• Home
  • »
  • News
  • »
  • explained
  • »
  • Mangaluru Auto Blast: ಮಂಗಳೂರಿನಲ್ಲಿ ಆಟೋ ಸ್ಫೋಟಿಸಿದ್ದು ಉಗ್ರರಾ? ನಿಜಕ್ಕೂ ಅವರ ಟಾರ್ಗೆಟ್ ಯಾರಾಗಿದ್ದರು?

Mangaluru Auto Blast: ಮಂಗಳೂರಿನಲ್ಲಿ ಆಟೋ ಸ್ಫೋಟಿಸಿದ್ದು ಉಗ್ರರಾ? ನಿಜಕ್ಕೂ ಅವರ ಟಾರ್ಗೆಟ್ ಯಾರಾಗಿದ್ದರು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಸಲಿಗೆ ಮಂಗಳೂರಿನಲ್ಲಿ ಭಾರೀ ಸ್ಫೋಟಕ್ಕೆ ಉಗ್ರರು ಸಂಚು ರೂಪಿಸಿದ್ದರಾ? ರಾಜ್ಯದ ಪ್ರಮುಖ ನಾಯಕರೊಬ್ಬರನ್ನು ಟಾರ್ಗೆಟ್ ಮಾಡಿದ್ದರಾ? ಇದರಲ್ಲಿ ಶಾಮೀಲಾಗಿರೋದು ಯಾರ್ಯಾರು?

  • News18 Kannada
  • Last Updated :
  • Mangalore, India
  • Share this:

ಮಂಗಳೂರು: ಬರೀ ಕರ್ನಾಟಕವೊಂದೇ (Karnataka) ಅಲ್ಲ, ಇಡೀ ದೇಶವೇ ಮತ್ತೊಮ್ಮೆ ಬೆಚ್ಚಿ (shocked) ಬಿದ್ದಿದೆ. ಅದಕ್ಕೆ ಕಾರಣ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಂಗಳೂರು ನಗರದ (Mangaluru City) ನಾಗುರಿ (Naguri) ಎಂಬಲ್ಲಿ ನಿನ್ನೆ ನಡೆದಿದ್ದ ಆ ಒಂದು ಘಟನೆ. ನಿನ್ನೆ ಸಂಜೆ 4.30ರ ಸುಮಾರಿಗೆ ಆಟೋ ರಿಕ್ಷಾವೊಂದು ಸ್ಫೋಟಗೊಂಡಿದೆ (auto rickshaw blast). ಅಲ್ಲಿದ್ದ ಕುಕ್ಕರ್‌ನಲ್ಲಿ ಸ್ಫೋಟಗೊಂಡಿದ್ದು (cooker blast), ಭಾರೀ ಸದ್ದು ಕೇಳಿಸಿದೆ. ನಾಗುರಿಯಿಂದ ಪಂಪ್ ವೆಲ್ (Pump Well) ಕಡೆಗೆ ಆಟೋರಿಕ್ಷಾವೊಂದು ಸಂಚರಿಸುತ್ತಿತ್ತು. ನಾಗುರಿಯಲ್ಲಿ ಪ್ರಯಾಣಿಕನೊಬ್ಬ (passenger) ಆಟೋ ರಿಕ್ಷಾ ಹತ್ತಿದ್ದ. ಆತನ ಕೈಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಇದ್ದು, ಅದರಲ್ಲಿ ಕುಕ್ಕರ್ ಒಂದು ಇತ್ತು. ಆದರೆ ದಾರಿ ಮಧ್ಯೆ ದಿಢೀರ್ ನಿಗೂಢವಾಗಿ ಬೆಂಕಿ ಕಾಣಿಸಿಕೊಂಡು, ಇದ್ದಕ್ಕಿದ್ದಂತೆ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಘಟನೆಯಲ್ಲಿ ಬ್ಯಾಗ್ ಹಿಡಿದುಕೊಂಡಿದ್ದ ವ್ಯಕ್ತಿ ಹಾಗೂ ಆಟೋ ಚಾಲಕನಿಗೆ ಬೆಂಕಿ ತಗುಲಿದ್ದು, ಆಟೋ ಒಳಭಾಗ ಕೂಡ ಸುಟ್ಟು ಕರಕಲಾಗಿತ್ತು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಮೊದಲು ಆಕಸ್ಮಿಕ ಘಟನೆ ಅಂತ ಪೊಲೀಸರೇ ಹೇಳಿದ್ದರು. ಆದರೆ ತನಿಖೆ ವೇಳೆ ಇದೊಂದು ಉಗ್ರರ ಕೃತ್ಯ ಎನ್ನುವುದು ದಟ್ಟವಾಗುತ್ತಿದೆ. ಅಸಲಿಗೆ ಭಾರೀ ಸ್ಫೋಟಕ್ಕೆ ಉಗ್ರರು ಸಂಚು ರೂಪಿಸಿದ್ದರಾ? ರಾಜ್ಯದ ಪ್ರಮುಖ ನಾಯಕರೊಬ್ಬರನ್ನು ಟಾರ್ಗೆಟ್ ಮಾಡಿದ್ದರಾ? ಇದರಲ್ಲಿ ಶಾಮೀಲಾಗಿರೋದು ಯಾರ್ಯಾರು? ಇತ್ಯಾದಿ ಆಯಾಮಗಳಲ್ಲಿ ಇದೀಗ ತನಿಖೆ ನಡೆಯುತ್ತಿದೆ.


ನಿನ್ನೆ ಸಂಜೆ ವೇಳೆಗೆ ಆಟೋದಲ್ಲಿ ಸ್ಫೋಟ


ಮಂಗಳೂರು ಕಂಕನಾಡಿ ರೈಲು ನಿಲ್ದಾಣದ ಕಡೆಯಿಂದ ಸಂಜೆ 4.30ರ ಸುಮಾರಿಗೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ನಾಗುರಿಯಲ್ಲಿ ಓರ್ವ ಹತ್ತಿದ್ದು ಆತ ಪಂಪ್‌ವೆಲ್‌ ಕಡೆಗೆ ಹೋಗುವಂತೆ ಚಾಲಕನಿಗೆ ಸೂಚಿಸಿದ್ದ. ಅದರಂತೆ ರಿಕ್ಷಾ ಸಂಚರಿಸುತ್ತಿದ್ದಾಗ ಏಕಾಏಕಿ ಸ್ಫೋಟಗೊಂಡಿದೆ. ರಿಕ್ಷಾದಲ್ಲಿ ಸ್ಫೋಟಗೊಂಡ ಸ್ಥಿತಿಯಲ್ಲಿ ಕುಕ್ಕರ್‌ ಪತ್ತೆಯಾಗಿದೆ. ಆಟೋರಿಕ್ಷಾದ ಒಳಗಿನ ಕೆಲವು ಭಾಗ ಗಳು ಸುಟ್ಟು ಹೋಗಿವೆ. KA 19 AA 8471 ಸಂಖ್ಯೆಯ ದುರ್ಗಾಪರಮೇಶ್ವರಿ ಹೆಸರಿನ ಆಟೋ ರಿಕ್ಷಾದಲ್ಲಿ ಸ್ಪೋಟ ಸಂಭವಿಸಿತ್ತು.




ಆಟೋದಲ್ಲಿದ್ದ ಇಬ್ಬರಿಗೂ ಗಾಯ


ಆಟೋದಲ್ಲಿ ಆಟೋ ಚಾಲಕ ಹಾಗೂ ಮಧ್ಯದಲ್ಲಿ ಹತ್ತಿಕೊಂಡ ಪ್ರಯಾಣಿಕ ಇಬ್ಬರೂ ಇದ್ದರು. ಸ್ಫೋಟದ ವೇಳೆ ಇಬ್ಬರಿಗೂ ಗಾಯವಾಗಿದೆ. ಸದ್ಯ ಅವರಿಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಸ್ಫೋಟಗೊಂಡ ಆಟೋ


ಸ್ಫೋಟಗೊಂಡ ಆಟೋದಲ್ಲಿ ಏನಿತ್ತು?


ಸ್ಫೋಟಗೊಂಡ ಆಟೋದಲ್ಲಿ ನಟ್ ಬೋಲ್ಟ್​​ಗಳು ಮತ್ತು ಬ್ಯಾಟರಿ ಪತ್ತೆ ಆಗಿದೆ. ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಸಹ ಕಂಡು ಬಂದಿವೆ. ಲಘು ತೀವ್ರತೆ ಇರುವ ಸ್ಫೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇದೊಂದು ಟೈಮ್ ಬಾಂಬ್ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಟೈಮರ್ ಸೆಟ್ ಮಾಡಿ ಬಾಂಬ್ ಸ್ಫೋಟ ಮಾಡಲು ಸಂಚು ರೂಪಿಸಲಾಗಿತ್ತು. ಆದರೆ ಯಾವುದೋ ದೋಷದಿಂದ ಮಾರ್ಗಮಧ್ಯೆಯೇ ಬಾಂಬ್ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ.


ಘಟನಾ ಸ್ಥಳದಲ್ಲಿ ಸಿಕ್ಕ ವಸ್ತು


ಇದನ್ನೂ ಓದಿ: Mysuru Gumbaz Bus Stand: ಮೈಸೂರಿನಲ್ಲಿ 'ಗುಂಬಜ್' ಬಸ್ ನಿಲ್ದಾಣ ಜಟಾಪಟಿ! ಬಿಜೆಪಿ vs ಬಿಜೆಪಿ ಎನ್ನುವ ಪರಿಸ್ಥಿತಿ!


ಇದು ಉಗ್ರ ಕೃತ್ಯ ಎಂದ ಪೊಲೀಸರು


ಮೇಲ್ನೋಟಕ್ಕೆ ಇದು ಆಕಸ್ಮಿಕವಾಗಿ ಸಂಭವಿಸಿದ ಸ್ಫೋಟ ಎನ್ನುವಂತೆ ಕಂಡುಬಂದಿತ್ತು. ಬಳಿಕ ಇದೊಂದು ವ್ಯವಸ್ಥಿತ ಕೃತ್ಯ ಎನ್ನುವುದು ತಿಳಿದು ಬಂದಿದೆ. ಇದೊಂದು ಉಗ್ರ ಕೃತ್ಯ ಅಂತ ಪೊಲೀಸರೇ ಹೇಳಿದ್ದಾರೆ. ಈ ವಿಚಾರದ ಕುರಿತಾಗಿ ಟ್ವೀಟ್ ಮಾಡಿದ್ದ ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಡಿಜಿ & ಐಜಿಪಿ ಪ್ರವೀಣ್ ಸೂದ್, ಮಂಗಳೂರಿನಲ್ಲಿ ಶನಿವಾರ ಸಂಭವಿಸಿದ ಆಟೋ ಸ್ಫೋಟ ಆಕಸ್ಮಿಕ ಅಪಘಾತ ಘಟನೆ ಅಲ್ಲ, ಅದೊಂದು ಉಗ್ರ ಕೃತ್ಯ ಅನ್ನೋದು ಇದೀಗ ಖಚಿತವಾಗಿದೆ ಎಂದು ಮಾಹಿತಿ ನೀಡಿದ್ದರು.


ನಕಲಿ ಗುರುತಿನ ಚೀಟಿ ಕೊಟ್ಟ ಶಂಕಿತ


ಇದೀಗ ದಾರಿ ಮಧ್ಯೆ ಆಟೋದಲ್ಲಿ ಹತ್ತಿಕೊಂಡಿದ್ದ ಪ್ರಯಾಣಿಕನ ಮೇಲೆ ಭಾರೀ ಶಂಕೆ ವ್ಯಕ್ತಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದು, ಅವರ ದೇಹ ಶೇ.50 ರಷ್ಟು ದೇಹ ಸುಟ್ಟು ಹೋಗಿದೆ. ಆಧಾರ್ ಕಾರ್ಡ್‌ನಲ್ಲಿ ಹುಬ್ಬಳ್ಳಿಯ ಪ್ರೇಮ್ ರಾಜ್ ಹೆಸರಿನ ವಿಳಾಸವಿರುವುದು ಪತ್ತೆಯಾಗಿದೆ. ಆದರೆ ಇದು ನಕಲಿ ಐಡಿ ಕಾರ್ಡ್ ಎಂಬುದು ದೃಢಪಟ್ಟಿದೆ.


ಶಂಕಿತ ನೀಡಿದ್ದ ಫೋನ್ ನಂಬರ್ ಕೂಡ ಫೇಕ್!
ಇನ್ನು ಆತನ ಹೇಳಿಕೆ ಆಧರಿಸಿ ಪೊಲೀಸರ ತಂಡ ಮೈಸೂರಿನಲ್ಲಿ ತನಿಖೆ ನಡೆಸುತ್ತಿದೆ. ತನ್ನ ಹೆಸರು ಪ್ರೇಮ್ ರಾಜ್ ಎಂದು ತನ್ನ ಅಣ್ಣ ಎಂದು ತಿಳಿಸಿ ಬಾಬುರಾವ್ ಎಂಬವರ ನಂಬರ್ ನೀಡಿದ್ದಾನೆ. ಆದರೆ ಆ ನಂಬರ್‌ಗೆ ಕರೆ ಮಾಡಿದಾಗ ಪ್ರೇಮ್ ರಾಜ್ ತನ್ನ ಸಂಬಂಧಿಯೇ ಅಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ. ಆತ ತನ್ನ ರೂಂನಲ್ಲಿದ್ದ. ಬೆಂಗಳೂರಿಗೆ ಹೋಗುತ್ತೇನೆ ಎಂದು ತಿಳಿಸಿದ್ದ. ಆತನ ಬಗ್ಗೆ ಬೇರೆ ಏನೂ ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.


ಹಾಗಾದರೆ ಈ ಪ್ರೇಮ್‌ ರಾಜ್ ಯಾರು?


ಸಂಬಂಧಿಸಿದಂತೆ ಗಾಯಗೊಂಡಿರುವ ಪ್ರಯಾಣಿಕನ ಬಳಿ ಪತ್ತೆಯಾದ ಆಧಾರ್ ಕಾರ್ಡ್​ ನಕಲಿ ಎಂದು ಗೊತ್ತಾಗಿದೆ. ಆಧಾರ್ ಕಾರ್ಡ್​ ನಲ್ಲಿರುವ ಹೆಸರು, ವಿಳಾಸ ಮತ್ತು ಆಧಾರ್ ಸಂಖ್ಯೆ ಎಲ್ಲವೂ ಸತ್ಯ. ಆದರೆ ಫೋಟೋ ಮಾತ್ರ ನಕಲಿ ಎಂಬುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಆಧಾರ್ ಕಾರ್ಡ್​​ನಲ್ಲಿರುವ ಅಸಲಿ ಪ್ರೇಮ್​ರಾಜ್​ ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದು, ತುಮಕೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿ ಮೂಲದ ಪ್ರೇಮ್​ರಾಜ್​ ಪೋಷಕರು ಕಳೆದ 25 ವರ್ಷಗಳಿಂದ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ.


ಪ್ರೇಮ್‌ ರಾಜ್‌ ಹೇಳಿದ್ದೇನು?


ಪ್ರೇಮ್‌ ರಾಜ್ ತುಮಕೂರಿನಲ್ಲಿ ರೈಲ್ವೇ ಟ್ರ್ಯಾಕ್ ಮೈನ್ ಟೈನರ್ ಆಗಿ ಕೆಲಸಮಾಡಿಕೊಂಡಿದ್ದು, ಸದ್ಯ ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕಳೆದ 2 ವರ್ಷಗಳಲ್ಲಿ 2 ಬಾರಿ ಆಧಾರ್ ಕಳೆದುಕೊಂಡಿದ್ದರು. ಮೊದಲ ಸಲ ಧಾರವಾಡದಿಂದ ಬೆಳಗಾವಿಗೆ ಬಸ್‌ನಲ್ಲಿ ಹೋಗುತ್ತಿದ್ದ ವೇಳೆ ಕಾರ್ಡ್ ಕಳೆದುಕೊಂಡಿದ್ದು, ಬಳಿಕ ಮತ್ತೊಂದು ಆಧಾರ್ ಕಾರ್ಡ್ ಪಡೆದಿದ್ದರು. ಅದನ್ನು ಕಳೆದ 6 ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್‌ನಲ್ಲಿ ಬರುತ್ತಿದ್ದ ವೇಳೆ ಕಳೆದುಕೊಂಡಿದ್ದಾಗಿ ತಿಳಿಸಿದ್ದಾರೆ.


ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದ ಶಂಕಿತ


ಮೈಸೂರು ಲೋಕನಾಯಕ ನಗರದ 10ನೇ ಕ್ರಾಸ್‌ನಲ್ಲಿ ಶಂಕಿತ ವ್ಯಕ್ತಿಯು ಮೋಹನ್ ಕುಮಾರ್ ಎಂಬುವರ ಕಟ್ಟಡದಲ್ಲಿ ಒಂದು ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದ. ಬಾಡಿಗೆ ಪಡೆಯಲು ಮಾಡಿಕೊಂಡಿದ್ದ ಕರಾರು ಪತ್ರದಲ್ಲಿ ತನ್ನ ಹೆಸರನ್ನು ಪ್ರೇಮ್ ರಾಜ್ ಎಂದು ನಮೂದಿಸಿದ್ದ. ತನ್ನ ಮೂಲ ಊರು ಮತ್ತು ವಿಳಾಸವಾಗಿ ಹುಬ್ಬಳ್ಳಿಯ ಪ್ರದೇಶವೊಂದನ್ನು ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಶಂಕಿತನ ಕೊಠಡಿಯಲ್ಲಿ ಸ್ಫೋಟಕ ಪತ್ತೆ?


ಆತನ ಕೊಠಡಿ ಪ್ರವೇಶಿಸಿದ ಪೊಲೀಸರಿಗೆ ಸ್ಫೋಟಕ್ಕೆ ಬಳಸುವ ಹಲವು ವಸ್ತುಗಳು ಸಿಕ್ಕಿವೆ ಎಂದು ಮೂಲಗಳು ಹೇಳಿವೆ. ಸರ್ಕೀಟ್ ಬೋರ್ಡ್, ಸ್ಮಾಲ್ ಬೋಲ್ಟ್, ಬ್ಯಾಟರಿ, ಮೊಬೈಲ್, ಮರದಹೊಟ್ಟು, ಅಲ್ಯುಮಿನಿಯಂ, ಮಲ್ಟಿಮೀಟರ್, ವೈರ್​ಗಳು, ಮಿಕ್ಸರ್ ಜಾರ್​ಗಳು, ಪ್ರೆಶರ್ ಕುಕ್ಕರ್ ಸೇರಿದಂತೆ ಹಲವು ಸ್ಪೋಟಕಗಳು ಪತ್ತೆಯಾಗಿವೆ. ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಫಿನೋ ಡೆಬಿಟ್ ಕಾರ್ಡ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Explained: ಅಜಾನ್​ಗೆ ನೃತ್ಯ ಮಾಡಿದವರಲ್ಲಿ ಹಿಂದೂ ಮಕ್ಕಳು, ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಮತ್ತೊಂದು ವಿವಾದ


ಎನ್ಎಐ ಹೆಗಲಿಗೆ ತನಿಖೆ ಹೊಣೆ


ಇದೊಂದು ಉಗ್ರ ಕೃತ್ಯ ಎನ್ನುವುದು ಸಾಬೀತಾಗಿರುವುದರಿಂದ ಘಟನೆಯ ತನಿಖೆ ಹೊಣೆಯನ್ನು ಎನ್ಐಎಗೆ ನೀಡಲಾಗಿದೆ. ಈಗಾಗಲೇ ಎನ್ಐಎ ಟೀಂ ಮೈಸೂರಿಗೆ ಆಗಮಿಸಿದೆ.  ಶಂಕಿತ ವ್ಯಕ್ತಿಯ ಮನೆಗೆ NIA ತಂಡ ಭೇಟಿಕೊಟ್ಟಿದೆ.

Published by:Annappa Achari
First published: