HOME » NEWS » Explained » IPL 2021 DAVID WARNER STRIPPED OF SUNRISERS HYDERABADS CAPTAINCY DUE TO HIS COMMENTS ON MANISH PANDEY ZP

IPL 2021: ಮನೀಷ್ ಪಾಂಡೆ ಪರವಹಿಸಿದಕ್ಕೆ ವಾರ್ನರ್‌ ತಲೆದಂಡ..?

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದದ ಸೂಪರ್ ಓವರ್​ ಸೋಲಿನ ಬಳಿಕ ಮಾತನಾಡಿದ್ದ ವಾರ್ನರ್, SRH ತಂಡದ ಆಯ್ಕೆಗಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಕಾರಣ ಕನ್ನಡಿಗ ಮನೀಷ್ ಪಾಂಡೆಗೆ ತಂಡದಲ್ಲಿ ಅವಕಾಶ ನೀಡದಿರುವುದು.

news18-kannada
Updated:May 3, 2021, 5:24 PM IST
IPL 2021: ಮನೀಷ್ ಪಾಂಡೆ ಪರವಹಿಸಿದಕ್ಕೆ ವಾರ್ನರ್‌ ತಲೆದಂಡ..?
warner-manish pandey
  • Share this:
ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದೆ. ಆಡಿರುವ ಆರು ಪಂದ್ಯಗಳಲ್ಲಿ 5 ರಲ್ಲಿ ಸೋತು, ಪಂಜಾಬ್ ಕಿಂಗ್ಸ್ ವಿರುದ್ದ ಏಕೈಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಮೊದಲಾರ್ಧ ಮುಕ್ತಾಯದ ವೇಳೆಗೆ ಸನ್​ರೈಸರ್ಸ್​ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಇದೇ ಕಾರಣದಿಂದ ಡೇವಿಡ್ ವಾರ್ನರ್ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅತ್ತ ಕೇನ್ ವಿಲಿಯಮ್ಸನ್​ಗೆ ನೂತನ ನಾಯಕನ ಪಟ್ಟ ಕಟ್ಟಲಾಗಿದೆ.

ಅಂದರೆ ಇಲ್ಲಿ ಕೇವಲ 5 ಪಂದ್ಯಗಳ ಸೋಲಿಗೆ ಡೇವಿಡ್ ವಾರ್ನರ್​ ಅವರನ್ನು ನಾಯಕತ್ವದಿಂದ ಕೆಳಗಿಸಲಾಗಿದೆಯೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ SRH ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ವಾರ್ನರ್. ಆದರೆ ಕೇವಲ 5 ಸೋಲು ಒಬ್ಬ ವಾರ್ನರ್​ ಅವರ ತಲೆದಂಡಕ್ಕೆ ಕಾರಣವಾಗಿದೆ. ಅಷ್ಟಕ್ಕೂ ವಾರ್ನರ್ ನಾಯಕತ್ವದಲ್ಲಿ ಈ ಹಿಂದೆ SRH ಐದು ಪಂದ್ಯಗಳಿಗಿಂತ ಹೆಚ್ಚಿನ ಪಂದ್ಯ ಸೋತಿಲ್ವಾ ಎಂದು ಕೇಳಿದ್ರೆ ಖಂಡಿತ ಸೋತಿದೆ ಎಂಬ ಉತ್ತರ ಸಿಗುತ್ತೆ.

ಅಷ್ಟೇ ಅಲ್ಲದೆ ಈ ಬಾರಿ ಸನ್​ರೈಸರ್ಸ್​ ಸೋಲಿಗೆ ಪ್ರಮುಖ ಕಾರಣ ಮಧ್ಯಮ ಕ್ರಮಾಂಕದ ವೈಫಲ್ಯ ಎಂಬುಕ್ಕೆ ಸೋತ ಪಂದ್ಯಗಳ ಫಲಿತಾಂಶಗಳೇ ಸಾಕ್ಷಿ. ಕೆಕೆಆರ್ ವಿರುದ್ದ 10 ರನ್​ಗಳಿಂದ ಸೋತರೆ, ಆರ್​ಸಿಬಿ ವಿರುದ್ದ 6 ರನ್​ಗಳಿಂದ ಸೋಲನುಭವಿಸಿತ್ತು. ಇನ್ನು ಮುಂಬೈ ಇಂಡಿಯನ್ಸ್ ವಿರುದ್ದ 11 ರನ್​ಗಳಿಂದ ಸೋತರೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಸೂಪರ್ ಓವರ್​ನಲ್ಲಿ ಸೋಲನುಭವಿಸಿತು. ಅಂದರೆ 5 ಸೋಲುಗಳಲ್ಲಿ 4 ರಲ್ಲಿ ಸನ್​ರೈಸರ್ಸ್​ ಪೈಪೋಟಿ ನೀಡಿದೆ ಅಥವಾ ಅಂತಿಮ ಹಂತದಲ್ಲಿ ವೈಫಲ್ಯ ಹೊಂದಿತ್ತು ಎಂದೇ ಹೇಳಬಹುದು. ಇದಾಗ್ಯೂ ನಾಯಕನ ತಲೆದಂಡಕ್ಕೆ ಕಾರಣವೇನು? ಎಂದು ಹುಡುಕಾಡಿದರೆ ಒಂದು ಇಂಟ್ರೆಸ್ಟಿಂಗ್ ಮಾಹಿತಿ ಸಿಗುತ್ತೆ.

ಹೌದು, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದದ ಸೂಪರ್ ಓವರ್​ ಸೋಲಿನ ಬಳಿಕ ಮಾತನಾಡಿದ್ದ ವಾರ್ನರ್, SRH ತಂಡದ ಆಯ್ಕೆಗಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಕಾರಣ ಕನ್ನಡಿಗ ಮನೀಷ್ ಪಾಂಡೆಗೆ ತಂಡದಲ್ಲಿ ಅವಕಾಶ ನೀಡದಿರುವುದು. ಡೆಲ್ಲಿ ವಿರುದ್ದ ಸೋಲಿನ ಬೆನ್ನಲ್ಲೇ ವಾರ್ನರ್​ ತಂಡದಲ್ಲಿ ಮನೀಷ್ ಪಾಂಡೆಗೆ ಅವಕಾಶ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ಕೆಗಾರರು ಪಾಂಡೆಯನ್ನು ತಂಡದಿಂದ ಹೊರಗಿಡುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ತಂಡದ ಮಧ್ಯಮ ಕ್ರಮಾಂಕದ ಮೇಲೆ ಪರಿಣಾಮ ಬೀರಿದೆ ಎಂದು ಬಹಿರಂಗವಾಗಿಯೇ ತಿಳಿಸಿದ್ದರು.

ಮೊದಲೆರಡು ಪಂದ್ಯಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದಕ್ಕಾಗಿ ಮನೀಷ್ ಪಾಂಡೆಯನ್ನು ತಂಡದಿಂದ ಕೈ ಬಿಡಲಾಗಿತ್ತು. ಅವರ ಬದಲಿಗೆ ಸ್ಥಾನ ಪಡೆದ ಎಡಗೈ ದಾಂಡಿಗ ವಿರಾಟ್ ಸಿಂಗ್ ಡೆಲ್ಲಿ ವಿರುದ್ದದ ಪಂದ್ಯದಲ್ಲಿ 14 ಎಸೆತಗಳಲ್ಲಿ ಕೇವಲ 4 ರನ್ ಮಾತ್ರ ಗಳಿಸಿದ್ದರು. ಇದುವೇ ತಂಡದ ಸೋಲಿಗೆ ಕಾರಣವಾಯಿತು.ಆದರೆ ತಂಡದಲ್ಲಿನ ಬದಲಾವಣೆ ಆಯ್ಕೆಗಾರರ ನಿರ್ಧಾರ. ಆದರೆ ಕೆಲವೊಂದು ಕಠಿಣ ನಿರ್ಧಾರವಾಗಿದೆ ಎಂಬುದು ನನ್ನ ಅಭಿಪ್ರಾಯ. ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್​ಮನ್ ಮನೀಷ್ ಪಾಂಡೆಯನ್ನು ಕೈಬಿಡುತ್ತಿರುವುದು ತಂಡದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಡೇವಿಡ್ ವಾರ್ನರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಸಿಎಸ್​ಕೆ ವಿರುದ್ದದ ಪಂದ್ಯದಲ್ಲಿ ಮನೀಷ್ ಪಾಂಡೆಗೆ ಅವಕಾಶ ಲಭಿಸಿತ್ತು. ಆ ಪಂದ್ಯದಲ್ಲಿ ಪಾಂಡೆ ಅರ್ಧಶತಕ ಬಾರಿಸಿ ಮಿಂಚಿದ್ದರು. ಇತ್ತ ಸಿಎಸ್​ಕೆ ತಂಡವು SRH ನೀಡಿದ 171 ರನ್​ಗಳನ್ನು ಚೇಸ್ ಮಾಡಿ ಗೆದ್ದುಕೊಂಡಿತ್ತು. ವಾರ್ನರ್ ಆಸೆಯಂತೆ ಮನೀಷ್ ಪಾಂಡೆಗೆ ತಂಡದಲ್ಲಿ ಅವಕಾಶ ಲಭಿಸಿದೆ. ಆದರೆ ಇದರ ಬೆನ್ನಲ್ಲೇ ವಾರ್ನರ್​ ಅವರ ನಾಯಕತ್ವ ಕಳೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ, ಮನೀಷ್ ಪಾಂಡೆಗೆ ಬೆಂಬಲ ವ್ಯಕ್ತಪಡಿಸಿ ವಾರ್ನರ್ ನೀಡಿದ ಹೇಳಿಕೆಗಳನ್ನೇ, ಎಸ್​ಆರ್​ಹೆಚ್ ಆಯ್ಕೆಗಾರರು ಅವರಿಗೆ ತಿರುಗುಬಾಣವಾಗಿ ಪ್ರಯೋಗಿಸಿದ್ದಾರೆ. ಹೀಗಾಗಿ ವಾರ್ನರ್​ ಅವರನ್ನು ನಾಯಕತ್ವ ಸ್ಥಾನದಿಂದ ಕೆಳಗಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Published by: zahir
First published: May 3, 2021, 5:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories