Yashwant Sinha: ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಯಶ್ವಂತ್ ಸಿನ್ಹಾ ಹೆಜ್ಜೆ ಗುರುತು

ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸೋದು ಖಚಿತವಾಗಿದೆ. ಹಾಗಿದ್ರೆ ಯಶ್ವಂತ್ ಸಿನ್ಹಾ ಯಾರು? ಅವರ ಹಿನ್ನೆಲೆ ಏನು? ರಾಜಕೀಯದಲ್ಲಿ ಅವರು ನಿರ್ವಹಿಸಿದ ಪಾತ್ರಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶ್ವಂತ್ ಸಿನ್ಹಾ

ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಯಶ್ವಂತ್ ಸಿನ್ಹಾ

  • Share this:
ಭಾರತದ ರಾಷ್ಟ್ರಪತಿ ಚುನಾವಣೆ (Presidential Election Of India) ರಂಗೇರಿದೆ. ಬಿಜೆಪಿ ಅಭ್ಯರ್ಥಿಯನ್ನು (BJP Candidate) ಸೋಲಿಸಲೇ ಬೇಕು ಅಂತ ಪಣತೊಟ್ಟಿದ್ದ ವಿಪಕ್ಷಗಳೆಲ್ಲ (Opposition Party) ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದ್ದವು. ಎನ್‌ಸಿಪಿ (NCP) ವರಿಷ್ಠ ಶರದ್ ಪವಾರ್ (Sharad Pawar) ಅವರನ್ನು ಕಣಕ್ಕಿಳಿಸಲು ವೇದಿಕೆ ಸಿದ್ಧವಾಗಿತ್ತು. ಆದರೆ ಬಹುಮತವಿರುವ ಬಿಜೆಪಿ ಎದುರು ಸೋಲು ಖಚಿತ ಎಂದುಕೊಂಡ ಶರದ್ ಪವಾರ್ ಸ್ಪರ್ಧೆಗೆ ಆಸಕ್ತಿ ತೋರಲಿಲ್ಲ. ಇದಾದ ಮೇಲೆ ಮಹಾತ್ಮಾ ಗಾಂಧೀಜಿ (Mahatma Gandhiji) ಮೊಮ್ಮಗ (Son-in-Law) ಗೋಪಾಲ ಕೃಷ್ಣ ಗಾಂಧಿಯವರನ್ನು (Gopalkrishna Gandhi) ಮನವೊಲಿಸಿದರೂ, ಅವರು ಒಲವು ತೋರಿಲ್ಲ. ಬಳಿಕ ಕರ್ನಾಟಕ (Karnataka) ಮೂಲದವರೇ ಆದ, ಮಾಜಿ ಪ್ರಧಾನಿ (Former Prime Minister) ಎಚ್‌ಡಿ ದೇವೇಗೌಡ (HD Deve Gowda) ಅವರ ಹೆಸರೂ ಪ್ರಸ್ತಾಪ ಆಯ್ತು. ಅಂತಿಮವಾಗಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ (Yashwant Sinha) ರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸೋದು ಖಚಿತವಾಗಿದೆ. ಹಾಗಿದ್ರೆ ಯಶ್ವಂತ್ ಸಿನ್ಹಾ ಯಾರು? ಅವರ ಹಿನ್ನೆಲೆ ಏನು? ರಾಜಕೀಯದಲ್ಲಿ ಅವರು ನಿರ್ವಹಿಸಿದ ಪಾತ್ರಗಳೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಓದಿ…

ಬಿಹಾರ ಮೂಲದ ಯಶ್ವಂತ್ ಸಿನ್ಹಾ

1937ರಲ್ಲಿ ಯಶ್ವಂತ್ ಸಿನ್ಹಾ ಅವರು ಬಿಹಾರದ ಪಾಟ್ನಾದಲ್ಲಿ ಕಾಯಸ್ಥ ಕುಟುಂಬದಲ್ಲಿ ಜನಿಸಿದರು.  ಅವರು 1958 ರಲ್ಲಿ ಪೊಲಿಟಿಕಲ್ ಸೈನ್ಸ್ ವಿಷಯದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಅವರು 1962 ರವರೆಗೆ ಪಾಟ್ನಾ ವಿವಿ ಪ್ರಾದ್ಯಾಪಕರಾಗಿದ್ದರು. ಬಳಿಕ ಐಎಎಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದವರು.

ಸರ್ಕಾರಿ ಸೇವೆಯಿಂದ ರಾಜಕೀಯಕ್ಕೆ

1960 ರಲ್ಲಿ ಭಾರತೀಯ ಆಡಳಿತ ಸೇವೆಗೆ (IAS) ಸೇರಿದರು ಮತ್ತು ಅವರ ಸೇವಾ ಅವಧಿಯಲ್ಲಿ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು. ಅವರು 1984 ರಲ್ಲಿ ಸೇವೆಗೆ ರಾಜೀನಾಮೆ ನೀಡಿದರು. ಬಳಿಕ ಸಿನ್ಹಾ ಅವರು 1984 ರಲ್ಲಿ ಜನತಾ ಪಕ್ಷದೊಂದಿಗೆ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 1992 ರಿಂದ 2018 ರವರೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾಗಿದ್ದರು. 2021 ರಲ್ಲಿ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರಿದರು ಮತ್ತು ಅದರ ಸದಸ್ಯರಾಗಿದ್ದರು.

ಇದನ್ನೂ ಓದಿ: Presidential Election: ರಾಷ್ಟ್ರಪತಿ ಚುನಾವಣೆ ನಡೆಯುವುದು ಹೇಗೆ? ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುವವರು ಯಾರು?

ರಾಜಕೀಯದಲ್ಲಿ ಅಪಾರ ಅನುಭವ

84 ವರ್ಷ ವಯಸ್ಸಿನ ಯಶ್ವಂತ್ ಸಿನ್ಹಾ  ರಾಜಕೀಯ ಜೀವನದಲ್ಲಿ ವಿವಿಧ ಹಂತಗಳಲ್ಲಿ ಕೇಂದ್ರ ಹಣಕಾಸು ಸಚಿವರಾಗಿ, ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಕೊನೆಯದಾಗಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಜುಲೈ 2002 ರಿಂದ ಮೇ 2004 ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು.

ಅಡ್ವಾಣಿ ಬೆಂಬಲದೊಂದಿಗೆ ಗೆಲುವು

1999ರಲ್ಲಿ ಹಜಾರಿಬಾಗ್‌ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಅವರು ಬಿಜೆಪಿಯಲ್ಲಿ ಎಲ್‌.ಕೆ.ಅಡ್ವಾಣಿ ಅವರ ಬೆಂಬಲ ಪಡೆದರು. 1999ರಲ್ಲಿ ಮತ್ತೆ ಕೇಂದ್ರದ ಹಣಕಾಸು ಸಚಿವ ಸ್ಥಾನ ಪಡೆದರು. 2001–02ರಲ್ಲಿ ರಾಷ್ಟ್ರದಾದ್ಯಂತ ಯುಟಿಐ ಹಗರಣವು ಸಂಚಲನ ಮೂಡಿಸುವವರೆಗೂ ಅವರು ಸಚಿವ ಸ್ಥಾನದಲ್ಲಿದ್ದರು. 2002ರಲ್ಲಿ ಹಣಕಾಸು ಸಚಿವ ಸ್ಥಾನದಿಂದ ಸಿನ್ಹಾ ಅವರನ್ನು ತೆರವುಗೊಳಿಸಿ, ಅವರಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಸ್ಥಾನ ನೀಡಲಾಯಿತು.

2004ರಲ್ಲಿ ರಾಜಕೀಯಕ್ಕೆ ನಿವೃತ್ತಿ

2004ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡರು. ಬಳಿಕ 2009ರಲ್ಲಿ ಮತ್ತೆ ಲೋಕಸಭೆಗೆ ಪ್ರವೇಶ ಪಡೆದರು. ಐಎಎಸ್‌ ಅಧಿಕಾರಿಯಾಗಿದ್ದ ಅವರು 1984ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಅದಕ್ಕೂ ಮುನ್ನ 1970ರ ದಶಕದಲ್ಲಿ ಬಿಹಾರ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್‌ ಅವರಿಗೆ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ: Explained: ರಾಜ್ಯಸಭಾ ಚುನಾವಣೆ ನಡೆಯುವುದು ಹೇಗೆ? ಇಲ್ಲಿದೆ ಓದಿ ಪಿನ್ ಟು ಪಿನ್ ಮಾಹಿತಿ

 ಮೋದಿಯವರ ಕಡು ವಿರೋಧಿ

ಸಿನ್ಹಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರದ ತೀವ್ರ ಟೀಕಾಕಾರರಾಗಿದ್ದಾರೆ. ಹಲವಾರು ವಿಷಯಗಳಲ್ಲಿ ಮೋದಿ ಸರ್ಕಾರ ಮತ್ತು ಬಿಜೆಪಿಯೊಂದಿಗಿನ ಅವರ ಭಿನ್ನಾಭಿಪ್ರಾಯವು ಪಕ್ಷಕ್ಕೆ ರಾಜೀನಾಮೆ ನೀಡಲು ಮತ್ತು ನಂತರ ಟಿಎಂಸಿಗೆ ಪ್ರವೇಶಿಸಲು ಕಾರಣವಾಯಿತು.
Published by:Annappa Achari
First published: