• Home
  • »
  • News
  • »
  • explained
  • »
  • Explained: ಉಕ್ರೇನ್‌ನಿಂದ ವಾಪಾಸ್ಸಾದ ಭಾರತೀಯ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ? ವೈದ್ಯಕೀಯ ಶಿಕ್ಷಣವನ್ನೇ ತೊರೆಯುವ ನಿರ್ಧಾರವೇಕೆ?

Explained: ಉಕ್ರೇನ್‌ನಿಂದ ವಾಪಾಸ್ಸಾದ ಭಾರತೀಯ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ? ವೈದ್ಯಕೀಯ ಶಿಕ್ಷಣವನ್ನೇ ತೊರೆಯುವ ನಿರ್ಧಾರವೇಕೆ?

ಉಕ್ರೇನ್‌ನಿಂದ ವಾಪಾಸ್ ಆದ ವಿದ್ಯಾರ್ಥಿಗಳು

ಉಕ್ರೇನ್‌ನಿಂದ ವಾಪಾಸ್ ಆದ ವಿದ್ಯಾರ್ಥಿಗಳು

ಯುದ್ಧಪೀಡಿತ ಉಕ್ರೇನ್‌ನಿಂದ ಹಿಂದಿರುಗಿದ ಸರಿಸುಮಾರು 20,000 ಭಾರತೀಯ ವಿದ್ಯಾರ್ಥಿಗಳು ಪೂರ್ವ ಯುರೋಪಿಯನ್ ದೇಶದಲ್ಲಿ ತಮ್ಮ ಶಿಕ್ಷಣವನ್ನು ಹೇಗೆ ಮುಂದುವರಿಸಬಹುದು ಎಂಬುದರ ಕುರಿತು ಈಗ ಅನಿಶ್ಚಿತರಾಗಿದ್ದಾರೆ. ವೈದ್ಯಕೀಯ ಶಿಕ್ಷಣವನ್ನು ಕೊನೆಗೊಳಿಸುವ ನಿರ್ಧಾರದಲ್ಲಿದ್ದಾರೆ ಇಲ್ಲವೇ ದೇಶಗಳಲ್ಲಿನ ಇತರ ಶಿಕ್ಷಣ ಸಂಸ್ಥೆಗಳಲ್ಲಿ ವರ್ಗಾವಣೆಯನ್ನು ಬಯಸುತ್ತಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

17 ರ ಹರೆಯದ ಯುವಕ ಪ್ರಲಯ್ ಕುಮಾರ್ ನಾಯಕ್ 2020 ರಲ್ಲಿ ಒಡಿಶಾದ ಜೈಪುರದ (Jaipur) ಸಣ್ಣ ಪಟ್ಟಣದಿಂದ 5,400 ಕಿ.ಮೀ. ದೂರದ ಉಕ್ರೇನ್‌ಗೆ ಪ್ರಯಾಣಿಸುವಾಗ ಹಲವಾರು ಆಸೆ ಆಕಾಂಕ್ಷೆಗಳನ್ನು ಕಣ್ಣಲ್ಲಿ ತುಂಬಿಕೊಂಡಿದ್ದರು. ವೈದ್ಯಕ್ಷೀಯ ಶಿಕ್ಷಣ (Medical Education) ಪೂರ್ತಿಗೊಳಿಸಿ ವೈದ್ಯರಾಗಿ ತವರಿಗೆ ಮರಳುವ ಹಂಬಲವನ್ನು ಪ್ರಲಯ್ ಹೊಂದಿದ್ದರು. ಬಾಲ್ಯದಿಂದಲೇ ವೈದ್ಯನಾಗಬೇಕೆಂಬ ಇಚ್ಛೆ ಪ್ರಲಯ್‌ದಾಗಿತ್ತು. ಎರಡು ವರ್ಷಗಳ ನಂತರ, ಅವರು ತಮ್ಮ ಮೂರನೇ ವರ್ಷದ ವೈದ್ಯಕೀಯ ಅಧ್ಯಯನವನ್ನು ಪ್ರಾರಂಭಿಸುವ ಮೊದಲೇ ರಷ್ಯಾ ಉಕ್ರೇನ್ ಯುದ್ಧ (Russia Ukraine War) ಅವರ ಕನಸಿಗೆ ತಣ್ಣೀರೆರಚಿದೆ. ಈಗ ಬೇರೆ ವೈದ್ಯಕೀಯ ಶಿಕ್ಷಣವನ್ನು ಹೇಗೆ ಪೂರ್ಣಗೊಳಿಸುವುದು, ಬೇರೆ ವೃತ್ತಿಯನ್ನು ಅರಸುವುದೇ ಎಂಬ ತೊಳಲಾಟದಲ್ಲಿ ಪ್ರಲಯ್ ಸಿಲುಕಿಕೊಂಡಿದ್ದಾರೆ.


ಯುದ್ಧಪೀಡಿತ ಉಕ್ರೇನ್‌ನಿಂದ ಹಿಂದಿರುಗಿದ ಭಾರತೀಯ ವಿದ್ಯಾರ್ಥಿಗಳು
ಪ್ರಲಯ್ , ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಯುದ್ಧಪೀಡಿತ ಉಕ್ರೇನ್‌ನಿಂದ ಹಿಂದಿರುಗಿದ ಸರಿಸುಮಾರು 20,000 ಭಾರತೀಯ ವಿದ್ಯಾರ್ಥಿಗಳು ಪೂರ್ವ ಯುರೋಪಿಯನ್ ದೇಶದಲ್ಲಿ ತಮ್ಮ ಶಿಕ್ಷಣವನ್ನು ಹೇಗೆ ಮುಂದುವರಿಸಬಹುದು ಎಂಬುದರ ಕುರಿತು ಈಗ ಅನಿಶ್ಚಿತರಾಗಿದ್ದಾರೆ.


ವೈದ್ಯಕೀಯ ಶಿಕ್ಷಣವನ್ನು ಕೊನೆಗೊಳಿಸುವ ನಿರ್ಧಾರದಲ್ಲಿದ್ದಾರೆ ಇಲ್ಲವೇ ದೇಶಗಳಲ್ಲಿನ ಇತರ ಶಿಕ್ಷಣ ಸಂಸ್ಥೆಗಳಲ್ಲಿ ವರ್ಗಾವಣೆಯನ್ನು ಬಯಸುತ್ತಿದ್ದಾರೆ. ತಮ್ಮ ಊರಿನಲ್ಲಿಯೇ ಇರುವ ಇತರ ವೈದ್ಯಕೀಯ ಶಾಲೆಗಳಲ್ಲಿ ದಾಖಲಾತಿಗೆ ಭಾರತದ ಸರಕಾರದ ನೆರವು ದೊರಕುವುದೇ ಎಂದು ಕಾತರದಿಂದ ಕಾಯುತ್ತಿದ್ದಾರೆ.


ವಿದ್ಯಾರ್ಥಿಗಳ ಆತಂಕ ಹಾಗೂ ಗೊಂದಲ ಇನ್ನಷ್ಟು ಹೆಚ್ಚಿದೆ
ಅಕ್ಟೋಬರ್ 10 ರಿಂದ ಉಕ್ರೇನ್‌ನಾದ್ಯಂತ ರಷ್ಯಾ ತನ್ನ ವೈಮಾನಿಕ ದಾಳಿಯನ್ನು ನಡೆಸಿದ ನಂತರ ಇದೀಗ ಭಾರತೀಯ ವಿದ್ಯಾರ್ಥಿಗಳ ಆತಂಕ ಹಾಗೂ ಗೊಂದಲ ಇನ್ನಷ್ಟು ಹೆಚ್ಚಿದೆ. ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್ ಮೇಲೆ ಶೆಲ್ ದಾಳಿ ಆರಂಭಿಸಿದಾಗ, ಪ್ರಲಯ್ ನಾಯಕ್ ಪೂರ್ವದ ಖಾರ್ಕಿವ್ ನಗರದಲ್ಲಿ ಹದಿನೈದು ದಿನಗಳ ಕಾಲ ಸಿಕ್ಕಿಬಿದ್ದಿದ್ದರು. ಮಾರ್ಚ್‌ನಲ್ಲಿ, ಅವರನ್ನು ನೆರೆಯ ರೊಮೇನಿಯಾ ಮೂಲಕ ಊರಿಗೆ ಸ್ಥಳಾಂತರಿಸಲಾಯಿತು.


ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳುತ್ತದೆ ಮತ್ತು ಅವರ ವಿಶ್ವವಿದ್ಯಾಲಯವು ತರಗತಿಗಳನ್ನು ಪುನರಾರಂಭಿಸುತ್ತದೆ ಎಂದೇ ಅವರು ಆಶಿಸಿದ್ದರು. ಆದರೆ ವಾರಗಳು ತಿಂಗಳುಗಳವರೆಗೆ ಯಾವುದೇ ನಿರ್ಣಯವಿಲ್ಲದ್ದರಿಂದ, ಪ್ರಲಯ್ ಭಾರತೀಯ ವೈದ್ಯಕೀಯ ಕಾಲೇಜಿಗೆ ವರ್ಗಾವಣೆಯನ್ನು ಹುಡುಕಲು ಪ್ರಾರಂಭಿಸಿದರು. ಸೆಪ್ಟೆಂಬರ್‌ನಲ್ಲಿ, ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗವು ಉಕ್ರೇನ್‌ನ ವಿಶ್ವವಿದ್ಯಾನಿಲಯಗಳ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತೀಯ ಕಾಲೇಜುಗಳಲ್ಲಿ ಅವಕಾಶ ಕಲ್ಪಿಸುವ ಯೋಜನೆಯಿಲ್ಲ ಎಂದು ಸ್ಪಷ್ಟಪಡಿಸಿತು, ಇದರೊಂದಿಗೆ ನಾಯಕ್ ಅವರ ವೈದ್ಯನಾಗುವ ಕನಸು ಕಮರಿಹೋಯಿತು.


ಇದನ್ನೂ ಓದಿ: Invention Story: ಈ ಮಗ ಅಮ್ಮನಿಗೋಸ್ಕರ ರೋಬೋಟ್​ ಮಾಡಿದ್ದಾನೆ, ನೀವ್ ಏನ್ ಮಾಡಿದ್ದೀರಾ?


ಪ್ರಲಯ್ ಹಾಗೂ ಅವರ ಹೆತ್ತವರು ವೈದ್ಯಕೀಯ ಶಿಕ್ಷಣಕ್ಕೆ ತಿಲಾಂಜಲಿ ಇಡುವ ನಿರ್ಧಾರವನ್ನು ಕೈಗೊಂಡರು. ಹತಾಶೆ ಹಾಗೂ ಗೊಂದಲದಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಹೇಳಿರುವ ಪ್ರಲಯ್ ಪ್ರಸ್ತುತ ಬೆಂಗಳೂರಿನಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿದ್ದಾರೆ.


ದಾಖಲಾತಿ ಇಲ್ಲ
ಒಡಿಶಾದ ರಾಜಧಾನಿ ಭುವನೇಶ್ವರದಿಂದ 100 ಕಿಮೀ ದೂರದಲ್ಲಿರುವ ಜಾಜ್‌ಪುರದಲ್ಲಿ ಪ್ರಲಯ್ ವಾಸಿಸುತ್ತಿದ್ದರು. ಸ್ಥಳೀಯ ಟೆಲಿವಿಷನ್ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಬಸಂತ್ ಕುಮಾರ್ ನಾಯಕ್ ಅವರು ತಮ್ಮ ಏಕೈಕ ಮಗನನ್ನು ವಿದೇಶಕ್ಕೆ ಕಳುಹಿಸುವ ಬಗ್ಗೆ ಆರಂಭದಲ್ಲಿ ಹಿಂಜರಿದರು, ಅಲ್ಲಿ ಭಾಷೆಯೇ ದೊಡ್ಡ ಅಡ್ಡಿಯಾಗಿತ್ತು. ಆದರೆ ಉಕ್ರೇನ್‌ನಲ್ಲಿ ವ್ಯಾಸಂಗ ಮಾಡಿ ಅಲ್ಲೇ ನೆಲೆಸಿದ್ದ ಒಡಿಶಾದ ಮತ್ತೊಬ್ಬ ವೈದ್ಯ ಸ್ವಾಧಿನ್ ಮೊಹಾಪಾತ್ರ ಸಂಪರ್ಕ ಅವರಿಗೆ ದೊರಕಿತು.


ಭಾರತೀಯ ವಿದ್ಯಾರ್ಥಿಗಳಿಗೆ ಉಕ್ರೇನಿಯನ್ ಕಾಲೇಜುಗಳಲ್ಲಿ ಸ್ಥಳಗಳನ್ನು ಹುಡುಕಲು ಸಹಾಯ ಮಾಡುವ ಶಿಕ್ಷಣ ಸಲಹಾ ಸಂಸ್ಥೆಯನ್ನು ತೆರೆಯಲು ಮೊಹಾಪಾತ್ರ ನಿರ್ಧರಿಸಿದರು. ನಾಯಕ್ ಅವರು ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದರು. ಆರು ವರ್ಷಗಳ ಕೋರ್ಸ್‌ಗೆ ಶುಲ್ಕ 20 ಲಕ್ಷ ರೂವಾಗಿತ್ತು. ಬಸಂತ್ ತಮ್ಮಲ್ಲಿರುವ ಎಲ್ಲಾ ಉಳಿತಾಯವನ್ನು ತನ್ನ ಮಗನನ್ನು ಉಕ್ರೇನ್‌ಗೆ ಕಳುಹಿಸಲು ಬಳಸಿದರು.


ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್‌ ಮೇಲೆ ದಾಳಿ ಮಾಡಿದಾಗ ನಾಯಕ್‌ ಅವರು ಎರಡನೇ ವರ್ಷದ ವೈದ್ಯಕೀಯ ವ್ಯಾಸಂಗದಲ್ಲಿದ್ದರು ಮತ್ತು ರಷ್ಯಾ ಗಡಿಯಿಂದ 40 ಕಿಮೀ ದೂರದಲ್ಲಿರುವ ಖಾರ್ಕಿವ್‌ ಮೇಲೆ ದಾಳಿ ನಡೆಸಿತ್ತು. ನಾಯಕ್ ಮತ್ತು ಅವರ ಸ್ನೇಹಿತರು - ದೇಬಶಿಶ್ ರೌತ್, ಶಾಂತಿ ಕುಮಾರ್ ನಾಯಕ್, ಪ್ರಿಯಬ್ರತ ಸಾಹೂ ಮತ್ತು ರಿಷಿತ್ ಭಾರದ್ವಾಜ್ - ಆರು ದಿನಗಳ ಕಾಲ ಭೂಗತ ಮೆಟ್ರೋ ನಿಲ್ದಾಣದಲ್ಲಿ ಆಶ್ರಯ ಪಡೆದರು.


ನಾಯಕ್ ಕಿವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ದಿನಕ್ಕೆ ಹಲವಾರು ಬಾರಿ ಕರೆ ಮಾಡುತ್ತಿದ್ದರು. ಪ್ರತಿ ಬಾರಿಯೂ ಅವರು ಒಂದೇ ರೀತಿಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದ್ದರು ಎಂದು ಹೇಳುವ ನಾಯಕ್, ಅಂತಿಮವಾಗಿ ರಾಯಭಾರ ಕಚೇರಿಯು ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಮೊಹಾಪಾತ್ರ ಮತ್ತು ಇತರ ಶಿಕ್ಷಣ ಏಜೆಂಟರು ಅವರ ರಕ್ಷಣೆಗೆ ಬಂದರು ಎಂದು ಹೇಳಿದ್ದಾರೆ.


ಯುದ್ಧದ ಭಯಾನಕ ದೃಶ್ಯಗಳಿಗೆ ಸಾಕ್ಷಿಯಾಗಿದ್ದ ವಿದ್ಯಾರ್ಥಿಗಳು
ಮಾರ್ಚ್ 1 ರಂದು, ಸುಮಾರು 950 ಭಾರತೀಯ ವಿದ್ಯಾರ್ಥಿಗಳು ಖಾರ್ಕಿವ್‌ನಿಂದ ಉಪನಗರ ಪಟ್ಟಣ ಪೆಸೊಚಿನ್‌ಗೆ ಭಾರೀ ವಾಯುದಾಳಿ ಮತ್ತು ಶೆಲ್ ದಾಳಿಯ ನಡುವೆ ಪ್ರಯಾಣಿಸಿದರು. ಅಲ್ಲಿಂದ, ಶಿಕ್ಷಣ ಏಜೆಂಟರು ನೆರೆಯ ದೇಶಗಳಾದ ಹಂಗೇರಿ, ರೊಮೇನಿಯಾ ಮತ್ತು ಪೋಲೆಂಡ್‌ಗೆ ಬಸ್‌ಗಳನ್ನು ವ್ಯವಸ್ಥೆ ಮಾಡಿದರು, ಅಲ್ಲಿಂದ ಭಾರತೀಯ ರಾಯಭಾರ ಕಚೇರಿ ಸ್ಥಳಾಂತರಿಸುವ ವಿಮಾನಗಳನ್ನು ವ್ಯವಸ್ಥೆಗೊಳಿಸಿತು. ಯುದ್ಧ ಪ್ರಾರಂಭವಾದ ಹದಿನಾಲ್ಕು ದಿನಗಳ ನಂತರ, ಮಾರ್ಚ್ 8 ರಂದು, ನಾಯಕ್ ಅಂತಿಮವಾಗಿ ಭುವನೇಶ್ವರಕ್ಕೆ ಬಂದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.


ಇದನ್ನೂ ಓದಿ: Explained: ಹೆಣ್ಣುಮಕ್ಕಳಿಗೆ ಕಲಿಯಲು ಕಂಟಕವಾಗುವ ಋತುಚಕ್ರ! ಮುಟ್ಟಿನ ಸಮಸ್ಯೆಗೆ ಕೊನೆ ಎಂದು?


ಆ ಎರಡು ವಾರಗಳಲ್ಲಿ, ಯುದ್ಧದ ಭಯಾನಕ ದೃಶ್ಯಗಳನ್ನು ನೋಡಿದರು ಎಂಬುದು ನಾಯಕ್ ಅವರ ಅಭಿಪ್ರಾಯವಾಗಿದೆ. ಕಂಡು ಕೇಳರಿಯದ ಸ್ಫೋಟಗಳನ್ನು ನೋಡಿದ್ದಾಗಿ ಹೇಳಿಕೊಂಡಿರುವ ನಾಯಕ್, ಯುದ್ಧದ ಸಮಯದಲ್ಲಿ ಅವರ ಕಾಲೇಜಿನ ಹಿರಿಯರೊಬ್ಬರು ಮೃತಗೊಂಡಿರುವುದನ್ನು ಪತ್ತೆಮಾಡಿದ್ದಾರೆ ಮತ್ತು ಪ್ರತಿ ದಿನವೂ ತಮ್ಮದು ಇದೇ ರೀತಿಯ ಅಂತ್ಯವಾಗುತ್ತದೆ ಎಂದೇ ಹೆದರಿಕೊಂಡಿದ್ದರು. ಆದರೆ ಯುದ್ಧದಿಂದ ತಪ್ಪಿಸಿಕೊಂಡ ಸಂತೋಷದ ನಂತರವೂ ನಾಯಕ್ ಶೀಘ್ರದಲ್ಲೇ ತಾವು ಕೂಡ ವಿಶ್ವವಿದ್ಯಾಲಯಕ್ಕೆ ಮರಳುತ್ತೇನೆ ಹಾಗೂ ಶಿಕ್ಷಣವನ್ನು ಪೂರ್ತಿಗೊಳಿಸುತ್ತೇನೆ ಎಂದೇ ಭಾವಿಸಿದ್ದರು.


ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದ ಖಾರ್ಕಿವ್ ವೈದ್ಯಕೀಯ ವಿಶ್ವವಿದ್ಯಾಲಯ
ಏಪ್ರಿಲ್ ಮಧ್ಯದಲ್ಲಿ, ಖಾರ್ಕಿವ್ ವೈದ್ಯಕೀಯ ವಿಶ್ವವಿದ್ಯಾಲಯವು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿತು. ಶಿಕ್ಷಕರು ತಮ್ಮ ಮನೆಗಳಲ್ಲಿ ಅಡಗಿಕೊಂಡೇ ಇಂಟರ್‌ನೆಟ್ ಮೂಲಕ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಭಾಷೆ, ತತ್ತ್ವಶಾಸ್ತ್ರ ಮತ್ತು ಅಂಗರಚನಾಶಾಸ್ತ್ರದ ಕೋರ್ಸ್‌ಗಳನ್ನು ಸಮಯದ ಮಿತಿಗಳಿಂದ ಸಂಕುಚಿತಗೊಳಿಸಲಾಗಿದೆ ಅಥವಾ ಕಲಿಸಲಾಗುವುದಿಲ್ಲ ಎಂದೇ ತಿಳಿಸಲಾಯಿತು.


ಸೆಮಿಸ್ಟರ್ ವಿರಾಮದ ನಂತರ ಸೆಪ್ಟೆಂಬರ್‌ನಲ್ಲಿ ಮೂರನೇ ವರ್ಷ ಪ್ರಾರಂಭವಾದಾಗ, ಉಕ್ರೇನಿಯನ್ ವಿಶ್ವವಿದ್ಯಾಲಯಗಳು ಕ್ಯಾಂಪಸ್‌ನಲ್ಲಿ ತರಗತಿಗಳನ್ನು ಪ್ರಾರಂಭಿಸುವ ಸ್ಥಿತಿಯಲ್ಲಿಲ್ಲ ಮತ್ತು ಹಿಂತಿರುಗಲು ಸ್ವಲ್ಪವಾದರೂ ಅವಕಾಶ ಸಿಗಬಹುದು ಎಂದೇ ನಾಯಕ್ ಭಾವಿಸಿದ್ದರು. ಭಾರತ ಸರಕಾರವು ಈ ಕುರಿತು ಯಾವುದಾದರೂ ಒಂದು ವಿಧಾನವನ್ನು ಕಲ್ಪಿಸುತ್ತದೆ ಎಂದೇ ನಾನು ನಿರೀಕ್ಷಿಸುತ್ತಿದ್ದೆ ಎಂಬುದು ನಾಯಕ್ ಮಾತಾಗಿದೆ. ಆದರೆ ಜುಲೈನಲ್ಲಿ ಮತ್ತು ಮತ್ತೆ ಸೆಪ್ಟೆಂಬರ್‌ನಲ್ಲಿ, ರಾಷ್ಟ್ರೀಯ ವೈದ್ಯಕೀಯ ಆಯೋಗವು ವಿದೇಶಿ ವಿಶ್ವವಿದ್ಯಾಲಯಗಳ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತೀಯ ಕಾಲೇಜುಗಳಿಗೆ ವರ್ಗಾಯಿಸಲು ಯಾವುದೇ ಆಡಳಿತಾತ್ಮಕ ಅವಕಾಶವಿಲ್ಲ ಎಂದು ಪುನರುಚ್ಛರಿಸಿತು.


ಈ ಸಮಯದಲ್ಲಿ ನಾಯಕ್ ಅವರನ್ನು ವೈದ್ಯಕೀಯ ಶಿಕ್ಷಣ ಮುಂದುವರಿಸಲು ಬೇರೆ ದೇಶಕ್ಕೆ ಕಳುಹಿಸಲು ಅವರ ಪೋಷಕರು ಹಿಂದೇಟು ಹಾಕಿದ್ದರು. ಸಪ್ಟೆಂಬರ್‌ನಲ್ಲಿ ನಾಯಕ್ ತಮ್ಮ ಕನಸಾಗಿದ್ದ ವೈದ್ಯಕ್ಷೀಯ ಶಿಕ್ಷಣವನ್ನೇ ಕೊನೆಗೊಳಿಸುವ ನಿರ್ಧಾರಕ್ಕೆ ಬಂದರು, ಇದೀಗ ನಾಯಕ್ ತಮ್ಮ ಹೊಸ ಪದವಿಯನ್ನು ಪುನಃ ಆರಂಭದಿಂದಲೇ ಪ್ರಾರಂಭಿಸಬೇಕು ಎಂದು ಅಳಲು ತೋಡಿಕೊಂಡಿದ್ದಾರೆ.


ವಿದ್ಯಾರ್ಥಿಗಳು ಸೀಮಿತ ಆಯ್ಕೆ ಹೊಂದಿದ್ದರು
ಉಕ್ರೇನ್‌ನಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಸೀಮಿತ ಆಯ್ಕೆಗಳನ್ನು ಹೊಂದಿದ್ದಾರೆ. ಮೊದಲಿಗೆ, ಅವರು ಮತ್ತೊಂದು ದೇಶದ ವಿಶ್ವವಿದ್ಯಾಲಯಕ್ಕೆ ಶಾಶ್ವತ ವರ್ಗಾವಣೆಯನ್ನು ತೆಗೆದುಕೊಳ್ಳಬಹುದು. ಅದಕ್ಕಾಗಿ, ಅವರು ಉಕ್ರೇನ್‌ನಲ್ಲಿರುವ ತಮ್ಮ ಹೋಮ್ ಯೂನಿವರ್ಸಿಟಿಯಿಂದ ವರ್ಗಾವಣೆ ಪ್ರತಿಗಳು ಮತ್ತು ಅಂಕ ಪಟ್ಟಿಗಳನ್ನು ಪಡೆದುಕೊಂಡಿರಬೇಕು. ಆದರೆ ಹಲವಾರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಯುದ್ಧ ಪರಿಸ್ಥಿತಿಗಳಿಂದಾಗಿ ತಮ್ಮ ವಿಶ್ವವಿದ್ಯಾಲಯಗಳಿಂದ ಇವುಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.


"ಮೊಬಿಲಿಟಿ ಪ್ರೋಗ್ರಾಂ" ಅಡಿಯಲ್ಲಿ ಮತ್ತೊಂದು ದೇಶಕ್ಕೆ ತಾತ್ಕಾಲಿಕ ವರ್ಗಾವಣೆಯನ್ನು ಪಡೆಯುವುದು ಎರಡನೆಯ ಆಯ್ಕೆಯಾಗಿದೆ. ಉಕ್ರೇನ್‌ನಲ್ಲಿನ ಯುದ್ಧವು ಕೊನೆಗೊಳ್ಳುವವರೆಗೆ ಆರು ತಿಂಗಳು ಅಥವಾ ಒಂದು ವರ್ಷದವರೆಗೆ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮತ್ತೊಂದು ವಿಶ್ವವಿದ್ಯಾಲಯದಲ್ಲಿ ಮುಂದುವರಿಸಲು ಇದು ಅನುವು ಮಾಡಿಕೊಡುತ್ತದೆ. ಅಂತಿಮ ಪದವಿಯನ್ನು ಉಕ್ರೇನ್‌ನಲ್ಲಿರುವ ಪೋಷಕ ವಿಶ್ವವಿದ್ಯಾಲಯವು ನೀಡುತ್ತದೆ.


ಇದನ್ನೂ ಓದಿ:  Explained: ಮಕ್ಕಳಿಗೆ ಪಾಠದೊಂದಿಗೆ ಆಟವೂ ಇರಬೇಕಾ? ಆರು ವರ್ಷದೊಳಗಿನ ಮಕ್ಕಳ ಶಿಕ್ಷಣ ಹೇಗಿರಬೇಕು?


ಈ ಬಗ್ಗೆ ಮಾಹಿತಿ ನೀಡಿದ ವಿದ್ಯಾರ್ಥಿ ಪ್ರತೀಕ್ ಧಾಲ್, ರಾಷ್ಟ್ರೀಯ ವೈದ್ಯಕೀಯ ಆಯೋಗವು 29 ದೇಶಗಳ ಪಟ್ಟಿಯನ್ನು ಪ್ರಕಟಿಸಿದ್ದು ಮೊಬಿಲಿಟಿ ಪ್ರೊಗ್ರಾಂ ಅಡಿಯಲ್ಲಿ ವರ್ಗಾವಣೆಯನ್ನು ಪಡೆಯಬಹುದು ಆದರೆ ಈ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಸರಕಾರ ಯಾವುದೇ ನೆರವನ್ನು ನೀಡುವುದಿಲ್ಲ ಹಾಗೂ ವಿದ್ಯಾರ್ಥಿಗಳೇ ಪ್ರತಿಯೊಂದು ವೆಚ್ಚವನ್ನು ಭರಿಸಬೇಕು ಎಂದು ತಿಳಿಸಿದ್ದಾರೆ.

Published by:Ashwini Prabhu
First published: