• Home
  • »
  • News
  • »
  • explained
  • »
  • Explainer: ಜಪಾನ್​ನಲ್ಲಿ ಜನಸಂಖ್ಯೆ ಕುಸಿತ, ಜನನ ಪ್ರಮಾಣ ದರ ಹೆಚ್ಚಿಸಲು ಸರ್ಕಾರದಿಂದ ಹೊಸ ಕ್ರಮ

Explainer: ಜಪಾನ್​ನಲ್ಲಿ ಜನಸಂಖ್ಯೆ ಕುಸಿತ, ಜನನ ಪ್ರಮಾಣ ದರ ಹೆಚ್ಚಿಸಲು ಸರ್ಕಾರದಿಂದ ಹೊಸ ಕ್ರಮ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Explainer: 2060ರ ಹೊತ್ತಿಗೆ, ಜಪಾನ್‌ನ ಪ್ರಸ್ತುತ 125 ಮಿಲಿಯನ್ ಜನಸಂಖ್ಯೆಯು ಕೇವಲ 86.7 ಮಿಲಿಯನ್‌ಗೆ ಕುಗ್ಗಲಿದೆ ಎಂದು ಅಂದಾಜಿಸಲಾಗಿದೆ. ಜಪಾನ್‌ನ ಜನಸಂಖ್ಯೆಯು 2022 ರಲ್ಲಿ ಶೇಕಡಾ 0.43 ರಷ್ಟು ಕುಗ್ಗಿತು

  • Share this:

ಜಪಾನ್ ವೇಗವಾಗಿ ಕುಸಿಯುತ್ತಿರುವ ಜನನ ಪ್ರಮಾಣಕ್ಕೆ ಸಾಕ್ಷಿಯಾಗಿದೆ. ದೇಶದ 28.7% ದಷ್ಟು ಜನಸಂಖ್ಯೆಯಲ್ಲಿ ಹೆಚ್ಚಿನವರು 65 ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಅದರಲ್ಲೂ ಮಹಿಳೆಯರದು ಈ ವಿಷಯದಲ್ಲಿ ಬಹುಮತವಾಗಿದೆ. ಜಪಾನ್ (Japan ) ದೇಶವು ದಾಖಲೆಯ ಶತಾಯುಷಿಗಳನ್ನು ಹೊಂದಿದೆ.  ದೇಶದ ಜನನ ಪ್ರಮಾಣ ಕುಸಿಯುತ್ತಿರುವುದನ್ನು ತಡೆಗಟ್ಟಲು ತುರ್ತು ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ (Fumio Kishida) ಪ್ರಜೆಗಳಿಗೆ ವಾಗ್ಧಾನ ನೀಡಿದ್ದಾರೆ. ದಿ ಗಾರ್ಡಿಯನ್ ವರದಿ ಮಾಡಿರುವಂತೆ ಪ್ರತಿ ಜಪಾನೀ ಮಹಿಳೆಗೆ 1.3ರಷ್ಟು ಜನನ ದರವಿದ್ದು, ಕುಸಿಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಅಗತ್ಯವಿರುವ 2.1ರಕ್ಕಿಂತ  ಕಡಿಮೆಯಾಗಿದೆ.


2060ರ ಹೊತ್ತಿಗೆ, ಜಪಾನ್‌ನ ಪ್ರಸ್ತುತ 125 ಮಿಲಿಯನ್ ಜನಸಂಖ್ಯೆಯು ಕೇವಲ 86.7 ಮಿಲಿಯನ್‌ಗೆ ಕುಗ್ಗಲಿದೆ ಎಂದು ಅಂದಾಜಿಸಲಾಗಿದೆ. ಜಪಾನ್‌ನ ಜನಸಂಖ್ಯೆಯು 2022 ರಲ್ಲಿ ಶೇಕಡಾ 0.43 ರಷ್ಟು ಕುಗ್ಗಿತು. ಆದರೆ 2021 ರಲ್ಲಿ ಶೇಕಡಾ .06 ರಷ್ಟು ಕಡಿಮೆಯಾಗಿದೆ ಎಂಬುದಾಗಿ ಇತ್ತೀಚಿನ ಸಮೀಕ್ಷೆಗಳು ವರದಿ ಮಾಡಿವೆ.


ಹಿರಿಯ ನಾಗರಿಕರೇ ಹೆಚ್ಚು


ಜಪಾನ್‌ನಲ್ಲಿ 65 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಸುಮಾರು 36.21 ಮಿಲಿಯನ್ ಜನರು ವಾಸವಾಗಿದ್ದಾರೆ. ಇನ್ನು ದೇಶದಲ್ಲಿರುವ 14 ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನವರು 14.45 ಮಿಲಿಯನ್ ಜನರಾಗಿದ್ದು ಈ ಪ್ರಮಾಣದ ಜನಸಂಖ್ಯೆಯ 11.6% ಮಾತ್ರವಾಗಿದೆ. ವಿಶ್ವ ಬ್ಯಾಂಕ್ ಹೇಳುವಂತೆ ಜಪಾನ್ 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ವಿಶ್ವದ ಎರಡನೇ ಅತಿ ಹೆಚ್ಚು ಅನುಪಾತವನ್ನು ಹೊಂದಿದೆ.


ನಡುವಯಸ್ಸಿನವರು ಜಪಾನ್‌ನಲ್ಲಿ ಹೆಚ್ಚು


ದೇಶದಲ್ಲಿರುವ 49ರ ಹರೆಯದ ನಡುವಯಸ್ಕರನ್ನು ಹೊಂದಿದ್ದು, ಈ ಪ್ರಮಾಣ ಮೊನಾಕೊ ನಂತರ ವಿಶ್ವದ ಎರಡನೇ ಅತಿ ಹೆಚ್ಚಿನದಾಗಿದೆ ಎಂದು ದಾಖಲೆಯಾಗಿದೆ. ನಡುವಯಸ್ಸಿನವರು ಅಥವಾ ಮಧ್ಯವಯಸ್ಸಿನವರ ಪ್ರಮಾಣವನ್ನು ಹೋಲಿಸಿದರೆ ಪ್ರಪಂಚದಾದ್ಯಂತದ ಹೆಚ್ಚಿನ ಜನಸಂಖ್ಯೆಯಲ್ಲಿ ಸರಾಸರಿ ವಯಸ್ಸು 30 ಮತ್ತು 40 ರ ನಡುವೆ ಇರುತ್ತದೆ. ಮಕ್ಕಳನ್ನು ಬೆಳೆಸಲು ಜಪಾನ್ ವಿಶ್ವದ ಮೂರನೇ ಅತ್ಯಂತ ದುಬಾರಿ ಸ್ಥಳವಾಗಿದೆ ಎಂದು YuWa ಪಾಪ್ಯುಲೇಶನ್ ರಿಸರ್ಚ್ ತಿಳಿಸಿದೆ.


ಇದನ್ನೂ ಓದಿ: Puri Jagannath Temple: ಇತರೇ ಧರ್ಮದವರಿಗೆ ದರ್ಶನ ನೀಡುವುದಿಲ್ಲ ಪುರಿ ಜಗನ್ನಾಥ! ವಿದೇಶಿಗರಿಗೂ ದೇಗುಲದೊಳಗೆ ಏಕಿಲ್ಲ ಪ್ರವೇಶ?


ಜಪಾನ್‌ನಲ್ಲಿ ತಲೆದೋರಿರುವ ಸಮಸ್ಯೆ ಏನು?


ಜಪಾನಿನ ಹೆಚ್ಚಿನ ಜೀವನ ವೆಚ್ಚಗಳಿಂದ ಸಬ್ಸಿಡಿಗಳ ಹೊರತಾಗಿಯೂ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಕುಟುಂಬಗಳನ್ನು ಪೋಷಿಸುವುದು ಅನೇಕ ಯುವಜನರನ್ನು ನಿರುತ್ಸಾಹಗೊಳಿಸಿದೆ. ಬಿಬಿಸಿಯ ಪ್ರಕಾರ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಕ್ಕೆ ತೆರಳಲು ಮತ್ತು ಅಧ್ಯಯನ ನಡೆಸಲು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಗರ್ಭನಿರೋಧಕದ ಅಧಿಕ ಪ್ರಮಾಣದ ಬಳಕೆ ಕೂಡ ಜನಸಂಖ್ಯೆ ಕುಸಿಯಲು ಕಾರಣವಾಗಿದೆ ಎಂಬುದು ತಿಳಿದು ಬಂದಿದೆ.


ಸಂಪ್ರದಾಯವಾದಿ ಸರ್ಕಾರವು ಸಮಾಜದಲ್ಲಿ ಮಕ್ಕಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಹೆಚ್ಚು ಸರಕಾರದ ಯೋಜನೆಗಳಿಗೆ ಒಳಗೊಳ್ಳುವಂತೆ ಮಾಡುವಲ್ಲಿ ಹಿಂದುಳಿದಿದೆ. ಜಪಾನ್ ಹಾಗೂ ಸುತ್ತಲಿನ ನೆರೆಹೊರೆಯ ದೇಶಗಳಲ್ಲಿ ಜನನ ದರಗಳು ನಿಧಾನವಾಗುತ್ತಿವೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಜೀವನ ವೆಚ್ಚ, ಮಹಿಳೆಯರು ಉದ್ಯೋಗಕ್ಕೆ ತೆರಳುತ್ತಿರುವುದು ಮತ್ತು ಮಕ್ಕಳನ್ನು ಹೊಂದಲು ನಿಧಾನಮಾಡುತ್ತಿರುವುದು. ಇದರಿಂದಾಗಿ ಜಪಾನ್‌ನಲ್ಲಿ ಜನಸಂಖ್ಯೆ ಕುಸಿಯುತ್ತಿದೆ ಎಂಬುದು ದೃಢೀಕರಣಗೊಂಡಿದೆ. ಕಳೆದ ವಾರ ಅಧಿಕೃತ ಮಾಹಿತಿಯು ಚೀನಾದ ಜನಸಂಖ್ಯೆಯು 2022 ರಲ್ಲಿ ಕುಗ್ಗಿದೆ ಎಂದು ತೋರಿಸಿದ್ದು, ಆರು ದಶಕಗಳ ಸಮಯದಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ.


ಸಮಸ್ಯೆ ಏನು?


ಕ್ಷೀಣಿಸುತ್ತಿರುವ ಮತ್ತು ವಯಸ್ಸಾಗುತ್ತಿರುವ ಜನಸಂಖ್ಯೆಯ ಸಂಯೋಜನೆಯು ಜಪಾನ್‌ಗೆ ಬೃಹತ್ ಆರ್ಥಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಭದ್ರತೆಯ ಪರಿಣಾಮಗಳನ್ನು ತಂದೊಡ್ಡುತ್ತವೆ. ನಿಕ್ಕಿ ಏಷ್ಯಾದ ಪ್ರಕಾರ, ಹಳೆಯ ಜನಸಂಖ್ಯೆಯು ದೇಶದ ಆರೋಗ್ಯ ಮತ್ತು ಸಾಮಾಜಿಕ ಭದ್ರತಾ ವ್ಯವಸ್ಥೆಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ.


ಜಪಾನ್‌ನ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ದೇಶದ ಪಿಂಚಣಿ ಯೋಜನೆಗೆ ಮಹತ್ವದ ಬದಲಾವಣೆಗಳನ್ನು ಮಾಡುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗೆ ಪಾವತಿಸಬೇಕಾದ ಶುಲ್ಕಗಳು ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಹೆಚ್ಚುವರಿ ಶುಲ್ಕಗಳು ಹೆಚ್ಚಾಗುವ ಸಾಧ್ಯತೆಯಿದೆ.


ಎಲ್ಲರಿಗೂ ಲಭ್ಯವಿರುವ ಆರೋಗ್ಯ ವ್ಯವಸ್ಥೆಗಳು


ಜಪಾನ್‌ನಲ್ಲಿನ ವೈದ್ಯಕೀಯ ಸೇವೆಗಳು ಪ್ರತಿಯೊಬ್ಬರಿಗೂ ಸಮಾನವಾಗಿದ್ದು ವಿಶ್ವದಲ್ಲಿಯೇ ಇದು ಶ್ಲಾಘನೆಗೆ ಪಾತ್ರವಾಗಿದೆ. ಶ್ರೀಮಂತರಿಂದ ಹಿಡಿದು ಬಡವರವರೆಗೆ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಗಳು ದೊರೆಯುತ್ತದೆ ಎಂದು ಟೋಕಿಯೊದ ವೆಸ್ಡಾ ವಿಶ್ವವಿದ್ಯಾಲಯದ ಆರೋಗ್ಯ ರಕ್ಷಣೆಯ ಅರ್ಥಶಾಸ್ತ್ರದ ತಜ್ಞ ಹರುಕೊ ನೊಗುಚಿ ತಿಳಿಸಿದ್ದಾರೆ.
ಏತನ್ಮಧ್ಯೆ, ಯುವಕರ ಸಂಖ್ಯೆ ಕುಗ್ಗುತ್ತಿರುವುದು ಹೊಸ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಬಯಸುವ ಕಂಪನಿಗಳಿಗೆ ಸಮಸ್ಯೆಯಾಗಿದೆ. ಯುವಕರ ಸಂಖ್ಯೆ ಕುಗ್ಗುತ್ತಿರುವುದರಿಂದ ದೇಶದ ರಕ್ಷಣಾ ಪಡೆಗಳಲ್ಲೂ ನೇಮಕಾತಿ ಸಮಸ್ಯೆಗಳು ತಲೆದೋರುತ್ತಿದೆ.


ಜಪಾನ್ ಸಮಸ್ಯೆಗೆ ಪರಿಹಾರ 


ಸರಕಾರವು ಕುಟುಂಬಗಳಲ್ಲಿರುವ ಪ್ರತಿ ಮಗುವಿಗೆ $7,500 ಕ್ಕಿಂತ ಹೆಚ್ಚಿನ ನೆರವನ್ನು ನೀಡುವ ಮೂಲಕ ಗ್ರೇಟರ್ ಟೊಕಿಯೋದಿಂದ ನಿರ್ಗಮಿಸಲು ತಿಳಿಸಿದೆ. ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಟೋಕಿಯೊ ಜನರನ್ನು ಬೇರೆಡೆ ಕಳುಹಿಸುವ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಂಡಿತು. ಈ ಪ್ರದೇಶಗಳಿಂದ ತೆರಳಲು ಸರಕಾರವು ಈ ಹಿಂದೆ ಸುಮಾರು $2,300 ಅನ್ನು ಪ್ರತಿ ಕುಟುಂಬಗಳಿಗೆ ನೀಡುತ್ತಿತ್ತು.


ಹೆಚ್ಚಿನ ವಿದ್ಯಾರ್ಥಿವೇತನಗಳು ಸೇರಿದಂತೆ ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಹಣಕಾಸಿನ ಬೆಂಬಲವನ್ನು ಹೆಚ್ಚಿಸಲು ಪ್ರಧಾನಿ ವಾಗ್ದಾನ ನೀಡಿದ್ದಾರೆ ಮತ್ತು ಜನಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಆಯಾಮಗಳ ಕ್ರಮಗಳನ್ನು ಜಾರಿಗೊಳಿಸಲು ಮಾನದಂಡಗಳನ್ನು ಕೈಗೊಳ್ಳುವುದಾಗಿ ವಾಗ್ದಾನ ನೀಡಿದ್ದಾರೆ.


ಜೂನ್ ವೇಳೆಗೆ ಸಂಬಂಧಿತ ನೀತಿಗಳಿಗಾಗಿ ಬಜೆಟ್ ಅನ್ನು ದ್ವಿಗುಣಗೊಳಿಸುವ ಯೋಜನೆಗಳನ್ನು ಸರ್ಕಾರ ಸಲ್ಲಿಸಲಿದೆ ಮತ್ತು ಏಪ್ರಿಲ್‌ನಲ್ಲಿ ಮಕ್ಕಳು ಮತ್ತು ಕುಟುಂಬ ವ್ಯವಹಾರಗಳಿಗಾಗಿ ಹೊಸ ಏಜೆನ್ಸಿಯನ್ನು ಸ್ಥಾಪಿಸಲಿದೆ ಎಂದು ಕಿಶಿಡಾ ತಿಳಿಸಿದ್ದಾರೆ. ಅಂತಿಮವಾಗಿ ಸರ್ಕಾರವು ಮಕ್ಕಳ ಸಂಬಂಧಿತ ಕಾರ್ಯಕ್ರಮಗಳಿಗೆ ಒದಗಿಸುವ ವೆಚ್ಚವನ್ನು ದ್ವಿಗುಣಗೊಳಿಸಬೇಕೆಂದು ಬಯಸಿದೆ ಎಂದು ತಿಳಿಸಿದ್ದಾರೆ.


ಕಡಿಮೆ ಜನನ ದರವನ್ನು ಹಿಮ್ಮೆಟ್ಟಿಸಲು ಮಗುವಿಗೆ ಮೊದಲು ಸಾಮಾಜಿಕ ಆರ್ಥಿಕತೆಯನ್ನು ನಿರ್ಮಿಸಬೇಕು ಎಂದು ತಿಳಿಸಿದ್ದಾರೆ. ಏಪ್ರಿಲ್‌ನಲ್ಲಿ ಹೊಸದಾಗಿ ಜನಿಸಿದ ಮಕ್ಕಳು ಮತ್ತು ಕುಟುಂಬಗಳ ಏಜೆನ್ಸಿಯನ್ನು ಪ್ರಾರಂಭಿಸುವುದು ಸೇರಿದಂತೆ ಪೋಷಕರನ್ನು ಬೆಂಬಲಿಸಲು ಮತ್ತು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ "ಸುಸ್ಥಿರತೆಯನ್ನು" ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.


ಜಪಾನ್‌ನ ಜನಸಂಖ್ಯೆ ಎಷ್ಟು ಕುಸಿದಿದೆ ಎಂದರೆ ಒಂದು ಸಮಾಜವಾಗಿ ಮುಂದುವರಿಯುವುದು ಕಷ್ಟ ಎಂಬ ಸ್ಥಿತಿಗೆ ದೇಶ ಬಂದು ತಲುಪಿದೆ ಎಂದು ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದಾರೆ. ಮಕ್ಕಳು ಮತ್ತು ಮಕ್ಕಳ ಪೋಷಣೆಗೆ ಸಂಬಂಧಿಸಿದ ನೀತಿಗಳ ಮೇಲೆ ಗಮನ ಕೇಂದ್ರೀಕರಿಸುವುದು ಇದೀಗ ಮುಖ್ಯವಾಗಿದ್ದು, ಇದಕ್ಕಾಗಿ ಕಾಯಲು ಸಾಧ್ಯವಿಲ್ಲ ಮತ್ತು ಇದನ್ನು ನಂತರ ಮಾಡಬಹುದು ಎಂದು ಮುಂದೂಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.


ತಜ್ಞರು ತಿಳಿಸಿರುವ ಅಂಶಗಳೇನು?


ಪ್ರಜೆಗಳು ಹೆಚ್ಚಿನ ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸುವ ಪ್ರಯತ್ನಗಳು, ಗರ್ಭಧಾರಣೆ, ಹೆರಿಗೆ ಮತ್ತು ಮಗುವಿನ ಆರೈಕೆಗಾಗಿ ಸಬ್ಸಿಡಿಗಳ ಹೊರತಾಗಿಯೂ ಈ ಎಲ್ಲಾ ಕ್ರಮಗಳು ಸೀಮಿತ ಪರಿಣಾಮವನ್ನು ಬೀರಿವೆ ಎಂಬುದು ತಜ್ಞರ ಹೇಳಿಕೆಯಾಗಿದೆ. ಕುಟುಂಬಗಳನ್ನು ಇನ್ನಷ್ಟು ಬೆಳೆಸುವುದಕ್ಕೆ ಪ್ರೋತ್ಸಾಹವನ್ನು ನೀಡುವುದರ ಬದಲಿಗೆ ಯುವಕರಿಗೆ ಉತ್ತಮ ಉದ್ಯೋಗವನ್ನು ಒದಗಿಸುವುದು, ಆರ್ಥಿಕ ಕ್ರಮಗಳನ್ನು ಒದಗಿಸುವುದು, ಹೆಚ್ಚಿನ ಜೀವನ ವೆಚ್ಚವನ್ನು ಕಡಿಮೆ ಮಾಡುವುದು ಮೊದಲಾದ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು ಎಂಬುದು ತಜ್ಞರ ಸಲಹೆಯಾಗಿದೆ. ಜಪಾನ್ ತನ್ನ ಕಟ್ಟುನಿಟ್ಟಾದ ವಲಸೆ ನೀತಿಗಳನ್ನು ಸಡಿಲಿಸಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ ಎಂದು ಅಲ್-ಜಜೀರಾ ಉಲ್ಲೇಖಿಸಿದೆ.


ಜಪಾನ್‌ನ ಹೆಚ್ಚಿನ ಜನರು ದೀರ್ಘಾಯುಷ್ಯಿಗಳು


ಜಪಾನ್‌ನ ಜನಸಂಖ್ಯೆಯ ಜೀವಿತಾವಧಿ ಹೆಚ್ಚಾಗಿದೆ. 2019 ರಲ್ಲಿ ಮಹಿಳೆಯರ ಜೀವಿತಾವಧಿ 87 ವರ್ಷಗಳಾಗಿದ್ದು ಪುರುಷರ ಜೀವಿತಾವಧಿ 81 ವರ್ಷಗಳಾಗಿದೆ.  ಸಾಂಪ್ರದಾಯಿಕ ಆಹಾರ ಪದ್ಧತಿ, ಶುದ್ಧ ನೀರು, ಸಾರ್ವತ್ರಿಕ ಆರೋಗ್ಯ ವಿಮೆ ರಕ್ಷಣೆ, ನೈರ್ಮಲ್ಯ ಪ್ರಜ್ಞೆ ಹಾಗೂ ಹಿರಿಯ ನಾಗರಿಕರ ಸಕ್ರಿಯ ಜೀವನಶೈಲಿಯೇ ಇಲ್ಲಿನ ಪ್ರಜೆಗಳ ದೀರ್ಘಾಯುಷ್ಯದ ಗುಟ್ಟಾಗಿದೆ.


ಕುಸಿಯುತ್ತಿರುವ ಫಲವತ್ತತೆಯ ದರ


ಜಪಾನ್‌ನ ಫಲವತ್ತತೆ ದರವು 1970 ರ ದಶಕದಲ್ಲಿ ಕುಸಿಯಲಾರಂಭಿಸಿತು. 2005 ರಲ್ಲಿ (1.26) ತನ್ನ ಕನಿಷ್ಠ ಮಟ್ಟವನ್ನು ತಲುಪಿತು ಹಾಗೂ ಏರಿಕೆಯನ್ನು ಕಾಣಲೇ ಇಲ್ಲ. 2015 ರಲ್ಲಿ ಪ್ರತಿ ನೂರರಲ್ಲಿ 50 ಕ್ಕಿಂತ ಹೆಚ್ಚಿನ ಜನರು ವಿವಾಹಿತರಾಗಿರದೇ ಇರುವುದು ಇನ್ನೊಂದು ಅಂಶವಾಗಿದ್ದು ಈ ಪ್ರಮಾಣ 23.4% ರಷ್ಟಿದ್ದು ಇದು ದಾಖಲೆಯ ಗರಿಷ್ಠ ಮಟ್ಟದಲ್ಲಿದೆ.

Published by:shrikrishna bhat
First published: