ಕಳೆದ ಎರಡು-ಮೂರು ತಿಂಗಳುಗಳಿಂದ ಭಾರತದಲ್ಲಿ(India) ನಿರಂತರ ಕೆಮ್ಮು (Cough), ಕೆಲವೊಮ್ಮೆ ಜ್ವರದ (Fever) ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಾವು ನೋಡಿರುತ್ತೇವೆ. ಇದಕ್ಕೆಲ್ಲಾ ಇನ್ಫ್ಲುಯೆನ್ಜಾ ಎ ಉಪ ಪ್ರಕಾರವಾದ ಎಚ್3ಎನ್2 (H3N2) ಕಾರಣ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR- ಐಸಿಎಂಆರ್) ವಿಜ್ಞಾನಿಗಳು ಹೇಳಿದ್ದಾರೆ. ಇತರ ಉಪ ಪ್ರಕಾರಗಳಿಗಿಂತ ಎಚ್3ಎನ್2 ಹೆಚ್ಚು ಆಸ್ಪತ್ರೆಗೆ ದಾಖಲಾಗಲು ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಐಸಿಎಂಆರ್ ವಿಜ್ಞಾನಿಗಳು ಸಾಬೂನು ಮತ್ತು ನೀರಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಬೇಕು, ಮನೆಯಿಂದ ಹೊರಗೆ ಹೋದರೆ ಮಾಸ್ಕ್ ಧರಿಸಬೇಕು ಮತ್ತು ಜನದಟ್ಟಣೆಯ ಸ್ಥಳಗಳಿಂದ ಆದಷ್ಟು ದೂರವಿರಬೇಕು, ಸೀನುವಾಗ ಮತ್ತು ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು, ಕೈಯಿಂದ ಕಣ್ಣು ಮತ್ತು ಮೂಗನ್ನು ಮುಟ್ಟಿಕೊಳ್ಳಬಾರದು, ಸಾಕಷ್ಟು ದ್ರವ ಪದಾರ್ಥಗಳನ್ನು ತೆಗೆದುಕೊಳ್ಳಬೇಕು ಮತ್ತು ಜ್ವರ ಮತ್ತು ಮೈಕೈನೋವಿಗೆ ಪ್ಯಾರಸಿಟಮಾಲ್ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಆಸ್ಪತ್ರೆಗೆ ದಾಖಲಾದ ರೋಗಿಗಳು ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರಂತೆ
ಐಸಿಎಂಆರ್ ಪ್ರಕಾರ, ಆಸ್ಪತ್ರೆಗೆ ದಾಖಲಾದ ಎಚ್3ಎನ್2 ರೋಗಿಗಳಲ್ಲಿ, 92 ಪ್ರತಿಶತ ರೋಗಿಗಳಿಗೆ ಜ್ವರ, 86 ಪ್ರತಿಶತ ಕೆಮ್ಮು, 27 ಪ್ರತಿಶತ ಉಸಿರಾಟದ ತೊಂದರೆ, 16 ಪ್ರತಿಶತ ಉಬ್ಬಸ ಇರುವುದು ಕಂಡು ಬಂದಿದೆ. ಹೆಚ್ಚುವರಿಯಾಗಿ, ಐಸಿಎಂಆರ್ ಅಂತಹ 16 ಪ್ರತಿಶತ ರೋಗಿಗಳಿಗೆ ನ್ಯುಮೋನಿಯಾ ಇದೆ ಎಂದು ಕಂಡು ಹಿಡಿದಿದೆ.
"ಎಚ್3ಎನ್2 ನಿಂದ ಉಂಟಾಗುವ ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿರುವ ಸುಮಾರು 10 ಪ್ರತಿಶತ ರೋಗಿಗಳಿಗೆ ಆಮ್ಲಜನಕದ ಅಗತ್ಯವಿದೆ ಮತ್ತು 7 ಪ್ರತಿಶತ ರೋಗಿಗಳಿಗೆ ಐಸಿಯು ಆರೈಕೆಯ ಅಗತ್ಯವಿದೆ" ಎಂದು ಐಸಿಎಂಆರ್ ಹೇಳಿದೆ.
ಇದನ್ನೂ ಓದಿ: Explained: ದೇಶದ 131 ನಗರಗಳ 'ಉಸಿರಿನಲ್ಲಿದೆ' ವಿಷ, ಅತ್ಯಂತ ಕಲುಷಿತ ನಗರಗಳ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ!
ನೀವು ಗಮನಿಸಬೇಕಾದ ರೋಗ ಲಕ್ಷಣಗಳು:
ಮಾಡಬೇಕಾದ ಕೆಲಸಗಳು
ದೇಶಾದ್ಯಂತ ಕೆಮ್ಮು, ಶೀತ ಮತ್ತು ವಾಕರಿಕೆ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಪ್ರತಿಜೀವಕಗಳನ್ನು ವಿವೇಚನೆಯಿಲ್ಲದೆ ಬಳಸದಂತೆ ಐಎಂಎ ಸಲಹೆ ನೀಡಿದೆ.
ಇದನ್ನೂ ಓದಿ: Adenovirus: ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಅಡೆನೊ ವೈರಸ್: ಏನಿದು ಹೊಸ ಸೋಂಕು?
"ಇದೀಗ, ಜನರು ಅಜಿಥ್ರೊಮೈಸಿನ್ ಮತ್ತು ಅಮೋಕ್ಸಿಕ್ಲಾವ್ ಮುಂತಾದ ಪ್ರತಿಜೀವಕಗಳನ್ನು ಅವುಗಳ ಡೋಸ್ ಗಳನ್ನು ಲೆಕ್ಕಿಸದೆಯೇ ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ.
ಇದು ಪ್ರತಿಜೀವಕ ಪ್ರತಿರೋಧಕ್ಕೆ ಕಾರಣವಾಗುವುದರಿಂದ ಇದನ್ನು ತೆಗೆದುಕೊಳ್ಳಬಾರದು. ಪ್ರತಿಜೀವಕಗಳ ನಿಜವಾದ ಬಳಕೆ ಇದ್ದಾಗಲೆಲ್ಲಾ, ಪ್ರತಿರೋಧದಿಂದಾಗಿ ಅವು ಕಾರ್ಯನಿರ್ವಹಿಸುವುದಿಲ್ಲ" ಎಂದು ಐಎಂಎ ಹೇಳಿಕೆಯಲ್ಲಿ ತಿಳಿಸಿದೆ.
ಅಮೋಕ್ಸಿಸಿಲಿನ್, ನಾರ್ಫ್ಲೋಕ್ಸಾಸಿನ್, ಒಪ್ರೊಫ್ಲೋಕ್ಸಾಸಿನ್, ಒಫ್ಲೋಕ್ಸಾಸಿನ್ ಮತ್ತು ಲೆವೊಫ್ಲೋಕ್ಸಾಸಿನ್ ಹೆಚ್ಚು ದುರ್ಬಳಕೆಯಾಗಿರುವ ಪ್ರತಿಜೀವಕಗಳಾಗಿವೆ ಎಂದು ಹೇಳಲಾಗಿದೆ.
ಯಾರು ಹೆಚ್ಚು ಅಪಾಯದಲ್ಲಿದ್ದಾರೆ?
ವಾಯು ಮಾಲಿನ್ಯದಿಂದಾಗಿ ವೈರಲ್ ಪ್ರಕರಣಗಳು ಹೆಚ್ಚಾಗಿವೆ ಎಂದು ಐಎಂಎಯ ಸೂಕ್ಷ್ಮಜೀವಿ ವಿರೋಧಿ ಪ್ರತಿರೋಧದ ಸ್ಥಾಯಿ ಸಮಿತಿಯು ಹೇಳಿದೆ.
ಈ ಕಾಯಿಲೆಯು ಹೆಚ್ಚಾಗಿ 15 ವರ್ಷಕ್ಕಿಂತ ಕಡಿಮೆ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ ಮತ್ತು ಜ್ವರದ ಜೊತೆಗೆ ಮೇಲ್ಭಾಗದ ಉಸಿರಾಟದ ಸೋಂಕುಗಳಿಗೆ ಕಾರಣವಾಗುತ್ತದೆ.
ತಾಪಮಾನವು ಹೆಚ್ಚಾಗಲು ಪ್ರಾರಂಭಿಸುವುದರಿಂದ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರದಿಂದ ಸೋಂಕುಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ