• Home
  • »
  • News
  • »
  • explained
  • »
  • Indian Army: ಚೀನಾಕ್ಕೆ ಸೆಡ್ಡು ಹೊಡಿಯಲು ಹೊಸ ಬಗೆಯ ಶಸ್ತ್ರಾಸ್ತ್ರದೊಂದಿಗೆ ಭಾರತ ರೆಡಿ!

Indian Army: ಚೀನಾಕ್ಕೆ ಸೆಡ್ಡು ಹೊಡಿಯಲು ಹೊಸ ಬಗೆಯ ಶಸ್ತ್ರಾಸ್ತ್ರದೊಂದಿಗೆ ಭಾರತ ರೆಡಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಭಾರತೀಯ ಸೇನೆಯು (Indian Army) ಚೀನಾದ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಶಸ್ತ್ರಾಸ್ತ್ರವನ್ನು ಅಪ್‌ಗ್ರೇಡ್ ಮಾಡಿಕೊಳ್ಳಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಪಶ್ಚಿಮ ವಲಯದ ಮೇಲೆ ಗಮನ ಕೇಂದ್ರೀಕರಿಸಿರುವ ಭಾರತೀಯ ಸೇನೆಯು ತನ್ನ ಶಸ್ತ್ರಾಸ್ತ್ರವನ್ನು (weapons) ನವೀಕರಿಸುವುದರ ಜೊತೆಗೆ ಶಸ್ತ್ರಾಸ್ತ್ರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

ಮುಂದೆ ಓದಿ ...
  • Share this:

ಭಾರತ (India) ಮತ್ತು ಚೀನಾ (China) ನಡುವಿನ ಪೂರ್ವ ಲಡಾಖ್ ನಡುವಿನ ತಿಕ್ಕಾಟಕ್ಕೆ ಇನ್ನೂ ವಿರಾಮ ಸಿಕ್ಕಿಲ್ಲ. ಹೀಗಾಗಿ ಭಾರತೀಯ ಸೇನೆಯು (Indian Army) ಚೀನಾದ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಶಸ್ತ್ರಾಸ್ತ್ರವನ್ನು ಅಪ್‌ಗ್ರೇಡ್ ಮಾಡಿಕೊಳ್ಳಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಪಶ್ಚಿಮ ವಲಯದ ಮೇಲೆ ಗಮನ ಕೇಂದ್ರೀಕರಿಸಿರುವ ಭಾರತೀಯ ಸೇನೆಯು ತನ್ನ ಶಸ್ತ್ರಾಸ್ತ್ರವನ್ನು (weapons) ನವೀಕರಿಸುವುದರ ಜೊತೆಗೆ ಶಸ್ತ್ರಾಸ್ತ್ರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.  ಫೈರ್‌ಪವರ್ ಅಪ್‌ಗ್ರೇಡ್ ಅನ್ನು ಅನುಸರಿಸುತ್ತಿರುವ ಭಾರತೀಯ ಸೇನೆಯು ಚೀನಾದ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ಫಿರಂಗಿ ಬಂದೂಕುಗಳು, ರಾಕೆಟ್‌ಗಳು ಮತ್ತು ಹೆಚ್ಚಿನ ಯುದ್ಧಸಾಮಗ್ರಿಗಳನ್ನು ಸೇರಿಸಲು ಸಜ್ಜಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಕೆಲ ವ್ಯಕ್ತಿಗಳು ಮಾಹಿತಿ ಹಂಚಿಕೊಂಡಿದ್ದಾರೆ.


ಭಾರತೀಯ ಸೇನೆಯಲ್ಲಿ ಏನೆಲ್ಲಾ ಹೊಸದಾಗಿ ಇರಲಿದೆ?
ಭಾರತೀಯ ಸೇನೆಯ 155mm/52-ಕ್ಯಾಲಿಬರ್ ಟ್ರ್ಯಾಕ್ ಮಾಡಲಾದ ಸ್ವಯಂ ಚಾಲಿತ K9 ವಜ್ರ-T ಗನ್‌ಗಳು, ಹೆಚ್ಚುವರಿ 155mm/45-ಕ್ಯಾಲಿಬರ್ ಧನುಷ್ ಟೋವ್ಡ್ ಗನ್‌ಗಳು, ಹೊಸ 155mm/52-ಕ್ಯಾಲಿಬರ್ ಸುಧಾರಿತ ಟವ್ಡ್ ಫಿರಂಗಿ ಗನ್ ಸಿಸ್ಟಮ್‌ಗಳನ್ನು (ATAGS) ಮತ್ತು ಶರಂಗ್ ಹೆಸರಿನ ಉನ್ನತೀಕರಿಸಿದ ಗನ್‌ಗಳನ್ನು ಸೇರಿಸಿಕೊಳ್ಳಲಿದೆ.


ಇಷ್ಟೇ ಅಲ್ಲದೇ, ಆರ್ಟಿಲರಿ ರೆಜಿಮೆಂಟ್‌ಗಳು, ಮದ್ದುಗುಂಡುಗಳು, ಯುದ್ಧಸಾಮಗ್ರಿ, ಮಾನವರಹಿತ ವೈಮಾನಿಕ ವಾಹನಗಳು ಮತ್ತು ವಿಚಕ್ಷಣ ಮತ್ತು ವೀಕ್ಷಣಾ ವ್ಯವಸ್ಥೆಗಳ ಹೆಚ್ಚಿನ ಸಾಮಾರ್ಥ್ಯದ ಸಾಮಾಗ್ರಿಗಳನ್ನು ಸೇರಿಸಕೊಳ್ಳಲು ಯೋಜಿಸಿದೆ ಎಂದು ಸೇನೆಯ ಫಿರಂಗಿ ಆಧುನೀಕರಣವನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


"ಯುಸ್‌ ನಿಂದ ಆಮದು ಮಾಡಿಕೊಳ್ಳಲಾದ ಅಲ್ಟ್ರಾ ಲೈಟ್ ಹೊವಿಟ್ಜರ್ M777 ಫಿರಂಗಿ ಬಂದೂಕುಗಳನ್ನು ಹೊರತುಪಡಿಸಿ, ಕಳೆದ ಐದು ವರ್ಷಗಳಲ್ಲಿ ಸಂಗ್ರಹಿಸಲಾದ ಅಥವಾ ಸಂಗ್ರಹಿಸುವ ಎಲ್ಲಾ ಗನ್ ಸಿಸ್ಟಮ್‌ಗಳು ಸ್ಥಳೀಯವಾಗಿವೆ. ಈ ಮೂಲಕ ಸ್ಥಳೀಯ ಆಧುನೀಕರಣದತ್ತ ಗಮನ ಹರಿಸಲಾಗಿದೆ" ಎಂದು ಅವರು ಹೇಳಿದರು.


100 ಕೆ9 ವಜ್ರ-ಟಿ ಗನ್‌ಗಳನ್ನು ಖರೀದಿಸುವ ಪ್ರಕ್ರಿಯೆಗೆ ಕೇಂದ್ರ ಅನುಮೋದನೆ
ಸ್ಥಳೀಯ ಉತ್ಪನ್ನಗಳ ಜೊತೆಗೆ ದಕ್ಷಿಣ ಕೊರಿಯಾದ ಹನ್ವಾ ಟೆಕ್ವಿನ್ (HTW) ತಂತ್ರಜ್ಞಾನದ ಖಾಸಗಿ ವಲಯದ ರಕ್ಷಣಾ ಸಂಸ್ಥೆ ಲಾರ್ಸೆನ್ ಮತ್ತು ಟುಬ್ರೊ ತಯಾರಿಸಿದ 100 ಕೆ9 ವಜ್ರ-ಟಿ ಗನ್‌ಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೇನೆಯು ಸಜ್ಜಾಗಿದೆ ಎಂದು ತಿಳಿಸಿದರು. ಇದನ್ನು ಈಗಾಗಲೇ ರಕ್ಷಣಾ ಸಚಿವಾಲಯವು ಕೂಡ ಅನುಮೋದಿಸಿದೆ.


ಇದನ್ನೂ ಓದಿ:  Chola King: ಜೋರಾಯ್ತು ಚೋಳರ ಧರ್ಮದ ಕುರಿತ ಚರ್ಚೆ! ಕಮಲ್‌ ಹಾಸನ್‌ಗೆ ಬಿಜೆಪಿ ಸವಾಲು


2023ರ ವೇಳೆಗೆ 18 ಧನುಷ್ ಗನ್‌ ಹೊಂದಲು ಸಿದ್ಧತೆ
ಈಗಾಗಲೇ $720 ಮಿಲಿಯನ್ ಮೌಲ್ಯದ 2017ರ ಒಪ್ಪಂದದಡಿಯಲ್ಲಿ ಅಂತಹ 100 ಬಂದೂಕುಗಳನ್ನು ಖರೀದಿಸಿದ್ದು, ಇನ್ನು ಕೆಲವನ್ನು ಆಮದು ಮಾಡಿಕೊಳ್ಳಲು ಯೋಜಿಸಲಾಗಿದೆ. ಸೇನೆಯು ಈಗಾಗಲೇ ಚೀನಾದ ಗಡಿಯಲ್ಲಿ ತನ್ನ ಮೊದಲ ಧನುಷ್ ರೆಜಿಮೆಂಟ್ ಅನ್ನು ಕಾರ್ಯಗತಗೊಳಿಸಿದೆ ಮತ್ತು ಈಗ ಮಾರ್ಚ್ 2023ರ ವೇಳೆಗೆ 18 ಗನ್‌ಗಳೊಂದಿಗೆ ಎರಡನೇ ರೆಜಿಮೆಂಟ್ ಅನ್ನು ಹೆಚ್ಚಿಸಲು ನೋಡುತ್ತಿದೆ.


"ಧನುಷ್ ಗನ್ ವ್ಯವಸ್ಥೆಯನ್ನು ಉತ್ತರದ ಗಡಿಗಳಲ್ಲಿ (ಚೀನಾದೊಂದಿಗೆ) ಎತ್ತರದಲ್ಲಿ ಅಳವಡಿಸಲಾಗಿದೆ ಮತ್ತು ಕಾರ್ಯಗತಗೊಳಿಸಲಾಗಿದೆ. ಗನ್ ಬೋಫೋರ್ಸ್ ಗನ್‌ನ ಎಲೆಕ್ಟ್ರಾನಿಕ್ ಮತ್ತು ಯಾಂತ್ರಿಕವಾಗಿ ನವೀಕರಿಸಿದ ಆವೃತ್ತಿಯಾಗಿದೆ. ಇದು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಒಂದು ದೊಡ್ಡ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸುಧಾರಿತ ಟವ್ಡ್ ಫಿರಂಗಿ ಗನ್ ಸಿಸ್ಟಮ್‌ (ATAGS) ಅಂತಿಮ ಪ್ರಯೋಗಗಳಿಗೆ ಒಳಗಾಗುತ್ತಿದೆ ಮತ್ತು ಸೈನ್ಯದಲ್ಲಿ ಅದರ ಸೇರ್ಪಡೆಗೆ ಕೆಲಸಗಳು ನಡೆಯುತ್ತಿವೆ ಎಂದು ವರದಿಗಳು ಹೇಳಿವೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) 2013 ರಲ್ಲಿ ATAGS ಯೋಜನೆಯನ್ನು ಹಳೆಯ ಸೇನಾ ಗನ್‌ಗಳನ್ನು ಆಧುನಿಕ 155 ಎಂಎಂ ಫಿರಂಗಿ ಗನ್‌ನೊಂದಿಗೆ ಬದಲಾಯಿಸಲು ಪ್ರಾರಂಭಿಸಿತು.


ಇದು 48 ಕಿಮೀ ಫೈರಿಂಗ್ ರೇಂಜ್ ಹೊಂದಿರುವ ಗನ್ ತಯಾರಿಕೆಗಾಗಿ ಭಾರತ್ ಫೋರ್ಜ್ ಲಿಮಿಟೆಡ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಎಂಬ ಎರಡು ಖಾಸಗಿ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. “ATGS ನ ಬಳಕೆದಾರರ ಪ್ರಯೋಗಗಳನ್ನು ಈಗಾಗ್ಲೇ ನಡೆಸಲಾಗಿದೆ" ಎಂದು ಅವರು ಹೇಳಿದರು.


₹ 50,000-ಕೋಟಿ ವೆಚ್ಚದಲ್ಲಿ ಅಪ್‌ಗ್ರೇಡ್
1999 ರಲ್ಲಿ ತೆರವುಗೊಳಿಸಲಾದ ಸೈನ್ಯದ ಕ್ಷೇತ್ರ ಫಿರಂಗಿ ತರ್ಕಬದ್ಧಗೊಳಿಸುವ ಯೋಜನೆ (FARP) ಅಡಿಯಲ್ಲಿ ಬಂದೂಕುಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ₹ 50,000-ಕೋಟಿ ವೆಚ್ಚದಲ್ಲಿ ಅಪ್‌ಗ್ರೇಡ್ ಮಾಡಲಾಗಿದೆ.


ಇದನ್ನೂ ಓದಿ:   Gyanvapi Case: ಜ್ಞಾನವಾಪಿ ಪರಿಸರದಲ್ಲಿ ಹಿಂದೂಯೇತರರ ಪ್ರವೇಶ ಪ್ರಕರಣದ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ


FARP ಹೊಸ 155mm ಶಸ್ತ್ರಾಸ್ತ್ರಗಳನ್ನು ಸೇರಿಸಲು ಮಾರ್ಗಸೂಚಿಯನ್ನು ರೂಪಿಸುತ್ತದೆ, ಇದರಲ್ಲಿ ಟ್ರ್ಯಾಕ್ ಮಾಡಲಾದ ಸ್ವಯಂ ಚಾಲಿತ ಗನ್‌ಗಳು, ಟ್ರಕ್-ಮೌಂಟೆಡ್ ಗನ್ ಸಿಸ್ಟಮ್‌ಗಳು, ಎಳೆದ ಫಿರಂಗಿ ತುಣುಕುಗಳು ಮತ್ತು ಚಕ್ರದ ಸ್ವಯಂ ಚಾಲಿತ ಬಂದೂಕುಗಳು ಸೇರಿವೆ.


ನವೀಕರಿಸಿದ ಶರಂಗ್ ಫಿರಂಗಿ ಬಂದೂಕುಗಳು ನಡೆಯುತ್ತಿರುವ ಆಧುನೀಕರಣದ ಪ್ರಮುಖ ಅಂಶವಾಗಿದೆ. ಸೇನೆಯು ಈಗಾಗಲೇ ಮೂರು ಶರಂಗ್ ರೆಜಿಮೆಂಟ್‌ಗಳನ್ನು ಹೊಂದಿದೆ. ಸದ್ಯ ನಾಲ್ಕನೇಯ ರೆಜಿಮೆಂಟ್‌ ಅಳವಡಿಸಿಕೊಳ್ಳಲು ಯೋಜಿಸುತ್ತಿದ್ದು, ಒಟ್ಟು 15 ರೆಜಿಮೆಂಟ್‌ಗಳನ್ನು ಹೊಂದಲು ಭಾರತೀಯ ಸೇನೆ ಪ್ಲ್ಯಾನ್‌ ಮಾಡುತ್ತಿದೆ.


ರಾಕೆಟ್ ವ್ಯವಸ್ಥೆಯಲ್ಲೂ ನವೀಕರಣ
ಉತ್ತಮ ಶ್ರೇಣಿಯ ರಾಕೆಟ್ ವ್ಯವಸ್ಥೆಗಳನ್ನು ಸಹ ಸೇನೆಗೆ ಸೇರಿಸಲು ನಿರ್ಧರಿಸಿರುವ ಭಾರತ ಸೇನೆ ಇನ್ನೂ ಆರು ಪಿನಾಕಾ ರೆಜೆಮೆಂಟ್‌ ಗಳನ್ನು ದೀರ್ಘ ಶ್ರೇಣಿಯ ರಾಕೆಟ್‌ಗಳೊಂದಿಗೆ 36 ಕಿ.ಮೀ ನಿಂದ 48 ಕಿ.ಮೀ ವರೆಗೆ ಹೆಚ್ಚಿಸುತ್ತಿದೆ.


ಈ ಹೊಸ ರೆಜಿಮೆಂಟ್‌ಗಳು ವಿದ್ಯುನ್ಮಾನ ಮತ್ತು ಯಾಂತ್ರಿಕವಾಗಿ ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದ್ದು, ವಿವಿಧ ಮದ್ದುಗುಂಡುಗಳನ್ನು ದೀರ್ಘ ವ್ಯಾಪ್ತಿಯ ಮೇಲೆ ಹಾರಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.


"ಬೊಫೋರ್ಸ್‌ಗಿಂತ ಎಂ777 ಫಿರಂಗಿ ಬೆಸ್ಟ್"
ಭಾರತೀಯ ಸೇನೆಯು ತನ್ನ ವಿಂಟೇಜ್ ಏರ್ ಡಿಫೆನ್ಸ್ ಬೋಫೋರ್ಸ್ ಗನ್‌ಗಳನ್ನು ಅಪ್‌ಗ್ರೇಡ್ ಮಾಡಿದೆ. ಇದರ ಜೊತೆಗೆ ಹೊಸ ಅಲ್ಟ್ರಾ ಲೈಟ್ ಹೊವಿಟ್ಜರ್ M777 ಫಿರಂಗಿ ಬಂದೂಕುಗಳನ್ನು ಗಡಿಗೆ ತಂದು ನಿಲ್ಲಿಸಿದ್ದು, ಇದು ಉತ್ತರ ಮತ್ತು ಪೂರ್ವ ವಲಯಗಳಲ್ಲಿ ಸೇನೆಯ ಶಸ್ತ್ರಾಸ್ತ್ರ ನಿಯೋಜನೆಯ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ.


"ಬೊಫೋರ್ಸ್‌ಗಿಂತ ಎಂ777 ಫಿರಂಗಿಗಳನ್ನು ಹೊಂದಿರುವ ಪ್ರಯೋಜನಕಾರಿಯಾಗಿದೆ. ಕಡಿಮೆ ತೂಕ ಹೊಂದಿರುವ ಈ ಫಿರಂಗಿಗಳನ್ನು ಹಳೆಯ ಮತ್ತು ಭಾರವಾದ ಬಂದೂಕುಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದ ಪ್ರದೇಶಗಳಲ್ಲಿ ಇವುಗಳನ್ನು ನಿಯೋಜಿಸಿ ಬಳಸಿಕೊಳ್ಳಬಹುದು.


ಇದನ್ನೂ ಓದಿ: Economy: ಚೀನಾದ ಕೈಗಾರಿಕಾ ಯೋಜನೆ ತನ್ನೆಡೆ ಸೆಳೆಯಲು ಭಾರತದ ಬಿಗ್ ಪ್ಲಾನ್!


ಚಿನೂಕ್ ಹೆಲಿಕಾಪ್ಟರ್‌ಗಳನ್ನು ಬಳಸಿ ಅವುಗಳನ್ನು ಕಣಿವೆಗಳಿಗೆ ಸುಲಭವಾಗಿ ಸಾಗಿಸಲು ಹೆಚ್ಚು ಸಾಧ್ಯವಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಎಲ್‌ಎಸಿಗೆ ಇನ್ನಷ್ಟು ಮುಂದೆ ಹೋಗಲು ಅನುಕೂಲಕರವಾಗಿದೆ" ಎಂದು ಮೂಲಗಳು ತಿಳಿಸಿವೆ.

Published by:Ashwini Prabhu
First published: