Explainer: ಜೆರುಸಲೇಂನ ಅಕ್ಸಾ ಮಸೀದಿ ಬಳಿ ಅರಬ್- ಇಸ್ರೇಲಿ ನಡುವೆ ಘರ್ಷಣೆ ಏಕೆ?; ಈ ಸ್ಥಳದ ಹಿನ್ನೆಲೆ ಏನು?

ಅಕ್ಸಾ ಮಸೀದಿ ಇಸ್ಲಾಮಿಕ್ ನಂಬಿಕೆಯ ಪವಿತ್ರ ರಚನೆಗಳಲ್ಲಿ ಒಂದಾಗಿದೆ. ಈ ಸ್ಥಳವು ಹಳೆಯ ನಗರದ ಜೆರುಸಲೇಂನ ಭಾಗವಾಗಿದೆ. ಇದು ಕ್ರಿಶ್ಚಿಯನ್ನರು, ಯಹೂದಿಗಳು ಮತ್ತು ಮುಸ್ಲಿಮರಿಗೆ ಪವಿತ್ರ ಸ್ಥಳವಾಗಿದೆ.

 ಅಲ್​ ಅಕ್ಸಾ ಮಸೀದಿ

ಅಲ್​ ಅಕ್ಸಾ ಮಸೀದಿ

  • Share this:
ಇಸ್ರೇಲ್ - ಪ್ಯಾಲೆಸ್ಟೈನ್‌ ನಡುವೆ ಕೆಲ ವಾರಗಳಿಂದ ಮತ್ತೆ ಹಿಂಸಾತ್ಮಕ ಘರ್ಷಣೆಗಳು ನಡೆಯುತ್ತಿದೆ. ಈ ಘರ್ಷಣೆಯಲ್ಲಿ ಅಕ್ಸಾ ಮಸೀದಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ತಿಂಗಳು ಜೆರುಸಲೇಂನ ಅಕ್ಸಾ ಮಸೀದಿಯಲ್ಲಿ ಪ್ಯಾಲೆಸ್ಟೈನ್‌ ಮತ್ತು ಇಸ್ರೇಲಿ ಭದ್ರತಾ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳು ಪವಿತ್ರ ಭೂಮಿಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾದ ಧಾರ್ಮಿಕ ಭೂಪ್ರದೇಶದ ಒಂದು ಭಾಗವಾಗಿ ಅದರ ಮಹತ್ವವನ್ನು ಪ್ರತಿಬಿಂಬಿಸುತ್ತವೆ. ಮಸೀದಿ ಕಾಂಪೌಂಡ್‌ನ ಕೆಲವು ಮೂಲಭೂತ ಅಂಶಗಳು ಇಲ್ಲಿವೆ. ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಯಹೂದಿಗಳು - ಈ ಮೂರು ಪ್ರಮುಖ ಧರ್ಮಗಳಿಗೆ ಶತಮಾನಗಳಿಂದ ಅದರ ಪ್ರಾಮುಖ್ಯತೆಯ ಬಗ್ಗೆ ವಿವರ ಇಲ್ಲಿದೆ ನೊಡಿ..

1) ಅಕ್ಸಾ ಮಸೀದಿ ಎಂದರೇನು..?
ಅಕ್ಸಾ ಮಸೀದಿ ಇಸ್ಲಾಮಿಕ್ ನಂಬಿಕೆಯ ಪವಿತ್ರ ರಚನೆಗಳಲ್ಲಿ ಒಂದಾಗಿದೆ. ಈ ಮಸೀದಿಯನ್ನು ಮುಸ್ಲಿಮರು ಹರಾಮ್ ಅಲ್-ಶರೀಫ್ ಅಥವಾ ನೋಬಲ್ ಸ್ಯಾಂಕ್ಚುವರಿ ಎಂದು ಕರೆಯುವ 35 ಎಕರೆ ಜಾಗ ಮತ್ತು ಯಹೂದಿಗಳು ಇದನ್ನೇ ಟೆಂಪಲ್ ಮೌಂಟ್ ಎಂದು ಕರೆಯುತ್ತಾರೆ. ಈ ಸ್ಥಳವು ಹಳೆಯ ನಗರದ ಜೆರುಸಲೇಂನ ಭಾಗವಾಗಿದೆ. ಇದು ಕ್ರಿಶ್ಚಿಯನ್ನರು, ಯಹೂದಿಗಳು ಮತ್ತು ಮುಸ್ಲಿಮರಿಗೆ ಪವಿತ್ರವಾಗಿದೆ.

ಅರೇಬಿಕ್ ಭಾಷೆಯಲ್ಲಿ, “ಅಕ್ಸಾ” ಎಂದರೆ ಅತ್ಯಂತ ದೂರದಲ್ಲಿದೆ ಎಂದು. ಈ ಸ್ಥಳದಲ್ಲಿ ಮೊಹಮ್ಮದ್ ಪ್ರವಾದಿ ಒಂದು ರಾತ್ರಿ ಮೆಕ್ಕಾದಿಂದ ಈ ಮಸೀದಿಗೆ ಪ್ರಾರ್ಥನೆ ಮಾಡಲು ಬಂದರು ಮತ್ತು ನಂತರ ಅಲ್ಲಿಂದ ಸ್ವರ್ಗಕ್ಕೆ ಹೋಗುವ ಬಗ್ಗೆ ಉಲ್ಲೇಖಿಸಿದೆ.

5,000 ಭಕ್ತರು ಒಮ್ಮೆ ಈ ಮಸೀದಿಯಲ್ಲಿ ಪ್ರಾರ್ಥನೆ ಮಾಡಬಹುದಾಗಿದ್ದು, ಇದು ಎಂಟನೇ ಶತಮಾನದ ಆರಂಭದಲ್ಲಿ ಪೂರ್ಣಗೊಂಡಿದೆ ಎಂದು ನಂಬಲಾಗಿದೆ ಮತ್ತು ಜೆರುಸಲೇಂನ ವ್ಯಾಪಕವಾಗಿ ಗುರುತಿಸಲ್ಪಟ್ಟ ಸಂಕೇತವಾಗಿರುವ ಚಿನ್ನದ ಗುಮ್ಮಟ ಇಸ್ಲಾಮಿಕ್ ದೇವಾಲಯವಾದ ಡೋಮ್ ಆಫ್ ದಿ ರಾಕ್ ಇದರ ಬಳಿಯೇ ಇದೆ. ಮುಸ್ಲಿಮರು ಈ ಇಡೀ ಕಾಂಪೌಂಡ್‌ ಅನ್ನು ಪವಿತ್ರವೆಂದು ಪರಿಗಣಿಸುತ್ತಾರೆ.

ಯಹೂದಿಗಳಿಗೆ, ಹೀಬ್ರೂ ಭಾಷೆಯಲ್ಲಿ ಹರ್ ಹಬಾಯಿತ್ ಎಂದು ಕರೆಯಲ್ಪಡುವ ಟೆಂಪಲ್ ಮೌಂಟ್ ಪವಿತ್ರ ಸ್ಥಳವಾಗಿದೆ. ಏಕೆಂದರೆ ಇದು ಎರಡು ಪ್ರಾಚೀನ ದೇವಾಲಯಗಳ ಸ್ಥಳವಾಗಿತ್ತು - ಮೊದಲನೆಯದನ್ನು ಬೈಬಲ್ ಪ್ರಕಾರ ರಾಜ ಸೋಲೋಮನ್ ನಿರ್ಮಿಸಿದನು ಮತ್ತು ನಂತರ ಅದನ್ನು ಬ್ಯಾಬಿಲೋನಿಯನ್ನರು ನಾಶಪಡಿಸಿದರು; ಎರಡನೆಯದು ಸುಮಾರು 600 ವರ್ಷಗಳ ಕಾಲ ನಿಂತಿತ್ತು. ಅದನ್ನು ಮೊದಲ ಶತಮಾನದಲ್ಲಿ ರೋಮನ್ ಸಾಮ್ರಾಜ್ಯವು ನಾಶಮಾಡಿತು ಎನ್ನಲಾಗಿದೆ.

ಯುನೆಸ್ಕೋ, ಜೆರುಸಲೇಂನ ಹಳೆಯ ನಗರ (ಓಲ್ಡ್‌ ಸಿಟಿ) ಮತ್ತು ಅದರ ಗೋಡೆಗಳನ್ನು ವಿಶ್ವ ಪರಂಪರೆಯ ತಾಣವೆಂದು ವರ್ಗೀಕರಿಸಿದೆ. ಇದರರ್ಥ ಇದನ್ನು "ಅತ್ಯುತ್ತಮ ಅಂತಾರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ವಿಶೇಷ ರಕ್ಷಣೆಗೆ ಅರ್ಹವಾಗಿದೆ" ಎಂದು ಪರಿಗಣಿಸಲಾಗಿದೆ.

2) ಮಸೀದಿಯ ಮೇಲೆ ಯಾರ ನಿಯಂತ್ರಣವಿದೆ..?
1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲ್ ಓಲ್ಡ್ ಸಿಟಿ ಸೇರಿದಂತೆ ಪೂರ್ವ ಜೆರುಸಲೇಂ ಅನ್ನು ಜೋರ್ಡಾನ್‌ನಿಂದ ವಶಪಡಿಸಿಕೊಂಡಿತು, ನಂತರ ಈ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿತು. ಇಸ್ರೇಲ್ ನಂತರ ಏಕೀಕೃತ ಜೆರುಸಲೇಂ ಅನ್ನು ತನ್ನ ರಾಜಧಾನಿ ಎಂದು ಘೋಷಿಸಿತು. ಆದರೂ ಆ ಕ್ರಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿಲ್ಲ.

ಸೂಕ್ಷ್ಮವಾದ ಯಥಾಸ್ಥಿತಿ ವ್ಯವಸ್ಥೆಯಲ್ಲಿ, ಜೋರ್ಡಾನ್‌ನಿಂದ ಧನಸಹಾಯ ಮತ್ತು ನಿಯಂತ್ರಣದಲ್ಲಿರುವ ವಕ್ಫ್ ಎಂದು ಕರೆಯಲ್ಪಡುವ ಇಸ್ಲಾಮಿಕ್ ಟ್ರಸ್ಟ್‌, ಅಕ್ಸಾ ಮಸೀದಿ ಮತ್ತು ಡೋಮ್ ಆಫ್ ದಿ ರಾಕ್‌ನ ಆಡಳಿತವನ್ನು ದಶಕಗಳ ಕಾಲ ಮಾಡಿದಂತೆ ಮುಂದುವರೆಸಿತು. ಇಸ್ರೇಲ್‌ ಜೋರ್ಡಾನ್ ಜೊತೆ 1994 ರ ಶಾಂತಿ ಒಪ್ಪಂದದಲ್ಲಿ ವಿಶೇಷ ಪಾತ್ರವನ್ನು ಪುನರುಚ್ಚರಿಸಿತು.

ಇಸ್ರೇಲಿ ಭದ್ರತಾ ಪಡೆಗಳು ಈ ಪವಿತ್ರ ಜಾಗದಲ್ಲಿ ಅಸ್ತಿತ್ವವನ್ನು ಕಾಯ್ದುಕೊಳ್ಳುತ್ತವೆ ಮತ್ತು ಅವರು ವಕ್ಫ್ ಜೊತೆ ಸಮನ್ವಯ ಸಾಧಿಸುತ್ತಾರೆ. ಯಹೂದಿಗಳು ಮತ್ತು ಕ್ರಿಶ್ಚಿಯನ್ನರಿಗೂ ಭೇಟಿ ಮಾಡಲು ಅನುಮತಿಸಲಾಗಿದೆ. ಆದರೆ ಮುಸ್ಲಿಮರಿಗಿಂತ ಭಿನ್ನವಾಗಿ, ಯಥಾಸ್ಥಿತಿ ವ್ಯವಸ್ಥೆಯಡಿಯಲ್ಲಿ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ. (ಯಹೂದಿಗಳು ವೆಸ್ಟರ್ನ್ ವಾಲ್‌ನಲ್ಲಿರುವ ಪವಿತ್ರ ಪ್ಲ್ಯಾಟ್ಯೂನ ಸ್ವಲ್ಪ ಕೆಳಗೆ ಪ್ರಾರ್ಥಿಸುತ್ತಾರೆ. ಒಮ್ಮೆ ದೇವಾಲಯದ ಪರ್ವತವನ್ನು ಸುತ್ತುವರೆದಿದ್ದ ಗೋಡೆಯ ಅವಶೇಷಗಳು ಈ ವೆಸ್ಟರ್ನ್ ವಾಲ್‌)

ಈ ಹಿನ್ನೆಲೆ ಮುಸ್ಲಿಮೇತರರ ವಿರುದ್ಧದ ತಾರತಮ್ಯದ ಕಾರಣಕ್ಕೆ ಹಿಂಸಾಚಾರಗಳು ಆಗಾಗ್ಗೆ ಭುಗಿಲೇಳುತ್ತವೆ ಎಂದು ವಿಮರ್ಶಕರು ಹೇಳುತ್ತಾರೆ.

ಇಸ್ರೇಲ್‌ನ ಜೆರುಸಲೇಂ ದಿನ ಎಂಬ ವಾರ್ಷಿಕ ಆಚರಣೆಯ ದಿನವೂ ಉದ್ವಿಗ್ನತೆ ಹೆಚ್ಚಾಗಿರುತ್ತದೆ. ಈ ದಿನ ಇಸ್ರೇಲ್‌ನಲ್ಲಿ ಅಧಿಕೃತ ರಜಾದಿನವಾಗಿದ್ದು, ಇಡೀ ನಗರವನ್ನು ವಶಪಡಿಸಿಕೊಂಡ ನೆನಪಿನ ಈ ಆಚರಣೆಯು ಇತ್ತೀಚೆಗೆ ಸೋಮವಾರ ನಡೆಯಿತು. ಇದು ಜೆರುಸಲೆಮ್‌ನ ಪೂರ್ವ ಭಾಗದ ನಿವಾಸಿಗಳು ಸೇರಿದಂತೆ ಅನೇಕ ಪ್ಯಾಲೆಸ್ಟೈನ್‌ನವರಿಗೆ ಪ್ರಚೋದನೆಯಾಗಿದೆ. ಪೂರ್ವ ಜೆರುಸಲೇಂ ಭವಿಷ್ಯದ ಪ್ಯಾಲೆಸ್ಟೈನ್‌ ರಾಷ್ಟ್ರದ ರಾಜಧಾನಿಯಾಗಬೇಕೆಂದು ಪ್ಯಾಲೆಸ್ಟೀನಿಯಾದವರು ಬಯಸುತ್ತಾರೆ.

3) ಈ ಜಾಗದ ಸಂಪೂರ್ಣ ನಿಯಂತ್ರಣವನ್ನು ಇಸ್ರೇಲ್ ಬಯಸುತ್ತದೆಯೇ..?
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ಇಸ್ರೇಲ್ ಅಧಿಕಾರಿಗಳು ಯಥಾಸ್ಥಿತಿ ಬದಲಿಸುವ ಉದ್ದೇಶ ಹೊಂದಿಲ್ಲ ಎಂದು ಹೇಳಿದ್ದಾರೆ.

ಆದರೆ ಕೆಲವು ಇಸ್ರೇಲಿ ಧಾರ್ಮಿಕ ಗುಂಪುಗಳು ಈ ಸ್ಥಳದಲ್ಲಿ ಪ್ರಾರ್ಥನೆ ಮಾಡುವ ಹಕ್ಕನ್ನು ದೀರ್ಘಕಾಲದಿಂದ ಒತ್ತಾಯಿಸುತ್ತಿವೆ. ಏಪ್ರಿಲ್‌ನಲ್ಲಿ, ಜೋರ್ಡಾನ್ ವಿದೇಶಾಂಗ ಸಚಿವಾಲಯವು ಈ ಜಾಗಕ್ಕೆ ಹೆಚ್ಚಿನ ಸಂಖ್ಯೆಯ ಯಹೂದಿ ಪ್ರವಾಸಿಗರು ಬಮದಿರುವ ಬಗ್ಗೆ ಔಪಚಾರಿಕವಾಗಿ ದೂರು ನೀಡಿತು, ಇದು ಯಥಾಸ್ಥಿತಿಯ ಉಲ್ಲಂಘನೆ ಎಂದು ಹೇಳಿದೆ.

4) ಇತ್ತೀಚಿನ ಪ್ರತಿಭಟನೆಗಳಿಗೆ ಕಾರಣ ಏನು..?
ಅಲ್ ಅಕ್ಸಾದಲ್ಲಿ ಸೋಮವಾರ ಹಿಂಸಾಚಾರ ಪ್ರಾರಂಭವಾಗುವ ವಾರಗಳಲ್ಲಿ, ಮಸೀದಿ ಕಾಂಪೌಂಡ್‌ಗೆ ಸಂಬಂಧವಿಲ್ಲದ ವಿಷಯಗಳ ಕುರಿತು ಕೆಲವು ಯಹೂದಿಗಳು ಮತ್ತು ಪ್ಯಾಲೆಸ್ಟೈನ್‌ ಜನರ ನಡುವೆ ಉದ್ವಿಗ್ನತೆ ಉಂಟಾಗುತ್ತಿದೆ. ಕೆಲವು ಪ್ಯಾಲೆಸ್ಟೈನ್‌ ಜನರು ಜೆರುಸಲೇಂನಲ್ಲಿನ ಸಾಂಪ್ರದಾಯಿಕ ಯಹೂದಿಗಳ ಮೇಲೆ ದಾಳಿ ಮಾಡಿದರು, ಮತ್ತು ಉಗ್ರವಾದಿ ಯಹೂದಿ ಪ್ರಾಬಲ್ಯ ಗುಂಪು ಮೆರವಣಿಗೆಯನ್ನು ನಡೆಸಿತು, ಇದರಲ್ಲಿ ಭಾಗವಹಿಸುವವರು "ಅರಬ್ಬರಿಗೆ ಸಾವು" ಎಂದು ಜಪಿಸಿದರು.

ಪವಿತ್ರ ರಂಜಾನ್ ತಿಂಗಳ ಮೊದಲ ವಾರಗಳಲ್ಲಿ ಓಲ್ಡ್ ಸಿಟಿಯ ನೆಚ್ಚಿನ ಪ್ಲಾಜಾದಲ್ಲಿ ಒಟ್ಟುಗೂಡಲು ಪೊಲೀಸರು ನಿಷೇಧಿಸಿದ್ದಾರೆ ಎಂದು ಪ್ಯಾಲೆಸ್ಟೀನಿಯರು ಕೋಪಗೊಂಡಿದ್ದರು.

ಪೂರ್ವ ಜೆರುಸಲೇಂನ ಶೇಖ್ ಜಾರ್ರಾದಿಂದ ನೆರೆಹೊರೆಯ ಪ್ಯಾಲೆಸ್ಟೈನ್‌ ನಿವಾಸಿಗಳನ್ನು ಒಕ್ಕಲೆಬ್ಬಿಸಿ ಇಸ್ರೇಲಿ ವಸಾಹತು ನಿರ್ಮಾಣಕ್ಕೆ ದಾರಿ ಮಾಡಿಕೊಡಲಾಗುತ್ತೆಂದು ನಿರೀಕ್ಷಿಸಲಾಗಿರುವುದರಿಂದ ಇಸ್ರೇಲಿ ಪೊಲೀಸರೊಂದಿಗೆ ಪ್ಯಾಲೆಸ್ಟೈನ್‌ ಜನತೆ ಸಂಘರ್ಷ ನಡೆಸಿದ್ದು ಮತ್ತಷ್ಟು ಘರ್ಷಣೆಗೆ ಕಾರಣವಾಗಿದೆ.

ಕಳೆದ ಎರಡು ವರ್ಷಗಳಲ್ಲಿ ನಾಲ್ಕು ಚುನಾವಣೆಗಳ ನನಂತರವೂ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆಂದು ಸರಿಯಾಗಿ ನಿರ್ಧಾರವಾಗಿಲ್ಲ. ಇನ್ನೊಂದೆಡೆ, ಪ್ಯಾಲೆಸ್ಟೈನ್‌ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಈ ತಿಂಗಳ ಕೊನೆಯಲ್ಲಿ ನಡೆಯಲಿರುವ ಪ್ಯಾಲೆಸ್ಟೀನಿಯನ್ ಶಾಸಕಾಂಗ ಚುನಾವಣೆಯನ್ನು ಅನಿರ್ದಿಷ್ಟವಾಗಿ ಮುಂದೂಡಿದ ನಂತರ ಘರ್ಷಣೆಗಳು ನಡೆದಿವೆ. ಇದು 2006ರ ನಂತರ ನಡೆಯಬೇಕಿದ್ದ ಅಂತಹ ಮೊದಲ ಮತದಾನವಾಗಿದೆ.

5) ಹಿಂದಿನ ಘರ್ಷಣೆಗಳು ಇಸ್ರೇಲಿ-ಪ್ಯಾಲೆಸ್ಟೀನಿಯನ್ ಸಂಘರ್ಷವನ್ನು ಹೇಗೆ ರೂಪಿಸಿವೆ..?
ಜೆರುಸಲೇಂನ ಓಲ್ಡ್ ಸಿಟಿಯಲ್ಲಿನ ಧಾರ್ಮಿಕ ದೇವಾಲಯಗಳ ಕುರಿತಾದ ಎಲ್ಲಾ ಹಳೆಯ ಸಂಘರ್ಷಗಳು, ಕಹಿಯಾದ ಆರೋಪಗಳು ಮತ್ತು ಗಟ್ಟಿಯಾದ ವರ್ತನೆಗಳು ಪ್ರತಿಧ್ವನಿಸಿವೆ. ಆದರೆ ಕೆಲವರು ವಿಶೇಷವಾಗಿ ಇಸ್ರೇಲಿ ನೀತಿಯನ್ನು ರೂಪಿಸಲು ಸಹಾಯ ಮಾಡಿದ್ದಾರೆ ಎಂದು ಎದ್ದು ಕಾಣುತ್ತದೆ.

- ಉದಾಹರಣೆಗೆ, 1990 ರಲ್ಲಿ, ಯಹೂದಿ ಉಗ್ರವಾದಿಗಳ ಗುಂಪು ಪ್ರಾಚೀನ ಕಾಲದಲ್ಲಿ ನಾಶವಾದ ಎರಡು ದೇವಾಲಯಗಳ ಬದಲು ಒಂದು ನೂತನ ದೇವಾಲಯ ನಿರ್ಮಿಸಲು ಪ್ರಯತ್ನಿಸಿದ ನಂತರ ಮಾರಣಾಂತಿಕ ಗಲಭೆಗಳು ನಡೆದವು. ಈ ಹಿಂಸಾಚಾರದ ಕಾರಣದಿಂದ ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವು ರಾಷ್ಟ್ರಗಳು ಇಸ್ರೇಲ್ ಅನ್ನು ವ್ಯಾಪಕವಾಗಿ ಖಂಡಿಸಲು ಕಾರಣವಾಯಿತು.

- 2000 ರಲ್ಲಿ, ಅಲ್ಲಿನ ಯಹೂದಿ ಹಕ್ಕುಗಳನ್ನು ಪ್ರತಿಪಾದಿಸಲು ಆ ಪವಿತ್ರ ಜಾಗಕ್ಕೆ ತೆರಳಿದ ಬಲಪಂಥೀಯ ಇಸ್ರೇಲಿ ರಾಜಕಾರಣಿ ಏರಿಯಲ್ ಶರೋನ್ ಮತ್ತು ಅಂದಿನ ಇಸ್ರೇಲ್‌ನ ವಿರೋಧ ಪಕ್ಷದ ನಾಯಕ ಇಸ್ರೇಲಿ-ಪ್ಯಾಲೆಸ್ಟೀನಿಯನ್ನರ ನಡುವೆ ಹಿಂಸಾಚಾರ ಹೆಚ್ಚಾಗುವಂತೆ ಮಾಡಿದ್ದರು. ಆ ವೇಳೆ ಎರಡನೇ ಇಂಟಿಫಾಡಾ ಎಂದು ಕರೆಯಲಾದ ಪ್ಯಾಲೆಸ್ಟೀನಿಯನ್ ದಂಗೆಗೆ ಕಾರಣವಾಯಿತು

- 2017 ರಲ್ಲಿ, ಆ ಕಾಂಪೌಂಡ್‌ನಲ್ಲಿ ಮೂವರು ಅರಬ್-ಇಸ್ರೇಲಿ ನಾಗರಿಕರು ಇಬ್ಬರು ಇಸ್ರೇಲಿ ಡ್ರೂಜ್ ಪೊಲೀಸ್ ಅಧಿಕಾರಿಗಳನ್ನು ಗುಂಡು ಹಾರಿಸಿ ಕೊಂದ ನಂತರ ಬಿಕ್ಕಟ್ಟು ಭುಗಿಲೆದ್ದಿತ್ತು. ನಂತರ ಇಸ್ರೇಲಿ ಅಧಿಕಾರಿಗಳಿಗೆ ಆ ಜಾಗಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು ಮತ್ತು ಮೆಟಲ್ ಡಿಟೆಕ್ಟರ್‌ಗಳು ಹಾಗೂ ಕ್ಯಾಮೆರಾಗಳನ್ನು ಸ್ಥಾಪಿಸಲು ಕಾರಣವಾಯಿತು.

ಆ ಭದ್ರತಾ ಕ್ರಮಗಳ ಬಗ್ಗೆ ಅರಬ್ ಆಕ್ರೋಶಹೊರಹಾಕಿದ್ದು, ಜೋರ್ಡಾನ್‌ನೊಂದಿಗೆ ಹೆಚ್ಚು ಹಿಂಸಾಚಾರ ಮತ್ತು ಉದ್ವಿಗ್ನತೆಗೆ ಕಾರಣವಾಯಿತು. ಈ ವೇಳೆ ಅಮೆರಿಕದ ರಾಜತಾಂತ್ರಿಕ ಮಧ್ಯಸ್ಥಿಕೆಯೂ ನಡೆದಿತ್ತು. ಬಳಿಕ ಮೆಟಲ್ ಡಿಟೆಕ್ಟರ್‌ಗಳನ್ನು ತೆಗೆದುಹಾಕಲಾಗಿದೆ.
Published by:Sushma Chakre
First published: