• ಹೋಂ
  • »
  • ನ್ಯೂಸ್
  • »
  • Explained
  • »
  • Explained: ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶ ಭಾರತಕ್ಕೆ ತಟ್ಟಿದೆ ಕ್ಷೀರದ ಕೊರತೆ, ಆಮದು ಮಾಡೋ ಪರಿಸ್ಥಿತಿ

Explained: ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ದೇಶ ಭಾರತಕ್ಕೆ ತಟ್ಟಿದೆ ಕ್ಷೀರದ ಕೊರತೆ, ಆಮದು ಮಾಡೋ ಪರಿಸ್ಥಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡೈರಿ ಉತ್ಪನ್ನಗಳಾದ ಹಾಲು, ಮೊಸರಿನ ಬೆಲೆ ಯಾಕೋ ಪೆಟ್ರೋಲ್-ಡೀಸೆಲ್‌ನಂತೆ ದಿನೇ ದಿನೇ ದುಬಾರಿಯಾಗುತ್ತಿದೆ ಮತ್ತು ಪೂರೈಕೆ ಕೂಡ ಕಡಿಮೆಯಾಗುತ್ತಿದೆ. ಪೂರೈಕೆ ಮತ್ತು ಬೆಲೆ ಏರಿಕೆ ಬಿಸಿ ಸದ್ಯ ದೇಶಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

  • Share this:

ಡೈರಿ ಉತ್ಪನ್ನಗಳಾದ (Dairy product) ಹಾಲು (Milk), ಮೊಸರಿನ (Curd) ಬೆಲೆ ಯಾಕೋ ಪೆಟ್ರೋಲ್-ಡೀಸೆಲ್‌ನಂತೆ ದಿನೇ ದಿನೇ ದುಬಾರಿಯಾಗುತ್ತಿದೆ ಮತ್ತು ಪೂರೈಕೆ ಕೂಡ ಕಡಿಮೆಯಾಗುತ್ತಿದೆ. ಪೂರೈಕೆ (Supply) ಮತ್ತು ಬೆಲೆ ಏರಿಕೆ (Price Hike) ಬಿಸಿ ಸದ್ಯ ದೇಶಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಭಾರತೀಯ (Indian) ಮನೆಗಳಲ್ಲಿ ಹಾಲು, ಮೊಸರು ಎನ್ನುವುದು ದಿನನಿತ್ಯ ಅವಶ್ಯಕವಾಗಿ ಬೇಕಾಗಿರುವಂತಹ ವಸ್ತುಗಳು. ಆದರೆ ಇವುಗಳ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೂ ತಟ್ಟಿದೆ.


ಬೇಸಿಗೆಯಲ್ಲಿ ತಣ್ಣಗೆ ಒಂದು ಲೋಟ ಮಜ್ಜಿಗೆ ಕುಡಿಯಬೇಕಂದ್ರು ಮೊಸರಿನ ಬೆಲೆ ನೋಡಿದರೆ, ನೀರೇ ಸಾಕು ಅನ್ನುವಂತಾಗಿದೆ. ಬಿಸಿ ಬಿಸಿ ಕಾಫಿ, ಟೀ ಕುಡಿಯೋಣ ಅಂದರೂ ಹಾಲಿನ ಬೆಲೆ ನಾಲಿಗೆಯನ್ನು ಚುರ್‌ ಎನಿಸುತ್ತಿದೆ.


ಹಾಲಿನ ಬೆಲೆ ಕಳೆದ ವರ್ಷಕ್ಕಿಂತ 15% ಏರಿಕೆ


ಹಾಲಿನ ಬೆಲೆ ಅಂತೂ ಗಗನಕ್ಕೇರುತ್ತಿದೆ. ಅದು ಕೂಡ ಎಷ್ಟರ ಮಟ್ಟಿಗೆ ಅಂದರೆ ಹಸು, ಎಮ್ಮೆ ಬೆಲೆಗಿಂತ ಹಾಲು ದುಬಾರಿ ಆಗುತ್ತೇನೋ ಅನ್ನಿಸುವಹಾಗೆ. ಹಾಲಿನ ಬೆಲೆಗಳು ಈಗಾಗಲೇ ಕಳೆದ ವರ್ಷಕ್ಕಿಂತ 15% ಹೆಚ್ಚಾಗಿದ್ದು, ಒಂದು ದಶಕದಲ್ಲೇ ಅತ್ಯಂತ ವೇಗವಾಗಿ ದರ ಏರಿಕೆಯಾಗಿದೆ. ಹಾಲಿನ ದರ ಹೀಗೆ ಒಂದೇ ಸಮನೇ ಏರಿಕೆಯಾಗುತ್ತಿರುವುದು ದೇಶದ ಸ್ಥಿತಿ ಬಗ್ಗೆ ಆತಂಕ ಮೂಡಿಸಿದೆ, ಈ ಬಗ್ಗೆ ತಜ್ಞರು ಸಹ ಕಳವಳ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: ಮಾಯಕೊಂಡದಲ್ಲಿ ಹೇಗಿದೆ ಚುನಾವಣಾ ಲೆಕ್ಕಾಚಾರ? ಶಾಸಕರ ಬಗ್ಗೆ ಏನಂತಾನೆ ಮತದಾರ?


"ಹೆಚ್ಚಿನ ಹಾಲಿನ ಬೆಲೆಯಿಂದ ಬರುವ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಹೆಚ್ಚುವರಿ ಸವಾಲನ್ನು ಒಡ್ಡಲಿದೆ" ಎಂದು ಭಾರತದ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಉಪಸ್ನಾ ಭಾರದ್ವಾಜ್ ಹೇಳಿದ್ದಾರೆ.


ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಹಾಲು 6.6% ನಷ್ಟು ತೂಕವನ್ನು ಹೊಂದಿರುವುದರಿಂದ, ಯಾವುದೇ ಸ್ಪೈಕ್ ಮುಖ್ಯ ಹಣದುಬ್ಬರದ ಮೇಲೆ ಸಮಂಜಸವಾದ ಪರಿಣಾಮವನ್ನು ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ.


ಡೈರಿ ಉತ್ಪನ್ನಗಳ ಬೇಡಿಕೆ ಶೇ.7 ರಷ್ಟು ಏರಿಕೆ ಸಾಧ್ಯತೆ


2022 ರಲ್ಲಿ ಡೈರಿ ಉತ್ಪನ್ನಗಳ ರಫ್ತನ್ನು ಈಗಾಗಲೇ 39% ಹೆಚ್ಚಿಸಿದ್ದು,, ಕಡಿಮೆ ಹಾಲು ಸರಬರಾಜುಗಳು, ಭಾರತದಲ್ಲಿ ಬೆಣ್ಣೆ ಮತ್ತು ಕೆನೆ ತೆಗೆದ ಹಾಲಿನ ಪುಡಿ (SMP) ದಾಸ್ತಾನುಗಳನ್ನು ಈಗಾಗಲೇ ಕಡಿತಗೊಳಿಸಿದೆ. ಈ ವರ್ಷ ಡೈರಿ ಉತ್ಪನ್ನಗಳ ಬೇಡಿಕೆ ಶೇ.7 ರಷ್ಟು ಏರಿಕೆಯಾಗಲಿದೆ ಎಂದು ಉದ್ಯಮದ ಅಧಿಕಾರಿಗಳು ಅಂದಾಜಿಸಿದ್ದಾರೆ. ಆದರೆ ಹಾಲಿನ ಉತ್ಪಾದನೆಯು ಆರ್ಥಿಕ ವರ್ಷದಲ್ಲಿ ಮಾರ್ಚ್ 2023 ಕ್ಕೆ ಕೇವಲ 1% ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.


ಇದು ಕಳೆದ ದಶಕದಲ್ಲಿ ಸರಾಸರಿ ವಾರ್ಷಿಕ ದರ 5.6% ಕ್ಕಿಂತ ಕಡಿಮೆಯಾಗಿದೆ ಎಂದು ಸರ್ಕಾರದ ಬೆಂಬಲಿತ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ (NDDB) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.


ಸಾಂದರ್ಭಿಕ ಚಿತ್ರ


ಹಾಲಿನ ಬೆಲೆ ಏರಿಕೆ ಮತ್ತು ಪೂರೈಕೆಯ ಹಿಂದಿನ ಕಾರಣ


ಹಾಲಿನ ಬೆಲೆ ಏರಿಕೆಗೆ ಕಾರಣವೇನು ಅಂತ ಪಟ್ಟಿ ಮಾಡುತ್ತಾ ಹೋದರೆ ಕೋವಿಡ್‌ ಈಚೆಗೆ ಸಾಕಷ್ಟು ಅಂಶಗಳು ಕಾಣಸಿಗುತ್ತವೆ. ಅವುಗಳಲ್ಲಿ ಮುಖ್ಯವಾಗಿ ಕೋವಿಡ್‌ ಸಮಯದಲ್ಲಿ ಕುಸಿದ ಬೇಡಿಕೆ, ಜಾನುವಾರುಗಳಿಗೆ ಮೇವಿನ ಕೊರತೆ, ಮೇವಿನ ದರ ಹೆಚ್ಚಳ, ಇನ್ನು ಅನೇಕ ಕಡೆಗಳಲ್ಲಿ ಹಸುವಿಗೆ ಚರ್ಮ ಗಂಟುರೋಗ ಬಂದಿದ್ದು.


"ಸರಿಯಾದ ಹಸು, ಎಮ್ಮೆ ಸಿಗುತ್ತಿಲ್ಲ"


ಪ್ರಮುಖ ಹಾಲು ಉತ್ಪಾದಕ ರಾಜ್ಯವಾದ ರಾಜಸ್ಥಾನದ ಖೇಜ್ರಿ ಬುಜುರ್ಗ್ ಗ್ರಾಮದ 57 ವರ್ಷದ ರೈತ ರಾಮಾವತಾರ್ ಶರ್ಮಾ ಬೆಲೆ ಹೆಚ್ಚಿರುವಾಗ ಹಾಲಿನ ಪೂರೈಕೆ ಮಾಡಲು ನಾವು ಉತ್ಸುಕದಲ್ಲಿದ್ದೇವೆ, ಆದರೆ ಸರಿಯಾದ ಜಾನುವಾರಗಳು ಲಭಿಸುತ್ತಿಲ್ಲ. ಮಾರುಕಟ್ಟೆಯಲ್ಲಿ ಹಸುಗಳು ಕಡಿಮೆ ಇರುವುದರಿಂದ ಜಾನುವಾರುಗಳ ಬೆಲೆ ಕೂಡ ದುಪ್ಪಟ್ಟಾಗಿದೆ ಎಂದಿದ್ದಾರೆ.


ಮೇವಿನ ಕೊರತೆ


ಬೇಸಿಗೆಯಲ್ಲಿ ಡೈರಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚು ಆದರೆ ಈ ವೇಳೆ ಪೂರೈಕೆ ಕಡಿಮೆಯಾಗುತ್ತದೆ. ಏಕೆಂದರೆ ಮೇವಿನ ಕೊರತೆ ಈ ಸಂದರ್ಭದಲ್ಲಿ ಹೆಚ್ಚು. ಮಳೆಗಾಲದ ಸಂದರ್ಭದಲ್ಲಿ ಹಸಿರು ಹುಲ್ಲು ಚೆನ್ನಾಗಿ ಲಭಿಸುತ್ತದೆ ಮತ್ತು ಅಕ್ಟೋಬರ್‌ನಲ್ಲಿ ಆಗಷ್ಟೇ ಕರು ಹಾಕುವ ಸಂದರ್ಭದಲ್ಲಿ ಹಸು, ಎಮ್ಮೆಯಲ್ಲಿ ಹಾಲಿನ ಹರಿವು ಹೆಚ್ಚಿರುತ್ತದೆ.


ಹೀಗಾಗಿ ಆ ತಿಂಗಳಿಗಿಂತ ಬೇಸಿಗೆಯಲ್ಲಿ ಹಾಲಿನ ಸರಬರಾಜು ಎಂಬುವುದು ಕಡಿತಗೊಳ್ಳುತ್ತಾ ಹೋಗುತ್ತದೆ. ಮಾರುಕಟ್ಟೆಯಲ್ಲಿ ಪೂರೈಕೆ ಕಡಿಮೆ ಇದ್ದಲ್ಲಿ, ಬೇಡಿಕೆ ಹೆಚ್ಚಿ ಬೆಲೆ ಹೆಚ್ಚುತ್ತದೆ.


ರೋಗ ವಾಸಿಯಾದ ನಂತರ ಮತ್ತೊಂದು ಹೊಸ ಸಮಸ್ಯೆ ಉದ್ಭವ


ಹಾಲು-ಉತ್ಪಾದಿಸುವ ಜಾನುವಾರು ರಾಜ್ಯಗಳಾದ ಗುಜರಾತ್, ಪಂಜಾಬ್ ಮತ್ತು ಹರಿಯಾಣದಲ್ಲಿ ಲಂಪಿ ಸ್ಕಿನ್ ಡಿಸೀಸ್ ವರದಿಯಾಗಿತ್ತು. ಇದು ಕೂಡ ಹಾಲಿನ ಉತ್ಪಾದನೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿತು. ಲಸಿಕೆ ನೀಡಿ ಈಗ ರೋಗವನ್ನು ಗುಣಮುಖವಾಗಿಸಿದರೂ ಸಹ ಜಾನುವಾರುಗಳ ಮೇಲೆ ಈ ರೋಗದ ಪರಿಣಾಮ ಹಾಲಿನ ಮೇಲೆ ಪ್ರಭಾವ ಬೀರಿದೆ ಎನ್ನುತ್ತಿದ್ದಾರೆ ರೈತರು.


ಅಂದರೆ ಲಸಿಕೆ ತೆಗೆದುಕೊಂಡ ನಂತರ ರೋಗ ಬಂದಿದ್ದ ಹಲವಾರು ಜಾನುವಾರಗಳ ಹಾಲಿನ ಹರಿವಲ್ಲಿ ವ್ಯತ್ಯಾಸ ಕಂಡು ಬಂದಿದೆ ಎನ್ನಲಾಗಿದೆ. ರಾಜಸ್ಥಾನದ ಸುಮಾರು ರೈತು ಈ ಬಗ್ಗೆ ದೂರು ನೀಡಿದ್ದಾರೆ. "ಔಷಧಿಗಳು ಮತ್ತು ವ್ಯಾಕ್ಸಿನೇಷನ್‌ಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಿದ ನಂತರ ಬದುಕುಳಿದ ಹಸುಗಳು ಮೊದಲಿಗಿಂತ ಕಡಿಮೆ ಹಾಲು ಉತ್ಪಾದಿಸುತ್ತಿವೆ" ಎಂದು ರೈತರು ಹೇಳಿದ್ದಾರೆ.


ಸಾಂದರ್ಭಿಕ ಚಿತ್ರ


ಪಶುವೈದ್ಯರ ಕೊರತೆ


ಕೃತಕ ಗರ್ಭಧಾರಣೆ ನಡೆಸಲು ಅಗತ್ಯವಿರುವ ಗ್ರಾಮ ಮಟ್ಟದ ಪಶುವೈದ್ಯರ ಕೊರತೆ ಕೂಡ ಹಾಲಿನ ಬಿಕ್ಕಟ್ಟನ್ನು ಹೆಚ್ಚಿಸಿದೆ.


ಸವಾಲು ನಿಭಾಯಿಸಲು ಸರ್ಕಾರದ ಮುಂದಿರುವ ಆಯ್ಕೆಗಳು?


ಈ ಸಂದರ್ಭ ಭಾರತವು ಆಮದು ಮಾಡಿಕೊಂಡ SMP ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ರೈತರು ಮತ್ತು ಡೈರಿ ಅಧಿಕಾರಿಗಳು ಹೇಳಿದ್ದಾರೆ. ಜಾಗತಿಕ ಪೂರೈಕೆಗಳನ್ನು ಮತ್ತಷ್ಟು ಬಿಗಿಗೊಳಿಸುವುದು ಮತ್ತು ಅಂತರಾಷ್ಟ್ರೀಯ ಬೆಲೆಗಳನ್ನು ಹೊಂದಿಸುವುದು ಸರ್ಕಾರದ ಮುಂದಿನ ಆಯ್ಕೆ ಎಂದಿದ್ದಾರೆ ಉದ್ಯಮದ ತಜ್ಞರು.


ಭಾರತದ ಎಸ್‌ಎಂಪಿ ಆಮದುಗಳು ಏಪ್ರಿಲ್‌ನಿಂದ ಪ್ರಾರಂಭವಾದ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಯಿದೆ, ಇದು 2011-12ರಲ್ಲಿ ದಾಖಲೆಯ ಖರೀದಿಗಳನ್ನು ಮೀರಿಸುತ್ತದೆ ಎಂದು ಡೈರಿ ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.


ಹೊರೆಯನ್ನು ಕಡಿಮೆ ಮಾಡಲು, ಸರ್ಕಾರವು SMP ಮತ್ತು ಬೆಣ್ಣೆಯ ಸೀಮಿತ ಸುಂಕ-ಮುಕ್ತ ಆಮದುಗಳನ್ನು ಅನುಮತಿಸಬಹುದು, ಆದರೂ ಬೆಲೆಗಳು ಕುಸಿಯುವುದನ್ನು ತಪ್ಪಿಸಲು ಸಂಪುಟಗಳನ್ನು ನಿರ್ವಹಿಸಬೇಕಾಗುತ್ತದೆ ಎಂದು NDDB ಅಧಿಕಾರಿ ಹೇಳಿದರು.




ಜನವರಿಯಲ್ಲಿ, ಭಾರತದ ಹಾಲು ಮತ್ತು ಕೆನೆ ಆಮದುಗಳು ಕಳೆದ ವರ್ಷದಿಂದ 1,024% ರಷ್ಟು $4.87 ಮಿಲಿಯನ್‌ಗೆ ಏರಿದ್ದು, ಆಮದು ತೆರಿಗೆಗಳೊಂದಿಗೆ ಸಹ, ಡೈರಿಗಳು ಫ್ರಾನ್ಸ್, ಜರ್ಮನಿ ಮತ್ತು ಪೋಲೆಂಡ್‌ನಿಂದ ಖರೀದಿಯನ್ನು ಹೆಚ್ಚಿಸಿದವು. ಆ ಸುಂಕಗಳನ್ನು ತಾತ್ಕಾಲಿಕವಾಗಿ ತೆಗೆದುಹಾಕುವುದರಿಂದ ಆಮದು ಇನ್ನಷ್ಟು ಹೆಚ್ಚಾಗುತ್ತದೆ ಎಂದು ಎನ್‌ಡಿಡಿಬಿ ಅಧಿಕಾರಿ ಹೇಳಿದ್ದಾರೆ.


ಬೇಸಿಗೆಯಲ್ಲಿ ಹೆಚ್ಚಾಗಿ ಹಾಲಿನ ಕೊರತೆ, ಡೈರಿ ಉತ್ಪನ್ನಗಳಿಗೆ ಬೇಡಿಕೆ ಬರಬಹುದು, ಅದೇ ಸಮಯದಲ್ಲಿ ಹಾಲಿನ ಅಲಭ್ಯತೆಯಿಂದಾಗಿ ಪೂರೈಕೆ ಕುಂಠಿತವಾಗಬಹುದು.


ಇದರಿಂದಾಗಿ ಮೊದಲೇ ಕೆಲ ದಾಸ್ತಾನುಗಳನ್ನು ಮಾಡುವುದು ಸರ್ಕಾರಕ್ಕಿರುವ ಮಾರ್ಗವಾಗಿದೆ. ಹಾಗೆಯೇ ಬೆಣ್ಣೆ, ಎಣ್ಣೆ ಮತ್ತು SMP ಯ ಸುಂಕ-ಮುಕ್ತ ಆಮದುಗಳನ್ನು ಅನುಮತಿಸುವ ಮೂಲಕ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ತಜ್ಞರು.


"ಮಕ್ಕಳಿಗೆ ಹಾಲು ಸಿಗುತ್ತಿಲ್ಲ"


ಒಟ್ಟಾರೆ ಹಾಲಿನ ಪೂರೈಕೆ ಮತ್ತು ಬೆಲೆ ಸಮಸ್ಯೆಗಳು ಭಾರತೀಯ ಗ್ರಾಹಕರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಕೆಲವರು ನಮ್ಮ ಮಕ್ಕಳಿಗೆ ಹಾಲು ಬೇಕು ಎಂದು ನಾವು ಟೀ, ಕಾಫಿ ಕುಡಿಯೋದೇ ಬಿಟ್ಟುಬಿಟ್ಟಿದ್ದೇವೆ ಎಂದಿದ್ದಾರೆ.

top videos


    ಆದರೆ ಬೆಲೆ ಏರಿಕೆ ಮತ್ತಷ್ಟು ನಮ್ಮನ್ನು ಹಾಲಿನಿಂದ ದೂರ ಮಾಡಿದೆ, ಹೀಗೆ ಬೆಲೆ ಏರುತ್ತಿದ್ದರೆ ಮಕ್ಕಳಿಗೂ ಹಾಲು ಲಭ್ಯವಾಗುವುದಿಲ್ಲ ಎಂದು ಮುಂಬೈ ಕಟ್ಟಡ ಕಾರ್ಮಿಕ ಸತ್ಯೇಂದ್ರ ಯಾದವ್ ಹೇಳಿದರು.

    First published: