Brand Bengaluru: ಬೆಂಗಳೂರನ್ನು ಟ್ರೋಲ್ ಮಾಡುವವರಿಗೆ ತಪರಾಕಿ, ಕನ್ನಡಿಗರು ಹೇಳ್ತಿದ್ದಾರೆ ಬೆಂಗಳೂರು ಬಿಟ್ಟು ತೊಲಗಿ!

ಒಂದೇ ವಾರದಲ್ಲಿ ಎರಡು ಬಾರಿ ಅರ್ಧಕ್ಕರ್ಧ ಬೆಂಗಳೂರು ಮುಳುಗಿ ಹೋಗಿದೆ. ರಸ್ತೆಗಳೆಲ್ಲ ನದಿಗಳಂತಾಗಿದ್ದು, ಕಾರು, ಬಸ್ಸು, ಬೈಕ್, ಲಾರಿಗಳೆಲ್ಲ ಮುಳುಗಿ ಹೋಗಿವೆ. ಜನಸಾಮಾನ್ಯರಿಂದ ಹಿಡಿದು ಟೆಕ್ಕಿಗಳು, ಉದ್ಯಮಿಗಳೆಲ್ಲ ಟ್ರ್ಯಾಕ್ಟರ್ನಲ್ಲಿ ಹೋಗುವಂತಾಗಿದೆ. ಇದೇ ವಿಚಾರವನ್ನು ಈಗ ಬೆಂಗಳೂರಿನ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ (ಕೃಪೆ: Internet)

ಸಾಂದರ್ಭಿಕ ಚಿತ್ರ (ಕೃಪೆ: Internet)

  • Share this:
ನಮ್ಮ ಬೆಂಗಳೂರು (Namma Bengaluru) ಅಂದರೆ ಅದೆಷ್ಟೋ ಮಂದಿಗೆ ಕರ್ಮಭೂಮಿ. ಬೆಂದಕಾಳೂರಾಗಿದ್ದ (Bendakaluru) ಬೆಂಗಳೂರು, ಬೆಂದು ಬಂದ ಅದೆಷ್ಟೋ ಮಂದಿಗೆ ಬದುಕು (life) ಕಟ್ಟಿಕೊಟ್ಟಿದೆ. ಅಕ್ಷರಬಾರದ ನಿರಕ್ಷಕರಿಂದ (Uneducated) ಹಿಡಿದು, ಅತೀ ಹೆಚ್ಚು ಓದಿದ ವ್ಯಕ್ತಿಗಳವರೆಗೆ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ಬಾಚಿ ತಪ್ಪಿಕೊಳ್ಳುವ ಬೆಂಗಳೂರು ಅವರಿಗೊಂದು ಕೆಲಸ, ಆಶ್ರಯ, ತಿನ್ನೋದಕ್ಕೆ ಮೂರು ಹೊತ್ತಿನ ಊಟ ಕೊಡುತ್ತಿದೆ. ಇದೀಗ ಬೆಂಗಳೂರಿನ ಪರಿಸ್ಥಿತಿ ಚೆನ್ನಾಗಿಲ್ಲ. ಕಾರಣ ಭಾರೀ ಪ್ರಮಾಣದಲ್ಲಿ ಅಬ್ಬರಿಸಿದ ಮಳೆ (Rain). ಒಂದೇ ವಾರದಲ್ಲಿ ಎರಡು ಬಾರಿ  ಅರ್ಧಕ್ಕರ್ಧ ಬೆಂಗಳೂರು ಮುಳುಗಿ ಹೋಗಿದೆ. ರಸ್ತೆಗಳೆಲ್ಲ ನದಿಗಳಂತಾಗಿದ್ದು, ಕಾರು, ಬಸ್ಸು, ಬೈಕ್, ಲಾರಿಗಳೆಲ್ಲ ಮುಳುಗಿ ಹೋಗಿವೆ. ಜನಸಾಮಾನ್ಯರಿಂದ ಹಿಡಿದು ಟೆಕ್ಕಿಗಳು, ಉದ್ಯಮಿಗಳೆಲ್ಲ ಟ್ರ್ಯಾಕ್ಟರ್‌ನಲ್ಲಿ ಹೋಗುವಂತಾಗಿದೆ. ಇದೇ ವಿಚಾರವನ್ನು ಈಗ ಬೆಂಗಳೂರಿನ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು (International Level) ಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ (Social Media) ಬ್ರ್ಯಾಂಡ್ ಬೆಂಗಳೂರಿಗೆ (Brand Bengaluru) ಮಸಿ ಬಳಿಯುವ ಹುನ್ನಾರ ನಡೆಯುತ್ತಿದೆ ಎನ್ನಲಾಗಿದೆ.

ಅರ್ಧಕ್ಕರ್ಧ ಮುಳುಗಿದ ಬೆಂಗಳೂರು

ಕಳೆದ ವಾರ ಎರಡು ಬಾರಿ ಬೆಂಗಳೂರಿನಲ್ಲಿ ಭಾರೀ ಮಳೆ ಸುರಿದಿದೆ. ಇದರಿಂದ ನಗರದ ಪ್ರಮುಖ ಏರಿಯಾಗಳ ಹೆದ್ದಾರಿಗಳು, ಪ್ರಮುಖ ರಸ್ತೆಗಳು ಜಲಾವೃತಲಾಗಿತ್ತು. ರಸ್ತೆಗಳೆಲ್ಲ ನದಿಗಳಂತಾಗಿದ್ದು, ವಾಹನಗಳಲ್ಲಿ ಮುಳುಗಿದ್ದವು. ಮತ್ತೊಂದೆಡೆ ರಾಜಕಾಲುವೆ ನೀರೆಲ್ಲ ಅಕ್ಕಪಕ್ಕದ ಮನೆಗಳಿಗೆ ನುಗ್ಗಿ, ಜನರು ಪರದಾಡುವಂತಾಯ್ತು.

ಐಟಿ ಕಂಪನಿಗಳಿಗೆ ಭಾರೀ ಹೊಡೆತ

ಆಗಸ್ಟ್ 30 ರಂದು ಪ್ರಾರಂಭವಾದ ಮಳೆಯು ಆ ಪ್ರದೇಶದಲ್ಲಿ 10 ಲಕ್ಷ ಜನರಿಗೆ ಉದ್ಯೋಗ ನೀಡುವ 500-600 ಕಂಪನಿಗಳ ಮೇಲೆ ಪರಿಣಾಮ ಬೀರಿತು. ಒಂದೇ ದಿನಕ್ಕೆ ಬರೋಬ್ಬರಿ 250 ಕೋಟಿಗೂ ಅಧಿಕ ನಷ್ಟವಾಗಿದೆ ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ: Bengaluru Rain: ಭೀಕರ ಮಳೆಗೆ ಬೆಚ್ಚಿಬಿದ್ದಿದೆ ಬೆಂಗಳೂರು! ರಾಜಧಾನಿ ಅವಾಂತರಕ್ಕೆ ಕಾರಣ ಯಾರು?

ಸೋಶಿಯಲ್ ಮೀಡಿಯಾಗಳಲ್ಲಿ ಬಿಸಿ ಬಿಸಿ ಚರ್ಚೆ

ಯಾವಾಗ ಐಟಿ ಕಂಪನಿಗಳಿಗೆ ನಷ್ಟವಾಯಿತೋ ಆಗ ಅವುಗಳ ಬೆಂಗಳೂರನ್ನು ತೊರೆಯುವ ಬೆದರಿಕೆ ಹಾಕಿವೆ. ಮೂಲಭೂತ ಸೌಕರ್ಯಗಳು, ರಸ್ತೆ ವ್ಯವಸ್ಥೆ, ಮಳೆ ಹಾನಿ ನಿಯಂತ್ರಣ ಕ್ರಮಗಳು ಸೂಕ್ತವಾಗಿಲ್ಲ., ಹೀಗಾಗಿ ಬೆಂಗಳೂರು ಬಿಟ್ಟು ಪುಣೆ, ಹೈದ್ರಾಬಾದ್‌ನಂತ ನಗರಗಳಿಗೆ ಹೋಗುವುದಾಗಿ ಐಟಿ ಕಂಪನಿಗಳು ಎಚ್ಚರಿಕೆ ನೀಡಿದವು. ಇವು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತು.

ಸೋಶಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆದ ಬೆಂಗಳೂರು ಮಳೆ

ಬೆಂಗಳೂರು ಮುಳುಗುತ್ತಿದೆ, ಬೆಂಗಳೂರಿನ ರಸ್ತೆಗಳು ಕಳಪೆಯಾಗಿದೆ, ಬೆಂಗಳೂರಿನಲ್ಲಿ ಈಜಿಕೊಂಡು ಆಫೀಸ್‌ಗೆ ಹೋಗಬೇಕು, ದೋಣಿ ಇಟ್ಟುಕೊಂಡು ಜೀವನ ನಡೆಸಬೇಕು ಎಂಬಂತಹ ಮೀಮ್ಸ್‌ಗಳು, ಟ್ರೋಲ್‌ಗಳು ಸೋಶಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿವೆ.

ಟ್ರೋಲ್ಸ್ ವಿರುದ್ಧ ಹರಿಹಾಯ್ದ ಕನ್ನಡಿಗರು

ಸೋಶಿಯಲ್ ಮೀಡಿಯಾಗಳಲ್ಲಿ ಬೆಂಗಳೂರಿನ ಪರಿಸ್ಥಿತಿ ವಿರುದ್ಧ ಬರುತ್ತಿರುವ ಜೋಕ್‌ಗಳು, ಟ್ರೋಲ್ಸ್‌ ಗಳು, ಮೀಮ್ಸ್‌ಗಳ ವಿರುದ್ಧ ಕನ್ನಡಿಗರು ಕಿಡಿಕಾರಿದ್ದಾರೆ. ಈ ಹಿಂದೆ ಮುಂಬೈ, ಚೆನ್ನೈ, ಹೈದ್ರಾಬಾದ್ ಸೇರಿದಂತೆ ಬೇರೆ ಬೇರೆ ನಗರಗಳಲ್ಲೂ ಪ್ರವಾಹ ಪರಿಸ್ಥಿತಿ ಬಂದಿತ್ತು. ಆಗೆಲ್ಲ ಕನ್ನಡಿಗರು ಸೇರಿದಂತೆ ಎಲ್ಲರೂ savemumbai, savechennai, savehyderabad ಅಂತ ಸೋಶಿಯಲ್ ಮೀಡಿಯಾಗಳಲ್ಲಿ ಅಭಿಯಾನ ಮಾಡಿ, ಆಯಾ ನಗರಗಳ ಉಳಿವಿಗಾಗಿ ಪ್ರಾರ್ಥನೆ ಮಾಡಿದ್ದರು. ಆದರೆ ಈಗ Savebengaluru ಅಂತ ಯಾವೊಬ್ಬ ಪರಿಭಾಷಿಕರೂ ಪ್ರಾರ್ಥಿಸುತ್ತಿಲ್ಲ ಅಂತ ಸೋಶಿಯಲ್ ಮೀಡಿಯಾಗಳಲ್ಲೇ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಹೇಟರ್ಸ್ ಬೆಂಗಳೂರು ಬಿಟ್ಟು ತೊಲಗಿ

ಬೆಂಗಳೂರು ಹೇಟರ್ಸ್ ನಗರ ಬಿಟ್ಟು ತೊಲಗಿ’ ಹಾಗೂ ಬೆಂಗಳೂರು ನಮ್ಮದು ಎಂದು ಟ್ವಿಟ್ಟರ್ ಮೂಲಕ ಅಭಿಯಾನ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ. ನೀವು ಬೆಂಗಳೂರಿಗೆ ಬಂದಿರುವುದು ಬ್ರೆಡ್ ಮತ್ತು ಬಟರ್ ತಿನ್ನಲು, ನಿಮ್ಮ ಕೆಲಸ ಮುಗಿಸಿಕೊಂಡು ಬೆಂಗಳೂರು ಬಿಟ್ಟಿ ತೊಲಗಿ. ನೀವು ತೆರಿಗೆ ಕಟ್ಟಿದರೂ ಬೆಂಗಳೂರಿನಲ್ಲಿ ಇರಬೇಡಿ ಎಂದು ಕಿಡಿಕಾರಿದ್ದಾರೆ.

ಬ್ರ್ಯಾಂಡ್ ಬೆಂಗಳೂರಿಗೆ ಮಸಿ ಬಳಿಯೋ ಹುನ್ನಾರ

ಕರ್ನಾಟಕದ ರಾಜಧಾನಿ ಬೆಂಗಳೂರು ಬರೀ ಭಾರತದಲ್ಲೊಂದೇ ಅಲ್ಲ ವಿಶ್ವಮಟ್ಟದಲ್ಲಿ ಹೆಸರು ಪಡೆದ ನಗರಿ. ಸಿಲಿಕಾನ್ ಸಿಟಿ, ಸಿಲಿಕಾನ್ ವ್ಯಾಲಿ, ಐಟಿ ಸಿಟಿ, ಐಟಿ ಬಿಟಿ ಸಿಟಿ, ಐಟಿ ಹಬ್, ನಿವೃತ್ತರ ಸ್ವರ್ಗ, ಉದ್ಯಾನ ನಗರಿ, ಗಾರ್ಡನ್ ಸಿಟಿ, ಗ್ರೀನ್ ಸಿಟಿ ಸೇರಿದಂತೆ ಹಲವು ಅಭಿದಾನಕ್ಕೆ ನಮ್ಮ ಬೆಂಗಳೂರು ಪಾತ್ರವಾಗಿದೆ. ಇದಕ್ಕೆ ಮಸಿ ಬಳಿದು, ಐಟಿ ಬಿಟಿ ಸೇರಿದಂತೆ ಇತರೇ ಉದ್ಯಮಗಳನ್ನು ಬೇರೆ ರಾಜ್ಯಕ್ಕೆ ಕೊಂಡೊಯ್ಯುವ ಹುನ್ನಾರ ಇದೆಂದು ಕನ್ನಡಿಗರು ಆರೋಪಿಸಿದ್ದಾರೆ.

ಇದನ್ನೂ ಓದಿ: Bengaluru Lakes: ಕಾಣದಂತೆ ಮಾಯವಾಯ್ತಣ್ಣ ಬೆಂಗಳೂರು ಕೆರೆಗಳು! ಜೀವಸೆಲೆಯ ನೆಲೆ ಮೇಲೆ ತಲೆ ಎತ್ತಿದ ಲೇಔಟ್‌ಗಳು!

 ಬೆಂಗಳೂರಿನ ಜೊತೆ ನಿಂತವರೂ ಇದ್ದಾರೆ

ಇನ್ನು ಈ ಅಭಿಯಾನಕ್ಕೆ ಕೆಲ ಪರ ರಾಜ್ಯದ ಜನರು ಕೂಡ ಸಾಥ್ ನೀಡುತ್ತಿದ್ದಾರೆ. ನಾನು ಚೆನ್ನೈ ಮೂಲದ ವ್ಯಕ್ತಿ, ಬೆಂಗಳೂರು ಬಿಡಿ ಅಭಿಯಾನಕ್ಕೆ ನಾನು ಬೆಂಬಲಿಸುತ್ತೇನೆ. ಆದರೆ #ಬೆಂಗಳೂರು ನನಗೆ ಬ್ರೆಡ್ ಮತ್ತು ಬಟರ್ ನೀಡಿದೆ. ಇದು ನನ್ನ ಎರಡನೇ ಮನೆ. ಇಂದು ನಾನು ಹಿಂತಿರುಗಿಸುವ ಸಮಯ ಬಂದಿದೆ. ನಾನು ಎಂದಿಗೂ ಬೆಂಗಳೂರಿನಿಂದ ಓಡಿಹೋಗುವುದಿಲ್ಲ ಮತ್ತು ನಾನು ಅದರೊಂದಿಗೆ ನಿಲ್ಲುತ್ತೇನೆ. ಬೆಂಗಳೂರು ನನ್ನ ಊರು ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.
Published by:Annappa Achari
First published: