Hemant Soren Disqualification: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್​ಗೆ ಅನರ್ಹತೆ ಭೀತಿ!

Hemant Soren Disqualification: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರ ವಿಧಾನಸಭೆ ಸದಸ್ಯತ್ವವನ್ನು ರದ್ದುಗೊಳ್ಳುವ ಹಂತದಲ್ಲಿದೆ. ಕೇಂದ್ರ ಚುನಾವಣಾ ಆಯೋಗ ರಾಜ್ಯಪಾಲರಿಗೆ ಈ ಕುರಿತಾಗಿ ಪತ್ರ ರವಾನಿಸಿದೆ. ಸೊರೆನ್ ಅವರು ಗಣಿಯೊಂದನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿರುವ ವಿಚಾರವಾಗಿ ಆಯೋಗ ಈ ಶಿಫಾರಸು ಮಾಡಿದೆ.

ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್

ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್

  • Share this:
ರಾಂಚಿ(ಆ.25): ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Jharkhand CM Hemant Soren) ವಿಧಾನಸಭೆ ಸದಸ್ಯತ್ವ (Disqualification) ಕಳೆದುಕೊಳ್ಳುವ ಹಂತದಲ್ಲಿದ್ದಾರೆ. ವಾಸ್ತವವಾಗಿ ಹೇಮಂತ್ ಸೊರೆನ್ ಅವರ ಸದಸ್ಯತ್ವ ರದ್ದತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ರಾಜ್ಯಪಾಲರಿಗೆ ತನ್ನ ಅಭಿಪ್ರಾಯವನ್ನು ಕಳುಹಿಸಿದೆ. ಸೊರೆನ್ ಅವರು ಗಣಿಯೊಂದನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿರುವ ವಿಚಾರವಾಗಿ ಆಯೋಗ ಈ ಶಿಫಾರಸು ಮಾಡಿದೆ. ರಾಜ್ಯಪಾಲ ರಮೇಶ್ ಬೈಸ್ ಅವರು ದೆಹಲಿಯಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಮಧ್ಯಾಹ್ನ 2 ಗಂಟೆಗೆ ರಾಂಚಿ ತಲುಪಲಿದ್ದಾರೆ. ಸುಮಾರು ಮೂರು ಗಂಟೆಗೆ ಗೆಜೆಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಹೇಮಂತ್ ಸೊರೆನ್ ಸದಸ್ಯತ್ವದ ಕಳೆದುಕೊಂಡಿದ್ದೇಕೆ? ಇಲ್ಲಿದೆ ವಿವರ

ಹೇಮಂತ್ ಸೊರೆನ್ ಅವರು ಕಲ್ಲು ಗಣಿಗಾರಿಕೆ ಗುತ್ತಿಗೆಯನ್ನು ತಮಗೇ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಇದು ಭ್ರಷ್ಟ ಪದ್ಧತಿ ಎಂದು ಕರೆದಿದೆ. ಏಕೆಂದರೆ ಹೇಮಂತ್ ರಾಜ್ಯ ಸಚಿವ ಸಂಪುಟದಲ್ಲಿ ಗಣಿ-ಅರಣ್ಯ ಸಚಿವರ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ: Biofuel- ಲೀಟರ್​ಗೆ 27 ರೂ, ಮೈಲೇಜು ಸೂಪರ್; ಇದು ಪಾಚಿ-ಆಧಾರಿತ ಜೈವಿಕ ಇಂಧನ

ವಾಸ್ತವವಾಗಿ, ಮಾಹಿತಿ ಹಕ್ಕು (ಆರ್‌ಟಿಐ) ಗಾಗಿ ಕೆಲಸ ಮಾಡಿದ ಶಿವಶಂಕರ್ ಶರ್ಮಾ ಅವರು ಗಣಿ ಹಗರಣವನ್ನು ಸಿಬಿಐ ಮತ್ತು ಇಡಿ ತನಿಖೆಗೆ ಒತ್ತಾಯಿಸಿ ಎರಡು ಪಿಐಎಲ್‌ಗಳನ್ನು ಸಲ್ಲಿಸಿದ್ದರು. ಹೇಮಂತ್ ಸೊರೆನ್ ತನ್ನ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಸ್ಟೋನ್ ಕ್ವಾರಿ ಮೈನ್ಸ್ ತಮ್ಮ ಹೆಸರಿಗೆ ಹಂಚಿಕೆ ಮಾಡಿಕೊಂಡಿದ್ದಾರೆ. ಶೆಲ್ ಕಂಪನಿಯಲ್ಲಿ ಹೂಡಿಕೆ ಮಾಡಿ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹಾಗಾದರೆ ಸೊರೆನ್ ಸದಸ್ಯತ್ವ ಕಳೆದುಕೊಳ್ಳೋದು ಪಕ್ಕಾನಾ?

ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ಹೀಗೆ ಮಾಡುವುದು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 9(ಎ) ಅಡಿಯಲ್ಲಿ ಗಂಭೀರ ವಿಷಯವಾಗಿದೆ. ಚುನಾವಣಾ ಆಯೋಗವು ಆರೋಪದಲ್ಲಿ ಸತ್ಯವನ್ನು ಕಂಡುಕೊಂಡರೆ, ಹೇಮಂತ್ ಸೊರೆನ್ ಅವರ ಸದಸ್ಯತ್ವವನ್ನು ಕಳೆದುಕೊಳ್ಳಬಹುದು. ಇಷ್ಟೇ ಅಲ್ಲ, ಭ್ರಷ್ಟಾಚಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಐದು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬಹುದು.

ಜಾರ್ಖಂಡ್‌ನಲ್ಲಿ ಮುಂದೇನಾಗಲಿದೆ?

ಜಾರ್ಖಂಡ್‌ನಲ್ಲಿ ಸರ್ಕಾರ ನಡೆಸುತ್ತಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಕೂಡ ಈಗ ಹೇಮಂತ್ ಸೊರೆನ್ ಬಲಿಗೆ ಯಾರನ್ನು ಆಯ್ಕೆ ಮಾಡುವುದು ಎಂಬ ಬಗ್ಗೆ ಚರ್ಚಿಸುತ್ತಿದೆ. ಸಿಎಂ ಹುದ್ದೆ ಸೊರೆನ್ ಕುಟುಂಬದ ಸದಸ್ಯರಲ್ಲೇ ಉಳಿದುಕೊಳ್ಳಬಹುದೆನ್ನಲಾಗಿದೆ. ಅದೇ ಸಮಯದಲ್ಲಿ, ಹೇಮಂತ್ ಅವರು ತಮ್ಮ ಪತ್ನಿ ಕಲ್ಪನಾ ಸೊರೆನ್ ಅವರ ಹೆಸರನ್ನು ಪರ್ಯಾಯವಾಗಿ ಮುಂದಿಡಬಹುದು ಎಂದು ಬಿಜೆಪಿ ಕೆಲವು ದಿನಗಳ ಹಿಂದೆ ಹೇಳಿಕೊಂಡಿತ್ತು.

ಆದರೆ, ಇದಕ್ಕಾಗಿ ಅವರ ಪಕ್ಷದಲ್ಲಿ ಒಮ್ಮತ ಮೂಡಬೇಕಿದೆ. ಕಲ್ಪನಾ ಅವರನ್ನು ಮುಖ್ಯಮಂತ್ರಿ ಮಾಡಿದರೆ ಪಕ್ಷದ ಹಿರಿಯ ನಾಯಕರು ಬಂಡಾಯವೆಬ್ಬಿಸಬಹುದು. ಅಷ್ಟೇ ಅಲ್ಲ, ಅವರ ಸೊಸೆ ಸೀತಾ ಸೊರೆನ್ ಕೂಡ ಬಂಡಾಯ ಏಳುವ ಸಾಧ್ಯತೆ ಇದೆ. ಇದೇ ವೇಳೆ ಕಲ್ಪನಾ ಸೊರೆನ್ ಹೆಸರಲ್ಲಿ ನೋಂದಾಯಿತ ಜಮೀನು ಖರೀದಿ ವಿಚಾರವನ್ನು ಪ್ರತಿಪಕ್ಷಗಳು ಎತ್ತುವ ಮೂಲಕ ಕಲ್ಪನಾ ಸಂಕಷ್ಟವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: Jharkhand: ಭಗವಾನ್ ಶ್ರೀಕೃಷ್ಣನೇ ಕನಸ್ಸಿನಲ್ಲಿ ಬಂದಿದ್ದನಂತೆ.. ಮುಸ್ಲಿಂ ವ್ಯಕ್ತಿಯಿಂದ ಅದ್ಭುತವನ್ನೇ ಮಾಡಿಸಿದ್ದಾನಂತೆ!

ಕುಟುಂಬದ ಹೊರಗಿನವರಲ್ಲಿ ಯಾರು ಸಿಎಂ ಆಗಬಹುದು?

ಸೊರೆನ್ ಕುಟುಂಬದ ಹೊರಗೆ ಚರ್ಚೆಯಾಗುತ್ತಿರುವ ಹೆಸರುಗಳ ಪೈಕಿ ಹೇಮಂತ್ ಸರ್ಕಾರದ ಇಬ್ಬರು ಸಚಿವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ. ಸಾರಿಗೆ ಸಚಿವ ಚಂಪೈ ಸೊರೆನ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜೋಬಾ ಮಾಂಝಿ. ಇಬ್ಬರೂ ಹೇಮಂತ್ ಸೊರೆನ್ ಅವರ ಆಪ್ತರು. ಇಬ್ಬರೂ ಶಿಬು ಸೊರೆನ್ ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದಾರೆ. ಹೇಮಂತ್ ಸೊರೆನ್ ಕುಟುಂಬದ ಹೊರಗಿನ ಸದಸ್ಯರನ್ನು ಆಯ್ಕೆ ಮಾಡಿದರೆ, ಈ ಇಬ್ಬರಲ್ಲಿ ಯಾರಾದರೂ ಒಬ್ಬರು ಮುಖ್ಯಮಂತ್ರಿಯಾಗಬಹುದೆನ್ನಲಾಗಿದೆ.
Published by:Precilla Olivia Dias
First published: