ಮಾಜಿ ಸಂಸದ ಅತೀಕ್ ಅಹ್ಮದ್ (Atiq Ahmed) ಮತ್ತು ಅವರ ಸಹೋದರ ಅಶ್ರಫ್ (Ashraf) ಅವರನ್ನು ಶನಿವಾರ ಮೂವರು ದುಷ್ಕರ್ಮಿಗಳು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಆಸ್ಪತ್ರೆಗೆ ಸಾಗಿಸುವ ವೇಳೆ ಗುಂಡು ಹಾರಿಸಿ ಹತ್ಯೆ (Murder) ಮಾಡಿದ್ದಾರೆ. ಅವರ ಹತ್ಯೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಾಜಕಾರಣಿಗಳು ಮತ್ತು ರಾಜ್ಯದ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನಾಯಕರ ಕಾಮೆಂಟ್‌ಗಳು ಇದು ಸಂಭವಿಸಬಹುದಾಗಿತ್ತು ಎಂಬ ಅಂಶವನ್ನು ಸೂಚಿಸುತ್ತದೆ ಎಂದು ಮಾಧ್ಯಮಗಳ (Media) ಮೂಲಕ ತಿಳಿದುಬಂದಿದೆ.
ಏಪ್ರಿಲ್ 13 ರಂದು ಝಾನ್ಸಿಯಲ್ಲಿ ಉತ್ತರ ಪ್ರದೇಶದ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅಹ್ಮದ್ ಅವರ ಮಗ ಅಸ್ಸಾದ್ ಮತ್ತು ಸಹಾಯಕ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಈ ಕೃತ್ಯ ನಡೆದಿದೆ. ಅಹ್ಮದ್ ಅವರ ಪಕ್ಷವು "ಸಾವಿನ ಬೆದರಿಕೆ" ಯಿಂದ ರಕ್ಷಣೆಗಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಎನ್ಕೌಂಟರ್ ಕುರಿತು ಪ್ರಸ್ತಾಪಗಳು
ಸಮಾಜವಾದಿ ಪಕ್ಷದ ಮಾಜಿ ಲೋಕಸಭಾ ಸದಸ್ಯರಾಗಿ ಅತೀಕ್ ಅಹ್ಮದ್ ಸುಮಾರು 100 ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದರು. 2005 ರಲ್ಲಿ ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರ ಹತ್ಯೆಗೆ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಅವರನ್ನು ಫೆಬ್ರವರಿ 24 ರಂದು ಪ್ರಯಾಗ್‌ರಾಜ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು.
ಇದನ್ನೂ ಓದಿ: 4 ವರ್ಷ ಜತೆಗಿದ್ದ ಗೆಳತಿಯನ್ನು ಕೊಂದೇ ಬಿಟ್ಟ ಕಿರಾತಕ! ಅಷ್ಟಕ್ಕೂ ಲಿವಿಂಗ್ ರಿಲೇಶನ್‌ನಲ್ಲಿ ಆಗಿದ್ದೇನು?
ಕೆಲವು ದಿನಗಳ ನಂತರ, ಉತ್ತರ ಪ್ರದೇಶ ಪೊಲೀಸರು ಅಹ್ಮದ್ ಮತ್ತು ಅವರ ಪತ್ನಿ ಸಹಿಸ್ತಾ ಪರ್ವೀನ್, ಅವರ ಇಬ್ಬರು ಪುತ್ರರಾದ ಅಶ್ರಫ್ ಮತ್ತು ಇತರರ ಮೇಲೆ ಉಮೇಶ್ ಪಾಲ್ ಸಾವಿಗೆ ಅಹ್ಮದ್ ಕಾರಣ ಎಂದು ಪ್ರಾಕರಣ ದಾಖಲು ಮಾಡಿತ್ತು.ಫೆಬ್ರವರಿ 25 ರಂದು, ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ಮಾತನಾಡುವಾಗ ಅಹ್ಮದ್ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.
"ಇಸ್ ಹೌಸ್ ಮೇ ಕೆಹ್ ರಹಾ ಹೂಂ, ಇಸ್ ಮಾಫಿಯಾ ಕೋ ಮಿಟ್ಟಿ ಮೇ ಮಿಲಾ ದೇಂಗೆ." ಇದನ್ನು ಸದನದಲ್ಲಿ ಹೇಳುತ್ತಿದ್ದೇನೆ, ಈ ಮಾಫಿಯಾವನ್ನು ನಾಶ ಮಾಡುತ್ತೇವೆ ಎಂದು ಸದನದಲ್ಲಿ ಗುಡುಗಿದ್ದರು.
ಬಿಜೆಪಿಯ ಮಾಜಿ ಶಾಸಕ ಹರಿನಾರಾಯಣ ರಾಜ್‌ಭರ್ ಅವರು ಮಾರ್ಚ್ 9 ರಂದು ಅಹ್ಮದ್ ಅವರನ್ನು "ಎನ್‌ಕೌಂಟರ್" ನಲ್ಲಿ ಕೊಲ್ಲಬೇಕಾಗಿತ್ತು, ಇದು ಪೊಲೀಸರಿಂದ ಕಾನೂನುಬಾಹಿರ ಹತ್ಯೆಗಳಿಗೆ ಸೌಮ್ಯೋಕ್ತಿಯಾಗಿದೆ. ಜೈಲಿನಿಂದ ಹೊರಬಂದ ನಂತರ ಅತೀಕ್ ಅಹ್ಮದ್ ಅವರನ್ನು ಎನ್ಕೌಂಟರ್ ಮಾಡಬೇಕು ಎಂದಿ ಭವಿಷ್ಯವಾಣಿ ನುಡಿದ್ದಿರು.
ಅಂತೆಯೇ, ರಾಜ್ಯ ಸಚಿವ ಜೆಪಿಎಸ್ ರಾಥೋಡ್ ಮಾರ್ಚ್‌ನಲ್ಲಿ ಅಹ್ಮದ್ ಅನ್ನು ಸಾಗಿಸುವ ವಾಹನವು "ಪಲ್ಟಿಯಾಗಬಹುದು" ಎಂದು ಹೇಳಿದರು. ಇದು ಜುಲೈ 2020 ರಲ್ಲಿ ಉತ್ತರ ಪ್ರದೇಶ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟ ದರೋಡೆಕೋರ ವಿಕಾಸ್ ದುಬೆಯ ಸಾವನ್ನು ಉಲ್ಲೇಖಿಸುತ್ತದೆ. ದುಬೆ ಅವರನ್ನು ಸಾಗಿಸುವ ವಾಹನವು "ಪಲ್ಟಿಯಾಗಿತ್ತು " ನಂತರ ಪಲಾಯನ ಮಾಡಲು ಪ್ರಯತ್ನಿಸಿದ ದುಬೆಯನ್ನು ಅಧಿಕಾರಿಗಳು ಎನ್‌ಕೌಂಟರ್ ಮಾಡಿದರು ಎಂದು ವರದಿಗಳ ಮೂಲಕ ತಿಳಿದುಬಂದಿದೆ.
ಈ ರೀತಿ ಹಲವು ರಾಜಕಾರಣಿಗಳು ಅತೀಕ್ ಅಹ್ಮದ್ ಸಾವು ಕುರಿತು ಭವಿಷ್ಯ ನುಡಿದಿದ್ದರು, ಆದರೆ ಅವರ ಭವಿಷ್ಯ ಇದೀಗ ನಿಜ ಆಗಿದೆ ಹಾಗೂ ಅವರ ಮಾತುಗಳು ಕೇಲವು ಊಹಾಪೋಹಗಳಿಗೆ ಕಾರಣವಾಗುತ್ತಿದೆ.
ರಕ್ಷಣೆ ಕೋರಿಕೊಂಡಿದ್ದರು
ಮುಖ್ಯಮಂತ್ರಿಗಳು ಸಂಸತ್ತಿನಲ್ಲಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಉಮೇಶ್ ಪಾಲ್ ಪ್ರಕರಣದ ಆರೋಪಿಗಳು ಪೊಲೀಸ್ ಎನ್‌ಕೌಂಟರ್‌ಗಳ ಸರಣಿಯಲ್ಲಿ ಕೊಲ್ಲಲ್ಪಟ್ಟರು.
ಫೆಬ್ರವರಿ 27 ರಂದು ಉಮೇಶ್ ಪಾಲ್ ಹತ್ಯೆಯಲ್ಲಿ ಹಂತಕರಿಗಾಗಿ ಕಾರು ಚಲಾಯಿಸಿದ್ದ ಅರ್ಬಾಜ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ಇನ್ನೋರ್ವ ಆರೋಪಿ ವಿಜಯ್ ಚೌಧರಿ ಮಾರ್ಚ್ 7 ರಂದು ಉತ್ತರ ಪ್ರದೇಶ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟ.
ಗುಜರಾತ್‌ನ ಜೈಲಿನಿಂದ ಉತ್ತರ ಪ್ರದೇಶಕ್ಕೆ ವರ್ಗಾವಣೆಯ ಮಾಡಿದರೆ ಉತ್ತರ ಪ್ರದೇಶ ಪೊಲೀಸರು ಸಾಯಿಸಿಬಿಡುತ್ತಾರೆ ಎಂದು, ಅಹ್ಮದ್‌ಗೆ ರಕ್ಷಣೆ ನೀಡಬೇಕು ಅಥವಾ ಆದೇಶ ಜಾರಿಯಾದಾಗ ಕನಿಷ್ಠ ಅವರ ಕಳವಳವನ್ನು ಲಿಖಿತವಾಗಿ ದಾಖಲಿಸಬೇಕು ಎಂದು ಅವರ ವಕೀಲರು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದರು.
"ಈ ನ್ಯಾಯಾಲಯವು ಅಹ್ಮದ್ ರಕ್ಷಣೆಯನ್ನು ನಿರಾಕರಿಸಿದರೆ, ಅದು ಅವರಿಗೆ ಮರಣದಂಡನೆಯನ್ನು ಸೂಚಿಸುತ್ತದೆ" ಎಂದು ಅವರ ವಕೀಲರು ನ್ಯಾಯಾಲಯದ ಮುಂದೆ ತಮ್ಮ ಕಳವಳ ವ್ಯಕ್ತಪಡಿಸಿದರು.
ಆದರೆ, ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬೇಲಾ ಎಂ ತ್ರಿವೇದಿ ಅವರ ವಿಭಾಗೀಯ ಪೀಠವು ಅರ್ಜಿಯನ್ನು ವಜಾಗೊಳಿಸಿತು ಮತ್ತು ಬದಲಿಗೆ ಹೈಕೋರ್ಟ್‌ಗೆ ಹೋಗುವಂತೆ ಅಹ್ಮದ್‌ಗೆ ಸೂಚಿಸಿತು. ಈ ಸಮಯದಲ್ಲಿ, ಅಹ್ಮದ್ ಮತ್ತು ಅಶ್ರಫ್ ಅವರ ಸಹೋದರಿ ತನ್ನ ಸಹೋದರರಿಗೆ ಭದ್ರತೆ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಕೇಳಿಕೊಂಡಿದ್ದರು.
ಹತ್ಯೆ
ಶನಿವಾರ, ಅಹ್ಮದ್ ಮತ್ತು ಅವರ ಸಹೋದರನನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಪೊಲೀಸರು ಕರೆದೊಯ್ಯುತ್ತಿದ್ದಾಗ, ಅವರು ಮಾಧ್ಯಮಗಳೊಂದಿಗೆ ಮಾತನಾಡಲು ನಿಂತಾಗ ಗುಂಡು ಹಾರಿಸಲಾಯಿತು. ಓರ್ವ ಪತ್ರಕರ್ತ ಮತ್ತು ಪೊಲೀಸ್ ಪೇದೆಯೂ ಗಾಯಗೊಂಡಿದ್ದಾರೆ.
"ಜೈ ಶ್ರೀ ರಾಮ್" ಎಂದು ಕೂಗಿದ ಮೂವರು ದಾಳಿಕೋರರನ್ನು ಲವ್ಲೇಶ್ ತಿವಾರಿ, ಸನ್ನಿ ಮತ್ತು ಅರುಣ್ ಮೌರ್ಯ ಎಂದು ಗುರುತಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಅವರು ವರದಿಗಾರರಂತೆ ವೇಷ ಧರಿಸಿದ್ದರು ಎಂದು ಸುದ್ದಿ ವರದಿಗಳು ಹೇಳುತ್ತವೆ. "ಪ್ರಸಿದ್ಧರಾಗಲು" ಅಹ್ಮದ್ ಮತ್ತು ಅಶ್ರಫ್ ಅವರನ್ನು ಕೊಲ್ಲಲು ಬಯಸಿದ್ದರು ಎಂದು ಮೂವರು ಹೇಳಿಕೊಂಡಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮುಖ್ಯಮಂತ್ರಿ ಆದಿತ್ಯನಾಥ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ ಮತ್ತು ಹತ್ಯೆಯ ತನಿಖೆಗಾಗಿ ಮೂವರು ಸದಸ್ಯರ ನ್ಯಾಯಾಂಗ ಸಮಿತಿಯನ್ನು ರಚಿಸಿರುವುದಾಗಿ ತಿಳಿದುಬಂದಿದೆ. ಉತ್ತರ ಪ್ರದೇಶದ ಎಲ್ಲಾ ಭಾಗಗಳಲ್ಲಿ ದೊಡ್ಡ ಸಭೆಗಳನ್ನು ನಿಷೇಧಿಸಲಾಗಿದೆ ಎಂದು ವರದಿಗಳ ಮೂಲಕ ತಿಳಿದು ಬಂದಿದೆ. ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷಗಳು ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ