International Friendship Day: ಜು.30ರಂದು ಫ್ರೆಂಡ್​ಶಿಪ್​​ ಡೇ, ಈ ದಿನವನ್ನು ಸ್ನೇಹಿತರ ದಿನವಾಗಿ ಏಕೆ ಆಚರಿಸುತ್ತಾರೆ?

ಸ್ನೇಹವು ಮನುಷ್ಯರ ನಡುವಿನ ಅತ್ಯಂತ ಸುಂದರವಾದ ಸಂಬಂಧಗಳಲ್ಲಿ ಒಂದಾಗಿದೆ. ಸ್ನೇಹಿತ ಎಂದರೆ ಕಷ್ಟದ ಸಮಯದಲ್ಲಿ ಯಾವಾಗಲೂ ಇರುವ ವ್ಯಕ್ತಿ. ನಿಮ್ಮನ್ನು ಬೆಂಬಲಿಸುವ ಮತ್ತು ಮಾರ್ಗದರ್ಶನ ಮಾಡುವ ಸಹಚರರು. ಸ್ನೇಹಿತರಿಗೆ ಧನ್ಯವಾದ ಸಲ್ಲಿಸಲು ಮತ್ತು ನಮ್ಮ ಜೀವನದಲ್ಲಿ ಅವರ ಕೊಡುಗೆಯನ್ನು ಆಚರಿಸಲು ಅಂತರರಾಷ್ಟ್ರೀಯ ಸ್ನೇಹ ದಿನವು ಉತ್ತಮ ಮಾರ್ಗವಾಗಿದೆ.

ಅಂತರಾಷ್ಟ್ರೀಯ ಸ್ನೇಹ ದಿನ

ಅಂತರಾಷ್ಟ್ರೀಯ ಸ್ನೇಹ ದಿನ

  • Share this:
ಸ್ನೇಹ (Friendship) ಇದೊಂದು ಕೇಳಲು ಹಿತವಾದ ಶಬ್ಧ ಎಂದು ಎಲ್ಲರಿಗೂ ಅನ್ನಿಸುತ್ತೆ. ಸ್ನೇಹಕ್ಕೆ ಅದರದ್ದೇ ಆದ ಮಹತ್ವ (Importance) ಇದೆ. ಕೆಲವೊಮ್ಮೆ ಇಬ್ಬರ ನಡುವೆ ಆತ್ಮೀಯತೆ ಬೆಳೆಯಬಹುದು. ಇನ್ನೂ ಕೆಲವು ಬಾರಿ ನಾಲ್ಕು, ಐದು ಜನ ಬೆಸ್ಟ್ ಪ್ರೆಂಡ್ಸ್ ಗಳು ಆಗಿರುತ್ತಾರೆ. ಸ್ನೇಹಿತನ ಮೇಲೆ ನಂಬಿಕೆ, ವಿಶ್ವಾಸವಿದ್ರೆ ಆ ಸ್ನೇಹ ಕೊನೆ ತನಕ ಗಟ್ಟಿಯಾಗಿ ಉಳಿಯುತ್ತದೆ. 7 ವರ್ಷಕ್ಕೂ ಮೇಲೂ ಸ್ನೇಹ ಉಳಿದಿದ್ರೆ, ಅದು ಸಾಯೋ ವರೆಗೂ ಇರುತ್ತೆ ಅನ್ನೋ ನಂಬಿಕೆ. ಸ್ನೇಹಿತರು ಎಷ್ಟೊಂದು ಆತ್ಮೀಯರಾಗಿರುತ್ತಾರೆ ಎಂದ್ರೆ, ಮನೆಯವರ ಬಳಿ ಹೇಳಿಕೊಳ್ಳಲಾಗದ ಎಷ್ಟೋ ವಿಷಯಗಳನ್ನು ಅವರ ಬಳಿ ಹೇಳುತ್ತೇವೆ. ನಮಗೆ ಕಷ್ಟ-ಸುಖ ಎಂದರೆ ನೆನಪಾಗುವುದೇ ಸ್ನೇಹಿತರು. ನಮ್ಮ ಬದುಕಿನಲ್ಲಿ ಏನೇ ನಡೆದ್ರು ಅವರಿಗೆ ಮೊದಲು ತಿಳಿಸಬೇಕು ಅಂದುಕೊಳ್ಳುತ್ತೇವೆ. ಸ್ನೇಹದ ಸುಂದರ ಬಂಧದ ಆಚರಣೆ ಎಂದು ಕರೆಯಲ್ಪಡುವ, ಅಂತರರಾಷ್ಟ್ರೀಯ (International) ಸ್ನೇಹ ದಿನ (Friendship Day:) ವನ್ನು 1958 ರಲ್ಲಿ ಪರಾಗ್ವೆಯಲ್ಲಿ ಆಚರಿಸಲಾಯಿತು. 

ಸ್ನೇಹಿತರಿಗೆ ಧನ್ಯವಾದ ಸಲ್ಲಿಸಲು ಒಳ್ಳೆಯ ದಿನ
ಸ್ನೇಹವು ಮನುಷ್ಯರ ನಡುವಿನ ಅತ್ಯಂತ ಸುಂದರವಾದ ಸಂಬಂಧಗಳಲ್ಲಿ ಒಂದಾಗಿದೆ. ಸ್ನೇಹಿತ ಎಂದರೆ ಕಷ್ಟದ ಸಮಯದಲ್ಲಿ ಯಾವಾಗಲೂ ಇರುವ ವ್ಯಕ್ತಿ. ನಿಮ್ಮನ್ನು ಬೆಂಬಲಿಸುವ ಮತ್ತು ಮಾರ್ಗದರ್ಶನ ಮಾಡುವ ಸಹಚರರು. ನಾವು ವರ್ಷವಿಡೀ ನಮ್ಮ ಸ್ನೇಹಿತರೊಂದಿಗೆ ಕ್ಷಣಗಳನ್ನು ಆನಂದಿಸುತ್ತಿರುವಾಗ, ನಮ್ಮ ಸ್ನೇಹಿತರಿಗೆ ಧನ್ಯವಾದ ಸಲ್ಲಿಸಲು ಮತ್ತು ನಮ್ಮ ಜೀವನದಲ್ಲಿ ಅವರ ಕೊಡುಗೆಯನ್ನು ಆಚರಿಸಲು ಅಂತರರಾಷ್ಟ್ರೀಯ ಸ್ನೇಹ ದಿನವು ಉತ್ತಮ ಮಾರ್ಗವಾಗಿದೆ.

ಜುಲೈ 30 ಅಂತರಾಷ್ಟ್ರೀಯ ಸ್ನೇಹ ದಿನ
ಹೆಚ್ಚಿನ ದೇಶಗಳು ಜುಲೈ 30 ರಂದು ಅಂತರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸುತ್ತವೆ. ಈ ದಿನವನ್ನು ಮೊದಲು 1958 ರಲ್ಲಿ ಅಂತರಾಷ್ಟ್ರೀಯ ನಾಗರಿಕ ಸಂಸ್ಥೆ, ವಲ್ರ್ಡ್ ಫ್ರೆಂಡ್‍ಶಿಪ್ ಕ್ರುಸೇಡ್‍ನಿಂದ ಸ್ಥಾಪಿಸಲಾಯ್ತು. ಇದು ಸ್ನೇಹವನ್ನು ಉತ್ತೇಜಿಸುವ ಮೂಲಕ ಶಾಂತಿಯ ಸಂಸ್ಕøತಿಯನ್ನು ಬೆಳೆಸಲು ಪ್ರಚಾರ ಮಾಡುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2011 ರಲ್ಲಿ ಅಂತರಾಷ್ಟ್ರೀಯ ಸ್ನೇಹ ದಿನವನ್ನು ಔಪಚಾರಿಕವಾಗಿ ಅಂಗೀಕರಿಸಿತು.

ಆಗಸ್ಟ್ ಮೊದಲ ಭಾನುವಾರ ಸ್ನೇಹ ದಿನಾಚರಣೆ
ಭಾರತ ಸೇರಿದಂತೆ ಕೆಲವು ದೇಶಗಳು ಪ್ರತಿ ಆಗಸ್ಟ್‍ನ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 7, 2022 ರಂದು ಪ್ರೆಂಡ್‍ಶಿಪ್ ಡೇ ಆಚರಿಸಲಾಗುತ್ತದೆ. ಈ ದಿನ ಜೊತೆಗಿರುವ ಸ್ನೇಹಿತರು, ಹಳೆಯ ಸ್ನೇಹಿತರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಜೊತೆಗೆ ಸೇರಿ ಸ್ನೇಹ ಸಂಭ್ರಮವನ್ನು ಆಚರಿಸುತ್ತಾರೆ. ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಇದನ್ನೂ ಓದಿ: President Oath: ರಾಷ್ಟ್ರಪತಿಗಳು ಜುಲೈ 25ರಂದೇ ಪ್ರಮಾಣವಚನ ಸ್ವೀಕರಿಸೋದು ಯಾಕೆ? ಈ ದಿನದ ಮಹತ್ವವೇನು?

ಅಂತರಾಷ್ಟ್ರೀಯ ಸ್ನೇಹ ದಿನದ ಇತಿಹಾಸ
ಸ್ನೇಹದ ಸುಂದರ ಬಂಧದ ಆಚರಣೆ ಎಂದು ಕರೆಯಲ್ಪಡುವ, ಅಂತರರಾಷ್ಟ್ರೀಯ ಸ್ನೇಹ ದಿನವನ್ನು 1958 ರಲ್ಲಿ ಪರಾಗ್ವೆಯಲ್ಲಿ ಆಚರಿಸಲಾಯಿತು. ಸ್ಮರಣೀಯ ದಿನವನ್ನು ಹಾಲ್‍ಮಾರ್ಕ್ ಕಾರ್ಡ್‍ಗಳ ಸಂಸ್ಥಾಪಕರಿಂದ ಪ್ರಾರಂಭಿಸಲಾಯಿತು. ಜಾಯ್ಸ್ ಹಾಲ್ 1930 ರಲ್ಲಿ, ಜನರು ವಿಶೇಷ ದಿನವನ್ನು ಗುರುತಿಸುವ ಕಲ್ಪನೆಯನ್ನು ಅವರು ಪ್ರಸ್ತಾಪಿಸಿದರು. ಅವರ ಸ್ನೇಹವನ್ನು ಆಚರಿಸಬಹುದು ಮತ್ತು ಸಂಬಂಧವನ್ನು ಗೌರವಿಸಬಹುದು ಎಂದು ತಿಳಿಸಿ ಕೊಟ್ಟರು.

ನಂತರ, ವಿನ್ನಿ ದಿ ಪೂಹ್ ಅವರನ್ನು 1988 ರಲ್ಲಿ ವಿಶ್ವಸಂಸ್ಥೆಯು ಸ್ನೇಹದ ರಾಯಭಾರಿಯಾಗಿ ನೇಮಿಸಿತು. ಜುಲೈ 30 ಅನ್ನು 2011 ರಲ್ಲಿ ನಡೆದ 65 ನೇ ಯುಎನ್ ಅಧಿವೇಶನದಲ್ಲಿ ಅಧಿಕೃತವಾಗಿ ಅಂತರರಾಷ್ಟ್ರೀಯ ಸ್ನೇಹ ದಿನ ಎಂದು ಗುರುತಿಸಲಾಯಿತು.

ಅಂತರಾಷ್ಟ್ರೀಯ ಸ್ನೇಹ ದಿನದ ಮಹತ್ವ
ಸ್ನೇಹಿತರ ದಿನವು ಜನರ ನಡುವಿನ ಸ್ನೇಹದ ಬಾಂಧವ್ಯದ ಆಚರಣೆಯಾಗಿದೆ. ಅನೇಕ ಜನರು ತಮ್ಮ ಕುಟುಂಬದಂತೆಯೇ ಆತ್ಮೀಯರಾಗಿರುವ ಸ್ನೇಹಿತರನ್ನು, 'ಕುಟುಂಬದಂತಹ ಸ್ನೇಹಿತರು' ಎಂಬ ಪದವನ್ನು ಬಳಸುತ್ತಾರೆ. ಈ ಪದವನ್ನು ಅತ್ಯಂತ ಪ್ರೀತಿಯ ಮತ್ತು ಆತ್ಮೀಯ ಸ್ನೇಹಿತರಿಗೆ ಮೆಚ್ಚುಗೆಯನ್ನು ತೋರಿಸಲು ಹೇಳುತ್ತಾರೆ.

ಅಂತರಾಷ್ಟ್ರೀಯ ಸ್ನೇಹಿತರ ದಿನವನ್ನು ಹೇಗೆ ಆಚರಿಸಬೇಕು?
ನಿಮ್ಮ ಸ್ನೇಹಿತರಿಗೆ ಅವರ ಉಪಸ್ಥಿತಿಯು ನಿಮ್ಮ ಜೀವನದಲ್ಲಿ ಮುಖ್ಯವಾಗಿದೆ ಎಂದು ನೀವು ಹೇಳಬಹುದು. ನಿಮ್ಮ ಅಗತ್ಯದ ಸಮಯದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸಲು ಉತ್ತಮ ಸ್ನೇಹಿತನು ಸಮಯವನ್ನು ನೀಡುತ್ತಾನೆ. ಹಳೆಯ ಸ್ನೇಹಿತರನ್ನು ತಲುಪಲು ಮತ್ತು ನೆನಪುಗಳನ್ನು ಮರುಸೃಷ್ಟಿಸಲು ಇದು ಒಂದು ಅವಕಾಶ. ಈ ದಿನದಂದು ನಿಮ್ಮ ಸ್ನೇಹಿತರಿಗೆ ಏನಾದರೂ ವಿಶೇಷವಾದದ್ದನ್ನು ಮಾಡುವ ಮೂಲಕ ನೀವು ಮುರಿದ ಅಥವಾ ಕಳೆದು ಹೋದ ಸ್ನೇಹವನ್ನು ಪುನರುಜ್ಜೀವನಗೊಳಿಸಬಹುದು.

ಇದನ್ನೂ ಓದಿ: Kargil Vijay Diwas: ಭಾರತೀಯ ಸೇನೆ ಪಾಕಿಸ್ತಾನದ ಹುಟ್ಟಡಗಿಸಿದ ಕ್ಷಣವದು ಕಾರ್ಗಿಲ್ ವಿಜಯ ದಿವಸ!

ನಿಮ್ಮ ಆತ್ಮೀಯ ಸ್ನೇಹಿತರಿಗೆ ಅಮೂಲ್ಯವಾದದ್ದನ್ನು ಉಡುಗೊರೆಯಾಗಿ ನೀಡಲು ಪ್ರಯತ್ನಿಸಿ ಅಥವಾ ಬಿಸಿ ಕಾಫಿಯ ಜೊತೆ ಒಳ್ಳೆಯ ಮಾತುಗಳನ್ನಾಡಿ.

ಗ್ರೀಟಿಂಗ್ ಕಾರ್ಡ್ ಕಂಪೆನಿಗಳಿಂದ ಆರಂಭ
ಗ್ರೀಟಿಂಗ್ ಕಾರ್ಡ್ ಕಂಪೆನಿಗಳಿಂದ ಆರಂಭವಾದಂತಹ ಈ ಆಚರಣೆಯು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಪಡೆದುಕೊಂಡಿದೆ. ಭಾರತ, ಬಾಂಗ್ಲಾದೇಶ ಮತ್ತು ಮಲೇಶಿಯಾದಲ್ಲಿ ಇದರ ಬಗ್ಗೆ ಆಸಕ್ತಿ ಬೆಳೆಯುತ್ತಿದೆ. ದಕ್ಷಿಣ ಏಷ್ಯಾದಲ್ಲಿ ರಜಾ ದಿನವನ್ನು ಪ್ರಚಾರ ಮಾಡುವವರು, 1935ರಲ್ಲಿ ಅಮೆರಿಕಾದಲ್ಲಿ ನೆಲೆಸಿರುವಂತಹ ತಮ್ಮ ಸ್ನೇಹಿತರಿಗಾಗಿ ಈ ದಿನವನ್ನು ಅರ್ಪಿಸುವ ಸಂಪ್ರದಾಯವನ್ನು ಬೆಳೆಸಿಕೊಂಡಿದ್ದಾರೆ. ಆದರೆ ಇದರ ನಿಜವಾದ ವರ್ಷ 1919. ಸ್ನೇಹಿತರ ದಿನದಂದು ಉಡುಗೊರೆ, ಕಾರ್ಡ್ ಮತ್ತು ಕೈಗೆ ರಿಬ್ಬನ್‍ನಂತಹ ಪಟ್ಟಿಗಳನ್ನು ಧರಿಸುವುದು ಸಾಮಾನ್ಯವಾಗಿ ಆಚರಿಸಿಕೊಂಡಿರುವಂತಹ ಸಂಪ್ರದಾಯ.

ರಾಷ್ಟ್ರೀಯ ರಜೆ ಘೋಷಣೆ
1935ರಲ್ಲಿ ಅಮೆರಿಕಾದ ಕಾಂಗ್ರೆಸ್ ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಘೋಷಿಸಿತು. ಸ್ನೇಹಿತರಿಗೆ ಗೌರವ ಸೂಚಿಸುವ ಸಲುವಾಗಿ ರಾಷ್ಟ್ರೀಯ ರಜೆಯನ್ನು ಘೋಷಿಸಿದೆ. ಮಹಿಳೆಯರ ಸ್ನೇಹಿತರ ದಿನವನ್ನು ಸಪ್ಟೆಂಬರ್ ತಿಂಗಳ ಮೂರನೇ ಭಾನುವಾರದಂದು ಆಚರಿಸಲಾಗುತ್ತದೆ.

ಪ್ರತಿಯೊಬ್ಬರು ಸ್ನೇಹಿತರ ದಿನವನ್ನು ಆಚರಿಸಿದರೆ ಬೆಸ್ಟ್ ಫ್ರೆಂಡ್ಸ್ ಅನಿಮಲ್ ಸೊಸೈಟಿಯು ಉತ್ತಮ ಸ್ನೇಹಿತರ ವಾರವನ್ನು ಆಚರಿಸುತ್ತಾ ಬಂದಿದೆ. ಅದು ಪ್ರತೀ ವರ್ಷ ಜೂನ್ 23ರಿಂದ 25ರ ತನಕ. ಇದನ್ನು ಪ್ರಾಣಿಗಳ ರಕ್ಷಣೆ ಮತ್ತು ಹಕ್ಕಿಗಾಗಿ ಆಚರಿಸುತ್ತಾ ಇದೆ. ಈ ವಾರದ ಮೊದಲ ದಿನವನ್ನು ಉತ್ತಮ ಗೆಳೆಯನ ದಿನವೆಂದು ಕರೆಯಲಾಗುತ್ತದೆ.

ಚಿರಕಾಲ ಇರಲಿ ಸ್ನೇಹ
ಒಂದು ಸ್ನೇಹ ರಕ್ತ ಸಂಭಂದಕ್ಕಿಂತ ಮಿಗಿಲಾದದ್ದು ಅಂತ ಹೇಳುತ್ತಾರೆ. ಜೀವನದಲ್ಲಿ ಸ್ನೇಹಿತರು ಅವರ ಕುಂಟುಬ ಮತ್ತು ವೃತ್ತಿಯ ಜೀವನ ನೆಡೆಸಲು ನಮ್ಮಿಂದ ದೂರ ಇರುತ್ತಾರೆ ಆದರು ಅವರ ನೆನಪು ನಮ್ಮ ಜೊತೆಗೆ ಸದಾ ಇರುತ್ತದೆ. ಒಂದು ಒಳ್ಳೆಯ ಗೆಳೆಯ ಅಥವಾ ಗೆಳತಿ ಎಲ್ಲರ ಜೀವನದಲ್ಲಿ ಇದ್ದೆ ಇರುತ್ತಾರೆ. ದೂರದ ನಕ್ಷತ್ರದ ತರಹ ಮಿನುಗುತಾ ಇರುತ್ತಾರೆ. ರಕ್ತ ಹಂಚಿಕೊಂಡು ಹುಟ್ಟಲಿಲ್ಲ, ಆಸ್ತಿ ಹಂಚಿಕೊಂಡು ಬೆಳೆಯಲಿಲ್ಲ, ಕಷ್ಟ-ಸುಖ ವನ್ನು ಹಂಚಿಕೊಂಡು ಬಾಳುವುದು ಈ ಸ್ನೇಹ.
Published by:Savitha Savitha
First published: