Explained: ಗಣ್ಯವ್ಯಕ್ತಿ ಎಂಬುದನ್ನು ಎಲ್ಲಿಯೂ ತೋರಿಸಿಕೊಳ್ಳದ ರತನ್ ಟಾಟಾ ಜೀವನ ಶೈಲಿ ಹೇಗಿದೆ ಗೊತ್ತೇ?

Ratan Tata: ರತನ್ ಟಾಟಾ ಅವರು ಸರಳ ಜೀವನವನ್ನು ನೆಚ್ಚಿಕೊಂಡವರು ಎಂಬುದಾಗಿ ಪತ್ರಕರ್ತರಾದ ವಿಟ್‌ವರ್ತ್ ಹೇಳಿದ್ದಾರೆ. ಬೆಳೆದದ್ದು ಶ್ರೀಮಂತ ಕುಟುಂಬದಲ್ಲೇ ಆದರೂ ಇದೀಗ ಅವರ ಜೀವನ ಶೈಲಿ ಒಬ್ಬ ವೃತ್ತಿಪರ ಮ್ಯಾನೇಜರ್‌ನದ್ದಾಗಿದೆ. ಮಿಲಿಯಾಧಿಪತಿಯೇ ಆಗಿದ್ದರೂ ಸರಳ ಬದುಕನ್ನೇ ಅವರು ಆಶ್ರಯಿಸಿದ್ದಾರೆ.

ರತನ್ ಟಾಟಾ

ರತನ್ ಟಾಟಾ

 • Share this:
  ವ್ಯಾಪಾರಿಗಳು ಉದ್ಯಮಿಗಳೆಂದರೆ ಸಮಾಜದಲ್ಲಿ ಋಣಾತ್ಮಕ ಅಂಶಗಳೇ ಹೆಚ್ಚು ಪ್ರಸ್ತುತವಾಗಿರುತ್ತದೆ.ಬಿಡಿಗಾಸು ಬಿಚ್ಚದವರು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುವವರು ಎಂಬ ಭಾವನೆ ಹೆಚ್ಚಿನವರಲ್ಲಿ ಮೂಡುತ್ತದೆ. ಆದರೆ ಉದ್ಯಮಿ ರತನ್ ಟಾಟಾ ಎಂದರೆ ದೇಶದ ಪ್ರತಿಯೊಬ್ಬರಿಗೂ ಗೌರವ ಹೆಮ್ಮೆ ಇದ್ದೇ ಇದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲೂ ದೇಶದ ಜನರ ಬೆಂಬಲಕ್ಕೆ ನಿಂತು ಸುಮಾರು 500 ಕೋಟಿ ದೇಣಿಗೆ ನೀಡಿದ್ದಾರೆ. ಹಾಗೂ ಅವರ ಟಾಟಾ ಗ್ರೂಪ್ 1,000 ಕೋಟಿ ದೇಣಿಗೆ ನೀಡಿ ಕಲಿಯುಗದ ಕರ್ಣ ಎಂದೆನಿಸಿಕೊಂಡಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ರತನ್ ಟಾಟಾ ಬೆಳೆದು ಬಂದ ಪರಿ ಒಂದು ಉಚ್ಚ್ರಾಯ ಸ್ಥಿತಿಯದ್ದಾಗಿದೆ ಎಂಬುದನ್ನು ಬಣ್ಣಿಸಬಹುದಾಗಿದೆ.

  1835 ರ ಸಮಯದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಭಾರತದ ಈಶಾನ್ಯದ ಗಡಿ ಪ್ರದೇಶದ ಅಸ್ಸಾಂ ನ ನಿತ್ಯಹರಿದ್ವರ್ಣ ಕಾಡು ಬಂಗಾರದ ಕಿರೀಟದಂತೆ ಕಾಣಿಸಿತ್ತು. ಇಲ್ಲಿನ ಅರಣ್ಯ ಪ್ರದೇಶಗಳಲ್ಲಿ ವೈವಿಧ್ಯಮಯ ಚಹಾ ಪ್ರಭೇದಗಳಿತ್ತು. ಕ್ಯಾಮೆಲಿಯಾ ಸಿನೆನ್ಸಿಸ್ ಹಾಗೂ ಚಹಾ ಪೊದೆಗಳ ತವರೂರಾಗಿತ್ತು. 1849 ರಲ್ಲಿ ಅಮೆರಿಕಾದ ನದಿಯಲ್ಲಿ ಬಡಗಿಯೊಬ್ಬ ಹಳದಿ ಲೋಹವನ್ನು ಕಂಡುಕೊಂಡಂತೆ 1835 ರಲ್ಲಿ ಚಹಾ ಒಂದು ವಾಣಿಜ್ಯ ಸಂಪನ್ಮೂಲವಾಗಿ ಖ್ಯಾತಿಯಾಗಿತ್ತು. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಅಸ್ಸಾಂ ಗುಡ್ಡಗಾಡುಗಳು ಅದೃಷ್ಟದ ಹೊಸ ಭರವಸೆಯನ್ನು ಮೂಡಿಸಿತು.

  ಭಾರತಕ್ಕೆ 1947 ರಲ್ಲಿ ದೊರಕಿದ ಸ್ವಾತಂತ್ರ್ಯದೊಂದಿಗೆ ಬ್ರಿಟಿಷ್ ಆಳ್ವಿಕೆ ಕೊನೆಗೊಂಡಿತು. ಟಾಟಾ ಗ್ರೂಪ್ ಬ್ರಿಟಿಷ್ ಸಾಮ್ರಾಜ್ಯದ ಅತಿದೊಡ್ಡ ಟಿ ಬ್ರ್ಯಾಂಡ್ ಆಗಿದ್ದ ಟೆಟ್ಲಿಯನ್ನು ವಶಪಡಿಸಿಕೊಂಡಿತು. ಭಾರತೀಯ ಕಂಪನಿ ಸ್ವಾಧೀನಪಡಿಸಿಕೊಂಡಿರುವ ಅತಿದೊಡ್ಡ ವಿದೇಶಿ ಸ್ವಾಧೀನ ಕಂಪನಿ ಇದಾಗಿದೆ. ಇದೇ ಸಮಯದಲ್ಲಿ ಪತ್ರಕರ್ತ ಡಾಮಿಯನ್ ವಿಟ್ವರ್ತ್ ಮುಂಬೈನ ಪ್ರಸಿದ್ಧ ಹೋಟೆಲ್ ತಾಜ್‌ಮಹಲ್‌ಗೆ ಕರೆ ಮಾಡಿ ಟಾಟಾ ಅಧ್ಯಕ್ಷರಾದ ರತನ್ ಟಾಟಾ ಸಂದರ್ಶನಕ್ಕೆ ಸಮ್ಮತಿ ಪಡೆದರು.

  ಬ್ರಿಟಿಷ್ ಸಾಮ್ರಾಜ್ಯದ ಅತಿದೊಡ್ಡ ಟಿ ಬ್ರ್ಯಾಂಡ್ ಅನ್ನೇ ಟಾಟಾ ಕಂಪೆನಿ ಸ್ವಾಧೀನಪಡಿಸಿಕೊಂಡಿತ್ತು. ಈ ಸಮಯದಲ್ಲಿ ವಿಟ್ವರ್ತ್ ರತನ್ ಟಾಟಾ ಅವರ ಸಂದರ್ಶನಕ್ಕಾಗಿ ಹಾತೊರೆದಿದ್ದರು. ಭಾರತೀಯರ ಸ್ವಾಧೀನಪಡಿಸಿಕೊಂಡು ಆಳ್ವಿಕೆ ನಡೆಸಿದ್ದ ಅದೇ ಬ್ರಿಟೀಷರಿಂದ ಅವರ ಅತ್ಯುನ್ನತ ಟೆಟ್ಲಿ ಚಹಾ ಕಂಪನಿಯನ್ನು ಭಾರತದ ಕಂಪನಿ ಟಾಟಾ ಸ್ವಾಧೀನಪಡಿಸಿಕೊಂಡಿತ್ತು. ಈ ಕುರಿತು ರತನ್ ಟಾಟಾ ಬಳಿ ಪ್ರಶ್ನೆ ಕೇಳಿದ ಡಾಮಿಯನ್ “ಭಾರತೀಯ ಕಂಪನಿಯ ಬ್ರಿಟನ್‌ನ ಪ್ರಮುಖ ಟೀ ಬ್ರ್ಯಾಂಡ್ ಖರೀದಿಸಿದೆ. ಇದನ್ನು ಆನಂದಿಸುತ್ತಿದ್ದೀರಾ? ಎಂದು ಕೇಳಿದಾಗ ರತನ್ ಟಾಟಾ ಹೌದು ಎಂದು ಉತ್ತರಿಸಿದರೂ ನಂತರ ವಿಷಯವನ್ನು ಬದಲಾಯಿಸಿದರು. ಟಾಟಾ ತುಂಬಾ ಚಾಣಾಕ್ಷ ಹಾಗೂ ಅದೇ ಸಮಯದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡ ನವಾಬರ ಯಶಸ್ಸಿನ ಮೆಚ್ಚುಗೆ ವ್ಯಕ್ತಪಡಿಸಲು ನಾಚುತ್ತದೆ ಎಂದು ಹೇಳಿದರು. ರತನ್ ಟಾಟಾ ಅವರ ಚುರುಕು ಮುಟ್ಟಿಸುವ ಮಾತುಗಳು ಅವರ ಸರಳತೆಯನ್ನು ಪ್ರತಿಬಿಂಬಿಸುತ್ತಿತ್ತು.

  ಪತ್ರಕರ್ತರಾದ ಡಾಮಿಯನ್ ರತನ್ ಅವರನ್ನು ಭೇಟಿಯಾಗುವ ಮುನ್ನವೇ ರತನ್ ಟಾಟಾ ಕುರಿತಾದ ಕೆಲವೊಂದು ವಿಷಯಗಳನ್ನು ತಿಳಿದಿದ್ದರು. ದೇಶದ ಶ್ರೀಮಂತ ವ್ಯಕ್ತಿಯಾಗಿದ್ದರೂ ಅವರ ಜೀವನಶೈಲಿ ಸಾಮಾನ್ಯರದ್ದಾಗಿತ್ತು ಎಂಬುದಾಗಿ ಡಾಮಿಯನ್ ಸ್ವತಃ ಬಣ್ಣಿಸಿದ್ದಾರೆ. ಏರ್ ಇಂಡಿಯಾ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಡಾಮಿಯನ್ ಕೂಡ ಭಾಗವಹಿಸಿದ್ದರು. ಜೆ.ಆರ್‌.ಡಿ ಟಾಟಾ 1932 ರಲ್ಲಿ ಸ್ಥಾಪಿಸಿದ್ದ ಭಾರತದ ಮೊದಲ ವಾಣಿಜ್ಯ ವಿಮಾನವೆಂಬ ಹೆಸರನ್ನು ಇದು ಪಡೆದುಕೊಂಡಿತ್ತು. ಸಂಪೂರ್ಣ ಮುಂಬೈಯ ಅತಿರಥ ಮಹಾರಥರು ಅಲ್ಲಿದ್ದರು. ಆದರೆ ಹಾಜರಿರಬೇಕಿದ್ದ ಒಬ್ಬ ವ್ಯಕ್ತಿ ರತನ್ ಟಾಟಾ ಪಾರ್ಟಿಯಲ್ಲಿರಲಿಲ್ಲ. ಈ ಬಗ್ಗೆ ಕೇಳಿದಾಗ ಪಾರ್ಟಿಗಳಲ್ಲಿ ಅವರು ಭಾಗವಹಿಸುವುದಿಲ್ಲ. ಏಕಾಂತವನ್ನು ಅವರು ತುಂಬಾ ಇಷ್ಟಪಡುತ್ತಾರೆ ಎಂಬುದು ತಿಳಿದು ಬಂದಿತು. ರತನ್ ಟಾಟಾ ಒಬ್ಬ ವಿಲಕ್ಷಣ, ವಿಶೇಷ ಗುಣಗಳಿರುವ ವ್ಯಕ್ತಿ ಎಂಬುದಾಗಿಯೇ ಅವರ ಆಪ್ತರ ವಲಯದಲ್ಲಿ ಖ್ಯಾತರಾಗಿದ್ದರು. ಕಾರನ್ನು ಒಮ್ಮೊಮ್ಮೆ ಅವರೇ ಚಲಾಯಿಸುತ್ತಿದ್ದರು. ಇನ್ನು ತಾನೊಬ್ಬ ಗಣ್ಯವ್ಯಕ್ತಿ ಎಂಬುದನ್ನು ಅವರು ಎಲ್ಲಿಯೂ ತೋರಿಸಿಕೊಳ್ಳುತ್ತಿರಲಿಲ್ಲ. ಸರಳ ವ್ಯಕ್ತಿ ಎಂಬುದು ಇದರಿಂದ ಅರಿವಾಗುತ್ತದೆ.

  ಇದನ್ನು ಓದಿ: Cauvery Calling: ಬಂಜರು ಜಾಗದಲ್ಲಿ ಗಿಡ ನೆಡುವುದು ಅಪರಾಧವಲ್ಲ;ಕಾವೇರಿ ಕಾಲಿಂಗ್ ಯೋಜನೆ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

  ರತನ್ ಟಾಟಾ ಅವರು ಸರಳ ಜೀವನವನ್ನು ನೆಚ್ಚಿಕೊಂಡವರು ಎಂಬುದಾಗಿ ಪತ್ರಕರ್ತರಾದ ವಿಟ್‌ವರ್ತ್ ಹೇಳಿದ್ದಾರೆ. ಬೆಳೆದದ್ದು ಶ್ರೀಮಂತ ಕುಟುಂಬದಲ್ಲೇ ಆದರೂ ಇದೀಗ ಅವರ ಜೀವನ ಶೈಲಿ ಒಬ್ಬ ವೃತ್ತಿಪರ ಮ್ಯಾನೇಜರ್‌ನದ್ದಾಗಿದೆ. ಮಿಲಿಯಾಧಿಪತಿಯೇ ಆಗಿದ್ದರೂ ಸರಳ ಬದುಕನ್ನೇ ಅವರು ಆಶ್ರಯಿಸಿದ್ದಾರೆ.

  ವಿಟ್ವರ್ತ್ ಹೇಳಿರುವಂತೆ ಟಾಟಾ ಸಮೂಹವು ದೇಶದ ಇತರ ಕಂಪನಿಗಳಿಗಿಂತ ಭಿನ್ನವಾಗಿದೆ. ಲಂಚವನ್ನು ಸಂಪೂರ್ಣವಾಗಿ ನಿಷೇಧಿಸಿರುವ ಈ ಸಂಸ್ಥೆ ಭ್ರಷ್ಟಾಚಾರವೇ ತುಂಬಿರುವ ವ್ಯವಸ್ಥೆಯಲ್ಲಿ ನಾನಾಗಲೀ ನನ್ನ ಸಂಸ್ಥೆಯನ್ನಾಗಲೀ ಭ್ರಷ್ಟಾಚಾರಕ್ಕೆ ಬಲಿಗೊಡುವುದಿಲ್ಲ ಎಂದು ಹೇಳಿದ್ದಾರೆ.
  Published by:HR Ramesh
  First published: