Smallest Rocket: 75 ಶಾಲೆಗಳ 750 ವಿದ್ಯಾರ್ಥಿಗಳಿಂದ ತಯಾರಾದ 75 ಪೆಲೋಡ್ ನಭಕ್ಕೆ; ತ್ರಿವರ್ಣ ಧ್ವಜ ಹೊತ್ತು ಸಾಗಲಿದೆ SSLV ರಾಕೆಟ್!

ಬಾಹ್ಯಾಕಾಶದಲ್ಲಿ ಧ್ವಜವನ್ನು ಹಾರಿಸುವ ಭರವಸೆಯನ್ನು ಇಟ್ಟುಕೊಂಡು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಗಸ್ಟ್ 7 ರಂದು ಎಸ್ಎಸ್ಎಲ್ ವಿ ( ವಾಹನ)ಯನ್ನು ಉಡಾವಣೆ ಮಾಡುತ್ತಿದೆ. ಈ ಚಿಕ್ಕ ವಾಣಿಜ್ಯ ರಾಕೆಟ್ ಮೂಲಕ ರಾಷ್ಟ್ರಧ್ವಜ ಬಾಹ್ಯಾಕಾಶವನ್ನು ತಲುಪಲಿದೆ.

ಸಣ್ಣ ಉಪಗ್ರಹ ಉಡಾವಣೆ

ಸಣ್ಣ ಉಪಗ್ರಹ ಉಡಾವಣೆ

  • Share this:
ಭಾರತದ ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದೆ. ಈ ವರ್ಷ 75ನೇ ಸ್ವಾತಂತ್ರ್ಯ (Independence day )ಆಗಿರುವುದರಿಂದ ಸಂಭ್ರಮ ಇನ್ನಷ್ಟು ಕಳೆಗಟ್ಟಿದೆ. ಆಗಸ್ಟ್ 15, 2018ರಂದು, ಭಾರತದ 75ನೇ ಸ್ವಾತಂತ್ರ್ಯದ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಬಾಹ್ಯಾಕಾಶದಲ್ಲಿ ಹಾರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅಂದು ಘೋಷಿಸಿದ್ದರು. ಹೀಗಾಗಿ ಇದೇ ನಿಮಿತ್ತ ಆಕಾಶದೆತ್ತರ ತ್ರಿವರ್ಣ ಧ್ವಜವನ್ನು (tricolor flag) ಹಾರಿಸಲು ಇಸ್ರೋ ಸನ್ನದ್ಧವಾಗಿದೆ. ಬಾಹ್ಯಾಕಾಶದಲ್ಲಿ ಧ್ವಜವನ್ನು ಹಾರಿಸುವ ಭರವಸೆಯನ್ನು ಇಟ್ಟುಕೊಂಡು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) (ISRO) ಆಗಸ್ಟ್ 7 ರಂದು ಎಸ್ಎಸ್ಎಲ್ ವಿ (ವಾಹನ)ಯನ್ನು ಉಡಾವಣೆ ಮಾಡುತ್ತಿದೆ. ಈ ಚಿಕ್ಕ ವಾಣಿಜ್ಯ ರಾಕೆಟ್ (Commercial Rocket) ಮೂಲಕ ರಾಷ್ಟ್ರಧ್ವಜ ಬಾಹ್ಯಾಕಾಶವನ್ನು ತಲುಪಲಿದೆ.

ಬಹುನೀರಿಕ್ಷಿತ ಯೋಜನೆ 'ಗಗನಯಾನ’ದಲ್ಲಿ ಮಾನವಸಹಿತ ರಾಷ್ಟ್ರಧ್ವಜವನ್ನು ಹೊತ್ತ ಬಾಹ್ಯಾಕಾಶ ಮಿಷನ್ ಅನ್ನು ಕೈಗೊಳ್ಳುವುದಾಗಿ ಪ್ರಧಾನಿ ಭರವಸೆ ನೀಡಿದ್ದರೂ, ಆದರೆ ಆ ಯೋಜನೆ ವಿಳಂಬವಾಗಿದ್ದು, ಹೊಸ ಉಪಗ್ರಹದ ಮೂಲಕ ಗಗನದಲ್ಲಿ ಧ್ವಜವನ್ನು ಹಾರಿಸಲು ಇಸ್ರೋ ಕೇಂದ್ರದ ಜೊತೆ ಕೈಜೋಡಿಸಿದೆ.

ಆಗಸ್ಟ್ 7 ರಂದು ಉಡಾವಣೆ
ಇಸ್ರೋದ ಎಸ್ ಎಸ್ ಎಲ್ ವಿ, ಕೇವಲ 120 ಟನ್ ತೂಕವಿದ್ದು, 500 ಕೆಜಿಯ ಉಪಗ್ರಹವನ್ನು ಭೂಮಿಯ ಕಡಿಮೆ ಅಂತರದ ಕಕ್ಷಗೆ ತಲುಪಿಸಲು ಅಭಿವೃದ್ಧಿಪಡಿಸಿದ ಸಾಧನವಾಗಿದೆ. ಆಂಧ್ರ ಪ್ರದೇಶದ ಶ್ರೀ ಹರಿಕೋಟದ ಸತೀಶ್ ಧವನ್ ಉಡಾವಣೆ ಕೇಂದ್ರದಿಂದ ಆಗಸ್ಟ್ 7 ರಂದು ಬೆಳಗ್ಗೆ 9:18 ಕ್ಕೆ ಅಧಿಕೃತ ಉಡಾವಣೆ ಆಗಲಿದೆ ಎಂದು ತಿಳಿದು ಬಂದಿದೆ.

75 ಶಾಲೆ, 750 ವಿದ್ಯಾರ್ಥಿಗಳು, 75 ಪೆಲೋಡ್
'ಆಜಾದಿ ಕಾ ಅಮೃತ್ ಮಹೋತ್ಸವ'ದ ದೇಶದ ಆಚರಣೆಗಳನ್ನು ಗುರುತಿಸಲು, SSLV ಭಾರತದಾದ್ಯಂತ 75 ಗ್ರಾಮೀಣ ಸರ್ಕಾರಿ ಶಾಲೆಗಳ 750 ಯುವ ವಿದ್ಯಾರ್ಥಿಗಳಿಂದ ನಿರ್ಮಿಸಲಾದ 75 ಪೇಲೋಡ್‌ಗಳನ್ನು ಒಳಗೊಂಡಿರುವ 'AzaadiSAT' ಎಂಬ ಸಹ-ಪ್ರಯಾಣಿಕ ಉಪಗ್ರಹವನ್ನು ಹೊಂದಿರುತ್ತದೆ. 75ನೇ ಸ್ವಾತಂತ್ರ್ಯವಾಗಿರುವುದರಿಂದ ಎಲ್ಲವೂ 75 ಎಂಬುದು ಇಲ್ಲಿ ವಿಶೇಷವಾಗಿರುವುದನ್ನು ನಾವಿಲ್ಲಿ ಗಮನಿಸಬಹುದು. ಮೊದಲ SSLV ಪಯಣದಲ್ಲಿ, 750 ವಿದ್ಯಾರ್ಥಿನಿಯರು ವಿನ್ಯಾಸ ಮಾಡಿದ "AzaadiSat" ಉಪಗ್ರಹ ಉಡಾವಣೆ ಆಗಲಿದೆ.

ಇದನ್ನೂ ಓದಿ: Explained: ಭಾರತದ ಧ್ವಜ ಸಂಹಿತೆ ಎಂದರೇನು? ಈ ಬಾರಿ ಕೇಂದ್ರ ಯಾವ ತಿದ್ದುಪಡಿಗಳನ್ನು ತಂದಿದೆ? ಇಲ್ಲಿದೆ ಸಂಪೂರ್ಣ ವಿವರ

ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ಮತ್ತು ಯುವತಿಯರಿಗೆ ಬಾಹ್ಯಾಕಾಶ ಸಂಶೋಧನೆಯನ್ನು ತಮ್ಮ ವೃತ್ತಿಯನ್ನಾಗಿ ಆಯ್ಕೆ ಮಾಡಲು ಅವಕಾಶಗಳನ್ನು ಸೃಷ್ಟಿಸಲು ಈ ಯೋಜನೆಯನ್ನು ವಿಶೇಷವಾಗಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ವರ್ಷಾಚರಣೆಗಾಗಿ ಕಲ್ಪಿಸಲಾಗಿದೆ.

ಎಸ್ ಎಸ್ ಎಲ್ ವಿ ವಿಶೇಷತೆ
ಎಸ್ ಎಸ್ ಎಲ್ ವಿ, ಕೇವಲ 120 ಟನ್ ತೂಕವಿದ್ದು, 500 ಕೆಜಿಯ ಉಪಗ್ರಹವನ್ನು ಭೂಮಿಯ ಕಡಿಮೆ ಅಂತರದ ಕಕ್ಷಗೆ ಸಾಗಿಸಬಲ್ಲದು. SSLV ರಾಕೆಟ್ ಒಂದಕ್ಕಿಂತ ಹೆಚ್ಚು ಉಪಗ್ರಹಗಳನ್ನ ಏಕಕಾಲದಲ್ಲಿ ಉಡಾವಣೆ ಮಾಡಬಹುದು.

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೊಸ ಉಪಗ್ರಹವನ್ನು "ಗೇಮ್ ಚೇಂಜರ್" ಎಂದು ಕರೆದಿದ್ದಾರೆ, ಇದು ಲಾಭದಾಯಕ ಮತ್ತು ಉತ್ಕರ್ಷದ ಸಣ್ಣ ಉಪಗ್ರಹ ಉಡಾವಣಾ ಮಾರುಕಟ್ಟೆಗೆ ಪ್ರವೇಶಿಸುವ ಭಾರತದ ಕನಸುಗಳಿಗೆ ಸಾಕಾರಿಯಾಗಿದೆ ಎಂದಿದ್ದಾರೆ. ಅತ್ಯಂತ ಕಡಿಮೆ ಸಮಯದೊಂದಿಗೆ, ಬೇಡಿಕೆಯ ಮೇಲೆ ಉಡಾವಣೆ ಮಾಡಬಹುದಾದ ಕಡಿಮೆ ವೆಚ್ಚದ ರಾಕೆಟ್ ಅನ್ನು ದೊಡ್ಡ ಪ್ರಮಾಣದ ಉತ್ಪಾದನೆಗೆ ವಿನ್ಯಾಸಗೊಳಿಸಲಾಗಿದೆ.

SSLV ಮಿನಿ, ಮೈಕ್ರೋ ಮತ್ತು ನ್ಯಾನೋ ಉಪಗ್ರಹಗಳು (10-500 ಕೆಜಿ ದ್ರವ್ಯರಾಶಿ) 500 ಕಿಮೀ ಸಮತಲ ಕಕ್ಷೆಯಲ್ಲಿ ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಪೇಲೋಡ್ ಇಮೇಜಿಂಗ್‌ನೊಂದಿಗೆ ಚುರುಕಾದ ಮತ್ತು ಪ್ರಾಯೋಗಿಕ ಉಪಗ್ರಹವನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿಪಡಿಸುವ ಗುರಿಯನ್ನು SSLV ಹೊಂದಿದೆ. ಇದು ಅರಣ್ಯ, ಜಲವಿಜ್ಞಾನ, ಕೃಷಿ, ಮಣ್ಣು ಮತ್ತು ಕರಾವಳಿ ಅಧ್ಯಯನಗಳ ಕ್ಷೇತ್ರಗಳಲ್ಲಿ ನಿರ್ಣಾಯಕ ಮಾಹಿತಿಯನ್ನು ಒದಗಿಸುತ್ತದೆ.

ಸ್ಪೇಸ್ ಕಿಡ್ಜ್ ಇಂಡಿಯಾದ ವಿದ್ಯಾರ್ಥಿ ತಂಡದ ಸಾಧನೆ
“ಪೇಲೋಡ್‌ಗಳನ್ನು ಸ್ಪೇಸ್ ಕಿಡ್ಜ್ ಇಂಡಿಯಾದ ವಿದ್ಯಾರ್ಥಿ ತಂಡವು ಸಂಯೋಜಿಸಿದೆ. ಪೇಲೋಡ್‌ಗಳಲ್ಲಿ ಹವ್ಯಾಸಿ ಆಡಿಯೊ ಆಪರೇಟರ್‌ಗೆ ಧ್ವನಿ ಮತ್ತು ಡೇಟಾ ಪ್ರಸರಣವನ್ನು ಸಕ್ರಿಯಗೊಳಿಸಲು ಹ್ಯಾಮ್ ರೇಡಿಯೊ ಆವರ್ತನದಲ್ಲಿ ಕೆಲಸ ಮಾಡುವ UHF-VHF ಟ್ರಾನ್ಸ್‌ಪಾಂಡರ್, ಅದರ ಕಕ್ಷೆಯಲ್ಲಿ ಅಯಾನೀಕರಿಸುವ ವಿಕಿರಣವನ್ನು ಅಳೆಯಲು ಘನ ಸ್ಥಿತಿಯ ಪಿನ್ ಡಯೋಡ್-ಬೇಸ್ ವಿಕಿರಣ ಕೌಂಟರ್, ದೀರ್ಘ ಶ್ರೇಣಿಯ ಟ್ರಾನ್ಸ್‌ಪಾಂಡರ್ ಮತ್ತು ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ" ಎಂದು ಇಸ್ರೋ ಹೇಳಿದೆ.

ಇದನ್ನೂ ಓದಿ:  Independence Day 2022: ಹೇಗಿತ್ತು 1947ರಲ್ಲಿ ಮೊದಲ ಸ್ವಾತಂತ್ರ್ಯ ಹಬ್ಬ? ಫೋಟೋಗಳಲ್ಲಿ ನೋಡಿ ಅಂದಿನ ಸಂಭ್ರಮ!

"ಸ್ಪೇಸ್ ಕಿಡ್ಜ್ ಇಂಡಿಯಾ ಅಭಿವೃದ್ಧಿಪಡಿಸಿದ ಗ್ರೌಂಡ್ ಸ್ಟೇಷನ್ ವ್ಯವಸ್ಥೆಯನ್ನು ಈ ಉಪಗ್ರಹದಿಂದ ಡೇಟಾವನ್ನು ಸ್ವೀಕರಿಸಲು ಬಳಸಿಕೊಳ್ಳಲಾಗುತ್ತದೆ" ಎಂದು ಇಸ್ರೋ ತಿಳಿಸಿದೆ.

ಯುವ ವಿದ್ಯಾರ್ಥಿಗಳು 8 ಕೆಜಿ ಉಪಗ್ರಹವನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ಪೇಲೋಡ್‌ಗಳು, ಅಕ್ಸೆಲೆರೊಮೀಟರ್, ತಾಪಮಾನ ಸಂವೇದಕಗಳು ಮತ್ತು ರೇಡಿಯೇಶನ್ ಕೌಂಟರ್‌ಗಳ ಗೈರೊಸ್ಕೋಪ್ ಅನ್ನು ಸಹ ಹೊಂದಿದ್ದು, ಉಪಗ್ರಹದ ಜೀವಿತಾವಧಿಯು ಆರು ತಿಂಗಳು ಎಂದು ಅಂದಾಜಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ IN-SPAceIND ಮತ್ತು SpaceKidz ಇಂಡಿಯಾ 'AzaadiSAT' ಗಾಗಿ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿವೆ.
Published by:Ashwini Prabhu
First published: