Explained: ಇಸ್ಲಾಮಿಕ್ ಹೊಸ ವರ್ಷ ಎಂದರೇನು? ಇದರ ಆಚರಣೆ ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Islamic New Year: ಇಸ್ಲಾಮಿಕ್ ಹೊಸ ವರ್ಷವು ಮೊಹರಂನಿಂದ ಆರಂಭವಾಗುತ್ತದೆ. ಅಲ್ಲದೇ ಇದನ್ನು ರಂಜಾನ್ ನಂತರ ಬರುವ ಎರಡನೇ ಪವಿತ್ರ ತಿಂಗಳು ಎಂದು ಸಹ ಪರಿಗಣಿಸಲಾಗುತ್ತದೆ. ಇನ್ನು ಮೊಹರಂನಿಂದ ಆರಂಭವಾದ ಇದು ದುಲ್ ಅಲ್-ಹಿಜ್ಜಾದೊಂದಿಗೆ ಕೊನೆಗೊಳ್ಳುತ್ತದೆ.

  • Share this:

ಇಸ್ಲಾಮಿಕ್ ಹೊಸ ವರ್ಷವು (Islamic New Year) ಹೊಸ ಮುಸ್ಲಿಂ ಕ್ಯಾಲೆಂಡರ್‌ನ ಆರಂಭವನ್ನು ಸೂಚಿಸುತ್ತದೆ. ಇದನ್ನು ಹಿಜ್ರಿ ಹೊಸ ವರ್ಷ ಎಂದೂ ಸಹ  ಕರೆಯುತ್ತಾರೆ, ಇಸ್ಲಾಮಿಕ್ ಕ್ಯಾಲೆಂಡರ್ 354 ಅಥವಾ 355 ದಿನಗಳನ್ನು ಹೊಂದಿರುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್‌ಗೆ ಹೋಲಿಸಿದರೆ, ಇದರಲ್ಲಿ ಸರಿಸುಮಾರು 11 ದಿನಗಳು ಕಡಿಮೆ ಇರುತ್ತದೆ. ಇಸ್ಲಾಮಿಕ್ ಹೊಸ ವರ್ಷವು ಮೊಹರಂನಿಂದ ಆರಂಭವಾಗುತ್ತದೆ. ಅಲ್ಲದೇ ಇದನ್ನು ರಂಜಾನ್ ನಂತರ ಬರುವ ಎರಡನೇ ಪವಿತ್ರ ತಿಂಗಳು ಎಂದು  ಸಹ ಪರಿಗಣಿಸಲಾಗುತ್ತದೆ. ಇನ್ನು ಮೊಹರಂನಿಂದ ಆರಂಭವಾದ ಇದು  ದುಲ್ ಅಲ್-ಹಿಜ್ಜಾದೊಂದಿಗೆ ಕೊನೆಗೊಳ್ಳುತ್ತದೆ. ಹೆಸರೇ ಸೂಚಿಸುವಂತೆ ಇದು ಭಕ್ತರು ಹಜ್  ಯಾತ್ರೆಗೆ ಹೋಗುವ ತಿಂಗಳು. ಈ ವರ್ಷ, ಹಿಜರಿ ಹೊಸ ವರ್ಷವು ಆಗಸ್ಟ್ ಎರಡನೇ ವಾರದಲ್ಲಿ ಆರಂಭವಾಗಲಿದೆ.


ಖಗೋಳಶಾಸ್ತ್ರ ಕೇಂದ್ರದ ಲೆಕ್ಕಾಚಾರಗಳ ಪ್ರಕಾರ, ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ, ಇಸ್ಲಾಮಿಕ್ ಹೊಸ ವರ್ಷದ ಮೊದಲ ದಿನ  ಈ ಬಾರಿ ಆಗಸ್ಟ್ 10, ಮಂಗಳವಾರದಂದು ಬರುತ್ತದೆ. ಇನ್ನು ಆಗಸ್ಟ್ 9 ರಂದು ಭಾರತದ ಇಸ್ಲಾಮಿಕ್ ಕ್ಯಾಲೆಂಡರ್ ನಲ್ಲಿ ಇಸ್ಲಾಮಿಕ್ ವರ್ಷದ  ಕೊನೆಯ ತಿಂಗಳಾದ ದುಲ್ ಕದಹ್ ನ 29 ನೇ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಮೊಹರಂ ತಿಂಗಳು ಆಗಸ್ಟ್ 10 ರಿಂದ ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಆರಂಭವಾಗುತ್ತದೆ. ಆಗಸ್ಟ್ 9 ರಂದು ಹುಟ್ಟಿಮೆ ಬಂದಿದೆ. ಆದರೆ ಆಗಸ್ಟ್ 9 ರಂದು ಚಂದ್ರನನ್ನು ಅವರು ನೋಡಲು ಆಗದಿದ್ದಲ್ಲಿ, ಆಗಸ್ಟ್ 11 ರಿಂದ ಮೊಹರಂ ಆಚರಣೆ ಆರಂಭವಾಗುತ್ತದೆ.


ಇದನ್ನೂ ಓದಿ: ನೀವು ಕೊರೋನಾ ವ್ಯಾಕ್ಸಿನ್​ ಪಡೆದಿದ್ದೀರಾ? ಹಾಗಾದರೆ ವಾಟ್ಸಪ್​ ಮೂಲಕವೂ ಪಡೆಯಬಹುದು ಪ್ರಮಾಣ ಪತ್ರ


ಇಸ್ಲಾಮಿಕ್ ಪುರಾಣಗಳ ಪ್ರಕಾರ, ಇಸ್ಲಾಮಿಕ್ ಹೊಸ ವರ್ಷವು ಕ್ರಿಸ್ತ ಶಕ 622 ರಲ್ಲಿ ಪ್ರವಾದಿ ಮುಹಮ್ಮದ್ ಮತ್ತು ಅವರ ಅನುಯಾಯಿಗಳು ಮೆಕ್ಕಾದಿಂದ ಮದೀನಾಕ್ಕೆ ವಲಸೆ ಹೋದಾಗಿನಿಂದ ಆರಂಭವಾಗುತ್ತದೆ. ಮುಂಬರುವ ವರ್ಷವನ್ನು ಅಂದರೆ 2021ರ ವರ್ಷವನ್ನು  ಹಿಜ್ರಿ 1443 ಎಎಚ್ ಎಂದು ಪರಿಗಣಿಸಲಾಗುತ್ತದೆ (ಲ್ಯಾಟಿನ್ ಭಾಷೆಯಲ್ಲಿ ಎಎಚ್ ಎಂದರೆ Anno Hegirae ಅಥವಾ ಹಿಜ್ರಾ ವರ್ಷ). ಹುಜ್ರಿ 1443 AH ಎನ್ನುವುದು ಪ್ರವಾದಿ ಮೊಹಮ್ಮದ್  ಅವರು ವಲಸೆ ಬಂದು 1443 ವರ್ಷಗಳಾಗಿವೆ ಎಂಬುದನ್ನ ಸೂಚಿಸುತ್ತದೆ.


ಈ ದಿನ ಬಹಳ ಪ್ರಾಮುಖ್ಯತೆಯನ್ನು ಹೊಂದಿದ್ದರೂ ಸಹ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ  ಸೌದಿ ಅರೇಬಿಯಾ, ಯುಎಇಗಳಲ್ಲಿ  ಈ ಸಂಭ್ರವನ್ನು  ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುವುದಿಲ್ಲ. ಆದರೆ ಈ  ದಿನದ ನೆನಪಿಗಾಗಿ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವು ದೇಶಗಳು ಸಾರ್ವಜನಿಕ ರಜೆಯನ್ನು ಘೋಷಿಸಿವೆ.


ಈ ಪವಿತ್ರ ಮೊಹರಂನ ಮೊದಲ 10 ದಿನಗಳು ಮುಸ್ಲಿಂ ಸಮುದಾಯಕ್ಕೆ, ಅದರಲ್ಲೂ ವಿಶೇಷವಾಗಿ ಶಿಯಾ ಮುಸ್ಲಿಮರಿಗೆ ಬಹಳ ಮುಖ್ಯವಾಗಿದೆ. ಈ ಅವಧಿಯಲ್ಲಿ, ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ, ಕ್ರಿಸ್ತ ಶಕ 680 ರಲ್ಲಿ ಕರ್ಬಲ ಕದನದಲ್ಲಿ  ನಿಧನರಾದ ಹುಸೇನ್ ಇಬ್ನ್ ಅಲಿ ಅಲ್-ಹುಸೇನ್ ಅವರ ಸಾವಿಗೆ  ಜನರು ಶೋಕಾಚರಣೆ ಮಾಡುತ್ತಾರೆ.


ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು

Published by:Sandhya M
First published: