IVF Babies: ಕೃತಕ ಗರ್ಭಧಾರಣೆಯಿಂದ ಜನಿಸುವ ಮಕ್ಕಳಲ್ಲಿ ಹೆಚ್ಚಾಗುತ್ತಿದೆಯಾ ಕ್ಯಾನ್ಸರ್‌? ಈ ಬಗ್ಗೆ ಅಧ್ಯಯನ ಹೇಳಿದ್ದೇನು?

ಘನೀಕೃತ ವಿಧಾನದಿಂದ ಜನಿಸಿದ ಮಕ್ಕಳು ಭವಿಷ್ಯದಲ್ಲಿ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಈ ನಾರ್ಡಿಕ್‌ ಅಧ್ಯಯನದಲ್ಲಿ ಘನೀಕೃತ ಭ್ರೂಣಗಳು ಭವಿಷ್ಯದ ಪೀಳಿಗೆಯ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುವುದು ಎಂಬುದರ ಕುರಿತು ಇನ್ನಷ್ಟು ಮಾಹಿತಿಯನ್ನು ಈ ಅಧ್ಯಯನವು ತಿಳಿಸುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಘನೀಕೃತ ಭ್ರೂಣ (frozen embryo) ವಿಧಾನದಿಂದ ಜನಿಸಿದ ಮಕ್ಕಳು ಇತರ ಜನನದ ವಿಧಾನಗಳ ಮೂಲಕ ಜನಿಸಿದ ಮಕ್ಕಳಿಗಿಂತ ಹೆಚ್ಚಿನ ಕ್ಯಾನ್ಸರ್‌ (Cancer) ಅಪಾಯಕ್ಕೆ ತುತ್ತಾಗುತ್ತಾರೆ ಎಂದು ಬೃಹತ್‌ ನಾರ್ಡಿಕ್‌ ಅಧ್ಯಯನ ಸಂಶೋಧನೆ ಹೇಳುತ್ತಿದೆ. ವಾಸ್ತವವಾಗಿ ವಿಶ್ಲೇಷಿಸುವುದಾರೆ, ಕ್ಯಾನ್ಸರ್ ಹೊಂದಿರುವ ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ ಸಹ ಘನೀಕೃತ ಭ್ರೂಣ ವಿಧಾನದಿಂದ ಮಕ್ಕಳ ಜನನದಿಂದ ದೂರವಿರಲು ಪೋಷಕರಿಗೆ (Parents) ತಿಳಿಸಿ ಹೇಳುವುದು ವೈದ್ಯರ ಕರ್ತವ್ಯ ಆಗಿದೆ. ಏಕೆಂದರೆ ಈ ಘನೀಕೃತ ವಿಧಾನದಿಂದ ಜನಿಸಿದ ಮಕ್ಕಳು (Children) ಭವಿಷ್ಯದಲ್ಲಿ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಈ ನಾರ್ಡಿಕ್‌ ಅಧ್ಯಯನದಲ್ಲಿ ಘನೀಕೃತ ಭ್ರೂಣಗಳು ಭವಿಷ್ಯದ ಪೀಳಿಗೆಯ ಆರೋಗ್ಯದ (Health) ಮೇಲೆ ಹೇಗೆ ಪರಿಣಾಮ ಬೀರುವುದು ಎಂಬುದರ ಕುರಿತು ಇನ್ನಷ್ಟು ಮಾಹಿತಿಯನ್ನು ಈ ಅಧ್ಯಯನವು (Study) ತಿಳಿಸುತ್ತದೆ.

ಯುರೋಪ್‌ನಲ್ಲಿ ಸುಮಾರು 12 ಮಕ್ಕಳಲ್ಲಿ ಒಬ್ಬರು ಫಲವತ್ತತೆಯ ಚಿಕಿತ್ಸೆಯ ನಂತರ ಜನಿಸುತ್ತಾರೆ. ಇದರಲ್ಲಿ ವಿಟ್ರೊ ಫಲೀಕರಣ (IVF) ವೂ ಸೇರಿದೆ ಎಂದು ಅಂದಾಜಿಸಲಾಗಿದೆ. ಈ ರೀತಿಯ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಪ್ರಯೋಗಾಲಯದಲ್ಲಿ ಮಾನವ ಮೊಟ್ಟೆ ಮತ್ತು ವೀರ್ಯದಿಂದ ಭ್ರೂಣಗಳನ್ನು ರಚಿಸಲು ಅನುಮತಿಸುತ್ತದೆ ಮತ್ತು ಮೂರು ದಿನಗಳ ನಂತರ ರೋಗಿಯ ಗರ್ಭಾಶಯಕ್ಕೆ ವರ್ಗಾಯಿಸುತ್ತದೆ. ಆದರೆ ಹೆಚ್ಚಾಗಿ, IVF ಭ್ರೂಣಗಳನ್ನು ಕೆಲವು ತಿಂಗಳುಗಳವರೆಗೆ ಅಥವಾ ವರ್ಷಗಳವರೆಗೆ ಫ್ರೀಜ್ ಮಾಡಲಾಗುತ್ತದೆ. ಅದನ್ನು ಕರಗಿಸುವ ಮೊದಲು ಮತ್ತು ಗರ್ಭಾವಸ್ಥೆಯಲ್ಲಿ ಅಳವಡಿಸಲಾಗುತ್ತದೆ.

ಸಂಶೋಧನಾ ಅಧ್ಯಯನ :
ಮುಕ್ತ-ಪ್ರವೇಶ ಜರ್ನಲ್ PLOS ನಲ್ಲಿ ತಮ್ಮ ಅಧ್ಯಯನ ವರದಿಯನ್ನು ಪ್ರಕಟಿಸಿರುವ ಸ್ವೀಡನ್‌ನ ಗೋಥೆನ್‌ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರ ಸಂಶೋಧನಾ ತಂಡವು ತಮ್ಮ ಅಧ್ಯಯನಕ್ಕಾಗಿ, ಡೆನ್ಮಾರ್ಕ್, ಫಿನ್‌ಲ್ಯಾಂಡ್, ನಾರ್ವೆ ಮತ್ತು ಸ್ವೀಡನ್‌ನಲ್ಲಿ ಸುಮಾರು 8 ಮಿಲಿಯನ್ ಮಕ್ಕಳ ವೈದ್ಯಕೀಯ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಅವುಗಳಲ್ಲಿ, 22,630 ಘನೀಕೃತ-ಕರಗಿದ ಭ್ರೂಣ ವರ್ಗಾವಣೆಯ ನಂತರ ಜನಿಸಿದ 22,630 ಸೇರಿದಂತೆ ART ಬಳಕೆಯ ನಂತರ 170,000 ಕ್ಕಿಂತ ಹೆಚ್ಚು ಮಕ್ಕಳು ಜನಿಸಿವೆ.

ಘನೀಕೃತ -ಕರಗಿದ ಭ್ರೂಣ ವರ್ಗಾವಣೆಯ ನಂತರ ಜನಿಸಿದ ಮಕ್ಕಳು, ಸಾಮಾನ್ಯ ಭ್ರೂಣ ವರ್ಗಾವಣೆಯ ನಂತರ ಜನಿಸಿದ ಮಕ್ಕಳು ಮತ್ತು ಯಾವುದೇ ಫಲವತ್ತತೆಯ ಚಿಕಿತ್ಸೆಯ ಸಹಾಯವಿಲ್ಲದೆ ಜನಿಸಿದ ಸಾಮಾನ್ಯ ಮಕ್ಕಳಿಗಿಂತ ಸುಮಾರು 1.6 ರಿಂದ 1.7 ಪಟ್ಟು ಹೆಚ್ಚಿನ ಕ್ಯಾನ್ಸರ್ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಘನೀಕೃತ ಭ್ರೂಣ ವರ್ಗಾವಣೆಯ ನಂತರ ಜನಿಸಿದ 1,000 ಮಕ್ಕಳಲ್ಲಿ ಕೇವಲ 2 ಮಕ್ಕಳು ಮಾತ್ರ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಾರೆ. ಆದರೆ ಇತರ ಎರಡು ವಿಧಾನಗಳಲ್ಲಿ ಜನಿಸಿದ 1,000 ಮಕ್ಕಳಲ್ಲಿ 1.5 ಕ್ಕಿಂತ ಕಡಿಮೆ ಮಕ್ಕಳು ಕ್ಯಾನ್ಸರ್‌ ಅಪಾಯಕ್ಕೆ ತುತ್ತಾಗುತ್ತಾರೆ.

ಇದನ್ನೂ ಓದಿ:  Cancer: ಗರ್ಭಿಣಿಯರಲ್ಲಿ ಹೆಚ್ಚುತ್ತಿದೆಯಾ ಕ್ಯಾನ್ಸರ್? ಇದಕ್ಕೆ ಈ ವಸ್ತುಗಳೇ ಕಾರಣವೇ?

"ಈ ಘನೀಕೃತ ಭ್ರೂಣ ವಿಧಾನವು ವಾಸ್ತವವಾಗಿ ಸಾಕಷ್ಟು ಸಾಮಾನ್ಯ ವಿಧಾನವಾಗಿದೆ. ಹಾಗೂ ಇಂದಿನ ಕಾಲದಲ್ಲಿ ಈ ವಿಧಾನವು ಹೆಚ್ಚು ಬಳಕೆಯಾಗುತ್ತಿದೆ. ಮಕ್ಕಳು ಆಗದೇ ಇರುವ ಪೋಷಕರಿಗೆ ಈ ವಿಧಾನವು ಸಾಕಷ್ಟು ಭರವಸೆಯನ್ನು ನೀಡುತ್ತದೆ. ಇದರಿಂದ ಜನಿಸಿದ ಹೆಚ್ಚಿನ ಮಕ್ಕಳು ಆರೋಗ್ಯವಾಗಿದ್ದಾರೆ" ಎಂದು ಗೊಥೆನ್ಬರ್ಗ್ ವಿಶ್ವವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಪ್ರಾಧ್ಯಾಪಕಿ ಮತ್ತು ಅಧ್ಯಯನದ ಸಹ-ಲೇಖಕಿ ಕ್ರಿಸ್ಟಿನಾ ಬರ್ಗ್ ಅವರು ಯುರೋ ನ್ಯೂಸ್ ನೆಕ್ಸ್ಟ್ಗೆ ತಿಳಿಸಿದರು.

ಈ ಘನೀಕೃತ ವಿಧಾನವು ಏಕೆ ಮುಖ್ಯವಾಗಿದೆ?
ಈ ವಿಧಾನವು ಸಾಕಷ್ಟು ಉಪಯುಕ್ತ ಫಲವತ್ತತೆ ವಿಧಾನವಾಗಿದೆ ಎಂದು ತಂಡದ ಸಂಶೋಧನೆಗಳು ತಿಳಿಸುತ್ತವೆ. ಏಕೆಂದರೆ ಘನೀಕೃತ -ಕರಗಿದ ಭ್ರೂಣ ವರ್ಗಾವಣೆ ವಿಧಾನದಿಂದ ಜನಿಸಿದ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಅನೇಕ ದೇಶಗಳಲ್ಲಿ, ಈಗ ಸಾಮಾನ್ಯ ಭ್ರೂಣ ವರ್ಗಾವಣೆಯ ವಿಧಾನದಿಂದ ಜನಿಸಿದ ಮಕ್ಕಳ ಸಂಖ್ಯೆಯು ಹೆಚ್ಚಾಗಿದೆ.

ಈ ಹಿಂದೆ ನಡೆದ ಕೆಲವು ಸಂಶೋಧನೆಗಳು ಘನೀಕೃತ ಭ್ರೂಣ ವರ್ಗಾವಣೆಯ ನಂತರ ಜನಿಸಿದ ಶಿಶುಗಳು ಮ್ಯಾಕ್ರೋಸೋಮಿಯಾದ ಅಪಾಯವನ್ನು ಹೆಚ್ಚು ಹೊಂದಿರುವ ಸಾಧ್ಯತೆ ಬಗ್ಗೆ ಸೂಚಿಸಿತ್ತು ಅಥವಾ ಜನನ ತೂಕವು 4 ಕೆಜಿಗಿಂತ ಹೆಚ್ಚಾಗಿರುತ್ತದೆ.

ಇದು ಬಾಲ್ಯದಲ್ಲಿ ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸುತ್ತದೆ. ಅದರ ಜೊತೆಗೆ ಭ್ರೂಣಗಳನ್ನು ಘನೀಕರಿಸುವ ಅಭ್ಯಾಸ ಮತ್ತು ಬಾಲ್ಯದ ಕ್ಯಾನ್ಸರ್ ಅಪಾಯದ ನಡುವಿನ ಅಧ್ಯಯನಗಳಿಂದ ಕ್ಯಾನ್ಸರ್‌ ಅಪಾಯಕ್ಕೂ ಇದು ನೇರ ಸಂಬಂಧವನ್ನು ಹೊಂದಿದೆ ಎಂದು ಅಧ್ಯಯನಗಳು ಹೇಳುತ್ತಿವೆ.

ಹಾಗಿದ್ರೆ ಘನೀಕೃತ ಭ್ರೂಣ ಎಂಬುದರ ಅರ್ಥವೇನು?
ಫರ್ಟಿಲೈಸೇಷನ್ ಮತ್ತು ನಂತರದ ಬೆಳವಣಿಗೆಯ ಬಳಿಕ ಭ್ರೂಣಗಳನ್ನು ಶೀಥಲೀಕರಿಸಿ ಹೆಪ್ಪುಗಟ್ಟಿಸುವ ವಿಧಾನವನ್ನು ಘನೀಕೃತ ಭ್ರೂಣ ಒಳಗೊಂಡಿರುತ್ತದೆ. ಭ್ರೂಣಗಳನ್ನು 2ನೇ ದಿನ (ನಾಲ್ಕು – ಜೀವಕೋಶಗಳ ಹಂತ) – 5ನೇ ದಿನಗಳ (ಬ್ಲಾಸ್ಟೊಸಿಸ್ಟ್ ಹಂತ) ನಡುವೆ ಘನೀಕರಿಸಬಹುದು (ಫ್ರೀಜ್ ಮಾಡಬಹುದು).

ಇದನ್ನೂ ಓದಿ:  Explained: ವೈದ್ಯಕೀಯ ಲೋಕದಲ್ಲಿ ಹೊಸ ಮೈಲಿಗಲ್ಲು! ಹಂದಿಚರ್ಮದಿಂದ ಕುರುಡುತನ ಮಂಗಮಾಯ!

ಆರೋಗ್ಯಕರ ಮತ್ತು ಕಾರ್ಯಸಾಧ್ಯವಾದ ಭ್ರೂಣಗಳನ್ನು ‘ಘನೀಕರಿಸುವ ಯಂತ್ರ'ಕ್ಕೆ ಸ್ಥಳಾಂತರಿಸಲಾಗುತ್ತದೆ, ಅಲ್ಲಿ ತಾಪಮಾನವು ಶೂನ್ಯದ ಕೆಳಗಿನ - 150 ಡಿಗ್ರಿ ಸೆಲ್ಸಿಯಸ್‍ಗೆ ವೇಗವಾಗಿ ಇಳಿಯುವಂತೆ ಮಾಡಲಾಗುತ್ತದೆ ಮತ್ತು ನಂತರ - 196 ಡಿಗ್ರಿ ಸೆಲ್ಸಿಯಸ್‍ನಲ್ಲಿ ದ್ರವ ಸಾರಜನಕ ಟ್ಯಾಂಕ್‍ಗಳಲ್ಲಿ ಸಂಗ್ರಹಿಸಲಾಗುತ್ತದೆ.

ಲ್ಯುಕೇಮಿಯಾ ಮತ್ತು ಮೆದುಳಿನ ಕ್ಯಾನ್ಸರ್‌ ಗಡ್ಡೆಗಳು:
ART ಮತ್ತು ಸ್ವಾಭಾವಿಕ ಗರ್ಭಧಾರಣೆ ವಿಧಾನದಲ್ಲಿ ಜನಿಸಿದ ಮಕ್ಕಳ ನಡುವೆ, ಘನೀಕೃತ ಭ್ರೂಣ ವರ್ಗಾವಣೆ ಮತ್ತು ತಾಜಾ ಭ್ರೂಣ ವರ್ಗಾವಣೆಯ ವಿಧಾನದಲ್ಲಿ ಜನಿಸಿದ ಮಕ್ಕಳ ನಡುವೆ ಮತ್ತು ಘನೀಕೃತ ಭ್ರೂಣ ವರ್ಗಾವಣೆ ಮತ್ತು ಸ್ವಾಭಾವಿಕ ಪರಿಕಲ್ಪನೆಯ ವಿಧಾನದ ಮೂಲಕ ಜನಿಸಿದ ಮಕ್ಕಳ ನಡುವೆ ಕ್ಯಾನ್ಸರ್ ಅಪಾಯವನ್ನು ತಂಡವು ಹೋಲಿಕೆ ಮಾಡುವ ಅಧ್ಯಯನವನ್ನು ಮಾಡುತ್ತಿದೆ.

ಸಂಶೋಧಕರು ಭ್ರೂಣದ ಹಂತ, ತಾಯಿಯ ವಯಸ್ಸು, ಜನನ ಕ್ರಮ, ಲಿಂಗ, ಜನನ ತೂಕ, ಮತ್ತು ಶಿಶುಗಳು ಏಕ, ಅವಳಿ ಇಲ್ಲವೆ ತ್ರಿವಳಿಗಳಂತಹ ಸಂಭವನೀಯ ಅಸ್ಥಿರಗಳನ್ನು ಗಣನೆಗೆ ತೆಗೆದುಕೊಂಡು ಅಧ್ಯಯನ ಮಾಡಿದ್ಧಾರೆ. ಪ್ರತಿ ಚಿಕ್ಕ ಮಕ್ಕಳಲ್ಲಿ ಕ್ಯಾನ್ಸರ್ ಪ್ರಕಾರವು ತನ್ನದೇ ಆದ ಅಪಾಯಕಾರಿ ಅಂಶವನ್ನು ಹೊಂದಿದೆ. ಆದರೆ ಅನೇಕ ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳು ಭ್ರೂಣದ ಹಂತ ಮತ್ತು ಗರ್ಭಾಶಯದಲ್ಲಿಯೇ ಹುಟ್ಟಿಕೊಳ್ಳುತ್ತವೆ ಎಂದು ಭಾವಿಸಲಾಗಿದೆ. ಈ ಅಧ್ಯಯನದಲ್ಲಿ ಕಂಡುಬರುವ ಸಾಮಾನ್ಯ ರೀತಿಯ ಕ್ಯಾನ್ಸರ್ ಲ್ಯುಕೇಮಿಯಾ ಮತ್ತು ಮೆದುಳಿನಲ್ಲಿ ಕಂಡು ಬರುವ ಗಡ್ಡೆಗಳು ಸಾಮಾನ್ಯವಾಗಿವೆ.

ಕ್ರಯೋಪ್ರಿಸರ್ವ್ ವಿಧಾನದಿಂದ ಜನಿಸಿದ ಮಕ್ಕಳಲ್ಲಿ ಕ್ಯಾನ್ಸರ್‌ ಅಪಾಯ ಹೆಚ್ಚು, ಏಕೆ?
ಇದಕ್ಕೆ ಅಧ್ಯಯನ ಸಂಶೋಧಕ ಬರ್ಗ್‌ ಅವರು “ಈ ವಿಧಾನಕ್ಕೆ ಮೂರು ಊಹೆಗಳಿವೆ” ಎಂದು ಯುರೋನ್ಯೂಸ್ ಮಾಧ್ಯಮಕ್ಕೆ ತಿಳಿಸಿದರು. ಘನೀಕೃತ ಪ್ರಕ್ರಿಯೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಇದು ಎಂಡೊಮೆಟ್ರಿಯಲ್ ಅಂಶವಾಗಿರಬಹುದು. ಘನೀಕೃತ ಭ್ರೂಣವನ್ನು ಪಡೆಯುವ ಮಹಿಳೆಯರ ಗರ್ಭಾಶಯದ ಒಳಪದರವು ತಾಜಾ ಭ್ರೂಣ ವರ್ಗಾವಣೆಯನ್ನು ಪಡೆಯುವವರಿಗಿಂತ ಫಲವತ್ತತೆಯ ಚಿಕಿತ್ಸೆಗಳಿಂದ ಸಾಮಾನ್ಯವಾಗಿ ಕಡಿಮೆ ಪ್ರಚೋದನೆಯನ್ನು ಹೊಂದಿದೆ ಎಂಬ ಅಂಶವನ್ನು ಬೆಳಕಿಗೆ ತರಲಾಗಿದೆ.

ಇದನ್ನೂ ಓದಿ:  Artificial Embryos: ಮಾನವ DNA ಬಳಸಿ ಕೃತಕ ಭ್ರೂಣ ಅಭಿವೃದ್ಧಿಗೆ ಮುಂದಾದ ಬಯೋಟೆಕ್, ಅಂಗಾಂಗ ಕಸಿಗೆ ಬಳಕೆ!

ಘನೀಕೃತ ಮತ್ತು ಕರಗಿಸುವ ಪ್ರಕ್ರಿಯೆ ಎರಡು ವಿಧಾನಗಳ ಮೂಲಕ ಇರುವ ಭ್ರೂಣಗಳು ಬದುಕುಳಿಯಲು ಸೂಕ್ತವಾದವು ಮತ್ತು ಹೆಚ್ಚು ಬೆಳವಣಿಗೆಯ ಅಂಶಗಳನ್ನು ಹೊಂದಿವೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಇದು ಹೆಚ್ಚಿನ ಜನನ ತೂಕವನ್ನು ವಿವರಿಸುತ್ತದೆ ಎಂದು ಬರ್ಗ್ ಹೇಳಿದರು. "ಅತಿ ಬೆಳವಣಿಗೆಗೆ ಕಾರಣವಾಗುವ ಹಾರ್ಮೋನುಗಳು ಮತ್ತು ಬೆಳವಣಿಗೆಯ ಅಂಶಗಳೊಂದಿಗೆ ಸಂಪರ್ಕವಿರಬಹುದು. ಏಕೆಂದರೆ, ಕ್ಯಾನ್ಸರ್ ಕೆಲವು ಜೀವಕೋಶಗಳ ಒಂದು ರೀತಿಯ ಬೆಳವಣಿಗೆಯಾಗಿದೆ. ಆದ್ದರಿಂದ ಕ್ಯಾನ್ಸರ್ ಮತ್ತು ಅತಿಯಾದ ಬೆಳವಣಿಗೆಯ ನಡುವೆ ಕೆಲವು ಹೋಲಿಕೆಗಳಿವೆ" ಎಂದು ಬರ್ಗ್‌ ಅವರು ಹೇಳುತ್ತಾರೆ.

ಘನೀಕೃತ ಭ್ರೂಣ ವರ್ಗಾವಣೆ ಅಥವಾ ತಾಜಾ ಭ್ರೂಣ ವರ್ಗಾವಣೆ: ಯಾವುದು ಉತ್ತಮ?
ತಾಜಾ ಭ್ರೂಣ ವರ್ಗಾವಣೆಗಿಂತ ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆಯೊಂದಿಗೆ ಗರ್ಭಧಾರಣೆಯ ಯಶಸ್ಸಿನ ಪ್ರಮಾಣವು ಉತ್ತಮವಾಗಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆಯ ನಂತರ ಗರ್ಭಧರಿಸಿದ ಗರ್ಭಾವಸ್ಥೆಯು ಉತ್ತಮ ಫಲಿತಾಂಶಗಳನ್ನು ಹೊಂದಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

ಆದರೂ, ಹೆಚ್ಚಿನ ಅಧ್ಯಯನಗಳು ಕಿರಿಯ ಮಹಿಳೆಯರಲ್ಲಿ ಉತ್ತಮ ಮುನ್ಸೂಚನೆ ತೋರಿಸಿವೆ. 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮುನ್ಸೂಚನೆ ಅಸ್ಪಷ್ಟವಾಗಿದೆ. ಎಫ್‍ಇಟಿಯನ್ನು ಆರಿಸಿಕೊಂಡರೆ, ದಂಪತಿಗಳು ಉತ್ತಮ ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಬೇಕು ಏಕೆಂದರೆ ವೈದ್ಯಕೀಯ ಇತಿಹಾಸವನ್ನು ನೋಡಿದ ನಂತರ ಹೆಚ್ಚಿನ ಚಿಕಿತ್ಸೆಯ ಸಲಹೆ ನೀಡಲು ಅವರು ಉತ್ತಮ ವ್ಯಕ್ತಿಗಳಾಗಿರುತ್ತಾರೆ.
Published by:Ashwini Prabhu
First published: