನ್ಸನ್ ಪೌಡರ್‌ಗೆ ಕ್ಯಾನ್ಸರ್​ ಕಂಟಕ, ಕೇಸ್​ ಇತ್ಯರ್ಥಕ್ಕೆ 90 ಕೋಟಿ ಪಾವತಿಸಿದ ಸಂಸ್ಥೆ

ಜಾನ್ಸನ್ ಆ್ಯಂಡ್​ ಜಾನ್ಸನ್ ಪೌಡರ್

ಜಾನ್ಸನ್ ಆ್ಯಂಡ್​ ಜಾನ್ಸನ್ ಪೌಡರ್

ಯುಎಸ್‌ ಫಾರ್ಮಾಸ್ಯುಟಿಕಲ್ ಸಂಸ್ಥೆ ಜಾನ್ಸನ್ ಆ್ಯಂಡ್​ ಜಾನ್ಸನ್ ತನ್ನ ಹೆಸರಾಂತ ಬೇಬಿ ಟಾಲ್ಕಂ ಪೌಡರ್ ಹಾಗೂ ಇತರ ಉತ್ಪನ್ನಗಳು ಕ್ಯಾನ್ಸರ್‌ಗೆ ಕಾರಣವಾಗಿವೆ ಎಂದು ಪ್ರತಿಪಾದಿಸಿದ ಹತ್ತು ಸಾವಿರ ಮೊಕದ್ದಮೆಗಳನ್ನು ಇತ್ಯರ್ಥಗೊಳಿಸಲು $8.9 ಶತಕೋಟಿ ಕಟ್ಟಲು ಒಪ್ಪಿಕೊಂಡಿದೆ.

  • Share this:

ಯುಎಸ್‌ ಫಾರ್ಮಾಸ್ಯುಟಿಕಲ್ ಸಂಸ್ಥೆ (US Pharmaceutical Company) ಜಾನ್ಸನ್ ಆ್ಯಂಡ್​ ಜಾನ್ಸನ್ (Johnson & Johnson) ತನ್ನ ಹೆಸರಾಂತ ಬೇಬಿ ಟಾಲ್ಕಂ ಪೌಡರ್ (Baby Powder) ಹಾಗೂ ಇತರ ಉತ್ಪನ್ನಗಳು ಕ್ಯಾನ್ಸರ್‌ಗೆ ಕಾರಣವಾಗಿವೆ ಎಂದು ಪ್ರತಿಪಾದಿಸಿದ ಹತ್ತು ಸಾವಿರ ಮೊಕದ್ದಮೆಗಳನ್ನು ಇತ್ಯರ್ಥಗೊಳಿಸಲು $8.9 ಶತಕೋಟಿಗೂ ಹೆಚ್ಚು ಕಟ್ಟಲು ಒಪ್ಪಿಕೊಂಡಿದೆ. ತನ್ನ ಮೇಲಿರುವ ಆರೋಪವನ್ನು ಮುಚ್ಚಿಹಾಕುವ ಪ್ರಯತ್ನವಾಗಿ ಸಂಸ್ಥೆಯು ಈ ಹಿಂದೆ ನಿಗದಿಪಡಿಸಿದ ಮೊತ್ತಕ್ಕಿಂತ ನಾಲ್ಕು ಪಟ್ಟು ಪರಿಹಾರವನ್ನು ನೀಡುತ್ತಿದೆ ಎಂಬುದಾಗಿ ವರದಿಯಾಗಿದೆ.


ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ನಡೆದ ಕಾನೂನು ಹೋರಾಟದಲ್ಲಿ ಅಂತಿಮವಾಗಿ ಗೆಲುವು ಸಿಕ್ಕಿದ್ದು ಕೇಸ್ ವಾದಿಸಿದ ವಕೀಲರು ಈ ಜಯವನ್ನು ಮಹತ್ವದ ಗೆಲುವು ಎಂದು ಬಣ್ಣಿಸಿದ್ದಾರೆ.


25 ವರ್ಷಗಳಲ್ಲಿ ಪರಿಹಾರ ಪಾವತಿ


$8.9 ಶತಕೋಟಿ ಟ್ರಸ್ಟ್ ಅನ್ನು ಸಕ್ರಿಯಗೊಳಿಸಲು ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸಿದ ಅಂಗಸಂಸ್ಥೆಯಾದ LTL ಮ್ಯಾನೇಜ್‌ಮೆಂಟ್‌ ಮೂಲಕ ಪ್ರಸ್ತಾವಿತ ಪರಿಹಾರವನ್ನು 25 ವರ್ಷಗಳಲ್ಲಿ ಪಾವತಿಸಲಾಗುವುದು ಎಂದು ಜಾನ್ಸನ್ ಏಂಡ್ ಜಾನ್ಸನ್ ನ್ಯಾಯಾಲಯದ ಫೈಲಿಂಗ್‌ನಲ್ಲಿ ತಿಳಿಸಿದೆ.


ಇದನ್ನೂ ಓದಿ: ಎಂಬಿ ಪಾಟೀಲ್ ಹಿನ್ನೆಲೆ ಏನು? ಬಬಲೇಶ್ವರ ಶಾಸಕರ ರಾಜಕೀಯ ಏಳು-ಬೀಳುಗಳೇನು?


ಜಾನ್ಸನ್ ಆ್ಯಂಡ್​ ಜಾನ್ಸನ್ ಟಾಲ್ಕಮ್ ಪೌಡರ್‌ನಿಂದ ಹಾನಿಯಾಗಿದೆ ಎಂದು 60,000 ಕ್ಕೂ ಹೆಚ್ಚು ದಾವೆದಾರರು ಆರೋಪಿಸಿ, ಮೊಕದ್ದಮೆಗಳನ್ನು ಹೂಡಿದ್ದಾರೆ.


ಜಾನ್ಸನ್ ಆ್ಯಂಡ್ ಜಾನ್ಸನ್ ಟಾಲ್ಕಂ ಪೌಡರ್‌ನಿಂದ ಅಂಡಾಶಯ ಕ್ಯಾನ್ಸರ್


ಅಂಡಾಶಯದ ಕ್ಯಾನ್ಸರ್ ಮತ್ತು ಮೆಸೊಥೆಲಿಯೊಮಾದಿಂದ ಸಾವನ್ನಪ್ಪಿದ ಜನರ ಕುಟುಂಬಗಳು ಸೇರಿದಂತೆ ಸುಮಾರು 70,000 ಫಿರ್ಯಾದಿಗಳನ್ನು ಪ್ರತಿನಿಧಿಸಿದ್ದ ವಕೀಲರ ಗುಂಪು ಈ ಒಪ್ಪಂದ ಒಂದು ಮಹತ್ವದ ಹೆಗ್ಗುರುತು ಎಂದು ತಿಳಿಸಿದೆ. ಸ್ತ್ರೀರೋಗ ಕ್ಯಾನ್ಸರ್‌ನಿಂದ ಬಳಲುತ್ತಿರುವ ಹತ್ತಾರು ಸಾವಿರ ಮಹಿಳೆಯರಿಗೆ ಮಹತ್ವದ ಗೆಲುವಾಗಿದೆ ಎಂದು ಪ್ರತಿಪಾದಿಸಿದೆ.


ಈ ಒಪ್ಪಂದವು ಅಂತಿಮವಾಗಲು, ಜಾನ್ಸನ್ & ಜಾನ್ಸನ್ ಅಂಗಸಂಸ್ಥೆ, LTL ಮ್ಯಾನೇಜ್​ಮೆಂಟ್​ ಮತ್ತು ಇತ್ಯರ್ಥದ ಹೊಸ ದಿವಾಳಿತನದ ಫೈಲಿಂಗ್ ಅನ್ನು ನ್ಯಾಯಾಲಯವು ಮೊದಲು ಒಪ್ಪಿಕೊಳ್ಳಬೇಕು.


ಈ ಯೋಜನೆಯನ್ನು ಬೆಂಬಲಿಸಲು ಕಂಪೆನಿಯು ಸಾಕಷ್ಟು ಹಕ್ಕುದಾರರನ್ನು ಮನವೊಲಿಸುವ ಅಗತ್ಯವಿದೆ. ಜಾನ್ಸನ್ ಮತ್ತು ಜಾನ್ಸನ್ 2021 ರಲ್ಲಿ LTL ಅನ್ನು ದಾವೆಯಿಂದ ರಕ್ಷಿಸಿಕೊಳ್ಳುವ ತಂತ್ರದಲ್ಲಿ ರಚಿಸಿತು. ಆದರೆ ಘಟಕದ ಹಿಂದಿನ ದಿವಾಳಿತನದ ಫೈಲಿಂಗ್ ಅನ್ನು ಫಿರ್ಯಾದಿಗಳು ಪ್ರಶ್ನಿಸಿದ್ದರು.


ಪ್ರಮುಖ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಬೇಬಿ ಪೌಡರ್


ಸಂಸ್ಥೆಯ ಬೇಬಿ ಪೌಡರ್ ಪ್ರಮುಖ ಮಾರಾಟಗಾರ ಎಂದೆನಿಸದೇ ಇದ್ದರೂ ಕಂಪೆನಿಯ ಅತ್ಯಂತ ಗುರುತಿಸಬಹುದಾದ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಜಾನ್ಸನ್ ಮತ್ತು ಜಾನ್ಸನ್ ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಟಾಲ್ಕ್ ಆಧಾರಿತ ಬೇಬಿ ಪೌಡರ್ ಅನ್ನು ನಿಲ್ಲಿಸಿ ಎರಡು ತಿಂಗಳಾಗಿದೆ.


ಜಾನ್ಸನ್ ಆ್ಯಂಡ್​ ಜಾನ್ಸನ್ ಪೌಡರ್


ಭಾರತ ಹಾಗೂ ಪ್ರಪಂಚದ ಇನ್ನಿತರ ಭಾಗಗಳಲ್ಲಿ ಉತ್ಪನ್ನ ಇನ್ನೂ ಮಾರಾಟವಾಗುತ್ತಿದೆ. ಅಂತೆಯೇ ಕೆಲವೆಡೆಗಳಲ್ಲಿ ಸುರಕ್ಷಿತವಾಗಿರುವ ಈ ಉತ್ಪನ್ನ ಇನ್ನಿತರ ಪ್ರದೇಶಗಳಲ್ಲಿ ಹೇಗೆ ಹಾನಿಕಾರಕವಾಗಿದೆ ಎಂಬ ಪ್ರಶ್ನೆಯನ್ನು ಸಂಸ್ಥೆ ಮುಂದಿಟ್ಟಿದೆ.


ಆರೋಪಗಳನ್ನು ತಳ್ಳಿಹಾಕುತ್ತಿರುವ ಸಂಸ್ಥೆ


ಕಂಪೆನಿಯು ಯಾವುದೇ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ ಅಂತೆಯೇ ಕಂಪೆನಿಯ ಕಾರ್ಯನಿರ್ವಾಹಕರು ಹೇಳಿಕೆಗಳು ವೈಜ್ಞಾನಿಕ ಅರ್ಹತೆಯನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.


ನ್ಯಾಯಾಲಯದಲ್ಲಿ ಮೊಕದ್ದಮೆಗಳ ವಿರುದ್ಧ ಹೋರಾಡುವುದು ದಶಕಗಳ ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗೂ ಇದು ದುಬಾರಿಯಾಗಿದೆ ಎಂದು ಕಂಪೆನಿಯ ವಿಶ್ವವ್ಯಾಪಿ ವ್ಯಾಜ್ಯದ ಉಪಾಧ್ಯಕ್ಷ ಎರಿಕ್ ಹಾಸ್ ತಿಳಿಸಿದ್ದಾರೆ.


ಅಮೆರಿಕ ಹಾಗೂ ಕೆನಡಾದಲ್ಲಿ ಬೇಬಿ ಪೌಡರ್ ಸ್ಥಗಿತ


'ಬ್ಲ್ಯಾಕ್ ವುಮೆನ್ ಫಾರ್ ವೆಲ್​ನೆಸ್​' ಎಂಬ ಸಂಸ್ಥೆಯು ಪ್ರಪಂಚದಾದ್ಯಂತದ ಸುಮಾರು 200 ಇತರ ಸಂಸ್ಥೆಗಳೊಂದಿಗೆ ಒಗ್ಗೂಡಿ ಮಾರುಕಟ್ಟೆಯಿಂದ ಜಾನ್ಸನ್ ಆ್ಯಂಡ್​ ಜಾನ್ಸನ್‌ನ ಟಾಲ್ಕ್ ಆಧಾರಿತ ಬೇಬಿ ಪೌಡರ್ ಅನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ಜಾನ್ಸನ್ ಆ್ಯಂಡ್​ ಜಾನ್ಸನ್‌ಗೆ ಪತ್ರ ಬರೆದಿದೆ.


ಮೇ ತಿಂಗಳಿನಲ್ಲಿ ಜಾನ್ಸನ್ & ಜಾನ್ಸನ್ ಬೇಬಿ ಟಾಲ್ಕ್ ಅನ್ನು ಸ್ಥಗಿತಗೊಳಿಸಿದಾಗ ಇದಕ್ಕೆ ಕಾರಣ ಕೋವಿಡ್ 19 ಹಾಗೂ ನಿರಂತರ ವ್ಯಾಜ್ಯದ ಜಾಹೀರಾತು ಎಂಬ ಕಾರಣವನ್ನು ನೀಡಿತು.


ಯುಎಸ್ ಹಾಗೂ ಕೆನಡಾದಲ್ಲಿ ಸಂಸ್ಥೆಯು ಟಾಲ್ಕಂ ಪೌಡರ್ ಅನ್ನು ಏಕೆ ಸ್ಥಗಿತಗೊಳಿಸಿತು ಎಂಬುದಕ್ಕೆ ವಿವರಣೆಯನ್ನು ನೀಡಿದ್ದು, ಕೋವಿಡ್ -19 ಆದ್ಯತೆಗೆ ಸಂಬಂಧಿಸಿದ ಕೆಲವೊಂದು ಕಾರಣಗಳಿಗಾಗಿ ಎಂಬ ಸ್ಪಷ್ಟನೆಯನ್ನು ನೀಡಿದೆ, ಅದಾಗ್ಯೂ ಕ್ಯಾನ್ಸರ್‌ಕಾರಕವಾಗಿರುವ ಅಂಶಗಳನ್ನು ಟಾಲ್ಕಂ ಪೌಡರ್ ಒಳಗೊಂಡಿದೆ ಎಂಬ ಅಂಶವನ್ನು ಕಂಪನಿ ಒಪ್ಪಿಕೊಂಡಿಲ್ಲ.


ಭಾರತದಲ್ಲಿ ಉತ್ಪನ್ನಕ್ಕೆ ಬೇಡಿಕೆ ಇದೆ


ಜಾನ್ಸನ್ ಆ್ಯಂಡ್​ ಜಾನ್ಸನ್‌ ಭಾರತದಲ್ಲಿ ಉತ್ಪನ್ನವನ್ನು ಏಕೆ ಸ್ಥಗಿತಗೊಳಿಸಲಿಲ್ಲ ಎಂಬುದಕ್ಕೆ ಪ್ರತಿಕ್ರಿಯಿಸಿದ ಕಂಪೆನಿಯ ವಕ್ತಾರರು ಟಾಲ್ಕ್ ಆಧಾರಿತ ಜಾನ್ಸನ್ ಬೇಬಿ ಪೌಡರ್‌ನ ಸುರಕ್ಷತೆಯಲ್ಲಿ "ಸ್ಥಿರವಾದ ವಿಶ್ವಾಸವನ್ನು" ಹೊಂದಿದೆ ಎಂದು ತಿಳಿಸಿದ್ದಾರೆ.


ಜಾನ್ಸನ್ಸ್ ಬೇಬಿ 70 ವರ್ಷಗಳಿಂದ ಭಾರತದಲ್ಲಿ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿದೆ ಮತ್ತು ತಮ್ಮ ಶಿಶುಗಳಿಗೆ ಅಗತ್ಯವಿರುವ ಸೌಮ್ಯವಾದ ಆರೈಕೆಯನ್ನು ನೀಡುವಲ್ಲಿ ತಾಯಂದಿರ ನಂಬರ್ 1 ಆಯ್ಕೆಯಾಗಿದೆ ಅಂತೆಯೇ ಇದು ಸುರಕ್ಷತೆ, ಗುಣಮಟ್ಟ ಮತ್ತು ಪರಿಶುದ್ಧತೆಯ ಉನ್ನತ ಗುಣಮಟ್ಟವನ್ನು ಪೂರೈಸುವ ಉತ್ಪನ್ನವಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.


ಜಾನ್ಸನ್ ಆ್ಯಂಡ್​ ಜಾನ್ಸನ್ ಪೌಡರ್


ಗ್ರಾಹಕ ಪದ್ಧತಿಗಳಲ್ಲಿನ ಬದಲಾವಣೆಗಳು ಮತ್ತು ಉತ್ಪನ್ನದ ಸುರಕ್ಷತೆಯ ಬಗ್ಗೆ ತಪ್ಪು ಮಾಹಿತಿಯಿಂದ ಉತ್ತೇಜಿತವಾಗಿರುವ ಕಾರಣದಿಂದಾಗಿ ಉತ್ತರ ಅಮೆರಿಕಾದಲ್ಲಿ ಟಾಲ್ಕ್-ಆಧಾರಿತ ಜಾನ್ಸನ್ ಬೇಬಿ ಪೌಡರ್‌ಗೆ ಬೇಡಿಕೆ ಕಡಿಮೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.


ಉತ್ಪನ್ನಕ್ಕೆ ಗಣನೀಯವಾಗಿ ಹೆಚ್ಚಿನ ಬೇಡಿಕೆ ಇರುವ ಭಾರತದಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಉತ್ಪನ್ನವು ಲಭ್ಯವಿರುತ್ತದೆ ಹಾಗೂ ಮಾರಾಟ ಹಾಗೆಯೇ ಮುಂದುವರಿಯುತ್ತದೆ ಎಂದು J&J ಹೇಳಿತ್ತು.


ಕಂಪೆನಿಯು ಈ ಹಿಂದೆ ಅದರ ಟಾಲ್ಕಂ ಪೌಡರ್ ಕಲ್ನಾರಿನ (ವಿವಿಧ ದರ್ಜೆಯ ಖನಿಜದ ಎಳೆಗಳಿಂದ ತಯಾರಿಸಲಾದ ವಸ್ತುಗಳ ಉಷ್ಣನಿರೋಧಕ ಗುಣ) ಮುಕ್ತವಾಗಿದೆ ಮತ್ತು ಅದು ತನ್ನ ಉತ್ಪನ್ನದ ಸುರಕ್ಷತೆಯನ್ನು ರಕ್ಷಿಸುತ್ತದೆ ಎಂದು ತಿಳಿಸಿದೆ.


ಮಾರುಕಟ್ಟೆಯಲ್ಲಿ ಕುಸಿದ ಬೇಡಿಕೆ


ಜಾನ್ಸನ್ & ಜಾನ್ಸನ್ ವಿರುದ್ಧ ದಾಖಲಾದ ಮೊಕದ್ದಮೆಗಳು ಈ ಪೌಡರ್ ಬಳಕೆಯು ಅಂಡಾಶಯದ ಕ್ಯಾನ್ಸರ್‌ಗೆ ಕಾರಣವಾಗಿದೆ ಎಂದು ತಿಳಿಸಿದೆ. ಇದು ಶ್ವಾಸಕೋಶಗಳು ಹಾಗೂ ಅಂಗಗಳ ಮೇಲೆ ಹಾನಿಯನ್ನುಂಟು ಮಾಡುತ್ತದೆ ಎನ್ನಲಾಗುತ್ತಿದೆ.


ಈ ಹೇಳಿಕೆಗಳು ಪೌಡರ್‌ನ ಮಾರಾಟದಲ್ಲಿ ಕುಸಿತವನ್ನುಂಟು ಮಾಡಿತು ಹಾಗೂ 2020 ರಲ್ಲಿ ತನ್ನ ಟಾಲ್ಕ್ ಆಧಾರಿತ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಲು ಪ್ರೇರೇಪಿಸಿತು. ಕಳೆದ ವರ್ಷ, J&J ವಿಶ್ವಾದ್ಯಂತ ಉತ್ಪನ್ನದ ಮಾರಾಟವನ್ನು ನಿಲ್ಲಿಸುವ ಯೋಜನೆಯನ್ನು ಪ್ರಕಟಿಸಿತು.


ಈ ಬಗ್ಗೆ ಹೇಳಿಕೆ ನೀಡಿದ ಸಂಸ್ಥೆ ಜಾಗತಿಕ ಪೋರ್ಟ್‌ಫೋಲಿಯೋ ಮೌಲ್ಯಮಾಪನದ ಭಾಗವಾಗಿ ಎಲ್ಲಾ ಕಾರ್ನ್‌ಸ್ಟಾರ್ಚ್-ಆಧಾರಿತ ಬೇಬಿ ಪೌಡರ್ ಪೋರ್ಟ್‌ಫೋಲಿಯೊಗೆ ಬದಲಾಯಿಸುವ ವಾಣಿಜ್ಯ ನಿರ್ಧಾರವನ್ನು ಮಾಡಿರುವುದಾಗಿ ತಿಳಿಸಿತು.


ದೀರ್ಘಾವಧಿಯ ಯಶಸ್ಸಿಗೆ ಕಂಪನಿಯನ್ನು ಸಾಧ್ಯವಾದಷ್ಟು ಉತ್ತಮ ಸ್ಥಾನದಲ್ಲಿ ಇರಿಸಲು ನಿರಂತರವಾಗಿ ಪೋರ್ಟ್‌ಫೋಲಿಯೊವನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ಸುಧಾರಿಸುತ್ತೇವೆ ಎಂದು ಸಂಸ್ಥೆ ತಿಳಿಸಿದೆ.


ಸಂಸ್ಥೆ ಆರೋಪಗಳ ಪ್ರತಿಯಾಗಿ ಏನು ಹೇಳಿಕೆ ನೀಡಿದೆ?


ಈ ಬದಲಾವಣೆಯ ಪರಿಣಾಮವಾಗಿ, ಸಂಸ್ಥೆಯು ಉತ್ಪನ್ನ ಕೊಡುಗೆಗಳನ್ನು ಸರಳಗೊಳಿಸಲಾಗುತ್ತದೆ ಅಂತೆಯೇ ಸಮರ್ಥನೀಯ ನವೀನತೆಗಳನ್ನು ತಲುಪಿಸಲಾಗುತ್ತದೆ ಹಾಗೂ ನಮ್ಮ ಗ್ರಾಹಕರ ಅವಶ್ಯಕತೆಗಳು ಮತ್ತು ಬದಲಾಗುತ್ತಿರುವ ವಿಶ್ವಾದ್ಯಂತ ಪ್ರವೃತ್ತಿಗಳನ್ನು ಪೂರೈಸಲಾಗುವುದು ಎಂದು ಹೇಳಿದೆ.


ಕಂಪನಿಯ ಪ್ರಕಾರ, ಕಾರ್ನ್‌ಸ್ಟಾರ್ಚ್‌ನಿಂದ ಮಾಡಿದ ಅದರ ಬೇಬಿ ಪೌಡರ್ ಈಗಾಗಲೇ ಅನೇಕ ದೇಶಗಳಲ್ಲಿ ಲಭ್ಯವಿದೆ. ಸಂಸ್ಥೆಯು ಉತ್ತರ ಅಮೇರಿಕಾದಲ್ಲಿ ಸುಮಾರು 38,000 ಗ್ರಾಹಕ ಮೊಕದ್ದಮೆಗಳಿಗೆ ಹಲವಾರು ತಪ್ಪು ಮಾಹಿತಿಗಳ ಮೇಲೆ ಆರೋಪ ಹೊರಿಸಿದೆ.


ಇದು ಪದೇಪದೇ ಆರೋಪಗಳನ್ನು ನಿರಾಕರಿಸಿದೆ ಅಂತೆಯೇ ಹಲವಾರು ವೈಜ್ಞಾನಿಕ ಅಧ್ಯಯನಗಳು ಮತ್ತು ನಿಯಂತ್ರಕ ಅನುಮತಿಗಳನ್ನು ಅದು ಮಾರಾಟ ಮಾಡುವ ವಸ್ತುಗಳು ಸುರಕ್ಷಿತವೆಂದು ತಿಳಿಸಿದೆ.


ಸಂಸ್ಥೆಯ ಕಾಸ್ಮೆಟಿಕ್ ಟಾಲ್ಕ್ ಸುರಕ್ಷತೆಗೆ ಸಂಬಂಧಿಸಿದಂತೆ ರೀತಿ ರಿವಾಜುಗಳು ಹಾಗೂ ನಿಯಮವಾಳಿಗಳು ಬದಲಾಗಿಲ್ಲ ಎಂದು ತಿಳಿಸಿದೆ. ಪ್ರಪಂಚದಾದ್ಯಂತದ ವೈದ್ಯಕೀಯ ವೃತ್ತಿಪರರು ನಡೆಸಿದ ದಶಕಗಳ ಸ್ವತಂತ್ರ ವೈಜ್ಞಾನಿಕ ಸಂಶೋಧನೆಯನ್ನು ಸಂಸ್ಥೆಯು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ತಿಳಿಸಿದೆ.


ಈ ಹೇಳಿಕೆಗಳು ಬೇಬಿ ಪೌಡರ್ ಸುರಕ್ಷಿತವಾಗಿವೆ ಎಂಬ ಅಂಶವನ್ನು ತೋರಿಸಿದೆ. ಅಂತೆಯೇ ಕ್ಯಾನ್ಸರ್ ಅನ್ನು ಉಂಟುಮಾಡುವುದಿಲ್ಲ ಎಂದು ಹೇಳಿದೆ. ಜಾನ್ಸನ್ ಬೇಬಿ ಪೌಡರ್ 1894 ರಿಂದ ಮಾರುಕಟ್ಟೆಯಲ್ಲಿದೆ.




ಪರಿಹಾರ ಧನ ತಗ್ಗಿಸಿದ ಸಂಸ್ಥೆ


ಮಿಸೌರಿ ಮೇಲ್ಮನವಿ ನ್ಯಾಯಾಲಯವು ಅಂಡಾಶಯದ ಕ್ಯಾನ್ಸರ್ ಅನ್ನು ಬೇಬಿ ಟಾಲ್ಕ್ ಮತ್ತು ಅಂತಹುದೇ ಉತ್ಪನ್ನಗಳಿಗೆ ಲಿಂಕ್ ಮಾಡಿದ ಮಹಿಳೆಯರ ಪರವಾಗಿ ಹಿಂದಿನ ತೀರ್ಪನ್ನು ರದ್ದುಗೊಳಿಸುವ ಜಾನ್ಸನ್ & ಜಾನ್ಸನ್​ನ ಪ್ರಯತ್ನವನ್ನು ತಿರಸ್ಕರಿಸಿತು.


ವಿದೇಶಿ ಮಾಧ್ಯಮ ವರದಿಗಳ ಪ್ರಕಾರ, ಸಂಸ್ಥೆಯು ಪರಿಹಾರ ಮೊತ್ತವನ್ನು $4.69 ಶತಕೋಟಿಯಿಂದ $ 2.12 ಶತಕೋಟಿಗೆ ಕಡಿಮೆ ಮಾಡಿದೆ ಎಂದು ವರದಿಯಾಗಿದೆ.

top videos
    First published: