• Home
  • »
  • News
  • »
  • explained
  • »
  • Waqf Board: ಮಸೀದಿಯಲ್ಲಿ ಸ್ವಯಂಪ್ರೇರಿತ ದೇಣಿಗೆ ಸಂಗ್ರಹಕ್ಕೆ ಬ್ರೇಕ್! ಜಮ್ಮು-ಕಾಶ್ಮೀರ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಕಾರಣವೇನು?

Waqf Board: ಮಸೀದಿಯಲ್ಲಿ ಸ್ವಯಂಪ್ರೇರಿತ ದೇಣಿಗೆ ಸಂಗ್ರಹಕ್ಕೆ ಬ್ರೇಕ್! ಜಮ್ಮು-ಕಾಶ್ಮೀರ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಕಾರಣವೇನು?

ಖಾನ್‌ಕಾ-ಇ-ಮೌಲಾ ಮಸೀದಿ

ಖಾನ್‌ಕಾ-ಇ-ಮೌಲಾ ಮಸೀದಿ

ಸ್ವಯಂಪ್ರೇರಿತ ದೇಣಿಗೆ ಸಂಗ್ರಹಕ್ಕೆ ಇದೀಗ ಜಮ್ಮು ಹಾಗೂ ಕಾಶ್ಮೀರದ ವಕ್ಫ್ ಮಂಡಳಿ ತಡೆಯನ್ನೊಡ್ಡಿದ್ದು, ಪರಂಪರಾಗತವಾಗಿ ಮಸೀದಿಗಳ ನಿರ್ವಹಣೆ ಮಾಡುತ್ತಿದ್ದವರಿಗೆ ಈ ತಡೆ ದೊಡ್ಡ ಹೊಡೆತವನ್ನೇ ನೀಡಿದೆ. ಸಂಬಳಕ್ಕಾಗಿ ದುಡಿಯದ ಈ ಪರಿಚಾರಕರು ದತ್ತಿ ನಿಧಿಯಲ್ಲಿ ಬರುವ ಹಣವನ್ನು ಮಸೀದಿಯ ದುರಸ್ತಿಗೆ ವಿನಿಯೋಗಿಸಿಕೊಂಡು ತಮ್ಮ ದೈನಂದಿನ ಖರ್ಚಿಗೂ ಬಳಸಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು?

ಮುಂದೆ ಓದಿ ...
  • Share this:

ಮಸೀದಿಗಳಲ್ಲಿ (Mosque) ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಸ್ವಯಂಪ್ರೇರಿತ ದೇಣಿಗೆ ಸಂಗ್ರಹಕ್ಕೆ ಇದೀಗ ಜಮ್ಮು ಹಾಗೂ ಕಾಶ್ಮೀರದ ವಕ್ಫ್ ಮಂಡಳಿ (Jammu and Kashmir Waqf Board) ತಡೆಯನ್ನೊಡ್ಡಿದ್ದು, ಪರಂಪರಾಗತವಾಗಿ ಮಸೀದಿಗಳ ನಿರ್ವಹಣೆ ಮಾಡುತ್ತಿದ್ದವರಿಗೆ ಈ ತಡೆ ದೊಡ್ಡ ಹೊಡೆತವನ್ನೇ ನೀಡಿದೆ. ಸಂಬಳಕ್ಕಾಗಿ ದುಡಿಯದ ಈ ಪರಿಚಾರಕರು ದತ್ತಿ ನಿಧಿಯಲ್ಲಿ ಬರುವ ಹಣವನ್ನು (Money) ಮಸೀದಿಯ ದುರಸ್ತಿಗೆ ವಿನಿಯೋಗಿಸಿಕೊಂಡು ತಮ್ಮ ದೈನಂದಿನ ಖರ್ಚಿಗೂ ಬಳಸಿಕೊಳ್ಳುತ್ತಿದ್ದಾರೆ. ಆದರೆ ವಕ್ಫ್ ಮಂಡಳಿಯ ಹಠಾತ್ ನಿರ್ಧಾರ ಹೊಟ್ಟೆಗೆ ಹೊಡೆದಂತಿದೆ ಎಂಬುದು ಇವರುಗಳ ಅಭಿಪ್ರಾಯವಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ.


ಕಾಶ್ಮೀರದ ಐತಿಹಾಸಿಕ ಖಾನ್‌ಕಾ-ಇ-ಮೌಲಾ ಮಸೀದಿಯಲ್ಲಿ ಎಂಭತ್ತರ ದಶಕದ ಪಾದ್ರಿಯಾಗಿರುವ ಮೊಹಮ್ಮದ್ ಯಾಸಿನ್ ಜಹ್ರಾ, ಶ್ರೀನಗರದ ಝೀಲಂ ನದಿ ದಂಡೆಯ ಮೇಲಿರುವ 600 ವರ್ಷಗಳಷ್ಟು ಹಳೆಯದಾದ ಸೂಫಿ ಪವಿತ್ರ ಸ್ಥಳದಲ್ಲೇ ತಮ್ಮ ಜೀವನದ ಬಹುಭಾಗವನ್ನು ಕಳೆದಿದ್ದಾರೆ.


ಆಕರ್ಷಕ ಮಸೀದಿ:
ಗೋಪುರದ ಮೇಲ್ಛಾವಣಿಗಳು, ಅದರ ಕೆತ್ತನೆ ಸ್ತಂಭ, ಕಾಗದ, ಹಿಟ್ಟು ಮತ್ತು ನೀರಿನ ಮೆದುವಾದ ಮಿಶ್ರಣದಿಂದ ತಯಾರಿಸಿದ ಛಾವಣಿಗಳು ಮತ್ತು ಜಾಲರಿಯಂತಿರುವ ಮರಗೆಲಸಗಳು ಈ ಆಶ್ರಮದ ಆಕರ್ಷಣೆಯನ್ನು ಹೆಚ್ಚಿಸಿದ್ದು, ಇಸ್ಲಾಮಿಕ್ ನಂಬಿಕೆಯನ್ನು ಆಧ್ಯಾತ್ಮಿಕ ಅತೀಂದ್ರಿಯತೆಯನ್ನು ಶತಮಾನಗಳಿಂದ ಸಂಕೇತಿಸುತ್ತವೆ. ಜಹ್ರಾ, ಇಸ್ಲಾಮಿಕ್ ಬೋಧನೆಗಳನ್ನು ಹರಡಲು ಮಧ್ಯ ಏಷ್ಯಾದಿಂದ ಕಾಶ್ಮೀರಕ್ಕೆ ಬಂದ ಸೂಫಿ ಸಂತರ ಕುಟುಂಬಸ್ಥರಾಗಿದ್ದಾರೆ.


ಸಂಬಳವಿಲ್ಲದೆ ಮಸೀದಿ ನಿರ್ವಹಣೆಗೆ ದುಡಿದವರು
ಜಹ್ರಾ ಅವರಂತೆಯೇ ಅದೆಷ್ಟೋ ವಯಸ್ಸಾದ ಅವರ ಗೆಳೆಯರು ಖಾನ್ಕಾ-ಇ-ಮೌಲಾ ಮಸೀದಿಯ ನಿರ್ವಹಣೆಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಹ್ರಾ ಅವರು ಬಾಲ್ಯದಲ್ಲಿಯೇ ಕುರಿಗಳ ಚರ್ಮವನ್ನು ಮಾರಾಟ ಮಾಡಿ ಅದರಿಂದ ಬರುವ ಆದಾಯವನ್ನು ಮಸೀದಿಯ ನಿರ್ವಹಣೆಗೆ ಬಳಸಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.
ನಮ್ಮ ಕುಟುಂಬದ ಪ್ರತಿಯೊಬ್ಬರೂ ಮಸೀದಿಗೆ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಶತಮಾನಗಳಿಂದ ಮಸೀದಿಯ ನಿರ್ವಹಣೆಯನ್ನು ಆಧ್ಯಾತ್ಮಿಕ ಸಂತರು, ದೇಗುಲದ ಪರಿಚಾರಕರು ಹಾಗೂ ನಿರ್ವಾಹಕಾ ಸಮಿತಿಗಳು ಮಾಡುತ್ತಿವೆ ಎಂಬುದು ಜಹ್ರಾ ಮಾತಾಗಿದೆ.


ಇದನ್ನೂ ಓದಿ: Explained: ಅಮೆರಿಕಾದಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ 50% ಕ್ಕಿಂತ ಕಡಿಮೆಯಾಗಲಿದೆಯಂತೆ!


ನಜರ್-ಓ-ನಿಯಾಕ್ ಧಾರ್ಮಿಕ ದತ್ತಿ
ಮಸೀದಿಯ ಕೆಲಸಗಳನ್ನು ಮಾಡುವವರು ಯಾರೂ ಸಂಬಳಕ್ಕಾಗಿ ದುಡಿಯುವುದಿಲ್ಲ, ಆದರೆ ನಜರ್-ಓ-ನಿಯಾಜ್ ಎಂಬ ಧಾರ್ಮಿಕ ದತ್ತಿಯಿಂದ ಖರ್ಚಿಗೆ ಬೇಕಾದ ಹಣವನ್ನು ಪಡೆದುಕೊಳ್ಳುತ್ತಾರೆ.


ಇದೊಂದು ರೀತಿಯ ಆದಾಯ ಎಂದು ಮಸೀದಿಯ ನಿರ್ವಹಣೆಯ ಭಾಗವಾಗಿರುವ ಬಶೀರ್ ಹಮ್‌ದಾನಿ ಮಾತಾಗಿದೆ. ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರ ವಕ್ಫ್ ಮಂಡಳಿಯ ಇತ್ತೀಚಿನ ತೀರ್ಪು ನಜರ್-ಒ-ನಿಯಾಜ್‌ದಿಂದ ಹಣ ಪಡೆದುಕೊಳ್ಳುವ ಕ್ರಮಕ್ಕೆ ಕಡಿವಾಣ ಹಾಕಿದೆ.


ವಕ್ಫ್ ಮಂಡಳಿಯ ಕ್ರಮಕ್ಕೆ ಕಾನೂನು ಸಮರ್ಥನೆ
ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಮುಸ್ಲಿಂ ಸಮುದಾಯದ ಅಭ್ಯುದಯಕ್ಕಾಗಿ ಆದಾಯದ ಒಂದು ಭಾಗವನ್ನು ದೇಣಿಗೆಯಾಗಿ ಹಂಚಲು ಬಾಧ್ಯಸ್ಥರಾಗಿದ್ದಾರೆ. ಇದನ್ನು 'ವಕ್ಫ್ ಎಂದು ಪರಿಗಣಿಸಲಾಗುತ್ತದೆ. ಆರ್ಟಿಕಲ್ 370 ಕಾಯ್ದೆಯ ನಂತರ ವಕ್ಫ್ ಮಂಡಳಿಯ ನಿರ್ಧಾರವು ಈಗ ವಿವಾದಾತ್ಮಕವಾಗಿ ಪರಿಣಮಿಸಿದೆ. ಕಾರಣ ಬಿಜೆಪಿಯು ಎಲ್ಲಾ ಅಧಿಕಾರವನ್ನು ತನ್ನ ಕಪಿಮುಷ್ಟಿಯಲ್ಲಿರಿಸಲು ಪ್ರಯತ್ನಿಸುತ್ತಿದೆ ಎಂದು ಇತರ ಪಕ್ಷಗಳು ಉಲ್ಲೇಖಿಸಿವೆ.


ವಕ್ಫ್ ಅಧಿಕಾರಿಗಳು ತಿಳಿಸಿರುವಂತೆ ಯಾವುದೇ ಪಕ್ಷಗಳ ಅಧೀನಕ್ಕೆ ಒಳಪಡದೆ ವಕ್ಫ್ ಕಾಯಿದೆ, 1995 ರ ಅಡಿಯಲ್ಲಿ ಪ್ರತಿಪಾದಿಸಲಾದ ಮಾರ್ಗಸೂಚಿಗಳನ್ನು ಮಾತ್ರವೇ ಮಸೀದಿಯ ವಿಷಯದಲ್ಲಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ತಿಳಿಸಿದೆ.


ಜಮ್ಮು ಮತ್ತು ಕಾಶ್ಮೀರ ವಕ್ಫ್ ಕಾಯಿದೆ, 2001, ಮುಜಾವಿರ್‌ಗಳು ಮತ್ತು ಖಾದಿಮ್‌ಗಳಿಗೆ ಮಸೀದಿಗಳ ಮೇಲಿರುವ ಐತಿಹಾಸಿಕ ಅಧಿಕಾರವನ್ನು ತೆಗೆದುಹಾಕುವುದಾಗಿದೆ. ಜಮ್ಮು ಹಾಗೂ ಕಾಶ್ಮೀರದ ಮುಸ್ಲೀಮರು ನಿರ್ದಿಷ್ಟಪಡಿಸಿದಂತೆ ವಕಾಫ್‌ಗಳು ಮತ್ತು ನಿರ್ದಿಷ್ಟಪಡಿಸಿದ ವಕ್ಫ್ ಪ್ರಾಪರ್ಟೀಸ್ (ನಿರ್ವಹಣೆ ಮತ್ತು ನಿಯಂತ್ರಣ) ಕಾಯಿದೆ, 2004 ರ ಅನ್ವಯ ಕೆಲವೊಂದು ಕಠಿಣ ಪರಿಸ್ಥಿತಿಗಳಲ್ಲಿ ಮುಜಾವಿರ್‌ಗಳ ಕೆಲವೊಂದು ಹಕ್ಕುಗಳನ್ನು ರಕ್ಷಿಸುತ್ತದೆ.


ಐತಿಹಾಸಿಕ ಪರಂಪರೆ
ಪ್ರಸ್ತುತ ಬಿಜೆಪಿ ನಾಯಕ ದಾರಕ್ಷಣ್ ಅಂದ್ರಾಬಿ ನೇತೃತ್ವದ ವಕ್ಫ್ ಮಂಡಳಿಯು ಮಸೀದಿಗಳಿಂದ ಬರುವ ಆದಾಯದ ಮೇಲೆ ನಿಯಂತ್ರಣ ಪಡೆದುಕೊಂಡಿದ್ದು ಅನ್ಯಾಯವಾಗಿ ಹಕ್ಕುಗಳನ್ನು ಕಸಿದುಕೊಂಡಿದ್ದಾರೆ ಎಂದು ಮುಜಾವಿರ್‌ಗಳು ಆರೋಪಿಸಿದ್ದಾರೆ.
ಕಾಶ್ಮೀರದಲ್ಲಿ ಮುಸ್ಲಿಂ ಪ್ರಾರ್ಥನಾ ವಿಧಿಗಳು ಇತರೆಡೆಗಳಲ್ಲಿ ಆಚರಿಸುವುದಕ್ಕಿಂತಲೂ ಭಿನ್ನವಾಗಿದ್ದು ಪಕ್ಷಗಳ ಸರ್ವಾಧಿಕಾರವನ್ನು ಇಲ್ಲಿನ ಮುಸ್ಲಿಂ ಭಕ್ತರು ಅಷ್ಟೊಂದು ಇಷ್ಟಪಡುತ್ತಿಲ್ಲ.


ಕಾಶ್ಮೀರದ ಮಸೀದಿಗಳಲ್ಲಿರುವ ವಿಶೇಷ ಪ್ರಾರ್ಥನೆ
ಇಸ್ಲಾಂನಲ್ಲಿ ಏಕದೇವೋಪಾಸನೆಯ ಕೇಂದ್ರೀಯತೆಯನ್ನು ಒತ್ತಿಹೇಳುವ ಔರಾದ್ ಇ ಫಾಥಿಯಾ ಎಂಬ ವಿಶೇಷ ಪ್ರಾರ್ಥನೆಗಳನ್ನು 600 ವರ್ಷಗಳ ಹಿಂದೆ ಪರ್ಷಿಯನ್ ಸೂಫಿ ಬೋಧಕ ಮೀರ್ ಸಯ್ಯದ್ ಅಲಿ ಹಮದನಿ ಪರಿಚಯಿಸಿದ್ದು, ಸಂಪೂರ್ಣ ದಕ್ಷಿಣ ಏಷ್ಯಾದಾದ್ಯಂತ, ಕಾಶ್ಮೀರದಲ್ಲಿ ಮಾತ್ರ ಪ್ರಾರ್ಥನೆಯ ಸಮಯದಲ್ಲಿ ಅವುಗಳನ್ನು ಪಠಿಸಲಾಗುತ್ತದೆ ಎಂದು ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಮಧ್ಯ ಏಷ್ಯಾದ ಅಧ್ಯಯನಗಳ ಪ್ರಾಧ್ಯಾಪಕ ಜಿ.ಎನ್ ಖಾಕಿ ತಿಳಿಸಿದ್ದಾರೆ.


ಇದನ್ನೂ ಓದಿ:  Memorial of Love: ಐತಿಹಾಸಿಕ ಬಾವಿಗಳಿಗೆ ಮೆಟ್ಟಿಲುಗಳು ಏಕಿರುತ್ತವೆ? ಇವುಗಳ ಹಿಂದಿದೆ ಇಂಟ್ರೆಸ್ಟಿಂಗ್ ಕಥೆ


ಈ ಅಂಶಗಳು ಕಾಶ್ಮೀರದಲ್ಲಿ ಇಸ್ಲಾಂ ಧರ್ಮಕ್ಕೆ ವಿಶಿಷ್ಟವಾದ ಪ್ರಾಮುಖ್ಯತೆಯನ್ನು ನೀಡಿವೆ. ದೇಗುಲಗಳು ಇಂತಹ ಅನನ್ಯ ಆಚರಣೆಯ ಮೇಲೆ ಕೇಂದ್ರಿತವಾಗಿವೆ ಎಂದವರು ತಿಳಿಸಿದ್ದಾರೆ. ಪೂರ್ವಜರು ಪುಣ್ಯಕ್ಷೇತ್ರಗಳಲ್ಲಿ ಜಮೆಯಾಗುವ ಸಂಪತ್ತನ್ನು ಹೇಗೆ ವಿನಿಯೋಗಿಸಬೇಕು ಎಂಬ ವಿಧಾನಗಳನ್ನು ರೂಪಿಸಿದರು ಎಂಬುದು ಖಾಕಿ ಅವರ ಮಾತಾಗಿದೆ.


ನಿಧಿ ಸಂಗ್ರಹಣೆಗೆ ಅಡ್ಡಿಯನ್ನುಂಟು ಮಾಡುವ ವಕ್ಫ್ ಬೋರ್ಡ್
ಪೀರ್ ಹಾಗೂ ಖಾದೀಮರು, ನಿಯಾಜ್ ಕಾಣಿಕೆಗಳನ್ನು ಪಾವತಿಸಲು ಭಕ್ತರಿಗೆ ತೊಂದರೆ ನೀಡುತ್ತಾರೆ ಎಂಬ ಮಾತನ್ನು ಅಲ್ಲಗೆಳೆದ ಜಹ್ರಾ ಅವರು, ಇಂತಹ ಯಾವುದೇ ಸಂಘರ್ಷ ಇಲ್ಲಿಲ್ಲ ಏಕೆಂದರೆ ಇಲ್ಲಿ ಎರಡು ದೇಣಿಗೆ ಪೆಟ್ಟಿಗೆಗಳಿದ್ದು ಒಂದರಲ್ಲಿ ನಜರ್-ಓ ನಿಯಾಜ್ ದೇಣಿಗೆಯನ್ನು ಸಂಗ್ರಹಿಸಲಾಗಿದೆ ಹಾಗೆಯೇ ಇನ್ನೊಂದರಲ್ಲಿ ತಮೀರ್ ಇಲ್ಲವೇ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ತಮೀರ್ ನಿಧಿಗಳನ್ನು ಸಂಗ್ರಹಿಸುವಾಗ ಅದಕ್ಕೆ ಸರಿಯಾದ ರಶೀದಿಯನ್ನು ನೀಡುತ್ತೇವೆ. ಈ ಹಣದಿಂದಲೇ ನಾವು ದೇಗುಲದ ರಿಪೇರಿಯನ್ನು ಮಾಡುತ್ತೇವೆ ಎಂದು ತಿಳಿಸಿದ ಜಹ್ರಾ ಆಗಾಗ್ಗೆ ಮಸೀದಿಗೆ ಬಂದೊದಗುವ ಹಾನಿಯನ್ನು ಸರಿಪಡಿಸಲು ನಾವೇ ನಮ್ಮ ಕೈಯಾರೆ ಹಣ ಹಾಕಿ ಅದನ್ನು ದುರಸ್ತಿಪಡಿಸುತ್ತೇವೆ. ಈ ಸಮಯದಲ್ಲಿ ವಕ್ಫ್ ಬೋರ್ಡ್ ಪೆಟ್ಟಿಗೆಗಳನ್ನು ಮರುಪಡೆಯುವುದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯ ಸಹಕಾರವನ್ನು ನೀಡುವುದಿಲ್ಲ ಎಂದು ಜಹ್ರಾ ತಿಳಿಸಿದ್ದಾರೆ.


ಜಹ್ರಾ ಅವರು ಹೇಳುವಂತೆ ಅವರ ಪೂರ್ವಜರು ಡೋಗ್ರಾ ಕಾಲಕ್ಕೂ ಮುಂಚೆಯೇ ಇಲ್ಲಿದ್ದರು. ಅಲಿ ಹಮದನಿ ಅವರೇ ಸ್ವತಃ ಉದ್ಘಾಟಿಸಿದ ಮಸೀದಿಯೊಳಗೆ 600 ವರ್ಷಗಳಷ್ಟು ಹಳೆದಾದ ದೀಪವನ್ನು ಬೆಳಗಿಸಲು ಮಹಾರಾಜರೇ ತೈಲವನ್ನು ಪೂರೈಸುತ್ತಿದ್ದರು ಎಂಬ ಕಥೆಗಳನ್ನು ನಮ್ಮ ಪೂರ್ವಜರು ಹೇಳುತ್ತಿದ್ದರು ಎಂಬುದು ಜಹ್ರಾ ಹೇಳಿಕೆಯಾಗಿದೆ. ವಕ್ಫ್ ಬೋರ್ಡ್ ಎಂಬುದು ಇದೀಗ ರಚನೆಯಾಗಿರುವುದು ನಾವೆಲ್ಲಾ ಅದಕ್ಕೂ ಹಿಂದೆ ಇದ್ದವರು ಎಂಬುದು ಜಹ್ರಾ ಮಾತಾಗಿದೆ.


ದಸ್ತಗೀರ್ ಸಾಹೀಬ್‌ನಲ್ಲಿ ಕೂಡ ತೆರವುಗೊಂಡಿರುವ ದೇಣಿಗೆ ಸಂಗ್ರಹ
ಕಾಶ್ಮೀರದಲ್ಲಿ ಸುನ್ನಿ ಹಾಗೂ ಶಿಯಾ ಮುಸ್ಲಿಮ್ ಪಂಗಡದವರ ಪ್ರಮುಖ ದೇಗುಲ ದಸ್ತಗೀರ್ ಸಾಹೀಬ್‌ನಲ್ಲಿ ಕೂಡ ಇಂತಹುದೇ ಕಾಣಿಕೆ ಪೆಟ್ಟಿಗೆಗೆಗಳನ್ನು ತೆಗೆದುಹಾಕಲಾಗಿದೆ. ಮಸೀದಿಯ ಹಿಂಭಾಗದಲ್ಲಿರುವ ಒಂದು ಸಣ್ಣ ಕಾರಿಡಾರ್‌ನಿಂದ ಹೋದರೆ ಖಾಲಿದ್ ಗೀಲಾನಿ ನಿವಾಸಕ್ಕೆ ಹೋಗಬಹುದು. ಇವರು ದೇಗುಲದ ಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಗೀಲಾನಿ, ಸುಧಾರಣೆಗಳ ವಿರುದ್ಧ ನಾವು ಹೋಗುತ್ತಿಲ್ಲ ಆದರೆ ಅದಕ್ಕೂ ಒಂದು ನೀತಿ ನಿಯಮಗಳಿವೆ. 400 ವರ್ಷಗಳಿಗಿಂತ ಹಳೆಯದಾದ ಈ ದೇಗಲುದಲ್ಲಿ ಪಾಲಕರಾಗಿ ನಾವು ಕೆಲಸ ಮಾಡುತ್ತಿದ್ದು ದೇಗುಲದ ಸಂಪೂರ್ಣ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದೇವೆ.


ಬೋರ್ಡ್‌ನ ಈ ರೀತಿಯ ಹೊಸ ನಿಯಮಗಳು ಬದಲಾವಣೆಗೆ ಒಗ್ಗಿಕೊಳ್ಳಲು ನಮ್ಮನ್ನು ಪ್ರಯಾಸಗೊಳಿಸುತ್ತಿವೆ ಎಂದು ತಿಳಿಸಿದ್ದಾರೆ. ಇಲ್ಲಿ ದಿನನಿತ್ಯದ ವ್ಯವಹಾರಗಳನ್ನು ನಡೆಸುತ್ತೇವೆ ಹಾಗೂ ದೇಗುಲ (ಮಸೀದಿ) ದಲ್ಲಿ ಉರುಸ್‌ಗಳು ನಡೆಯುತ್ತಿರುತ್ತವೆ. ಇದು ಒಂದು ಸಂಸ್ಥೆಯಾಗಿರುವುದರಿಂದ ಪರಸ್ಪರ ಅವಲಂಬನೆ ಮುಖ್ಯವಾಗುತ್ತದೆ. ಅದಕ್ಕಾಗಿ ಹಣದ ಸಹಾಯ ಬೇಕಾಗುತ್ತದೆ ಎಂಬುದು ಗೀಲಾನಿ ಮಾತಾಗಿದೆ. 2008 ರಲ್ಲಿ ಗೀಲಾನಿ ತಮ್ಮ ತಂದೆಯ ಮರಣಾ ನಂತರ ದುಬೈಯಲ್ಲಿ ಉತ್ತಮ ಸಂಬಳದ ಕೆಲಸವನ್ನು ತೊರೆದು ಮಸೀದಿ ನಿರ್ವಹಣೆಗಾಗಿ ಬಂದರು. ದಸ್ತಗೀರ್ ಸಾಹಿಬ್ ಅನ್ನು ನಿರ್ವಹಿಸುವುದು ತಮ್ಮ ಕುಟುಂಬದ ಜವಾಬ್ದಾರಿಯಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ.


ಶತಮಾನಗಳಿಂದ ಇಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮನ್ನು ಕರ್ತವ್ಯದಿಂದ ಹೇಗೆ ಹಠಾತ್ತನೇ ಹೊರಹಾಕಬಹುದು ಇದು ನ್ಯಾಯೋಚಿಯತವಲ್ಲ ಎಂಬುದು ಗೀಲಾನಿ ಮಾತಾಗಿದೆ. 11ನೇ ಶತಮಾನದ ಇರಾನಿನ ಬೋಧಕ ಶೇಖ್ ಅಬ್ದುಲ್ ಖಾದಿರ್ ಗೀಲಾನಿ ಅವರ ಅವಶೇಷಗಳನ್ನು ದೇಗುಲದ ಒಳಗೆ ಸಂಗ್ರಹಿಸಲಾಗಿದೆ. ನಮ್ಮ ಕುಟುಂಬದೊಂದಿಗೆ ಸಾವಿರಾರು ಭಕ್ತರು ನಂಟು ಹೊಂದಿದ್ದಾರೆ, ಇದು ನಂಬಿಕೆ ಆಧಾರಿತ ಸಂಬಂಧವಾಗಿದೆ ಎಂಬುದು ಗೀಲಾನಿ ಅಭಿಪ್ರಾಯವಾಗಿದೆ.


ಕಾಶ್ಮೀರದಲ್ಲಿ ಧಾರ್ಮಿಕ ಸ್ಥಳಗಳ ಮೇಲೆ ರಾಜಕೀಯ ಹಿಡಿತ
19 ನೇ ಶತಮಾನದ ಅಂತ್ಯದಲ್ಲಿ ಫ್ರಾಂಕೋ-ಪರ್ಷಿಯನ್ ಯುದ್ಧದ ಹಿನ್ನೆಲೆಯಲ್ಲಿ ಆದಾಯದ ಮೂಲವಾಗಿದ್ದ ಕಾಶ್ಮೀರಿ ಶಾಲು ವ್ಯಾಪಾರ ಕುಸಿತ ಕಂಡಿತು. ಇಲ್ಲಿ ಜಾರಿಗೆ ತಂದಿದ್ದ ಬ್ರಿಟಿಷ್ ನೇತೃತ್ವದ ಭೂ ವಸಾಹತು ನೀತಿಯಿಂದಾಗಿ ದೊಡ್ಡ ದೊಡ್ಡ ಎಸ್ಟೇಟ್‌ಗಳನ್ನು ಹೊಂದಿದ್ದ ಭೂಮಾಲೀಕರೊಂದಿಗಿದ್ದ ವ್ಯವಹಾರವನ್ನು ಕಣಿವೆಯ ಶಾಲು ವ್ಯಾಪಾರಿಗಳು ನಿಲ್ಲಿಸಿದರು.


ತಮ್ಮ ಪ್ರಭಾವ ಹಾಗೂ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಬೇರೆ ವೃತ್ತಿಗಳತ್ತ ಮುಖಮಾಡಿದರು. ಇದರಲ್ಲಿ ಹೆಚ್ಚಿನವರು ಧಾರ್ಮಿಕ ಸಂಸ್ಥೆಗಳನ್ನು ನೋಡಿಕೊಳ್ಳುವ ವೃತ್ತಿಯನ್ನು ಆಯ್ದಕೊಂಡರು. ಬೇರೆ ಬೇರೆ ಕಾಶ್ಮೀರಿ ಮುಸ್ಲಿಂ ಗಣ್ಯರು ರಾಜಕೀಯ ವರ್ಚಸ್ಸಿಗಾಗಿ ಸ್ಪರ್ಧಿಸುತ್ತಿದ್ದಂತೆ ರಾಜಕೀಯ ಪ್ರಭಾವವು ಮುಸ್ಲಿಂ ಸಮುದಾಯದ ಮೇಲೆ ಬೀರಿದ್ದು ಕಾಶ್ಮೀರಿ ರಾಜಕೀಯ ಭೂದೃಶ್ಯದಲ್ಲಿ ಗುರುತಿಸಬಹುದಾದ 'ಮುಸ್ಲಿಂ ಸಮುದಾಯ'ವನ್ನು ಗುರುತಿಸುವ ಮತ್ತು ವ್ಯಾಖ್ಯಾನಿಸುವ ರಾಜಕೀಯ ಅಗತ್ಯವನ್ನು ಸೃಷ್ಟಿಸಿತು ಎಂಬುದಾಗಿ ಕಾಶ್ಮೀರಿ ಇತಿಹಾಸಕಾರ ಚಿತ್ರಲೇಖಾ ಜುಟ್ಶಿ ವ್ಯಾಖ್ಯಾನಿಸಿದ್ದಾರೆ.


ಇದನ್ನೂ ಓದಿ:  Mohenjo-daro: ನಶಿಸಿಹೋಗುತ್ತಿದೆ ಮೊಹೆಂಜೋದಾರೋ ಕುರುಹು! ಕಳಚಿ ಹೋಗುತ್ತಾ ಐತಿಹಾಸಿಕ ಕೊಂಡಿ?


ದೇಗುಲಗಳಿಗೆ ಸಂಬಂಧಿಸಿದ ಭೂ ಸಂಪತ್ತಿನಿಂದ ಲಾಭ ಪಡೆದ ರಾಜಕೀಯ ಪಕ್ಷಗಳು ಕಾಶ್ಮೀರದಲ್ಲಿವೆ. ಅದಕ್ಕಾಗಿಯೇ ಬಹುಶಃ 2000 ರ ದಶಕದ ಆರಂಭದಲ್ಲಿ ದೇವಾಲಯಗಳನ್ನು ಸರಕಾರದ ನೇತೃತ್ವದ ವಕ್ಫ್ ಮಂಡಳಿಯ ಅಡಿಯಲ್ಲಿ ತರಲಾಯಿತು.

Published by:Ashwini Prabhu
First published: