Explained: MiG-21 ಸ್ಕ್ವಾಡ್ರನ್ ಸ್ಥಗಿತ, ಭಾರತೀಯ ವಾಯುಪಡೆಯ ಈ ನಿರ್ಧಾರಕ್ಕೇನು ಕಾರಣ?

ಭಾರತೀಯ ವಾಯುಪಡೆಯು (IAF) ಶ್ರೀನಗರ ಮೂಲದ MIG-21 ಸ್ಕ್ವಾಡ್ರನ್ ಸಪ್ಟೆಂಬರ್ 30 ರಂದು ಸೇವೆಯಿಂದ ನಿವೃತ್ತಿಗೊಳ್ಳಲು ಸಿದ್ಧವಾಗಿದೆ. ಹಾರಾಟದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿ, ಭಾರತೀಯ ವಾಯುಪಡೆಯು (IAF) ಈ ವರ್ಷದ ಸೆಪ್ಟೆಂಬರ್ 30 ರೊಳಗೆ MiG-21 ಬೈಸನ್ ವಿಮಾನವನ್ನು ಒಳಗೊಂಡಿರುವ ಶ್ರೀನಗರದ ವಾಯುನೆಲೆಯಿಂದ 51 ಸ್ಕ್ವಾಡ್ರನ್ ಅನ್ನು ನಿವೃತ್ತಗೊಳಿಸಲಿದೆ. 

MiG-21 ಸ್ಕ್ವಾಡ್ರನ್

MiG-21 ಸ್ಕ್ವಾಡ್ರನ್

  • Share this:
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಕಾರ್ಯಾಚರಣೆ ನಡೆಸಿದ್ದ, ಭಾರತೀಯ ವಾಯುಪಡೆಯು (IAF) ಶ್ರೀನಗರ ಮೂಲದ MIG-21 ಸ್ಕ್ವಾಡ್ರನ್ (MIG-21 Squadron) ಸಪ್ಟೆಂಬರ್ 30 ರಂದು ಸೇವೆಯಿಂದ ನಿವೃತ್ತಿಗೊಳ್ಳಲು ಸಿದ್ಧವಾಗಿದೆ. ಹಾರಾಟದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿ, ಭಾರತೀಯ ವಾಯುಪಡೆಯು (IAF) ಈ ವರ್ಷದ ಸೆಪ್ಟೆಂಬರ್ 30 ರೊಳಗೆ MiG-21 ಬೈಸನ್ ವಿಮಾನವನ್ನು ಒಳಗೊಂಡಿರುವ ಶ್ರೀನಗರದ (Srinagar) ವಾಯುನೆಲೆಯಿಂದ 51 ಸ್ಕ್ವಾಡ್ರನ್ ಅನ್ನು ನಿವೃತ್ತಗೊಳಿಸಲಿದೆ. ಸ್ವೋರ್ಡ್ ಆರ್ಮ್ಸ್ ಎಂದು ಕರೆಯಲಾದ ಸ್ಕ್ವಾಡ್ರನ್, ಪಾಕ್‌ನ ಪ್ರತೀಕಾರದ ಕ್ರಮವನ್ನು ಹಿಮ್ಮೆಟ್ಟಿಸುವ ಫೆಬ್ರವರಿ 27, 2019 ರ ಬಾಲಾಕೋಟ್ ವೈಮಾನಿಕ ದಾಳಿಯ (Balakot Airstrike) ಕಾರ್ಯಾಚರಣೆಯ ಭಾಗವೆನಿಸಿತ್ತು.

ಜನವರಿ 2021 ರಿಂದ ಆರು ಅಪಘಾತಗಳಲ್ಲಿ ಅನೇಕ ಪೈಲಟ್‌ಗಳು ಸಾವನ್ನಪ್ಪಿದ ವಿಂಟೇಜ್ ವಿಮಾನಗಳು ಒಳಗೊಂಡಿರುವ ಇತ್ತೀಚಿನ ಘಟನೆಗಳ ವರದಿಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರ್ಧಮಾನ್‌ರಿಗೆ ವೀರ ಚಕ್ರ
ವೈಮಾನಿಕ ಯುದ್ಧದ ಸಮಯದಲ್ಲಿ ಶತ್ರು ಜೆಟ್ ಅನ್ನು ಹೊಡೆದುರುಳಿಸಿದ ವರ್ಧಮಾನ್ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ವೀರ ಚಕ್ರ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ವರ್ಧಮಾನ್ ಪ್ರಸ್ತುತ ಗ್ರೂಪ್ ಕ್ಯಾಪ್ಟನ್ ಎಂದೆನಿಸಿದ್ದಾರೆ.

ಪುಲ್ವಾಮಾ ಭಯೋತ್ಪಾದಕ ದಾಳಿಯ ಸುಮಾರು ಎರಡು ವಾರಗಳ ನಂತರ ಫೆಬ್ರವರಿ 26, 2019 ರಂದು ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಐಎಎಫ್ ಫೈಟರ್ ಜೆಟ್‌ಗಳು ಬಾಂಬ್ ದಾಳಿ ನಡೆಸಿದ್ದವು.

ಫೆಬ್ರವರಿ 27 ರಂದು ಪಾಕಿಸ್ತಾನವು ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಲು ಪ್ರಯತ್ನಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತ್ತು. ಸ್ವೋರ್ಡ್ ಆರ್ಮ್ಸ್ ಕುರಿತು ಇನ್ನಷ್ಟು ಸಂಗತಿಗಳನ್ನು ವಿಷದವಾಗಿ ಈ ಲೇಖನದಿಂದ ತಿಳಿದುಕೊಳ್ಳೋಣ

ಸ್ವೋರ್ಡ್ ಆರ್ಮ್ಸ್
ಶ್ರೀನಗರ ಮೂಲದ ನಂ 51 ಸ್ಕ್ವಾಡ್ರನ್‌ಗೆ ಸಪ್ಟೆಂಬರ್ 30 ರಂದು ನಂಬರ್ ಪ್ಲೇಟ್ ನೀಡಲಾಗುತ್ತದೆ. ನಂಬರ್ ಪ್ಲೇಟಿಂಗ್ ಎಂಬುದು 17-20 ವಿಮಾನಗಳನ್ನು ಒಳಗೊಂಡಿರುವ ಸ್ಕ್ವಾಡ್ರನ್‌ನ ನಿವೃತ್ತಿಯನ್ನು ಸೂಚಿಸುತ್ತದೆ.

1999ರ ಕಾರ್ಗಿಲ್ ಸಂಘರ್ಷದ ಸಮಯದಲ್ಲಿ ಸ್ವಾಡ್ರನ್, 'ಆಪರೇಷನ್ ಸಫೇದ್ ಸಾಗರ್’ ಸೇರಿದಂತೆ ಅನೇಕ ಯಶಸ್ವಿ ಕಾರ್ಯಾಚರಣೆಗಳ ಭಾಗವೆಂದೆನಿಸಿತ್ತು. ಫೆಬ್ರವರಿ 27, 2019 ರ ಪಾಕ್‌ನ ಪ್ರತೀಕಾರವನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ವರ್ಧಮಾನ್ ಅವರು, ಪಾಕಿಸ್ತಾನಿ ಎಫ್-16 ಯುದ್ಧ ವಿಮಾನವನ್ನು ಕಾಳಗದಲ್ಲಿ ಹೊಡೆದುರುಳಿಸಿದರು. ಫೆಬ್ರವರಿ 14 ರಂದು 40 ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ಸಿಬ್ಬಂದಿಯನ್ನು ಹತ್ಯೆಗೈದ ಕಾಶ್ಮೀರದ ಪುಲ್ವಾಮಾ ಆತ್ಮಾಹುತಿ ದಾಳಿಯ ನಂತರ ಭಾರತದ ಪ್ರತಿಕ್ರಿಯೆ ಇದಾಗಿತ್ತು.

ಆಧುನೀಕರಣದ ಕಾರ್ಯಾಚರಣೆಯ ಭಾಗ ಎಂದು ಭಾರತೀಯ ವಾಯುಸೇನೆ ಬಣ್ಣಿಸಿದ್ದೇಕೆ?
2025 ರಲ್ಲಿ MIG-21 ಅನ್ನು ಹಂತ ಹಂತವಾಗಿ ಸ್ಥಗಿತಗೊಳಿಸುವುದು ವಾಯುಪಡೆಯ ಒಟ್ಟಾರೆ ಯೋಜನೆಯ ಭಾಗವಾಗಿದೆ. ಈ ವಿಷಯದ ಕುರಿತು ಸುದ್ದಿವಿಭಾಗಕ್ಕೆ ಮಾಹಿತಿ ನೀಡಿರುವ ಬಲ್ಲ ಮೂಲಗಳು, ಆಧುನೀಕರಣದ ಕಾರ್ಯಾಚರಣೆಯ ಭಾಗವಾಗಿ ಉಳಿದಿರುವ ನಾಲ್ಕು MIG-21 ಫೈಟರ್ ಸ್ಕ್ವಾಡ್ರನ್‌ಗಳನ್ನು ಹಂತ ಹಂತವಾಗಿ ಸ್ಥಗಿತಗೊಳಿಸಲು ವಾಯುಪಡೆಯು ಮೂರು ವರ್ಷಗಳನ್ನು ತೆಗೆದುಕೊಂಡಿದೆ ಎಂದಾಗಿದೆ.

IAF ಪ್ರಸ್ತುತ 70 MIG-21 ವಿಮಾನಗಳು ಮತ್ತು 50 MIG-29 ಪರ್ಯಾಯಗಳನ್ನು ಹೊಂದಿದೆ. MIG-29 ಫ್ಲೀಟ್ ಅನ್ನು ನಿವೃತ್ತಿಗೊಳಿಸಲು ಯೋಜಿಸಿದ್ದು ಮುಂದಿನ ಐದು ವರ್ಷಗಳಲ್ಲಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಯುಪಡೆ ಸೇರಿಕೊಂಡಿರುವ ಆಧುನಿಕ ಫೈಟರ್ ಜೆಟ್‌ಗಳು
ವಾಯುಪಡೆಗೆ ನೆರವಾಗುವ ನಿಟ್ಟಿನಲ್ಲಿ ಹಳೆಯ ಫೈಟರ್ ವಿಮಾನವನ್ನು ಬದಲಿಸಲು, ಕಳೆದ ವರ್ಷ ಫೆಬ್ರವರಿಯಲ್ಲಿ ರಕ್ಷಣಾ ಸಚಿವಾಲಯವು 83 ತೇಜಸ್ ಯುದ್ಧ ವಿಮಾನಗಳ ಖರೀದಿಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನೊಂದಿಗೆ ರೂ 48,000 ಕೋಟಿ ಒಪ್ಪಂದವನ್ನು ಮಾಡಿಕೊಂಡಿತು. ವಾಯುಪಡೆ ಕೂಡ 114 ಮಲ್ಟಿ ರೋಲ್ ಫೈಟರ್ ಏರ್‌ಕ್ರಾಫ್ಟ್‌ಗಳನ್ನು (MRFA) ಖರೀದಿಸುವ ಪ್ರಕ್ರಿಯೆಯಲ್ಲಿದೆ.

ಇದನ್ನೂ ಓದಿ: Anti Conversion Bill: ಹೇಗಿರಲಿದೆ ಮತಾಂತರ ನಿಷೇಧ ಕಾಯ್ದೆ? ಮತಾಂತರಿಗಳಿಗೆ ಏನು ಶಿಕ್ಷೆ ಗೊತ್ತಾ?

ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ 42 ಸ್ಕ್ವಾಡ್ರನ್‌ಗಳ ಅಂಗೀಕೃತ ಸಾಮರ್ಥ್ಯವನ್ನು ತಲುಪಲು ವಾಯುಪಡೆಗೆ ಸಾಧ್ಯವಿಲ್ಲವೆಂದು ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದು, ಯೋಜಿತ ಸ್ವಾಧೀನಗಳ ಹೊರತಾಗಿಯೂ ಗಮನಾರ್ಹ ಸಂಖ್ಯೆಯ ವಿಮಾನಗಳನ್ನು ಹಂತ ಹಂತವಾಗಿ ತೆಗೆದುಹಾಕಲಾಗುತ್ತಿದೆ.

ತನ್ನ ವಾಯುಶಕ್ತಿ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುವ ಸಲುವಾಗಿ ಭಾರತವು ಐದನೇ ತಲೆಮಾರಿನ ಮಧ್ಯಮ ತೂಕವಿರುವ ಯುದ್ಧವಿಮಾನವನ್ನು ಅಭಿವೃದ್ಧಿಪಡಿಸಲು ಮಹತ್ವಾಕಾಂಕ್ಷೆಯ $5 ಬಿಲಿಯನ್ ಶತಕೋಟಿ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ.

ವಾಯುಪಡೆಯ ಮುಖ್ಯ ಆಧಾರವೆನಿಸಿರುವ MIG ರೂಪಾಂತರ
MiG-21 ಭಾರತದ ಅತ್ಯಂತ ದೀರ್ಘಾವಧಿಯ ಯುದ್ಧ ವಿಮಾನವಾಗಿದೆ. ಭಾರತವು ತನ್ನ ಮೊದಲ ಏಕ-ಎಂಜಿನ್ MiG-21 ಅನ್ನು 1963 ರಲ್ಲಿ ಪಡೆದುಕೊಂಡಿತು ಮತ್ತು ಅಂದಿನಿಂದ ಇದು ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಸೋವಿಯತ್ ಮೂಲದ ಸೂಪರ್‌ಸಾನಿಕ್ ಫೈಟರ್‌ಗಳ 874 ರೂಪಾಂತರಗಳನ್ನು ಸೇರಿಸಿದೆ.

ಅವುಗಳಲ್ಲಿ 60% ಕ್ಕಿಂತ ಹೆಚ್ಚು ಭಾರತದಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಿಸಿದೆ. ಆದಾಗ್ಯೂ, ಮೇಡ್-ಇನ್-ಇಂಡಿಯಾ MiG-21 ಗಳಲ್ಲಿ ಅರ್ಧದಷ್ಟು ವಿಮಾನಗಳು ಪತನಗೊಂಡಿವೆ, 200 ಕ್ಕೂ ಹೆಚ್ಚು ಪೈಲಟ್‌ಗಳು ಸಾವನ್ನಪ್ಪಿದ್ದಾರೆ.

MIG-21 ಶತ್ರುಗಳ ಮೇಲೆ ಮಿಂಚಿನ ಸಂಚಾರ
2000 ರಲ್ಲಿ, ಭಾರತೀಯ MiG-21 ಗಳನ್ನು ಹೊಸ ಸೆನ್ಸಾರ್ ಮತ್ತು ಶಸ್ತ್ರಾಸ್ತ್ರಗಳೊಂದಿಗೆ ನವೀಕರಿಸಲಾಯಿತು. ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಅನುಭವಿ ಫೈಟರ್ ನಿಯಂತ್ರಕನಿಗೆ ವಿಮಾನಗಳನ್ನು ನಿಯಂತ್ರಿಸಲು ಅಪಾರ ಸಂತೋಷವನ್ನುಂಟು ಮಾಡಿದೆ ಎಂಬುದನ್ನು ನಾನು ದೃಢೀಕರಿಸುತ್ತೇನೆ ಎಂದು ವಿಂಗ್ ಕಮಾಂಡರ್ ಟಿ.ಜೆ ರೆಡ್ಡಿ ಆ ಸಮಯದಲ್ಲಿ ತಿಳಿಸಿದ್ದರು.

ಇದನ್ನೂ ಓದಿ:  Explained: ಝೋಂಬಿ ಐಸ್​ನಿಂದ ವಿಶ್ವಾದ್ಯಂತ ಆತಂಕ: ಜಾಗತಿಕ ಸಮುದ್ರ ಮಟ್ಟ ಭಾರೀ ಹೆಚ್ಚಳ!

ಯುಎಸ್‌ಎಸ್‌ಆರ್ (ಸೋವಿಯತ್ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ) ಮುಖ್ಯ ಭೂಭಾಗದ ಕಡೆಗೆ ಒಳಬರುವ ಅಮೆರಿಕನ್ ಬಾಂಬರ್‌ಗಳನ್ನು ಹೊಡೆದುರುಳಿಸಲು ನೆಲದ ನಿಯಂತ್ರಣ ಪ್ರತಿಬಂಧಕ ಪರಿಸರದೊಂದಿಗೆ ಕಾರ್ಯನಿರ್ವಹಿಸುವ ಹೆಚ್ಚಿನ-ವೇಗದ, ಹೆಚ್ಚಿನ-ಎತ್ತರದ ಪ್ರತಿಬಂಧಕವಾಗಿ MIG-21 ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ರೆಡ್ಡಿ ಹೇಳಿದ್ದರು.

MIG-21 ಕಾರ್ಯವೈಖರಿ
ಇದರ ಕಾರ್ಯವೈಖರಿಯ ಬಗ್ಗೆ ರೆಡ್ಡಿ ಈ ರೀತಿ ವಿವರಿಸುತ್ತಾರೆ, ನೆಲದ ರಾಡಾರ್‌ಗಳು ಅಮೇರಿಕನ್ ಬಾಂಬರ್ ಗಳನ್ನು ಗುರುತಿಸಿದ ನಂತರ, ಆ ಬಗ್ಗೆ ಲಭ್ಯವಾದ ಶತ್ರು ಮತ್ತು ಸ್ವಂತ ವಿಮಾನಗಳ ಮಾಹಿತಿ ಬಳಸಿಕೊಂಡು ನೆಲದ ನಿಯಂತ್ರಕವು (ಸಾಮಾನ್ಯವಾಗಿ ಫೈಟರ್ ಕಂಟ್ರೋಲರ್ ಎಂದು ಕರೆಯಲಾಗುತ್ತದೆ), ತಮ್ಮ ಕ್ಷಿಪಣಿಗಳನ್ನು ಉಡಾಯಿಸಲು ಮತ್ತು ತುರ್ತಾಗಿಸುರಕ್ಷಿತ ಅಂತರ ಕಾಪಾಡಿಕೊಳ್ಳಲು ಅನುಕೂಲಕರವಾದ ಸ್ಥಾನದಲ್ಲಿ ಪ್ರವೇಶಿಸುವ ಉದ್ದೇಶದಿಂದ MIG-21 ಗಳಿಗೆ ಒಳಬರುತ್ತಿರುವ ಬಾಂಬರ್ ಕಡೆಗೆ ಆಕ್ರಮಣ ಮಾಡಲು ತೆರಳುವಂತೆ ನಿರ್ದೇಶಿಸುತ್ತದೆ.

ಒಂದು ವೇಳೆ ಮಿಸೈಲ್ ದಾಳಿ ಯಶಸ್ವಿಯಾಗದೇ ಇದ್ದರೂ (ಆ ಸಮಯದಲ್ಲಿ ಇನ್‌ಫ್ರಾ-ರೆಡ್ ತಂತ್ರಜ್ಞಾನ ಅಷ್ಟೊಂದು ಸುಧಾರಿತವಾಗಿರಲಿಲ್ಲ) ದಾಳಿಕೋರರಿಗೆ ತಮ್ಮ ವಾಹನದ ಭಾರವು ಹೆಚ್ಚಿನ ಭಾರವಾಗುವುದಲ್ಲದೆ ಅವರ ಪ್ರತಿರೋಧಕ ದಾಳಿಗಳನ್ನು ಸ್ಥಗಿತಗೊಳೀಸುವಂತೆ ಮಾಡುತ್ತದೆ.

ಯುದ್ಧಗಳ ಸಮಯದಲ್ಲಿ MIG-21 ನ ಪಾತ್ರವೇನು?
1971 ರ ಯುದ್ಧದ ಸಮಯದಲ್ಲಿ MIG-21, ಸೈನ್ಯಕ್ಕೆ ಬೆಂಬಲ ಒದಗಿಸುವುದು, ಪ್ರತಿಬಂಧಕ, ರನ್‌ವೇಗಳನ್ನು ನಿರುಪಯುಕ್ತವಾಗಿಸುವ ಮೂಲಕ ಪಾಕಿಸ್ತಾನದ ವಾಯುಪಡೆಯನ್ನು ನೆಲಸಮ ಮಾಡುವುದು, ರಾಕೆಟ್ ದಾಳಿಗೆ ನೆರವು ಸೇರಿದಂತೆ ಬೇರೆ ಬೇರೆ ಜವಬ್ದಾರಿಗಳನ್ನು ನಿಭಾಯಿಸಿದೆ ಎಂದು ರೆಡ್ಡಿ ತಿಳಿಸಿದ್ದಾರೆ.

ಕಾರ್ಗಿಲ್‌ನಲ್ಲಿ ಕೂಡ ಮಿಂಚಿದ MIG-21
MIG-21 ಅನ್ನು ನಂತರ ಕಾರ್ಗಿಲ್ ಯುದ್ಧ ಕಾರ್ಯಾಚರಣೆಗಳಲ್ಲಿ ಎತ್ತರದಲ್ಲಿರುವ ಪರ್ವತ ದಾಳಿಗೆ ಬಳಸಲಾಯಿತು, ಇದರ ವಿಶಿಷ್ಟ ಗುಣಲಕ್ಷಣಗಳೆಂದರೆ ಹೆಚ್ಚಿನ ಚುರುಕು, ವೇಗವರ್ಧನೆ ಹಾಗೂ ತ್ವರಿತವಾಗಿ ಸುತ್ತುವರಿಯುವುದು ಎಂದು ರೆಡ್ಡಿ ತಿಳಿಸಿದ್ದಾರೆ.

1999 ರಲ್ಲಿ ಪಾಕ್‌ನ ಅಟ್ಲಾಂಟಿಕ್ ಭಾರತದ ವಾಯುಪ್ರದೇಶವನ್ನು ಉಲ್ಲಂಘಿಸಿದಾಗ MIG-21 ಅದನ್ನು ಹೊಡೆದುರುಳಿಸಿತು ಅಂತೆಯೇ ಫೈಟರ್ ಕಂಟ್ರೋಲರ್ ಮೂಲಕ ನಿಕಟವಾಗಿ ನಿಯಂತ್ರಿಸಲಾಯಿತು ಎಂದು ರೆಡ್ಡಿ ತಿಳಿಸಿದ್ದಾರೆ.

MIG-21 ಸುರಕ್ಷತಾ ದಾಖಲೆ
ಇತರ ಫೈಟರ್ ಜೆಟ್‌ಗಳಿಗಿಂತ MIG-21 ಹೆಚ್ಚು ಹಾನಿಗೊಂಡಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಸ, ವಿಮಾನಗಳನ್ನು ಸೇರಿಸಲು ವಿಳಂಬವಾಗಿದ್ದರಿಂದ ವಾಯುಪಡೆಯು MIG-21 ವಿಮಾನವನ್ನೇ ಯುದ್ಧಗಳಲ್ಲಿ ಹೆಚ್ಚು ಬಳಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Explained: ಅಮೆರಿಕಾದಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ 50% ಕ್ಕಿಂತ ಕಡಿಮೆಯಾಗಲಿದೆಯಂತೆ!

ಜುಲೈನಲ್ಲಿ, ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ MIG-21 ಅಪಘಾತವು ಪೈಲಟ್‌ಗಳಾದ ವಿಂಗ್ ಕಮಾಂಡರ್ ಎಂ ರಾಣಾ ಮತ್ತು ಫ್ಲೈಟ್ ಲೆಫ್ಟಿನೆಂಟ್ ಅದ್ವಿತೀಯಾ ಬಾಲ್ ಅವರನ್ನು ಬಲಿತೆಗೆದುಕೊಂಡಿತು. ಇದು ಜೆಟ್‌ನ ದುರ್ಬಲತೆಯನ್ನು ಗುರುತಿಸಿದೆ. ಅದಾಗ್ಯೂ MIG-21 ಅನ್ನು ಕೈಬಿಡುವ ನಿರ್ಧಾರಕ್ಕೂ ಈ ಅಪಘಾತಕ್ಕೂ ಯಾವುದೇ ನಂಟಿಲ್ಲ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಾವನ್ನಪ್ಪಿರುವ ರಕ್ಷಣಾ ಸಿಬ್ಬಂದಿ
ಕಳೆದ ಐದು ವರ್ಷಗಳಲ್ಲಿ ಮೂರು ವಿಭಾಗಗಳ ಸೇವೆಯಲ್ಲಿ (ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ) ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಒಳಗೊಂಡ ಅಪಘಾತಗಳಲ್ಲಿ 42 ರಕ್ಷಣಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಮಾರ್ಚ್‌ನಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ರಾಜ್ಯಸಭೆಗೆ ತಿಳಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಒಟ್ಟು ವಿಮಾನ ಅಪಘಾತಗಳ ಸಂಖ್ಯೆ 45 ಆಗಿದ್ದು, ಅದರಲ್ಲಿ IAFನ 29 ವಿಮಾನಗಳು ಸೇರಿವೆ.
Published by:Ashwini Prabhu
First published: