• Home
 • »
 • News
 • »
 • explained
 • »
 • Mamta Mohan Das: ತಮ್ಮ ಸೌಂದರ್ಯ ಕಳೆದುಕೊಳ್ತಾರಾ ಮಮತಾ ಮೋಹನ್ ದಾಸ್? ಏನಿದು ನಟಿಯನ್ನು ಕಾಡುತ್ತಿರುವ ಕಾಯಿಲೆ?

Mamta Mohan Das: ತಮ್ಮ ಸೌಂದರ್ಯ ಕಳೆದುಕೊಳ್ತಾರಾ ಮಮತಾ ಮೋಹನ್ ದಾಸ್? ಏನಿದು ನಟಿಯನ್ನು ಕಾಡುತ್ತಿರುವ ಕಾಯಿಲೆ?

ಗೂಳಿ ನಟಿಗೆ ಸಂಕಷ್ಟದ ಮೇಲೆ ಸಂಕಷ್ಟ

ಗೂಳಿ ನಟಿಗೆ ಸಂಕಷ್ಟದ ಮೇಲೆ ಸಂಕಷ್ಟ

ಕ್ಯಾನ್ಸರ್ (Cancer) ಗೆದ್ದು ಗುಣಮುಖರಾಗಿದ್ದ ಮಮತಾ ಇದೀಗ ವಿಟಿಲಿಗೊ (vitiligo - ತೊನ್ನು) ಕಾಯಿಲೆಯಿಂದ ಬಳಲುತ್ತಿರುವುದಾಗಿ ಸಾಮಾಜಿಕ ತಾಣದಲ್ಲಿ ಖಾತ್ರಿಪಡಿಸಿದ್ದಾರೆ. ಹಾಗಾದರೆ ಏನಿದು ವಿಚಿತ್ರ ಕಾಯಿಲೆ? ಇದರ ಪರಿಣಾಮಗಳೇನು? ಈ ಬಗ್ಗೆ ಇಲ್ಲಿದೆ ಮಾಹಿತಿ...

 • Share this:

  ಮಲಯಾಳಂ ಬೆಡಗಿ ಮಮತಾ ಮೋಹನ್‌ದಾಸ್ (Malayalam actress Mamta Mohandas) ಕನ್ನಡದಲ್ಲಿ ಸುದೀಪ್‌ಗೆ (Kichcha Sudeep) ನಾಯಕಿಯಾಗಿ ‘ಗೂಳಿ’ ಚಿತ್ರದಲ್ಲಿ ಅಭಿನಯಿಸಿದ್ದು ನೆನಪಿರಬಹುದು. ಕ್ಯಾನ್ಸರ್ (Cancer) ಗೆದ್ದು ಗುಣಮುಖರಾಗಿದ್ದ ಮಮತಾ ಇದೀಗ ವಿಟಿಲಿಗೊ (vitiligo - ತೊನ್ನು) ಕಾಯಿಲೆಯಿಂದ ಬಳಲುತ್ತಿರುವುದಾಗಿ ಸಾಮಾಜಿಕ ತಾಣದಲ್ಲಿ ಖಾತ್ರಿಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮಗಿರುವ ಕಾಯಿಲೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟಿ, “ಡಿಯರ್ ಸೂರ್ಯ, ನಾನು ಹಿಂದೆಂದಿಗಿಂತಲೂ ನಿನ್ನನ್ನು ಈಗ ಅಪ್ಪಿಕೊಳ್ಳಲು ಇಷ್ಟಪಡುತ್ತೇನೆ. ನಾನು ಬಣ್ಣ ಕಳೆದುಕೊಳ್ಳುತ್ತಿದ್ದೇನೆ. ನಿನ್ನ ಮೊದಲ ಕಿರಣಗಳನ್ನು ಆಸ್ವಾದಿಸಲು ಪ್ರತಿದಿನ ನಿನಗಿಂತ ಮೊದಲು ನಾನೇ ಏಳುತ್ತಿದ್ದೇನೆ. ನಿನಗೆ ನಾನೆಂದಿಗೂ ಕೃತಜ್ಞಳು” ಎಂದು ಬರೆದುಕೊಂಡಿದ್ದು ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.


  ಅಭಿಮಾನಿಗಳ ಹಾರೈಕೆ


  ಇನ್‌ಸ್ಟಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗೆ ತಮಗಿರುವ ಆಟೋಇಮ್ಯೂನ್ ಡಿಸೀಸ್ (ಸ್ವಯಂ ನಿರೋಧಕ ಕಾಯಿಲೆ), ವಿಟಿಲಿಗೊ (ತೊನ್ನು) ಎಂಬ ಹ್ಯಾಶ್ ಟ್ಯಾಗ್ ಅನ್ನು ಮಮತಾ ಸೇರಿಸಿದ್ದಾರೆ. ಕಾಯಿಲೆಗೆ ಮಮತಾ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಶೀಘ್ರ ಗುಣಮುಖರಾಗಲಿ ಎಂದು ಹಲವಾರು ಸ್ಟಾರ್ ನಟ-ನಟಿಯರು, ಅಭಿಮಾನಿಗಳು ಹಾರೈಸಿದ್ದಾರೆ.


  ಕ್ಯಾನ್ಸರ್ ಗೆದ್ದ ಧೈರ್ಯವಂತೆ


  ಸಮಂತಾ ರುತ್ ಪ್ರಭು ತಮಗಿರುವ ಮಯೋಸಿಟಿಸ್ ಕಾಯಿಲೆಯ ಕುರಿತು ತಾಣದಲ್ಲಿ ಇತ್ತೀಚೆಗೆ ತಾನೇ ಪೋಸ್ಟ್ ಮಾಡಿದ್ದರು ಹಾಗೂ ಚಿಕಿತ್ಸೆ ಪಡೆಯುತ್ತಿರುವುದಾಗಿ ಮಾಹಿತಿ ಹಂಚಿಕೊಂಡಿದ್ದರು. ಮಮತಾ ಕ್ಯಾನ್ಸರ್ ಗೆದ್ದಂತಹ ಧೈರ್ಯವಂತೆಯಾಗಿದ್ದು ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ತಮ್ಮ ವೃತ್ತಿಯತ್ತ ಮರಳಿದ್ದರು.


  ಇದನ್ನೂ ಓದಿ: Nepal Plane Crash: ವಿಮಾನಗಳಿಗೆ ಸುರಕ್ಷಿತವಲ್ಲವೇ ನೇಪಾಳ ಹವಾಮಾನ? ಪದೇ ಪದೇ ಅಪಘಾತಕ್ಕೆ ಕಾರಣವೇನು?


  ಏನಿದು ವಿಟಿಲಿಗೊ ಕಾಯಿಲೆ


  ಇದೀಗ ವಿಟಿಲಿಗೊ ಕಾಯಿಲೆಯ ಕುರಿತು ಪೋಸ್ಟ್ ಮಾಡಿದ್ದು, ತಾನು ಆದಷ್ಟು ಬೇಗ ಗುಣಮುಖರಾಗಿ ಚಿತ್ರರಂಗಕ್ಕೆ ಬರುವುದಾಗಿ ತಿಳಿಸಿದ್ದಾರೆ. ಈ ಕಾಯಿಲೆ ಇರುವವರು ತ್ವಚೆಯ ಬಣ್ಣವನ್ನು ಕಳೆದುಕೊಳ್ಳುತ್ತಾರೆ. ಮೆಲಟೋನಿನ್ ಅನ್ನು ಉತ್ಪಾದಿಸುವ ಚರ್ಮದ ಕೋಶಗಳನ್ನು ಸಾಯುವಂತೆ ಮಾಡುತ್ತದೆ ಅಥವಾ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.


  ಅನುವಂಶಿಕ ಕಾಯಿಲೆಯಾ?


  ಸ್ವಯಂ ನಿರೋಧಕ ಕಾಯಿಲೆಯಾಗಿರುವ ವಿಟಲಿಗೊ ಅನುವಂಶಿಕ ಹಾಗೂ ಕುಟುಂಬದಿಂದಲೂ ಬರುತ್ತದೆ. ಭಾವನಾತ್ಮಕ ಯಾತನೆ, ಕೆಲವು ರಾಸಾಯನಿಕಗಳ ಬಳಕೆಯಿಂದ ವಿಟಲಿಗೊ ವಿಸ್ತರಿಸಬಹುದು ಅಥವಾ ಈ ಕಾಯಿಲೆಯನ್ನು ಇನ್ನಷ್ಟು ಹದಗೆಡಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.


  ಇದು ಮಾರಣಾಂತಿಕವೇ?


  ಈ ಸ್ಥಿತಿಯು ಮಾರಣಾಂತಿಕವಲ್ಲ ಅಥವಾ ಸಾಂಕ್ರಾಮಿಕವಲ್ಲ. ಜಾಗತಿಕವಾಗಿ 1% ದಷ್ಟು ಜನರು ವಿಟಲಿಗೊವನ್ನು ಹೊಂದಿದ್ದಾರೆ ಇದು ಸಾಮಾನ್ಯವಾಗಿ ಕೈಗಳು, ಪಾದ, ತೋಳು, ಮುಖ ಹಾಗೂ ಕಾಲುಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೈದರಾಬಾದ್‌ನ ಯಶೋದಾ ಹಾಸ್ಪಿಟಲ್ಸ್‌ನ ಹಿರಿಯ ಸಲಹೆಗಾರ ಮತ್ತು ವೈದ್ಯರಾದ ಡಾ ದಿಲೀಪ್ ಗುಡೆ ತಿಳಿಸಿದ್ದಾರೆ.


  ಕಾಯಿಲೆಯ ಗುಣಲಕ್ಷಣಗಳೇನು?


  ಈ ಕಾಯಿಲೆಯ ಗುಣಲಕ್ಷಣಗಳೆಂದರೆ ಎರಡೂ ಕೈಗಳು ಅಥವಾ ಕಾಲುಗಳಲ್ಲಿ ಒಂದೇ ರೀತಿಯ ಬಿಳಿ ತೇಪೆಗಳು ಕಂಡುಬರುವುದಾಗಿದೆ. ಹೆಚ್ಚು ಸಾಮಾನ್ಯವಾಗಿ ಬಣ್ಣ ಅಥವಾ ವರ್ಣದ್ರವ್ಯದ ತ್ವರಿತ ನಷ್ಟವುಂಟಾಗುತ್ತದೆ. ಈ ತೇಪೆಗಳು ದೇಹದ ಭಾಗವನ್ನು ಆಕ್ರಮಿಸಬಹುದು ಎಂಬುದು ದಿಲೀಪ್ ಹೇಳಿಕೆಯಾಗಿದೆ.


  ತ್ವಚೆಯಲ್ಲಿ ವರ್ಣದ್ರವ್ಯ ಕಳೆದುಕೊಳ್ಳುವ ಭಾಗಗಳಲ್ಲಿ ಕೂದಲು ಬಿಳಿಯಾಗುತ್ತದೆ ಅಂತೆಯೇ ನೆತ್ತಿ, ಹುಬ್ಬು, ಕಣ್ರೆಪ್ಪೆ, ಗಡ್ಡ ಹಾಗೂ ದೇಹದಲ್ಲಿ ಕೂದಲಿರುವ ಸ್ಥಳದಲ್ಲಿ ಎಲ್ಲಿಬೇಕಾದರೂ ಕಾಣಿಸಿಕೊಳ್ಳಬಹುದು ಎಂಬುದು ದಿಲೀಪ್ ಸೂಚನೆಯಾಗಿದೆ. ವಿಟಿಲಿಗೊ ಬಾಯಿ ಅಥವಾ ಮೂಗಿನ ಒಳಭಾಗದಂತಹ ಲೋಳೆಯ ಪೊರೆಗಳಲ್ಲಿ ಕೂಡ ಕಾಣಿಸಿಕೊಳ್ಳಬಹುದು ಎಂಬುದು ವೈದ್ಯ ದಿಲೀಪ್ ಹೇಳಿಕೆಯಾಗಿದೆ.


  ಇದನ್ನೂ ಓದಿ: Explainer: Covid-19 ಮೂಗಿನ ಲಸಿಕೆಯ ಪ್ರಯೋಜನಗಳು, ಅಡ್ಡಪರಿಣಾಮಗಳೇನು? ಲಸಿಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ಮಾಹಿತಿಗಳೇನು?


  ತಡೆಗಟ್ಟುವಿಕೆ ಹಾಗೂ ಚಿಕಿತ್ಸೆ ಹೇಗೆ?


  ವಿಟಿಲಿಗೊ ತಡೆಗಟ್ಟುವಿಕೆಗೆ ಸಂಪೂರ್ಣ ಚಿಕಿತ್ಸೆ ಇಲ್ಲ. ಈ ಚಿಕಿತ್ಸೆಯಲ್ಲಿ ವರ್ಣದ್ರವ್ಯವನ್ನು ಪುನರ್ ಉತ್ಪಾದಿಸುವುದು ಹಾಗೂ ತ್ವಚೆಯ ಮೇಲೆ ಈ ಕಾಯಿಲೆಯ ಅಂಶಗಳು ಪ್ರಭಾವ ಬೀರದಂತೆ ತಡೆಗಟ್ಟುವುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದಷ್ಟು ಸೂರ್ಯನ ಪ್ರಭಾವಿ ಕಿರಣಗಳಿಗೆ ಒಳಗಾಗದಂತೆ ಸಂರಕ್ಷಿಸಿಕೊಳ್ಳುವುದು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ ಎಂದು ವೈದ್ಯರಾದ ದಿಲೀಪ್ ಕೆಲವೊಂದು ಚಿಕಿತ್ಸಾ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

  First published: