Explained: ಭಾರತದ INS ವಿಕ್ರಾಂತ್​ ನೋಡಿ ಅಮೆರಿಕಾ, ಚೀನಾಗೆ ನಡುಕ! ಈ ಯುದ್ಧನೌಕೆಯ ಶಕ್ತಿ ಅಸಾಧಾರಣ

ಭಾರತದ ಪಾಲಿಗೆ ಅದರಲ್ಲೂ, ವಿಶೇಷವಾಗಿ ಭಾರತೀಯ ಸೇನೆಯ ಪಾಲಿಗೆ ಈ ದಿನ ಬಲು ವಿಶಿಷ್ಟವಾಗಿದೆ. ಏಕೆಂದರೆ, ಇಂದು ದೇಶೀಯವಾಗಿಯೇ ನಿರ್ಮಿಸಲಾದ ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಯುದ್ಧನೌಕೆ ಅನಾವರಣಗೊಂಡಿದೆ.

ಭಾರತದ INS Vikrant

ಭಾರತದ INS Vikrant

  • Share this:
ಇಂದಿನ ಜಗತ್ತು ಸಾಕಷ್ಟು ತಂತ್ರಜ್ಞಾನಾಧಾರಿತವಾಗಿದೆ. ಪ್ರಪಂಚದ ಪ್ರಬಲ ದೇಶಗಳು ತಮ್ಮ ರಕ್ಷಣೆಗೆ ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಜ್ಞಾನದಿಂದ (Technology) ಕೂಡಿರುವ ಶಸ್ತ್ರಾಸ್ತ್ರಗಳನ್ನು ಹೊಂದುವಲ್ಲಿ ನಿರತವಾಗಿವೆ. ಈ ನಿಟ್ಟಿನಲ್ಲಿ ಭಾರತವೂ (India) ಸಾಕಷ್ಟು ಮುಂದಿದೆ. ಇತ್ತೀಚಿನ ಕೆಲ ವರ್ಷಗಳಿಂದ ತನ್ನನ್ನು ತಾನು ಸಕ್ಷಮಗೊಳಿಸಿಕೊಳ್ಳುತ್ತಿದ್ದು ದೇಶೀಯವಾಗಿಯೇ ಶಸ್ತ್ರಾಸ್ತ್ರಗಳ (Weapons) ತಯಾರಿಕೆಯಲ್ಲೂ ಪ್ರಗತಿ ಕಾಣುತ್ತಿದೆ. ಇದೀಗ, ಭಾರತದ ಪಾಲಿಗೆ ಅದರಲ್ಲೂ ವಿಶೇಷವಾಗಿ ಭಾರತೀಯ ಸೇನೆಯ ಪಾಲಿಗೆ ಈ ದಿನ ಬಲು ವಿಶಿಷ್ಟವಾಗಿದೆ. ಏಕೆಂದರೆ, ಇಂದು ದೇಶೀಯವಾಗಿಯೇ ನಿರ್ಮಿಸಲಾದ ಯುದ್ಧ ವಿಮಾನಗಳನ್ನು (Fighter Plane) ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಯುದ್ಧನೌಕೆ ಅಥವಾ ಏರ್ಕ್ರಾಫ್ಟ್ ಕ್ಯಾರಿಯರ್ ಆಗಿರುವ ಐಎನ್‌‍ಎಸ್ ವಿಕ್ರಾಂತ್ (INS Vikrant) ಯುದ್ಧ ನೌಕೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಕೊಚ್ಚಿಯ ಶಿಪ್ ಯಾರ್ಡ್​ನಲ್ಲಿ  ಅನಾವರಣಗೊಳಿಸಿದ್ದಾರೆ.

ಅಂದರೆ ಇಂದಿನಿಂದ ಈ ಏರ್ಕ್ರಾಫ್ಟ್ ಕ್ಯಾರಿಯರ್ ಭಾರತೀಯ ಸೇನೆಗಾಗಿ ಕಾರ್ಯಾರಂಭ ಮಾಡಲಿದೆ. ಈ ಮೂಲಕ ಭಾರತ ತನ್ನ ಸೈನ್ಯ ಸಾಮರ್ಥ್ಯವನ್ನು ಇನ್ನೊಂದು ಪ್ರಬಲ ಹೆಜ್ಜೆಯ ಮೂಲಕ ಹೆಚ್ಚಿಸಿಕೊಂಡಂತಾಗಿದೆ.

ಈ ಹಿಂದೆಯೂ ಇಂಥದ್ದೇ ಐಎನ್‍ಎಸ್ ವಿಕ್ರಾಂತ್ ಅನ್ನು ಹೊಂದಿದ್ದ ಭಾರತ
ಈ ಹಿಂದೆಯು ಭಾರತವು ಐಎನ್‍ಎಸ್ ವಿಕ್ರಾಂತ್ ಅನ್ನು ಹೊಂದಿತ್ತು.  ಆ ಅದ್ಭುತ ಕ್ಯಾರಿಯರ್ 1971 ರ ಯುದ್ಧದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಹಾಗಾಗಿ ಅದರ ಸ್ಮರಣಾರ್ಥವಾಗಿಯೇ ಈ ದೇಶೀಯ ನಿರ್ಮಿತ ಏರ್ಕ್ರಾಫ್ಟ್ ಕ್ಯಾರಿಯರ್ ಅನ್ನು ಸಹ ಐಎನ್‍ಎಸ್ ವಿಕ್ರಾಂತ್ ಎಂದೇ ನಾಮಕರಣ ಮಾಡಲಾಗಿರುವುದು ವಿಶೇಷ. ಈ ಯುದ್ಧನೌಕೆಯು ದೇಶೀಯವಾಗಿ ನೂರಾರು ದೊಡ್ಡ ಹಾಗೂ ಮಧ್ಯಮ ಕೈಗಾರಿಕೆಗಳಿಂದ ನಿರ್ಮಿಸಲಾದ ಬೃಹತ್ ಪ್ರಮಾಣದಲ್ಲಿ ಯಂತ್ರೋಪಕರಣಗಳನ್ನು ಒಳಗೊಂಡಿದ್ದು ಈ ಮೂಲಕ ಭಾರತೀಯತನವನ್ನು ತನ್ನಲ್ಲಿ ಅಡಕಗೊಳಿಸಿಕೊಂಡಿದೆ.

ಇನೊಂದು ವಿಚಾರವೆಂದರೆ ಈ ಏರ್ಕ್ರಾಫ್ಟ್ ಕ್ಯಾರಿಯರ್ ಅನ್ನುವುದು ಸಮುದ್ರದಲ್ಲಿ ಕಂಡುಬರುವ ಅತಿ ಪ್ರಬಲ ಯುದ್ಧ ನೌಕೆಯಾಗಿದ್ದು ಜಗತ್ತಿನಲ್ಲಿ ಭಾರತವೂ ಸೇರಿದಂತೆ ಕೇವಲ ಬೆರಳೆಣಿಕೆಯಷ್ಟು ಬಲಾಢ್ಯ ರಾಷ್ಟ್ರಗಳಷ್ಟೇ ಮಾತ್ರ ಇವುಗಳನ್ನು ಹೊಂದಿದೆ. ಇದರ ವಿಶೇಷತೆ ಎಂದರೆ, ಹೆಸರೇ ಸೂಚಿಸುವಂತೆ ಈ ಬೃಹತ್ ಹಡಗಿನಿಂದಲೇ ಯುದ್ಧ ವಿಮಾನಗಳ ಕಾರ್ಯಾಚರಣೆ ಮಾಡಲು ಸಾಮರ್ಥ್ಯವಿರುತ್ತದೆ. ಇದೊಂದು ಸಮುದ್ರದಲ್ಲಿ ಏರ್ ಬೇಸ್ ಇದ್ದಂತೆ.

ಸದ್ಯ ಭಾರತದಲ್ಲಿ ನಿರ್ಮಿಸಲಾಗಿರುವ ದೇಶೀಯ ವಿಕ್ರಾಂತ್ ಹಾಗೂ ಯುಎಸ್ ಮತ್ತು ಚೈನಾ ಹೊಂದಿರುವ ಏರ್ಕ್ರಾಫ್ಟ್ ಕ್ಯಾರಿಯರ್ ಹೇಗಿವೆ ಎಂಬುದರ ಬಗ್ಗೆ ಕೆಲ ಮಾಹಿತಿಗಳನ್ನು ತಿಳಿಯಲು ಪ್ರಯತ್ನಿಸೋಣ. ಮುಂದೆ ಓದಿ.

INS Vikrant
ಭಾರತೀಯ ಸೇನೆಯ ಅಂಗವಾದ ವಾರ್ಶಿ ಡಿಸೈನ್ ಬ್ಯೂರೋ (WDB) ದಿಂದ ದೇಶೀಯವಾಗಿ ಈ ಹಡಗಿನ ವಿನ್ಯಾಸ ಮಾಡಲಾಗಿದ್ದು ಇದನ್ನು ಅತ್ಯಾಧುನಿಕ ಉಪಕರಣಗಳು ಹಾಗೂ ತಂತ್ರಜ್ಞಾನದೊಂದಿಗೆ ಪಬ್ಲಿಕ್ ಸೆಕ್ಟರ್ ಸಂಸ್ಥೆಯಾದ ಕೊಚ್ಚಿ ಯಾರ್ಡ್ ಶಿಪ್​ನಿಂದ ನಿರ್ಮಿಸಲಾಗಿದೆ. ಇದು ಭಾರತದ ಸೇನೆಯ ಇತಿಹಾಸದಲ್ಲೇ ಇಲ್ಲಿಯವರೆಗೂ ನಿರ್ಮಿಸಲಾದ ಅತಿ ದೊಡ್ಡ ಯುದ್ಧ ನೌಕೆಯಾಗಿದೆ.

ಇದನ್ನೂ ಓದಿ:  Explained: ಸೂರ್ಯನ ಆಯಸ್ಸಿನ ಅರ್ಧಭಾಗ ಕಂಪ್ಲೀಟ್! ನಿಗಿನಿಗಿ ಕೆಂಡದಂತಹ ನಕ್ಷತ್ರ ಎಷ್ಟು ವರ್ಷ ಬದುಕಲಿದೆ?

ವಿಕ್ರಾಂತ್ ಯುದ್ಧವಿಮಾನ ವಾಹಕ ನೌಕೆಯ ವಿಶೇಷತೆಗಳು
ಮಹಿಳಾ ಅಧಿಕಾರಿಗಳಿಗಾಗಿ ವಿಶೇಷ ಕ್ಯಾಬಿನ್‌
ಯುರೇಷಿಯನ್ ಟೈಮ್ಸ್ ಪ್ರಕಾರ, ಐಎನ್‍ಎಸ್ ವಿಕ್ರಾಂತ್ 62 ಮೀಟರ್ ಮತ್ತು 59 ಮೀಟರ್ ಎತ್ತರದ ಬೀಮ್ ಹೊಂದಿದ್ದು ಇದರಲ್ಲಿ 14 ಡೆಕ್‌ಗಳಿವೆ, ಐದು ಸೂಪರ್‌ಸ್ಟ್ರಕ್ಚರ್‌ಗಳು ಮತ್ತು 2,300 ಕಂಪಾರ್ಟ್‌ಮೆಂಟ್‌ಗಳು, 1,700 ಸಿಬ್ಬಂದಿ ಸಾಮರ್ಥ್ಯವಿದ್ದು ಮಹಿಳಾ ಅಧಿಕಾರಿಗಳಿಗಾಗಿ ವಿಶೇಷ ಕ್ಯಾಬಿನ್‌ಗಳನ್ನೂ ಸಹ ಇದು ಹೊಂದಿದೆ.

30 ಟನ್‌ಗಳಷ್ಟು ಸಾಗಿಸುವ ಸಾಮರ್ಥ್ಯ ಹೊಂದಿರುವ ಹಡಗು 
ದಿ ಟ್ರಿಬ್ಯೂನ್ ಸುದ್ದಿ ಮಾಧ್ಯಮದ ಪ್ರಕಾರ, ಈ ಹಡಗು ಏರ್‌ಕ್ರಾಫ್ಟ್ ಲಿಫ್ಟ್‌ಗಳನ್ನು ಹೊಂದಿದೆ (ಹ್ಯಾಂಗರ್‌ನಿಂದ ಡೆಕ್‌ಗೆ ಜೆಟ್‌ಗಳನ್ನು ತೆಗೆದುಕೊಂಡು ಹೋಗಲು) ಪ್ರತಿಯೊಂದೂ 30 ಟನ್‌ಗಳಷ್ಟು ಸಾಗಿಸುವ ಸಾಮರ್ಥ್ಯ ಹೊಂದಿವೆ. ಡೆಕ್‌ ಗಳನ್ನು ಹಾರಾಟದ ಕಾರ್ಯಾಚರಣೆಗಳ ಸಂದರ್ಭದಲ್ಲಿ ಯಾವುದೇ ಅಡಚಣೆಗಳುಂಟಾಗದಂತೆ ವಿನ್ಯಾಸಗೊಳಿಸಲಾಗಿದೆ ಹಾಗೂ ಇದರ ಡಿಸ್ಪ್ಲೇಸ್ಮೆಂಟ್ 43,000 ಟನ್‌ಗಳಷ್ಟಿದ್ದು ಇದು ಗರಿಷ್ಠ 28 ನಾಟ್ ಗಳಷ್ಟು ವೇಗದಲ್ಲಿ ಚಲಿಸಬಹುದಾಗಿದೆ. ಇದರ ಕಾರ್ಯಾಚರಣೆಯ ವ್ಯಾಪ್ತಿಯ ಶ್ರೇಣಿಯು 7500 ನಾಟಿಕಲ್ ಮೈಲುಗಳಷ್ಟಾಗಿದೆ.

ಯುದ್ಧನೌಕೆ ತಯಾರಿಸಲು ತಗುಲಿದ ವೆಚ್ಚವೆಷ್ಟು?
"ವಿಕ್ರಾಂತ್ ಒಂದು ಅದ್ಭುತವಾಗಿದೆ. ಇದು ಭಾರತ ಇದುವರೆಗೆ ತಯಾರಿಸಿದ ಯಾವುದೇ ಯುದ್ಧನೌಕೆಗಿಂತ ಐದರಿಂದ ಏಳು ಪಟ್ಟು ದೊಡ್ಡದಾಗಿದೆ" ಎಂದು ಸಿಎಸ್ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮಧು ನಾಯರ್ ದಿ ಟ್ರಿಬ್ಯೂನ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸುಮಾರು 20,000 ಕೋಟಿ ಬಜೆಟ್‌ನಲ್ಲಿ ತಯಾರಿಸಲಾಗಿರುವ ಈ ಯುದ್ಧನೌಕೆಯ ಸುಮಾರು 76 ಪ್ರತಿಶತದಷ್ಟು ಭಾಗವನ್ನು ಭಾರತದ ಉಪಕರಣಗಳು ಮತ್ತು ಮಾನವಸಂಪನ್ಮೂಲಗಳನ್ನೇ ಬಳಸಿ ನಿರ್ಮಿಸಲಾಗಿದೆ.

ಇದನ್ನೂ ಓದಿ:  Explained: ಜೇಮ್ಸ್ ವೆಬ್ ಟೆಲಿಸ್ಕೋಪ್‌ನ ಮೊದಲ ಚಿತ್ರಗಳಿಂದ ಕಲಿತ 5 ವಿಷಯಗಳಿವು

ಇದರಲ್ಲಿ 23,000 ಟನ್ ಉಕ್ಕು, 2,500 ಕಿಮೀ ವಿದ್ಯುತ್ ಕೇಬಲ್‌ಗಳು, 150 ಕಿಮೀ ಪೈಪ್‌ಗಳು ಮತ್ತು 2,000 ವಾಲ್ವ್‌ಗಳು ಮತ್ತು ರಿಜಿಡ್ ಹಲ್ ಬೋಟ್‌ಗಳು, ಗ್ಯಾಲಿ ಉಪಕರಣಗಳು, ಹವಾನಿಯಂತ್ರಣ ಮತ್ತು ಶೈತ್ಯೀಕರಣ ಘಟಕಗಳು ಮತ್ತು ಸ್ಟೀರಿಂಗ್ ಗೇರ್ ಸೇರಿದಂತೆ ವ್ಯಾಪಕ ಶ್ರೇಣಿಯ ಸಿದ್ಧಪಡಿಸಿದ ಉತ್ಪನ್ನಗಳು ಸೇರಿವೆ.

ಯುದ್ಧನೌಕೆ ನಿರ್ಮಾಣದಲ್ಲಿ ಕೊಡುಗೆ ನೀಡಿದ ಸಂಸ್ಥೆಗಳು 
ನೌಕಾಪಡೆಯ ಪ್ರಕಾರ, ಸಾರ್ವಜನಿಕ ವಲಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಮಿಶ್ರಾ ಧಾತು ನಿಗಮ್ (ಮಿಧಾನಿ) ಜೊತೆಗೆ ಟಾಟಾ, ಎಲ್&ಟಿ, ವಾರ್ಟ್ಸಿಲಾ ಮತ್ತು ಕಿರ್ಲೋಸ್ಕರ್ ನ್ಯೂಮ್ಯಾಟಿಕ್ಸ್ ಸಂಸ್ಥೆಗಳೂ ಸಹ ತಮ್ಮ ಉತ್ಪನ್ನಗಳ ಮೂಲಕ ಇದರ ನಿರ್ಮಾಣದಲ್ಲಿ ಕೊಡುಗೆಯನ್ನು ನೀಡಿವೆ.

ಈ ಹಡಗನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು ಯಂತ್ರೋಪಕರಣಗಳ ಕಾರ್ಯಾಚರಣೆಗಳು, ಹಡಗು ಸಂಚರಣೆ ಮತ್ತು ಬದುಕುಳಿಯುವಿಕೆಗಾಗಿ ಹೆಚ್ಚಿನ ಮಟ್ಟದ ಸುರಕ್ಷತಾ ಕ್ರಮಗಳನ್ನೊಳಗೊಂಡ ಯಾಂತ್ರೀಕರಣದೊಂದಿಗೆ ನಿರ್ಮಿಸಲಾಗಿದೆ. ವಿಕ್ರಾಂತ್ ಏರ್ ಕ್ರಾಫ್ಟರ್ ಇತ್ತೀಚಿನ ಅತ್ಯಾಧುನಿಕ ಉಪಕರಣಗಳು ಮತ್ತು ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿದೆ.

ಈ ಯುದ್ಧನೌಕೆ ಯಾವೆಲ್ಲ ಸೌಲಭ್ಯಗಳನ್ನು ಒಳಗೊಂಡಿದೆ?
ಪ್ರಮುಖ ಮಾಡ್ಯುಲರ್ ಓಟಿ, ತುರ್ತು ಮಾಡ್ಯುಲರ್ ಒಟಿ, ಫಿಸಿಯೋಥೆರಪಿ ಕ್ಲಿನಿಕ್, ಐಸಿಯು, ಪ್ರಯೋಗಾಲಯಗಳು, ಸಿಟಿ ಸ್ಕ್ಯಾನರ್, ಎಕ್ಸ್-ರೇ ಯಂತ್ರಗಳು, ದಂತ ಸಂಕೀರ್ಣಗಳು, ಐಸೋಲೇಶನ್ ವಾರ್ಡ್ ಮತ್ತು ಟೆಲಿಮೆಡಿಸಿನ್ ಸೌಲಭ್ಯಗಳು ಸೇರಿದಂತೆ ಇತ್ತೀಚಿನ ವೈದ್ಯಕೀಯ ಉಪಕರಣಗಳ ಸೌಲಭ್ಯಗಳೊಂದಿಗೆ ಇದು ಸಂಪೂರ್ಣ ಅತ್ಯಾಧುನಿಕ ವೈದ್ಯಕೀಯ ಸಂಕೀರ್ಣವನ್ನು ಸಹ ಹೊಂದಿದೆ.

ಐಎನ್‍ಎಸ್ ವಿಕ್ರಾಂತ್, ಎರಡು ಟೇಕ್-ಆಫ್ ರನ್‌ವೇಗಳನ್ನು ಹೊಂದಿದ್ದು ಇದರಲ್ಲಿ ಸ್ಕೀ-ಜಂಪ್ ರಾಂಪ್ ತಂತ್ರಜ್ಞಾನ, ಮೂರು ಅರೆಸ್ಟರ್ ವೈರ್‌ ಗಳನ್ನು ಹೊಂದಿರುವ ಲ್ಯಾಂಡಿಂಗ್ ಸ್ಟ್ರಿಪ್, ಶಾರ್ಟ್ ಟೇಕ್-ಆಫ್, ಅರೆಸ್ಟೆಡ್ ಲ್ಯಾಂಡಿಂಗ್ (STOBAR) ಗಳಂತಹ ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಒದಗಿಸಲಾಗಿದೆ.

ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನೂ ಹೊಂದಿದ್ಯಂತೆ
ಇನ್ನು ಇದು ಕಾರ್ಯಾಚರಣೆ ಮಾಡಲು ಅನುಕೂಲವಾಗುವಂತೆ ಭಾರತೀಯ ನೌಕಾಪಡೆಯು ಡೆಕ್-ಆಧಾರಿತ ಫೈಟರ್ ಜೆಟ್‌ಗಳ ಸಮೂಹವನ್ನು (ಬೋಯಿಂಗ್‌ನ F/A-18E ಸೂಪರ್ ಹಾರ್ನೆಟ್ ಮತ್ತು ಡಸಾಲ್ಟ್ ಏವಿಯೇಷನ್‌ನ ರಫೇಲ್-ಎಂ (ಮರೀನ್) ವಿಮಾನಗಳು ಶಾರ್ಟ್‌ಲಿಸ್ಟ್‌ನಲ್ಲಿವೆ) ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದೆ. ವರದಿಯ ಪ್ರಕಾರ ವಿಕ್ರಾಂತ್ ಯುದ್ಧ ನೌಕೆಯು, Kamov-31 ಹೆಲಿಕಾಪ್ಟರ್‌ಗಳು, MH-60R ಬಹು-ಪಾತ್ರ ಹೆಲಿಕಾಪ್ಟರ್‌ಗಳು ಮತ್ತು ಇತರ ಸ್ವದೇಶಿ ನಿರ್ಮಿತ ಸುಧಾರಿತ ಲಘು ಹೆಲಿಕಾಪ್ಟರ್‌ಗಳನ್ನು ಸಹ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ದಿ ಟ್ರಿಬ್ಯೂನ್ ಪ್ರಕಾರ, ವಿಕ್ರಾಂತ್ ಹಡಗಿನ ಕೆಲವು ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ. ದೀರ್ಘ ವ್ಯಾಪ್ತಿಯುಳ್ಳ ಹಾಗೂ ಮೇಲ್ಮೈಯಿಂದ ಗಾಳಿಗೆ ಹಾರಿ ದಾಳಿ ಮಾಡುವ ಕ್ಷಿಪಣಿಗಳು (LRSAM) ಇಸ್ರೇಲಿ ಮೂಲದ್ದಾಗಿದ್ದು, ರಷ್ಯಾ ವಾಯುಯಾನ ಸಂಕೀರ್ಣ ಮತ್ತು MiG 29-K ಜೆಟ್‌ಗಳನ್ನು ಪೂರೈಸಿದೆ.

ಇದನ್ನೂ ಓದಿ:  Explained: ಹೇಗಿದೆ ಭಾರತ-ಪಾಕ್ ಸಂಬಂಧ? ವಾಸ್ತವಿಕ ಅಂಶಗಳನ್ನು ವಿವರಿಸುವ ಪುಸ್ತಕವಿದು

ಇದರಲ್ಲಿನ ಪ್ರೊಪಲ್ಷನ್ ಸಿಸ್ಟಮ್ನ ಏಕೀಕರಣವನ್ನು ಇಟಾಲಿಯನ್ ಫಿನ್ಕಾಂಟಿಯೆರಿ ಮಾಡಿದೆ. ಹಡಗಿನ ನಾಲ್ಕು ಎಂಜಿನ್‌ಗಳು, LM 2500 ಗ್ಯಾಸ್ ಟರ್ಬೈನ್‌ಗಳು ಅಮೆರಿಕದ ಕಂಪನಿಯಾದ ಜನರಲ್ ಎಲೆಕ್ಟ್ರಿಕ್‌ನಿಂದ ಬಂದಿವೆ, ಆದರೆ HAL ಸಂಸ್ಥೆಯು ಆ ಇಂಜಿನ್‌ಗಳ ಏಕೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ.ಎಲ್ಲಾ ಶಸ್ತ್ರಾಸ್ತ್ರ ವ್ಯವಸ್ಥೆಗಳ ಏಕೀಕರಣವು ಸ್ಥಳೀಯ ಯುದ್ಧ ನಿರ್ವಹಣಾ ವ್ಯವಸ್ಥೆ (CMS) ಮೂಲಕ ಮಾಡಲಾಗುತ್ತದೆ.

2023ರ ಅಂತ್ಯದ ವೇಳೆಗೆ ವಿಕ್ರಾಂತ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಸಾಧ್ಯತೆ
ಐಎನ್‍ಎಸ್ ವಿಕ್ರಾಂತ್‌ನ ಅನಾವರಣದೊಂದಿಗೆ ಭಾರತವು 40,000 ಟನ್‌ಗಳಿಗಿಂತ ಹೆಚ್ಚು ಸ್ಥಳಾಂತರದೊಂದಿಗೆ ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿರುವ ವಿಶೇಷ ಕ್ಲಬ್‌ಗೆ (ಯುಎಸ್, ಯುಕೆ, ರಷ್ಯಾ, ಫ್ರಾನ್ಸ್ ಮತ್ತು ಚೀನಾ) ಸೇರಿದಂತಾಗಿದೆ.

ದಿ ವೈರ್ ಪ್ರಕಾರ, ನೌಕಾಪಡೆಯ ವೈಸ್ ಚೀಫ್ ಆಫ್ ಸ್ಟಾಫ್, ವೈಸ್ ಅಡ್ಮಿರಲ್ ಎಸ್‌ಎನ್ ಘೋರ್ಮಡೆ ಅವರು ಐಎನ್‌ಎಸ್ ವಿಕ್ರಾಂತ್‌ನಲ್ಲಿ ಮಿಗ್ -29 ಕೆ ಫೈಟರ್ ಲ್ಯಾಂಡಿಂಗ್ ಪ್ರಯೋಗಗಳು ನವೆಂಬರ್‌ನಲ್ಲಿ ಪ್ರಾರಂಭವಾಗಲಿದ್ದು 2023 ರ ಮಧ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿರುವುದಾಗಿ ವರದಿ ಮಾಡಿದೆ. ಹೀಗಾಗಿ, ದಿ ವೈರ್ ಪ್ರಕಾರ 2023 ರ ಅಂತ್ಯದ ವೇಳೆಗೆ ವಿಕ್ರಾಂತ್ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎನ್ನಬಹುದು.

ಯುಎಸ್ಎಸ್ ಗೆರಾಲ್ಡ್ ಆರ್ ಫೋರ್ಡ್
ಅಮೆರಿಕದ ವಿಮಾನವಾಹಕ ನೌಕೆಯಾಗಿದೆ. ಬಿಸಿನೆಸ್ ಇನ್ಸೈಡರ್ ಪ್ರಕಾರ, ಅಮೆರಿಕದ ಗೆರಾಲ್ಡ್ ಆರ್. ಫೋರ್ಡ್ ಅನ್ನು 2017 ರಲ್ಲಿ ನಿಯೋಜಿಸಲಾಯಿತು. ಈ ನೌಕೆಯು 1,106 ಅಡಿಗಳಷ್ಟು ವಿಶಾಲವಾಗಿ ಹರಡಿದೆ ಮತ್ತು 112,000 ಟನ್‌ಗಳ ಡಿಸ್ಪ್ಲೇಸ್ಮೆಂಟ್ ಹೊಂದಿದೆ. ಪ್ರಸ್ತುತ ಇದು ವಿಶ್ವದ ಅತಿದೊಡ್ಡ ಯುದ್ಧನೌಕೆಯಾಗಿದೆ.ಇದು 4,500 ಸಿಬ್ಬಂದಿಯನ್ನು ಹೊಂದಬಹುದಾದ ಸಾಮರ್ಥ್ಯವನ್ನು ಹೊಂದಿದೆ.

ಈ ಏರ್ ಕ್ರಾಫ್ಟ್ ಕ್ಯಾರಿಯರ್ RIM-7 ಸೀ ಸ್ಪ್ಯಾರೋ ಮತ್ತು RIM-116, ಮತ್ತು M2 ಮೆಷಿನ್ ಗನ್‌ಗಳನ್ನು ಒಳಗೊಂಡಂತೆ ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿಗಳಿರುವ ಸಾಮರ್ಥ್ಯ ಹೊಂದಿದೆ. ಲಾಕ್ಹೀಡ್ ಮಾರ್ಟಿನ್ F-35 ಮತ್ತು ಬೋಯಿಂಗ್ F/A-18E/F ಸೂಪರ್ ಹಾರ್ನೆಟ್ ಫೈಟರ್ ಜೆಟ್‌ಗಳು ಮತ್ತು ಸಿಕೋರ್ಸ್ಕಿ MH-60R ಹೆಲಿಕಾಪ್ಟರ್‌ಗಳನ್ನು ಒಳಗೊಂಡಂತೆ ಒಟ್ಟು 75 ಕ್ಕೂ ಹೆಚ್ಚು ವಿಮಾನಗಳನ್ನು ಈ ಹಡಗಿನಿಂದ ಉಡಾಯಿಸಬಹುದಾಗಿದೆ.

ಚೀನಾದ ಫುಜಿಯಾನ್
ಶಾಂಘೈನ ಜಿಯಾಂಗ್ನಾನ್ ಶಿಪ್‌ಯಾರ್ಡ್‌ನಲ್ಲಿ ನಡೆದ ಸಂಕ್ಷಿಪ್ತ ಸಮಾರಂಭದಲ್ಲಿ ಚೀನಾ ಜೂನ್‌ನಲ್ಲಿ ತನ್ನ ಮೂರನೇ ವಿಮಾನವಾಹಕ ನೌಕೆ ಫುಜಿಯಾನ್ ಅನ್ನು ನಿಯೋಜಿಸಿತು. ಭಾರತಕ್ಕೆ ವಿಕ್ರಾಂತ್‌ ಹೇಗಿದೆಯೋ, ಫುಜಿಯಾನ್ ಕೂಡ ಚೀನಾದ ಮೊದಲ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ವಿಮಾನವಾಹಕ ನೌಕೆಯಾಗಿದೆ.

ಇದನ್ನೂ ಓದಿ:  Explained: ಉಚಿತ ವಿದ್ಯುತ್​, ಮಿನಿ ಹೆಲಿಕಾಪ್ಟರ್, ಮಂಗಳ ಗ್ರಹಕ್ಕೆ ಪ್ರವಾಸ! ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳ ಆಮಿಷ

ಚೈನಾ ಸ್ಟೇಟ್ ಶಿಪ್‌ಬಿಲ್ಡಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನಿಂದ ನಿರ್ಮಿಸಲ್ಪಟ್ಟ ಫುಜಿಯಾನ್ 80,000 ಟನ್‌ಗಳಿಗಿಂತ ಹೆಚ್ಚು ಡಿಸ್ಪ್ಲೇಸ್ಮೆಂಟ್ ಹೊಂದಿದೆ - ಇದು ವಿಕ್ರಾಂತ್‌ ಗಿಂತ ಸುಮಾರು ಎರಡು ಪಟ್ಟರಷ್ಟಿದೆ ಮತ್ತು ಚೀನಾದ ಇತರ ಎರಡು ವಿಮಾನವಾಹಕ ನೌಕೆಗಳಾದ ಲಿಯಾನಿಂಗ್ ಮತ್ತು ಶಾನ್‌ಡಾಂಗ್‌ಗಿಂತ 20,000 ಟನ್‌ಗಳು ಹೆಚ್ಚಾಗಿದೆ.

ಚೀನಾದ ಎಲ್ಲಾ ಮೂರೂ ಏರ್ ಕ್ರಾಫ್ಟ್ ಕ್ಯಾರಿಯರ್ಸ್ ಪರಮಾಣು ರಿಯಾಕ್ಟರ್‌ಗಳಿಗಿಂತ ಭಿನ್ನವಾಗಿ ಸಾಂಪ್ರದಾಯಿಕ ಎಂಜಿನ್‌ಗಳನ್ನು ಬಳಸುತ್ತವೆ, ಇದು ಬಿಸಿನೆಸ್ ಇನ್ಸೈಡರ್ ಪ್ರಕಾರ ಅವರು ಉತ್ಪಾದಿಸುವ ಶಕ್ತಿಯನ್ನು ಮತ್ತು ಸಮುದ್ರದಲ್ಲಿ ಕಳೆಯುವ ಸಮಯವನ್ನು ಮಿತಿಗೊಳಿಸುತ್ತದೆ.
Published by:Ashwini Prabhu
First published: