International Day Of Girl Child: ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಉದ್ದೇಶ,ಇತಿಹಾಸ ಇಲ್ಲಿದೆ..

International Day Of Girl Child: ಈ ದಿನವನ್ನು ಆಚರಿಸುವ ಮೂಲಕ, ಹದಿಹರೆಯದ ಹೆಣ್ಣು ಮಕ್ಕಳ ಬಗ್ಗೆ ಗೌರವದಿಂದ ಮಾತನಾಡುವ ಮತ್ತು ಹೆಣ್ಣು ಮಕ್ಕಳನ್ನು ಹಿಂಸಿಸುವ ಅನಿಷ್ಠ ಪದ್ಧತಿಗಳ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹದಿಹರೆಯದ ಹೆಣ್ಣುಮಕ್ಕಳ (Girl)ಪ್ರಾಮುಖ್ಯತೆ, ಅವರಲ್ಲಿ ಬಲವರ್ಧನೆಗೊಳಿಸುವ ಅವಶ್ಯಕತೆ, ವಿಫುಲವಾದ ಅವಕಾಶ ಒದಗಿಸುವಿಕೆ..ಹೀಗೆ ಒಟ್ಟಿನಲ್ಲಿ ಹೆಣ್ಣುಮಕ್ಕಳ ಸಬಲೀಕರಣದತ್ತ ಕೊಂಡೊಯ್ಯುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 11 ಅನ್ನು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ(International Day Of Girl Child) ಆಚರಿಸಲಾಗುತ್ತದೆ.

ಈ ದಿನವನ್ನು ಆಚರಿಸುವ ಮೂಲಕ, ಹದಿಹರೆಯದ ಹೆಣ್ಣು ಮಕ್ಕಳ ಬಗ್ಗೆ ಗೌರವದಿಂದ ಮಾತನಾಡುವ ಮತ್ತು ಹೆಣ್ಣು ಮಕ್ಕಳನ್ನು ಹಿಂಸಿಸುವ ಅನಿಷ್ಠ ಪದ್ಧತಿಗಳ ನಿರ್ಮೂಲನೆ ಮಾಡುವ ಪ್ರಯತ್ನ ಮಾಡಲಾಗಿದೆ. ಪ್ರಪಂಚದಾದ್ಯಂತ, ಹುಡುಗಿಯರು ಬಾಲ್ಯ ವಿವಾಹ, ತಾರತಮ್ಯ, ಹಿಂಸೆ ಮತ್ತು ಕಲಿಕೆಯ ಅವಕಾಶಗಳಂತಹ ಲಿಂಗ ಆಧಾರಿತ ಸವಾಲುಗಳನ್ನು ಎದುರಿಸುತ್ತಾರೆ. ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನ 2021 ಈ ವರ್ಷವನ್ನು 'ಡಿಜಿಟಲ್ ಪೀಳಿಗೆ ನಮ್ಮ ಪೀಳಿಗೆ' ಎಂಬ ಆಶಯದೊಂದಿಗೆ ಆಚರಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಇತಿಹಾಸ
ಹೆಣ್ಣು ಮಕ್ಕಳ ಹಕ್ಕುಗಳನ್ನು ಗುರುತಿಸಿದ ಮತ್ತು ಮಾತನಾಡಿದ ಮೊದಲ ಸಮ್ಮೇಳನವೆಂದರೆ ಬೀಜಿಂಗ್ ಘೋಷಣೆ. 1995ರಲ್ಲಿ, ಬೀಜಿಂಗ್‍ನಲ್ಲಿ ನಡೆದ ಮಹಿಳಾ ವಿಶ್ವ ಸಮ್ಮೇಳನದಲ್ಲಿ, ದೇಶಗಳು ಸರ್ವಾನುಮತದಿಂದ ಬೀಜಿಂಗ್ ಘೋಷಣೆಗಳನ್ನು ಅಳವಡಿಸಿಕೊಂಡವು. ಇದು ಕೇವಲ ಮಹಿಳೆಯರು ಮಾತ್ರವಲ್ಲದೇ, ಹುಡುಗಿಯರ ಹಕ್ಕುಗಳನ್ನು ಮುಂದುವರಿಸುವ ಅತ್ಯಂತ ಪ್ರಗತಿಪರ ನೀಲನಕ್ಷೆಯಾಗಿದೆ.

ಇದನ್ನೂ ಓದಿ: ಕೇಂದ್ರ ಸರಕಾರವು ಕನಿಷ್ಠ ಬೆಂಬಲ ಬೆಲೆ ಬೇಡಿಕೆಯ ಅನುಷ್ಠಾನ ಹಾಗೂ ರೈತರೊಂದಿಗಿನ ಒಪ್ಪಂದವನ್ನು ಹೇಗೆ ಮಾಡಬಹುದು?

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಡಿಸೆಂಬರ್ 19, 2011ರಂದು ಅಕ್ಟೋಬರ್ 11 ಅನ್ನು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು. ಈ ದಿನವು ಪ್ರಪಂಚದಾದ್ಯಂತ ಹುಡುಗಿಯರು ಎದುರಿಸುತ್ತಿರುವ ಸವಾಲುಗಳನ್ನು ಒಪ್ಪಿಕೊಳ್ಳುವ ಮತ್ತು ಅವರ ಮಾನವ ಹಕ್ಕುಗಳನ್ನು ಪೂರೈಸುವಲ್ಲಿ ಅವರನ್ನು ಸಬಲೀಕರಣಗೊಳಿಸುವ ಅಗತ್ಯತೆಯ ಮೇಲೆ ಪ್ರಾಥಮಿಕವಾಗಿ ಗಮನಹರಿಸುತ್ತದೆ.

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಮಹತ್ವ
2017ರಲ್ಲಿ ಅಳವಡಿಸಿಕೊಂಡ ಹದಿನೇಳು ಅಂಶಗಳ ಸಮರ್ಥನೀಯ ಅಭಿವೃದ್ಧಿ ಗುರಿಗಳು ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಒಳಗೊಂಡಿವೆ. ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿ ಪೂರೈಸಲು, ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವು ಅತ್ಯುತ್ತಮವಾಗಿದೆ, ಉತ್ತಮ ಆರೋಗ್ಯ ಸೇವೆಗಳು, ಶಿಕ್ಷಣದಲ್ಲಿ ಸಮಾನ ಅವಕಾಶಗಳು ಮತ್ತು ಯಾವುದೇ ಲಿಂಗ ಆಧಾರಿತ ತಾರತಮ್ಯ ಅಥವಾ ಹಿಂಸೆಗೆ ಒಳಗಾಗುವ ಯುವತಿಯರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಹುಡುಗಿಯರ ಅಂತಾರಾಷ್ಟ್ರೀಯ ದಿನ 2021ರ ಧ್ಯೇಯ: ಡಿಜಿಟಲ್ ಪೀಳಿಗೆ, ನಮ್ಮ ಪೀಳಿಗೆ
ಈ ವರ್ಷದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಧ್ಯೇಯ" ಡಿಜಿಟಲ್ ಪೀಳಿಗೆ. ನಮ್ಮ ಪೀಳಿಗೆ. ಸಾಂಕ್ರಾಮಿಕ ರೋಗವು ಜಗತ್ತನ್ನು ಲ್ಯಾಪ್‍ಟಾಪ್/ಮೊಬೈಲ್ ಪರದೆಯ ಮುಂದೆ ಕಲಿಯಲು ಮತ್ತು ಗಳಿಸಲು ಮಾಡಿದೆ. ಆದರೆ ಪ್ರಪಂಚದಾದ್ಯಂತ ಸುಮಾರು 2.2 ಬಿಲಿಯನ್ ಜನರು ಇನ್ನೂ ಇಂಟರ್ನೆಟ್ ಸಂಪರ್ಕವನ್ನು ಹೊಂದಿಲ್ಲ. ಇದು ಇಡೀ ದೇಶವನ್ನು ಹಿಂದಿಕ್ಕುವಂತೆ ಮಾಡಿದೆ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ.

ಇದನ್ನೂ ಓದಿ: ಸ್ಕ್ವಿಡ್‌ ಗೇಮ್‌ ಎಂದರೇನು? ನೆಟ್‌ಫ್ಲಿಕ್ಸ್‌ನಲ್ಲಿ ಅದರ ಹುಚ್ಚುತನದ ಜನಪ್ರಿಯತೆಗೆ ಕಾರಣವೇನು?

ಜಾಗತಿಕ ಮಟ್ಟದಲ್ಲಿ, ಇಂಟರ್ನೆಟ್ ಬಳಕೆದಾರರ ಲಿಂಗ ಅಂತರವು 2013ರಲ್ಲಿ 11 ಪ್ರತಿಶತದಿಂದ 2019ರಲ್ಲಿ 17 ಪ್ರತಿಶತಕ್ಕೆ ಏರಿದೆ. ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಶೇಕಡಾವಾರು ಸುಮಾರು 43 ಪ್ರತಿಶತದಷ್ಟಿದೆ. ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಜನರು ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಆದಾಯವನ್ನು ಗಳಿಸಲು ತಂತ್ರಜ್ಞಾನವನ್ನು ವಿವಿಧ ರೀತಿಯಲ್ಲಿ ಬಳಸುತ್ತಿದ್ದಾರೆ.
First published: