ಆನ್ಲೈನ್ ಇ-ಕಾಮರ್ಸ್ ಮಳಿಗೆಯಾದ ಅಮೆಜಾನ್ ಕಂಪನಿ ಸಿಇಒ ಜೆಫ್ ಬೆಜೋಸ್ ಬಾಹ್ಯಾಕಾಶಕ್ಕೆ ತೆರಳಲು ಸಜ್ಜಾಗಿದ್ದಾರೆ. ಮುಂದಿನ ತಿಂಗಳು ತನ್ನ ಸಹೋದರ ಜತೆಗೂಡಿಕೊಂಡು ತನ್ನದೇ ಒಡೆತನದ ಕಂಪನಿ ತಯಾರಿಸಿದ ರಾಕೆಟ್ ಮೂಲಕ ಹಾರಾಟಲು ಮುಂದಾಗಿದ್ದಾರೆ.
ಜೆಫ್ ಬೆಜೋಸ್ ಬಾಹ್ಯಾಕಾಶಕ್ಕೆ ಹೋಗುತ್ತಿರುವುದೇಕೆ?
ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಜೆಫ್ ಬೆಜೋಸ್ ತನ್ನದೇ ಬ್ಲೂ ಒರಿಜಿನ್ ಕಂಪನಿ ರಚಿಸಿದ ನ್ಯೂ ಶೆಪರ್ಡ್ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ. ದೃಶ್ಯ ವೀಕ್ಷಣೆಗಾಗಿ ಬೆಜೋಸ್ ಈ ಆಸೆಯನ್ನು ಹೊತ್ತುಕೊಂಡಿದ್ದು, ಅತಿ ಎತ್ತರದಿಂದ ಭೂಮಿಯನ್ನು ನೋಡುವ ತವಕದಲ್ಲಿದ್ದಾರೆ. ಪ್ರಸ್ತುತ ವರದಿಯ ಪ್ರಕಾರ ಬೆಜೋಸ್ ಜಗತ್ತಿನ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಒಟ್ಟು ಆಸ್ತಿ 185 ಬಿಲಿಯನ್ಗಿಂತಲೂ ಹೆಚ್ಚು.
ಬಾಹ್ಯಾಕಾಶಕ್ಕೆ 15 ಜೆಟ್ಗಳನ್ನು ಹಾರಾಟ ನಡೆಸುವ ಮೂಲಕ ಪರೀಕ್ಷೆ ಮಾಡಲಾಗಿದೆ. ಆದರೆ ಯಾವುದೇ ಮಾನವರು ಹಾರಾಟ ನಡೆಸಲಿಲ್ಲ. ಜುಲೈ 20ರಂದು ಜೆಫ್ ಬೆಜೋಸ್ ಸಹೋದರ ಮಾರ್ಕ್ ಜತೆಗೆ ಬಾಹ್ಯಕಾಶ ತೆರಳಿದ್ದಾರೆ. ಈಗಾಗಲೇ ಬಾಹ್ಯಾಕಾಶ ತೆರಳಲು 5 ಸಾವಿರಕ್ಕೂ ಹೆಚ್ಚು ಬಿಡ್ಗಳು ಬಂದಿದ್ದವು. ಎರಡನೇ ಸುತ್ತಿನ ಹರಾಜಿನಲ್ಲಿ2.8 ಬಿಲಿಯನ್ ಆಗಿದೆ ಎಂದು ಬ್ಲೂ ಒರಿಜಿನ್ ಹೇಳಿದೆ.
ಯಾವ ರಾಕೆಟ್ ಜೆಫ್ ಬೆಜೋಸ್ ಅವರನ್ನು ಹೊತ್ತೊಯ್ಯಲಿದೆ?
ನ್ಯೂ ಶೆಪರ್ಡ್ ರಾಕೆಟ್ ಮತ್ತು ಕ್ಯಾಪ್ಸುಲ್ ಕ್ಯಾಂಬೊ ಮೂಲಕ 6 ಪ್ರಯಾಣಿಕರು ಜೊತೆಗೆ ಸುಮಾರು 62 ಮೈಲಿ (100 ಕಿ.ಮೀ) ಹಾರಾಡಲಿದೆ. ಇನ್ನು ನ್ಯೂ ಶೆಪರ್ಡ್ ಅನ್ನು ಸುರಕ್ಷಿತವಾಗಿ ವಿನ್ಯಾಸ ಮಾಡಲಾಗಿದೆ.
10 ನಿಮಿಷದ ಪ್ರವಾಸ ಇದಾಗಿದೆ. ಅದರ ಜತೆಗೆ ನಾಲ್ಕು ನಿಮಿಷಗಳ ಕಾಲ ಕರ್ಮನ್ ರೇಖೆಯ ಮೇಲೆ ಪ್ರಯಾಣಿಸಲಿದ್ದಾರೆ. ಕರ್ಮನ್ ರೇಖೆಯು ಭೂಮಿಯ ವಾತಾವರಣ ಮತ್ತು ಬಾಹ್ಯಕಾಶದ ನಡುವಿನ ಗುರುತಿಸಲ್ಪಟ್ಟ ರೇಖೆಯಾಗಿದೆ.
ಅಲನ್ ಶೆಪರ್ಡ್ ರಾಕೆಟ್
ಬಾಹ್ಯಾಕಾಶಕ್ಕೆ ಹೋದ ಮೊದಲ ಅಮೆರಿಕ ಮೂಲದ ಮರ್ಕ್ಯುರಿ ಗಗನಯಾತ್ರಿ ಅಲನ್ ಶೆಪರ್ಡ್ ಅವರ ಹೆಸರನ್ನು ರಾಕೆಟ್ಗೆ ಇಡಲಾಗಿದೆ.
ನ್ಯೂ ಶೆಪರ್ಡ್ ರಾಕೆಟ್ ಬ್ಲೂ ಒರಿಜಿನ್ನ ಮರುಬಳಕೆ ಮಾಡಬಹುದಾದ ಸಬೋರ್ಬಿಟಲ್ ರಾಕೆಟ್ ವ್ಯವಸ್ಥೆಯಾಗಿದ್ದು, ಪೆಲೋಡ್ ಮತ್ತು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲು ವಿನ್ಯಾಸಗೊಳಿಸಲಾಗಿದೆ.
ಕಂಪನಿ ಏನು ಹೇಳುತ್ತದೆ?
ಬ್ಲೂ ಒರಿಜಿನ್ 2012ರಿಂದ ನ್ಯೂ ಶೆಪರ್ಡ್ ಮತ್ತು ಅದರ ಸುರಕ್ಷಿತ ವ್ಯವಸ್ಥೆಯನ್ನು ಪರೀಕ್ಷಿಸುತ್ತಿದೆ. 15 ಯಶಸ್ವಿ ಕಾರ್ಯಚರಣೆಯ ಜೊತೆಗೆ 3 ಎಸ್ಕೇಪ್ ಪರೀಕ್ಷೆಯನ್ನು ಎದುರಿಸಿದೆ. ತೊಂದರೆಯಾದ ಪ್ರಯಾನಿಕರು ಸುರಕ್ಷತವಾಗಿರುವಂತೆ ವ್ಯವಸ್ಥೆಯನ್ನು ಇದರಲ್ಲಿ ಕಲ್ಪಿಸಲಾಗಿದೆ.
ಬಾಹ್ಯಾಕಾಶಕ್ಕೆ ತೆರಳಲಿರುವ ಇತರೆ ಜಗತ್ತಿನ ಶ್ರೀಮಂತರು ಯಾರ್ಯಾರು?
ಬ್ರಿಟಿಷ್ ಬಿಲಿಯನೇರ್ ರಿಚರ್ಡ್ ಬ್ರಾನ್ಸನ್ ಅವರು ವರ್ಜಿನ್ ಗ್ಯಾಲಕ್ಟಿಕ್ ಹೊಂದಿದ್ದಾರೆ. ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಸ್ಪೇಸ್ ಎಕ್ಸ್ ಮೂಲಕ ಮನುಷ್ಯರನ್ನು ಕೊಂಡೊಯ್ಯುವ ಆಲೋಚನೆ ಮಾಡಿದ್ದಾರೆ. ಅದಕ್ಕೂ ಮೊದಲೇ ಬೆಜೋಸ್ ಬಾಹ್ಯಾಕಾಶಕ್ಕೆ ಹಾರಲು ಸಿದ್ಧರಾಗಿದ್ದು, ಆ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಬಿಲಿಯನೇರ್ ಆಗಲು ಮುಂದಾಗಿದ್ದಾರೆ.
ಇತ್ತೀಚೆಗೆ ಬೆಫ್ ಬೆಜೋಸ್ ಇನ್ಸ್ಟಾಗ್ರಾಂಲ್ಲಿ ತನ್ನ ಸಹೋದರ ಮಾರ್ಕ್ ಬೆಜೋಸ್ ಜತೆಗೆ ಬಾಹ್ಯಾಕಾಶ ಪ್ರವಾಸದ ಯೋಜನೆಯನ್ನ ಬಹಿರಂಗ ಪಡಿಸುತ್ತಾ, ನಾನು 5 ವರ್ಷವಿದ್ದಾಗ, ಬಾಹ್ಯಕಾಶದಲ್ಲಿ ಹಾರಾಟಬೇಕು ಎಂಬ ಕನಸು ಕಂಡಿದ್ದೆನು ಎಂದು ಹೇಳಿದ್ದರು.
ಜಪಾನಿನ ಬಿಲಿಯನೇರ್ ಯುಸಾಕು ಮೇಜಾವಾ ಅವರಿಗಿಂತ ಮೊದಲು ಬಾಹ್ಯಾಕಾಶ ತೆರಳಲು ಬೆಜೋಸ್ ಮುಂದಾಗಿದ್ದಾರೆ. ಅವರು ಒಂದಲ್ಲ, ಎರಡು ಬಾಹ್ಯಾಕಾಶ ಪ್ರವಾಸಗಳಿಗೆ ಸಹಿ ಹಾಕಿದ್ದಾರೆ: ಮೊದಲನೆಯದಾಗಿ, ಈ ಡಿಸೆಂಬರ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಖಜಾಕಿಸ್ತಾನದ ಬೈಕೊನೂರ್ ಕಾಸ್ಮೋಡ್ರೋಮ್‌ನಲ್ಲಿರುವ ರಷ್ಯಾದ ಸೋಯುಜ್ ಸ್ಪೇಸ್ ಏರ್ಕ್ರಾಫ್ಟ್ನಿಂದ ಹಾರಾಡಲಿದ್ದಾರೆ, ನಂತರ 2023 ರಲ್ಲಿ, ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ನಲ್ಲಿ ಚಂದ್ರನ ಸುತ್ತ ಪ್ರವಾಸ ಮಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ