• Home
  • »
  • News
  • »
  • explained
  • »
  • Explained: ಬ್ರಿಟನ್​ ರಾಜಕೀಯದಲ್ಲಿ ಪ್ರಾಬಲ್ಯವಿದ್ರೂ ಭಾರತೀಯರು ಖುಷಿಪಡುವಂತಿಲ್ಲ!

Explained: ಬ್ರಿಟನ್​ ರಾಜಕೀಯದಲ್ಲಿ ಪ್ರಾಬಲ್ಯವಿದ್ರೂ ಭಾರತೀಯರು ಖುಷಿಪಡುವಂತಿಲ್ಲ!

ರಿಷಿ ಸುನಕ್

ರಿಷಿ ಸುನಕ್

ಭಾರತೀಯ ಮೂಲದವರು ಎಂಬ ಪದವು ಒಂದು ರೀತಿಯ ಭಾರತೀಯತೆಯ ಭ್ರಮೆಯನ್ನು ನಮ್ಮಲ್ಲಿ ಉಂಟುಮಾಡುತ್ತದೆ. ಭಾರತಕ್ಕೆ ಏನಾದರೂ ಒಳಿತನ್ನು ಇವರುಗಳು ಉಂಟುಮಾಡುತ್ತಾರೆ ಎಂದೇ ನಾವು ಭಾವಿಸುತ್ತೇವೆ.

  • Trending Desk
  • Last Updated :
  • Bangalore [Bangalore], India
  • Share this:

ರಿಷಿ ಸುನಕ್ ಅವರು ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ನಾಯಕರಾದಾಗ ರಿಷಿಯ ಸಾಧನೆಯನ್ನು ನೋಡಿ ದೇಶದ ಪ್ರಧಾನಿಗಳು ಸೇರಿದಂತೆ ಅನೇಕ ಗಣ್ಯರು ಹೆಮ್ಮೆಪಟ್ಟಿದ್ದರು. ರಿಷಿ ಸುನಕ್ ಅವರ ಸಾಧನೆ ಶತಮಾನಗಳ ವಸಾಹತುಶಾಹಿ ಹಾಗೂ ವರ್ಣಭೇದ ನೀತಿಗೆ ತಕ್ಕ ಉತ್ತರವಾಗಿದೆ ಎಂದೇ ಭಾರತೀಯರು (Indians) ಭಾವಿಸಿದ್ದರು. ಒಂದು ಕಾಲದಲ್ಲಿ ಭಾರತೀಯನ್ನು ಗುಲಾಮರಾಗಿ ಕಂಡಿದ್ದ ಜನರೇ ಇಂದು ಅದೇ ಭಾರತೀಯರಲ್ಲಿ ನಾಯಕತ್ವವನ್ನು ಅನ್ವೇಷಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿತ್ತು. ರಾಣಿ ಎಲಿಜಬೆತ್ II (Queen Elizabeth II) ತಮ್ಮ ಆಳ್ವಿಕೆಯ ಸಮಯದಲ್ಲಿ ರಾಣಿ ಹಳೆಯ ಜನಾಂಗೀಯವಾದಿ ನೀತಿಯಂತೆ ಚರ್ಚಿಲ್ ಅನ್ನು ಕೊನೆಯ ಪ್ರಧಾನಿಯಾಗಿಸಿದ್ದರು. ಸುನಕ್ ಈ ನೀತಿಯನ್ನು ತೊಡೆದುಹಾಕುತ್ತಾರೆ ಎಂದೇ ಭಾರತೀಯರೆಲ್ಲರೂ ಭಾವಿಸಿದ್ದರು. ಆದರೆ ಕಡೇ ಕ್ಷಣದಲ್ಲಿ ಲಿಜ್ ಟ್ರಸ್ ಈ (Liz Truss) ಸ್ಥಾನಕ್ಕೆ ಬಂದಿದ್ದರು.


ಜನಾಂಗೀಯ ಮಿಶ್ರಿತ ಕ್ಯಾಬಿನೆಟ್ ಆಳ್ವಿಕೆ
ಆದರೂ ಯುಕೆ ಇತಿಹಾಸವು ಜನಾಂಗೀಯ ಮಿಶ್ರಿತ ಕ್ಯಾಬಿನೆಟ್ ಆಳ್ವಿಕೆಯನ್ನೇ ಹೆಚ್ಚು ಕಂಡಿದೆ. ಬ್ರಿಟನ್ ರಾಜಕೀಯದಲ್ಲಿ ಹೆಚ್ಚು ಕಂಡುಬಂದಿರುವ ಭಾರತೀಯ ಮೂಲದ ಅಧಿಕಾರವರ್ಗ ನಮಗೆ ಹೆಮ್ಮೆಯನ್ನುಂಟು ಮಾಡಿದರೂ ಇವರೆಲ್ಲಾ ಭಾರತೀಯ ಅಂಶಗಳನ್ನು ಮೈಗೂಡಿಸಿಕೊಂಡವರಲ್ಲ ಎಂಬುದನ್ನು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ.


ಬ್ರಿಟಿಷ್ ರಾಜಕೀಯದ ಮೇಲೆ ಪ್ರಭಾವ ಬೀರಿರುವ ವೈವಿಧ್ಯತೆಯು ದೇಶದ ಮೇಲೂ ಪರಿಣಾಮ ಬೀರಿದೆ. 1950 ರ ದಶಕದಿಂದ ಬ್ರಿಟನ್ ದೊಡ್ಡ ಪ್ರಮಾಣದ ವಲಸೆಗೆ ಕಾರಣವಾದಾಗ ಬ್ರಿಟಿಷ್ ಸಮಾಜದ ಎಲ್ಲಾ ವಿಭಾಗಗಳಲ್ಲಿ ವರ್ಣಭೇದ ನೀತಿ ಕಂಡುಬಂದಿದೆ.


ಅಲ್ಪಸಂಖ್ಯಾತ ಪ್ರಾಬಲ್ಯ
ಆ ನೀತಿಯು ಇನ್ನೂ ಉಳಿದುಕೊಂಡಿದೆ ಎಂಬುದು ರಾಜಕೀಯ ಚಿಂತಕರ ಮಾತಾಗಿದೆ. ಕಳೆದ ಎರಡು ದಶಕಗಳಲ್ಲಿ ಬ್ರಿಟನ್ ಜನಾಂಗೀಯ ಸಮಾನತೆಯ ಕಡೆಗೆ ಮುಖಮಾಡಿದೆ ಏಕೆಂದರೆ ಪ್ರಸ್ತುತ ಬ್ರಿಟನ್ ಸರಕಾರವು ಭಾರತದ ಪ್ರಸ್ತುತ ಕ್ಯಾಬಿನೆಟ್‌ಗಿಂತ ಹೆಚ್ಚಿನ ಅಲ್ಪಸಂಖ್ಯಾತ ಪ್ರಾಬಲ್ಯವನ್ನು ಹೊಂದಿದೆ.


ಭಾರತೀಯತೆಯ ಸಂಸ್ಕೃತಿ ಹಾಗೂ ಪೂಜನೀಯತೆ ಮಾಯವಾಗಿದೆ
ಬ್ರಿಟನ್ ರಾಜಕೀಯದಲ್ಲಿ ಈ ಹಿಂದೆ ಅಧಿಕಾರ ವಹಿಸಿಕೊಂಡಿದ್ದ ಭಾರತೀಯರೆಲ್ಲರೂ ಭಾರತ ಮೂಲದಿಂದ ಬಂದವರಾಗಿದ್ದರೂ ಅವರಲ್ಲಿ ಭಾರತೀಯತೆಯ ಸಂಸ್ಕೃತಿ ಹಾಗೂ ಪೂಜನೀಯತೆ ಮಾಯವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.


ಭಾರತೀಯ ಮೂಲದವರು ಎಂಬ ಪದವು ಒಂದು ರೀತಿಯ ಭಾರತೀಯತೆಯ ಭ್ರಮೆಯನ್ನು ನಮ್ಮಲ್ಲಿ ಉಂಟುಮಾಡುತ್ತದೆ. ಭಾರತಕ್ಕೆ ಏನಾದರೂ ಒಳಿತನ್ನು ಇವರುಗಳು ಉಂಟುಮಾಡುತ್ತಾರೆ ಎಂದೇ ನಾವು ಭಾವಿಸುತ್ತೇವೆ.


ಅಮೆರಿಕಾದಲ್ಲಿ ಭಾರತೀಯ ಮೂಲದ ಜನರು ಎಂಬ ಪದದ ಬಳಕೆಯನ್ನು ಅಮೆರಿಕಾದಲ್ಲಿ ಜನಿಸಿ ಭಾರತೀಯ ಪೋಷಕರನ್ನು ಹೊಂದಿರುವವರಿಗೆ ಅನ್ವಯಿಸಲಾಗುತ್ತದೆ. ಉದಾಹರಣೆಗೆ ಕಮಲಾ ಹ್ಯಾರಿಸ್ ಅವರ ತಮಿಳು ತಾಯಿ ಭಾರತದಲ್ಲಿರುವ ತಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದರು.


ಯುಕೆ ರಾಜಕೀಯದಲ್ಲಿ ಭಾರತೀಯ ಮೂಲ ವೈವಿಧ್ಯಮಯವಾಗಿದೆ
ಆದರೆ ಯುಕೆ ರಾಜಕೀಯದಲ್ಲಿ ಭಾರತೀಯ ಮೂಲ ಎಂಬ ಅಂಶವು ವೈವಿಧ್ಯಮಯವಾಗಿದೆ. ಯುಕೆ ರಾಜಕೀಯದಲ್ಲಿ ಅಧಿಕಾರ ಹೊಂದಿರುವವರೆಲ್ಲಾ ಪಕ್ಕಾ ಭಾರತೀಯ ಹಿನ್ನಲೆಯವರಲ್ಲ ಎಂಬುದು ಇಲ್ಲಿ ಮುಖ್ಯವಾದುದು.


ಮಾಜಿ ಗೃಹಕಾರ್ಯದರ್ಶಿ ಪ್ರೀತಿ ಪಟೇಲ್ ಉಗಾಂಡಾದ ಗುಜರಾತಿ ಕುಟುಂಬದಲ್ಲಿ ಜನಿಸಿದರು. ಪಕ್ಕಾ ಭಾರತೀಯರು ಎಂದೇ ನಾವು ನಂಬಿರುವ ರಿಷಿ ಸುನಕ್ ಅವರ ಪೋಷಕರು ಕೀನ್ಯಾ ಮತ್ತು ತಾಂಜಾನಿಯಾದಲ್ಲಿ ಹುಟ್ಟಿ ಬೆಳೆದವರು. ಪ್ರಸ್ತುತ ಗೃಹ ಕಾರ್ಯದರ್ಶಿಯಾಗಿರುವ ಸುಯೆಲ್ಲಾ ಬ್ರಾವರ್‌ಮನ್ ಅವರ ತಂದೆ ಕೀನ್ಯಾದಲ್ಲಿ ಬೆಳೆದರು. ಅವರ ತಾಯಿ ಮಾರಿಷಸ್‌ ಮೂಲದಿಂದ ಬಂದಿರುವವರಾಗಿದ್ದಾರೆ.


ಭಾರತೀಯರು ಎಂದು ಹೇಳುವುದು ಕಷ್ಟ
ಭಾರತೀಯ ಮೂಲದವರೆಂದು ನಾವು ಭಾವಿಸುವ ಬ್ರಿಟಿಷ್ ರಾಜಕಾರಣಿಗಳಾದ ಸುನಿಲ್ ನರೈನ್ ಅಥವಾ ವಿಎಸ್ ನೈಪಾಲ್ ಕೂಡ ಭಾರತೀಯರು ಎಂದು ಹೇಳುವುದು ಕಷ್ಟವೇ. ಪ್ರಧಾನಿ ಲಿಜ್ ಟ್ರಸ್ ಭಾರತಕ್ಕಿಂತ ಆಫ್ರಿಕಾವನ್ನು ಉತ್ತಮವಾಗಿ ಪ್ರತಿನಿಧಿಸಿದ್ದಾರೆ ಎಂದು ಹೇಳುವುದೇ ಸೂಕ್ತವಾಗಿದೆ.


ಆಫ್ರಿಕನ್-ಏಷ್ಯನ್ನರು ಮಾತ್ರವಲ್ಲದೆ ಚಾನ್ಸೆಲರ್ ಕ್ವಾಸಿ ಕ್ವಾರ್ಟೆಂಗ್ ಅವರ ಪೋಷಕರು ಘಾನಾದಿಂದ ಬಂದವರು ಮತ್ತು ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಅವರ ತಾಯಿ ಸಿಯೆರಾ ಲಿಯೋನ್‌ನವರು. ಹೀಗೆ ಬ್ರಿಟನ್ ರಾಜಕೀಯದಲ್ಲಿ ಅಧಿಕಾರ ವಹಿಸಿಕೊಂಡವರೆಲ್ಲಾ ಬೇರೆ ಬೇರೆ ದೇಶಗಳ ಮೂಲವನ್ನು ಹೊಂದಿರುವವರಾಗಿದ್ದಾರೆ. ಒಟ್ಟಾರೆ ಯುಕೆಯು ವಲಸಿಗರ ಅಧಿಕಾರವನ್ನೇ ಹೆಚ್ಚು ಕಂಡಿದೆ.


ಕಠಿಣ ರಾಜಕೀಯ ನಿರ್ಧಾರಗಳು ಭಾರತೀಯರಿಗೆ ಮುಳುವಾಗಿದೆ
ಬಲವಾದ ಜನಾಂಗೀಯ ಘಟಕವನ್ನು ಹೊಂದಿರುವ ವಲಸೆಗಳನ್ನು ನೋಡಿದಾಗ ಬಿಳಿಯರಿಗಿಂತ ಇತರ ವಲಸೆ ಬಂದವರು ಹೆಚ್ಚಿನ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಂಡಂತೆ ಕಂಡುಬರುತ್ತಿದೆ, ಅಂದರೆ ಆ ನಿರ್ಧಾರಗಳು ಎಷ್ಟು ಕಠಿಣವಾಗಿದೆ ಎಂದರೆ ಭಾರತೀಯ ಜನರಿಗೆ ಇದೊಂದು ಮುಳುವಾಗಿ ಪರಿಣಮಿಸಿದೆ. ಇದುವೇ ಒಂದು ರೀತಿಯ ಗೆಲುವಾಗಿ ಕಂಡುಬಂದರೂ ಭಾರತೀಯತೆಗೆ ಈ ಅಧಿಕಾರಿಗಳು ಯಾವುದೇ ಸಹಾಯವನ್ನು ಮಾಡಿಲ್ಲ ಎಂಬುದು ಇಲ್ಲಿ ಮುಖ್ಯವಾದುದಾಗಿದೆ.


ಸುಯೆಲ್ಲಾ ಬ್ರೇವರ್‌ಮನ್ ಹೇಳಿಕೆಗಳಿಗೆ ಭಾರತದ ಅಸಮಾಧಾನ
ಇನ್ನು ಬಿಳಿಯರಿಗಿಂತ ವಲಸಿಗರು ಕಠಿಣ ಸ್ಥಾನಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪ್ರೀತಿ ಪಟೇಲ್ ಗೃಹ ಕಾರ್ಯದರ್ಶಿಯಾಗಿದ್ದಾಗ, ಅಕ್ರಮ ವಲಸಿಗರು ಮತ್ತು ರುವಾಂಡಾಕ್ಕೆ ಆಶ್ರಯ ಪಡೆಯುವವರಿಗಾಗಿ ಹೋರಾಟ ನಡೆಸಿರು.


ಬ್ರಿಟನ್ ರಾಜಕೀಯದಲ್ಲಿ ಅಧಿಕಾರ ವಹಿಸಿಕೊಂಡವರು ಭಾರತೀಯ ಮೂಲದವರು ಎಂದು ಕರೆಯಿಸಿಕೊಂಡವರೆಲ್ಲಾ ಭಾರತೀಯರೊಂದಿಗೆ ಅಥವಾ ಭಾರತದೊಂದಿಗೆ ಯಾವುದೇ ಅನುಭೂತಿಯನ್ನು ಹೊಂದಿದವರಲ್ಲ ಏಕೆಂದರೆ ಇವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಗಳು ಭಾರತೀಯ ಒಳಿತಿನ ಯಾವುದೇ ಅಂಶವನ್ನು ಒಳಗೊಂಡಿಲ್ಲ.


ಉದಾಹರಣೆ ಇಲ್ಲಿದೆ
ಉದಾಹರಣೆಗೆ ಭಾರತ ಸರ್ಕಾರವು (ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೂಲಕ) ಪಿಎಂ ಲಿಜ್ ಟ್ರಸ್ ಅವರು ಮಾತುಕತೆ ನಡೆಸುತ್ತಿರುವ ಯುಕೆ-ಇಂಡಿಯಾ ಒಪ್ಪಂದದ ಕುರಿತು ಸುಯೆಲ್ಲಾ ಬ್ರೇವರ್‌ಮನ್ ಅವರ ಹೇಳಿಕೆಗಳೊಂದಿಗೆ ತಕರಾರು ಎತ್ತಿದೆ.


ಈ ಒಪ್ಪಂದವು ಮೂಲಭೂತವಾಗಿ ವ್ಯಾಪಾರ ದೃಷ್ಟಿಯನ್ನು ಹೊಂದಿದ್ದರೂ ಭಾರತೀಯ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ವೀಸಾಗಳನ್ನು ನೀಡುವ ಅಗತ್ಯಕ್ಕೆ ಪ್ರಾಧಾನ್ಯತೆ ನೀಡಿದೆ. ಅದರ ಭಾಗವಾಗಿ, ಅಕ್ರಮ ವಲಸಿಗರನ್ನು ಮತ್ತು ವೀಸಾ ಅವಧಿ ಮೀರಿದ ಭಾರತೀಯರನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಭಾರತ ಹೇಳಿದೆ.


ವಿವಾದಕ್ಕೆ ಕಾರಣವಾದ ಸುಯೆಲ್ಲಾ ಬ್ರೇವರ್‌ಮನ್ ಹೇಳಿಕೆ
ಬ್ರೆವರ್‌ಮನ್ ವಲಸಿಗರಾಗಿ ಬ್ರಿಟನ್‌ನಲ್ಲಿರುವವರು ಹೆಚ್ಚಿನವರು ಭಾರತೀಯ ಸಮೂಹದವರು ಎಂಬುದಾಗಿ ನೀಡಿದ ಹೇಳಿಕೆಯು ವಿವಾದಕ್ಕೆ ಎಡೆಮಾಡಿಕೊಟ್ಟಿತು. ಭಾರತದೊಂದಿಗೆ ದೇಶವು ಮುಕ್ತಗಡಿ ವಲಸೆ ನೀತಿಯನ್ನು ಹೊಂದಿದ್ದು ಇದು ಕಳವಳವನ್ನುಂಟು ಮಾಡುತ್ತಿದೆ ಎಂದು ಬ್ರೆವರ್‌ಮನ್ ಮಾಧ್ಯಮದಲ್ಲಿ ಉಲ್ಲೇಖಿಸಿದ್ದರು.


ವಲಸೆಯ ಮೇಲೆ ಹೆಚ್ಚಿನ ನಿಯಂತ್ರಣಗಳಿಗೆ ಕರೆ
ವಾಸ್ತವವಾಗಿ ನೋಡುವುದಾದರೆ ಕೇವಲ 4.4% ಭಾರತೀಯರು ತಮ್ಮ ವೀಸಾಗಳನ್ನು ಹೆಚ್ಚು ಕಾಲ ಉಳಿಸಿಕೊಂಡಿದ್ದಾರೆ, ಇತರ ಅನೇಕ ರಾಷ್ಟ್ರಗಳಿಗಿಂತ ಇದು ಕಡಿಮೆ ಪ್ರಮಾಣದ್ದಾಗಿದೆ ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.


ಟೋರಿ ಪಾರ್ಟಿ ಕಾನ್ಫರೆನ್ಸ್‌ನಲ್ಲಿ, ಬ್ರೆವರ್‌ಮನ್ ವಲಸೆಯ ಮೇಲೆ ಹೆಚ್ಚಿನ ನಿಯಂತ್ರಣಗಳಿಗೆ ಕರೆ ನೀಡಿದರು ಮತ್ತು ಐ-ಆಮ್-ಎ-ಬ್ರೌನ್-ಪರ್ಸನ್-ಮೈಸೆಲ್ಫ್ ಕಾರ್ಡ್ ಬಗ್ಗೆ ಕೂಡ ಮಾತನಾಡಿದ್ದಾರೆ


ಜನಾಂಗೀಯ ಅಲ್ಪಸಂಖ್ಯಾತರು ನಮ್ಮ ಗಡಿಗಳನ್ನು ನಿಯಂತ್ರಿಸಲು ಬಯಸುವುದು ಜನಾಂಗೀಯವಲ್ಲ ಎಂದು ಬ್ರೆವರ್‌ಮನ್ ಘೋಷಿಸಿದ್ದಾರೆ. ಅಂತೆಯೇ ಆಕೆಯ ಪೋಷಕರು, "ಬ್ರಿಟಿಷ್ ಮೌಲ್ಯಗಳನ್ನು ಸ್ವೀಕರಿಸಿದ್ದಾರೆ" ಎಂಬುದನ್ನು ತಿಳಿಸಲು ಹೆಮ್ಮೆಯಾಗುತ್ತದೆ ಎಂದು ಹೇಳಿದ್ದರು.


ಭಾರತ ಸರಕಾರಕ್ಕೆ ಸಿಟ್ಟು ತರಿಸಿರುವ ಬ್ರೆವರ್‌ಮನ್ ನಿರ್ಧಾರಗಳು
ಬ್ರೆವರ್‌ಮನ್ ತಾವು ಬ್ರಿಟಿಷ್ ಸಾಮ್ರಾಜ್ಯದ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ತಿಳಿಸಿದ್ದಾರೆ. ಅವರು ಉಲ್ಲೇಖಿಸಿರುವಂತೆ, ಬ್ರಿಟಿಷ್ ಸಾಮ್ರಾಜ್ಯವು ಮೂಲಸೌಕರ್ಯ, ಕಾನೂನು ವ್ಯವಸ್ಥೆ, ನಾಗರಿಕ ಸೇವೆ, ಮಿಲಿಟರಿಯನ್ನು ವಸಾಹತುಗಳಿಗೆ ಪರಿಚಯಿಸಿತು ಎಂದಾಗಿದೆ. "ಬ್ರಿಟಿಷ್ ಸಾಮ್ರಾಜ್ಯದ ಮಕ್ಕಳಾಗಿರುವುದಕ್ಕೆ ತಾನು ಹೆಮ್ಮೆಪಡುತ್ತೇನೆ" ಎಂದೇ ಹೇಳಿದ್ದಾರೆ.


ಇದನ್ನೂ ಓದಿ: Explained: ದೇವರ ನಾಡಿನ ನರಭಕ್ಷಕರು! ಇದು ರಿಯಲ್ ‘ನೀಲಾಂಬರಿ’ ಕಥೆ!


ಕ್ರಿಸ್‌ಮಸ್ ವೇಳೆಗೆ ನಿರಾಶ್ರಿತರನ್ನು ರುವಾಂಡಕ್ಕೆ ಗಡಿಪಾರು ಮಾಡುವುದು ತನ್ನ ಕನಸು ಎಂಬುದಾಗಿ ಆಕೆ ಹೇಳಿಕೊಂಡಿದ್ದು ಇದು ನನ್ನ ಕ್ರಿಸ್‌ಮಸ್ ಉಡುಗೊರೆಯಾಗಿದೆ ಎಂದೇ ಹೇಳಿದ್ದಾರೆ.


ಇನ್ನು ಬ್ರೆವರ್‌ಮನ್ ತಿಳಿಸಿರುವ ವಿಷಯವು ಯುಕೆ ಯಲ್ಲಿನ ಅನೇಕರನ್ನು ದಿಗ್ಭ್ರಮೆಗೊಳಿಸಿದೆ. ಅವರ ಹೇಳಿಕೆಗಳು ಭಾರತೀಯರನ್ನು ದಿಗ್ಭ್ರಮೆಗೊಳಿಸಬಹುದು. ಈ ಹೇಳಿಕೆಗಳು ಖಂಡಿತವಾಗಿಯೂ ಭಾರತ ಸರಕಾರವನ್ನು ಕೆರಳಿಸಿದೆ.


ರಿಷಿ ಸುನಕ್ ಸೋಲು
ರಿಷಿ ಸುನಕ್ ಅವರ ವಿಷಯದಲ್ಲಿ ನಾಯಕತ್ವದ ಓಟದಲ್ಲಿ ಹಿಂದೆ ಬಿದ್ದರು ಇದಕ್ಕೆ ಕಾರಣ ಟೋರಿಯಲ್ಲಿನ ಸದಸ್ಯರು ಹಳೆಯ ಶೈಲಿಯ ಸಂಪ್ರದಾಯವನ್ನು ಹೆಚ್ಚು ಬಯಸಿದ್ದರು. ಹೀಗಾಗಿ ಟ್ರಸ್‌ಗೆ ಹೆಚ್ಚಿನ ಗೆಲುವು ಒಲಿದು ಬಂದಿತು


ಒಟ್ಟಾರೆಯಾಗಿ ನಾವು ಮನನ ಮಾಡಿಕೊಳ್ಳಬೇಕಾದ ಅಂಶವೆಂದರೆ ಭಾರತೀಯ ಮೂಲದವರು ಎಂದು ಕರೆಯಿಸಿಕೊಂಡವರು ಬ್ರಿಟಿಷ್ ರಾಜಕೀಯದಲ್ಲಿ ಮುನ್ನಲೆಗೆ ಬಂದಾಗ ಭಾರತಕ್ಕೆ ಒಳಿತಾಗುವ ಕೆಲಸಗಳನ್ನು ಅವರು ಮಾಡುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು.


ಇದನ್ನೂ ಓದಿ: Siddi Community: ಬರ್ತಿದೆ ಸಿದ್ದಿ ಸಮುದಾಯದ ಸಿನಿಮಾ!


ಏಕೆಂದರೆ ಭಾರತೀಯರು ಹಾಗೂ ಭಾರತದ ಬಗೆಗೆ ಅವರು ಯಾವುದೇ ರೀತಿಯ ಒಲವನ್ನು ಹೊಂದಿರುವುದಿಲ್ಲ ಹಾಗೂ ಯಾವುದೇ ರೀತಿಯ ಕಟ್ಟುಪಾಡುಗಳಿಗೂ ಅವರು ಒಳಗಾಗಿರುವುದಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ.

Published by:ಗುರುಗಣೇಶ ಡಬ್ಗುಳಿ
First published: