ಸರ್ಕಾರಿ ಕಚೇರಿಯಿಂದ ಯಾವುದೇ ದಾಖಲೆ ಪಡೆಯುವುದು ಎಷ್ಟೋ ಸಲ ನಮ್ಮ ತಾಳ್ಮೆಯನ್ನೇ ಪರೀಕ್ಷಿಸಿಬಿಡುತ್ತೆ. ಆದರೆ ಈಗ ಎಲ್ಲವೂ ಡಿಜಿಟಲ್ಮಯವಾಗಿರೋದರಿಂದ ಸುಲಭವಾಗಿ ದಾಖಲೆಗಳನ್ನು ಪಡೆಯಬಹುದು. ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳಿಗಾಗಿ ನೋಂದಾಯಿಸಿಕೊಳ್ಳಬಹುದು. ಪ್ಯಾನ್ ಪರಿಶೀಲನೆಯನ್ನು ಆನ್‌ಲೈನ್‌ನಲ್ಲಿಯೇ ಮಾಡಬಹುದು. ಹಾಗೆ ಮಾಡಲು ನೀವು ಮಾಡಬೇಕಾಗಿರುವುದು https://www.incometax.gov.in/iec/foportal/ ಗೆ ಭೇಟಿ ನೀಡಿ ಮತ್ತು ಮುಖಪುಟದಲ್ಲಿ ನಿಮ್ಮ ಪ್ಯಾನ್ ಪರಿಶೀಲಿಸಿ ಆಯ್ಕೆಯನ್ನು ಹುಡುಕಿ. ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮತ್ತು ಹೆಸರಿನಂತಹ ನಿಮ್ಮ ಪ್ಯಾನ್ ವಿವರಗಳನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.
ಆದಾಯ ತೆರಿಗೆ ಇಲಾಖೆಯು PAN ಗೆ ಅರ್ಜಿ ಸಲ್ಲಿಸುವುದು ತುಂಬಾ ಸುಲಭ ಎಂದು ತಿಳಿಸಿದೆ. ಆಧಾರ್ ಕಾರ್ಡ್ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿರುವವರು ತಮ್ಮ ಅಧಿಕೃತ ಪ್ಯಾನ್ ಅಥವಾ ಇ-ಪ್ಯಾನ್ ಅನ್ನು 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಪಡೆಯಬಹುದು. ಇ-ಪ್ಯಾನ್ ಎನ್ನುವುದು ಡಿಜಿಟಲ್ ಸಹಿ ಮಾಡಿದ ಪ್ಯಾನ್ ಕಾರ್ಡ್ ಆಗಿದ್ದು, ಅದು ಆಧಾರ್ ಕಾರ್ಡ್‌ನ ಇ-ಕೆವೈಸಿ ಡೇಟಾವನ್ನು ಆಧರಿಸಿದೆ. ಆಧಾರ್ ಕಾರ್ಡ್ ಹೊಂದಿರುವವರು ಮಾತ್ರ ಈ ಸೌಲಭ್ಯವನ್ನು ಪಡೆಯಬಹುದು ಎಂಬುದನ್ನು ಗಮನಿಸಬೇಕು. ಇ-ಪ್ಯಾನ್ ಅನ್ನು ಪಿಡಿಎಫ್ ರೂಪದಲ್ಲಿ ನೀಡಲಾಗುತ್ತದೆ. ಈ ವಿಧಾನವು ಸಮಯ ಉಳಿತಾಯ ಮಾತ್ರವಲ್ಲದೆ ಪರಿಸರ ಸ್ನೇಹಿಯಾಗಿದೆ. ಏಕೆಂದರೆ ಪ್ಲಾಸ್ಟಿಕ್ ಅಥವಾ ಕಾಗದದ ಇಲ್ಲಿ ಬಳಕೆ ಇಲ್ಲ.
ನಿಮ್ಮ ಇ-ಪ್ಯಾನ್‌ಗೆ ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ
ಹಂತ 1: ನಿಮ್ಮ ಆಯ್ಕೆಯ ಯಾವುದೇ ಇಂಟರ್ನೆಟ್ ಬ್ರೌಸರ್ ತೆರೆಯಿರಿ ಮತ್ತು https://www.incometax.gov.in/iec/foportal/ ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ ಇ-ಪ್ಯಾನ್‌ಗೆ ಅರ್ಜಿ ಸಲ್ಲಿಸಲು ಸಂಬಂಧಿಸಿದ ಆಯ್ಕೆಯನ್ನು ನೀವು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ
ಹಂತ 3: ಹೊಸ ವಿಂಡೋಗೆ ತೆರೆದುಕೊಳ್ಳತ್ತದೆ, ಅದರಲ್ಲಿ ನೀವು ಹೊಸ ಇ-ಪ್ಯಾನ್ ಪಡೆಯಿರಿ ಎಂದು ಬರೆದಿರುವ ಹೈಪರ್‌ಲಿಂಕ್ ಅನ್ನು ನೋಡುತ್ತೀರಿ. ಅದನ್ನು ಕ್ಲಿಕ್ ಮಾಡಿ
ಹಂತ 4: ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ನಮೂದಿಸಲು ನಿಮ್ಮನ್ನು ಕೇಳುವ ಹೊಸ ಪುಟವು ತೆರೆಯುತ್ತದೆ. ನಿಮ್ಮ ವಿವರಗಳನ್ನು ಪರಿಶೀಲಿಸಲು ನೀವು ಒಟಿಪಿಯನ್ನು ಸಹ ಪಡೆಯುತ್ತೀರಿ
ಹಂತ 5: ಸಬ್ಮಿಟ್ ಬಟನ್ನ ಒತ್ತಿ
ಇದನ್ನೂ ಓದಿ: Atal Pension Yojana: ತಿಂಗಳಿಗೆ ₹210 ಹೂಡಿಕೆ ಮಾಡಿದ್ರೆ 5,000 ರೂ. ಮಾಸಿಕ ಪಿಂಚಣಿ ಸಿಗುತ್ತೆ
ನಿಮ್ಮ ಇ-ಪ್ಯಾನ್ ಸ್ಥಿತಿಯನ್ನು ಪರಿಶೀಲಿಸಲು ಅಥವಾ ಡೌನ್‌ಲೋಡ್ ಮಾಡಲು ಈ ಹಂತಗಳನ್ನು ಅನುಸರಿಸಿ:
ಹಂತ 1: ವೆಬ್‌ಸೈಟ್‌ನ ಮುಖಪುಟಕ್ಕೆ ಹೋಗಿ, ಇ-ಪ್ಯಾನ್‌ಗೆ ಸಂಬಂಧಿಸಿದ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಹಂತ 2: ನಿಮ್ಮನ್ನು ಹೊಸ ವಿಂಡೋಗೆ ನಿರ್ದೇಶಿಸಲಾಗುವುದು, ಅದರಲ್ಲಿ ನೀವು ಚೆಕ್ ಸ್ಟೇಟಸ್/ ಡೌನ್‌ಲೋಡ್ ಪ್ಯಾನ್ ಅನ್ನು ಆಯ್ಕೆಯನ್ನು ನೋಡುತ್ತೀರಿ. ಅದನ್ನು ಕ್ಲಿಕ್ ಮಾಡಿ
ಹಂತ 3: ಹೊಸ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ನೋಂದಾಯಿತ ಸಂಖ್ಯೆಯ OTP ಯೊಂದಿಗೆ ನೀವು ಅದನ್ನು ಪರಿಶೀಲಿಸಿದ ನಂತರ ನಿಮ್ಮ PAN ನ ಸ್ಥಿತಿಯನ್ನು ನೀವು ತಿಳಿಯುವಿರಿ
ಹಂತ 4: ನಿಮ್ಮ ಇ-ಪ್ಯಾನ್ ಸಿದ್ಧವಾಗಿದ್ದರೆ, ನೀವು ಡಾಕ್ಯುಮೆಂಟ್ ಅನ್ನು ಡೌನ್‌ಲೋಡ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ