• Home
 • »
 • News
 • »
 • explained
 • »
 • Explained: ಭಾರತದ ರಾಷ್ಟ್ರೀಯ ಲಾಂಛನ ಪತ್ತೆಹಚ್ಚಿದ್ದು ಜರ್ಮನ್ ಮೂಲದ ಎಂಜಿನಿಯರ್! ಕುತೂಹಲ ಹುಟ್ಟಿಸುತ್ತೆ ವಿವರ

Explained: ಭಾರತದ ರಾಷ್ಟ್ರೀಯ ಲಾಂಛನ ಪತ್ತೆಹಚ್ಚಿದ್ದು ಜರ್ಮನ್ ಮೂಲದ ಎಂಜಿನಿಯರ್! ಕುತೂಹಲ ಹುಟ್ಟಿಸುತ್ತೆ ವಿವರ

ರಾಷ್ಟ್ರೀಯ ಲಾಂಛನ

ರಾಷ್ಟ್ರೀಯ ಲಾಂಛನ

1921 ರಲ್ಲಿ ಓರ್ಟೆಲ್ ಭಾರತವನ್ನು ತೊರೆದಾಗ ಅವರು ಮಾಡಿದ ಕೆಲಸವು ಭಾರತದ ರಾಷ್ಟ್ರೀಯ ಗುರುತಿನ ಆಧಾರವನ್ನು ನೀಡುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ. ಓರ್ಟಲ್‌ ನಡೆಸಿದ ಉತ್ಖನನವು ಇಂದು ದೇಶದ ಅಭೂತಪೂರ್ವ ಪರಂಪರೆಗೆ ಸಾಕ್ಷಿಯಾಗಿದೆ.

 • Trending Desk
 • Last Updated :
 • Karnataka, India
 • Share this:

  ನಮ್ಮ ದೇಶದ ರಾಷ್ಟ್ರೀಯ ಗುರುತಿನ ಸಂಕೇತವಾದ ಭಾರತದ ರಾಷ್ಟ್ರೀಯ ಲಾಂಛನದ (National Emblem) ವಿನ್ಯಾಸವನ್ನು ಸಾರನಾಥದಲ್ಲಿ ಉತ್ಖನನ ಮಾಡಿದ ಅಶೋಕನ ಸ್ತಂಭದ ಸಿಂಹದ ಶಿರೋಭಾಗದಿಂದ (ಕಂಬ ಅಥವಾ ಸ್ಥಂಭದ ಶಿರದಲ್ಲಿನ ವಿಶಿಷ್ಟವಾದ, ವಿಶಾಲವಾದ ವಿಭಾಗ) ಅಳವಡಿಸಿಕೊಳ್ಳಲಾಗಿದೆ. ಭಾರತ ಗಣರಾಜ್ಯವಾದ ದಿನವಾದ 26 ಜನವರಿ 1950 ರಂದು, ದೇಶದ ರಾಷ್ಟ್ರೀಯ ಲಾಂಛನವಾಗಿ ಈ ಚಿಹ್ನೆಯನ್ನು ಅಳವಡಿಸಿಕೊಳ್ಳಲಾಯಿತು.  1904-05 ರ ಚಳಿಗಾಲದಲ್ಲಿ, ಉತ್ತರ ಪ್ರದೇಶದ ಸಾರನಾಥದಲ್ಲಿ ಪುರಾತತ್ತ್ವ ಶಾಸ್ತ್ರದ ಸ್ಥಳವನ್ನು ಉತ್ಖನನ ಮಾಡುವಾಗ  ಫ್ರೆಡ್ರಿಕ್ ಆಸ್ಕರ್ ಓರ್ಟೆಲ್ (Forgotten German Born Engineer) ಅಶೋಕ ಸ್ತಂಭದ ಸಿಂಹ ಶಿರೋಭಾಗವನ್ನು (India's National Emblem) ಪತ್ತೆಮಾಡಿದರು.


  ಓರ್ಟೆಲ್ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಿವಿಲ್ ಎಂಜಿನಿಯರ್ ಮತ್ತು ವಾಸ್ತುಶಿಲ್ಪಿಯಾಗಿ ಕೆಲಸ ಮಾಡಿದವರು ಎಂಬ ಕಾರಣಕ್ಕೆ ಭಾರತೀಯ ಕಲಾ ಇತಿಹಾಸ, ಪುರಾತತ್ತ್ವ ಶಾಸ್ತ್ರ ಮತ್ತು ರಾಷ್ಟ್ರೀಯ ಗುರುತಿಗೆ ಓರ್ಟೆಲ್‌ನ ಕೊಡುಗೆಗಳನ್ನು ಕಡೆಗಣಿಸಲಾಗಿದೆ. ಫ್ರೆಡ್ರಿಕ್ ಆಸ್ಕರ್ ಓರ್ಟೆಲ್ ಉತ್ಖನನದ ಸಮಯದ ಮಾಹಿತಿ ಇಲ್ಲಿದೆ.


  ರಾಷ್ಟ್ರೀಯ ಲಾಂಛನದ ವಿವರ
  ರಾಷ್ಟ್ರೀಯ ಲಾಂಛನದ ವಿವರವನ್ನು ನೋಡುವುದಾದರೆ ಮಧ್ಯದಲ್ಲಿ ಧರ್ಮಚಕ್ರವನ್ನು ಹೊಂದಿರುವ ಮಣಿ ಚೌಕದಲ್ಲಿ ಮೂರು ಸಿಂಹಗಳನ್ನು ಜೋಡಿಸಲಾಗಿದ್ದು, ಬಲಭಾಗದಲ್ಲಿ ಗೂಳಿ ಹಾಗೂ ಎಡಭಾಗದಲ್ಲಿ ಕೆನೆಯುತ್ತಿರುವ ಕುದುರೆಯನ್ನು ಕಾಣಬಹುದು.  ಬಲ ಮತ್ತು ಎಡಭಾಗದಲ್ಲಿರುವ ಧರ್ಮ ಚಕ್ರದ ಬಾಹ್ಯರೇಖೆಯನ್ನು ಜನವರಿ 26, 1950 ರಂದು ಭಾರತದ ರಾಜ್ಯ ಲಾಂಛನವಾಗಿ ಅಳವಡಿಸಿಕೊಳ್ಳಲಾಯಿತು. ಗಂಟೆ ಆಕಾರದ ಕಮಲವನ್ನು ಕೈಬಿಡಲಾಯಿತು. ಸಿಂಹದ ಶಿರದ ಕೆಳಗೆ ದೇವನಾಗರಿ ಲಿಪಿಯಲ್ಲಿ ಬರೆಯಲಾದ 'ಸತ್ಯಮೇವ ಜಯತೆ' ಎಂಬ ಧ್ಯೇಯವಾಕ್ಯವು ‘ಸತ್ಯವೊಂದೇ ಜಯಗಳಿಸುತ್ತದೆ’ ಎಂಬ ಸಾರವು ರಾಜ್ಯ ಲಾಂಛನದ ಭಾಗವಾಗಿದೆ.


  ಭಾರತವು ಏಕೆ ಇದೇ ಸಂಕೇತವನ್ನು ಅಳವಡಿಸಿಕೊಂಡಿತು?
  ಭಾರತ ಸ್ವಾತಂತ್ರ್ಯ ಹೊಂದುವ ಒಂದು ತಿಂಗಳ ಮೊದಲು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು 22 ಜುಲೈ 1947 ರಂದು ಸಂವಿಧಾನ ಸಭೆಗೆ ಕೆಲವೊಂದು ಮಾರ್ಪಾಡುಗಳನ್ನು ಸೂಚಿಸಿದ್ದರು.


  ಇತಿಹಾಸದಲ್ಲಿ ಅಶೋಕನ ಅವಧಿಯು ಮೂಲಭೂತವಾಗಿ ಭಾರತೀಯ ಇತಿಹಾಸದ ಅಂತರರಾಷ್ಟ್ರೀಯ ಅವಧಿ ಎಂಬುದಾಗಿ ನೆಹರು ಗುರುತಿಸಿದ್ದರು ಹಾಗೂ ವಿಶ್ವ ಇತಿಹಾಸದಲ್ಲಿ ಅತ್ಯಂತ ಭವ್ಯವಾದ ಹೆಸರುಗಳಲ್ಲಿ ಒಂದು ಎಂದು ಉಲ್ಲೇಖಿಸಿದ್ದಾರೆ.


  ಈ ಅವಧಿಯಲ್ಲಿಯೇ ಭಾರತದ ರಾಯಭಾರಿಗಳು ಸಾಮ್ರಾಜ್ಯ ಹಾಗೂ ಸಾಮ್ರಾಜ್ಯಶಾಹಿ ವಿಧಾನದಲ್ಲಿ ವಿದೇಶಗಳಿಗೆ ತೆರಳುತ್ತಿರಲಿಲ್ಲ ಬದಲಿಗೆ ಶಾಂತಿ, ಸಂಸ್ಕೃತಿ ಮತ್ತು ಸದ್ಭಾವನೆಯ ರಾಯಭಾರಿಗಳಾಗಿ ವಿದೇಶಕ್ಕೆ ತೆರಳಿದ್ದರು ಎಂಬುದಾಗಿ ನೆಹರು ಸೂಚಿಸಿದ್ದಾರೆ.


  ನಾಲ್ಕು ಭವ್ಯವಾದ ಏಷ್ಯಾದ ಸಿಂಹಗಳು ಏನನ್ನು ಪ್ರತಿನಿಧಿಸುತ್ತವೆ?
  ಹೆರಿಟೇಜ್ ಲ್ಯಾಬ್ ಹೇಳುವಂತೆ ಅವು ಶಕ್ತಿ, ಧೈರ್ಯ, ಹೆಮ್ಮೆ ಹಾಗೂ ಆತ್ವವಿಶ್ವಾಸದ ಪ್ರತೀಕವಾಗಿವೆ. ಸಿಂಹಗಳ ಮೌರ್ಯ ಸಂಕೇತವು ಧರ್ಮದ ವಿಜಯಕ್ಕಾಗಿ ತನ್ನ ಎಲ್ಲಾ ಸಂಪನ್ಮೂಲಗಳನ್ನು ಅರ್ಪಿಸಿದ ಸಾರ್ವತ್ರಿಕ ಚಕ್ರವರ್ತಿಯ ಶಕ್ತಿಯನ್ನು ಸೂಚಿಸುತ್ತದೆ. ಈ ಸಂಕೇತವನ್ನು ಅಳವಡಿಸಿಕೊಳ್ಳುವ ಮೂಲಕ ದೇಶವು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಜ್ಞೆ ಮಾಡಿದೆ.


  ಭಾರತದ ರಾಷ್ಟ್ರೀಯ ಲಾಂಛನವು ಪ್ರಾಚೀನ ಇತಿಹಾಸದಲ್ಲಿ ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿರುವ ಸಂಕೇತವಾಗಿದೆ. ಆದರೂ ಜರ್ಮನ್ ಮೂಲದ ಎಂಜಿನಿಯರ್, ವಾಸ್ತುಶಿಲ್ಪಿ ಮತ್ತು ಪುರಾತತ್ತ್ವ ಶಾಸ್ತ್ರಜ್ಞ ಫ್ರೆಡ್ರಿಕ್ ಆಸ್ಕರ್ ಓರ್ಟೆಲ್ ಈ ಚಿಹ್ನೆಯನ್ನು ಅನಾವರಣಗೊಳಿಸುವಲ್ಲಿ ಕೆಲಸ ಮಾಡದೇ ಇದ್ದಿದ್ದರೆ ಬಹುಶಃ ಈ ಚಿಹ್ನೆಯ ಬಗ್ಗೆ ನಮಗ್ಯಾರಿಗೂ ತಿಳಿಯದೇ ಇದ್ದಿರಬಹುದು.

  ಫ್ರೆಡ್ರಿಕ್ ಆಸ್ಕರ್ ಓರ್ಟೆಲ್  ಯಾರು?
  ಜರ್ಮನಿಯ ಹ್ಯಾನೋವರ್‌ನಲ್ಲಿ 9 ಡಿಸೆಂಬರ್ 1862 ರಂದು ಜನಿಸಿದ ಓರ್ಟೆಲ್ ಹರೆಯದಲ್ಲಿಯೇ ಬ್ರಿಟಿಷರ ಅಧಿಪತ್ಯದಲ್ಲಿದ್ದ ಭಾರತಕ್ಕೆ ಬಂದಿದ್ದರು. ಥಾಮಸ್ಸನ್ ಕಾಲೇಜ್ ಆಫ್ ಸಿವಿಲ್ ಇಂಜಿನಿಯರಿಂಗ್‌ನಿಂದ (ಇಂದು ಇದನ್ನು IIT-ರೂರ್ಕಿ ಎಂದು ಕರೆಯಲಾಗುತ್ತದೆ) ಪದವಿ ಪಡೆದ ಅವರು 1883 ರಿಂದ 1887 ರವರೆಗೆ ಭಾರತೀಯ ಸಾರ್ವಜನಿಕ ಮಂಡಳಿಯ ವತಿಯಿಂದ ರೈಲ್ವೆ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಇಂಜಿನಿಯರ್ ಆಗಿ ನೇಮಕಗೊಂಡರು.


  ಓರ್ಟೆಲ್ ಅವರು ಅವಿಭಜಿತ ಭಾರತಕ್ಕೆ ಹಿಂದಿರುಗುವ ಮೊದಲು ವಾಸ್ತುಶಿಲ್ಪವನ್ನು ಅಧ್ಯಯನ ಮಾಡಲು ಯುರೋಪ್‌ಗೆ ಮರಳಿದರು. ಲೋಕೋಪಯೋಗಿ ಇಲಾಖೆಯಲ್ಲಿ ಅದ್ಭುತ ವೃತ್ತಿಜೀವನವನ್ನು ಆರಂಭಿಸಿದ ಓರ್ಟೆಲ್, ವಿವಿಧ ಕಾರ್ಯಾಚರಣೆಗಳಿಗೆ ಅವರನ್ನು ಕಳುಹಿಸಲಾಯಿತು.


  ವಿವರವಾದ ವರದಿಯಲ್ಲಿತ್ತು ಸತ್ಯ
  ನಂತರ ವಿವಿಧ ಸ್ಥಳಗಳಿಗೆ ನೇಮಕಗೊಂಡರು. ಉತ್ತರ ಮತ್ತು ಮಧ್ಯ ಭಾರತದಲ್ಲಿನ ಸ್ಮಾರಕಗಳು ಮತ್ತು ಪುರಾತತ್ತ್ವ ಶಾಸ್ತ್ರದ ಸ್ಥಳಗಳನ್ನು ಸಮೀಕ್ಷೆ ಮಾಡಿದರು. ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಬರ್ಮಾದಲ್ಲಿ (ಇಂದಿನ ಮ್ಯಾನ್ಮಾರ್) ಪ್ರಯಾಣಿಸಿ, ಅವರು ಮೂಲ ಫೋಟೋಗಳೊಂದಿಗೆ ಬರ್ಮಾದ ಸ್ಮಾರಕಗಳ ಬಗ್ಗೆ ಸುದೀರ್ಘ ಮತ್ತು ವಿವರವಾದ ವರದಿಯನ್ನು ಬರೆದರು.


  ಈ ಸಮಯದಲ್ಲಿ ಕಟ್ಟಡಗಳ ಮೇಲ್ವಿಚಾರಣೆ ಮತ್ತು ನಿರ್ಮಾಣದಲ್ಲಿ ಅವರ ಅನುಭವ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ, ನವದೆಹಲಿಯಲ್ಲಿ ಹೊಸ ರಾಜಧಾನಿಯ ನಿರ್ಮಾಣದ ಬಗ್ಗೆ ಅವರ ಅಭಿಪ್ರಾಯವನ್ನು ರೂಪಿಸಲು ಅವರಿಗೆ ಸಹಾಯ ಮಾಡಿತು.


  ಸಾರನಾಥದಲ್ಲಿ ರಾಷ್ಟ್ರೀಯ ಲಾಂಛನದ ಉತ್ಖನನ
  ಡಿಸೆಂಬರ್ 1904 ರಿಂದ ಏಪ್ರಿಲ್ 1905 ರವರೆಗೆ ಸಾರನಾಥದಲ್ಲಿ ನಡೆಸಿದ ಉತ್ಖನನದಲ್ಲಿ ಓರ್ಟೆಲ್ ಹೆಸರಿದೆ. 19 ನೇ ಶತಮಾನದ ಆರಂಭದಲ್ಲಿ, ಸಾರನಾಥವು ತನ್ನ ಪುರಾತತ್ತ್ವ ಶಾಸ್ತ್ರದ ಮಹತ್ವಕ್ಕಾಗಿ ವಿದ್ವಾಂಸರ ಗಮನವನ್ನು ಸೆಳೆಯಲು ಪ್ರಾರಂಭಿಸಿತು ಎಂಬ ಉಲ್ಲೇಖವಿದೆ.


  ಭಾರತದ ಮೊದಲ ಸರ್ವೇಯರ್ ಜನರಲ್ ಕಾಲಿನ್ ಮೆಕೆಂಜಿ ಅವರು 1815 ರಲ್ಲಿ ಮೊದಲ ಬಾರಿಗೆ ಸಾರನಾಥವನ್ನು ಪರಿಶೋಧಿಸಿದರು. ತದನಂತರ ಸಾರನಾಥವು 1830 ರ ದಶಕದಲ್ಲಿ ಅಲೆಕ್ಸಾಂಡರ್ ಕನ್ನಿಂಗ್ಹ್ಯಾಮ್ ಅವರಿಂದ ಮತ್ತಷ್ಟು ಉತ್ಖನನಗಳಿಗೆ ಸಾಕ್ಷಿಯಾಯಿತು, ಅವರು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಮಹಾನಿರ್ದೇಶಕರಾದರು.


  ಸಾರನಾಥದಲ್ಲಿದ್ದ ಆಸಕ್ತಿಯು ಓರ್ಟೆಲ್ ಚಿತ್ತವನ್ನು ತನ್ನೆಡೆಗೆ ಆಕರ್ಷಿಸಿತು. ಆ ಸಮಯದಲ್ಲಿ ಬನಾರಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಓರ್ಟೆಲ್ ಸಾರನಾಥದಲ್ಲಿ ಒಂದು ಸ್ಥಳವನ್ನು ಉತ್ಖನನ ಮಾಡಲು ಅನುಮತಿಯನ್ನು ಪಡೆದುಕೊಂಡರು. ಮುಂದಿನ ವರ್ಷ, ಓರ್ಟೆಲ್ ಪುರಾತತ್ವ ಇಲಾಖೆಯ ಸಹಾಯದಿಂದ ತಮ್ಮ ಕೆಲಸವನ್ನು ಪ್ರಾರಂಭಿಸಿದರು.


  ಅಶೋಕನ ಸ್ತಂಭಕ್ಕೆ ಕಲಶಪ್ರಾಯವಾಗಿದ್ದ ಸಿಂಹದ ಶಿರೋಭಾಗ
  ಅಶೋಕನ ಸ್ತಂಭಕ್ಕೆ ಕಲಶಪ್ರಾಯವಾಗಿದ್ದ ಸಿಂಹ ಶಿರದ ಆವಿಷ್ಕಾರ ಅತ್ಯಂತ ಮಹತ್ವಪೂರ್ಣವಾದುದಾಗಿದೆ. ಬೌದ್ಧ ಧರ್ಮಕ್ಕೆ ಮತಾಂತರಗೊಂಡ ನಂತರ ಬುದ್ಧನ ಸಂದೇಶವನ್ನು ಹರಡಲು ಭಾರತೀಯ ಉಪಖಂಡದಾದ್ಯಂತ ಅಶೋಕನಿಂದ ನಿಯೋಜಿಸಲಾದ ಅನೇಕ ಕಂಬಗಳಲ್ಲಿ ಈ ನಿರ್ದಿಷ್ಟ ಸ್ತಂಭವೂ ಒಂದಾಗಿದೆ. ಸಾರಾನಾಥದಲ್ಲಿ ಪತ್ತೆಯಾದ ಸಿಂಹದ ಲಾಂಛನವು ಅಶೋಕನ ಸ್ತಂಭಗಳ ಏಳು ರಾಜಧಾನಿಗಳಲ್ಲಿ ಉಳಿದುಕೊಂಡಿದೆ.


  ಲಾಂಛನವು ಏಳು ಅಡಿ ಎತ್ತರವಿದ್ದು ಮೂಲತಃ ಕಲ್ಲಿನ ತುಂಡಿನಂತೆ ಕಂಡುಬಂದಿದೆ. ಒಂದರ ಹಿಂದೆ ನಿಂತ ನಾಲ್ಕು ಭವ್ಯ ಸಿಂಹಗಳ ಮಧ್ಯದಲ್ಲಿ ದೊಡ್ಡ ಕಲ್ಲಿನ ಚಕ್ರವಿದ್ದು ಇದು ಪವಿತ್ರ ಧರ್ಮಚಕ್ರದ ಸಂಕೇತವಾಗಿದೆ ಎಂದು ಭಾರತದ ಪುರಾತತ್ವ ಸಮೀಕ್ಷೆ ವರದಿ ಮಾಡಿದೆ.


  ಇದನ್ನೂ ಓದಿ: Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ


  ಭಾರತದಲ್ಲಿ ಇದುವರೆಗೆ ಪತ್ತೆಯಾದ ಈ ರೀತಿಯ ಅತ್ಯುತ್ತಮವಾದ ಶಿಲ್ಪಕಲೆಯಾಗಿ ಈ ಸ್ತಂಭವು ಗುರುತಿಸಲಾಗಿದ್ದು 2,000 ವರ್ಷಗಳ ಹಿಂದೆ ಸ್ಥಾಪನೆಯಾದ ರಚನೆಯಾಗಿದ್ದರೂ ಇದನ್ನು ಸಂರಕ್ಷಿಸಲಾದ ವಿಧಾನವು ಅದ್ಭುತವಾಗಿದೆ ಎಂದು ಬಣ್ಣಿಸಲಾಗಿದೆ. ಉದ್ದೇಶಪೂರ್ವಕ ವಿನಾಶದಿಂದ ತಡೆಯಲು ಇದನ್ನು ಕತ್ತರಿಸಲಾಗಿದ್ದು ಸಂಭವಿಸಿದ ಏಕೈಕ ಹಾನಿಯಾಗಿ ಗುರುತಿಸಲಾಗಿದೆ.


  ಸಿಂಹದ ಶಿರೋಭಾಗ ಎಲ್ಲಿ ಕಂಡುಬಂದಿತ್ತು?
  ಸಿಂಹದ ಶಿರೋಭಾಗವನ್ನು (ಕಂಬ ಅಥವಾ ಸ್ಥಂಭದ ಶಿರದಲ್ಲಿನ ವಿಶಿಷ್ಟವಾದ, ವಿಶಾಲವಾದ ವಿಭಾಗ) ಧಮೇಕ್ ಸ್ತೂಪದ ಬಳಿ ಸಮಾಧಿ ಮಾಡಲಾಗಿತ್ತು ಎಂಬುದು ಉತ್ಖನನದ ಸಮಯದಲ್ಲಿ ಕಂಡುಬಂದಿದೆ.


  ಸ್ತಂಭವು ಇಂದು ಕಂಡುಬಂದ ಸ್ಥಳದಲ್ಲಿ ನಿಂತಿದ್ದರೆ, ಸಿಂಹದ ಶಿರೋಭಾಗವನ್ನು ಸಾರನಾಥ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಯಿತು. ಇಂತಹ ಮಹತ್ವದ ಆವಿಷ್ಕಾರದ ಹೊರತಾಗಿಯೂ, ಓರ್ಟೆಲ್ ಕೇವಲ ಒಂದು ಋತುವಿನವರೆಗೆ ಮಾತ್ರ ಸಾರನಾಥವನ್ನು ಉತ್ಖನನ ಮಾಡಲು ಸಾಧ್ಯವಾಯಿತು ಮತ್ತು 1905 ರ ಸಮಯದಲ್ಲಿ ಅವರನ್ನು ಆಗ್ರಾಕ್ಕೆ ವರ್ಗಾಯಿಸಲಾಯಿತು.


  ಇದನ್ನೂ ಓದಿ: Cooker Bomb: ಕುಕ್ಕರ್ ಬಾಂಬ್ ಅಂದರೆ ಏನು ಗೊತ್ತಾ? ಇಲ್ಲಿದೆ ‘ಸ್ಫೋಟ’ಕ ಮಾಹಿತಿ!


  1907-08ರಲ್ಲಿ ಯುನೈಟೆಡ್ ಪ್ರಾವಿನ್ಸ್‌ನಲ್ಲಿ ಕ್ಷಾಮದ ನಂತರ, ಅವರಿಗೆ ಹಿಂತಿರುಗಲು ಮತ್ತು ಸಾರನಾಥದಲ್ಲಿ ಹೆಚ್ಚಿನ ಉತ್ಖನನಗಳನ್ನು ಆಯೋಜಿಸಲು ಅನುಮತಿಯನ್ನು ನಿರಾಕರಿಸಲಾಯಿತು. ಸಾರನಾಥದಿಂದ, ಓರ್ಟೆಲ್ ಆಗ್ರಾಕ್ಕೆ ತೆರಳಿದರು, ಅಲ್ಲಿ ಇತರ ಕೆಲಸಗಳ ಜೊತೆಗೆ, ಅವರು ಆಗ್ರಾ ಕೋಟೆಯಲ್ಲಿರುವ "ದಿವಾನ್-ಐ-ಅಮ್ಮ್ ಮತ್ತು ಜಹಾಂಗಿರಿ ಮಹಲ್‌ನ ಪುನಃಸ್ಥಾಪನೆ ಮತ್ತು ಸಿಕಂದ್ರದಲ್ಲಿರುವ ಅಕ್ಬರ್ ಸಮಾಧಿಯ ದಕ್ಷಿಣ ದ್ವಾರದ ನಾಲ್ಕು ಮಿನಾರ್‌ಗಳ ಪುನರ್ ನಿರ್ಮಾಣವನ್ನು ಕೈಗೊಂಡರು.


  1921 ರಲ್ಲಿ ಓರ್ಟೆಲ್ ಭಾರತವನ್ನು ತೊರೆದಾಗ ಅವರು ಮಾಡಿದ ಕೆಲಸವು ಭಾರತದ ರಾಷ್ಟ್ರೀಯ ಗುರುತಿನ ಆಧಾರವನ್ನು ನೀಡುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ. ಓರ್ಟಲ್‌ ನಡೆಸಿದ ಉತ್ಖನನವು ಇಂದು ದೇಶದ ಅಭೂತಪೂರ್ವ ಪರಂಪರೆಗೆ ಸಾಕ್ಷಿಯಾಗಿದೆ.

  Published by:ಗುರುಗಣೇಶ ಡಬ್ಗುಳಿ
  First published: