Explained: ಆಲ್ಬಿನಿಸಂ ಜಾಗೃತಿ ದಿನ-2022: ಈ ಸಮಸ್ಯೆಯಿಂದ ಬಳಲುತ್ತಿರುವವರ ವಿರುದ್ಧ ತಾರತಮ್ಯ ಬೇಡ, ಆತ್ಮಸ್ಥೈರ್ಯ ಇರಲಿ

ವಾರ್ಷಿಕವಾಗಿ ಜೂನ್ 13 ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನ (IAAD), ಆಲ್ಬಿನಿಸಂ ಹೊಂದಿರುವ ಜನರ ಮಾನವ ಹಕ್ಕುಗಳ ಪ್ರಾಮುಖ್ಯತೆ ಮತ್ತು ಆಚರಣೆಯನ್ನು ಪ್ರತಿನಿಧಿಸುತ್ತದೆ. ಆಲ್ಬಿನಿಸಂ ಜಾಗೃತಿ ದಿನ 2022ರಂದು ಇನ್ನಷ್ಟು ಈ ಕುರಿತು ತಿಳಿದುಕೊಳ್ಳೋಣ.

ಆಲ್ಬಿನಿಸಂ ಜಾಗೃತಿ ದಿನ-2022

ಆಲ್ಬಿನಿಸಂ ಜಾಗೃತಿ ದಿನ-2022

  • Share this:

ಬಿಳಿ ಚರ್ಮ, ಕೂದಲು ಮತ್ತು ಬಣ್ಣ ರಹಿತ ಕಣ್ಣುಗಳುಳ್ಳ ಜನರನ್ನು ನೀವು ಸಾಮಾನ್ಯವಾಗಿ ನೋಡಿರುತ್ತೀರಿ. ಆಲ್ಬಿನಿಸಂ (Albinism) ಎಂಬ ಸಾಂಕ್ರಾಮಿಕವಲ್ಲದ ಕಾಯಿಲೆಗೆ (Disease) ತುತ್ತಾದ ಬಹುತೇಕರು ಈ ಸಮಸ್ಯೆಗೆ ಒಳಗಾಗಿರುತ್ತಾರೆ. ಸಮಾಜದಲ್ಲಿ ಇವರನ್ನು ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ. ಇಂತಹವರನ್ನು ಸಹ ಸಮಾನರು, ಅವರು ನಮ್ಮಂತೆಯೇ ಮನುಷ್ಯರು ಎಂಬ ಜನಜಾಗೃತಿ ಮೂಡಿಸಲು ಪ್ರತಿದಿನ ಜೂನ್ 13ರಂದು ಅಂತರರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನ (IAAD)ವನ್ನು ಆಚರಿಸಲಾಗುತ್ತದೆ. ವಾರ್ಷಿಕವಾಗಿ ಜೂನ್ 13 ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನ (IAAD), ಆಲ್ಬಿನಿಸಂ ಹೊಂದಿರುವ ಜನರ ಮಾನವ ಹಕ್ಕುಗಳ (Human rights) ಪ್ರಾಮುಖ್ಯತೆ ಮತ್ತು ಆಚರಣೆಯನ್ನು ಪ್ರತಿನಿಧಿಸುತ್ತದೆ. ಆಲ್ಬಿನಿಸಂ ಜಾಗೃತಿ ದಿನ 2022ರಂದು ಇನ್ನಷ್ಟು ಈ ಕುರಿತು ತಿಳಿದುಕೊಳ್ಳೋಣ.


ಏನಿದು ಆಲ್ಬಿನಿಸಂ ಸಮಸ್ಯೆ?
ಆಲ್ಬಿನಿಸಂ ಒಂದು ಸಾಂಕ್ರಾಮಿಕವಲ್ಲದ, ತಳೀಯವಾಗಿ ಆನುವಂಶಿಕವಾಗಿ ಪಡೆದ ಕಾಯಿಲೆಯಾಗಿದ್ದು, ಇದು ಚರ್ಮ, ಕಣ್ಣುಗಳು ಮತ್ತು ಕೂದಲಿನಲ್ಲಿ ಮೆಲನಿನ್ ಕೊರತೆಗೆ ಕಾರಣವಾಗುತ್ತದೆ. ಇದರಿಂದಾಗಿ ಅವರ ಚರ್ಮ, ಕೂದಲು, ಕಣ್ಣುಗಳು ಎಲ್ಲಾವೂ ಒಂದೇ ರೀತಿ ಪ್ರಕಾಶಮಾನವಾದ ಅಥವಾ ಬಣ್ಣರಹಿತವಾಗಿರುತ್ತದೆ. ಈ ಕಾರಣದಿಂದಾಗಿ, ಆಲ್ಬಿನಿಸಂ ಹೊಂದಿರುವ ಜನರು ಸಾಮಾಜಿಕ ಮತ್ತು ಜೈವಿಕ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಪಿಗ್ಮೆಂಟೇಶನ್‌ನಲ್ಲಿನ ಈ ತೀವ್ರವಾದ ವ್ಯತ್ಯಾಸಕ್ಕೆ ಒಳಗಾಗುವ ಜನರು ಚರ್ಮದ ಕ್ಯಾನ್ಸರ್‌ಗೆ ಗುರಿಯಾಗುವ ಸಾಧ್ಯತೆಗಳಿವೆ. ಕಣ್ಣುಗಳಲ್ಲಿ ಮೆಲನಿನ್ ಕೊರತೆಯಿಂದಾಗಿ, ಅನೇಕ ಜನರು ಸಾಮಾನ್ಯವಾಗಿ ಶಾಶ್ವತ ದೃಷ್ಟಿಹೀನತೆಯನ್ನು ಸಹ ಹೊಂದಬಹುದು ಎನ್ನುತ್ತಾರೆ ತಜ್ಞರು.


ಇದನ್ನೂ ಓದಿ: Ancovax: ಪ್ರಾಣಿಗಳಿಗೂ ಬಂತು ಭಾರತದ ಮೊದಲ ಕೋವಿಡ್-19 ಲಸಿಕೆ; ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ವಿವರ

ಇದರ ಜೊತೆಗೆ ಆಲ್ಬಿನಿಸಂ ಕಾಯಿಲೆಗೆ ತುತ್ತಾದ ಜನರನ್ನು ಸಮಾಜದಲ್ಲಿ ನೋಡುವ ದೃಷ್ಟಿಕೋನವೇ ವಿಭಿನ್ನ. ಗಣನೀಯ ಪ್ರಮಾಣದ ತಾರತಮ್ಯವು ಆಲ್ಬಿನಿಸಂಗೆ ಒಳಗಾದವರನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದೆ. ಈ ಸ್ಥಿತಿಯ ತಿಳುವಳಿಕೆಯ ಕೊರತೆಯಿಂದಾಗಿ, ಆಲ್ಬಿನಿಸಂನೊಂದಿಗಿನ ಜನರು ಸಾಮಾಜಿಕವಾಗಿ ಬಹಳ ಬಳಲುತ್ತಿದ್ದಾರೆ ಮತ್ತು ಅಂಗವೈಕಲ್ಯದ ಆಧಾರದ ಮೇಲೆ ಸೇರಿದಂತೆ ಒಂದಲ್ಲ ಒಂದು ರೀತಿಯ ತಾರತಮ್ಯವನ್ನು ಇವರು ಎದುರಿಸುತ್ತಿದ್ದಾರೆ.


ಇಂಟರ್ನ್ಯಾಷನಲ್ ಅಲ್ಬಿನಿಸಂ ಜಾಗೃತಿ ದಿನ 2022: ಥೀಮ್
ಈ ವರ್ಷದ ಅಂತರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನದ ಥೀಮ್ "ನಮ್ಮ ಧ್ವನಿಯನ್ನು ಕೇಳುವಲ್ಲಿ ಯುನೈಟೆಡ್" ಆಗಿದೆ. ಇವರ ಬಗೆಗಿನ ಧ್ವನಿಗಳನ್ನು ವರ್ಧಿಸುವ ಪ್ರಯತ್ನದಲ್ಲಿ ವಿಶ್ವಸಂಸ್ಥೆಯ ಪ್ರಕಾರ ಥೀಮ್ ಅನ್ನು ಆಯ್ಕೆಮಾಡಲಾಗಿದೆ, ಮತ್ತು ಆಲ್ಬಿನಿಸಂ ಹೊಂದಿರುವ ಜನರಿಗಾಗಿ ಮತ್ತು ಅವರಿಗೊಸ್ಕರ ಮಾಡುತ್ತಿರುವ ಕೆಲಸವನ್ನು ಎತ್ತಿ ತೋರಿಸುತ್ತದೆ. ಥೀಮ್ ಸಮುದಾಯದಲ್ಲಿ ಏಕತೆಯ ಪ್ರಜ್ಞೆಯನ್ನು ಸಹ ಬೆಂಬಲಿಸುತ್ತದೆ ಮತ್ತು ಅಲ್ಬಿನಿಸಂನೊಂದಿಗೆ ವಾಸಿಸುವ ಜನರ ವಿವಿಧ ಆವೃತ್ತಿಗಳ ಆಚರಣೆಯನ್ನು ಪ್ರತಿನಿಧಿಸುತ್ತದೆ.


ಇಂಟರ್ನ್ಯಾಷನಲ್ ಆಲ್ಬಿನಿಸಂ ಜಾಗೃತಿ ದಿನ: ಇತಿಹಾಸ
ಡಿಸೆಂಬರ್ 18, 2014 ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಅಂತರರಾಷ್ಟ್ರೀಯ ಆಲ್ಬಿನಿಸಂ ಜಾಗೃತಿ ದಿನವನ್ನು ಘೋಷಿಸಲಾಯಿತು. ಜೂನ್ 13 ಅನ್ನು IAAD ಎಂದು ಆಚರಿಸಲು ನಿರ್ಧರಿಸಲಾಯಿತು ಮತ್ತು ಮೊದಲ ಆಚರಣೆಯನ್ನು 2015 ರಲ್ಲಿ ಮಾಡಲಾಯಿತು.


ಆಲ್ಬಿನಿಸಂ ಜಾಗೃತಿ ದಿನದ ಮಹತ್ವ
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಈ ನಿರ್ಣಯವನ್ನು ಅಂಗೀಕರಿಸಿತು ಮತ್ತು ಆಲ್ಬಿನಿಸಂ ಹೊಂದಿರುವ ಜನರ ವಿರುದ್ಧ ಶೋಷಣೆ ಮತ್ತು ತಾರತಮ್ಯವನ್ನು ತಡೆಗಟ್ಟಲು ತನ್ನ ದೃಢವಾದ ಹೆಜ್ಜೆಯನ್ನು ಈ ದಿನದಿಂದ ಪ್ರಾರಂಭಿಸಿತು. ಅಲ್ಬಿನಿಸಂ ಮತ್ತು ಅದರೊಂದಿಗೆ ವಾಸಿಸುವ ಜನರ ಜೀವನದ ಅಪಾಯಗಳು ಮತ್ತು ಭವಿಷ್ಯದ ಹಾದಿಯನ್ನು ಜನರಿಗೆ ನೆನಪಿಸಲು ಈ ದಿನವನ್ನು ಕಡ್ಡಾಯಗೊಳಿಸಲಾಗಿದೆ.


ಇದನ್ನೂ ಓದಿ:  Explained: ಜಸ್ಟಿನ್ ಬೀಬರ್‌ಗೆ ಬಂದಿರುವ ರಾಮ್ಸೆ ಹಂಟ್​ ಸಿಂಡ್ರೋಮ್​ ಎಂದರೇನು? ಈ ಕಾಯಿಲೆಯ ಲಕ್ಷಣಗಳೇನು?

ಆಲ್ಬಿನಿಸಂ ಹೊಂದಿರುವ ವ್ಯಕ್ತಿಗಳ ದೈಹಿಕ ನೋಟವನ್ನು ಜನ ಪುರಾಣ, ಮೂಢನಂಬಿಕೆ ಜೊತೆ ಬೆಸೆಯುತ್ತಾರೆ. ಇದು ಆಲ್ಬಿನಿಸಂ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳ ಸಾಮಾಜಿಕ ಬಹಿಷ್ಕಾರ, ಕಳಂಕ ಮತ್ತು ತಾರತಮ್ಯಕ್ಕೆ ಕಾರಣವಾಗುತ್ತಿದೆ. ಇದಕ್ಕಂತಾನೇ ಸಮಾಜದಿಂದ ಈ ಎಲ್ಲಾ ರೀತಿಯ ತೊಡಕುಗಳನ್ನು ತೆಗೆದುಹಾಕಲು ಆಲ್ಬಿನಿಸಂ ಜಾಗೃತಿ ದಿನವನ್ನು ಜಾರಿ ಮಾಡಲಾಯಿತು.

Published by:Ashwini Prabhu
First published: