Sputnik Light: ಭಾರತದಲ್ಲಿ ತಯಾರಾದ ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆಯ ರಫ್ತಿಗೆ ಕೇಂದ್ರದ ಒಪ್ಪಿಗೆ

Sputnik Light: "ಭಾರತದ ಔಷಧ ಕಂಪನಿ ಹೆಟೆರೊ ಬಯೋಫಾರ್ಮಾಗೆ 40 ಲಕ್ಷ ಡೋಸ್ ಸ್ಪುಟ್ನಿಕ್ ಲೈಟ್ ಅನ್ನು ರಷ್ಯಾಕ್ಕೆ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ವಾರ ವಿವರವಾದ ಚರ್ಚೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ(India) ಸ್ಥಳೀಯವಾಗಿ ತಯಾರಿಸಲಾದ ರಷ್ಯಾದ ಸಿಂಗಲ್-ಡೋಸ್ ಕೋವಿಡ್ 19 ಲಸಿಕೆ ಸ್ಪುಟ್ನಿಕ್ ಲೈಟ್‌ ಅನ್ನು ಭಾರತದಲ್ಲಿ ತುರ್ತು ಬಳಕೆಗೆ ಅನುಮೋದಿಸಲಾಗಿಲ್ಲವಾದ್ದರಿಂದ ಕೇಂದ್ರವು ಸ್ಪುಟ್ನಿಕ್ ಲೈಟ್‌ ಅನ್ನು(Sputnik Light) ರಫ್ತು ಮಾಡಲು ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಔಷಧ ಸಂಸ್ಥೆ ಹೆಟೆರೊ ಬಯೋಫಾರ್ಮ ಲಿಮಿಟೆಡ್‌ಗೆ(Hetero Biopharma Limited) 40 ಲಕ್ಷ ಡೋಸ್‌ಗಳಷ್ಟು ಸ್ಟುಟ್ನಿಕ್ ಲೈಟ್ ಅನ್ನು ರಷ್ಯಾಗೆ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ಪಿಟಿಐಗೆ ಸುದ್ದಿಮೂಲಗಳು ತಿಳಿಸಿವೆ.

ರಷ್ಯಾದ ಲಸಿಕೆ ಸ್ಪುಟ್ನಿಕ್ Vಯ ಘಟಕ-1 ರಂತೆಯೇ ಸ್ಪುಟ್ನಿಕ್ ಲೈಟ್ ಒಂದೇ ಆಗಿದ್ದು ಏಪ್ರಿಲ್‌ನಲ್ಲಿ ಭಾರತದ ಔಷಧ ನಿಯಂತ್ರಕರಿಂದ ತುರ್ತು ಬಳಕೆಯ ದೃಢೀಕರಣ ಪಡೆದ ನಂತರ ಭಾರತದ ಆ್ಯಂಟಿ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಬಳಸಲಾಗುತ್ತಿದೆ.

ಲಸಿಕೆ ಉತ್ಪಾದನೆಯಲ್ಲಿ ರಷ್ಯಾದ ನೇರ ಹೂಡಿಕೆ ನಿಧಿಯ (ಆರ್‌ಡಿಐಎಫ್) ಪಾಲುದಾರರಲ್ಲಿ ಒಬ್ಬರಾದ ಹೆಟೆರೊ ಬಯೋಫಾರ್ಮಾ ತಯಾರಿಸಿದ ಸ್ಪುಟ್ನಿಕ್ ಲೈಟ್ ಭಾರತದ ಔಷಧ ನಿಯಂತ್ರಕರಿಂದ ತುರ್ತು ಬಳಕೆಯ ದೃಢೀಕರಣ ಪಡೆಯುವವರೆಗೆ ತನ್ನ ದೇಶಕ್ಕೆ ರಫ್ತು ಮಾಡಲು ಅನುಮತಿ ನೀಡುವಂತೆ ರಷ್ಯಾದ ರಾಯಭಾರಿ ಭಾರತ ಸರ್ಕಾರವನ್ನು ಒತ್ತಾಯಿಸಿದ್ದರು. ಕೇಂದ್ರದೊಂದಿಗೆ ನಡೆಸಿದ ಸಂವಹನದಂತೆ ಹೆಟೆರೊ ಬಯೋಫಾರ್ಮಾ ಲಿಮಿಟೆಡ್ ಈಗಾಗಲೇ ಒಂದು ಮಿಲಿಯನ್ ಡೋಸ್ ಸ್ಪುಟ್ನಿಕ್ V ಮತ್ತು ಎರಡು ಮಿಲಿಯನ್ ಡೋಸ್ ಸ್ಪುಟ್ನಿಕ್ ಲೈಟ್ ಅನ್ನು ತಯಾರಿಸಿದೆ ಎಂದು ರಷ್ಯಾದ ರಾಯಭಾರಿ ನಿಕೋಲಾಯ್ ಕುಡಶೇವ್ ತಿಳಿಸಿದ್ದು, ಲಸಿಕೆಯು ನೋಂದಣಿ ಕಾರ್ಯವನ್ನು ಮುಗಿಸುವ ಸಮಯದಲ್ಲಿ ಲಸಿಕೆಯ ಆರು-ತಿಂಗಳ ಅವಧಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಹಾಗೂ ಲಸಿಕೆಯು ವ್ಯರ್ಥವಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಲೇರಿಯಾಗೆ ಅಂತೂ ಇಂತೂ ಸಿಕ್ತು ಲಸಿಕೆ..! ವ್ಯಾಕ್ಸಿನ್‌ ಅಭಿವೃದ್ಧಿಪಡಿಸಲು ಪಟ್ಟ ಹರಸಾಹಸ ಎಷ್ಟು ಗೊತ್ತಾ..?

"ಭಾರತದ ಔಷಧ ಕಂಪನಿ ಹೆಟೆರೊ ಬಯೋಫಾರ್ಮಾಗೆ 40 ಲಕ್ಷ ಡೋಸ್ ಸ್ಪುಟ್ನಿಕ್ ಲೈಟ್ ಅನ್ನು ರಷ್ಯಾಕ್ಕೆ ರಫ್ತು ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ವಾರ ವಿವರವಾದ ಚರ್ಚೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಕಳೆದ ತಿಂಗಳುಗಳಲ್ಲಿ, ಸ್ಥಳೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಳಸಬಹುದಾದ ಸ್ಪುಟ್ನಿಕ್ ಲಸಿಕೆಯ ಉತ್ಪಾದನೆ ಹೆಚ್ಚಿಸಲು ಭಾರತೀಯ ಔಷಧ ಕಂಪನಿಗಳೊಂದಿಗೆ RDIF ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ರಾಯಭಾರಿ ಕಳೆದ ತಿಂಗಳು ತನ್ನ ಸಂವಹನದಲ್ಲಿ ಹೇಳಿದ್ದರು.

ಇದೇ ಸಮಯದಲ್ಲಿ RDIF ಹಾಗೂ ರೆಡ್ಡೀಸ್ ಲ್ಯಾಬೊರೇಟರಿಗಳು ಭಾರತದಲ್ಲಿ ಸ್ಪುಟ್ನಿಕ್ ಲೈಟ್ ನೋಂದಣಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿವೆ. ಶಾಶ್ವತ ಅಥವಾ ಕಾಲಕಾಲಕ್ಕೆ ಅನುಮತಿ ನೀಡಿದರೆ ಭಾರತದಲ್ಲಿ ನೋಂದಾಯಿಸುವವರೆಗೆ ಹೆಟೆರೊ ಬಯೋಫಾರ್ ಲಿಮಿಟೆಡ್‌ಗೆ ಉತ್ಪಾದಿಸಿದ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು RDIF ಮಾರಾಟ ಮಾಡುವ ಮೂಲಕ ರಫ್ತು ಮಾಡಲು ಅನುಮತಿ ನೀಡಿದಲ್ಲಿ ಕಂಪನಿಯು ಲಸಿಕೆಯ ಉತ್ಪಾದನೆ ಹೆಚ್ಚಿಸಲು ಮತ್ತು ಒದಗಿಸಲು ಪ್ರೋತ್ಸಾಹಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಸೆಪ್ಟೆಂಬರ್‌ನಲ್ಲಿ ಡಾ. ರೆಡ್ಡೀಸ್ ಲ್ಯಾಬೋರೇಟರಿ ಲಿಮಿಟೆಡ್‌ಗೆ ಭಾರತದಲ್ಲಿ ಸ್ಪುಟ್ನಿಕ್ ಲೈಟ್ 3ನೇ ಹಂತದ ಪ್ರಯೋಗಗಳನ್ನು ನಡೆಸಲು ಅನುಮತಿ ನೀಡಿತ್ತು. DCGI ನೀಡಿರುವ ಅನುಮತಿಯು ಆಗಸ್ಟ್ 5 ರಂದು ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ ಕೋವಿಡ್ -19ರ ವಿಷಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಆಧರಿಸಿದೆ.

SECಯೊಂದಿಗೆ ನಡೆಸಿದ ಶಿಫಾರಸುಗಳನ್ನು ಆಧರಿಸಿ, ಡಾ ರೆಡ್ಡೀಸ್, ಭಾರತದಲ್ಲಿ ಲಸಿಕೆಯನ್ನು ಮಾರುಕಟ್ಟೆಗೆ ತರಲು RDIFನೊಂದಿಗೆ ಕೈಜೋಡಿಸಿತು. ಇದೇ ಸಮಯದಲ್ಲಿ ರಷ್ಯಾದಲ್ಲಿ ನಡೆಸಿದ ಸ್ಪುಟ್ನಿಕ್ ಲೈಟ್ ಲಸಿಕೆಯ ಹಂತ III ಕ್ಲಿನಿಕಲ್ ಪ್ರಯೋಗದ ನವೀಕರಿಸಿದ ಸುರಕ್ಷತೆ, ಪ್ರತಿಜನಕಗಳು ಮತ್ತು ಪರಿಣಾಮಕಾರಿ ಡೇಟಾವನ್ನು ಭಾರತದಲ್ಲಿ ಕ್ಲಿನಿಕಲ್ ಪ್ರಯೋಗ ನಡೆಸುವ ಪ್ರಸ್ತಾವನೆಯೊಂದಿಗೆ ಪ್ರಸ್ತುತಪಡಿಸಿತು. ಸಂಸ್ಥೆಯು ಪ್ರತಿಕಾಯಗಳ ದೀರ್ಘಾಯುಷ್ಯದೊಂದಿಗೆ ಸುರಕ್ಷತೆ ಮತ್ತು ಪ್ರತಿಜನಕಗಳನ್ನು ಪ್ರಸ್ತುತಪಡಿಸಿದೆ ಎಂಬುದನ್ನು ಕಂಡುಕೊಂಡ ಸಮಿತಿಯು ಭಾಗವಹಿಸುವವರಲ್ಲಿ ಪ್ರತಿಕಾಯಗಳ ದೃಢತೆಯ ಅಳತೆಯನ್ನು ನೀಡುತ್ತದೆ ಎಂಬುದನ್ನು ಕಂಡುಕೊಂಡಿತು.

ಇದನ್ನೂ ಓದಿ: ಫೈಜರ್, ಮಾಡರ್ನಾ ಲಸಿಕೆಗಳಿಂದ ಹೃದಯ ಉರಿಯೂತದ ಅಪಾಯ, ಯುವಕರಿಗೆ ವ್ಯಾಕ್ಸಿನ್‌ ನೀಡಲು ಹಲವು ದೇಶಗಳು ಹಿಂದೇಟು

ಸೆಂಟ್ರಲ್ ಡ್ರಗ್ ಸ್ಟ್ಯಾಂಡರ್ಡ್ ಕಂಟ್ರೋಲ್ ಕಮಿಟಿ (ಕೇಂದ್ರ ಔಷಧ ಪ್ರಮಾಣ ನಿಯಂತ್ರಣ ಸಮಿತಿ) ತಜ್ಞರು ಸ್ಪುಟ್ನಿಕ್ ಲೈಟ್‌ಗೆ ತುರ್ತು ಬಳಕೆಯ ಅಧಿಕಾರ ನೀಡಲು ನಿರಾಕರಿಸಿದೆ ಎನ್ನಲಾಗಿದೆ. ಸ್ಪುಟ್ನಿಕ್ ಲೈಟ್‌ನ ಸಿಂಗಲ್ ಡೋಸ್, ಡಿಸೆಂಬರ್ 5, 2020 ಮತ್ತು ಏಪ್ರಿಲ್ 15, 2021ರ ನಡುವೆ ರಷ್ಯಾದ ಸಾಮೂಹಿಕ ಲಸಿಕಾ ಕಾರ್ಯಕ್ರಮದ ಭಾಗವಾಗಿ ಲಸಿಕೆಯನ್ನು ನೀಡಿದ 28 ದಿನಗಳ ನಂತರ ದಾಖಲಿಸಿದ ಮಾಹಿತಿಯ ಪ್ರಕಾರ 79.4% ಫಲದಾಯಕತೆಯನ್ನು ಪ್ರದರ್ಶಿಸಿದೆ. ಸುಮಾರು 80% ಫಲದಾಯಕತೆಯ ಮಟ್ಟವು ಹೆಚ್ಚಿನ ಎರಡು-ಡೋಸ್ ಲಸಿಕೆಗಳಿಗಿಂತ ಹೆಚ್ಚಾಗಿದೆ.
First published: