World Indigenous Peoples' Day- ವಿಶ್ವ ಮೂಲನಿವಾಸಿಗಳ ದಿನ: ಪರಿಸರ ರಕ್ಷಣೆಯಲ್ಲಿ ಮೂಲನಿವಾಸಿಗಳ ಪಾತ್ರ ಎಷ್ಟು ಮುಖ್ಯ ಗೊತ್ತಾ?

international day of the world's indigenous peoples : ಪರಿಸರ ವ್ಯವಸ್ಥೆಯನ್ನು ಕಾಪಾಡಲು, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ, ಹಾಗೂ ಭೂಮಿ, ಪ್ರಕೃತಿ ಮತ್ತು ಅವುಗಳ ಅಭಿವೃದ್ಧಿಯ ಬಗ್ಗೆ ಅವರ ಸಹಜ, ವೈವಿಧ್ಯಮಯ ಜ್ಞಾನವು ಅತ್ಯಂತ ಮುಖ್ಯವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಗಸ್ಟ್ 9 ಅನ್ನು ವಿಶ್ವ ಮೂಲ ನಿವಾಸಿಗಳ ಅಂತರರಾಷ್ಟ್ರೀಯ ದಿನವನ್ನಾಗಿ (International Day of the World’s Indigenous Peoples) ಆಚರಿಸಲಾಗುತ್ತದೆ. ಇದು ಪ್ರಪಂಚದಾದ್ಯಂತ  ಮೂಲ ನಿವಾಸಿಗಳ ಜನಸಂಖ್ಯೆಯ ಬಗ್ಗೆ ಹಾಗೂ ಅವರ ಜೀವನ ಶೈಲಿಯ ಬಗ್ಗೆ  ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಮೂಲ ನಿವಾಸಿಗಳ ಹಕ್ಕುಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಇದರ ಪ್ರಮುಖ ಉದ್ದೇಶ. ವರದಿಗಳ ಪ್ರಕಾರ  ಮೂಲ ನಿವಾಸಿಗಳ ಜನಸಂಖ್ಯೆಯು ವಿಶ್ವದ ಜನಸಂಖ್ಯೆಯ ಸುಮಾರು 6.2% ರಷ್ಟಿದೆ. ಪ್ರಪಂಚದಾದ್ಯಂತದ 90 ದೇಶಗಳಲ್ಲಿ 476 ದಶಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಅಂಕಿಅಂಶಗಳ ಪ್ರಕಾರ, ಪ್ರಪಂಚದ ಸುಮಾರು 80% ನಷ್ಟು ಜೀವವೈವಿಧ್ಯ ಮತ್ತು ಅರಣ್ಯ ಪ್ರದೇಶಗಳಲ್ಲಿ ಮೂಲ ನಿವಾಸಿಗಳು  ವಾಸಿಸುತ್ತಿದ್ದು, ಅವರ ಕಾರಣದಿಂದ ಆ ಪ್ರದೇಶಗಳು ರಕ್ಷಿಸಲ್ಪಟ್ಟಿದೆ. ಅವರ ಸಂಸ್ಕೃತಿ, ಜೀವನಶೈಲಿ ಮತ್ತು ಚಟುವಟಿಕೆಗಳು ನಮ್ಮ ಪರಿಸರದ ಪೋಷಣೆಗೆ ಅವಿಭಾಜ್ಯವಾಗಿವೆ.

ಪರಿಸರ ವ್ಯವಸ್ಥೆಯನ್ನು ಕಾಪಾಡಲು, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ, ಹಾಗೂ ಭೂಮಿ, ಪ್ರಕೃತಿ ಮತ್ತು ಅವುಗಳ ಅಭಿವೃದ್ಧಿಯ ಬಗ್ಗೆ ಅವರ ಸಹಜ, ವೈವಿಧ್ಯಮಯ ಜ್ಞಾನವು ಅತ್ಯಂತ  ಮುಖ್ಯವಾಗುತ್ತದೆ. ಆದ್ದರಿಂದ ಅವರು ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಸ್ಥಾನ ಪಡೆಯುತ್ತಾರೆ. ಏಕೆಂದರೆ ಈ ಜನರು ನೈಸರ್ಗಿಕ ಸ್ಥಳಗಳು ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿ, ನಿರ್ವಹಣೆ ಮತ್ತು ರಕ್ಷಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ.

ವಿಶ್ವ ಮೂಲ ನಿವಾಸಿಗಳ ಅಂತರರಾಷ್ಟ್ರೀಯ ದಿನದ ಸಂದರ್ಭದಲ್ಲಿ, ಸ್ಥಳೀಯ ಜನರು ಪರಿಸರವನ್ನು ರಕ್ಷಿಸುವಲ್ಲಿ ಹೇಗೆ ಸಹಾಯ ಮಾಡುತ್ತಾರೆ ಎಂಬುದನ್ನು  ತಿಳಿಯುವುದು ಮುಖ್ಯ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟ - 45ಕ್ಕೆ ಏರಿದ ಡೆಲ್ಟಾ ಪ್ಲಸ್ ಪ್ರಕರಣಗಳು

ಮೂಲ ನಿವಾಸಿಗಳು ನಮ್ಮ ಪರಿಸರದ ಮುಖ್ಯ ಮೇಲ್ವಿಚಾರಕರು ಮತ್ತು ವೇಗವಾಗಿ  ಕಾಣೆಯಾಗುತ್ತಿರುವ ಅಥವಾ ಕ್ಷೀಣಿಸುತ್ತಿರುವ ಗುಂಪು ಎಂಬುದು ಈಗಾಗಲೇ ಅರಿವಾಗಿದೆ. ಆದರೆ ಅವರು ವಾಸಿಸುವ ಪ್ರದೇಶವನ್ನು ಅತಿಕ್ರಮಣಕಾರರು ಅಕ್ರಮವಾಗಿ ಪ್ರವೇಶ ಮಾಡುವುದರಿಂದ ತಡೆದಿದ್ದಾರೆ. ಅಲ್ಲದೇ ಅರಣ್ಯ ನಾಶವನ್ನು, ಗಣಿಗಾರಿಕೆಯನ್ನ ತಡೆಯುವ ಮೂಲಕ ಪರಿಸರ ಸಂರಕ್ಷಣೆ  ಮಾಡಿದ್ದಾರೆ. ಹಾಗೂ ನದಿಗಳಿಗೆ ಕಟ್ಟುವ ಅಣೆಕಟ್ಟುಗಳು ಸೇರಿದಂತೆ ಮಾನವ ನಿರ್ಮಿತ ಹಾನಿಕಾರಕಗಳಿಂದ ಯಾವುದೇ ಕೆಟ್ಟ ಪರಿಣಾಮ ಬೀರದಂತೆ ಅರಣ್ಯಗಳನ್ನು ಸುರಕ್ಷಿತವಾಗಿರುವಂತೆ ನೋಡಿಕೊಂಡಿದ್ದಾರೆ. ಇವೆಲ್ಲ ಅವರ ಸಂಸ್ಕೃತಿಯ ಪ್ರತೀಕ.

ಮೂಲ ನಿವಾಸಿಗಳು ಪರಿಸರ ವ್ಯವಸ್ಥೆಯ ಆದರ್ಶ ಪಾಲಕರು ಎಂದರೆ ತಪ್ಪಾಗುವುದಿಲ್ಲ. ಅವರು ವಾಸಿಸುವ ಸುತ್ತಮುತ್ತಲಿನ ಪರಿಸರಕ್ಕೆ ಅವರು ಒಂದು ಒಳ್ಳೆಯ ಸಂಪರ್ಕವನ್ನು  ಮತ್ತು ಸಂಬಂಧವನ್ನು ಹೊಂದಿರುತ್ತಾರೆ. ಅವರ ಪರಂಪರೆ, ಪರಿಸರ ಮೌಲ್ಯಮಾಪನದಲ್ಲಿ ಜ್ಞಾನ, ಪರಿಸರ ವ್ಯವಸ್ಥೆಯನ್ನು ನಿರ್ವಹಿಸಲು  ಸರಿಯಾದ ಪರಿಹಾರಗಳನ್ನು ಕಂಡುಕೊಳ್ಳುವುದು ಎಲ್ಲವೂ ಅವರಲ್ಲಿ ಪಾರಂಪರಿಕವಾಗಿ ಬಂದಿರುತ್ತದೆ.

ಇದನ್ನೂ ಓದಿ: ಕಿಸಾನ್​ ಸಮ್ಮಾನ್ ಯೋಜನೆಯ 9ನೇ ಕಂತು ಇಂದು ಬಿಡುಗಡೆ

ಅವರು ಪಾಲಿಸುವ ಹಳೆಯ ಕೃಷಿ ಪದ್ದತಿಗಳು ಪ್ರಕೃತಿಗೆ ಹಾನಿ ಮಾಡುವುದಿಲ್ಲ. ಇಂತಹ ವಿಧಾನಗಳು ಹವಾಮಾನ ಬದಲಾವಣೆಗೆ ಪೂರಕವಾಗಿರುತ್ತದೆ. ಉದಾಹರಣೆಗೆ, ಟೆರೇಸಿಂಗ್ ತಂತ್ರವು ಮಣ್ಣಿನ ಸವಕಳಿಯನ್ನು ತಡೆಯುತ್ತದೆ. ಅಲ್ಲದೇ ಅವರಲ್ಲಿ ಕಾಡಿನ ಬೆಂಕಿಯನ್ನು ಹೇಗೆ ನಿಭಾಯಿಸಬೇಕು ಎಂಬ ಅರಿವು ಚನ್ನಾಗಿದ್ದು, ಪ್ರಕೃತಿಯನ್ನು ತಮ್ಮ ಮಗುವಿನಂತೆ ಸಂರಕ್ಷಿಸುತ್ತಾರೆ.

ಮೂಲ ನಿವಾಸಿಗಳು ಬೆಳೆದ ಬೆಳೆಗಳು ಹೆಚ್ಚು ಹೊಂದಿಕೊಳ್ಳುತ್ತವೆ. ಜೊತೆ ಅವು ಸಹ  ಬರ, ಎತ್ತರವಾದ ಪ್ರದೇಶ, ಪ್ರವಾಹ ಮತ್ತು ಯಾವುದೇ ರೀತಿಯ ತಾಪಮಾನದಲ್ಲಿ ಹೊಂದಿಕೊಂಡು ಬೆಳೆಯುತ್ತವೆ. ಅಲ್ಲದೆ, ಕ್ವಿನೋವಾ, ಮೊರಿಂಗಾ, ಓಕಾ ಸೇರಿದಂತೆ  ಕೆಲವು ಸ್ಥಳೀಯ ಬೆಳೆಗಳು ನಮ್ಮ ಆಹಾರದ ಮೂಲವನ್ನು ವಿಸ್ತರಿಸುವ ಮತ್ತು ವೈವಿಧ್ಯಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ. ಹಸಿವಿನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಹಸಿವು ಮುಕ್ತ ದೇಶದ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

ಅವರು ಪರಿಸರವನ್ನು ಗೌರವಿಸುತ್ತಾರೆ. ಅವರ ಆಲೋಚನಾ ವಿಧಾನ, ಜೀವನಶೈಲಿ, ಸಂಸ್ಕೃತಿ ಜಾಗತಿಕ ಪರಿಹಾರವನ್ನು ಒದಗಿಸಲು ಸಹಾಯ ಮಾಡುತ್ತದೆ. ಪೆಟ್ರೋಲಿಯಂ ತಮ್ಮ ಪೂರ್ವಜರ ರಕ್ತ ಎಂದು ಅವರು ನಂಬುವುದರಿಂದ ಪೆಟ್ರೋಲ್ ಬದಲು ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬುದು ಅವರ ಆಶಯ.
Published by:Sandhya M
First published: